ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.
ಮುಂದೆ ಓದಿ...ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.
ಮುಂದೆ ಓದಿ...ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.
ಮುಂದೆ ಓದಿ...ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ
ಮುಂದೆ ಓದಿ...ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.
ಮುಂದೆ ಓದಿ...ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.
ಮುಂದೆ ಓದಿ...ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!
ಮುಂದೆ ಓದಿ...ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.
ಮುಂದೆ ಓದಿ...
ಸುದ್ದಿಮನೆ ಒಂದು ಕಾರ್ಖಾನೆ ಇದ್ದಂತೆ. ಸುದ್ದಿ ತರುವವರು ಹಾಗೂ ಅದನ್ನು ಪರಿಷ್ಕರಿಸುವವರು ಇಲ್ಲಿ ಅಕ್ಷರಶಃ ಯಂತ್ರಗಳಂತೆ ಕಾರ್ಯನಿರ್ವಹಿಸಬೇಕಾಗುತ್ತದೆ. ಗುಣ ಮಟ್ಟದ ಉತ್ಪನ್ನ ತಯಾರಿಕೆಗೆ ಸಾಕಷ್ಟು ಕಸರತ್ತು ನಡೆಯುತ್ತದೆ. ಈ ಕಸರತ್ತಿಗೆ ಪೈಪೋಟಿಯ ಲೇಪವಿದೆ. ಹಿಂದಾದರೆ ‘ಇಂದಿನ ಸುದ್ದಿ ನಾಳೆಗೆ ರದ್ದಿ’ ಎಂಬ ಮಾತು ಚಾಲ್ತಿಯಲ್ಲಿತ್ತು. ಆದರೆ ಈಗಿನ ಪೈಪೋಟಿ ಯುಗದಲ್ಲಿ ‘ ಇಂದಿನ ಸುದ್ದಿ ಇಂದೇ ರದ್ದಿ’ ಎಂಬಂತಾಗಿದೆ. ಹೀಗಾಗಿ ಸುದ್ದಿ ಬೇಟೆಯ ವಸ್ತು.
ಸುದ್ದಿ ಬೇಟೆ ಆಡಲು ವರದಿಗಾರರಲ್ಲಿ ಸದಾ ಪೈಪೋಟಿ. ಸ್ಪರ್ಧಾ ಯುಗದಲ್ಲಿ ಸೆಣಸಬೇಕಿರುವುದರಿಂದ ರೋಚಕ ಸುದ್ದಿಗಳಿಗೆ ಹೆಚ್ಚಿನ ಒತ್ತು. ಇಲ್ಲಿ ಕ್ರಿಯೆ ಮತ್ತು ಚಿಂತನೆ (ಆಕ್ಷನ್ ಮತ್ತು ಥಿಂಕ್)- ಎರಡರ ನಡುವಿನ ಅಂತರ ಬಹಳ ಕಡಿಮೆ ಇರುವುದರಿಂದ ಸುದ್ದಿಯ ಸ್ವರೂಪ ಅತ್ಯಲ್ಪ ಅವಧಿಯಲ್ಲಿ ನಿರ್ಧಾರ ಆಗುತ್ತದೆ. ಸುದ್ದಿಗಾರನ ಸಮಯಪ್ರಜ್ಞೆ ಮತ್ತು ಗ್ರಹಿಕೆ ಈ ನಿರ್ಧಾರಕ್ಕೆ ಸೋಪಾನ. ಸ್ವಲ್ಪ ಹೆಚ್ಚು-ಕಮ್ಮಿ ಆದರೂ ಸೋಪಾನ ಜಾರು ಬಂಡೆ ಆಗುತ್ತದೆ.
