ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಕನ್ನಡಪ್ರಭಕ್ಕೆ ಹೊಸ ಲಾಂಛನಃನಿಮಗೇನನಿಸುತ್ತದೆ?

ನಿಮ್ಮ ನೆಚ್ಚಿನ ‘ಕನ್ನಡಪ್ರಭ’ ಮೊದಲಿಂದಲೂ ಹೊಸ ಮನ್ವಂತರಗಳ ಹರಿಕಾರ. ಪ್ರಯೋಗಶೀಲತೆಯ ಗುರಿಕಾರ. ಓದುಗರ ಜಗತ್ತನ್ನು ತನ್ನೊಡಲಲ್ಲಿ ಆಡಗಿಸಿಕೊಂಡು, ಕಾಲಕಾಲಕ್ಕೆ ಅವರ ಬೇಕು-ಬೇಡಗಳಿಗೆ ತಕ್ಕಂತೆ ತೆರೆದುಕೊಳ್ಳುವ ಗೆಣೆಕಾರ. ಅಂತಹ ಕನ್ನಡಪ್ರಭ ಈಗ ಹೊಸ ಸ್ವರೂಪದಲ್ಲಿ ನಿಮ್ಮ ಮುಂದೆ ಬರಲಿದೆ. ಅದಕ್ಕೆ ಮುನ್ನುಡಿಯಾಗಿ ಹೊಸ ಲಾಂಛನ (ಲೋಗೊ) ಇಂದಿನಿಂದ ಅನಾವರಣಗೊಳ್ಳುತ್ತಿದೆ. ನಿಮ್ಮ ಒಪ್ಪಿಗೆಯಲ್ಲಿ ನಮ್ಮ ಧನ್ಯತೆ ಆಡಗಿದೆ.

ಈ ಲಾಂಛನದ ಮೇರು ಅಕ್ಷರ ‘ಕ’ ಎಂಬುದು ಕನ್ನಡ, ಕನ್ನಡಿಗ, ಕರ್ನಾಟಕ ಹಾಗೂ ‘ಕನ್ನಡಪ್ರಭ’ ಪ್ರಾತಿನಿಧ್ಯದ ಸಂಕೇತ. ಇದರಲ್ಲಿ ಸಹೃದಯಿ ಓದುಗರಿದ್ದಾರೆ, ಅವರ ನೆಚ್ಚಿನ ಭಾಷೆಯಿದೆ, ಪ್ರದೇಶವಿದೆ. ಎಲ್ಲಕ್ಕಿಂತ ಮಿಗಿಲಾಗಿ ಓದುಗರು ನಾಲ್ಕೂವರೆ ದಶಕಗಳಿಂದ ಸ್ವೀಕರಿಸಿ, ಬೆಳೆಸಿ, ಪೋಷಿಸಿದ ‘ಕನ್ನಡಪ್ರಭ’ ಪತ್ರಿಕೆಯಿದೆ. ‘ಕ’ ಆವರಿಸಿಕೊಂಡಿರುವ ‘ವರ್ತುಲ’ ಸಂಕೇತದಲ್ಲಿ ಪತ್ರಿಕೆ ನಾಡು, ನುಡಿ ದಾಟಿ ಪ್ರಪಂಚದ ಮೂಲೆ ಮೂಲೆ ತಲುಪಿರುವ ವ್ಯಾಪ್ತಿಯಿದೆ. ಇದರಲ್ಲಿರುವ ಹಸಿರು, ಬಿಳಿ, ಕೇಸರಿ ಒಂದೆಡೆ ರಾಷ್ಟ್ರಧ್ವಜದ ಬಣ್ಣ ಪ್ರತಿನಿಧಿಸುತ್ತಿದ್ದರೆ, ಇನ್ನೊಂದೆಡೆ ಹಳದಿ, ಕೆಂಪು ಕನ್ನಡಧ್ವಜದ ವರ್ಣವನ್ನೂ ವರ್ಣಿಸುತ್ತದೆ. ದೇಶಭಕ್ತಿ ಮತ್ತು ಕನ್ನಡಾಭಿಮಾನದ ಜತೆಜತೆಯಲ್ಲೇ ನಾಡಿನ ಜನ ದೈವಪ್ರಜ್ಞೆಯನ್ನೂ ಮೆರೆಯುತ್ತಿರುವುದರ ಸಂಕೇತ ಆ ಮೂರು ಗೆರೆಗಳಲ್ಲಿ ಮೇಳೈಸಿದೆ.

