ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ನಾವು ಉಗ್ರರ ಗುಂಡಿಗೆ ಹತ್ಯೆಯಾಗುವ ಅಪರಾಧವೆಸಗಿದ್ದೇವಾ?

ಈಚೆ ನಿಂತು ನೋಡಿದರೆ ಎಲ್ಲವೂ ವಿಚಿತ್ರ ಎನಿಸುತ್ತಿದೆ.

ಒಂದಲ್ಲ ಒಂದು ದಿನ ಉಗ್ರಗಾಮಿಗಳ ಹಿಟ್ ಲಿಸ್ಟ್್ನಲ್ಲಿ ನನ್ನ ಹೆಸರೂ ಕಾಣಿಸಿಕೊಳ್ಳಬಹುದು ಎಂದು ನಾನಂತೂ ಊಹಿಸಿರಲಿಲ್ಲ. ಗಟ್ಟಿಪಿಂಡ, ಸದ್ಯಕ್ಕಂತೂ ಬಚಾವ್ ಆಗಿದ್ದೇನೆ. ‘ಕೊಲ್ಲುವವರು ಹಲವರಿರಬಹುದು, ಕಾಯುವವನು ಮಾತ್ರ ಒಬ್ಬನೇ’ ಎಂಬ ಮಾತಿನಲ್ಲಿ ಅಕ್ಷರಶಃ ನಂಬಿಕೆ ಬಂದಿದೆ. ಓದುಗರ, ಸ್ನೇಹಿತರ, ಬಂಧುಗಳ ಹಾರೈಕೆಯೇ ಶ್ರೀರಕ್ಷೆಯಾಗಿದೆ. ನನಗೆ ಗೊತ್ತಿಲ್ಲದಂತೆ ಬೀಸೋ ದೊಣ್ಣೆಯಿಂದ ಬಚಾವ್ ಆಗಿದ್ದೇನೆ. ಬೆಂಗಳೂರು ಪೊಲೀಸರೇನಾದರೂ ಸ್ವಲ್ಪ ಯಾಮಾರಿದ್ದರೆ, ಬ್ರೇಕಿಂಗ್ ನ್ಯೂಸ್, ಮುಖ ಪುಟದ ಸುದ್ದಿಯಾಗುತ್ತಿದ್ದೆ. ‘ತುಪ್ಪ ಕರಗಿ ಹೋಗಬಹುದು, ದೇವರಿಗೆ ಹಚ್ಚಿದ ತುಪ್ಪದ ದೀಪ ಹಾಗಲ್ಲ, ಅದೆಂದೂ ಕರಗಿ ಹೋಗುವುದಿಲ್ಲ’ ಎಂಬ ಹೆಂಡತಿ ಮಾತು ವೇದಾಂತಿ ಬರೆದ ಷರಾದಂತೆ ಗೋಚರಿಸುತ್ತಿದೆ.

ಬದುಕಿನುದ್ದಕ್ಕೂ ಸಾವು ಸಹ ಅನಿರೀಕ್ಷಿತವೇ. ಜೀವನವಿಡೀ ಸಾವು ಸಹ ಆಪ್ತಸಂಗಾತಿಯಂತೆ ಹೆಜ್ಜೆ ಹಾಕುತ್ತಾ ನಡೆಯುತ್ತಿರುತ್ತದೆ. ಒಂದು ಕ್ಷಣ ಸಹ ಬಿಟ್ಟಿರುವುದಿಲ್ಲ. ಸಾವು ಸಹ ಬದುಕಿನಷ್ಟೇ ಸತ್ಯ, ಅಷ್ಟೇ ಅನಿವಾರ್ಯ ಕೂಡ. ಈ ವಿಷಯವನ್ನು ಯಾರೂ ಅಲ್ಲಗಳೆಯುವಂತಿಲ್ಲ. ವಿಚಿತ್ರ ಅಂದರೆ ಸಾವು ಸಹ ಒಂಥರ ಉಗ್ರಗಾಮಿಯೇ. ಅದು ಸದಾ ಹೊಂಚು ಹಾಕುತ್ತಲೇ ಇರುತ್ತದೆ. ಇನ್ನೂ ವಿಚಿತ್ರ ಅಂದ್ರೆ ಅದರ ಹಿಟ್್ಲಿಸ್ಟ್್ನಲ್ಲಿ ಎಲ್ಲರೂ ಇದ್ದಾರೆ! ಅದರಿಂದ ಬಚಾವ್ ಮಾಡಲು ಆ ಭಗವಂತನಿಂದಲೂ ಸಾಧ್ಯವಿಲ್ಲ!

ಈ ಮಾತನ್ನು ಅರ್ಥ ಮಾಡಿಕೊಂಡರೆ ಉಗ್ರಗಾಮಿಗಳಾಗಲಿ, ಅವರ ಹಿಟ್್ಲಿಸ್ಟ್ ಎಂಬ ಕಿರ್ದಿಯಾಗಲಿ, ಹತ್ಯೆಯ ಸಂಚಾಗಲಿ ತೀರಾ ಕ್ಷುಲ್ಲಕವಾಗಿ, ಯಕಃಶ್ಚಿತವಾಗಿ ಕಾಣುತ್ತದೆ. ಈರುಳ್ಳಿ ಮೇಲಿನ ಒಂದು ಸಿಪ್ಪೆ ಹಾರಿಹೋಗಿದೆ, ಯಾರಿಗೂ ನಷ್ಟವಿಲ್ಲ ಬಿಡಿ.

