ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.
ಮುಂದೆ ಓದಿ...ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.
ಮುಂದೆ ಓದಿ...ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.
ಮುಂದೆ ಓದಿ...ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ
ಮುಂದೆ ಓದಿ...ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.
ಮುಂದೆ ಓದಿ...ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.
ಮುಂದೆ ಓದಿ...ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!
ಮುಂದೆ ಓದಿ...ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.
ಮುಂದೆ ಓದಿ...
ಬೆಂಗಳೂರು ಬನಶಂಕರಿಯಿಂದ ಸತೀಶ್ ನಾಯಕ್ ಅವರು ಮಿಂಚಂಚೆ ಕಳುಹಿಸಿದ್ದಾರೆ. ಎಷ್ಟು ಫಾಸ್ಟ್ ಅಂದರೆ ಬೆಳಗ್ಗೆ 7:00 ಗಂಟೆಗೆಲ್ಲ ಸತೀಶ್ ಅವರ ಮಿಂಚಂಚೆ ನನ್ನ ಇನ್್ಬಾಕ್ಸ್್ಗೆ ಬಂದು ಬಿದ್ದಿತ್ತು. ಆ.2ರ ಪತ್ರಿಕೆಯಲ್ಲಿ (ಪುಟ 5) ಪ್ರಕಟವಾದ ಗಂಭೀರ ತಪ್ಪಿನ ಕುರಿತು ಅವರು ಗಮನ ಸೆಳೆದಿದ್ದಾರೆ. ಅವರು ಬರೆಯುತ್ತಾರೆ- ‘ಸಂಪಾದಕರೇ, ರಾಜ್ಯದ ಆರೋಗ್ಯ ಸಚಿವರು ಯಾರು? ಎಸ್.ಎ. ರಾಮದಾಸ್ ಅವರಾ? ಅಥವಾ ಅರವಿಂದ ಲಿಂಬಾವಳಿಯವರಾ? ಅಥವಾ ಇಬ್ಬರಿಗೂ ಇಲಾಖೆಯನ್ನು ಹಂಚಲಾಗಿದೆಯಾ?’
‘ಈ ಅನುಮಾನಕ್ಕೆ ಕಾರಣ ನಿಮ್ಮ ಪತ್ರಿಕೆ. ಪುಟ 5ರಲ್ಲಿ ‘ಪ್ರಸಕ್ತ ವರ್ಷ ಸಾಂಕ್ರಾಮಿಕ ರೋಗಕ್ಕೆ 52 ಮಂದಿ ಬಲಿ’ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಲಾದ ಎಲ್ಲ ಸುದ್ದಿಗಳು ಆರೋಗ್ಯ ಇಲಾಖೆಗೆ ಸಂಬಂಧಿಸಿದ್ದು. ಆದರೆ ‘ರಾಮದಾಸ್ ಉತ್ತರಿಸಿದರು’ ಎಂದು ಬರೆಯಲಾಗಿದೆ. ಜೊತೆಗೆ ರಾಮದಾಸ್ ಅವರ ಫೋಟೊ ಕೂಡ ಪ್ರಕಟಿಸಲಾಗಿದೆ’ ಎಂದಿದ್ದಾರೆ.
ಪ್ರಮಾದವಾಗಿರುವುದು ನಿಜ. ಆರೋಗ್ಯ ಸಚಿವ ಅರವಿಂದ ಲಿಂಬಾವಳಿ ಅವರ ಬದಲು ರಾಮದಾಸ್ ಅವರ ಹೆಸರು ಮತ್ತು ಚಿತ್ರ ಪ್ರಕಟವಾಗಿದೆ. ಎಸ್.ಎ. ರಾಮದಾಸ್ ಅವರದ್ದು ವೈದ್ಯಕೀಯ ಶಿಕ್ಷಣ ಇಲಾಖೆ, ಲಿಂಬಾವಳಿ ಅವರದ್ದು ಆರೋಗ್ಯ ಇಲಾಖೆ.
