ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.
ಮುಂದೆ ಓದಿ...ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.
ಮುಂದೆ ಓದಿ...ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.
ಮುಂದೆ ಓದಿ...ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ
ಮುಂದೆ ಓದಿ...ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.
ಮುಂದೆ ಓದಿ...ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.
ಮುಂದೆ ಓದಿ...ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!
ಮುಂದೆ ಓದಿ...ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.
ಮುಂದೆ ಓದಿ...
ಬಸ್‌ನಲ್ಲಿ ಸಂಚರಿಸುವ ಪ್ರಯಾಣಿಕರ ವಿವರಗಳೆಲ್ಲ ಸಾರಿಗೆ ಮಂತ್ರಿಗೆ ಗೊತ್ತಿರುವುದು ಹೇಗೆ ಸಾಧ್ಯವಿಲ್ಲವೋ, ಪತ್ರಿಕೆಯಲ್ಲಿ ಪ್ರಕಟವಾಗುವ ಅಕ್ಷರ ಅಕ್ಷರವನ್ನೂ ಓದಲು ಅದರ ಸಂಪಾದಕರಿಗೆ ಸಾಧ್ಯವಾಗಲಿಕ್ಕಿಲ್ಲ. ಆದರೆ ಪತ್ರಿಕೆಯಲ್ಲಿ ಯಾವ ಪುಟದಲ್ಲಿ ಪ್ರಮುಖ ಸುದ್ದಿ ಪ್ರಕಟವಾಗುತ್ತಿದೆ ಎಂಬ ಮಾಹಿತಿ ಅವರಿಗೆ ಇರುತ್ತದೆ. ಅಲ್ಲದೇ ತನ್ನ ಪತ್ರಿಕೆಯಲ್ಲಿ ಎಷ್ಟು ಮಂದಿ ಇದ್ದಾರೆ, ಯಾರು ಯಾವ ಊರಿನಲ್ಲಿ ವರದಿಗಾರರಾಗಿದ್ದಾರೆ, ಕಚೇರಿಯಲ್ಲಿ ಯಾರು ಯಾವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ, ಅಂಕಣಕಾರರು ಯಾರು, ಅವರೇನು ಬರೆಯುತ್ತಾರೆ, ಯಾವ ದಿನ ಯಾರ ಅಂಕಣ ಪ್ರಕಟ ವಾಗುತ್ತದೆ… ಮುಂತಾದ ವಿವರಗಳೆಲ್ಲ ಸಂಪಾದಕರಿಗೆ ಗೊತ್ತಿರುತ್ತದೆ, ಗೊತ್ತಿರಲೇಬೇಕು. ಈ ವಿಷಯಗಳಲ್ಲಿ ಯಾವ ಸಂಪಾದಕರೂ ಮೌಢ್ಯ ಪ್ರದರ್ಶಿಸುವುವಷ್ಟು ಉದಾಸೀನ ಭಾವ ಬೆಳೆಸಿಕೊಳ್ಳಲಾರರು.
ಒಮ್ಮೊಮ್ಮೆ ಪತ್ರಿಕೆಯಲ್ಲಿ ಹೀಗೂ ಆಗುತ್ತದೆ.
