ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ರಾಹುಲ್ ಗಾಂಧಿ ಅವರೇ, ಸತ್ಯದ ನೆತ್ತಿ ಮೇಲೆ ಹೊಡೆದಂತೆ ಹಸಿಹಸಿ ಸುಳ್ಳು ಹೇಳಲು ನಿಮಗೆ ಮನಸ್ಸಾದರೂ ಹೇಗೆ ಬಂತು?

ನೂರೆಂಟು ನೋಟ- ವಿಶ್ವೇಶ್ವರ ಭಟ್

1984 anti sikh riots delhi (5)ಈ ವಿಷಯ ಮರೆತು ಹೋಗಿರಲಿಲ್ಲ. ಅದು ಮೂವತ್ತು ವರ್ಷಗಳ ಹಿಂದಿನ ಘಟನೆಯಾಗಿದ್ದಿರಬಹುದು. ಆದರೆ ಮೊನ್ನೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರು’ಟೈಮ್ಸ್‌ನೌ’ ಟಿವಿ ಚಾನೆಲ್ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರಿಗೆ ನೀಡಿದ ತಮ್ಮ ಜೀವನದ ಪ್ರಪ್ರಥಮ ಸಂದರ್ಶನದಲ್ಲಿ ಎದುರಾದ ಪ್ರಶ್ನೆಗಳಿಗೆ ಉತ್ತರಿಸುವಾಗ ಈ ವಿಷಯವನ್ನು ಪ್ರಸ್ತಾಪಿಸಿದ್ದರಿಂದ ಇದನ್ನು ಇಲ್ಲಿ ಚರ್ಚಿಸಬೇಕಿದೆ. ಅಷ್ಟಕ್ಕೂ ಈ ವಿಷಯವೇನೆಂದರೆ, 1984ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯಾಯಿತಲ್ಲ, ಆನಂತರ ಸಂಭವಿಸಿದ ಸಿಖ್ ನರಮೇಧ. ಈ ವಿಷಯವನ್ನು ಚರ್ಚಿಸುವುದಕ್ಕಿಂತ ಮೊದಲು ಅರ್ನಾಬ್ ಗೋಸ್ವಾಮಿ ಕೇಳಿದ ಪ್ರಶ್ನೆ ಹಾಗೂ ರಾಹುಲ್‌ಗಾಂಧಿ ನೀಡಿದ ಉತ್ತರಗಳನ್ನು ಮೆಲುಕು ಹಾಕೋಣ.

ಅರ್ನಾಬ್: 1984ರ ಸಿಖ್ ಹತ್ಯಾಕಾಂಡದಲ್ಲಿ ಕಾಂಗ್ರೆಸ್ಸಿಗರು ಭಾಗಿಯಾಗಿದ್ದರು ಎಂಬುದನ್ನು ಒಪ್ಪುತ್ತೀರಾ? ಗುಜರಾತ್ ನರಮೇಧಕ್ಕೆ ಮೋದಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸುವ ನೀವು, ಸಿಖ್ ಹತ್ಯಾಕಾಂಡಕ್ಕೆ ಕ್ಷಮೆಯಾಚಿಸುತ್ತೀರಾ?

ರಾಹುಲ್: 1977ರಲ್ಲಿ ನನ್ನ ಅಜ್ಜಿ ಇಂದಿರಾಗಾಂಧಿ ಚುನಾವಣೆಯಲ್ಲಿ ಸೋತು ಹೋದರು. ಆಗ ಅವರ ಜತೆಯಲ್ಲಿ ಬೆಂಬಲಕ್ಕೆ ನಿಂತವರು ಸಿಖ್ಖರು. ಎಲ್ಲರೂ ನನ್ನ ಅಜ್ಜಿಯನ್ನು ತೊರೆದರು. ಆದರೆ ಜತೆಯಲ್ಲಿ ನಿಂತವರು ಮಾತ್ರ ಸಿಖ್ಖರು. ನನ್ನ ದೃಷ್ಟಿಯಲ್ಲಿ, ಈ ದೇಶದಲ್ಲಿ ಪ್ರಾಯಶಃ ಕಷ್ಟಪಟ್ಟು ದುಡಿಯುವ ಜನರೆಂದರೆ ಸಿಖ್ಖರು. ನನಗೆ ಅವರ ಬಗ್ಗೆ ಅಭಿಮಾನವಿದೆ. ಈಗಿನ ನಮ್ಮ ಪ್ರಧಾನಿ ಇದ್ದಾರಲ್ಲ, ಅವರು ಸಿಖ್. ನಮ್ಮ ಪ್ರತಿಪಕ್ಷದವರು ಹೊಂದಿರುವುದಕ್ಕಿಂತ ಭಿನ್ನ ದೃಷ್ಟಿಕೋನವನ್ನು ನಾನು ಹೊಂದಿದ್ದೇನೆ. ನನ್ನ ಅಜ್ಜಿಯನ್ನು ಸಾಯಿಸಿದ್ದು ಕೇವಲ ಇಬ್ಬರು ವ್ಯಕ್ತಿಗಳು. ನಿರ್ಭೀಡೆಯಿಂದ ಹೇಳುವುದಾದರೆ, ಆಗಿದ್ದ ಕೋಪ ಈಗ ನನ್ನಲ್ಲಿ ಇಲ್ಲ. ಇಬ್ಬರು ಮಾಡಿದ ಕೃತ್ಯವನ್ನು ಇಡೀ ಸಮುದಾಯದ ಮೇಲೆ ಹೊರಿಸುವುದು ಸರಿಯಲ್ಲ. ಆ ಕೆಲಸವನ್ನು ನಾನು ಮಾಡಲಾರೆ. ಅದು ನಿಜಕ್ಕೂ ಅಪರಾಧ. ದೆಹಲಿಯಲ್ಲಿ ಸಿಖ್ ಹತ್ಯಾಕಾಂಡ ನಡೆಯಿತೇ? ಹೌದು. ಅವರು ಸಂಪೂರ್ಣ ದೋಷಿಗಳಾ? ಹೌದು.

ಅರ್ನಾಬ್: ಸಿಖ್ ಹತ್ಯಾಕಾಂಡದಲ್ಲಿ ಕಾಂಗ್ರೆಸ್ಸಿಗರು ಪಾಲ್ಗೊಂಡಿದ್ದರಾ?

ರಾಹುಲ್: ಬಹುಶಃ ಕೆಲವು ಕಾಂಗ್ರೆಸ್ಸಿಗರು ಪಾಲ್ಗೊಂಡಿದ್ದಿರಬಹುದು.

ಅರ್ನಾಬ್: ಸಿಖ್ಖರಿಗೆ ನ್ಯಾಯ ದೊರಕಿದೆಯಾ?

ರಾಹುಲ್: ನಮ್ಮಲ್ಲಿ ನ್ಯಾಯ ಪ್ರಕ್ರಿಯೆ ಇದೆ. ಆ ಮೂಲಕವೇ ಅವರು ನ್ಯಾಯ ಯಾಚಿಸಿದ್ದಾರೆ… ಕೆಲವು ಕಾಂಗ್ರೆಸ್ಸಿಗರಿಗೆ ಇದರಿಂದ ಶಿಕ್ಷೆಯೂ ಆಗಿದೆ.

ಅರ್ನಾಬ್: ಹಾಗಿದ್ದರೆ ನೀವ್ಯಾಕೆ ಕ್ಷಮೆ ಯಾಚಿಸಬಾರದು? ನೀವು ಹೇಳುವ ಕಾಂಗ್ರೆಸ್ಸಿಗರು ಇನ್ನೂ ಕೋರ್ಟ್‌ನಲ್ಲಿ ಹೋರಾಡುತ್ತಿದ್ದಾರೆ. 2009ರಲ್ಲಿ ಜಗದೀಶ ಟೈಟ್ಲರ್‌ಗೆ ನಿಮ್ಮ ಪಕ್ಷ ಟಿಕೆಟ್ ನೀಡಲು ನಿರ್ಧರಿಸಿತ್ತು. ಆದರೆ ಮಾಧ್ಯಮ ವರದಿಗಳಿಂದಾಗಿ ಟಿಕೆಟ್ ಕೈ ತಪ್ಪಿತು. ನೀವು ಹೇಳುವಂತೆ ಕೆಲವು ಕಾಂಗ್ರೆಸ್ಸಿಗರು ಸಿಖ್ ಹತ್ಯಾಕಾಂಡದಲ್ಲಿ ಪಾಲ್ಗೊಂಡಿದ್ದಾರೆ ಎಂದಾದರೆ ಕ್ಷಮೆಯಾಚಿಸಬಹುದಲ್ಲ?

rahul-gandhiರಾಹುಲ್: 1984ರಲ್ಲಿ ಜನ ಸತ್ತರು ಹಾಗೂ ಅಮಾಯಕ ಜನರು ಸಾಯುವುದಿದೆಯಲ್ಲ ಅದು ನಿಜಕ್ಕೂ ಭಯಂಕರವಾದುದು. ಅಂಥ ಘಟನೆ ಮರುಕಳಿಸಬಾರದು. ಗುಜರಾತ್ ಹಾಗೂ ಸಿಖ್ ನರಮೇಧಕ್ಕೆ ಸಾಕಷ್ಟು ವ್ಯತ್ಯಾಸವಿದೆ. ಗುಜರಾತ್ ನರಮೇಧದಲ್ಲಿ ಅಲ್ಲಿನ ಮೋದಿ ಸರ್ಕಾರವೇ ಪಾಲ್ಗೊಂಡಿತ್ತು.

ಅರ್ನಾಬ್: ಎಲ್ಲ ಕೋರ್ಟುಗಳೂ ಮೋದಿಯವರಿಗೆ ಕ್ಲೀನ್‌ಚಿಟ್ ನೀಡಿವೆಯಲ್ಲ?

