ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ನಾವು ಪ್ರತಿದಿನವೂ ಒಳ್ಳೆಯರಾಗಬೇಕು

ಈ ರೂಲ್‌ಇದೆಯಲ್ಲಾ, ಇದನ್ನು ಅನುಸರಿಸುವುದು ಬಹಳ ಕಷ್ಟ. ಯಾಕೆಂದರೆ ಈ ನಿಯಮವನ್ನು ಒಂದೂ ದಿನ ಸಡಿಲಿಸುವಂತಿಲ್ಲ. ಪ್ರತಿದಿನವೂ ಕಠಿಣ ವ್ರತದಂತೆ, ಶಪಥದಂತೆ, ಪ್ರೀತಿಯಂತೆ. ಶಾಸನದಂತೆ ಆಚರಿಸಬೇಕು. ಒಂದು ದಿನ ಪಾಲಿಸದಿದ್ದರೂ ಗ್ರಹಚಾರ ತಪ್ಪಿದ್ದಲ್ಲ. ಒಂದು ದಿನ ಉಲ್ಲಂಘಿಸಿದರೂ ಜೀವನವಿಡೀ ಜನರ ಟೀಕೆಗೆ, ನಿಂದನೆಗೆ ಗುರಿಯಾಗಬೇಕು.

ಉದಾಹರಣೆಗೆ ನಿಮ್ಮ ಹೆಂಡತಿಯಿರಬಹುದು, ಮಕ್ಕಳಿರಬಹುದು ಅದರ ಜತೆ ಎಂದಿಗೂ ಸುಳ್ಳು ಹೇಳುವಂತಿಲ್ಲ. ಮೋಸ ಮಾಡುವಂತಿಲ್ಲ. ಈ ನಿಯಮವನ್ನು ಒಂದು ದಿನದ ಮಟ್ಟಿಗೆ ಮುರಿದಿರಿ ಎನ್ನಿ. ಅವರು ನಿಮ್ಮನ್ನು ಜೀವನವಿಡೀ ನಂಬುವುದಿಲ್ಲ. ಸದಾ ಸಂದೇಹದಿಂದಲೇ ನೋಡುತ್ತಾರೆ. ನಿಮ್ಮ ಪ್ರತಿ ನಡೆ-ನುಡಯನ್ನು ಅನುಮಾನದಿಂದಲೇ ಗಮನಿಸುತ್ತಾರೆ. ಅಂದು ಮೋಸ ಮಾಡಿದವ, ಸುಳ್ಳು ಹೇಳಿದವ ಇಂದೂ ಹೇಳುವುದಿಲ್ಲ ಎನ್ನೋದಕ್ಕೆ ಏನು ಗ್ಯಾರಂಟಿ ಎಂದು ಗುಮಾನಿಯನ್ನು ವ್ಯಕ್ತಪಡಿಸುತ್ತಾರೆ. ಜೀವನದ ಕೊನೆಯ ಉಸಿರು ಇರುವ ತನಕ ನೀವು ಪಕ್ಕಾ ನಿಷ್ಠಾವಂತರಾಗಿದ್ದರೂ, ಆ ಒಂದು ದಿನದಂದು ನೀವು ಹೇಳಿದ ಸುಳ್ಳು, ಮಾಡಿದ ಮೋಸ ಅವರ ಮನಸ್ಸಿನಲ್ಲಿ ಕೊನೆತನಕ ಅಚ್ಚಳಿಯದೇ ಉಳಿದುಬಿಡುತ್ತದೆ. ಎಷ್ಟೇ ಪ್ರಯತ್ನಿಸಿದರೂ ಅದನ್ನು ಮನಸ್ಸಿನಿಂದ ತೆಗೆದು ಹಾಕಲು ಸಾಧ್ಯವಿಲ್ಲ.

ಆದ್ದರಿಂದ ನಾವು ಒಳ್ಳೆಯರಾಗಿ ಇರುವುದೆಂದರೆ ಕೇವಲ ಇಂದು, ನಾಳೆ, ನಾಡಿದ್ದು, ಒಂದು ವರ್ಷ, ಐದು ವರ್ಷ… ಒಳ್ಳೆಯವರಾಗಿ ಇರುವುದಲ್ಲ. ಸಾಯುವ ತನಕವೂ ಒಳ್ಳೆಯವರಾಗಿ ಇರುವುದು. ಒಂದು ಸಲ ಯೋಚಿಸಿ, ಇದೆಷ್ಟು ಕಠಿಣ ನಿಯಮ ಎಂದು. ಕಚೇರಿಯಲ್ಲಿ, ಸ್ನೇಹಿತರ ಬಳಗದಲ್ಲಿ, ಸಮಾಜದಲ್ಲಿ ನಾವು ನಿರಂತರ ಪಾಲಿಸುತ್ತಲೇ ಇರಬೇಕಾದ, ಸ್ವಲ್ಪವೂ ರಿಯಾಯಿತಿ ಇಲ್ಲದ, ನಿಯಮವಿದು. ಯಾವುದೋ ಕ್ಷುಲ್ಲಕ ಕಾರಣಕ್ಕೆ ಇರಬಹುದು, ನಿಮ್ಮ ಆತ್ಮೀಯ ಸ್ನೇಹಿತನಿಗೆ ಜೋರಾಗಿ ಮಾತಾಡಿದಿರಿ ಎನ್ನಿ. ಆತನಿಗೆ ನಿಮ್ಮ ಬಗ್ಗೆ ಗೌರವ ತುಸು ಕಮ್ಮಿಯಾಗಬಹುದು. ನಿಮ್ಮ ಈ ಸಣ್ಣ ನಡೆ ನಿಮ್ಮ ವ್ಯಕ್ತಿತ್ವಕ್ಕೇ ಕಪ್ಪು ಚುಕ್ಕೆಯಾಗಬಹುದು. ಅದು ಶಾಶ್ವತ ಕಪ್ಪು ಚುಕ್ಕೆಯಾಗಿಯೇ ಉಳಿಯಬಹುದು.

ನನಗೆ ಇಲ್ಲಿ ಒಬ್ಬ ಫುಟ್ಬಾಲ್ ಗೋಲ್ ಕೀಪರ್ ಹೇಳಿದ ಮಾತು ನೆನಪಾಗುತ್ತದೆ- ‘ಸದಾ ಒಳ್ಳೆಯ ವ್ಯಕ್ತಿಯಾಗಿರುವು ದೆಂದರೆ ಗೋಲ್‌ಕೀಪರ್ ಇದ್ದಂತೆ. ಫುಟ್ಬಾಲ್ ಆಟದಲ್ಲಿ ನೀವು ಅವೆಷ್ಟೇ ಸಲ ಗೋಲ್ ಆಗದಂತೆ ಬಾಲ್‌ನ್ನು ತಡೆದಿರಬಹುದು. ಆದರೆ ಜನ ನೆನಪಿಟ್ಟುಕೊಳ್ಳುವುದು ನೀವು ಬಾಲ್ ತಡೆಯದೇ ಗೋಲ್‌ಗೆ ಕಾರಣವಾಗಿದ್ದನ್ನು ಮಾತ್ರ’ ಎಂಥಾ ಮಾತು!

2 Comments

  1. Hi,
    This is really true, its hard sometime, but if u decide that i wont lie to anybody in my life, we can meet this goal,
    the goalkeeper saying was truly practical and good.

    thanks,
    Murali

  2. Paripurna lekhana……chennagide Sir…….

    .
    Rgards,
    Naveen
    Doha (Qatar).

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.