ಅದೇನೆಂದರೆ, ಪತ್ರಿಕೆಯಲ್ಲಿ ಯಾರೋ ಬರೆಯುತ್ತಾರೆ, ಅದು ಸಂಪಾದಕರಿಗೇ ಗೊತ್ತಿರುವುದಿಲ್ಲ. ಇದನ್ನು ಒಪ್ಪಿಕೊಳ್ಳಬಹುದು ಬಿಡಿ. ಹೇಗೆಂದರೆ ಯಾರೋ ಕಾವ್ಯನಾಮದಿಂದ ಕತೆಯನ್ನೋ, ಕವಿತೆ ಯನ್ನೋ ಬರೆಯುತ್ತಿದ್ದಾರೆನ್ನಿ. ಅದು ಯಾರು ಎಂಬ ಸಂಗತಿ ಸಂಪಾದ ಕರಿಗೆ ಗೊತ್ತಿಲ್ಲದೇ ಹೋಗಬಹುದು. ಆದರೂ ಅವರು ಅದನ್ನು ತಿಳಿದುಕೊಳ್ಳಬೇಕು. ಇಂಥ ಸಣ್ಣಪುಟ್ಟ ವಿಷಯದಲ್ಲಿ ರಿಯಾಯಿತಿ ಕೊಡಬಹುದು. ಆದರೆ ವರ್ಷಗಟ್ಟಲೆ ಒಬ್ಬ ನಿಶ್ಚಿತ ಅಂಕಣದ ಅಡಿ ಯಲ್ಲಿ ಬರೆಯುತ್ತಿರುತ್ತಾನೆ, ಅದು ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುತ್ತದೆ. ಆತ ಪತ್ರಿಕೆಯ ವರದಿಗಾರನೂ ಆಗಿರುತ್ತಾನೆ. ಆದರೆ ಸಂಪಾದಕರಿಗೆ ಮಾತ್ರ ಆತ ಯಾರೆಂಬುದು ಗೊತ್ತಿರುವುದಿಲ್ಲ. ಅವರಿಗೊಂದೇ ಅಲ್ಲ, ಪತ್ರಿಕಾಲಯದಲ್ಲಿ ಇರುವವರಿಗೂ ಗೊತ್ತಿರುವುದಿಲ್ಲ, ಓದುಗರಿಗೂ ಗೊತ್ತಿರುವುದಿಲ್ಲ. ಆದರೆ ಅವನ ಬರಹ, ವರದಿಗಳು ಮಾತ್ರ ಪತ್ರಿಕೆ ಯಲ್ಲಿ ವಾರವಾರವೂ ಪ್ರಕಟವಾಗುತ್ತದೆ! ಇದೆಂಥ ವಿಚಿತ್ರ, ಹೀಗಾಗಲು ಹೇಗೆ ಸಾಧ್ಯ ಎಂದು ಅನಿಸಬಹುದು. ಆದರೆ ಇಂಥದೊಂದು ಪ್ರಸಂಗ ಆಗಿದ್ದಂತೂ ನಿಜ. ಸಣ್ಣಪುಟ್ಟ ಪತ್ರಿಕೆಗಳಲ್ಲಿ ಹೀಗಾಗಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗಿರಲಿಲ್ಲ. ಆದರೆ ‘ದಿ ಹಿಂದು’ನಂಥ ಪತ್ರಿಕೆಯಲ್ಲಿ ಆದಾಗ?
‘ದಿ ಹಿಂದು’ ಪತ್ರಿಕೆಯ ಲಂಡನ್ ವರದಿಗಾರ ಪ್ರತಿ ಹದಿನೈದು ದಿನಗಳಿಗೊಮ್ಮೆ ಬ್ರಿಟಿಷ್ ಸಾಮ್ರಾಜ್ಯದ ವಿದ್ಯಮಾನಗಳ ಬಗ್ಗೆ ’ಐbಟಆಜಿಠಿಜಿoe Sಟmಜ್ಚಿo’ ಎಂಬ ಶೀರ್ಷಿಕೆಯಡಿಯಲ್ಲಿ ಒಂದು ಅಂಕಣ ಬರೆಯುತ್ತಿದ್ದ. ಅದು ಸಂಪಾದಕೀಯ ಪುಟದಲ್ಲಿ ಪ್ರಕಟವಾಗುತ್ತಿತ್ತು. ಈ ಅಂಕಣ ಸುಮಾರು ಅರ್ಧಪುಟಕ್ಕಾಗುವಷ್ಟು ಹರಡಿಕೊಳ್ಳುತ್ತಿತ್ತು. ಭಾರತಕ್ಕೆ ಸಂಬಂಧಿಸಿದಂತೆ ಬ್ರಿಟನ್‌ನಲ್ಲಿ, ಅಲ್ಲಿನ ಪಾರ್ಲಿಮೆಂಟ್‌ನಲ್ಲಿ ಆಗುತ್ತಿದ್ದ ಚರ್ಚೆ, ಬ್ರಿಟನ್‌ನ ರಾಜಕೀಯ ವಿದ್ಯಮಾನಗಳೆಲ್ಲ ಈ ಅಂಕಣದಲ್ಲಿ ವಿಸ್ತೃತವಾಗಿ ಪ್ರಸ್ತಾಪಿತವಾಗುತ್ತಿದ್ದವು. ಆಗ ಭಾರತದಲ್ಲಿ ಬ್ರಿಟಿಷ್ ಆಡಳಿತವಿದ್ದುದರಿಂದ ಬ್ರಿಟನ್‌ನಲ್ಲಿ ಆಗುವ ಪ್ರಮುಖ ಘಟನಾವಳಿಗಳು ಇಲ್ಲಿನ ಓದುಗರ ಮೇಲೆ ಸಹಜವಾಗಿ ಪರಿಣಾಮ ಬೀರುತ್ತಿದ್ದವು. ಹೀಗಾಗಿ ಈ ಅಂಕಣಕ್ಕೆ ಸಾಕಷ್ಟು ಓದುಗರಿದ್ದರು. ಪತ್ರಿಕೆಯೂ ಇದಕ್ಕೆ ಮಹತ್ವ ನೀಡಿತ್ತು. ಆದರೆ ವಿಚಿತ್ರ ಅಂದ್ರೆ ಅದನ್ನು ಯಾರು ಬರೆಯುತ್ತಾರೆ, ಯಾರು ಕಳಿಸುತ್ತಾರೆ ಎಂಬುದರ ಬಗ್ಗೆ ಸಂಪಾದಕರಾದಿಯಾಗಿ ಯಾರೂ ತಲೆಕೆಡಿಸಿಕೊಂಡಿರಲಿಲ್ಲ.
೧೮೮೯ರ ಜುಲೈನಲ್ಲಿ ಭಾರತದಲ್ಲಿ ಕೆಲಸ ಮಾಡುತ್ತಿದ್ದ ಕ್ರಿಶ್ಚಿಯನ್ ಮಿಶನರಿಗಳ ಪೈಕಿ ಕೆಲವರು ‘ದಿ ಹಿಂದು’ ಪತ್ರಿಕೆಯ ಸದರಿ ಲಂಡನ್ ವರದಿಗಾರ ಅಂಕಣದಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಆಕ್ಷೇಪ ವ್ಯಕ್ತಪಡಿಸಿ ದರು. ಅಂಕಣದ ಕೊನೆಯಲ್ಲಿ ಲಂಡನ್ ವರದಿಗಾರನ ಹೆಸರು ಪ್ರಕಟವಾಗುತ್ತಿರಲಿಲ್ಲವಾದ್ದರಿಂದ ಅವರು ನೇರ ಪತ್ರಿಕೆಯ ಸಂಪಾದಕರಿಗೆ ಪತ್ರ ಬರೆದು ತಮ್ಮ ಕೋಪವನ್ನು ತೋಡಿಕೊಂಡರು. ಈ ಅಂಕಣದಲ್ಲಿ ಪ್ರಸ್ತಾಪವಾದ ವಿಷಯ ‘ಮೆಥಾಡಿಸ್ಟ್ ರೆಕಾರ್ಡರ್’ ಎಂಬ ಪತ್ರಿಕೆಯಲ್ಲಿ ಈಗಾಗಲೇ ಪ್ರಸ್ತಾಪವಾಗಿದೆಯೆಂದೂ, ಅದನ್ನು ರೆವರೆಂಡ್ ಡಾ. ಜೆ.ಎ. ಲುನ್ ಎಂಬುವವರು ಬರೆದಿದ್ದಾಗಿಯೂ ಅವರು ತಮ್ಮ ದೂರಿನಲ್ಲಿ ಹೇಳಿದ್ದರು. ಈ ಪತ್ರದ ಪ್ರತಿಯನ್ನು ‘ಮೆಥಾಡಿಸ್ಟ್ ರೆಕಾ ರ್ಡರ್’ ಪತ್ರಿಕೆ ಸಂಪಾದಕರಿಗೂ ಕಳಿಸಿದ್ದರು. ಅವರು ತಕ್ಷಣ ಅದನ್ನು ಪ್ರಕಟಿಸಿದರು. ಹೀಗಾಗಿ ಇದು ಲಂಡನ್ ವರದಿಗಾರನ ಗಮನಕ್ಕೆ ಬಂದಿತು. ಆತ ‘ಮೆಥಾಡಿಸ್ಟ್ ರೆಕಾರ್ಡರ್’ ಸಂಪಾದಕರಿಗೆ ಪತ್ರ ಬರೆದು, ತಾನು ರೆವರೆಂಡ್ ಡಾ. ಜೆ.ಎ. ಲುನ್ ಅಲ್ಲವೆಂದೂ, ತನಗೂ ಅವರಿಗೂ ಸಂಬಂಧ ಇಲ್ಲವೆಂದೂ ಸ್ಪಷ್ಟಪಡಿಸಿದ. ಅದೇ ವೇಳೆ ‘ಮೆಥಾಡಿಸ್ಟ್ ರೆಕಾರ್ಡರ್’ನಲ್ಲಿ ಪ್ರಕಟವಾದ ಕೆಲವು ಸಂಗತಿಗಳು ಭಾರತದಲ್ಲಿರುವ ಕ್ರಿಶ್ಚಿಯನ್‌ರಿಗೆ ಸಂಬಂಧಪಡುವುದರಿಂದ ಅದನ್ನು ತನ್ನ ಅಂಕಣದಲ್ಲಿ ಪ್ರಸ್ತಾಪಿಸಿರುವುದಾಗಿ ಹೇಳಿದ.