ರಾಹುಲ್: ಸಿಖ್ ಹಾಗೂ ಗುಜರಾತ್ ನರಮೇಧಕ್ಕೆ ಸಾಕಷ್ಟು ವ್ಯತ್ಯಾಸವಿದೆ. ಸಿಖ್‌ರ ನರಮೇಧವನ್ನು ತಡೆಯಲು ಸರ್ಕಾರ ಪ್ರಯತ್ನಿಸಿತ್ತು. ನನಗೆ ನೆನಪಿದೆ, ನಾನು ಬಾಲಕನಾಗಿದ್ದೆ. ನನಗೆ ನೆನಪಿದೆ, ಸಿಖ್ ನರಮೇಧ ತಡೆಯುವ ಎಲ್ಲ ಪ್ರಯತ್ನವನ್ನೂ ಸರ್ಕಾರ ಮಾಡಿತು. ಗುಜರಾತಿನಲ್ಲಿ ಇದಕ್ಕೆ ವಿರುದ್ಧವಾದುದು ನಡೆಯಿತು. ಗುಜರಾತಿನಲ್ಲಿ ಅಲ್ಲಿನ ಸರ್ಕಾರ ಗಲಭೆಗೆ ಕುಮ್ಮಕ್ಕು ನೀಡಿತು. ಹೀಗಾಗಿ ಆ ಎರಡು ಗಲಭೆಗಳಿಗೆ ಭಾರೀ ವ್ಯತ್ಯಾಸವಿದೆ. ಅಮಾಯಕ ಜನರನ್ನು ದಿಲ್ಲಿಯಲ್ಲಿ ಹತ್ಯೆ ಮಾಡಲಾಯಿತೆಂಬುದು ಶುದ್ಧ ಸುಳ್ಳು… ಗುಜರಾತಿನಲ್ಲಿ ಅಮಾಯಕ ಜನರನ್ನು ಸಾಯಿಸಲಾಯಿತು… ಜನರೇ ಇದನ್ನು ಕಣ್ಣಾರೆ ನೋಡಿದ್ದಾರೆ. ನಾನು ನೋಡಿಲ್ಲ. ನಿಮ್ಮ ವರದಿಗಾರರು ನೋಡಿದ್ದಾರೆ. ಅವರೇ ನನಗೆ ಹೇಳಿದರು.

ಅರ್ನಾಬ್: ನೀವು ಏನು ಹೇಳುತ್ತಿದ್ದೀರಾ? ನಿಮ್ಮ ಮಾತನ್ನು ವಿವರಿಸಬಲ್ಲಿರಾ?

ರಾಹುಲ್: 1984ರ ಸಿಖ್ ನರಮೇಧಕ್ಕೂ, 2002ರ ಗುಜರಾತ್ ಹತ್ಯಾಕಾಂಡಕ್ಕೂ ವ್ಯತ್ಯಾಸವಿದೆ. 1984ರಲ್ಲಿ ಸಿಖ್ ನರಮೇಧ ನಿಲ್ಲಿಸಲು ಸರ್ಕಾರ ಪ್ರಯತ್ನಿಸಿತು. ಆದರೆ ಗುಜರಾತ್ ಸರ್ಕಾರ ಗಲಭೆ ಮುಂದುವರಿಯಲು ಅವಕಾಶ ನೀಡಿತು.

ಅರ್ನಾಬ್: 84ರ ಸಿಖ್ ನರಮೇಧಕ್ಕೆ ಕ್ಷಮೆಯಾಚಿಸುವ ಅಗತ್ಯವಿಲ್ಲ ಎಂದು ಭಾವಿಸಿದ್ದೀರಾ? ನಿಮ್ಮ ಪ್ರಧಾನಿ ಕ್ಷಮೆಯಾಚಿಸಿದ್ದಾರೆ.

ರಾಹುಲ್: ಮೊಟ್ಟ ಮೊದಲಿಗೆ ಹೇಳುವುದಾದರೆ, ನಾನು ಸಿಖ್ ಗಲಭೆಯಲ್ಲಿ ಭಾಗವಹಿಸಿರಲಿಲ್ಲ. ನಾನು ಅದರಲ್ಲಿ ಪಾಲ್ಗೊಂಡಿರಲಿಲ್ಲ… ನನ್ನ ದೃಷ್ಟಿಯಲ್ಲಿ ಆ ಗಲಭೆ…ಎಲ್ಲ ಗಲಭೆಗಳೂ ಭಯಂಕರವೇ. ಆಗ ನಾನು ಕಾಂಗ್ರೆಸ್ಸಿನಲ್ಲಿ ಸಕ್ರಿಯನಾಗಿರಲಿಲ್ಲ.

ಹಾಂ…ಕೇಳಿದಿರಲ್ಲಾ…!?
1984ರ ಸಿಖ್ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಇದು ರಾಹುಲ್‌ಗಾಂಧಿ ಸಂದರ್ಶನದಲ್ಲಿ ಹೇಳಿದ್ದು.

***
31 ಅಕ್ಟೋಬರ್, 1984.

ತಮ್ಮ ಇಬ್ಬರು ಅಂಗರಕ್ಷಕರ ಗುಂಡಿಗೆ ಪ್ರಧಾನಿ ಇಂದಿರಾಗಾಂಧಿ ಹತ್ಯೆಯಾಗಿದ್ದರು. ಈ ದೇಶ ಕಂಡು ಕೇಳರಿಯದ ದುರ್ಘಟನೆ ಅಂದು ನಡೆದು ಹೋಯಿತು.

ಆದರೆ ಅದೇ ದಿನ ಮಧ್ಯರಾತ್ರಿ ಇಂದಿರಾ ಹತ್ಯೆಗೆ ಪ್ರತೀಕಾರ ತೆಗೆದುಕೊಳ್ಳಲೇಬೇಕೆಂದು ಇಂದಿರಾ ಬಂಟ ಕಾಂಗ್ರೆಸ್ ನಾಯಕರಾದ ಎಚ್.ಕೆ.ಎಲ್. ಭಗತ್, ಜಗದೀಶ ಟೈಟ್ಲರ್, ಸಜ್ಜನಕುಮಾರ್, ಧರಂದಾಸ್ ಶಾಸ್ತ್ರಿ ಸಿಖ್ಖರ ಮಾರಣ ಹೋಮಕ್ಕೆ ಸ್ಕೆಚ್ ಹಾಕಿದರು. ಮರುದಿನ ಅಂದರೆ ನವೆಂಬರ್ ಒಂದರಂದು ಈ ದೇಶದ ರಾಜಧಾನಿ ಕ್ರೂರಾತಿಕ್ರೂರ, ಬರ್ಬರ, ಪೈಶಾಚಿಕ ನರಮೇಧಕ್ಕೆ ಮೂಕಸಾಕ್ಷಿಯಾಗಬಹುದು ಎಂದು ಯಾರೂ ಕನಸು ಮನಸ್ಸಿನಲ್ಲಿಯೂ ಊಹಿಸಿರಲಿಲ್ಲ.

1984 anti sikh riot delhi daryaganj (6)ಬೆಳಕು ಹರಿಯುತ್ತಿದ್ದಂತೆ ದಿಲ್ಲಿಯಲ್ಲಿ ಕುದಿ ಜ್ವಾಲಾಮುಖಿ ಸಿಡಿಯಲು ಸಿದ್ಧವಾಗಿತ್ತು. ‘ಇಂದಿರಾ ಹತ್ಯೆಗೆ ಸಿಖ್ಖರು ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರಂತೆ, ಸಿಖ್ಖರ ಮನೆಯಲ್ಲಿ ಹಬ್ಬದ ವಾತಾವರಣವಂತೆ, ವಿಜಯೋತ್ಸಾಹಕ್ಕೆ ಸಿಖ್ಖರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರಂತೆ, ದಿಲ್ಲಿ ಹಾಗೂ ಪಂಜಾಬಿನ ಗುರುದ್ವಾರಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆಯಂತೆ…’ ಎಂಬ ಗಾಳಿ ಸುದ್ದಿ ದಿಲ್ಲಿಯ ಗಲ್ಲಿಗಲ್ಲಿಗಳಲ್ಲಿ ಹರಡಲಾರಂಭಿಸಿತು. ಕ್ಷಣಾರ್ಧದಲ್ಲಿ ಈ ಸುದ್ದಿ ಕಾಳ್ಗಿಚ್ಚಿನಂತೆ ಆವರಿಸಿತು. ‘ಖೂನ್ ಕಾ ಬದಲಾ ಖೂನ್‌’ (ರಕ್ತಕ್ಕೆ ರಕ್ತದಿಂದಲೇ ಉತ್ತರ) ನೀಡಬೇಕೆಂದು ಕಾಂಗ್ರೆಸ್ಸಿಗರು ಮಧ್ಯರಾತ್ರಿಯ ಸಿದ್ಧತೆಯಿಂದ ತಯಾರಾಗಿ ನಿಂತಿದ್ದರು. ಕೈಯಲ್ಲಿ ಕಬ್ಬಿಣದ ಸಲಾಕೆ, ಲಾಠಿ, ಸೈಕಲ್ ಚೈನು, ಮಚ್ಚು, ಲಾಂಗು, ಪೆಟ್ರೋಲ್ ಬಾಂಬು, ಕೆರೋಸಿನ್ ಕ್ಯಾನುಗಳನ್ನು ಹಿಡಿದು ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು, ಗೂಂಡಾಗಳು ಸಿಖ್ಖರೇ ಹೆಚ್ಚಾಗಿರುವ ವಠಾರ, ಬಡಾವಣೆಗಳ ಮೇಲೆ ಏಕಾಏಕಿ ದಾಳಿ ಮಾಡಿದರು. ಸಿಖ್ಖರು ಹೆಚ್ಚಾಗಿರುವ ದಿಲ್ಲಿಯ ತ್ರಿಲೋಕಪುರಿಯ ಕನಿಷ್ಠ ನೂರು ಮನೆಗಳ ಮೇಲೆ ದಾಳಿ ಮಾಡಿದ ಕಾಂಗ್ರೆಸ್ ಗೂಂಡಾಗಳು ಹೆಂಗಸರು, ಮಕ್ಕಳನ್ನು ಹೊರಗೆಳೆದು ಅವರನ್ನು ಅಮಾನುಷವಾಗಿ ಸಾಯಿಸಿದರು. ಮನೆಗಳಿಗೆ ಪೆಟ್ರೋಲ್ ಬಾಂಬ್ ಎಸೆದು ಸುಟ್ಟು ಹಾಕಿದರು. ಮಕ್ಕಳ ಮೈ ಮೇಲೆ ಕೆರೋಸಿನ್ ಸುರುವಿ ಬೆಂಕಿ ಹಚ್ಚಿದರು.