ದೇಶಿ ವರದಿಗಾರರನ್ನು ಐದು ವಿಭಾಗಗಳಲ್ಲಿ ಗುರುತಿಸಲಾಗಿದೆ. ದೇಶದ ರಾಜಧಾನಿಯಿಂದ ವರದಿ ಮಾಡುವವರು ದಿಲ್ಲಿ ಪ್ರತಿನಿಧಿಗಳು. ರಾಜ್ಯದ ರಾಜಧಾನಿ ಪ್ರತಿನಿಧಿಗಳು, ಜಿಲ್ಲಾ ವರದಿಗಾರರು, ತಾಲೂಕು-ಪಟ್ಟಣ-ಹೋಬಳಿಗಳಿಂದ ಬರೆಯುವ ಬಿಡಿ ವರದಿಗಾರರು ಅಂದರೆ ಸ್ಟ್ರಿಂಜರ್‍ಸ್. ಒಂದು ಪತ್ರಿಕೆಯ ಒಡಲು ತುಂಬಲು ಇವರೆಲ್ಲರ ಕೊಡುಗೆಯೂ ಅತ್ಯಗತ್ಯ. ಎಲ್ಲರ ಕರ್ತವ್ಯ ಮತ್ತು ಜವಾಬ್ದಾರಿ ಸಮಾನ ಆದರವಾದದು.
ರಾಜಧಾನಿ ವರದಿಗಾರರ ಬರೆಯುವ ಸುದ್ದಿ ಹೋಬಳಿ, ಹಳ್ಳಿಗಳನ್ನು ತಲುಪುವಂತೆಯೇ ಬಿಡಿ ವರದಿಗಾರರು ಬರೆಯುವ ಸುದ್ದಿ ರಾಜಧಾನಿಯನ್ನು ತಲುಪುತ್ತದೆ. ಶೈಲಿಯಲ್ಲಿ ಕೊಂಚ ಬದಲಾವಣೆ ಇರಬಹುದು. ಆದರೆ ಎಲ್ಲ ಬರೆಯುವುದು ಸುದ್ದಿಯೇ. ನಿರ್ದಿಷ್ಟ ಭಾಗದ ವರದಿಗಾರರು ಬರೆದಾಕ್ಷಣ ಸುದ್ದಿಯ ಮೂಲಸ್ವರೂಪ ಬದಲಾಗುವುದಿಲ್ಲ. ಸುದ್ದಿ ಸುದ್ದಿಯಾಗಿಯೇ ಇರುತ್ತದೆ. ಜಿಲ್ಲಾ ವರದಿಗಾರರು ಮತ್ತು ಸ್ಟ್ರಿಂಜರ್‍ಸ್ ಮಾಡಿರುವ ವರದಿಗಳು ಸರಕಾರದ ಬುಡ ಅಲ್ಲಾಡಿಸಿರುವ ನಿದರ್ಶನಗಳು ಇವೆ. ಹಲವು ಮಂತ್ರಿ ಮಹೋದಯರ ಜಂಘಾಬಲ ಉಡುಗಿಸಿದ್ದೂ ಇದೆ. ಆದರೂ ಜಿಲ್ಲಾ ವರದಿಗಾರರು ಮತ್ತು ಸ್ಟ್ರಿಂಜರ್‍ಸ್‌ಗೆ ‘ಸಮಾನ ಆದ್ಯತೆ’ ಸಿಗುತ್ತಿಲ್ಲ ಎಂಬ ಕೊರಗು ಇದೆ. ಇದು ನಿಜ ಅಥವಾ ಸುಳ್ಳು ಎಂಬುದು ಬೇರೆ ಮಾತು. ಆದರೆ ಎಲ್ಲ ಸುದ್ದಿ ಮನೆಯಲ್ಲೂ ಈ ಕೊರಗು ಕಾಡುತ್ತಿರುವುದು ಸುಳ್ಳಲ್ಲ. ತಾವು ಎಂಥದ್ದೇ ಸುದ್ದಿ ಬರೆದರೂ, ರೋಚಕ ವರದಿ ಮಾಡಿದರೂ, ತನಿಖಾ ವರದಿ ಒಪ್ಪಿಸಿದರೂ ಅದಕ್ಕೆ ಸೂಕ್ತ ‘ಸ್ಥಾನಮಾನ’ ಸಿಗುವುದಿಲ್ಲ ಎಂಬುದು ಅವರ ಈ ಕೊರಗಿಗೆ ಕಾರಣ. ಸುದ್ದಿ ಮನೆಯಲ್ಲಿ ಇವರ ಈ ಕೊರಗು ಒಂದು ರೀತಿಯಲ್ಲಿ ಶಾಶ್ವತ ಶಾಪ. ಈ ವಿಚಾರ ಪಕ್ಕಕ್ಕಿರಲಿ.