ಹಾಗಂತ ನಾನೂ ನನ್ನ ಕೆಲಸದಲ್ಲಿ ಮಗ್ನನಾಗಿದ್ದೇನೆ. ಉದ್ದೇಶ ಅಂದ್ರೆ ಸದುದ್ದೇಶ, ಕೆಲಸ ಅಂದ್ರೆ ಕಾಯಕ ಎಂದು ತೀರ್ಮಾನಿಸಿ ಬದುಕಿನ ನೊಗಕ್ಕೆ ಕುತ್ತಿಗೆ ಕೊಟ್ಟವನಿಗೆ ಹೆಜ್ಜೆ ಹಾಕುವುದೊಂದೇ ಗೊತ್ತು. ಹೀಗಾಗಿ ನನ್ನ ಪಯಣವನ್ನು ಮುಂದುವರಿಸಿದ್ದೇನೆ, ಇನ್ನಷ್ಟು ಪ್ರೀತಿ ಹಾಗೂ ಜೀವನ ಪ್ರೀತಿಯಿಂದ. ಅದನ್ನು ಮಾತ್ರ ಯಾರಿಂದಲೂ ಸಾಯಿಸಲು ಸಾಧ್ಯವಿಲ್ಲ, ನನ್ನ ಹೊರತಾಗಿ. ಅದನ್ನು ಹಿಟ್್ಲಿಸ್ಟ್್ನಲ್ಲಿ ಸೇರಿಸಲು ಸಾಧ್ಯವಿಲ್ಲ. ಈ ಎಲ್ಲ ಘಟನೆಗಳಾದಾಗ, ಕುಶಾಲಿನಿಂದ ಒಂದು ಮಾತನ್ನು ಹೇಳಿದ್ದೆ. ‘ಹಿಟ್್’ಲಿಸ್ಟ್್ನಲ್ಲಿ ಇರೋದು ಜಿರಳೆಗಳು ಮಾತ್ರ ಎಂದು. (ಜಿರಳೆಗಳನ್ನು ಸಾಯಿಸುವ ಮದ್ದು ‘ಹಿಟ್್’ ಎಂಬ ಬ್ರ್ಯಾಂಡ್್ನಲ್ಲಿ ಮಾರುಕಟ್ಟೆಯಲ್ಲಿ ಲಭ್ಯ.) ಅದನ್ನು ಓದಿದ ಸ್ನೇಹಿತರೊಬ್ಬರು ‘ಹಿಟ್ ಹೊಡೆದರೂ ಸಾಯದ ಜಿರಳೆಗಳು’ ಎಂಬ ಲೇಖನವೊಂದನ್ನು ಕಳಿಸಿಕೊಟ್ಟರು. ಅಂದರೆ ಜಿರಳೆಗಳು ಸಹ ‘ಹಿಟ್್ಲಿಸ್ಟ್್’ ನಿಂದ ಪಾರಾಗುವ ಪರಿಯನ್ನು ಕಂಡುಕೊಂಡಿವೆ. ಪ್ರತಿರೋಧ ಶಕ್ತಿ ಬೆಳೆಸಿಕೊಂಡರೆ ಯಾರನ್ನಾದರೂ, ಯಾವುದನ್ನಾದರೂ ಎದುರಿಸಬಹುದು ಎಂಬುದಕ್ಕೆ ಈ ಜಿರಳೆಗಳೇ ಸಾಕ್ಷಿ. ಹೀಗಿರುವಾಗ…!?

ಇವೆಲ್ಲ ಇರಲಿ. ಕಳೆದ ವಾರ ನನ್ನ ಆತ್ಮೀಯರೊಬ್ಬರ ಮಗನ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಹೋಗಿದ್ದೆ. ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿದ್ದರು. ನಾನು ಹೋಗುವುದು ಅವರಿಗೆ ತಿಳಿಯಿತು. ‘ಒಟ್ಟಿಗೆ ಹೋಗೋಣ, ಬನ್ನಿ’ ಅಂದರು. ನನ್ನ ಹೊಸ ಆಫೀಸಿನಿಂದ ಮುಖ್ಯಮಂತ್ರಿಯವರ ನಿವಾಸ ‘ಕಾವೇರಿ’ಗೆ ಎರಡು ನಿಮಿಷದ ದಾರಿ. ರಾತ್ರಿ ಎಂಟೂವರೆಗೆ ಅವರ ಮನೆಗೆ ಹೋಗಿ ಅಲ್ಲಿಂದ ಅವರ ವಾಹನದಲ್ಲಿ ನಿಶ್ಚಿತಾರ್ಥ ನಡೆಯುವ ಜಯನಗರದ ಫೋರ್ಥ್್ಬ್ಲಾಕ್ ಕಲ್ಯಾಣ ಮಂಟಪ ತಲುಪಿದೆವು. ಹೋಗುವಾಗ ಲೋಕಾಭಿರಾಮ ಚರ್ಚೆ. ಹತ್ತು ನಿಮಿಷಗಳಲ್ಲಿ ಕಲ್ಯಾಣ ಮಂಟಪ ಬಂತು.