ಕೆಲವೇ ನಿಮಿಷಗಳಲ್ಲಿ ಈ ದಂಗೆ ಜಹಾಂಗೀರಪುರಿ, ಸುಲ್ತಾನಪುರಿ, ಕಲ್ಯಾಣಪುರಿ, ಇಂದ್ರಪುರಿ, ತುಘಲಕಾಬಾದ್ ಮತ್ತಿತರ ಪ್ರದೇಶಗಳಿಗೂ ಹಬ್ಬಿತು. ಎಚ್.ಕೆ.ಎಲ್. ಭಗತ್ ಪ್ರತಿನಿಧಿಸುವ ಪೂರ್ವದಿಲ್ಲಿ ಲೋಕಸಭಾ ಕ್ಷೇತ್ರದ ಪ್ರದೇಶಗಳಲ್ಲಿ ಅತಿಹೆಚ್ಚು ಸಿಖ್ಖರನ್ನು ಕೊಲ್ಲಲಾಯಿತು. ಈ ಪ್ರದೇಶದಲ್ಲೊಂದು ಕನಿಷ್ಠ 1500 ಸಿಖ್ಖರು ಸತ್ತರು.
ಕಾಂಗ್ರೆಸ್ ಮುನ್ಸಿಪಲ್ ಕೌನ್ಸಿಲರ್ ಆಗಿದ್ದ ಧರಂದಾಸ ಶಾಸ್ತ್ರಿ ಪೊಲೀಸ್ ಜೀಪಿನಲ್ಲಿ ಕುಳಿತು ಉದ್ರಿಕ್ತ ಕಾಂಗ್ರೆಸ್ ಕಾರ್ಯಕರ್ತರಿಗೆ ಮೈಕ್ ಮೂಲಕ ದಾಳಿಗೆ ಮಾರ್ಗದರ್ಶನ, ಸೂಚನೆ ನೀಡುತ್ತಿದ್ದ. ಈ ಶಾಸ್ತ್ರಿ ಮೈಕ್‌ನಲ್ಲಿ ‘ಸಿಖ್ಖರನ್ನು ಕಂಡಲ್ಲಿ ಬಡಿದು ಸಾಯಿಸಿ. ಮನೆ ಹೊಕ್ಕು ಧ್ವಂಸ ಮಾಡಿ. ಅವರ ಕುಲವನ್ನೇ ಸರ್ವನಾಶ ಮಾಡಿ. ನಿಮ್ಮನ್ನು ಯಾರೂ ಮುಟ್ಟದಂತೆ ನಾನು ನೋಡಿಕೊಳ್ಳುತ್ತೇನೆ. ಜೀವಸಹಿತ ಯಾರಿಗೂ ಬಚಾವ್ ಆಗಲು ಬಿಡಬೇಡಿ’ ಎಂದು ಅಬ್ಬರಿಸುತ್ತಿದ್ದ. ಭಗತ್ ಕೂಡ ‘ಒಬ್ಬನೇ ಒಬ್ಬ ಸಿಖ್ ಪಾರಾಗದಂತೆ ನೋಡಿಕೊಳ್ಳಿ. ಪೊಲೀಸರು ನಿಮ್ಮನ್ನು ಹಿಡಿಯುವುದಿಲ್ಲ. ನಿಮ್ಮ ರಕ್ಷಣೆಗೆ ನಾನಿದ್ದೇನೆ. ಕೈಗೆ ಸಿಕ್ಕದ್ದನ್ನೆಲ್ಲ ಲೂಟಿ ಮಾಡಿ. ನೀವು ಮಾಡುವ ಪ್ರತಿ ಕೊಲೆಗೂ ಬಹುಮಾನ ಕೊಡುತ್ತೇನೆ’ ಎಂದು ವೀರಾವೇಶದಿಂದ ಕಿರುಚುತ್ತಿದ್ದ. (ಈ ಸಂಗತಿಯನ್ನು ಪ್ರತ್ಯಕ್ಷದರ್ಶಿ ಸುರಜಿತ್ ಕೌರ್ ನ್ಯಾಯಮೂರ್ತಿ ರಂಗನಾಥ ಮಿಶ್ರಾ ಆಯೋಗದ ಮುಂದೆ ಹೇಳಿದ್ದಾಳೆ).

ಮಿಶ್ರಾ ಆಯೋಗದ ಮುಂದೆ ಆಕೆ ಹೇಳಿದ ಒಂದು ಪ್ರಸಂಗ-‘ನನ್ನ ಕಣ್ಣ ಮುಂದೆಯೇ ಕುಟುಂಬದ ನಾಲ್ವರು ಗಂಡಸರು ಹಾಗೂ ಐದು ಮಕ್ಕಳನ್ನು ಬರ್ಬರವಾಗಿ ಸಾಯಿಸಿದರು. ಮೂವರು ಹೆಂಗಸರೊಂದಿಗೆ ಅಸಭ್ಯವಾಗಿ ವರ್ತಿಸಿ ಅವರನ್ನು ಸಲಾಕೆಗಳಿಂದ ಬಡಿದು ಕೊಂದರು. ನಾನು ಉಸಿರು ಬಿಗಿ ಹಿಡಿದು ಅಡಗಿ ಕುಳಿತಿದ್ದೆ. ಬಂದವರು ಕೆಲಸ ಮುಗಿಸಿದ್ದೇವೆಂಬ ಕ್ರೂರ ಆವೇಶದಲ್ಲಿ ಮರಳುತ್ತಿದ್ದಾಗ ನಮ್ಮ ಹಿರಿಯ ಅಜ್ಜ ‘ಮಾಮಾಜಿ’ ನಡುರಸ್ತೆಯಲ್ಲಿ ಗಾಯಗೊಂಡು ಬಿದ್ದಿದ್ದ. ಆತ ಇನ್ನೂ ಉಸಿರಾಡುತ್ತಿದ್ದ. ಆತ ಸತ್ತಿರಬಹುದೆಂದು ಭಾವಿಸಿ ಗುಂಪು ಅಲ್ಲಿಂದ ತೆರಳಿತ್ತು. ಕೆಲವು ಮಹಿಳೆಯರು ಆತನನ್ನು ಎತ್ತಿಕೊಂಡು ಮನೆಗೆ ಕರೆತಂದರು. ಆ ಗುಂಪು ವಾಪಸ್ ಬಂತು. ಅಷ್ಟು ಗಾಯಗೊಂಡಿದ್ದರೂ ಮಾಮಾಜಿ ಎದ್ದು ನಿಂತು ‘ಮನೆಯೊಳಗೆ ಕಾಲಿಟ್ಟರೆ ಹುಷಾರ್, ನನ್ನ ಹೊಟ್ಟೆಯಲ್ಲಿ ಜೀವ ಇರೋ ತನಕ ಈ ಮಹಿಳೆಯರನ್ನು ಮುಟ್ಟಲು ಬಿಡೋಲ್ಲ’ ಎಂದು ಗರ್ಜಿಸಿದರು. ಆತನನ್ನು ಸುತ್ತುವರಿದ ಪುಂಡರು ಸಿಕ್ಕಾಪಟ್ಟೆ ಥಳಿಸಿದರು. ಯಾವನೋ ಒಬ್ಬ ಕೂಗುತ್ತಾ ಬಂದು ಮಾಮಾಜಿ ತಲೆಗೆ ಲಾಠಿಯಿಂದ ಹೊಡೆದ. ಅವರು ಅಲ್ಲಿಯೇ ಸತ್ತರು.’

ಜಗದೀಶ ಟೈಟ್ಲರ್ ಗುರುದ್ವಾರಗಳ ಮೇಲೆ ಕಣ್ಣಿಟ್ಟಿದ್ದ. ಪುಲ್ಬಾಂಗಶ್ ಪ್ರದೇಶದಲ್ಲಿರುವ ಗುರುದ್ವಾರದೊಳಗೆ ದಾಳಿಯಿಟ್ಟ ಕಾಂಗ್ರೆಸ್ ಕಾರ್ಯಕರ್ತರು ಕೈಗೆ ಸಿಕ್ಕಿದ್ದಲ್ಲೆವನ್ನೂ ಬಿಸಾಡಿ ಧ್ವಂಸ ಮಾಡಿದರು. ಇಬ್ಬರು ಸಿಖ್ಖರನ್ನು ಸಜೀವವಾಗಿ ಗುರುದ್ವಾರದೊಳಗೇ ಸುಟ್ಟರು. ಈ ಘಟನೆ ಟೈಟ್ಲರ್ ಮುಂದೆಯೇ ನಡೆದು ಹೋಯಿತು. ಟೈಟ್ಲರ್ ತನ್ನ ಲಫಂಗ ಚೇಲಾಗಳಿಗೆ ‘ಗುರುದ್ವಾರದೊಳಗೆ ಸಿಖ್ಖರು ಅಡಗಿ ಕುಳಿತಿರುವ ಸಾಧ್ಯತೆಯಿದೆ. ಅವರನ್ನು ಹೊರಬರಲು ಬಿಡಬೇಡಿ. ಅಲ್ಲಿಯೇ ಸಾಯಿಸಿ’ ಎಂದು ಆದೇಶ ಕೊಡುತ್ತಿದ್ದ. ಸಿಖ್ಖರು ಪ್ರಾಣ ಉಳಿಸಿಕೊಳ್ಳಲು ಪಟಕಾ ಬಿಸಾಕಿ, ಗಡ್ಡ ಬೋಳಿಸಿಕೊಂಡು ತಲೆಮರೆಸಿಕೊಳ್ಳಲು ಹರಸಾಹಸ ಪಡುತ್ತಿದ್ದರು. ಅಂಥವರನ್ನೆಲ್ಲ ಬೆನ್ನಟ್ಟಿ ಬಡಿಯುವಂತೆ ಟೈಟ್ಲರ್ ಸೂಚಿಸುತ್ತಿದ್ದ. ತಮ್ಮ ನೆಚ್ಚಿನ ನಾಯಕಿಯ ಹತ್ಯೆಗೆ ಮುಯ್ಯಿ ತೀರಿಸಿಕೊಂಡು, ತಾವೇ ಹೆಚ್ಚು ಸಿಖ್ಖರನ್ನು ಕೊಂದವರೆಂದು ಫೋಸು ಕೊಟ್ಟು ಹುತಾತ್ಮ ನಾಯಕಿಯ ಪರಮಭಕ್ತರಂತೆ ಬೀಗುತ್ತಾ, ಹೊಸ ನಾಯಕನ (ರಾಜೀವ್ ಗಾಂಧಿ) ಕೃಪಾಕಟಾಕ್ಷಕ್ಕೆ ಒಳಗಾಗುವ ಹೊಂಚು ಹವಣಿಕೆ ಹೆಣೆಯುವುದರಲ್ಲಿ ಕಾಂಗ್ರೆಸ್ ನೇತಾರರು ತಲ್ಲೀನರಾಗಿದ್ದರು.