ಈ ಲಾಂಛನದ ವ್ಯಾಖ್ಯೆ ಮತ್ತು ವರ್ಣನೆ ಪತ್ರಿಕೆಯ ಪರಿಧಿಯನ್ನು ಮೀರಿದ್ದು. ಅದೇ ರೀತಿ ಓದುಗರ ಕಲ್ಪನೆಗಳಿಗೆ ಅನುವು ಮಾಡಿಕೊಡುವ ಅಗಾಧತೆಯನ್ನೂ ಹೊಂದಿದೆ ಎಂಬುದು ನಮ್ಮ ನಂಬಿಕೆ. ಹೀಗಾಗಿ ಲಾಂಛನ ಕುರಿತು ನಿಮ್ಮೊಳಗೆ ಮೂಡುವ ವಿಚಾರವನ್ನು ಪತ್ರಿಕೆ ಹಾರ್ದಿಕವಾಗಿ ಸ್ವಾಗತಿಸುತ್ತದೆ. ಬನ್ನಿ, ಪತ್ರಿಕೆಯನ್ನು ನೀವೂ ಪ್ರತಿನಿಧಿಸಿ.

ಪತ್ರಿಕೆ ಆರಂಭದಿಂದಲೂ ದಿಟ್ಟ, ಸತ್ಯನಿಷ್ಠ, ನಿಷ್ಠುರ ಬರವಣಿಗೆಗಳಿಂದಲೇ ನಿಮ್ಮ ಮನೆ, ಮನ ಮುಟ್ಟಿದೆ. ಅದಕ್ಕೆ ಸಾಕ್ಷಿ ನೀವು ಪತ್ರಿಕೆಯನ್ನು ಈ ಎತ್ತರಕ್ಕೆ ಬೆಳೆಸಿರುವುದು. ಓದುಗರ ಅಭಿರುಚಿ, ಆಶಯಗಳಿಗೆ ತಕ್ಕಂತೆ ಪರಿವರ್ತನೆ ಮಾಡಿಕೊಂಡು ಬಂದಿರುವ, ಆ ಪರಿವರ್ತನೆಯಲ್ಲಿ ಓದುಗರ ತೃಪ್ತಿಯನ್ನು ಅರಸುತ್ತಿರುವ ಪತ್ರಿಕೆ ಇನ್ನು ಮುಂದೆ ಮತ್ತಷ್ಟು ಬದಲಾವಣೆಗಳೊಂದಿಗೆ ನಿಮ್ಮ ಎದುರು ಬರಲಿದೆ. ಕೇಳುವ ಮೊದಲೇ ಓದುಗರ ಮನದಿಂಗಿತಕ್ಕೆ ಸ್ಪಂದಿಸುವ ತವಕ ಪತ್ರಿಕೆಯದು. ಈಗಾಗಲೇ ನಿಮ್ಮ ಹೃದಯದಲ್ಲಿ ‘ಕನ್ನಡಪ್ರಭ’ಕ್ಕೆ ಒಂದು ಭದ್ರವಾದ ಸ್ಥಾನವನ್ನು ಕೊಟ್ಟಿದ್ದೀರಿ. ಅದನ್ನು ಮತ್ತಷ್ಟು ಜತನದಿಂದ ಕಾಪಿಟ್ಟುಕೊಳ್ಳಿ ಎಂಬುದಷ್ಟೇ ನಮ್ಮ ವಿನಮ್ರ ಕೋರಿಕೆ. ನಿಮ್ಮ ಬಯಕೆಯ ಶಿಖರ ಎಷ್ಟೇ ಎತ್ತರ ಇರಲಿ, ಅದನ್ನು ಏರುತ್ತೇವೆ ಎಂಬುದು ನಮ್ಮ ಭರವಸೆ.

-ವಿಶ್ವೇಶ್ವರ ಭಟ್
ಪ್ರಧಾನ ಸಂಪಾದಕ

26 Comments

 1. Dear Sir,

  Congratulations for coming up with the new look for Kannada Prabha. I genuinely feel that Kannada Prabha has been reporting the interesting things happening across the globe without any biased on anything. In the last 2 years the news papers has really taken a new U turn and been favorite for the readers. I actually read news paper in a nearest library near home, trust me getting Kannada Prabha to read is like a lucky dip. People are so interested to read from first to last page.