ನಿಶ್ಚಿತಾರ್ಥದ ಸಮಾರಂಭದಲ್ಲಿ ಗೃಹಸಚಿವರಾದ ಆರ್. ಅಶೋಕ್ ಸಿಕ್ಕರು. ಅವರ ಊಟದ ಟೇಬಲ್್ನಲ್ಲಿ ಯಡಿಯೂರಪ್ಪ, ಅನಂತಕುಮಾರ ಸಹ ಇದ್ದರು. ಮುಖ್ಯಮಂತ್ರಿಗಳಿಗೆ ಹಾಗೂ ನನಗೆ ಅದೇ ಟೇಬಲ್್ನಲ್ಲಿ ಊಟಕ್ಕೆ ಅವಕಾಶ ಮಾಡಿಕೊಡಲಾಯಿತು. ಅದೂ ಇದೂ ಮಾತಿನ ಬಳಿಕ ಅಶೋಕ್ ಅವರು, ‘ನಿಮ್ಮ ಕಚೇರಿಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳನ್ನು ನಿಮ್ಮೊಂದಿಗೆ ಚರ್ಚಿಸಬೇಕು. ನಾಳೆ, ನಾಡಿದ್ದು ಸಿಗ್ತೇನೆ’ ಅಂದರು. ‘ಏನ್ರೀ ಅಂಥ ಪ್ರಮುಖ ವಿಷಯ? ಈಗಲೇ ಹೇಳಿ’ ಎಂದೆ. ‘ಇಲ್ಲಿ ಬೇಡ, ಎಲ್ಲರೂ ಇದ್ದಾರೆ’ ಅಂದರು. ‘ಹಾಗಾದ್ರೆ ಆಚೆ ಹೋಗೋಣ ಬನ್ನಿ, ಅಲ್ಲಿ ತಿಳಿಸಿ’ ಎಂದೆ. ಆಗ ಅಶೋಕ್, ‘ನಾಳೆ, ನಾಡಿದ್ದು ತಿಳಿಸ್ತೇನೆ ಬಿಡಿ. ಅಂಥ ಅವಸರವಿಲ್ಲ’ ಎಂದರು.

ಐದಾರು ನಿಮಿಷಗಳ ಬಳಿಕ, ‘ಅಶೋಕ್, ಅದೇನೋ ನನ್ನ ತಲೆಯಲ್ಲಿ ಹುಳಬಿಟ್ಟಿದ್ದೀರಿ. ಅದೇನ್ರಿ ಸಮಾಚಾರ?’ ಎಂದು ಕೇಳಿದಾಗ, ‘ಅದೇನು ಅಂಥ ಮಹತ್ವದ್ದಲ್ಲ ಬಿಡಿ, ಆದ್ರೆ ಸ್ವಲ್ಪ ಇಂಪಾರ್ಟೆಂಟು, ನಾಳೆ, ನಾಡಿದ್ದು ಸಿಗ್ತೀನಿ ಬಿಡಿ’ ಎಂದು ಮತ್ತಷ್ಟು ಗುಮಾನಿ, ಗೊಂದಲ ಹೆಚ್ಚಿಸಿದರು. ಅವರಿಗೆ ಏನೋ ಹೇಳಲಿಕ್ಕಿದೆ, ಆದರೆ ಹೇಳಲಾಗುತ್ತಿಲ್ಲ, ಸಂದರ್ಭವೂ ತಕ್ಕುದಾಗಿರಲಿಕ್ಕಿಲ್ಲ, ಸುತ್ತಲೂ ಗಣ್ಯ ವ್ಯಕ್ತಿಗಳಿದ್ದಾರೆ, ಒಂದು ವೇಳೆ ಆಗ ಹೇಳಿದರೆ ಅದೆಷ್ಟು ಸರಿಯಾಗಬಹುದು ಮುಂತಾದ ಪ್ರಶ್ನೆಗಳು ಅವರನ್ನು ಕಾಡಿರಬಹುದು. ನಾನು ಹೆಚ್ಚು ಒತ್ತಾಯಿಸಲಿಲ್ಲ. ಹೇಗಿದ್ದರೂ ಊಟವಾದ ಬಳಿಕ ಪಕ್ಕಕ್ಕೆ ಕರೆದು ಮಾತಾಡಿಸಿದರಾಯಿತು ಎಂದು ಸುಮ್ಮನಾದೆ. ಅಷ್ಟರಲ್ಲಿ ಊಟ ಮುಗಿಯಿತು, ಎಲ್ಲರೂ ಟೇಬಲ್್ನಿಂದ ಎದ್ದರು. ಮುಖ್ಯಮಂತ್ರಿಗಳು ‘ಬರ್ರೀ, ಹೋಗೋಣೆನ್ರೀ’ ಎಂದರು. ನಾನು ಅವರೊಂದಿಗೆ ಹೊರಟೆ.