30edi_nooreನಾನಾವತಿ ಆಯೋಗದ ಎದುರು ಸಲ್ಲಿಸಲಾದ ಅಫಿಡವಿಟ್ ಹಾಗೂ ಹೇಳಿಕೆಗಳನ್ನು ಓದಿದರೆ ಭಯಾನಕ ಸತ್ಯದರ್ಶನವಾಗುತ್ತದೆ. ಅಕ್ಟೋಬರ್ 31ರ ರಾತ್ರಿ (ಇಂದಿರಾ ಹತ್ಯೆಯ ದಿನ) ಕಾಂಗ್ರೆಸ್ ಶಾಸಕ ರಾಮ್‌ಪಾಲ್ ಸರೋಜ್ ಮನೆಯಲ್ಲಿ ಪಕ್ಷದ ನಾಯಕರ ಸಭೆ ನಡೆಯಿತು. ಈ ಸಭೆಯಲ್ಲಿ ಇದೇ ಹತ್ಯಾಕಾಂಡದ ರೂಪುರೇಷೆಗಳಿಗೆ ಸ್ಕೆಚ್ ಹಾಕಲಾಯಿತು. ಇಡೀ ಸಿಖ್ ಸಮುದಾಯಕ್ಕೆ ತಕ್ಕ ಪಾಠ ಕಲಿಸುವಂತೆ ಸ್ಪಷ್ಟ ಸೂಚನೆ, ನಿರ್ದೇಶನ ನೀಡುವ ನಿರ್ಧಾರಕ್ಕೆ ಬರಲಾಯಿತು. ಹತ್ಯೆಗೆ ಬೇಕಾದ ಸಾಮಾನು ಸರಂಜಾಮು, ಅಸ್ತ್ರ, ಹತ್ಯಾರಗಳನ್ನು ತಕ್ಷಣ ಸಂಗ್ರಹಿಸುವಂತೆ ಸೂಚಿಸಲಾಯಿತು. ಸಿಖ್ಖರನ್ನು ಹಾಗೂ ಅವರ ಮನೆಗಳನ್ನು ಸುಟ್ಟು ಹಾಕಬೇಕೆಂದು ನಿರ್ಧರಿಸಲಾಯಿತು. ದಿಲ್ಲಿಯ 281 ಪೆಟ್ರೋಲ್ ಬಂಕ್‌ಗಳಿಂದ ರಾತ್ರೋರಾತ್ರಿ ಜಬರ್‌ದಸ್ತಿನಿಂದ ಪೆಟ್ರೋಲನ್ನು ಸಂಗ್ರಹಿಸಲಾಯಿತು. ಶೀಘ್ರ ಹೊತ್ತಿ ಉರಿಯುವ ಬಿಳಿಪುಡಿ ಮೂಟೆಗಳನ್ನು ರಾಸಾಯನಿಕ ಕಾರ್ಖಾನೆಗಳಿಂದ ಸಂಗ್ರಹಿಸಿ ಇಡೀ ದಿಲ್ಲಿಯಲ್ಲಿ ಹಂಚಲು ತೀರ್ಮಾನಿಸಲಾಯಿತು. ಕೆರೋಸಿನ್ ಪೂರೈಸುವಂತೆ ಎಲ್ಲ ಡಿಪೋಗಳಿಗೆ ಸೂಚನೆ ಹೋಯಿತು. ಮತದಾರರ ಪಟ್ಟಿಯ ನೆರವಿನಿಂದ ಸಿಖ್ಖರ ಮನೆಗಳನ್ನು ಗುರುತಿಸಲಾಯಿತು. ಸುಮ್ಮನಿರಿ ಅಥವಾ ಗಲಭೆಕೋರರಿಗೆ ನೆರವಾಗಿ ಎಂಬ ಮೌಖಿಕ ಆದೇಶ ಪೊಲೀಸರಿಗೆ ಹೋಯಿತು. ಹರಿಯಾಣದ ಜನರನ್ನು ದಿಲ್ಲಿಗೆ ಕರೆ ತರಲು ರೈಲೊಂದನ್ನು ಆಯೋಜಿಸಲಾಗಿತ್ತು. ಅದೇ ರೀತಿ ದಿಲ್ಲಿ ಸಾರಿಗೆ ನಿಗಮ (ಡಿಟಿಸಿ) ಬಸ್ಸುಗಳಲ್ಲಿ ಹರಿಯಾಣದಿಂದ ಕ್ರಿಮಿನಲ್‌ಗಳನ್ನು ಕರೆತರಲು ನಿರ್ಧರಿಸಲಾಯಿತು. ದಿಲ್ಲಿಯ ಎಂಬತ್ತಕ್ಕೂ ಹೆಚ್ಚು ಕೊಳಗೇರಿ ನಿವಾಸಿಗಳು ಹಾಗೂ ಅಕ್ರಮ ಕಾಲೋನಿಗಳ ನಿವಾಸಿಗಳನ್ನು ಈ ಗುಂಪಿನ ಜತೆ ಸೇರಿಕೊಳ್ಳುವಂತೆ ಸೂಚಿಸಲಾಯಿತು. ಎಲ್ಲರನ್ನೂ ಒಟ್ಟುಗೂಡಿಸಿದ ನಂತರ ಆಯಾ ಗುಂಪುಗಳಿಗೆ ಸಿಖ್ಖರನ್ನು ಕೊಚ್ಚಿ ಹಾಕುವಂತೆ ಪ್ರಚೋದನಕಾರಿ ಭಾಷಣಗಳಿಂದ ಕಾಂಗ್ರೆಸ್ ನಾಯಕರು ಹುಮ್ಮಸ್ಸು ತುಂಬಿದರು. ಏಕಾಏಕಿ ಗಲಭೆಯುಂಟಾಗಲು ಗಾಳಿಸುದ್ದಿ, ವದಂತಿಗಳನ್ನು ವ್ಯವಸ್ಥಿತವಾಗಿ ಹಬ್ಬಿಸಲಾಯಿತು. ಪೊಲೀಸರು, ಆಡಳಿತಶಾಹಿ ಹಾಗೂ ಸರ್ಕಾರ ತಮ್ಮದೇ ಆಗಿರುವುದರಿಂದ ನಿಮಗೇನೂ ಆಗದು ಎಂದು ಧೈರ್ಯ ತುಂಬಲಾಯಿತು. ಯಾವುದೇ ಸ್ಥಳದಲ್ಲಿ ಇಬ್ಬರು ಸಿಖ್ಖರು ಸ್ವಯಂ ರಕ್ಷಣೆ ಅಥವಾ ಗುರುದ್ವಾರದ ರಕ್ಷಣೆಗೆ ಒಂದಾಗಿದ್ದಾರೆ ಎಂಬ ಸುದ್ದಿ ಬರುತ್ತಿದ್ದಂತೆ ಗಲಭೆಕೋರರಿಗೆ ನೆರವಾಗಲು ತಕ್ಷಣ ಪೊಲೀಸರನ್ನು ಅಲ್ಲಿಗೆ ಕಳಿಸಲಾಗುತ್ತಿತ್ತು. ಪೊಲೀಸ್ ನೆರವು ಅಪೇಕ್ಷಿಸಿ ಠಾಣೆಗೆ ಬಂದವರಿಗೆ ಲಾಠಿ ರುಚಿ ತೋರಿಸುವಂತೆ ಪೊಲೀಸರಿಗೆ ತಿಳಿಸಲಾಗಿತ್ತು. ಸ್ವರಕ್ಷಣೆಗಾಗಿ ಶಸ್ತ್ರಾಸ್ತ್ರ ತೆಗೆದ ಸಿಖ್ಖರನ್ನು ಬಂಧಿಸಲಾಯಿತು. ಕೊಲೆ ಆರೋಪ ಹೊರಿಸಲಾಯಿತು. ಪೊಲೀಸರ ಈ ಬಗೆಯ ವರ್ತನೆಯನ್ನು ‘ಶೌರ್ಯ’ ಎಂದು ಬಣ್ಣಿಸಿ, ರಾಷ್ಟ್ರಪತಿಗಳಿಂದ ಶೌರ್ಯ ಪದಕ ಕೊಡಿಸಲಾಯಿತು. ಮಹಾರಾಣಿಬಾಗ್ ಪ್ರದೇಶದಲ್ಲಿ ಪೊಲೀಸರೇ ಸಿಖ್ಖರ ಮೇಲೆ ಗುಂಡು ಹಾರಿಸಿದರು. ಸಾಮ್ರಾಟ್ ಎನ್‌ಕ್ಲೇವ್‌ನಲ್ಲಿ ಪೊಲೀಸರು ಸಿಖ್ಖರ ಮೇಲೆ ರೈಫಲ್‌ನಿಂದ ಐವತ್ತೆರಡು ಸುತ್ತು, ರಿವಾಲ್ವರ್‌ನಿಂದ ಒಂಬತ್ತು ಸುತ್ತು ಗುಂಡು ಹಾರಿಸಿದರು. ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಸಮ್ಮುಖದಲ್ಲಿಯೇ ಸ್ಟೇಷನ್ ಹೌಸ್ ಆಫೀಸರ್ ತನ್ನ ರಿವಾಲ್ವರ್‌ನಿಂದ ಮೂವರು ಸಿಖ್ಖರನ್ನು ಗುಂಡು ಹಾರಿಸಿ ಸಾಯಿಸಿದ. ತಮ್ಮ ಮನೆ ಮೇಲೆ ಪೆಟ್ರೋಲ್ ಬಾಂಬ್ ಎಸೆದು ಮನೆಯಲ್ಲಿದ್ದವರನ್ನೆಲ್ಲ ಸಾಯಿಸಲು ಗಲಭೆಕೋರರು ಮುಂದಾದಾಗ ಸೇನೆಯಲ್ಲಿದ್ದ ಕ್ಯಾಪ್ಟನ್ ಮನಮೋಹನಸಿಂಗ್ ತಲ್ವಾರ್ ತಮ್ಮ ರಿವಾಲ್ವರ್‌ನಿಂದ ಐವರನ್ನು ಸಾಯಿಸಿದರು.