ರಾಜ್ಯ ಮಟ್ಟದ ಪತ್ರಿಕೆಗಳಿಗೆ ಜಿಲ್ಲೆ, ತಾಲೂಕು-ಪಟ್ಟಣ, ಹೋಬಳಿ ಗಳಲ್ಲಿ ಪ್ರತಿನಿಧಿಗಳು ಇರುವಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಪತ್ರಿಕೆಗಳಿಗೆ ರಾಜಧಾನಿಯಲ್ಲಿ ಪ್ರತಿನಿಧಿಗಳು ಇರುತ್ತಾರೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಪತ್ರಿಕೆಗಳು ದಿನದೂಡಲು ಈ ಪ್ರತಿನಿಧಿಗಳು ರಾಜಧಾನಿಯಿಂದ ಕಳುಹಿಸುವ ಸುದ್ದಿಗಳನ್ನೇ ನೆಚ್ಚಿಕೊಂಡಿರುತ್ತಾರೆ. ಅದರಲ್ಲೂ ರೋಚಕ, ತನಿಖಾ ಮತ್ತು ಸ್ಫೋಟಕ ವರದಿಗಳಿಗೇ ಪರಮಾದ್ಯತೆ ನೀಡುತ್ತಾರೆ. ಜಿಲ್ಲಾ ಮತ್ತು ತಾಲೂಕು ಮಟ್ಟದ ಪತ್ರಿಕೆಗಳ ಓದುಗರ ನಾಡಿಮಿಡಿತದಲ್ಲಿ ರೋಚಕ ಸುದ್ದಿಗಳೇ ಮಿಳಿತ. ಹೀಗಾಗಿ ಈ ಪತ್ರಿಕೆಗಳ ರಾಜಧಾನಿ ಪ್ರತಿನಿಧಿಗಳಲ್ಲಿ ಸದಾ ‘ಸುದ್ದಿ ಯುದ್ಧ’.
ಹದ್ದಿನ ಕಣ್ಣುಗಳಿಗೆ ದುರ್ಬೀನು ಹಾಕಿಕೊಂಡು ಸ್ಫೋಟಕ ಸುದ್ದಿ ಅರಸುವ ಈ ವರದಿಗಾರರು ಧಾವಂತವನ್ನು ಸದಾ ಬೆನ್ನಿಗೆ ಕಟ್ಟಿಕೊಂಡಿರುತ್ತಾರೆ. ಇವರ ಸುದ್ದಿಯ ಪಾತಾಳ ಗರಡಿಗೆ ಆತುರವೇ ಆಧಾರ. ಯಾವುದೋ ಒಂದು ಎಳೆ ಸಿಕ್ಕಿದರಾಯಿತು. ಅದನ್ನೇ ಹಿಡಿದು ಹಗ್ಗ ಹೊಸೆಯುತ್ತಾರೆ. ಹಿಂಜಿ-ಹಿಪ್ಪೇಕಾಯಿ ಮಾಡುತ್ತಾರೆ. ಮೊದಲು ಆಕ್ಷನ್ ನಂತರ ಥಿಂಕ್. ಥಿಂಕ್ ಅಂಡ್ ಆಕ್ಷನ್‌ಗೆ ಆಸ್ಪದವೇ ಇಲ್ಲ. ಇವರ ‘ಕರ್ತವ್ಯನಿಷ್ಠೆ’ ಭರಕ್ಕೆ ಸರಕಾರಗಳೇ ಜೋಲಿ ಹೊಡೆದಿವೆ. ಮಂತ್ರಿ-ಮಹೋದಯರು ಮನೆಗೆ ಮರಳಿದ್ದಾರೆ. ರಾಜಕಾರಣಿಗಳು ಮುಜುಗರಕ್ಕೆ ಒಳಗಾಗಿದ್ದಾರೆ. ಅಧಿಕಾರಿಗಳು ತಮ್ಮ ಮೈ ಜಿಗುಟಿ ನೋಡಿಕೊಂಡಿದ್ದಾರೆ. ಬಾಯಿ-ಬಾಯಿ ಬಡಿದುಕೊಂಡಿದ್ದಾರೆ. ನೆಲಕ್ಕೆ ಬಿದ್ದು ಹೊರಳಾಡಿದ್ದಾರೆ. ಅಂಥ ಪ್ರಸಂಗಗಳ ಒಂದೆರಡು ಸ್ಯಾಂಪಲ್ ಇಲ್ಲಿದೆ:
ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಕಾಂಗ್ರೆಸ್‌ನಿಂದ ಹೊರಬಿದ್ದು, ಕರ್ನಾಟಕ ಕಾಂಗ್ರೆಸ್ ಪಕ್ಷ ಕಟ್ಟಿಕೊಂಡು ಓಡಾಡುತ್ತಿದ್ದ ಕಾಲ. ಅವರ ಮಗ ಕುಮಾರ ಬಂಗಾರಪ್ಪ ಕಾಂಗ್ರೆಸ್‌ನಲ್ಲಿದ್ದರು. ಅದೊಂದು ದಿನ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರ ಪತ್ರಿಕಾಗೋಷ್ಠಿ. ಯಾರೋ ಒಬ್ಬ ಪತ್ರಕರ್ತರು ಖರ್ಗೆ ಅವರನ್ನು ಕೇಳಿದರು- ‘ಮಹಾ ರಾಜರದ್ದೇನೋ (ಬಂಗಾರಪ್ಪ) ಮುಗಿಯಿತು. ಇನ್ನು ಯುವರಾಜ ರನ್ನೇನು (ಕುಮಾರ ಬಂಗಾರಪ್ಪ) ಮಾಡುತ್ತೀರಿ’. ಆಗ ಖರ್ಗೆ ಉತ್ತರಿಸಿದ್ದು: ‘ಯುವರಾಜ ಪಕ್ಷಕ್ಕೆ ನಿಷ್ಠರಾಗಿ ನಡೆದುಕೊಳ್ಳದಿದ್ದರೆ ಅವರಿಗೆ ನೋಟಿಸ್ ಕೊಡುತ್ತೇವೆ’.
ಮೈಸೂರಿನ ಜಿಲ್ಲಾ ಪತ್ರಿಕೆಯೊಂದಕ್ಕೆ ಬೆಂಗಳೂರಿನಿಂದ ವರದಿ ಮಾಡುವ ಪತ್ರಕರ್ತರೊಬ್ಬರಿಗೆ, ‘ಯುವರಾಜರಿಗೆ ನೋಟಿಸ್ ಕೊಡುತ್ತೇವೆ’ ಎಂದು ಖರ್ಗೆ ಹೇಳಿದ್ದು ಮಾತ್ರ ಕೇಳಿಸಿತ್ತು. ಉಳಿದದ್ದನ್ನು ಅವರು ಗ್ರಹಿಸಿರಲಿಲ್ಲ. ಹೀಗಾಗಿ ಮೈಸೂರಿನ ಪತ್ರಿಕೆಯಲ್ಲಿ ಮರುದಿನ ಮುಖಪುಟದ ಅಗ್ರವಾರ್ತೆಯಲ್ಲಿ, ‘ಯುವರಾಜ ಶ್ರೀಕಂಠದತ್ತ ಒಡೆಯರ್‌ಗೆ ಖರ್ಗೆ ನೋಟಿಸ್’ ಎಂಬರ್ಥದ ಸುದ್ದಿ ಬಿತ್ತರವಾಯಿತು. ಮೈಸೂರಾದ್ಯಂತ ಇದು ಚರ್ಚೆಯ ವಸ್ತು.
