ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.
ಮುಂದೆ ಓದಿ...ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.
ಮುಂದೆ ಓದಿ...ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.
ಮುಂದೆ ಓದಿ...ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ
ಮುಂದೆ ಓದಿ...ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.
ಮುಂದೆ ಓದಿ...ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.
ಮುಂದೆ ಓದಿ...ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!
ಮುಂದೆ ಓದಿ...ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.
ಮುಂದೆ ಓದಿ...ಇದು ಮನುಷ್ಯನ ಸ್ವಭಾವ. ಬೇರೆ ಯವರು ಆರ್ಡರ್ ಮಾಡಿದ ಆಹಾರವೇ ಚೆನ್ನಾಗಿದ್ದಿರ ಬಹುದೇನೋ, ನನ್ನದು ಸ್ವಲ್ಪವೂ ಚೆನ್ನಾಗಿಲ್ಲ. ನಾನೂ ಅವರು ಆರ್ಡರ್ ಮಾಡಿದ್ದನ್ನೇ ಮಾಡಬೇಕಿತ್ತು ಎಂದು ಎಲ್ಲರೂ ಯೋಚಿಸುತ್ತಾರೆ. ನಮ್ಮ ಪ್ಲೇಟಿನಲ್ಲಿ ಇರುವುದನ್ನು ಕಂಡು ಬೇರೆಯವರೂ ಹಾಗೇ ಯೋಚಿಸುತ್ತಾರೆ ಎಂಬುದನ್ನು ಮರೆಯಬಾರದು.
ಒಟ್ಟಾರೆ ಹೇಳುವುದಾದರೆ ಯಾರಿಗೂ ಸಮಾಧಾನವಿಲ್ಲ. ನನಗಿಂತ ಬೇರೆಯವರು ಉತ್ತಮ ಹಾಗೂ ನೆಮ್ಮದಿಯ ಜೀವನ ಸಾಗಿಸುತ್ತಿರಬಹುದು ಎಂದೇ ಎಲ್ಲರೂ ಭಾವಿಸಿರುತ್ತಾರೆ. ತನ್ನ ಮನೆ ಚಿಕ್ಕದು, ಪಕ್ಕದ ಮನೆಯವರ ಮನೆ ದೊಡ್ಡದು, ಹೀಗಾಗಿ ಆತ ತನಗಿಂತ ಸುಖವಾಗಿರಬಹುದು ಎಂದು ಈತ ಯೋಚಿಸುತ್ತಿರುವಾಗ, ಆತ ಯೋಚಿಸುವುದೇ ಬೇರೆ. ತನ್ನ ಮನೆ ಇಷ್ಟು ದೊಡ್ಡದಿದ್ದರೆ ಏನು ಬಂತು, ಆದರೆ ಸಮಾಧಾನವಿಲ್ಲ. ಅವನ ಮನೆ ಪುಟ್ಟದಾದರೇನಂತೆ ಅವರು ಎಷ್ಟೊಂದು ಸಂತೃಪ್ತಿಯ ಬದುಕು ಸಾಗಿಸುತ್ತಿದ್ದಾರೆ, ಅವನ ನೆಮ್ಮದಿ ನನಗಿಲ್ಲವಲ್ಲ ಎಂದು ಈತ ಕೊರಗುತ್ತಿರುತ್ತಾನೆ. ಎಲ್ಲ ಇದ್ದೂ ಏನೂ ಇಲ್ಲದವನಂತೆ ತನ್ನ ಹಣೆಬರಹಕ್ಕೆ ತಲೆ ತಲೆ ಚಚ್ಚಿಕೊಳ್ಳುತ್ತಿರುತ್ತಾನೆ.