ಹೀಗಾಗಿ ಅಶೋಕ್ ಜತೆ ‘ನಮ್ಮ ಕಚೇರಿಗೆ ಸಂಬಂಧಿಸಿದ ಪ್ರಮುಖ ವಿಷಯಗಳ’ ಕುರಿತು ಮಾತಾಡಲು ಆಗಲಿಲ್ಲ. ‘ಕಾವೇರಿ’ ತನಕ ಶೆಟ್ಟರ್ ಜತೆಗೆ ಬಂದಾಗ ರಾತ್ರಿ ಹತ್ತು ಗಂಟೆ. ಅಲ್ಲಿಂದ ನನ್ನ ವಾಹನದಲ್ಲಿ ಸುವರ್ಣ ನ್ಯೂಸ್ ಆಫೀಸಿಗೆ ಬಂದು ಅಲ್ಲಿ ಕಾಲುಗಂಟೆ ಕಳೆದು ‘ಕನ್ನಡಪ್ರಭ’ ಆಫೀಸಿಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಫೋನ್ ಬಂತು. ‘ನಾಳೆ ಬೆಳಗ್ಗೆ ನಾವು -ನೀವು ಭೇಟಿ ಮಾಡಬಹುದಾ?’ ಎಂದು ಕೇಳಿದರು. ‘ಆಗಬಹುದು. ಆದರೆ ಏನು ವಿಷಯ?’ ಅಂತ ಕೇಳಿದೆ. ‘ಫೋನಿನಲ್ಲಿ ಬೇಡ ಬಿಡಿ. ನಾಳೆ ಮುಖತಃ ಭೇಟಿಯಾದಾಗಲೇ ಮಾತಾಡೋಣ. ಬರುವಾಗ ಪ್ರತಾಪ್್ಸಿಂಹ ಅವರನ್ನು ಕರೆದುಕೊಂಡು ಬನ್ನಿ’ ಎಂದರು.

ಕೊನೆಯ ವಾಕ್ಯ ಕೇಳಿದಾಗ ತಟ್ಟನೆ ‘ಪ್ರತಾಪ ಅವರಾ?! ಅವರೇಕೆ?’ ಎಂದು ಕೇಳಿದೆ. ಆ ಪೊಲೀಸ್ ಅಧಿಕಾರಿ, ‘ಫೋನಿನಲ್ಲಿ ಬೇಡ ಬಿಡಿ. ಹೇಗಿದ್ದರೂ ನಾಳೆ ಸಿಗ್ತೀವಲ್ಲ, ಅಲ್ಲೇ ಮಾತಾಡೋಣ ಎಂದರು. ಮಾತು ಮುಂದುವರಿಸುವಂತಿರಲಿಲ್ಲ. ಇದು ಸಾಮಾನ್ಯದ್ದಲ್ಲ, ದೊಡ್ಡ ಹುಳವೇ ಆಗಿತ್ತು. ಕೊರೆಯಲು ಶುರು ಮಾಡಲಾರಂಭಿಸಿತು. ಗೃಹಮಂತ್ರಿಗಳು ಸುಮಾರು ಒಂದೂವರೆ ಗಂಟೆ ಹಿಂದೆ, ‘ನಿಮ್ಮ ಕಚೇರಿಗೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳನ್ನು ಚರ್ಚಿಸಬೇಕು’ ಅಂತಾರೆ. ಅನಂತರ ಮಧ್ಯರಾತ್ರಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಫೋನ್ ಮಾಡಿ ‘ನಾಳೆ ಭೇಟಿ ಮಾಡಬೇಕು’ ಅಂತಾರೆ. ಇದೇನಪ್ಪಾ ವಿಷಯ ಎಂಬ ಯೋಚನೆಯಲ್ಲಿ ಮುಳುಗಿದೆ.

ಈ ಹುಳ ದೊಡ್ಡದಾಗಿ ರಂಧ್ರ ಕೊರೆಯಲು ಶುರು ಮಾಡಿದ್ದು ಜತೆಯಲ್ಲಿ ಪ್ರತಾಪ್್ನನ್ನೂ ಕರೆದುಕೊಂಡು ಬನ್ನಿ ಎಂದಾಗ. ಗೃಹಮಂತ್ರಿ ಹಾಗೂ ಈ ಪೊಲೀಸ್ ಅಧಿಕಾರಿಗಳು ಒಂದೇ ವಿಷಯದ ಬಗ್ಗೆ ಪ್ರಸ್ತಾಪಿಸುತ್ತಿದ್ದಾರಾ? ನಮ್ಮ ಕಚೇರಿಗೆ ಸಂಬಂಧಿಸಿದ ವಿಷಯ ಯಾವುದಿರಬಹುದು? ಇದಕ್ಕೂ ಪ್ರತಾಪ್್ಗೂ ಏನು ಸಂಬಂಧ? ಈ ಎಲ್ಲ ಪ್ರಶ್ನೆಗಳು ಒಂದೇ ಸಮನೆ ಗಿರಕಿ ಹೊಡೆಯಲಾರಂಭಿಸಿದವು. ಆ ಸರಹೊತ್ತಿನಲ್ಲಿ ಪ್ರತಾಪ್್ಗೆ ಫೋನ್ ಮಾಡಿ ಕೇಳಿದರೆ ಹೇಗೆಂದು ಒಂದು ಮನಸ್ಸು ಹೇಳಿತು. ಹೇಗಿದ್ದರೂ ನಾಳೆ ಗೊತ್ತಾಗುತ್ತದಲ್ಲ ಎಂದು ಸುಮ್ಮನಾದೆ.

ಮಧ್ಯರಾತ್ರಿ ಸರಿದು, ಬೆಳಗು ನಟಿಗೆ ಮುರಿಯೋ ಸಮಯ. ಫೋನ್ ಸದ್ದಿಗೆ ಎಚ್ಚರವಾಯಿತು. ಲೈಟ್ ಹಾಕಿದೆ. ಬೆಳಗಿನ ಜಾವ ಮೂರೂವರೆ. ಅದು ಫೋನ್ ಬರುವ ಸಮಯ ಅಲ್ಲವೇ ಅಲ್ಲ. ಧಾವಂತದಿಂದ ಫೋನ್ ಎತ್ತಿಕೊಂಡರೆ ‘ವಿಜಯ ಸಂಕೇಶ್ವರ’ ಎಂಬ ಹೆಸರು ಡಿಸ್್ಪ್ಲೇ ಆಗುತ್ತಿತ್ತು. ಈ ಸಮಯದಲ್ಲಿ ಇವರೇಕೆ ಫೋನ್ ಮಾಡ್ತಾರೆ ಅಂದೆನಿಸಿತು.

