ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ವ್ಯಂಗ್ಯಚಿತ್ರವು ವ್ಯಕ್ತಿಯ ತೇಜೋವಧೆ ಮಾಡುವ ಉದ್ದೇಶವನ್ನು ಹೊಂದಿರುವುದಿಲ್ಲ

ತಪ್ಪಾಯ್ತು ತಿದ್ಕೋತೀವಿ

ಈ ಅಂಕಣದಲ್ಲಿ ಪ್ರಕಟವಾದ ಹರಳಹಳ್ಳಿ ಪುಟ್ಟರಾಜು ಅವರ ಪತ್ರಕ್ಕೆ ಓದುಗರಿಂದ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಬಹುತೇಕರು ಪ್ರತಾಪ್ ಸಿಂಹ ಹಾಗೂ ಪತ್ರಿಕೆಯ ನಿಲುವು ಮತ್ತು ವಿನ್ಯಾಸವನ್ನು ಸಮರ್ಥಿಸಿದ್ದಾರೆ. ಓದುಗರ ಪ್ರೀತಿ, ಅಭಿಮಾನಕ್ಕೆ ನಾವು ಋಣಿ. ಅದರಲ್ಲಿ ಆಯ್ದ ಪತ್ರವನ್ನು ಮಾತ್ರ ಇಲ್ಲಿ ನೀಡುತ್ತಿದ್ದೇನೆ. ಮಂಡ್ಯದಿಂದ ಕೊಕ್ಕಡ ವೆಂಕಟ್ರಮಣ ಭಟ್ ಅವರು ಬರೆಯುತ್ತಾರೆ-

‘ಮಿತ್ರ ಹರಳಹಳ್ಳಿ ಪುಟ್ಟರಾಜು ಅವರು ಚೆನ್ನಾಗಿ ಬರೆಯುತ್ತಾರೆ. ಸಂತೋಷ. ಆದರೆ ಬರೆದುದೆಲ್ಲವೂ ಚೆನ್ನವೆಂದು ಹೇಗೆ ಒಪ್ಪೋಣ. ನಮ್ಮ ಇಂದಿನ ಪ್ರಧಾನಿಯವರ ಮುಖವನ್ನು ಮರೆಮಾಚಿ, ಸಿಖ್ ಪೇಟವನ್ನು ಮಾತ್ರ ಪ್ರಕಟಿಸಿ, ಅದರ ಮುಖಕ್ಕೆ ಅವರಾಡಿದ ಮಾತುಗಳನ್ನು ಲೇಪಿಸಿರುವುದು ಎಷ್ಟು ಸರಿ? ಎಂದು ಪ್ರಶ್ನಿಸುವ ಔಚಿತ್ಯವಿರಲಿಲ್ಲ.’

‘ಪುಟ್ಟರಾಜು ಅವರು ಇದೊಂದು ವ್ಯಂಗ್ಯಚಿತ್ರದ ಗೆರೆಗಳೆಂಬುದನ್ನು ಮೊದಲು ಮನಗಾಣಬೇಕು. ಡಾ. ಮನಮೋಹನ ಸಿಂಗ್ ಅವರ ಭಾವಚಿತ್ರವಲ್ಲ. ಭಾವಚಿತ್ರವನ್ನು ಮುದ್ರಿಸುವಾಗ ಅಂಗಾಂಗಗಳನ್ನು ಮರೆಮಾಚುವಂತಿಲ್ಲ. ವಂಗ್ಯಚಿತ್ರ ರೇಖೆಗಳು ವಿಡಂಬನೆಯ ಸಂಕೇತ. ಪ್ರಾಯಶಃ ದಿ. ಇಂದಿರಾ ಗಾಂಧಿಯವರಷ್ಟು ವಂಗ್ಯಚಿತ್ರಗಳನ್ನು ಬರೆಸಿಕೊಂಡವರಿಲ್ಲವೆನ್ನಬಹುದು! ಆ ವ್ಯಂಗ್ಯಚಿತ್ರಗಳಲ್ಲಿ ಎದ್ದು ಕಾಣುವುದೇ ಗಿಡುಗದ ಕೊಕ್ಕಿನಂತಹ ಮೂಗು! ಅದು ಇಂದಿರಾ ಅವರಿಗೆ ಅವಮಾನ ಮಾಡುವ ಉದ್ದೇಶವಲ್ಲ.’