ಪ್ರತಿಯೊಬ್ಬರಿಗೂ ಸಂತಸದಿಂದ ಇರಲು ಹಲವು ಕಾರಣಗಳಿರುತ್ತವೆ. ಆದರೆ ಬೇರೆಯವರೊಂದಿಗೆ ತಮ್ಮನ್ನು ಹೋಲಿಸಿಕೊಂಡು ಪಶ್ಚಾತ್ತಾಪ ಪಡುತ್ತಿರುತ್ತಾರೆ. ಧನಿಕನಿರಲಿ, ಬಡವನಿರಲಿ ಅವರೆಲ್ಲರೂ ತಮ್ಮದೇ ಆದ ಚಿಂತೆಯಲ್ಲಿರುತ್ತಾರೆ. ಅವರವರಿಗೆ ಅವರವರ ಚಿಂತೆಯೇ ದೊಡ್ಡದಾಗಿರುತ್ತದೆ. ಆನೆಗೇ ಅದರ ಬಾಲ ಭಾರವಾದರೆ, ಇಲಿಗೂ ಅದರ ಬಾಲ ಭಾರವೆಂದು ಅರಿತುಕೊಳ್ಳುವವರು ಕಡಿಮೆ. ಬಡವನಾದವನು ದೇವಸ್ಥಾನದ ಹೊರಗೆ ನಿಂತು ಬೇಡುತ್ತಿರುತ್ತಾನೆ. ಅದೇ ಶ್ರೀಮಂತನಾದವನು ದೇವಸ್ಥಾನದ ಒಳಗೆ ದೇವರ ಮುಂದೆ ನಿಂತು ಬೇಡುತ್ತಿರುತ್ತಾನೆ. ಈ ಬೇಡುವ ಕೆಲಸ ಇದ್ದೇ ಇರುತ್ತದೆ; ಯಾರಿಗಾದರೂ.
ಕೆಲವರು ಸದಾ ತಮ್ಮ ಹಣೆಬರಹದ ಬಗ್ಗೆ ಹಳಿದು ಕೊಳ್ಳುತ್ತಿರುತ್ತಾರೆ. ‘ನನ್ನ ಹಣೆಯಲ್ಲಿ ಬರೆದಿಲ್ಲ ಇದು. ಅದಕ್ಕೆಲ್ಲ ಪಡೆದುಕೊಂಡು ಬರಬೇಕು. ನನ್ನ ನಸೀಬು ಹಾಳು. ಈ ಜನ್ಮವೆಲ್ಲ ಹೀಗೇ ಕಳೆಯಬೇಕು’ ಎಂದು ಗೋಳಾಡುತ್ತಿರುತ್ತಾರೆ. ಎಲ್ಲರ ನಸೀಬೂ ಹೀಗೇ ಇರುತ್ತದೆ, ಕೆಲವರು ತಮ್ಮ ಹಣೆಬರಹವನ್ನು ತಾವೇ ಬರೆದುಕೊಳ್ಳುತ್ತಾರೆ. ದೇವರು ಬರೆದ ಹಣೆಬರಹವನ್ನು ತಿದ್ದಿಕೊಳ್ಳಬಾರದು ಎಂದೇನಿಲ್ಲ. ಅದನ್ನು ಸೂಕ್ತವಾಗಿ, ನಮಗೆ ಬೇಕಾದಂತೆ ಎಡಿಟ್ ಮಾಡಿದರೆ ದೇವರು ಬೇಸರಪಟ್ಟುಕೊಳ್ಳುವುದಿಲ್ಲ. ಆದ್ದರಿಂದ ಯಾವುದೇ ಸಂದರ್ಭದಲ್ಲೂ ನಿಮ್ಮ ಹಣೆಬರಹವನ್ನು ಹಳಿಯಬೇಡಿ. ಅದನ್ನು ಸುಧಾರಿಸಲು ಕ್ರಮ ಜರುಗಿಸಿ. ಅದು ನಿಮ್ಮ ಕೈಯಲ್ಲೇ ಇದೆ.
nivu bareda prati manavana mannasina bahara tuMbaa cennagide.