ಕ್ರಿಶ್ಚಿಯನ್ ಮಿಶನರಿಗಳ ಪತ್ರ ‘ದಿ ಹಿಂದು’ ಪತ್ರಿಕೆಯ ಸಂಪಾದಕ ಜಿ. ಸುಬ್ರಮಣಿಯನ್ ಅಯ್ಯರ್‌ಗೆ ತಲುಪುತ್ತಿದ್ದಂತೆ ಅವರು ಕಕ್ಕಾಬಿಕ್ಕಿಯಾದರು. ತಮ್ಮ ಲಂಡನ್ ವರದಿಗಾರನ ಪೂರ್ವಪರಗಳ ಬಗ್ಗೆ ಕೆದಕಲಾರಂಭಿಸಿದರು. ಪತ್ರಿಕೆಯಲ್ಲಿರುವ ತಮ್ಮ ಸಹೋದ್ಯೋಗಿ ಗಳನ್ನು ಕರೆದು ವಿಚಾರಿಸಿದರು. ಅವರ್‍ಯಾರಿಗೂ ಲಂಡನ್‌ನಿಂದ ಯಾರು ವರದಿ ಕಳಿಸುತ್ತಾರೆಂಬುದು ಗೊತ್ತೇ ಇರಲಿಲ್ಲ. ಹಾಗೆಂದು ಅಲ್ಲಿಂದ ಬಂದ ವರದಿ ಹಾಗೂ ಅಂಕಣವನ್ನು ತಪ್ಪದೇ ಪ್ರಕಟಿಸುತ್ತಿದ್ದರು! ಸಂಪಾದಕರ ಈ ಪ್ರಶ್ನೆಯಿಂದ ಎಲ್ಲರೂ ತಬ್ಬಿಬ್ಬು. ಅಸಲಿಗೆ ಸಂಪಾದ ಕರೂ ಹಾಗೇ ಆಗಿದ್ದರು.
‘ಮೆಥಾಡಿಸ್ಟ್ ರೆಕಾರ್ಡರ್’ ಪತ್ರಿಕೆಯಲ್ಲಿ ಕ್ರಿಶ್ಚಿಯನ್ ಮಿಶನರಿಗಳ ಪತ್ರ ಪ್ರಕಟವಾದ ಬಳಿಕ ವಿಷಯ ಮತ್ತಷ್ಟು ಜಟಿಲವಾಯಿತು. ಈ ಪತ್ರವನ್ನು ರೆವರೆಂಡ್ ಡಾ. ಜೆ.ಎ. ಲುನ್ ಓದಿದರು. ತಮ್ಮ ಹೆಸರು ಈ ವಿವಾದದಲ್ಲಿ ಪ್ರಸ್ತಾಪವಾಗಿರುವುದಕ್ಕೆ ಅವರು ಮನನೊಂದರು.
ರೆವರೆಂಡ್ ಡಾ. ಲುನ್ ಅಷ್ಟಕ್ಕೇ ಸುಮ್ಮನಾಗಲಿಲ್ಲ. ಅವರು ‘ಮೆಥಾ ಡಿಸ್ಟ್ ರೆಕಾರ್ಡರ್’ ಹಾಗೂ ‘ದಿ ಹಿಂದು’ ಎರಡೂ ಪತ್ರಿಕೆಗಳ ಸಂಪಾದಕರಿಗೆ ಪತ್ರ ಬರೆದು, ಆ ಲೇಖನವನ್ನು ತಾವು ಬರೆದಿಲ್ಲ ಹಾಗೂ ಆ ವಿವಾದಕ್ಕೂ ತಮಗೂ ಸ್ವಲ್ಪವೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿ ದರು.
ಯಾವಾಗ ರೆವರೆಂಡ್ ಡಾ. ಲುನ್ ಪತ್ರ ಬಂತೋ, ‘ದಿ ಹಿಂದು’ ಪತ್ರಿಕೆಯ ಸಂಪಾದಕರು ಮತ್ತಷ್ಟು ಗಲಿಬಿಲಿಗೊಂಡರು. ಅಲ್ಲಿಯ ತನಕ ತಮ್ಮ ಲಂಡನ್ ವರದಿಗಾರ ರೆವರೆಂಡ್ ಡಾ. ಲುನ್ ಇದ್ದರೂ ಇದ್ದಿರಬಹುದೆಂದು ಅವರು ಭಾವಿಸಿದ್ದರು. ಈ ಮಧ್ಯೆ ‘ಮೆಥಾಡಿಸ್ಟ್ ರೆಕಾರ್ಡರ್’ ಸಂಪಾದಕರೂ ‘ದಿ ಹಿಂದು’ ಸಂಪಾದಕರಿಗೆ ಪತ್ರ ಬರೆದು ಇಡೀ ಪ್ರಕರಣದ ಸತ್ಯಾಸತ್ಯತೆಯ ಬಗ್ಗೆ ಗಮನಹರಿಸಬೇಕು ಹಾಗೂ ಈ ನಿಟ್ಟಿನಲ್ಲಿ ತಮ್ಮ ಅನಿಸಿಕೆ ತಿಳಿಸಬೇಕೆಂದು ವಿನಂತಿಸಿಕೊಂಡರು.
‘ದಿ ಹಿಂದು’ ಸಂಪಾದಕರಿಗೆ ಇದರಿಂದ ತೀವ್ರ ಮುಜುಗರವಾಯಿತು. ತಮ್ಮ ಪತ್ರಿಕೆಯ ಲಂಡನ್ ವರದಿಗಾರ ಯಾರೆಂಬುದೇ ತಮಗೆ ಗೊತ್ತಿಲ್ಲ, ಆದರೂ ಅವನು ಅಲ್ಲಿಂದ ಕಳಿಸಿದ್ದನ್ನೆಲ್ಲ ಪ್ರಕಟ ಮಾಡುತ್ತಿದ್ದೇವೆ ಎಂದು ಹೇಗೆ ಹೇಳುವುದು? ಒಂದು ವೇಳೆ ಹೇಳಲಿಲ್ಲವೆನ್ನಿ, ಲಂಡನ್ ವರದಿಗಾರ ಯಾರೆಂಬುದನ್ನಾದರೂ ತಿಳಿಸಲೇಬೇಕಿತ್ತು. ಎಂಥ ಇಕ್ಕಟ್ಟಿನ ಪ್ರಸಂಗ!? ತಪ್ಪನ್ನು ಒಪ್ಪಿಕೊಂಡರೆ, ಬೇಕಾಬಿಟ್ಟಿ ಯಾರು ಏನೇ ಬರೆದು ಕಳಿಸಿದರೂ ಸಂಪಾದಕರು ಅವನ್ನೆಲ್ಲ ಪ್ರಕಟಿಸಿಬಿಡುತ್ತಾರೆಂದು ಓದು ಗರು ಭಾವಿಸಬಹುದಿತ್ತು. ಇದನ್ನು ಕ್ರಿಶ್ಚಿಯನ್ ಮಿಶನರಿಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಅಪಾಯವಿತ್ತು. ಸಂಪಾದಕರಿಗೆ ಇಡೀ ಪ್ರಕರಣ ಬಿಸಿ ತುಪ್ಪವಾಗಿ ಪರಿಣಮಿಸಿತು.