  I heartly congratulation Vishweshar Bhat and Pratap Simha for making this happen.

  Warm Regards
  Anil Chalageri
  9845254156

 2. ಕನ್ನಡ ಪ್ರಭದ ಹೊಸ ಲಾಂಛನ
  ಕೇಸರಿ, ಬಿಳಿ,ಹಸಿರಿಂದ ಕಂಗೊಳಿಸುತ್ತ
  ಅರಿಶಿನ ಕುಂಕುಮ ದ ತಿಲಕ ಹಣೆಗೆ ಇಟ್ಟ ಹಾಗೆ ತುಂಬಾ ಸುಂದರವಾಗಿದೆ ..

 3. The real reason is that now Kannada Prabha is not part of the historic Express Publications group but of Eminent person Rajeev Chandrashekahr;s Jupiter media group. There is no harm in telling this. This is the real fact. Saying ಈ ಲಾಂಛನದ ವ್ಯಾಖ್ಯೆ ಮತ್ತು ವರ್ಣನೆ ಪತ್ರಿಕೆಯ ಪರಿಧಿಯನ್ನು ಮೀರಿದ್ದು all is secondary!!

 4. super b…………

 5. This is really Good one… But the Old one was too good..of course we need to move with New Stlye, new challenges. When you print the new Logo, please use Dark coulours else it will not appeal… Hope you will consider this. All the Best to you and Team…

  Thanks,
  Lohith

 6. No doubt sir. Its fantastick. Niw ene madidru chenagiratte sir.

 7. Not impressive, Could have been more simple. One first look i felt some advertise for the day. Odd color combinations.

 8. Sir..
  Conceptually its not strong enough.
  If you remove the colors there is nothing much to read in it.

 9. ಕನ್ನಡ ಪತ್ರಿಕೋದ್ಯಮಕ್ಕೆ ಒಂದು ಹೊಸ ಆಯಾಮ ಕೂಟ್ಟ ಕೀರ್ತಿ ನಿಮ್ಮಗೆ ಸಲ್ಲುತದ್ದೆ, ನಿಮ್ಮ ಸೃಜನಶೀಲತೆಯಂತು ಅಭಿನಂದನ ಅರ್ಹವಾದದ್ದು.ಹೊಸ ಲಾಂಛನ ಲೇಖನ ಲೋಕದ ಪರಿಪೂರ್ಣತೆಯ ಸಂಕೇತವಾಗಿದೆ ಹೊಸತನದ ನವ ದಾರಿಗೆ ಸೋಪನವಾಗಲಿ
  ಮಂಜುನಾಥ್
  9845102099

 10. wonderful logo sir

  aws well as the presentation of newspaper and channel 🙂

 11. ಇಗ ಇದೆಲ್ಲ ಬೇಕಿತ್ತ ಭಟ್ರೇ …!?

  ಇಷ್ಟು ದಿನ ಆದರೂ ಕೂಡ ನಿಮ್ಮ ಕನ್ನಡ ಪ್ರಭ ಪೇಪರ್ ಲಾಂಛನ ಏನು ಅಂತ ನಾನು ನೋಡೇ ಇಲ್ಲ….ನಿಮ್ದಷ್ಟೇ ಅಲ್ಲ , ಬೇರೆ ಪೇಪರ್ದು ಕೂಡ ಸರಿಯಾಗಿ ಗಮನಿಸಿಲ್ಲ …..ಇದು ಎಲ್ಲ ಓದುಗರ ಅಭಿಪ್ರಾಯ ಕೂಡ ಅಂತ ಅನ್ಕೊತಿನಿ…..ಸೊ, ನಿಮಗೆ & ನಿಮ್ಮ ಮಾಲಿಕರಿಗೆ ಹೆಂಗೆ ಸರಿ ಅನ್ಸುತ್ತೋ ಹಂಗೆ ಇಟ್ಕೋರಿ….ಆದ್ಹ್ರೆ, ಪ್ರಾಮಾಣಿಕವಾಗಿ & ಚೆನ್ನಾಗಿ ಬರಹಗಳನ್ನು & ಸುದ್ಧಿಗಳನ್ನು ಪ್ರಕಟಿಸಿ…..ಅಷ್ಟೇ…..!!!!!