ಅತ್ತ ಕಡೆಯಿಂದ ಸಂಕೇಶ್ವರರು ಗಂಭೀರವಾಗಿ ಹೇಳುತ್ತಿದ್ದರು- ‘ವಿಷಯ ಗೊತ್ತಾಗಿರಬೇಕಲ್ಲ, ನಾವು ಹಿಟ್ ಲಿಸ್ಟ್್ನಲ್ಲಿದ್ದೇವೆ’ ಅಂದರು. ನನಗೆ ಪೂರ್ತಿ ಎಚ್ಚರವಾಗಿರಲಿಲ್ಲ. ಸಂಕೇಶ್ವರರ ಮಾತು ಕೇಳಿ ದಢಗ್ಗನೆ ಎದ್ದು ಕುಳಿತೆ. ‘ಏನ್ಸಾರ್? ಏನಂದ್ರಿ?’ ಅಂತ ಕೇಳಿದೆ. ‘ನಾನು, ಪ್ರಹ್ಲಾದ ಜೋಶಿ, ನೀವು ಹಾಗೂ ಪ್ರತಾಪ್್ಸಿಂಹ ಉಗ್ರರ ಹಿಟ್್ಲಿಸ್ಟ್್ನಲ್ಲಿ ಇದ್ದೇವೆ ಅಂತ ಗೊತ್ತಾಯಿತು. ನಮ್ಮ ನಾಲ್ವರ ಹತ್ಯೆಗೆ ಸಂಚು ನಡೆಯುತ್ತಿತ್ತಂತೆ. ಅದನ್ನು ಪೊಲೀಸರು ವಿಫಲಗೊಳಿಸಿದ್ದಾರೆ.’ ಅಂತ ವಿವರಿಸಿದರು. ನನಗೆ ಎಲ್ಲವೂ ಗೋಜಲು ಗೋಜಲು. ಏನೂ ಅರ್ಥವಾಗದ ಸ್ಥಿತಿ. ಉಗ್ರರು ನಮ್ಮನ್ನೇಕೆ ಟಾರ್ಗೆಟ್ ಮಾಡಿದ್ದಾರೆ? ಅಂಥ ‘ಮಹಾನ್್’ ಕೆಲಸವನ್ನೇನು ನಾವು ಮಾಡಿದ್ದೇವೆ? ಉಗ್ರರನ್ನು ಕೆಣಕುವಂಥ ಕೆಲಸ ನಮ್ಮಿಂದ ಆಗಿದ್ದರೆ ಅದ್ಯಾವುದು? ಹತ್ಯೆಗೊಳಗಾಗುವಂಥ ಮಹಾಪರಾಧ ಯಾವುದು? ಹೋಗಿ ಹೋಗಿ ನಾವು ನಾಲ್ವರೇ ಏಕೆ ಉಗ್ರರ ಟಾರ್ಗೆಟ್್ಗೆ ಗುರಿಯಾಗಿದ್ದು? ಪ್ರಶ್ನೆಗಳ ಅಣೆಕಟ್ಟೆ ತುಂಬಲಾರಂಭಿಸಿತು. ಯಾವ ಪ್ರಶ್ನೆಗೂ ಉತ್ತರ ಸಿಗುತ್ತಿಲ್ಲ. ಸಿಕ್ಕ ಉತ್ತರ ಮತ್ತೊಂದು, ಮತ್ತಾರು ಪ್ರಶ್ನೆಗಳನ್ನು ಎಬ್ಬಿಸುತ್ತಿದ್ದವು.

ಮಧ್ಯಾಹ್ನದ ಹೊತ್ತಿಗೆ ಗೃಹ ಸಚಿವ ಅಶೋಕ್ ಎಲ್ಲವನ್ನೂ ವಿವರಿಸಿದಾಗಲೇ ಗೊತ್ತಾಗಿದ್ದು. ಶಂಕಿತ ಉಗ್ರರೆಲ್ಲರನ್ನೂ ಬಂಧಿಸುವ ತನಕ ಅಶೋಕ್ ಬಾಯಿಬಿಟ್ಟಿರಲಿಲ್ಲ. ಮುಖ್ಯಮಂತ್ರಿಗಳೂ ಹಾಗೆ. ಅವರ ಜತೆಯಲ್ಲಿ ಕಾರಿನಲ್ಲಿ ಹೋಗುವಾಗ ಅವರಿಗೆ ಎಲ್ಲ ವಿಷಯ ತಿಳಿದಿತ್ತು. ಉಗ್ರರೆಲ್ಲರನ್ನೂ ಪೊಲೀಸರು ಕಸ್ಟಡಿಗೆ ತೆಗೆದುಕೊಳ್ಳುವ ತನಕ ಅವರು ಆ ಬಗ್ಗೆ ತಿಳಿಸಿರಲಿಲ್ಲ.