ಕೊಕ್ಕಡ ವೆಂಕಟ್ರಮಣ ಭಟ್ ಅವರು ಸ್ವಲ್ಪ ದಿನಗಳ ನಂತರ ಪತ್ರ ಬರೆದಿದ್ದಾರೆ. ಅವರು ಬರೆಯುತ್ತಾರೆ-
‘ನಾನು ಬರೆಯುತ್ತಲೇ ಇದ್ದೇನೆ. ಮಂಡ್ಯ ಪುಟದಲ್ಲಿ ಇರುವಷ್ಟು ಅಕ್ಷರ ದೋಷಗಳು, ಬೇರೆ ಪುಟಗಳಲ್ಲಿ ಇರುವುದಿಲ್ಲ. ಆದರೆ ‘ನಾವಂತೂ ಸುಧಾರಿಕೊಳ್ಳುವುದೇ ಇಲ್ಲ’ ಎಂಬಂತೆ ಮಂಡ್ಯ ಪುಟದಲ್ಲಿ ಅಕ್ಷರ ದೋಷಗಳ ಹಾವಳಿ ಹೆಚ್ಚುತ್ತಲೇ ಇದೆ.’
‘ಜು.27ರಂದು (ಪುಟ 2) ‘ಕಟ್ಟಕಡೆಯ ಮಹಿಳೆಗೂ ಸ್ವತಂತ್ರ್ಯ ನಿರ್ಣಯ’ ಎಂಬ ಶೀರ್ಷಿಕೆ ಇದೆ. ಜು.30ರ ಸಂಚಿಕೆಯ (ಪುಟ 2) ಸುದ್ದಿ ಸಂಕ್ಷೇಪದಲ್ಲಿ ‘… ಸ್ವಾತಂತ್ರ್ಯ ಸಿಗೋದು ಅನುಮಾನ’ ಸುದ್ದಿ ವಿವರಣೆಯಲ್ಲಿ, ‘ಮಹಿಳೆಯರಿಗೆ ಸಿಗಬೇಕೊ ಬೇಡವೋ…’ ಎಂದು ವರದಿಗಾರರು ಬರೆಯುತ್ತಾರೆ. ‘ಸ್ವಾತಂತ್ರ್ಯ’ ಎಂಬುದು ನಾಮಪದ. ‘ಸ್ವತಂತ್ರ’ ಎಂಬುದು ವಿಶೇಷಣ. ನಮ್ಮ ಪತ್ರಕರ್ತ ವರದಿಗಾರರಿಗೆ ವ್ಯಾಕರಣದ ಸಾಮಾನ್ಯ ಜ್ಞಾನದ ಕಲ್ಪನೆಯಾದರೂ ಇರಬೇಕು. ಪುಟ 3ರಲ್ಲಿ ‘ಮಾಧ್ಯಮ ಕ್ಷೇತ್ರ ಧರ್ಮ ಕಳೆದುಕೊಳ್ಳುತ್ತಿದೆ’ ಸುದ್ದಿಯಲ್ಲಿ ‘ಪ್ರಜಾಪ್ರಭುತ್ವದಲ್ಲಿ ‘ಅಂಗಳಿಗೂ’ ಕಳಂಕ’ ಎಂದು ಮುದ್ರಿಸಿದೆ. ‘ಅಂಗಗಳಿಗೂ’ ಎಂದಾಗಬೇಕು.’
‘ಸಮಾಜದಲ್ಲಿ ‘ಸಣ್ಮ ತಪ್ಪಾದಾಗಲೇ’ ಎಂದಿರುವುದು ‘ಸಣ್ಣ’ ಎಂದಾಗಬೇಕು. ಇನ್ನೂ ಸಾಕಷ್ಟು ತಪ್ಪುಗಳ ಪಟ್ಟಿ ಮಾಡುತ್ತಲೇ ಹೋಗಬಹುದು. ಅಕ್ಷರ ದೋಷ ಹುಡುಕುವ ಉದ್ದೇಶವಲ್ಲ. ಅರ್ಥ ಆಭಾಸವಾಗುವಂತಹ ತಪ್ಪುಗಳು ನುಸುಳಬಾರದು’ ಎಂದಿದ್ದಾರೆ.