  • Hi Nagaraj,

   Khandita beku nagaraj!!! ಕನ್ನಡ ಪ್ರಭ ಪೇಪರ್ ಲಾಂಛನ ಏನು ಅಂತ ನಾನು ನೋಡೇ ಇಲ್ಲ anta heltiddiralla….. innen nodidri? khandita elru hage madiralla…….. hosa hosa anveshanegalu nadedagle…. navu tilkolde irodu tilkoloke sadhya. adrartha idrinda tilkotivi antalla……… e tharahada anekaneka badalavane agale bekaddide… adakke nandi idyakagirbardu…..? Positive nature tumba olledu nagaraj!!!! alvaaa?……:-)

   Thanks,
   Vidya bhat
   vidyabhatanu@gmail.com

   • Tumba chanagide gurugale.nive ondu hosa jagattu.
    Nive badalayisutirendare navu badalaguteve. Edu badalavaneya samaya
    jagattu badalagutide navu badalagon.

   • ಅಮ್ಮಾ ವಿದ್ಯಾಭಟ್ರೇ .. ನೀವು ಮಾಡುತ್ತಿರುವ ೂಟಕ್ಕೆ, ತಂದೆ, ತಾಯಿ ಪ್ರೀತಿಗೆ ಲೋಗೋ ಇದೆಯಾ? ಕನ್ನಡ ಪ್ರಭವನ್ನು ಇಷ್ಟು ದಿನ ಅಪ್ಪಿಕೊಂಡವರೂ ಇದೇ ರೀತಿಯ ಬಾಂಧವ್ಯ ಹೊಂದಿದ್ದಾರೆ. ನನಗೂ ಸೇರಿ ಅವರಿಗೆ ಇಂತಹ ಲೋಗೋಗಳು ಅಗತ್ಯವೇ ಇಲ್ಲ. ಲೋಗೋನಲ್ಲಿ ಮಣ್ಣೂ ಇಲ್ಲ. ನೀವು ಬಿಟ್ರೆ ಪಾಸಿಟಿವ್ ಆಗಿ ಥಿಂಕ್ ಮಾಡಬೇಕು. ತಂದೆ ತಾಯಿ ಪ್ರೀತಿಗೂ ಲೋಗೋ ಇರೋದು ಒಳ್ಳೆಯದು ಅಂತ ವಾದ ಮಂಡಿಸುವ ಹಾಗಿದೆ.

    ಖಂಡಿತ ಬೇಡ ವಿದ್ಯಾ ಭ್ರಟ್ರೇ……. ಪ್ಲೀಜ್.

  • ಚೆನ್ನಾಗೇಳಿದ್ರಿ….. ಲೋಗೋಗೆ ಅಕ್ಷರ ವಣ೵ನೆ ಇದೆ ಅಷ್ಟೇ. ಪ್ರತಿಯೊಂದು ಬಣ್ಣಕ್ಕೂ ಪ್ರಪಂಚವನ್ನೇ ಮೀರುವ ಅಥ೵ ನೀಡಬಹುದು. ಈ ಲೋಗೋನಲ್ಲಿ ಹೆಚ್ಚು ಅಥ೵ ನೀಡಲು ಹೆಚ್ಚು ಬಣ್ಣ ಬಳಸಲಾಗಿದೆ. ಗ್ರಾಫಿಕ್ ಡಿಸೈನರ್ ಗೆ ಕ್ರೆಡಿಟ್. ಕಾನ್ಸೆಪ್ಟ್ ಏನೂ ಇಲ್ವೇ ಇಲ್ಲ.

 12. Dear sir,

  Taavu Eega neediruva logo chennaagiyE ide. Haage sumne nannadondu salahe. “Ka” akshrada hinneleyalli vishwada nekshe(globe) idre hege? Adara arth- kannada bhashe vishwadelledegoo habbikondide.
  Tamage idu ishtavaagabahudu endu bhaavisuttEne.

  Dhanyavaadagalondige,

  Gayatri

 13. ವಿಶ್ವೇಶ್ವರ ಭಟ್ ಅವರೊಂದು ಪತ್ರಿಕೆಗೇ ಹೊಸ ಲಾಂಚನ.ಅವಿರಿದ್ದಲ್ಲಿ ಓದುಗರೇ ಹೆಚ್ಚು-ವಿ.ಕೆ.ವಾಲ್ಪಾಡಿ

 14. very nice !!!!