ಆ ದಿನದಿಂದ ಈ ಕ್ಷಣದತನಕ ಯೋಚಿಸುತ್ತಲೇ ಇದ್ದೇನೆ. ನಮ್ಮನ್ನು ಹತ್ಯೆಗೈಯುವ ದುಸ್ಸಾಹಸಕ್ಕೆ ಉಗ್ರರು ಮುಂದಾಗಿದ್ದೇಕೆ? ಅಂಥ ಯಾವ ‘ಘನಂದಾರಿ’ ಕೆಲಸ ನಮ್ಮಿಂದಾಗಿದೆ, ನನ್ನಿಂದಾಗಿದೆ? ಗೊತ್ತಾಗುತ್ತಿಲ್ಲ. ಶಂಕಿತ ಬಂಧಿತ ಉಗ್ರಗಾಮಿಗಳು ಹೇಳಿದ ಪ್ರಕಾರ ನನ್ನ ಹಾಗೂ ಪ್ರತಾಪನ ಹತ್ಯೆಗೆ ಕಾರಣಗಳು ಎರಡು. ಮೊದಲು ಎರಡನೆ ಕಾರಣ ಹೇಳುತ್ತೇನೆ. ಅದೇನೆಂದರೆ ನಾವಿಬ್ಬರೂ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಸಂಪರ್ಕ, ಸಂಬಂಧ ಹೊಂದಿದ್ದೇವೆ ಎಂಬುದು.

ಎರಡನೆಯದಾಗಿ, ಮೊದಲ ಕಾರಣ ನಮ್ಮ ಮುಸ್ಲಿಂ ವಿರೋಧಿ ನಿಲುವು ಅಥವಾ ಕಾಲಕಾಲಕ್ಕೆ ಪ್ರತಾಪ್ ಮುಸ್ಲಿಂ ವಿರೋಧಿ ಲೇಖನ ಬರೆದಿದ್ದು ಹಾಗೂ ಅವನ ಬೆಂಬಲಕ್ಕೆ ನಿಂತು ನಾನು ಅವನ್ನೆಲ್ಲ ಪತ್ರಿಕೆಯಲ್ಲಿ ಪ್ರಕಟಿಸಿದ್ದು.

ನನಗೆ ಅಳಬೇಕೋ, ನಗಬೇಕೋ ತಲೆಚಚ್ಚಿಕೊಳ್ಳಬೇಕೋ, ಹುಚ್ಚು ಪ್ಯಾಲಿಗಳು ಎಂದು ಜರೆಯಬೇಕೋ ತಿಳಿಯಲಿಲ್ಲ. ನಾನಾಗಲಿ, ಪ್ರತಾಪನಾಗಲಿ ನರೇಂದ್ರ ಮೋದಿಯವರನ್ನು ಭೇಟಿಯಾಗಿದ್ದು ಮೂರು ಅಥವಾ ನಾಲ್ಕು ಸಲ. ಖಂಡಿತವಾಗಿಯೂ ಐದು ಸಲವಂತೂ ಅಲ್ಲವೇ ಅಲ್ಲ. ಪ್ರತಾಪ್ ಮೋದಿಯವರ ಜೀವನಕತೆ ಬರೆದಿದ್ದಾನೆ. ಬರೆದ ನಂತರ, ಬಿಡುಗಡೆಯಾದ ಎಷ್ಟೋ ದಿನಗಳ ಬಳಿಕ ಅವರು ಬೆಂಗಳೂರಿಗೆ ಬಂದಾಗ ಭೇಟಿಯಾಗಿ ಒಂದು ಪ್ರತಿಯನ್ನು ಅರ್ಪಿಸಿದ್ದಾನೆ. ನಾನು ನನ್ನ ವೃತ್ತಿ ಬದುಕಿನ ದೆಸೆಯಿಂದ ಮೋದಿಯವರನ್ನು ಭೇಟಿಯಾಗಿದ್ದೇನೆ. ಭೇಟಿಯಾದಾಗ ಫೋಟೋ ತೆಗೆಸಿಕೊಂಡಿದ್ದೇನೆ. ಅವನ್ನು ನಮ್ಮ ವೆಬ್್ಸೈಟ್, ಫೇಸ್್ಬುಕ್, ಟ್ವಿಟರ್್ಗಳಲ್ಲಿ ಹಾಕಿಕೊಂಡಿದ್ದೇವೆ. ಹೀಗಾಗಿ ಅವು ಇಂಟರ್್ನೆಟ್್ನಲ್ಲಿ ಹರಿದಾಡಿವೆ. ಅವನ್ನೆಲ್ಲ ಈ ಉಗ್ರ ಹುಡುಗರು ತಮ್ಮ ಲ್ಯಾಪ್್ಟಾಪ್್ಗಳಲ್ಲಿ ಡೌನ್್ಲೋಡ್ ಮಾಡಿಕೊಂಡು, ನಮಗೂ ಮೋದಿಗೂ ನಿಕಟ ಸಂಬಂಧವಿದೆಯೆಂಬ ನಿರ್ಧಾರಕ್ಕೆ ಬಂದಿದ್ದಾರೆ. ಇದಕ್ಕೇನೆನ್ನೋಣ?