ಪೊಲೀಸರು ಕ್ಯಾಪ್ಟನ್ ತಲ್ವಾರ್ ವಿರುದ್ಧ ಕೊಲೆ ಕೇಸು ದಾಖಲಿಸಿದರು. ಕ್ಯಾಪ್ಟನ್ ತಲ್ವಾರ್‌ನನ್ನು ಬಂಧಿಸಿದ್ದಕ್ಕಾಗಿ ಡಿಸಿಪಿ ಅಮೋದ್‌ಕಾಂತ್‌ಗೆ ರಾಷ್ಟ್ರಪತಿ ಪದಕ ನೀಡಿ ಗೌರವಿಸಲಾಯಿತು! ನವೆಂಬರ್ ಒಂದರಂದು ಒಂದೇ ದಿನ ತ್ರಿಲೋಕಪುರಿಯಲ್ಲಿ ಸುಮಾರು ಐನೂರು ಸಿಖ್ಖರನ್ನು ಕೊಂದು ಹಾಕಿದರೂ ಒಬ್ಬನೇ ಒಬ್ಬ ಗಲಭೆಕೋರನ್ನು ಪೊಲೀಸರು ಬಂಧಿಸಲಿಲ್ಲ! ಈ ನರಮೇಧದಲ್ಲಿ 145 ಪೊಲೀಸ್ ಅಧಿಕಾರಿಗಳು ನೇರವಾಗಿ ಭಾಗಿಯಾಗಿದ್ದರು. ಒಬ್ಬನಿಗೆ ಪಿಂಚಣಿ ಕಟ್ ಆಗಿದ್ದು ಬಿಟ್ಟರೆ ಅವರ ಕೂದಲು ಸಹ ಕೊಂಕಲಿಲ್ಲ.
***
ನಾನಾವತಿ ಆಯೋಗದ ಕಡತ ಹೇಳುವ ಕತೆಗಳನ್ನು ಕೇಳಬೇಕು.

ಇಂದಿರಾ ಪಾರ್ಥಿವ ಶರೀರವನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಯಲ್ಲಿಡಲಾಗಿತ್ತು. ಶ್ರದ್ಧಾಂಜಲಿ ಸಲ್ಲಿಸಲು ಅಂದಿನ ರಾಷ್ಟ್ರಪತಿ ಗ್ಯಾನಿ ಜೈಲ್‌ಸಿಂಗ್ ಅಲ್ಲಿಗೆ ತೆರಳಿದಾಗ ಅವರ ವಾಹನದ ಮೇಲೆ ಕಲ್ಲೆಸಲಾಯಿತು. ದೇಶದ ರಾಷ್ಟ್ರಪತಿ ಅಂದು ಬಚಾವ್ ಆಗಿ ಬಂದಿದ್ದೇ ಪವಾಡ!

ಪಂಜಾಬ್ ಹಾಗೂ ಸಿಂಧ್ ಬ್ಯಾಂಕಿನ ಅಧ್ಯಕ್ಷ ಎನ್.ಎಸ್. ಬಸಂತ್ ಅವರ ಅಳಿಯ ಕರ್ತಾರ್‌ಸಿಂಗ್ ವಿರ್ದಿಯನ್ನು ಸಜೀವ ಸುಟ್ಟು ಹಾಕಲಾಗಿತ್ತು. ಬಸಂತ್ ತಮ್ಮ ಪ್ರಭಾವ ಹಾಗೂ ಸ್ನೇಹ ಬಳಸಿ ರಾಷ್ಟ್ರಪತಿಯವರನ್ನು ಸಂಪರ್ಕಿಸಿದರು. ಅಂತ್ಯಕ್ರಿಯೆಗೆ ನೆರವಾಗುವಂತೆ ಅಂಗಲಾಚಿದರು. ದಿಲ್ಲಿಯಲ್ಲಿ ಪರಿಸ್ಥಿತಿ ಎಷ್ಟೊಂದು ಹದಗೆಟ್ಟಿತ್ತೆಂದರೆ, ವಿರ್ದಿ ಹೆಣಕ್ಕೆ ಗೌರವಯುತ ಅಂತ್ಯಸಂಸ್ಕಾರ ನೆರವೇರಿಸಲು ರಾಷ್ಟ್ರಪತಿಯವರಿಗೂ ಸಾಧ್ಯವಾಗಲಿಲ್ಲ. ಅಂದು ಜೈಲ್‌ಸಿಂಗ್ ಗೃಹಸಚಿವರನ್ನು ಸಂಪರ್ಕಿಸಲು ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ. ‘ನಾನು ಈ ದೇಶದ ರಾಷ್ಟ್ರಪತೀನಾ? ನನ್ನ ನಿಯಂತ್ರಣದಲ್ಲಿ ಏನಾದರೂ ಇವೆಯಾ?’ ಎಂದು ಜೈಲ್‌ಸಿಂಗ್ ತಮ್ಮ ಸಹೋದ್ಯೋಗಿಗಳ ಮುಂದೆ ಅಸಹಾಯಕತೆ ತೋಡಿಕೊಳ್ಳುತ್ತಿದ್ದರಂತೆ. ರಾಷ್ಟ್ರಪತಿ ಭವನದ ಹೊರಕ್ಕೆ ಬರಲು ಜೈಲ್‌ಸಿಂಗ್ ಭಯಪಟ್ಟಿದ್ದರಂತೆ.

1984 anti sikh riots delhi (4)‘ಸಿಖ್ ಹತ್ಯಾಕಾಂಡವನ್ನು ನಿಲ್ಲಿಸಲು ಕ್ರಮಕೈಗೊಳ್ಳಿ’ ಎಂದು ಪ್ರಮುಖ ಸಿಖ್ ಮುಖಂಡರು ಜೈಲ್‌ಸಿಂಗ್‌ರನ್ನು ಭೇಟಿ ಮಾಡಿ ಮನವಿ ಮಾಡಿದರೆ, ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಲು ತಮಗೆ ಯಾವುದೇ ಅಧಿಕಾರ ಇಲ್ಲವೆಂದು ಹೇಳಿದರು. (ಈ ಸಂಗತಿಯನ್ನು ಖ್ಯಾತ ಪತ್ರಕರ್ತ ಪತ್ವಂತ್‌ಸಿಂಗ್ ನಾನಾವತಿ ಆಯೋಗದ ಎದುರು ಹೇಳಿದ್ದಾರೆ.) ‘ಅಮಾಯಕ ಸಿಖ್ಖರನ್ನು ಕಂಡ ಕಂಡೆಲ್ಲ ಸಾಯಿಸುತ್ತಿದ್ದಾರೆ. ಈ ರಕ್ತಪಾತ ತಡೆಗಟ್ಟಿ’ ಎಂದಾಗ ಜೈಲ್‌ಸಿಂಗ್ ಸುಮ್ಮನೆ ಕುಳಿತು ಮೇಲಕ್ಕೆ ನೋಡುತ್ತಿದ್ದರಂತೆ.

‘ಯಾವಾಗ ಸೇನೆಯನ್ನು ಕರೆಯಿಸುತ್ತೀರಿ. ಇಲ್ಲದಿದ್ದರೆ ಪರಿಸ್ಥಿತಿ ನಿಯಂತ್ರಣಕ್ಕೆ ಬರೊಲ್ಲ’ ಎಂದು ರಾಷ್ಟ್ರಪತಿಗೆ ಬಾಂಗ್ಲಾ ಯುದ್ಧದ ಹೀರೋ ಲೆಫ್ಟಿನೆಂಟ್ ಜನರಲ್ ಜಗಜಿತ್‌ಸಿಂಗ್ ಅರೋರ ಒತ್ತಾಯಿಸಿದರೆ, ‘ಗೃಹ ಸಚಿವ ಪಿ.ವಿ. ನರಸಿಂಹರಾವ್ ಅವರೊಂದಿಗೆ ನಾನು ಸಂಪರ್ಕದಲ್ಲಿ ಇಲ್ಲ’ ಎಂದರಂತೆ. ‘ನಾನು ಅಸಹಾಯಕ. ನನ್ನಿಂದ ಏನನ್ನೂ ನಿರೀಕ್ಷಿಸಬೇಡಿ. ಒಬ್ಬ ಸಿಖ್ಖನಾಗಿ ಹತ್ಯಾಕಾಂಡ ನೋಡಿಯೂ ಏನೂ ಮಾಡದ ಸ್ಥಿತಿಯಲ್ಲಿದ್ದೇನೆ’ ಎಂದು ಕೈ ಚೆಲ್ಲಿದರಂತೆ. ಗೃಹ ಸಚಿವ ನರಸಿಂಹರಾಯರನ್ನು, ಖ್ಯಾತ ನ್ಯಾಯವಾದಿ ರಾಮ್ ಜೇಠ್ಮಲಾನಿ ಭೇಟಿ ಮಾಡಿ ‘ಸೇನೆಯನ್ನು ಕರೆಯಿಸಿ. ನರಮೇಧವನ್ನು ತಡೆಗಟ್ಟಿ’ ಎಂದು ಆಗ್ರಹಿಸಿದರೆ, ‘ಆಯ್ತು ನೋಡ್ತೇನೆ’ ಎಂದು ಹೇಳಿ ಕೋಣೆ ಸೇರಿಕೊಂಡು ಚಿಲಕ ಹಾಕಿಕೊಂಡರಂತೆ.