ಸದರಿ ವರದಿಗಾರ ಮರುದಿನ ಫಾಲೋಅಪ್ ವರದಿ ಕೊಡಬೇಕಿತ್ತು. ಆ ವೇಳೆಗೆ ಶ್ರೀಕಂಠದತ್ತ ಒಡೆಯರ್ ಊರಿನಲ್ಲಿ ಇರಲಿಲ್ಲ. ಹೀಗಾಗಿ ಅವರ ಪತ್ನಿ ಪ್ರಮೋದಾದೇವಿಯವರನ್ನು ಫೋನ್‌ನಲ್ಲಿ ಮಾತಾಡಿಸಿ, ಖರ್ಗೆ ಹೇಳಿಕೆಗೆ ಪ್ರತಿಕ್ರಿಯೆ ಕೇಳಿದರು. ಆದರೆ ಪ್ರಮೋದಾ ದೇವಿಯವರಿಗೆ ಖರ್ಗೆ ಅವರಾಗಲಿ ಅಥವಾ ಅವರ ಹೇಳಿಕೆ ಬಗ್ಗೆಯಾಗಲಿ ಗೊತ್ತಿರಲಿಲ್ಲ. ಹೀಗಾಗಿ ಸಹಜವಾಗಿಯೇ, ‘ಖರ್ಗೆ ಯಾರು?’ ಎಂದು ಹೇಳಿದರು. ಮರುದಿನ ಪತ್ರಿಕೆಯಲ್ಲಿ ಮತ್ತೆ ವಿಷಯ ಬಿತ್ತರವಾಯಿತು. ಅದರ ಶೀರ್ಷಿಕೆ ಹೀಗಿತ್ತು: ‘ಶ್ರೀಕಂಠದತ್ತ ಒಡೆಯರ್‌ಗೆ ನೋಟಿಸ್ ಕೊಡಲು ಖರ್ಗೆ ಯಾರು?’
ಸದರಿ ಪತ್ರಕರ್ತರು ಬರೆದ ಖರ್ಗೆ ಮತ್ತು ಪ್ರಮೋದಾ ದೇವಿಯವರ ‘ಹೇಳಿಕೆ’ಗಳು ವಿವಾದ ಎಬ್ಬಿಸಿದವು. ರಾಜಧಾನಿ ಬೆಂಗಳೂರಲ್ಲೂ ಚರ್ಚೆ. ಶ್ರೀಕಂಠದತ್ತ ಒಡೆಯರ್‌ಗೂ ಸುದ್ದಿ ತಲುಪಿತು. ಖರ್ಗೆ ಬಗ್ಗೆ ಕೆಂಡಾಮಂಡಲರಾದರು. ತಮಗೆ ನೋಟಿಸ್ ಕೊಡುತ್ತೇನೆ ಎಂದು ಹೇಳಿದ್ದ (ವರದಿ ಪ್ರಕಾರ) ಖರ್ಗೆ ಅವರಿಗೇ ಲಾಯರ್ ಮೂಲಕ ನೋಟಿಸ್ ಕಳುಹಿಸಿದರು. ಮರುದಿನ ಅದೂ ಸುದ್ದಿಯಾಯಿತು. ‘ಖರ್ಗೆ ಅವರಿಗೇ ಶ್ರೀಕಂಠದತ್ತ ಒಡೆಯರ್ ನೋಟಿಸ್!’ ಖರ್ಗೆ ಅವರು ಶ್ರೀಕಂಠದತ್ತ ಒಡೆಯರ್ ಅವರನ್ನು ನೇರವಾಗಿ ಭೇಟಿ ಮಾಡಿ ತಾವು ನೋಟಿಸ್ ಬಗ್ಗೆ ಮಾತನಾಡಿಯೇ ಇಲ್ಲವೆಂದು ಹೇಳಿದ ಮೇಲಷ್ಟೇ ವಿವಾದ ತಣ್ಣಗಾಯಿತು. ಹೇಗಿದೆ ಧಾವಂತದ ಸುದ್ದಿಯ ಸಮಾಚಾರ!?
