ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.
ಮುಂದೆ ಓದಿ...ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.
ಮುಂದೆ ಓದಿ...ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.
ಮುಂದೆ ಓದಿ...ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ
ಮುಂದೆ ಓದಿ...ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.
ಮುಂದೆ ಓದಿ...ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.
ಮುಂದೆ ಓದಿ...ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!
ಮುಂದೆ ಓದಿ...ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.
ಮುಂದೆ ಓದಿ...
ಇದೊಂದು ಕಡೆ ಎಲ್ಲ ಪತ್ರಕರ್ತರೂ ಪದೇ ಪದೆ ತಪ್ಪುಗಳನ್ನು ಮಾಡುತ್ತಾರೆ. ಅದೆಂದರೆ ಹೆಸರು!
ಊರಿನ ಹೆಸರಿರಬಹುದು, ವ್ಯಕ್ತಿಗಳ ಹೆಸರಿರಬಹುದು, ಪದವಿಯ ಹೆಸರಿರಬಹುದು, ಎಲ್ಲರೂ ಆಗಾಗ ತಪ್ಪುಗಳನ್ನು ಮಾಡುತ್ತಾರೆ. ಕೆಲವೊಂದು ತಪ್ಪುಗಳನ್ನು ಮಾಡಿದರೆ ಸಿಕ್ಕಿ ಬೀಳದೇ ಇರಬಹುದು, ಆದರೆ ಈ ತಪ್ಪನ್ನು ಮಾಡಿದರೆ ಬಚಾವ್ ಆಗೋದು ಕಷ್ಟ. ಒಬ್ಬರಲ್ಲದಿದ್ದರೆ ಮತ್ತೊಬ್ಬರಾದರೂ ಹಿಡಿದೇ ಹಿಡಿಯುತ್ತಾರೆ. ಹಾಗಿದೆ ಈ ತಪ್ಪಿನ ಮಹಾತ್ಮೆ.
ಕೆಲವು ವರ್ಷಗಳ ಹಿಂದೆ ಸುನಾಮಿ ಬೀಸಿದಾಗ, ಆ ಹೆಸರನ್ನು ಕೇಳದ (Tsunami
) ಕನ್ನಡ ಪತ್ರಕರ್ತರು ತ್ಸುನಾಮಿ ಎಂದೇ ಮೊದಲ ದಿನ ಬರೆದಿದ್ದರು. ಮಲೇಷಿಯಾ ಸರ್ಕಾರ ನಟ ಶಾರುಕ್ ಖಾನ್ ಅವರಿಗೆ (ನಮ್ಮಲ್ಲಿನ ಪದ್ಮಶ್ರೀ ಪ್ರಶಸ್ತಿಯಂತೆ) ದಾತೊ (Datuk) ಪ್ರಶಸ್ತಿ ನೀಡಿದಾಗ, ಎಲ್ಲ ಪತ್ರಿಕೆಗಳೂ ದಾತುಕ್, ಡತುಕ್, ದತುಕ್ ಪ್ರಶಸ್ತಿ ಎಂದು ಬರೆದಿದ್ದವು.
ಮೊನ್ನೆ ಬ್ರಿಟನ್್ನಲ್ಲಿ ಅದ್ದೂರಿ ವಿವಾಹ ಆಯ್ತಲ್ಲ, ಮದುಮಗಳಾದ ಕೇಟ್ ಮಿಡ್ಲ್ ಟನ್ (Kate Middleton) ಹೆಸರನ್ನು ಕನ್ನಡದ ಪತ್ರಿಕೆಯೊಂದು ಕಾಟೆ ಮಿಡ್ಲ್ ಟನ್ ಎಂದು ಬರೆದಿತ್ತು.
ಹುಬ್ಬಳ್ಳಿಯ ನವನಗರದ ಸರ್ವಜಿತ್ ಎಂಬುವವರು ಕನ್ನಡ ಪತ್ರಿಕೆಗಳು ವ್ಯಕ್ತಿಗಳ ಹೆಸರನ್ನು ತಪ್ಪಾಗಿ ಬರೆಯುವುದರ ಬಗ್ಗೆ ಗಮನ ಸೆಳೆದಿದ್ದಾರೆ. ಉದಾಹರಣೆಗೆ Deol. ಅವರ ಪ್ರಕಾರ ಇದರ ಉಚ್ಚಾರ ಡಿಯೋಲ್ ಅಲ್ಲ, ದೇವಲ್. ದೇವಲ್ ಅಂದ್ರೆ ದೇವಾಲಯಾದವನು ಎಂದರ್ಥ. ನಮ್ಮಲ್ಲಿ ಗುಡಿ ಎಂಬ ಅಡ್ಡ ಹೆಸರಿದೆಯಲ್ಲ, ಹಾಗೆ. ಸಿನಿಮಾ ನಟ ಧರ್ಮೇಂದ್ರನ ಈ ಅಡ್ಡ ಹೆಸರು ಅವನ ಇಬ್ಬರು ತಾರಾ ಪುತ್ರರಿಗಿದೆ – ಸನ್ನಿ ಡಿಯೋಲ್, ಬಾಬಿ ಡಿಯೋಲ್. ಹೇಮಾ ಮಾಲಿನಿಗೆ ಹುಟ್ಟಿದ ಹೆಣ್ಣು ಮಗಳು ಇಶಾ ಡಿಯೋಲ್. ಇವೆಲ್ಲ ಸನ್ನಿ ದೇವಲ್, ಬಾಬಿ ದೇವಲ್ ಮತ್ತು ಇಶಾ ದೇವಲ್ ಎಂದಾಗಬೇಕು. ಹುಬ್ಬಳ್ಳಿಯಲ್ಲಿ ಸಿಂಪಿಗ ವೃತ್ತಿಯ ಒಂದು ಕುಲ ನಾಮ – ದೇವಳ (ದೇವಲ್). ಸಿನಿಮಾ ನಟರ ಪ್ರಭಾವ ಅಥವಾ ಇಂಗ್ಲಿಷ್ ಉಚ್ಚಾರದ ಪರಿಣಾಮದಿಂದ ಅವು ಡಿಯೋಲ್ ಆಗಿವೆ.
