ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.
ಮುಂದೆ ಓದಿ...ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.
ಮುಂದೆ ಓದಿ...ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.
ಮುಂದೆ ಓದಿ...ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ
ಮುಂದೆ ಓದಿ...ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.
ಮುಂದೆ ಓದಿ...ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.
ಮುಂದೆ ಓದಿ...ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!
ಮುಂದೆ ಓದಿ...ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.
ಮುಂದೆ ಓದಿ...
ದೇವನಹಳ್ಳಿಯ ಎನ್. ಪ್ರಕಾಶ ತಮ್ಮ ಸುದೀರ್ಘ ಪತ್ರದಲ್ಲಿ ಈ ಹಿಂದೆ ಇದೇ ಅಂಕಣದಲ್ಲಿ ವ್ಯಕ್ತವಾಗಿದ್ದ ಆಕ್ಷೇಪಕ್ಕೆ ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ. ಕೆಲ ತಪ್ಪುಗಳನ್ನೂ ಗಮನಕ್ಕೆ ತಂದಿದ್ದಾರೆ. ಅವರು ಬರೆಯುತ್ತಾರೆ ಃ
‘ಮೇ 5ರ ‘ತಪ್ಪಾಯ್ತು ತಿದ್ಕೋತೀವಿ’ ವಿಭಾಗದಲ್ಲಿ ಹರಳಹಳ್ಳಿ ಪುಟ್ಟರಾಜುರವರು, ಏಪ್ರಿಲ್ 14, 2012ರಂದು ಪ್ರತಾಪಸಿಂಹರು ‘ಬೆತ್ತಲೆ ಪ್ರಪಂಚ’ ಅಂಕಣದಲ್ಲಿ, ‘ಪೆಣ್ಣಲ್ಲವೇ ತಮ್ಮನೆಲ್ಲ ಹಡೆದ ತಾಯಿ ಪೆಣ್ಣಲ್ಲವೇ..’ ಈ ಪದ್ಯದ ಸಾಲುಗಳು ಜಾನಪದ ಗೀತೆ ಎಂದು ಬರೆದುದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆದರೆ ಪುಟ್ಟರಾಜುರವರು ಬರೆದಿರುವ ವಿವರಣೆಯೂ ಕೂಡ ನೂನ್ಯತೆಯಿಂದ ಹೊರತಾಗಿಲ್ಲ. ಅವರು ಹೇಳಿರುವಂತೆ ಈ ಕವನ ಸಂಚಿಹೊನ್ನಮ್ಮಳ ‘ಹದಿ ಬದೆಯ ಧರ್ಮ’ ಕೃತಿಯಲ್ಲಿರುವುದು ನಿಜ. ಆದರೆ ಅವರು ‘ಹದಿ ಬದೆಯ ಧರ್ಮ’ ಸಾಂಗತ್ಯ ಛಂದಸ್ಸಿನಲ್ಲಿ ಬರೆದಿದ್ದು ಎಂದು ಹೇಳಿದ್ದಾರೆ. ಆದರೆ ಸಾಂಗತ್ಯ ಛಂದಸ್ಸು ಎಂಬುದು ಸರಿಯಲ್ಲ. ಕಾರಣ, ಈ ಕೃತಿಯ ಸಾಂಗತ್ಯದಲ್ಲಿ ಬರೆದುದಾಗಿದೆ. ಕನ್ನಡ ನಿಘಂಟಿನ ಪ್ರಕಾರ, ಸಾಂಗತ್ಯ ಎಂದರೆ ‘ಪದ್ಯದಲ್ಲಿ ನಾಲ್ಕು ಪಾದಗಳುಳ್ಳ ಒಂದು ಅಂಶಗಣ ಛಂದಸ್ಸು. ಇನ್ನು ಕರ್ನಾಟಕ ರಾಜ್ಯ ಗ್ಯಾಸೆಟಿಯರ್ (ಭಾಗ 3)- 1986-ಪುಟ 81ರಲ್ಲಿ ವಿವರಿಸಿರುವಂತೆ, ‘ಸಾಂಗತ್ಯ’ ಎಂದರೆ ಹಾಡಲನುಕೂಲವಾದ ನಾಲ್ಕು ಪಾದಗಳ ಛಂದೋ ಪ್ರಕಾರ. ಇತರ ಜಾನಪದ ಪ್ರಕಾರಗಳಂತೆ ಸಾಂಗತ್ಯವೂ ಪಂಡಿತರ ಅವಗಣನೆಗೆ ಗುರಿಯಾಗುತ್ತದೆ. ಆದರೆ ರತ್ನಾಕರ ವರ್ಣಿಯ ‘ಭರತೇಶ ವೈಭವ’ವು ಸಾಂಗತ್ಯದಲ್ಲಿ ರಚಿಸಿದ ಕಲಾವಂತಿಕೆಯ ಅತ್ಯುತ್ಕೃಷ್ಟ ಕಾವ್ಯವಾಗಿದೆ. ಹೀಗಾಗಿ ಪ್ರತಾಪಸಿಂಹರು ಜಾನಪದ ಗೀತೆ ಎಂದು ಬರೆದುದರಲ್ಲಿ ಹೇಳಿಕೊಳ್ಳುವಂತಹ ದೊಡ್ಡ ಪ್ರಮಾದವೇನೂ ಆಗಿಲ್ಲ.
ಮೇ5ರ ಪುಟ 7ರಲ್ಲಿ (ಅನುಭವ ಮಂಟಪ) ‘ರಾಜ್ಯ ಸಭೆಗೆ ಬೇಕೇ ಸಚಿನ್, ರೇಖಾರಂಗು?’ ಶೀರ್ಷಿಕೆಯಲ್ಲಿ ಪ್ರಕಟವಾಗಿರುವ ಲೇಖನದಲ್ಲಿ ಒಂದು ದೊಡ್ಡ ಪ್ರಮಾದವಾಗಿದೆ. ಆ ವಾಕ್ಯ ಹೀಗಿದೆ: ತಮ್ಮ ಕ್ಷೇತ್ರದಲ್ಲಿ ಸಾಧನೆ ಮಡಿದವರಿಗೆ ಇದು ಗೌರವ ಸೂಚಿಸುವ ಪರಿಯೆಂದು ಕೆಲವರು ಹೇಳಬಹುದು ಎಂದು ಪ್ರಕಟವಾಗಿದೆ. ಇದು ಸಾಧನೆ ಮಾಡಿದವರಿಗೆ ಎಂದು ಇರಬೇಕಾಗಿತ್ತು. ಇದು ಮುದ್ರಣ ದೋಷದಿಂದ ಹೀಗಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವೇ ಇಲ್ಲ. ಆದರೂ ಮುಂದೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಿದರೆ ಒಳ್ಳೆಯದು.