ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಯಾರೂ ನಿಕೃಷ್ಟರಲ್ಲ

ಪ್ರತಿದಿನ ನಾನು ಕನಿಷ್ಠ ಇಪ್ಪತ್ತು ಮಂದಿಯ ನ್ನಾದರೂ ಭೇಟಿ ಮಾಡುತ್ತೇನೆ. ಈ ಪೈಕಿ ಏಳೆಂಟು ಮಂದಿ ಹೊಸಬರು. ಅಂದರೆ ಅದಕ್ಕಿಂತ ಮೊದಲು ಭೇಟಿ ಮಾಡಿದವರಲ್ಲ. ಪ್ರತಿಯೊಬ್ಬರೂ ನನ್ನಲ್ಲಿ ಹೊಸ ಹೊಸ ವಿಚಾರ ಗಳನ್ನು ಹೇಳುತ್ತಾರೆ. ತಮ್ಮ ಅಪರೂಪದ ಅನುಭವಗಳನ್ನು ಹಂಚಿಕೊಳ್ಳು ತ್ತಾರೆ. ಪ್ರತಿಯೊಬ್ಬರೂ ಒಂದಿಲ್ಲೊಂದು ವಿಧದಲ್ಲಿ ಪರಿಣತರು, ನುರಿತವರು. ಅವರೆಲ್ಲರಿಗೂ ಹೇಳಲು ಒಂದು ಕತೆ, ಪ್ರಸಂಗ, ಅನುಭವವಿರುತ್ತದೆ. ಎಲ್ಲರೂ ಒಂದು ಹೊಸ ಸಂಗತಿಯನ್ನು ಹೇಳುತ್ತಾರೆ.

ಅಂದರೆ ಪ್ರತಿಯೊಬ್ಬರ ಭೇಟಿಯಿಂದಲೂ ಒಂದಷ್ಟು ಹೊಸ ಸಂಗತಿಗಳನ್ನು ತಿಳಿಯಬಹುದು. ಕಲಿಯಬಹುದು. ಅವರು ಎಷ್ಟೇ ಬೋರ್ ಹೊಡೆಸುವ, ಮಾತಿನಲ್ಲಿ ಕೊರೆಯುವ ವ್ಯಕ್ತಿಯಾಗಿರ ಬಹುದು. ಅಂಥವರ ಭೇಟಿ ಸಹ ನಮಗೊಂದು ಪಾಠವಾಗಬಹುದು. ಯಾರೂ ಸಹ ನಿಕೃಷ್ಟರಲ್ಲ. ಕೆಟ್ಟು ನಿಂತ ಗಡಿಯಾರ ಸಹ ದಿನದಲ್ಲಿ ಎರಡು ಸಲ ಸರಿಯಾದ ಸಮಯ ತೋರಿಸುತ್ತದೆ ಅಂತಾರಲ್ಲ, ಹಾಗೆ ನಾವು ಯಾರನ್ನು ನಿಷ್ಪ್ರಯೋಜಕರು ಎಂದು ತೀರ್ಮಾನಿಸಿ ರುತ್ತೇವಲ್ಲ ಅಂಥವರು ಸಹ ನಮಗೆ ಗೊತ್ತಿಲ್ಲದ ಒಂದು ಹೊಸ ವಿಷಯ ಹೇಳಿ ಹೋಗುತ್ತಾರೆ. ಜನರನ್ನು ಭೇಟಿ ಮಾಡುವುದರಲ್ಲಿರುವ ಅದ್ಭುತ ಅನುಭವ ಇನ್ನೊಂದಿಲ್ಲ.