ದಿಲ್ಲಿಯಲ್ಲಿ ಸೇನೆ ಉಪಸ್ಥಿತಿ ಇತ್ತಾದರೂ ಅದನ್ನು ಬಳಸಲಿಲ್ಲ. ಅಲ್ಲದೇ ಅಕ್ಟೋಬರ್ 31ರ ರಾತ್ರಿ ಐದು ಸಾವಿರ ಸೈನಿಕರನ್ನು ಮೀರತ್‌ನಿಂದ ದಿಲ್ಲಿಗೆ ಕರೆಯಿಸಿಕೊಂಡರೂ ಅವರನ್ನು ಕರ್ತವ್ಯಕ್ಕೆ ನಿಯೋಜಿಸಲಿಲ್ಲ. ಈ ಸಂಗತಿಯನ್ನು ಅಂದಿನ ಸೇನಾ ಮುಖ್ಯಸ್ಥ ಎ.ಎಸ್. ವೈದ್ಯ, ರಂಗನಾಥ ಮಿಶ್ರಾ ಆಯೋಗದ ಎದುರು ಸಲ್ಲಿಸಿದ ಅಫಿಡವಿಟ್‌ನಲ್ಲಿ ಹೇಳಿದ್ದಾರೆ. ‘ಸೇನೆಯನ್ನು ನಿಯೋಜಿಸಿದ್ದರೆ ಕನಿಷ್ಠ ಪರಿಸ್ಥಿತಿ ನಿಯಂತ್ರಿಸಬಹುದು ಎಂದು ನಾವು ರಾಷ್ಟ್ರಪತಿಗೆ ಮನವರಿಕೆ ಮಾಡಿಕೊಟ್ಟಿದ್ದೆವು’ ಎಂದು ಜೈಲ್‌ಸಿಂಗ್ ಆಪ್ತ ಕಾರ್ಯದರ್ಶಿ ತರಲೋಚನಸಿಂಗ್ ಹಾಗೂ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಪಿ. ಜಿ. ಗವಾಯ್ ಹೇಳಿದ್ದರು. ಆದರೆ ಸೇನೆ ಕಳುಹಿಸಕೂಡದೆಂದು ರಾಷ್ಟ್ರಪತಿಯವರ, ಗೃಹ ಸಚಿವರ ಕೈಯನ್ನು ಕಟ್ಟಿ ಹಾಕಿದವರು ಯಾರು ಎಂಬುದನ್ನು ಊಹಿಸುವುದು ಕಷ್ಟವೇನಲ್ಲ. ಇಂದಿರಾ ಹತ್ಯೆ ನಡೆದು ಮೂರು ದಿನಗಳ ಬಳಿಕ ಸೇನೆಯನ್ನು ನಿಯೋಜಿಸಿದಾಗಲೇ ಪರಿಸ್ಥಿತಿ ಹತೋಟಿಗೆ ಬಂದಿದ್ದು. ನವೆಂಬರ್ ಒಂದರ ದಿನವೇ ಕರೆಯಿಸಿದ್ದರೆ ಎರಡು ಸಾವಿರ ಅಮಾಯಕ ಸಿಖ್ಖರು ಬದುಕುಳಿಯುತ್ತಿದ್ದರು. ಅವರನ್ನು ಸಾಯಿಸುವುದೇ ಉದ್ದೇಶವಾಗಿರುವಾಗ ಸೇನೆಯನ್ನು ಕರೆಯಿಸುವುದುಂಟಾ?

1984 anti Sikh riots delhi sikh Burnt-Alive (7)ಕಾಂಗ್ರೆಸ್ ನಾಯಕರೆಲ್ಲ ಮುಂದಿನ ಪ್ರಧಾನಿಯ ಪೀಠಾರೋಹಣ, ತಮಗೆ ಸಿಗಬಹುದಾದ ಮಂತ್ರಿ ಪದವಿ, ಖಾತೆ, ಆಯಕಟ್ಟಿನ ಜಾಗದ ಬಗ್ಗೆ ತಲೆಕೆಡಿಸಿಕೊಂಡಿದ್ದರು. ಸಿಖ್ ನರಮೇಧದ ಬಗ್ಗೆ ಅವರಲ್ಲಿ ವಿಷಾದವಿದ್ದಂತಿರಲಿಲ್ಲ. ದೇಶ ರಕ್ಷಣೆಯಲ್ಲಿ ಎಲ್ಲರಿಗಿಂತ ಮುಂಚೂಣಿಯಲ್ಲಿರುವ, ಅಪ್ಪಟ ದೇಶಾಭಿಮಾನಿಗಳಾದ ಸಿಖ್ಖರು ತಮ್ಮದಲ್ಲದ ತಪ್ಪಿಗೆ, ಯಾರದೋ ಹುಸಿ ಕೋಪಕ್ಕೆ, ಇನ್ಯಾರನ್ನೋ ಮೆಚ್ಚಿಸುವ ಹಗಲುವೇಷದ ರಾಜಕಾರಣಕ್ಕೆ ಬೀದಿ ಹೆಣವಾಗಿ ಬಿದ್ದಿದ್ದರು. ನಿರುಪದ್ರವಿಗಳು, ಅಮಾಯಕರು, ದೇಶಭಕ್ತರು ಎಂದೇ ಹೆಸರಾದ ಒಂದು ಸಮುದಾಯ ಅವಮಾನ, ಅನುಮಾನಗಳ ದಳ್ಳುರಿಗೆ ಸಿಲುಕಿ ತತ್ತರಿಸಿ ಹೋಯಿತು. ಇಂದಿರಾನಿಷ್ಠೆ ಮೆರೆಯುವುದಕ್ಕಾಗಿ ಸಿಖ್ಖರನ್ನು ನಡೆಸಿಕೊಂಡ ರೀತಿಯಿದೆಯಲ್ಲ, ಅದು ಮಾನವಂತ ಸಮಾಜ ತಲೆತಗ್ಗಿಸುವಂಥದ್ದು.

ಈ ಘಟನೆಯಿಂದ ದೇಶಕ್ಕೆ ದೇಶವೇ ತಲ್ಲಣಿಸಿದರೆ ಪ್ರಧಾನಿಯಾಗುವ ಧಾವಂತದಲ್ಲಿದ್ದ ರಾಜೀವಗಾಂಧಿ ಹನಿ ಕಂಬನಿಯನ್ನು ಮಿಡಿಯಲಿಲ್ಲ. ತಾಯಿಯ ನಿಧನದ ಶೋಕದಲ್ಲಿದ್ದಿರಬಹುದು ಎಂದು ಭಾವಿಸೋಣ ಅಂದ್ರೆ, ಪ್ರಧಾನಿಯಾಗಿ ಮೊದಲ ಸಾರ್ವಜನಿಕ ಸಭೆಯನ್ನುದ್ದೇಶಿಸಿ ರಾಜೀವಗಾಂಧಿ ಹೇಳಿದ್ದೇನು ಗೊತ್ತಾ?’When a mighty tree falls, it is only natural that the earth around it does shake a little (ದೊಡ್ಡಮರ ಧರೆಗುರುಳಿದಾಗ ಅದರ ಸುತ್ತಲಿನ ಭೂಮಿ ತುಸು ಕಂಪಿಸುವುದು ಸಹಜ) ಎಂದು ಬಿಟ್ಟರು. ಹಾಗೆ ಹೇಳುವ ಮೂಲಕ ಸಿಖ್ ನರಮೇಧವನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡರು. ಅಷ್ಟೇ ಅಲ್ಲ, ಸಿಖ್ ಹತ್ಯಾಕಾಂಡದಲ್ಲಿ 2733 ಮಂದಿ ಸತ್ತಿಲ್ಲ. ಸತ್ತವರು ಕೇವಲ 450 ಮಂದಿ ಎಂದರು. ಅದೇನು ಅಂಥ ಹೇಳಿಕೊಳ್ಳುವ ಮಹಾದುರ್ಘಟನೆ ಅಲ್ಲ ಬಿಡಿ ಎಂಬುದು ಅವರ ಮಾತಿನ ಇಂಗಿತವಾಗಿತ್ತು.

ಇಷ್ಟೇ ಆಗಿದಿದ್ದರೆ ಪರವಾಗಿರಲಿಲ್ಲ. ಸಿಖ್ ಹತ್ಯಾಕಾಂಡದಲ್ಲಿ ಪ್ರಮುಖ ರೂವಾರಿಗಳಂತೆ ಕೆಲಸ ಮಾಡಿದವರನ್ನೆಲ್ಲ ರಾಜೀವ್‌ಗಾಂಧಿ ಒಂದಿಲ್ಲೊಂದು ರೀತಿಯಲ್ಲಿ ಪುರಸ್ಕರಿಸಿದ್ದರು. ಸಾಮಾನ್ಯ ಮುನ್ಸಿಪಲ್ ಕೌನ್ಸಿಲರ್ ಆಗಿದ್ದ ಧರಂದಾಸ ಶಾಸ್ತ್ರಿಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿ ಸಂಸದರನ್ನಾಗಿ ಮಾಡಿದರು. ಎಚ್.ಕೆ. ಎಲ್. ಭಗತ್ ಹಾಗೂ ಜಗದೀಶ ಟೈಟ್ಲರ್‌ಗೆ ಮಂತ್ರಿಮಂಡಲದಲ್ಲಿ ಸಚಿವರನ್ನಾಗಿ ಸೇರಿಸಿಕೊಂಡರು. ಸಜ್ಜನಕುಮಾರ ಸಂಸದನಾದ. ಕಂಬಿ ಎಣಿಸಬೇಕಾದವರೆಲ್ಲ ಅಧಿಕಾರದ ಪ್ರಭಾವಲಯದಲ್ಲಿ ವಿರಾಜಮಾನರಾದರು. ತ್ರಿಲೋಕ್‌ಪುರಿಯಲ್ಲಿ ಸುಮಾರು ಐನೂರು ಸಿಖ್ಖರ ಕಗ್ಗೊಲೆಗೆ ಕಾರಣನಾಗಿದ್ದ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಸೂರ್‌ವೀರ್ ಸಿಂಗ್ ತ್ಯಾಗಿ ಅಡಿಷನಲ್ ಪೊಲೀಸ್ ಕಮೀಷನರ್ ಆಗಿ ಭಡ್ತಿ ಪಡೆದ. ಗಲಭೆಯಲ್ಲಿ ಸಕ್ರಿಯನಾಗಿದ್ದ ತ್ಯಾಗಿಯ ಮೇಲಿದ್ದ ಡಿಎಸ್‌ಪಿ ದೇವಾದಾಸ್‌ಗೆ ಸ್ಪೆಷಲ್ ಕಮೀಷನರ್ ಎಂದು ಭಡ್ತಿ ನೀಡಲಾಯಿತು. ಈ ವಿಷಯದಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಾರಿಗೂ ಮೋಸ ಮಾಡಲಿಲ್ಲ. ಎಲ್ಲರಿಗೂ ಅವರವರ ‘ಅನುಪಮ ಸೇವೆ’ಯನ್ನು ಪರಿಗಣಿಸಿ ‘ಬಹುಮಾನ’ ನೀಡಿ ನಿಯತ್ತು ಮೆರೆಯಿತು.