  • ಚಿ ಸುಮ್ನೆ ಇರ್ರಿಪ್ಪಾ. ವೆರಿ ನೈಸ್ ಅಂತೆ. ಏನ್ರಿ ಹೇಳಿದ್ರು ಅವರು ಅಂತದ್ದು. ವೆರಿ ನೈಸ್ ಅಂತ ಹಲ್ಲು ಗಿಂಜೋಕೆ. ನಾಗರಾಜ್ ಅವರಿಗೆ ಟಾಂಗ್ ನೀಡಿದ್ದಕ್ಕೆ ಹಲ್ಲು ಗಿಂಜುತ್ತೀರಾ? ಇದೇನಾ ಪಾಸಿಟಿವ್ ನೆಸ್?????????

 15. simple yet intense

 16. “ಕನ್ನಡಪ್ರಭ” ಶುರುವಾದ ದಿನಗಳಲ್ಲಿ ಹಿಂದೆ ಕೇಳಿರದ ಈ ಹೊಸ ಹೆಸರು ವಿಚಿತ್ರ ಅನಿಸಿತ್ತು.
  “ಕನ್ನಡಪ್ರಭಾ” ಅಂತ ಯಾಕೆ ಇಡಲಿಲ್ಲ?
  ತೆಲುಗಿನ “ಆಂಧ್ರಪ್ರಭ”ದಿಂದ ಎರವಲು ಪಡೆದುಕೊಂಡ ಹಾಗೆ ಯಾಕೆ ಈ “ಕನ್ನಡಪ್ರಭ”?
  ಉದಾಹರಣೆಗೆ, “ಅಥವಾ” ಅನ್ನುವ ಬದಲು “ಅಥವ” ಅಂದರೆ ಹೇಗಿರುತ್ತದೆ?
  “ಕನ್ನಡಪ್ರಭಾ” ಅಂದರೆ ಸಂಸ್ಕೃತ ಅನ್ನಿಸಿತೋ ಹೇಗೆ? ಅದಕ್ಕೇ ಹೀಗೆ “ಕನ್ನಡಪ್ರಭ” ಅಂತ ಮಾಡಿದರೋ ಹೇಗೆ?
  ಹಾಗೇನಾದರೂ ಇದ್ದಲ್ಲಿ “ಕನ್ನಡಪ್ರಭೆ” ಅಂತಾದರೂ ಹೆಸರಿಸಬಹುದಿತ್ತಲ್ಲ?
  ಬೇಕಿರದ ಈ ಅಕಾರಾಂತದ ಇರಿಸುಮುರಿಸು ನನಗೆ ಇಂದು ಕೂಡಾ ಉಳಿದಿದೆ!!

 17. ಮರೆತ ಮಾತು
  ನನ್ನ ವರ್ತುಳದಲ್ಲಿ ಇಂದಿಗೂ ನಾವು ಹೇಳುವಾಗಲೆಲ್ಲ “ಕನ್ನಡಪ್ರಭಾ” ಅಂತಲೇ ಹೇಳುತ್ತೇವೆ!!!

 18. ಕನ್ನಡಪ್ರಭದ ಲಾಂಛನ ಉತ್ತಮವಾಗಿದೆ.. ತಿರಸ್ಕರಿಸಲು ಯಾವುದೇ ಅಂಶವೂ ಕಾಣುತ್ತಿಲ್ಲ.. ನೋಡಿದ ಕೂಡಲೇ ಮೆಚ್ಚುಗೆಯಾಗುವಂತಿದೆ..

 19. ಲಾಂಚನ ಶಿವ ಗೋವಿಂದ ಗಣಪ ಎಲ್ಲರ ಸಮಾಗಮ ಅದ ಹಾಗಿದೆ ತುಂಬ ಚೆನ್ನಾಗಿ ಮೂ ಡಿ ಬಂದಿದೆ.

 20. One of the best tools to determine whether your niche of
  choice is profitable or not is by doing keyword research.
  The internet presents a sea of opportunity, all available to you through your internet
  connection. You only need to join as a seller and
  products to sell.

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.