ಹೀಗಾಗಿ ಯಾರೇ ಆಗಲಿ. ನಿಮ್ಮ ಭೇಟಿಗೆ ಅಪೇಕ್ಷಿಸಿದರೆ, ಇಲ್ಲ ಎನ್ನಬಾರದು. ಅವರು ಬಂದ ಉದ್ದೇಶ, ಮಾತುಕತೆ ವಿಷಯವನ್ನು ಆಧರಿಸಿ ನೀವು ಅವರೊಂದಿಗೆ ಎಷ್ಟು ಹೊತ್ತು ಕಳೆಯಬಹುದೆಂಬು ದನ್ನು ನಿರ್ಧರಿಸಬಹುದು. ಕೆಲವರಿಗೆ ಜನರನ್ನು ಭೇಟಿ ಮಾಡುವು ದೆಂದರೆ ಅಲರ್ಜಿ. ಬಂದವರು ಏನೋ ಕಿತ್ತುಕೊಂಡು ಹೋಗಬಹುದು ಎಂಬಂತೆ ವರ್ತಿಸುತ್ತಾರೆ. ಯಾರೂ ಸುಮ್ಮನೆ ಬರೋಲ್ಲ, ಅವರಿ ಗೇನೋ ಕೆಲಸ ಮಾಡಿಸಿಕೊಳ್ಳಲು ಬರುತ್ತಾರೆ ಎಂದೆಲ್ಲ ಭಾವಿಸುತ್ತಾರೆ. ಇದು ತಪ್ಪು.

ಆ ರೀತಿ ಯಾರೂ ಬರುವುದಿಲ್ಲ ಎಂದು ನಾನು ಹೇಳುವುದಿಲ್ಲ. ಆದರೆ ಅಂಥವರ ಸಂಖ್ಯೆ ಬಹಳ ಕಡಿಮೆ. ‘ಯಾರೂ ನಮ್ಮಿಂದ ಕಿತ್ತುಕೊಳ್ಳಲು ಬರುವುದಿಲ್ಲ. ನಮಗೇ ಕೊಡಲು ಬರುತ್ತಾರೆ’ ಎಂದು ಭಾವಿಸಿದರೆ, ಪ್ರತಿಯೊಬ್ಬರ ಭೇಟಿಯೂ ಒಂದು ಕಲಿಕೆಯ ಅನುಭವವನ್ನು ಕೊಡುತ್ತದೆ.

ಯಾವುದೇ ಕಚೇರಿಯಿರಬಹುದು, ರಾಜಕೀಯ ಪಕ್ಷವಿರಬಹುದು, ಕಾರ್ಖಾನೆಯಿರಬಹುದು. ಅಲ್ಲಿ ಎಲ್ಲರೂ ಮಹಾಬುದ್ಧಿವಂತರೇ ಇರುತ್ತಾರೆಂದು ಭಾವಿಸಬೇಕಿಲ್ಲ. ಕೆಲವರು ದಡ್ಡರಿರಬಹುದು. ಆದರೆ ಅವರು ನಿಕೃಷ್ಟರಲ್ಲ. ನಿಷ್ಪ್ರಯೋಜಕರಲ್ಲ. ನಾವು ಯಾರನ್ನು ದಡ್ಡ ಎಂದು ಭಾವಿಸಿರುತ್ತೇವಲ್ಲ ಆತ ಇನ್ಯಾವುದೋ ಕಲೆಯಲ್ಲಿ ಪರಿಣತನಿರುತ್ತಾನೆ. ಆತನಿಗೂ ನಿಮಗೆ ಗೊತ್ತಿಲ್ಲದ ಒಂದು ವಿದ್ಯೆ ಗೊತ್ತಿರುತ್ತದೆ. ಅವನಿಂದ ಆ ಕೆಲಸ ಮಾಡಿಸಿಕೊಳ್ಳುವುದು ಜಾಣತನ. ಅವನಿಗೆ ಗೊತ್ತಿರುವ ವಿದ್ಯೆಯನ್ನು ಮಾಡಲು ಹಚ್ಚಿದರೆ, ಅದನ್ನು ಅವನು ಲವಲವಿಕೆಯಿಂದ ಮಾಡಿಯಾನು. ಅಲ್ಲದೇ ಆ ಕೆಲಸದಿಂದ ಅವನು ಮುಂದೆ ಬರಬಹುದು.

1 Comment

  1. Bangalore ge bandaaga Nimmannu meet maadbeku antha target itkondeeni…….Sir…..

    Enanteera?………

    Regards,
    Naveen
    Doha (Qatar)

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.