***

Anti Sikh Riots 1984ಆನಂತರ ಶುರುವಾಯಿತು Cover up, ಕಣ್ಣೊರೆಸುವ, ಪ್ರಕರಣಗಳನ್ನು ಮುಚ್ಚಿ ಹಾಕುವ, ತಪ್ಪಿತಸ್ಥರನ್ನು ಬಚಾವ್ ಮಾಡುವ ಕಾರ್ಯಾಚರಣೆ. ರಾಜೀವ್‌ಗಾಂಧಿ ಸರ್ಕಾರ ಸಿಖ್ಖರ ನರಮೇಧ ವಿಚಾರಣೆಗೆ ನ್ಯಾಯಮೂರ್ತಿ ರಂಗನಾಥ ಮಿಶ್ರಾ ನೇತೃತ್ವದಲ್ಲಿ ಆಯೋಗ ರಚಿಸಿತು. ಈ ಆಯೋಗ ವಿಚಾರಣೆ ನಡೆಸಿ ಪ್ರಮುಖ ಸಾಕ್ಷಿಗಳ ಹೇಳಿಕೆಗಳನ್ನೆಲ್ಲ ದಾಖಲಿಸಿಕೊಂಡಿತು. ಮುಂದೆ ಕೆಲವೇ ದಿನಗಳಲ್ಲಿ ಈ ಸಾಕ್ಷ್ಯಗಳು, ಮಹತ್ವದ ದಾಖಲೆಗಳೆಲ್ಲ ಕಾಂಗ್ರೆಸ್ ಮುಖಂಡ ಹಾಗೂ ನರಮೇಧದ ರೂವಾರಿ ಸಜ್ಜನಕುಮಾರ್ ಮನೆಯಲ್ಲಿ ಸಿಕ್ಕವು! ಪತ್ರಕರ್ತರನ್ನು ಹಾಗೂ ಸಾರ್ವಜನಿಕರನ್ನು ಹೊರಗಿಟ್ಟು ಈ ಆಯೋಗ ಕಲಾಪ ನಡೆಸಿತು. ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದು ಮಿಶ್ರಾ ಆಯೋಗದ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಿದರೆ ಅದು ಕಳ್ಳೆಕಾಯಿ ಕಟ್ಟಲು ಯೋಗ್ಯ ಎಂದು ಮನವರಿಕೆಯಾಯಿತು. ಮೂರು ದಿನಗಳಲ್ಲಿ ಎರಡೂ ಮುಕ್ಕಾಲು ಸಾವಿರ ಮಂದಿ ಬರ್ಭರವಾಗಿ ಕಗ್ಗೊಲೆಯಾದರೆ ಒಬ್ಬೇ ಒಬ್ಬನನ್ನು ತಪ್ಪಿತಸ್ಥ ಎಂದು ಹೆಡೆಮುರಿ ಕಟ್ಟಿ ತಂದು ನಿಲ್ಲಿಸಲು ಆಯೋಗಕ್ಕೆ ಸಾಧ್ಯವಾಗಲಿಲ್ಲ! ಕೆಲ ವರ್ಷಗಳ ಬಳಿಕ ನ್ಯಾಯಮೂರ್ತಿ ರಂಗನಾಥ ಮಿಶ್ರಾ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜ್ಯಸಭಾ ಸದಸ್ಯರಾದರು!

ನರಮೇಧ ಸಂದರ್ಭದಲ್ಲಿ ದಿಲ್ಲಿ ಪೊಲೀಸರ ಸಾಕ್ಷ್ಯ, ಕರ್ತವ್ಯಲೋಪದ ಬಗ್ಗೆ ತನಿಖೆ ನಡೆಸಲು ದಿಲ್ಲಿಯ ಹೆಚ್ಚುವರಿ ಪೊಲೀಸ್ ಕಮೀಷನರ್ ವೇದಮಾರ್ವ ನೇತೃತ್ವದಲ್ಲಿ ಆಯೋಗ ರಚಿಸಲಾಯಿತು. ಇವರು ಕಾಂಗ್ರೆಸ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದರು. ವಾಸನೆ ಹಿಡಿದ ಕೇಂದ್ರ ಗೃಹ ಸಚಿವರು ಅರ್ಧಕ್ಕೆ ಆ ಆಯೋಗವನ್ನು ಬರ್ಖಾಸ್ತುಗೊಳಿಸಿದರು. ಇವರು ಸಂಗ್ರಹಿಸಿದ ಮಾಹಿತಿ, ದಾಖಲೆ, ಸಾಕ್ಷ್ಯ, ಕಾಗದ ಪತ್ರಗಳನ್ನು ಮುಂದೆ ರಚಿಸಲಾದ ಆಯೋಗಕ್ಕೆ ಹಸ್ತಾಂತರಿಸಲೇ ಇಲ್ಲ. ಮಾರ್ವ ಆಯೋಗ ಸಂಗ್ರಹಿಸಿದ ಸಾಕ್ಷ್ಯಗಳನ್ನೆಲ್ಲ ನಾಶಪಡಿಸಲಾಯಿತು. ಇದಾದ ಬಳಿಕ ಜೈನ್-ಬ್ಯಾನರ್ಜಿ ಆಯೋಗ ರಚಿಸಲಾಯಿತು. ಅದರ ವರದಿಯೂ ಕಳ್ಳೇಕಾಯಿ ಕಟ್ಟುವುದಕ್ಕೆ ಹೇಳಿ ಮಾಡಿಸಿದಂತಿತ್ತು. ಮುಂದೆ ಕಪೂರ್-ಮಿತ್ತಲ್ ನೇತೃತ್ವದ ಆಯೋಗ ಬಂತು. ಅದು ಕಡಿದು ಕಟ್ಟೇ ಹಾಕಿದ್ದು ಅಷ್ಟೇ. ಎಷ್ಟು ಮಂದಿ ಸತ್ತಿದ್ದಾರೆಂಬುದನ್ನು ನಿರ್ಧರಿಸಲು ಅಹುಜಾ ಸಮಿತಿಯನ್ನು ರಚಿಸಲಾಯಿತು. ಆನಂತರ ಪೊಟ್ಟಿ ರೋಷಾ ಸಮಿತಿ ಬಂತು. ಆ ಸಮಿತಿಗೆ ಆರು ತಿಂಗಳು ತುಂಬುತ್ತಿದ್ದಂತೆ ಜೈನ್-ಅಗರವಾಲ ಆಯೋಗ ಅಸ್ತಿತ್ವಕ್ಕೆ ಬಂತು. ಇದು ಮೂರು ವರ್ಷ ಕೆಲಸ ಮಾಡಿ ವರದಿ ನೀಡಿತು. ಅದರಿಂದ ಏನೂ ಆಗಲಿಲ್ಲ. ಎಷ್ಟು ಮಂದಿ ಸತ್ತಿದ್ದಾರೆಂಬುದನ್ನು ನಿರ್ಧರಿಸಲು ಅಹುಜಾ ಸಮಿತಿ ನೇಮಕವಾಯಿತು. ದಿಲ್ಲಿಯಲ್ಲಿ 2733 ಮಂದಿ ಸಿಖ್ಖರನ್ನು ಸಾಯಿಸಲಾಗಿದೆ ಎಂದು ಈ ಸಮಿತಿ ಹೇಳಿತು. ಸತ್ತವರು ಬರೀ 450 ಮಂದಿ ಎಂದು ಹೇಳುತ್ತಿದ್ದ ಕಾಂಗ್ರೆಸ್ ಕ್ಷಮೆಯಾಚಿಸಲಿಲ್ಲ. ಆನಂತರ ಧಿಲ್ಲಾನ್ ಸಮಿತಿ, ನರೂಲಾ ಸಮಿತಿ ಹಾಗೂ ನಾನಾವತಿ ಆಯೋಗಗಳು ರಚಿತವಾದವು. ಸಿಖ್ ನರಮೇಧ ತನಿಖೆಗೆ ಇಲ್ಲಿಯವರೆಗೆ ದಾಖಲೆ ಸಂಖ್ಯೆಯಲ್ಲಿ ಅಂದರೆ ಒಟ್ಟು ಹತ್ತು ಆಯೋಗ/ಸಮಿತಿಗಳು ರಚಿತವಾದರೂ ಪರಿಣಾಮ ಮಾತ್ರ ಶೂನ್ಯ! ಇದನ್ನು Mother of All Cover up ಎಂದು ಕರೆಯಬಹುದು. ನರಸಿಂಹರಾಯರು ಪ್ರಧಾನಿಯಾಗಿದ್ದಾಗ ಇಡೀ ತನಿಖೆಯ ದಿಕ್ಕು ತಪ್ಪಿಸಲು ಶತಪ್ರಯತ್ನ ಮಾಡಿದರು. ಕೋರ್ಟ್‌ಗೆ ಆರೋಪಿಗಳ ಪಟ್ಟಿಯನ್ನು ಸಲ್ಲಿಸಲು ಅವರು ಸಿಬಿಐಗೆ ಅವಕಾಶ ಕೊಡಲೇ ಇಲ್ಲ. ಹದಿನಾಲ್ಕು ವರ್ಷಗಳ ನಂತರ ಪ್ರಾಥಮಿಕ ಮಾಹಿತಿ ವರದಿ (FIR) ಸಲ್ಲಿಸಲಾಯಿತು. ‘ಸಿಖ್‌ರನ್ನು ಕಂಡಲ್ಲಿ ಸಾಯಿಸಿ’ ಎಂದು ಗರ್ಜಿಸಿದ್ದ ಸಜ್ಜನಕುಮಾರ್ ನಿರ್ದೋಷಿಯೆಂದು ಕೋರ್ಟ್ 2012ರಲ್ಲಿ ತೀರ್ಪು ನೀಡಿತು.

ಲೂಧಿಯಾನದ ಸುರೀಂದರ್ ಸಿಂಗ್ ಎಂಬಾತ ನಾನಾವತಿ ಆಯೋಗದ ಮುಂದೆ ಸಜ್ಜನಕುಮಾರನನ್ನು ಗಲಭೆ ನಡೆಯುವಾಗ ಖುದ್ದು ಕಂಡಿದ್ದೇನೆ’ ಎಂದು ಸಾಕ್ಷ್ಯ ಹೇಳಿದ. ಈ ರೀತಿ ಹದಿನೆಂಟು ಮಂದಿ ಸಾಕ್ಷ್ಯ ಹೇಳಿದರು. ಆದರೆ ಅವನ ಒಂದು ರೋಮ ಕೀಳಲು ಆಗಲಿಲ್ಲ. 2009ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಜಗದೀಶ ಟೈಟ್ಲರ್ ಹಾಗೂ ಸಜ್ಜನಕುಮಾರ್‌ಗೆ ಟಿಕೆಟ್ ನೀಡಲು ಮುಂದಾಗಿತ್ತು. ಆಗ ಸಿಬಿಐ ಕೂಡ ಟೈಟ್ಲರ್‌ಗೆ ಕ್ಲೀನ್ ಚಿಟ್ ಕೊಟ್ಟಿತ್ತು.

imagesಸಿಖ್ ಹತ್ಯಾಕಾಂಡ ನಡೆದು ಮೂವತ್ತು ವರ್ಷಗಳಾದವು. ನರಮೇಧದ ರೂವಾರಿಗಳೆಲ್ಲ ಆರಾಮವಾಗಿದ್ದಾರೆ. ಕೆಲಸಕ್ಕೆ ಬಾರದ 30 ಮಂದಿಗೆ ಶಿಕ್ಷೆಯಾಗಿದೆ. ಪ್ರತಿ ವರ್ಷ ಅಕ್ಟೋಬರ್ 31 ಬಂದರೆ ಕಾಂಗ್ರೆಸ್ಸಿಗರು ಇಂದಿರಾ ಹೆಸರಿನಲ್ಲಿ ಶೋಕಗರೆಯುತ್ತಾರೆ. ಸಿಖ್‌ರ ಸಾವಿಗೆ ಹನಿ ಕಣ್ಣೀರು ಚೆಲ್ಲುವುದಿಲ್ಲ. ಯಾರೂ ಅವರನ್ನು ನೆನಪು ಮಾಡುವುದಿಲ್ಲ.