ಈ ಮಧ್ಯೆ ರೆವರೆಂಡ್ ಡಾ. ಲುನ್ ಸುಮ್ಮನೆ ಕುಳಿತುಕೊಳ್ಳಲಿಲ್ಲ. ‘ದಿ ಹಿಂದು’ ಲಂಡನ್ ವರದಿಗಾರ ಯಾರಿರಬಹುದೆಂದು ಶೋಧಕಾರ್ಯ ಕೈಗೆತ್ತಿಕೊಂಡರು. ಬಹಳ ಪ್ರಯಾಸಪಟ್ಟು ಅವನನ್ನು ಭೇಟಿ ಮಾಡಿದರು. ಇಡೀ ಪ್ರಕರಣದ ಸೂಕ್ಷ್ಮ ವಿಚಾರ ಹಾಗೂ ಗಂಭೀರ ಪರಿಣಾಮದ ಬಗ್ಗೆ ವರದಿಗಾರನಿಗೆ ರೆವರೆಂಡ್ ಡಾ. ಲುನ್ ವಿವರಿಸಿದರು. ಅದಾದ ಬಳಿಕವೇ ವರದಿಗಾರ ತನ್ನ ಸಂಪಾದಕರಿಗೆ ಹಾಗೂ ‘ಮೆಥಾಡಿಸ್ಟ್ ರೆಕಾರ್ಡರ್’ ಸಂಪಾದಕರಿಗೆ ತನ್ನ ನಿಲುವನ್ನು ಸ್ಪಷ್ಟಪಡಿಸಿ ಪತ್ರ ಬರೆದ.
ಇದಾದ ನಂತರ ’ಮೆಥಾಡಿಸ್ಟ್ ರೆಕಾರ್ಡರ್’ ಸಂಪಾದಕರು ಬರೆ ದರು- ‘ವರದಿಗಾರನು ತನ್ನ ಹೆಸರಿನ ಗೌಪ್ಯತೆಯನ್ನು ಕಾಪಾಡಬೇಕೆಂದು ಮನವಿ ಮಾಡಿಕೊಂಡಿರುವುದರಿಂದ, ೧೮೮೫ರ ಹೊತ್ತಿಗೆ ಅವನು ಮೆಟ್ರೊಪಾಲಿಟನ್ ಕ್ಷೇತ್ರದಲ್ಲಿ ಲಿಬರಲ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂದಷ್ಟೇ ಹೇಳಬಹುದು. ಭಾರತದಲ್ಲಿರುವ ಬ್ರಿಟಿಷ್ ಆಡಳಿತಕ್ಕೆ ಅವನು ನಿಕಟವರ್ತಿಯಾಗಿರುವುದು ಗಮನಾರ್ಹ. ಅಲ್ಲದೇ ಅವನು ಈ ಮೊದಲು ದಕ್ಷಿಣ ಭಾರತದ ಪ್ರಮುಖ ಪತ್ರಿಕೆಯೊಂದರ ಸಂಪಾದಕ ನಾಗಿದ್ದ. ಭಾರತದ ವಿದ್ಯಮಾನಗಳ ಬಗ್ಗೆ ಸಾಕಷ್ಟು ಅರಿತುಕೊಂಡಿ ರುವುದು ಈ ವರದಿಗಾರನ ಅಗ್ಗಳಿಕೆ. ಈ ವ್ಯಕ್ತಿಗೂ ನಮ್ಮ ಪತ್ರಿಕೆಗೂ ಯಾವ ಸಂಬಂಧವೂ ಇಲ್ಲ. ಹಾಗೆಯೇ ಇವನಿಗೂ ರೆವರೆಂಡ್ ಡಾ. ಲುನ್ ಅವರಿಗೂ ಯಾವ ಸಂಬಂಧ ಇಲ್ಲ. ಕಳೆದ ವಾರ ಈ ವ್ಯಕ್ತಿಯನ್ನು ಭೇಟಿಯಾಗುವ ತನಕ ಇವನು ‘ದಿ ಹಿಂದು’ ಲಂಡನ್ ವರದಿಗಾರ ನೆಂಬುದೂ ಗೊತ್ತಿರಲಿಲ್ಲ. ರೆವರೆಂಡ್ ಡಾ. ಲುನ್ ಅವರ ಹೆಸರಿನಲ್ಲಿ ಭಾರತದಲ್ಲಿ ಕೆಲಸ ಮಾಡುತ್ತಿರುವ ಕ್ರಿಶ್ಚಿಯನ್ ಮಿಶನರಿಗಳ ವಿರುದ್ಧ ಅವಹೇಳನಕಾರಿ ಲೇಖನ ಬರೆಯುವ ಇವನ ಹುನ್ನಾರವನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ.’