ಒಂದು ವೇಳೆ ಮೋದಿಯವರ ಜತೆ, ಉಗ್ರರು ಭಾವಿಸಿದಂತೆ, ಸಂಬಂಧವಿರಿಸಿಕೊಂಡಿದ್ದೇವೆ ಅಂತಾನೇ ಒಂದು ಕ್ಷಣ ಭಾವಿಸೋಣ. ಅದೇನು ತಪ್ಪಾ? ಮೋದಿಯವರೇನು ದೇಶದ್ರೋಹಿಯಾ? ಭಯೋತ್ಪಾದಕರಾ? ಕಳ್ಳಸಾಗಣೆದಾರರಾ? ಏನು ಕತೆ? ಒಬ್ಬ ಪತ್ರಕರ್ತ ಒಬ್ಬ ಮುಖ್ಯಮಂತ್ರಿಯನ್ನು ಭೇಟಿ ಮಾಡುವುದರಲ್ಲಿ ತಪ್ಪೇನು ಬಂತು? ಹಾಗಾದರೆ ಯಾವ ಪತ್ರಕರ್ತರೂ ಅವರನ್ನು ಭೇಟಿ ಮಾಡುವುದೇ ಇಲ್ಲವಾ? ಇದೆಂಥ ಹುಚ್ಚು ಕಾರಣ ಮಾರಾಯ್ರೆ!

ಇನ್ನು ನಾನಾಗಲಿ, ಪ್ರತಾಪ್ ಆಗಲಿ ಮುಸ್ಲಿಂ ವಿರೋಧಿ ನಿಲುವು ತಳೆದಿದ್ದೇವೆ, ಲೇಖನ ಬರೆದಿದ್ದೇವೆ, ಪ್ರಕಟಿಸಿದ್ದೇವೆ ಎಂಬುದು. ಪ್ರತಾಪನ ವಿಷಯಕ್ಕೆ ನಂತರ ಬರುತ್ತೇನೆ. ನಾನು ಕಳೆದ 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದೇನೆ. ಕಳೆದ ಹನ್ನೆರಡು ವರ್ಷಗಳಿಂದ ಪ್ರಧಾನ ಸಂಪಾದಕನಾಗಿದ್ದೇನೆ. ನಲವತ್ತೆಂಟು ಪುಸ್ತಕ ಬರೆದಿದ್ದೇನೆ. ವಾರಕ್ಕೆ ನಾಲ್ಕು ಅಂಕಣ ಬರೆಯುತ್ತೇನೆ. ದಿನವೂ ನಾನು ಬರೆದಿದ್ದು ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ. ಜತೆಗೆ ಕಳೆದ ಹದಿನಾಲ್ಕು ತಿಂಗಳಿಂದ ಸುವರ್ಣ ನ್ಯೂಸ್ ಚಾನೆಲ್ ಜವಾಬ್ದಾರಿ ಬೇರೆ. ಮುಸ್ಲಿಂ ವಿರೋಧಿ ಎನಿಸುವ ಒಂದೇ ಒಂದು ಸಾಲನ್ನು ನಾನು ಬರೆದಿದ್ದರೆ ಅದನ್ನು ಯಾರಾದರೂ ತೋರಿಸಲಿ ನೋಡೋಣ!

ಇನ್ನು ಪ್ರತಾಪನ ಬರವಣಿಗೆ. ಆತ ಏನೇ ಬರೆದರೂ facts, figures ಇಲ್ಲದೇ ಬರೆಯುವುದಿಲ್ಲ. fiction ಅವನ ಬರಹ ಅಲ್ಲ. ‘ಅದೂ ಸರಿ. ಇದೂ ಸರಿ. ಇವೆರಡೂ ಸರಿಯಲ್ಲದಿದ್ದರೆ ಮತ್ತೊಂದು ಸರಿ’ ಎಂದು ಅಡ್ಡಗೋಡೆ ಮೇಲೆ ಬುಡ್ಡಿದೀಪವಿಟ್ಟು ಬರೆಯುವವನಲ್ಲ. ಅವನದು ಖಡಕ್ ಬರಹ. ಸುತ್ತಿ ಬಳಸಿ ಹೇಳುವುದು ಗೊತ್ತಿಲ್ಲ. ಇದ್ದದ್ದು ಇದ್ದಂಗೆ ಹೇಳುವುದು ಅವನ ಸ್ವಭಾವ. ಇದ್ದುದನ್ನು ಇದ್ದಂಗೆ ಹೇಳಿದ್ದು ಖಾರವಾಗಿರುತ್ತದೆ, ಕಟುವಾಗಿರುತ್ತದೆ. ಕಟು, ಖಾರ ಎಲ್ಲರಿಗೂ ಹಿಡಿಸುವುದಿಲ್ಲ. ಸತ್ಯ ಯಾವತ್ತೂ ನಿಷ್ಠುರ, ಕಹಿ, ಕಠೋರ. ಅಪಥ್ಯವಾಗುತ್ತದೆ. ರಾಷ್ಟ್ರೀಯತೆ, ರಾಷ್ಟ್ರಪ್ರೇಮ ನಮ್ಮ ಸಂಪಾದಕೀಯ ನಿಲುವು. ನಮ್ಮ ದೇಶವನ್ನು ಪ್ರೀತಿಸಬೇಕೆಂದರೆ ಬೇರೆ ದೇಶಗಳನ್ನು ದ್ವೇಷಿಸಬೇಕು ಎಂದಲ್ಲ. ರಾಷ್ಟ್ರೀಯತೆಯನ್ನು ಕುರಿತ ಬರಹ ಮುಸ್ಲಿಂ ವಿರೋಧಿ ಹೇಗಾದೀತು? ರಾಷ್ಟ್ರೀಯತೆ ಆಧರಿತ ಹಿಂದುತ್ವ ಅಂದರೆ ಅದು ಇಸ್ಲಾಮಿಕ್ ವಿರೋಧಿ ಎನ್ನಲಾದೀತೆ? ಶುದ್ಧ ನಾನ್್ಸೆನ್ಸ್!

