ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಜನರನ್ನು ಅರ್ಥ ಮಾಡಿಕೊಳ್ಳಿ

ನನಗಂತೂ ಇದು ನಿರಂತರ ಪಾಠ. ಪ್ರಾಯಶಃ ನಾನೇನಾದರೂ ಇನ್ನೂರು ವರ್ಷಗಳು ಬದುಕಿದ್ದರೆ, ಕೊನೆಯ ದಿನದ ತನಕವೂ ಈ ಮಾತನ್ನು ನಾನು ಒಂದು ನಿಯಮ ಎಂಬಂತೆ ಪಾಲಿಸುತ್ತೇನೆ. ಪ್ರತಿದಿನವೂ ಕಲಿಯುವ ಪಾಠವಿದು. ನಮ್ಮ ತಂದೆ, ತಾಯಿ, ಹೆಂಡತಿ, ಮಕ್ಕಳು, ಅಣ್ಣ, ತಮ್ಮ, ಅಕ್ಕ, ತಂಗಿ, ಬಾಸ್, ಡ್ರೈವರ್, ಮನೆ ಕೆಲಸದಾಕೆ… ಹೀಗೆ ಯಾರೇ ಇರಲಿ, ಅವರೆಲ್ಲರನ್ನೂ ದಿನವೂ ಭೇಟಿ ಮಾಡುತ್ತೇವೆ. ಅವರೊಂದಿಗೆ ಸದಾ ವ್ಯವಹರಿಸುತ್ತೇವೆ. ಆದರೂ ಅವರನ್ನು ಕ್ಷಣಕ್ಷಣವೂ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಯಾರೂ ಸಹ ಸಂಪೂರ್ಣ ಅರ್ಥವಾಗಿದ್ದಾರೆ ಎಂದೇನಿಲ್ಲ. ಬಹಳ ವರ್ಷಗಳ ಸ್ನೇಹಿತರು ನಮ್ಮ ಒಂದು ಸಣ್ಣ ನಡೆ, ಮಾತಿನಿಂದಾಗಿ ಮುನಿಸಿಕೊಂಡು ಮಾತು ಬಿಡಬಹುದು, ಸಂಬಂಧವನ್ನೇ ಕಡಿದುಕೊಳ್ಳಬಹುದು.

ಗಮನಾರ್ಹವಾದ ಸಂಗತಿಯೇನೆಂದರೆ ಅವರು ಯಾರೇ ಇರಬಹುದು. ಎಲ್ಲರೂ ಯಾವತ್ತೂ ಒಂದೇ ರೀತಿಯಲ್ಲಿ ವರ್ತಿಸುವುದಿಲ್ಲ. ಸಮಯ, ಸಂದರ್ಭ, ಸನ್ನಿವೇಶ, ಪ್ರಸಂಗ, ಸ್ಥಳ, ಅನುಕೂಲ ನೋಡಿಕೊಂಡು ಜನ ಭಿನ್ನವಾಗಿ ವರ್ತಿಸುತ್ತಾರೆ. ಅದಕ್ಕೆ ತಕ್ಕ ಹಾಗೆ ನಾವೂ ವರ್ತಿಸಬೇಕಾಗುತ್ತದೆ. ಅವರೆಷ್ಟೇ ನಮಗೆ ಆತ್ಮೀಯ ಅಥವಾ ಹತ್ತಿರದ ಗೆಳೆಯರಾಗಿರಬಹುದು, ನಾವು ಸದಾ ಅವರ ಹೆಗಲ ಮೇಲೆ ಕೈ ಹಾಕಲು ಆಗುವುದಿಲ್ಲ. ಏಕವಚನದಲ್ಲಿ ಸಂಬೋಧಿಸಲು ಆಗುವುದಿಲ್ಲ. ನಿಮ್ಮ ಹೆಂಡತಿ ಮಂತ್ರಿಯೋ, ಮುಖ್ಯಮಂತ್ರಿಯೋ ಆಗಿರಬಹುದು, ಹಾಗೆಂದು ವೇದಿಕೆ ಮೇಲೆ ಕುಳಿತಾಗ ಅವಳನ್ನೂ ಅವಳ ಸ್ಥಾನಮಾನಕ್ಕೆ ತಕ್ಕ ಹಾಗೆ, ಬಹುವಚನದಿಂದಲೇ ಸಂಬೋಧಿಸಬೇಕಾಗುತ್ತದೆ. ಮನೆಯಲ್ಲಿ ನಿಮ್ಮ ಪತ್ನಿಯಿರಬಹುದು. (ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರ ಪತಿಯ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಿ).

ಜನರನ್ನು ಅರ್ಥಮಾಡಿಕೊಳ್ಳುವುದೆಂದರೆ ಬೇರೇನೂ ಅಲ್ಲ, ನಮ್ಮನ್ನು ಅರ್ಥ ಮಾಡಿಕೊಳ್ಳುವುದೇ ಆಗಿದೆ. ನಮಗೆ ಇನ್ನಷ್ಟು ಶಾಸನ ರೂಪಿಸಿಕೊಳ್ಳುವುದೇ ಆಗಿದೆ. ನಮ್ಮ ವ್ಯಕ್ತಿತ್ವವನ್ನು ಸುಧಾರಿಸಿಕೊಳ್ಳುವುದೇ ಆಗಿದೆ. ಇದರಿಂದ ನಾವು ದಿನಾದಿನ ಗಟ್ಟಿಯಾಗುತ್ತೇವೆ, ಪ್ರಬುದ್ಧರಾಗುತ್ತೇವೆ. ಎಂಥ ಪ್ರಸಂಗದಲ್ಲಾದರೂ ಎಂಥವರನ್ನಾದರೂ ಎದುರಿಸುತ್ತೇವೆ. ಜನರು ಬೇಗ ಅನರ್ಥವಾಗುವಷ್ಟು ಅರ್ಥವಾಗುವುದಿಲ್ಲ. ಎಂಬತ್ತು ವರ್ಷ ಜತೆಯಾಗಿ ಬಾಳಿ ಆನಂತರ ವಿಚ್ಛೇದನ ಪಡೆದವರೆಷ್ಟೋ ಗಂಡ-ಹೆಂಡತಿಯರಿದ್ದಾರೆ.

ಒಬ್ಬ ವಿಚಾರವಾದಿ ಹೇಳುತ್ತಾನೆ- ”I believe that sometimes the people you expect to kick you when you are down, will be the ones to help you get back up.’

2 Comments

  1. Houdu Sir………samaya sandarbha onde thara irodilla……..idellavannu adjust madkondu hogode jeevana……..

    Regards,
    Naveen
    Doha (Qatar)

  2. a small misunderstanding gets integrate and totally spoil whole relationship,,, since we ought not to allow such a mistakes while understanding any one,, before that we have to understand our self specificly first,,,, 🙂

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.