ವೆಂಕಟ್ರಮಣ ಭಟ್ ಅವರ ಸಲಹೆ ಅತ್ಯಂತ ಸೂಕ್ತವಾದದ್ದು. ‘ಸ್ವಾತಂತ್ರ್ಯ’ ಮತ್ತು ‘ಸ್ವತಂತ್ರ’ಕ್ಕೆ ವ್ಯತ್ಯಾಸವಿದೆ. ಇದನ್ನು ಅರಿಯಲು ವ್ಯಾಕರಣ ಜ್ಞಾನದ ಅಗತ್ಯವಿಲ್ಲ. ಒಂದು ವಾಕ್ಯಕ್ಕೆ ‘ಸ್ವಾತಂತ್ರ’ ಎಂಬುದು ಸರಿ ಹೊಂದುತ್ತದೊ, ‘ಸ್ವಾತಂತ್ರ್ಯ’ ಎಂಬುದು ಸರಿಹೊಂದುತ್ತದೊ ಎಂಬುದರ ಮೂಲಕವೂ ಅದನ್ನು ಅರಿಯಬಹುದು. ‘ಮಹಿಳೆಗೆ ಸ್ವಾತಂತ್ರ್ಯ ದೊರೆಯಬೇಕು’, ‘ ಮಹಿಳೆ ಸ್ವತಂತ್ರಳಾಗಬೇಕು.’ ಈ ಎರಡು ವಾಕ್ಯಗಳನ್ನು ಗಮನಿಸಿದರೆ ವ್ಯತ್ಯಾಸ ಅರ್ಥವಾಗುತ್ತದೆ.
- ವಿಶ್ವೇಶ್ವರ ಭಟ್
>>>>>>>>>
ವಿ. ಹೇಮಂತಕುಮಾರ, ಬೆಂಗಳೂರು 9035992900
- ನಮ್ಮಜ್ಜಿ ಭಗವದ್ಗೀತೆ ಓದ್ತಿರ್ತಾರಲ್ಲ?
ಕಾಮಸೂತ್ರ ಓದಿದ ಪರಿಣಾಮ ಅಂತೀಯಾ?!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
-ಭಟ್ರೇ, ನೀವು ಪತ್ರಿಕಾರಂಗಕ್ಕೇ ಬಂದಿದ್ದು ಆಕಸ್ಮಿಕವೋ, ಸ್ವ-ಇಚ್ಛೆಯಿಂದಲೋ, ಪೋಷಕರ ಒತ್ತಡದಿಂದಲೋ?
ಹೊಟ್ಟೆಪಾಡಿಗೋ ಎಂದು ಕೇಳಲಿಲ್ಲವಲ್ಲಾ ಪುಣ್ಯ!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ 9449130531
- ಬೆಳಗಾಗೆದ್ದು ಕಾಫಿ ಕುಡೀರಿ, ಏನಾದರೂ ಹಲ್ಲುಜ್ಜ ಬೇಡಿ, ಮಲ್ಕೊಂಡೇ ಸ್ನಾನ ಮಾಡಿ ಇದು ನಮ್ಮ ಈಗಿನ ಸಿನಿಮಾ ಮಂದಿಯ ನೀತಿಪಾಠವೇ?
ಇದೀಗ ಸುಪ್ರಭಾತವಾಗಿದೆ ಮಾರಾಯ!
ಯು. ಪ್ರಶಾಂತ ಮೇಲಾಡಿ ತೀರ್ಥಹಳ್ಳಿ
- ಹೆಣ್ಣಿಗೆ ಹೆಣ್ಣೇ ಶತ್ರು. ಗಂಡಿಗೆ!
ಹೆಣ್ಣು!
ಪಟ್ಟಸೋಮನಹಳ್ಳಿ ಗಾನಸುಮಾ ಪಾಂಡವಪುರ ತಾ. 9844486924
-ರೈತರಿಗೆ ‘ಬರ’ ಬಂದ್ರೆ ಶಾಸಕರಿಗೆ ‘ವರ’ವಂತೆ ಹೌದೇ ಬಾಣಭಟ್ರೇ?
ಅಧಿಕಾರಿಗಳಿಗೆ ಮಾತ್ರ ‘ವರ’ದಾನ!
ಜೆ.ಪಿ. ನಾಗರಾಜ, ದಾವಣಗೆರೆ, 9901193811
- ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ, ಪ್ರೇಮಿಗಳ ಜಗಳ?
ಉಂಡರೂ ಮಲಗುವುದಿಲ್ಲ ಎಂಬ ಕಾರಣಕ್ಕೆ!
ಫ್ಯಾಷನ್ ಡಿಸೈನರ್ ಮಧು, 9945737427
- ಭಾವನೆಗಳಿಲ್ಲದ ಹೃದಯ ‘ಕರೆನ್ಸಿ’ ಇಲ್ಲದ ಮೊಬೈಲ್್ನಂತೆ ಅಲ್ಲವೆ?
ಆದ್ರೂ ಬರೀ ಇನ್್ಕಮಿಂಗ್ ಕಾಲ್್ಗಳು ಬರ್ತಾವಲ್ಲ!
-ಬಾಣಭಟ್ಟ