ಅಷ್ಟಕ್ಕೂ ಏನೇ ಬರೆದರೂ, ಅದನ್ನು ಟೀಕಿಸಿ, ವಿರೋಧಿಸಿ ಪ್ರತಿಕ್ರಿಯಿಸಿದರೆ, ಅವುಗಳನ್ನು ಪ್ರಕಟಿಸಲು ಪತ್ರಿಕೆಯಲ್ಲಿ ಜಾಗವಿಟ್ಟಿದ್ದೇವೆ. ಒಬ್ಬರ ಅಭಿಪ್ರಾಯವನ್ನೇ ಒಪ್ಪಿಕೊಳ್ಳಬೇಕೆಂಬ ವರಾತವಿಲ್ಲವಲ್ಲ? ಪೆನ್ನಿನಲ್ಲಿ ಬರೆದಿದ್ದಕ್ಕೆ ಗನ್ನಿನಲ್ಲಿ ಉತ್ತರ ಕೊಟ್ಟರೆ ಹೇಗೆ? ಪ್ರತಾಪ್ ಬರೆದಿದ್ದು ಪರಮಸತ್ಯ ಅಲ್ಲ ಎಂದು ವಾದಿಸುವವರು, ತಮ್ಮ ವಾದವನ್ನು ಬರೆದು ಕಳಿಸಿದರೆ ನಾವದನ್ನು ಕಸದ ಬುಟ್ಟಿಗೆ ಎಸೆದಿಲ್ಲ, ಎಸೆಯುವುದೂ ಇಲ್ಲ. ಸಂಪಾದಕೀಯ ಪುಟದ ಮುಂದಿನ ಪುಟ, ತಪ್ಪಾಯ್ತು ತಿದ್ಕೋತೀವಿ, ಗೋಡೆ ಬರಹದಂಥ ಅಂಕಣಗಳೇ ಇದಕ್ಕೆ ನಿದರ್ಶನ. ಹೀಗಾಗಿ ನಮ್ಮನ್ನು ವಿರೋಧಿಸುವವರೂ ಪೆನ್ನು, ಪ್ರೀತಿಯನ್ನು ಹಿಡಿದುಕೊಂಡೇ ಬರಬಹುದು.

ಹಾಗಾದರೆ ನಾವು ಉಗ್ರರ ಗುಂಡಿಗೆ ಹತ್ಯೆಯಾಗುವಂಥ ಯಾವ ಅಪರಾಧ ಎಸಗಿದ್ದೇವೆ?

ತೀರ್ಮಾನವನ್ನು ನಿಮಗೇ ಬಿಡುತ್ತೇನೆ.

- ವಿಶ್ವೇಶ್ವರ ಭಟ್

9 Comments

  1. http://vbhat.in/nurentu-matu/noorentunota_230212/

    ಬದುಕು ಬಹಳ ವಿಶಾಲವಾಗಿದೆ …ಹೆಜ್ಜೆ ಹಾಕೋಣ…
    CELEBRATE LIFE…..!!

  2. take care sir,we are with you

    • `khanditavadi loka virodhi’ `kandaddu kanda hage helidare kendadanta kopa’ asali oosavalligalante samaya, sandarbhakke takka hage banna badalayisikollutta nadediddare nimage virodhigalu huttuttiralilla. Bidi, ee jana deshada nemmadi kedisalu nirdhisiruvavaru. avaru hidida bandookinante avarigoo amayakarigu nijavada shatrugaligoo vyatyasavilla. neevu summaniddaroo sukhasummane hodeyuttare. manassu kedisikonda dushyasanige prapanchadalli olleyararu kana sigalilla. olleya manassina dharmarayanige kettavararoo kana sigalilla! avara manasthitiye hage bidi. `kolluvavanigita kaayuvavanu doddavanu!! avana mele tumbu bharavase itti desha kattuva kelasa maadutta hogona bidi. Istakku `saavu’ hegiddaru elliddaru bande baruttade. adakyake hedarona! shubhamastu.

  3. Terror groups as well as Naxals want just publicity at any cost…Just go through an alaysia…what a terrorist wants?
    http://drvsacharya.blogspot.in/2008/07/our-response-to-terrorism.html

  4. ಸಾವು ಸಹ ಒಂಥರ ಉಗ್ರಗಾಮಿಯೇ ಅನ್ನೊ ಮಾತು ನಿಜಾ ಭಟ್ರೆ.

  5. I too may be in hit list in future for praising modi,vajpayee in twitter and fb as well as sharing pratap simha’s article ,opposing assam riots etcc

  6. sir, god is great.. keep doing what you are already doing nationalistic people are with u take care….

  7. sir nanu nimma haagu pratap simha avara abhimani..nimma barahadalli ondu seletavide mattu jivavan preetiya bagge olavide..innu pratap avara barhadalli deshapremavide,nijavavada hindutvada arthvide mattu vastavikaateya nelegattu ide..nimma barahagalu yavude oodugarigu novu untu maduvudilla..novadare adu poorvagraha peedith manasugalige matra..so dont bother about these nonsense things….namma abhiman mattu preeti nimmodaniruttade……inti nimma abhimani MAHESH

  8. We are always wid u sir.. Go ahead!!

    Let us improve our society using your knife like INK and both of u r in d peak,i think number of increasing enemies is directly proportional to d peak value u’ve u reach.

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.