‘ವ್ಯಂಗ್ಯಚಿತ್ರವು ವ್ಯಕ್ತಿಯ ತೇಜೋವಧೆ ಮಾಡುವ ಉದ್ದೇಶವನ್ನು ಹೊಂದಿರುವುದಿಲ್ಲ. ‘ಸಿಖ್‌’ ಪದಕ್ಕೆ ಶಿಕ್ಷಣ, ಜಟ್ಟಿ ಎಂಬ ಅರ್ಥವಿದೆ. ಸಿಖ್ ಪೇಟವು ‘ಮೌನಂ ಪಂಡಿತ ಲಕ್ಷಣಂ’ ಎಂಬುದನ್ನೂ ಸೂಚಿಸುತ್ತದೆ. ಮನಮೋಹನ ಸಿಂಗ್ ಅವರು ಅರ್ಥಶಾಸ್ತ್ರದಲ್ಲಿ ಜಗಜಟ್ಟಿಯೂ ಹೌದು. ಇಷ್ಟೆಲ್ಲವಾದರೂ ಅವರು ಪತ್ರಿಕಾಗೋಷ್ಠಿಯಲ್ಲಿ ಆಡಿದ ಮಾತುಗಳು ಶ್ಲಾಘನೆಯ ಮಟ್ಟದಲ್ಲಿರಲಿಲ್ಲ ಎಂಬುದನ್ನು ಈ ಪತ್ರಿಕಾ ಭಾಷೆ ಸಂಕೇತೀಕರಿಸಿದೆ.’

‘ಕೋಚೆ ಕುರಿತು ಬಳಕೆಯಾದ ‘ಕೋಡಂಗಿ’ ಪದದ ಬಗೆಗೂ ಆಕ್ಷೇಪಕ್ಕೆ ನಾನು ಆಕ್ಷೇಪವೆತ್ತುತ್ತೇನೆ. ವಿಚಾರವಾದಿ ಶಬ್ದಕ್ಕೆ ವಿಚಾರವ್ಯಾಧಿ ಎಂಬ ಪದವನ್ನು ಬಳಸುತ್ತಿಲ್ಲವೇ?’ ಎಂದಿದ್ದಾರೆ.

ಬಳ್ಳಾರಿ ಜಿಲ್ಲೆಯ ಸಂಡೂರಿನಿಂದ ಶಿವರಾಜ ಎಸ್. ಅವರು ಬರೆಯುತ್ತಾರೆ- ‘ಬಹಳ ಸಾರಿ ಪತ್ರ ಬರೆಯಬೇಕು ಅಂದುಕೊಂಡಿದ್ದರೂ ಬರೆಯಲು ಸಾಧ್ಯವಾಗಿರಲಿಲ್ಲ. ಆದರೆ ಡಿ.8ರಂದು ‘ತತಿ’ ಅಂಕಣ ನೋಡಿದ ಮೇಲೆ ನನ್ನ ತಾಳ್ಮೆಯ ಕಟ್ಟೆ ಒಡೆಯಿತು. ಜ.4ರ ಮುಖಪುಟದಲ್ಲಿ ಪಿ.ಎಂ. ಅವರ ಭಾಷಣದ ಸಾರಾಂಶ ಪ್ರಕಟಿತ ಪ್ರಯೋಗವು ಅವರು ನಡೆಸಿದ ಆಡಳಿತ ವೈಖರಿಯ ಪ್ರತಿಫಲನದಂತೆ ಅತ್ಯಂತ ಅದ್ಭುತವಾಗಿ ಸೂಕ್ತವಾಗಿತ್ತು.’

‘ಇನ್ನು ತಮ್ಮ ಹೆಸರಿಗೆ ತಕ್ಕಂತೆ ಜೀವಿಸುತ್ತಿರುವ ‘ಪ್ರತಾಪ್ ಸಿಂಹ’ ಸರ್ ಅವರ ‘ಟಿಪ್ಪು’ ಕುರಿತ ಲೇಖನವಂತೂ ಇತಿಹಾಸದ ಮೇಲೆ ತಿರುಚು ಇತಿಹಾಸಕಾರರು ಹೊದೆಸಿದ್ದ ದಪ್ಪನೆಯ ದುಪ್ಪಡಿಯನ್ನು ದೊಪ್ಪನೆ ಎತ್ತಿ ಹರಿದು ಹಾಕಿ, ಸತ್ಯದ ದಿಗ್ದರ್ಶನ ಮಾಡಿಸಿತ್ತು. ಹಾಗೆಯೇ ನೆಲದ ಸಂಸ್ಕೃತಿಯನ್ನು, ಈ ನೆಲದ ಭಕ್ತರನ್ನು ಹೀಗಳೆಯುವವರಿಗೆ, ಅವಮಾನಿಸುವವರಿಗೆ ಅವರು ಯಾರೇ ಆಗಿರಲಿ, ಎಷ್ಟೇ ದೊಡ್ಡವರಾಗಿರಲಿ, ಅಂಥವರನ್ನು ಖಂಡಿಸಲೇಬೇಕು. ಅಂಥದ್ದರಲ್ಲಿ ‘ಕೋಡಂಗಿಗಳು’ ಪದ ಏನೇನೂ ಅಲ್ಲ. ಅದಕ್ಕಿಂತ ಹರಿತವಾದ ಪದ ಪ್ರಯೋಗಿಸಿದ್ದರೆ ಸೂಕ್ತವಾಗುತ್ತಿತ್ತು’ ಎಂದಿದ್ದಾರೆ.

– ವಿಶ್ವೇಶ್ವರ ಭಟ್

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.