ಇನ್ನೊಮ್ಮೆ ಹೀಗಾಯಿತು. ಜನತಾ ದಳ ಸರಕಾರದ ಕಾಲ. ಗುರುಪಾದಪ್ಪ ನಾಗಮಾರಪಲ್ಲಿ ಅರಣ್ಯ ಸಚಿವರು. ವೀರಪ್ಪನ್ ಹಿಡಿಯಲು ಕರ್ನಾಟಕ ಮತ್ತು ತಮಿಳುನಾಡು ಪೊಲೀಸರು ಜಂಟಿ ಕಾರ್ಯಪಡೆ ರಚಿಸಿಕೊಂಡು, ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾರ್ಯಾಚರಣೆ ನಡೆಸುತ್ತಿದ್ದರು. ಕಾರ್ಯಪಡೆ ಕೇಂದ್ರ ಕಚೇರಿ ಚೆನ್ನೈನಲ್ಲಿತ್ತು. ವಾಲ್ಟರ್ ದಾವರಂ ಕಾರ್ಯಪಡೆ ಮುಖ್ಯಸ್ಥರಾಗಿದ್ದರು. ಆ ಸಂದರ್ಭದಲ್ಲಿ ಈಶಾನ್ಯ ರಾಜ್ಯಗಳಲ್ಲಿ ಉಗ್ರರ ಚಟುವಟಿಕೆ ದಮನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಅಂಥ ಕಾರ್ಯಾಚರಣೆಗಳಿಗೆ ಒಂದೊಂದು ಹೆಸರು. ಆಗ ಆಂಧ್ರದ ಪತ್ರಿಕೆಯೊಂದಕ್ಕೆ ಬೆಂಗಳೂರಿ ನಿಂದ ಸುದ್ದಿ ಕಳುಹಿಸುತ್ತಿದ್ದ ವರದಿಗಾರನಿಗೆ ಅದ್ಯಾರೋ, ವೀರಪ್ಪನ್ ವಿರುದ್ಧ ‘ಆಪರೇಷನ್ ಸ್ಯಾಂಡಲ್ ಫಾಕ್ಸ್’ (ಗಂಧದ ನರಿ ಕಾರ್ಯಾಚರಣೆ) ಎಂಬ ಕಾರ್ಯಾಚರಣೆಯನ್ನು ತಮಿಳುನಾಡು ಪೊಲೀಸರು ಆರಂಭಿಸಿದ್ದಾರೆ’ ಎಂದು ಕಿವಿ ತುಂಬಿದರು. ಸರಿ, ಮರುದಿನ ಆಂಧ್ರ ಪತ್ರಿಕೆಯಲ್ಲಿ ಅದು ಸುದ್ದಿಯಾಯಿತು. ಅದರ ಬೆನ್ನಲ್ಲೇ ಬೆಂಗಳೂರಿನಿಂದಲೂ ಕೆಲವು ಪತ್ರಿಕೆಗಳು ಈ ಸುದ್ದಿಯ ‘ಅಪ್ಪ-ಅಮ್ಮ’ ಯಾರೆಂದು ವಿಚಾರಿಸದೆ ಹಾಗೇ ಬರೆದವು. ಬೆಂಗಳೂರಿನಿಂದ ವರದಿ ಆಗುತ್ತಿದ್ದ ಈ ಸುದ್ದಿಗಳ ಬಗ್ಗೆ ಮೈಸೂರು ಮಾಧ್ಯಮದವರಿಗೆ ಕಿಂಚಿತ್ತೂ ಸುಳಿವು ಇರಲಿಲ್ಲ. ಇರಲೂ ಸಾಧ್ಯವೇ ಇರಲಿಲ್ಲ. ಏಕೆಂದರೆ ಬೆಂಗಳೂರಿನಿಂದ ಬರೆಯುತ್ತಿದ್ದವರಿಗೇ ಆ ಸುದ್ದಿಯ ಮೂಲ ಗೊತ್ತಿರಲಿಲ್ಲ.