ಇಷ್ಟಾಯಿತಾ? ಆದರೆ ‘ದಿ ಹಿಂದು’ ಓದುಗರಿಗೆ ಈ ಲಂಡನ್ ವರದಿಗಾರ ಮಹಾಶಯ ಯಾರು ಎಂಬುದು ಕೊನೆಗೂ ಗೊತ್ತಾಗ ಲಿಲ್ಲ. ಇವತ್ತಿನ ತನಕವೂ ಅವನ ಗೌಪ್ಯತೆ ರಹಸ್ಯವನ್ನು ಹಾಗೆಯೇ ಕಾಪಾಡಲಾಗಿದೆ.
ಆದರೆ ‘ಮೆಥಾಡಿಸ್ಟ್ ರೆಕಾರ್ಡರ್’ ಸಂಪಾದಕರು ಒದಗಿಸಿದ ಮಾಹಿತಿಯನ್ನೆಲ್ಲ ಕೂಡಿಸಿ, ಲಂಡನ್ ವರದಿಗಾರ ಯಾರಿರಬಹುದು ಎಂಬ ಊಹೆ, ಚರ್ಚೆ ‘ದಿ ಹಿಂದು’ ಪತ್ರಿಕಾಲಯದಲ್ಲಿ ಆರಂಭವಾಗಿ ಬಹಳ ದಿನಗಳವರೆಗೆ ಮುಂದುವರಿಯಿತು. ಎಲ್ಲರೂ ತಮ್ಮ ಕಲ್ಪನಾ ಶಕ್ತಿಗೆ ಬಹಳ ತೊಂದರೆ ಕೊಟ್ಟರು. ‘ದಕ್ಷಿಣ ಭಾರತದ ಪತ್ರಿಕೆಯೊಂದರ ಸಂಪಾದಕನಾಗಿಯೂ ಕೆಲಸ ಮಾಡಿದ್ದ’ ಎಂಬ ಅಮೂಲ್ಯ ಮಾಹಿತಿ ಯನ್ನು ಇಟ್ಟುಕೊಂಡು ತಮ್ಮ ಕಲ್ಪನಾಲಹರಿಯನ್ನು ಹರಿಯಬಿಟ್ಟರು. ಕೊನೆಗೆ ಒಂದು ಹೆಸರಿನ ಮುಂದೆ ಬಂದು ನಿಂತರು.
ಆತ ವಿಲಿಯಂ ಡಿಗ್ಬಿ ಇದ್ದಿರಬಹುದಾ?
ಎರಡು ವರ್ಷಗಳ ಕಾಲ ಡಿಗ್ಬಿ ‘ಮಡ್ರಾಸ್ ಟೈಮ್ಸ್’ನ ಸಂಪಾದಕನಾಗಿದ್ದ. ಅದಾದ ಬಳಿಕ ಆತ ಭಾರತ ಬಿಟ್ಟು ಲಂಡನ್‌ಗೆ ವಾಪಸ್ಸಾಗಿದ್ದ. ಅವನೇ ‘ದಿ ಹಿಂದು’ ಪತ್ರಿಕೆಗೆ ಬರೆಯುತ್ತಿದ್ದನಾ?
‘ದಿ ಹಿಂದು’ ಸಂಪಾದಕೀಯ ಸಿಬ್ಬಂದಿಗೆ ಹಾಗೂ ಓದುಗರಿಗೆ ಅದು ಕೊನೆಗೂ ರಹಸ್ಯವಾಗಿಯೇ ಉಳಿಯಿತು.
Very interesting.. CHIDAMBARA RAHASYA.
very interesting story…………………..
rahasya bhedisuva patrikege chidambara rahasya……………..
grate……….
Really its quite interesting. How it could be possible for such a big news paper.Any how please you dont do the same in kannada prabha.Thank you
“ನಿಗೂಡ ರಹಸ್ಯ”
ಹ್ಹ ಹ್ಹ ಹ್ಹ.
you are great sir….. hw can u find this……..very intersting..
ಹೀಗೂ ಉಂಟಾ?