ಸರ್ವಜಿತ್ ಅವರು ನೀಡಿದ ಇನ್ನೊಂದು ಉದಾಹರಣೆ ಖ್ಯಾತ ಕುಸ್ತಿ ಪಟು ದಾರಾಸಿಂಗ್ ಹೆಸರು. ಈತನ ತಮ್ಮ ರಣಧವ (Randhava).
ಅದೇ ರೀತಿ ಖ್ಯಾತ ನಿರ್ದೇಶಕ ಬಂಗಾಳದ Satyajit Ray. ಇಂಗ್ಲಿಷ್ ಉಚ್ಚಾರದಿಂದಾಗಿ ಸತ್ಯಜಿತ್ ರೇ ಆಗಿಹೋದರು. ಸತ್ಯಜಿತ ರಾಯ ಎಂಥ ಚೆಂದದ ಉಚ್ಚಾರ. ರೇ v/s ಕಿರಣ ಅಥವಾ ರಶ್ಮಿ. ಎಲ್ಲಿಂದೆಲ್ಲಿಗೆ ಸಂಬಂಧ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದಲ್ಲಿ ಪ್ರೊ.ಭಾರತಿ (Ray) ಎಂಬುವವರಿದ್ದರು. ಭರತಿ ಅಂದ್ರೆ ತುಂಬಿದ್ದು, (Bharati) ಆಗಿದ್ದು ಎಂದರ್ಥ. ನಿಜಕ್ಕೂ ಇದು ಸುಂದರವಾದ ಅಡ್ಡ ಹೆಸರು. ಇಂಗ್ಲಿಷ್ ಉಚ್ಚಾರದಿಂದ ಭರತಿ ಅವರು ಭಾರತಿ ಆಗಿಬಿಟ್ಟರು!
ಕನ್ನಡ ಪತ್ರಕರ್ತರಿಗೆ ಈ ಹೆಸರಿನ ಜತೆಗೆ ಏಗುವುದು ನಿಜಕ್ಕೂ ದೈನಂದಿನ ಸವಾಲೇ ಸರಿ.
ಅದಕ್ಕೇ ಎಲ್ಲವನ್ನೂ ಇಂಗ್ಲೀಷ್ ಕಿಂಡಿಯಿಂದಲೇ ನೋಡುವುದನ್ನು ಬಿಟ್ಟು ಸ್ವಂತವಾಗಿ ಹುಡುಕಿ ಕೆದಕಿ ತಿರುಗಿ ಕೊರಗಿ ತಿಳಿದುಕೊಳ್ಳುವ ಮನಃಸ್ಥಿತಿ ಇರಬೇಕು ಪತ್ರಕರ್ತರಿಗೆ. ಇವರು ಬರೆದಿದ್ದನ್ನೇ ಸಮಾಜ ಅನುಕರಿಸುತ್ತದೆ ಎಂಬುದು ನೆನಪಿರಲಿ.
ಮತ್ತಷ್ಟು ಉದಾಹರಣೆಗಳು:
ರಾಯರು ಈಗ ರಾವ್ ಆಗಿದೆ. ದೀಪಿಕಾಳ ಪ್ರಭಾವದಿಂದ ಪಡುಕೋಣೆ ಎನ್ನುವ ಹೆಸರು ಪಡುಕೊಂನ್ ಆಗಿದೆ.
ಬಹುತೇಕ ಈಶ್ವರನ ನಾಮಾಂಕಿತಗಳೆಲ್ಲವೂ ಸಹ ಶ್ ಆಗಿದೆ.
most of the Bangla(ಬಾಂಗ್ಲಾ) names are like this, please not its not Bangalee (ಬಂಗಾಲೀ).
Chattophadhaya has become Chatterjee
Bandhophadhaya has become Banerjee
Gangophadhaya has become Gangulee
Mukhophadhya has become Mukherjee