ಅದೊಂದು ದಿನ ಸಚಿವ ಗುರುಪಾದಪ್ಪ ನಾಗಮಾರಪಲ್ಲಿ ಅವರ ಪತ್ರಿಕಾಗೋಷ್ಠಿ. ತಮಿಳುನಾಡು ಪೊಲೀಸರು ನಡೆಸುತ್ತಿರುವ ‘ಗಂಧದ ನರಿ ಕಾರ್ಯಾಚರಣೆ’ ಬಗ್ಗೆ ಪ್ರಶ್ನೆ ತೂರಿಬಂತು. ನಾಗಮಾರಪಲ್ಲಿ ಯವರಿಗೆ ಕಾರ್ಯಾಚರಣೆ ತಲೆಬುಡ ಗೊತ್ತಿರಲಿಲ್ಲ. ಆದರೆ ಸಚಿವರಾಗಿ ಗೊತ್ತಿಲ್ಲ ಎಂದು ಹೇಳುವಂತಿಲ್ಲ. ಹೀಗಾಗಿ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ಒಪ್ಪಿಕೊಂಡರು. ಶ್ರೀಲಂಕಾದಲ್ಲಿ ಎಲ್‌ಟಿಟಿಇ, ಅಸ್ಸಾಂನಲ್ಲಿ ಉಲ್ಫಾ ಹಾಗೂ ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆಗಳ ವಿರುದ್ಧ ನಡೆಯುತ್ತಿರುವ ಕಾರ್ಯಾ ಚರಣೆಗೆ ಹೋಲಿಸಿ ಗಂಧದ ನರಿ ಕಾರ್ಯಾಚರಣೆ ಬಗ್ಗೆ ಪತ್ರಿಕೆಗಳಲ್ಲಿ ಬರೆಯಲಾಯಿತು. ವಾಸ್ತವವಾಗಿ ಅಂಥದೊಂದು ಕಾರ್ಯಾಚರಣೆ ನಡೆಯಲೇ ಇಲ್ಲ.
ಹೌದು, ಸುದ್ದಿ ಬೇಟೆ ಧಾವಂತದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಸುದ್ದಿ ಮನೆಯಲ್ಲಿ ಇಂಥ ಅವಾಂತರಗಳು ಕಟ್ಟಿಟ್ಟ ಬುತ್ತಿ. ಆತುರಕ್ಕೆ ಸಂಯಮದ ಲೇಪ ಹಚ್ಚಿ, ‘ಥಿಂಕ್ ಅಂಡ್ ಆಕ್ಟ್’ ಪಾಲಿಸಿಗೆ ಕೊಂಚ ಮನಸ್ಸು ಒಗ್ಗಿಸಿದರೂ ಇಂಥ ಪ್ರಮಾದಗಳನ್ನು ತಪ್ಪಿಸಬಹುದು. ಮನಸ್ಸು ಮಾಡಬೇಕಷ್ಟೆ.
Suddi mane kathe, prasangagalu chennagive
Regards,
Naveen
¤ªÀÄä §gÀªÀtÂUÉ ±Éʰ CzÀÄãvÀ, ¤ÃªÀÅ ¥Àæ¸ÀÄÛvÀ ¥Àr¸ÀĪÀ ¥ÀæwAiÉÆAzÀÄ ¯ÉÃR£ÀUÀ¼À£ÀÆß ©qÀzÉà NzÀÄwÛzÉÝãÉ. ¸ÀĢݪÀÄ£É PÀvÉ, d£ÀUÀ¼À ªÀÄ£À, £ÀÆgÉAlÄ ªÀiÁvÀÄ, ªÀPÀævÀÄAqÉÆÃQÛ J®èªÀÇ CvÀåzÀÄãvÀ.
bahala chennagide