***

ಈಗ ಹೇಳಿ ರಾಹುಲ್ ಗಾಂಧಿಯವರೇ,

ನೀವು ಅರ್ನಾಬ್ ಗೋಸ್ವಾಮಿ ಸಂದರ್ಶನದಲ್ಲಿ ಹೇಳಿದ್ದು ಹಸಿ ಹಸಿ ಸುಳ್ಳಲ್ಲವಾ? ಗುಜರಾತ್ ನರಮೇಧಕ್ಕೂ, ಸಿಖ್ ಹತ್ಯಾಕಾಂಡಕ್ಕೂ ವ್ಯತ್ಯಾಸವಿದೆ. ಯಾಕೆಂದರೆ ಸಿಖ್ ಹತ್ಯಾಕಾಂಡ ತಡೆಯಲು ಕಾಂಗ್ರೆಸ್ ಸರ್ಕಾರ ಎಲ್ಲ ಕ್ರಮಕೈಗೊಂಡಿತು ಎಂದು ಸತ್ಯದ ನೆತ್ತಿ ಮೇಲೆ ಹೊಡೆದಂತೆ ಹೇಳಿದಿರಲ್ಲ. ನಿಮಗೆ ಮನಸ್ಸಾದರೂ ಹೇಗೆ ಬಂತು? ಯಾವ ಮುಖ ಇಟ್ಟುಕೊಂಡು ಆ ಹಸಿ ಸುಳ್ಳು ಹೇಳಿದಿರಿ? ಸಿಖ್‌ರಿಗೆ ನ್ಯಾಯ ಸಿಕ್ಕಿದೆಯಾ ಅಂತ ಕೇಳಿದರೆ ಕೆಲವು ಕಾಂಗ್ರೆಸ್ಸಿಗರಿಗೂ ಶಿಕ್ಷೆಯಾಗಿದೆ ಅಂತೀರಲ್ಲ, ಹೇಳಿ ಯಾವ ಕಾಂಗ್ರೆಸ್ಸಿಗರಿಗೆ ಶಿಕ್ಷೆಯಾಗಿದೆ? ಕೆಲವು ಕಾಂಗ್ರೆಸ್ಸಿಗರು ಹತ್ಯಾಕಾಂಡದಲ್ಲಿ ಪಾಲ್ಗೊಂಡಿರಬಹುದು ಎಂದಾಗ ಅವರ್ಯಾರು ಎಂದು ಪದೇ ಪದೆ ಸಂದರ್ಶಕರು ಕೇಳಿದರೂ ನೀವು ಹಾರಿಕೆ ಉತ್ತರ ಕೊಟ್ಟು ಹೆಸರು ಹೇಳದೇ ತಪ್ಪಿಸಿಕೊಂಡಿದ್ದೇಕೆ? ಸಿಖ್ ಹತ್ಯಾಕಾಂಡಕ್ಕೆ ಕ್ಷಮೆಯಾಚಿಸುತ್ತೀರಾ ಎಂದು ಕೇಳಿದ್ದಕ್ಕೆ ನಾನು ಗಲಭೆಯಲ್ಲಿ ಭಾಗವಹಿಸಿರಲಿಲ್ಲ ಎಂದು ಪಲಾಯನ ಮಾಡುತ್ತೀರಲ್ಲ, ನಿಮ್ಮಲ್ಲಿ ಪಶ್ಚಾತ್ತಾಪ, ಕನಿಕರವೇ ಇಲ್ಲವಾ? ಜಗತ್ತಿನ ಮುಂದೆ ಎಲ್ಲ ವಿವರಗಳಿದ್ದರೂ, ಸಿಖ್ ನರಮೇಧದಲ್ಲಿ ಕಾಂಗ್ರೆಸ್ ಪಾತ್ರವಿರಲಿಲ್ಲ ಅಂತೀರಲ್ಲ ಯಾರಿಗೆ ಮಂಕುಬೂದಿ ಎರಚುತ್ತಿದ್ದೀರಿ?

ಶೇಮ್!

ವಿಶ್ವೇಶ್ವರ ಭಟ್
vbhat@me.com

51 Comments

 1. ನಿಜಕ್ಕೂ ಸಿಖ್ ಹತ್ಯಾಕಾಂಡ ಹೃದಯ ವಿದ್ರಾವಕ ಘಟನೆ. ಸತ್ಯದರ್ಶನವನ್ನ ಅಷ್ಟೇ ಮನ ಕಲಕುವಂತೆ ಚಿತ್ರಿಸಿದ್ದೀರ. ನಮ್ಮಂತ ಯುವ ಓದುಗಾರರಿಗೆ ಈ ತರಹದ ಅದೆಷ್ಟೋ ವಿಷಯಗಳ ಮಾಹಿತಿ ಇರದಿರುವುದರಿಂದ ಈ ಬರಹ ನಿಜಕ್ಕೂ ನಮ್ಮಂಥವರಿಗೆ ಉತ್ತಮ ಮಾಹಿತಿ ನೀಡಿರುವಂತದ್ದು. ೧೯೪೭ ರಲ್ಲಿ ಸ್ವಾತಂತ್ಯ ಸಿಕ್ಕಿದ್ದು ನಮಗೋ, ನಮ್ಮ ದೇಶಕ್ಕೋ ಅಥವ ಇನ್ಯಾರಿಗೋ ಅನ್ನುವುದೆ ತಿಳಿಯದಾಗಿದೆ. ನಿಜಕ್ಕೂ ಶೇಮ್..

  ಉತ್ತಮ ಬರಹ. ನಿಮ್ಮಿಂದ ಹೀಗೆ ಇನ್ನಷ್ಟು ಬರಹಗಳ ನಿರೀಕ್ಷೆಯಲ್ಲಿರುತ್ತೇನೆ.
  ಶುಭವಾಗಲಿ.
  -ಗಣೇಶ ಖರೆ.

  • ಛೇ.. ಅದೆಷ್ಟು ಸತ್ಯವನ್ನು ಮುಚ್ಚಿದ್ದಾರೆ… ಇದು ಕೇವಲ ಸಿಖ್ಖರ ಹತ್ಯಾಕಾಂಡವಲ್ಲ,,
   ಇದೊಂದು ವ್ಯವಸ್ಥಿತ ಕಗ್ಗೊಲೆ..!!
   ಆಗ ತಾನೇ ಹಾಲು ಕುಡಿಯುವುದನ್ನು ಬಿಟ್ಟಿದ್ದ ಮಗುವಿಗೆ ಇದೆಲ್ಲಾ ಗೊತ್ತಿರಲಿಕ್ಕಿಲ್ಲ,,
   ರಾಹುಲ್ ಅವರನ್ನು ಕ್ಷಮಿಸಿ..
   ಮಕ್ಕಳು ನಡೆಯುವುದನ್ನು ಕಲಿಯುವಾಗ ಎಡವಿ ಬೀಳುವುದು ಸಹಜವೆಂದು ಸುಮ್ಮನಾಗಬಹುದು…
   ಆದರೆ ದೇಶವನ್ನು ಮುನ್ನಡೆಸುತ್ತೇನೆ ಎಂದು ಮುಂದೆ ಬಂದಿರುವ ನಾಯಕ(!!?) ನ ಬಾಯಿಂದ ಬಂದಿರುವ ಇಂತಹ ಮಾತುಗಳು..ನಿಜಕ್ಕೂ ದೇಶದ ಸಾವಿರಾರು ಸಿಖ್ಖರಿಗೆ ಮಾಡಿದ ಅವಮಾನ
   ಅಲ್ಲಾ.., ಇವರ ತಾಯಿ ಸತ್ತರೆ ದೊಡ್ಡ ದುರಂತ ದೊಡ್ಡ ಮರ ಧರೆಗೆ ಉರುಳಿದಂತೆ… ಅದೇ ಹತ್ಯಾಕಾಂಡದಲ್ಲಿ ಸಾವಿರಾರು ವಿವಾಹಿತ ಮಹಿಳೆಯರು ಸತ್ತರಲ್ಲಾ.. ಅವರ ಮಕ್ಕಳ ಬಗ್ಗೆ ಇವರಿಗೆ ಕಿಂಚಿತ್ತೂ ಕನಿಕರವಿಲ್ಲವೇ?
   ನಿಮ್ಮ ಲೇಖನ ಹರಿದು ಕಳೆದು ಹೋಗಿ ಕಣ್ಮರೆಯಾಗಿದ್ದ ಇತಿಹಾಸದ ಪ್ರಮುಖ ಪುಟವೊಂದು ಮತ್ತೆ ದೊರಕಿದಂತಾಗಿದೆ.. ಇದಂತೂ ಸತ್ಯ!!

   • ಛೇ.. ಅದೆಷ್ಟು ಸತ್ಯವನ್ನು ಮುಚ್ಚಿದ್ದಾರೆ… ಇದು ಕೇವಲ ಸಿಖ್ಖರ ಹತ್ಯಾಕಾಂಡವಲ್ಲ,,
    ಇದೊಂದು ವ್ಯವಸ್ಥಿತ ಕಗ್ಗೊಲೆ..!!
    ಆಗ ತಾನೇ ಹಾಲು ಕುಡಿಯುವುದನ್ನು ಬಿಟ್ಟಿದ್ದ ಮಗುವಿಗೆ ಇದೆಲ್ಲಾ ಗೊತ್ತಿರಲಿಕ್ಕಿಲ್ಲ,,
    ರಾಹುಲ್ ಅವರನ್ನು ಕ್ಷಮಿಸಿ..
    ಮಕ್ಕಳು ನಡೆಯುವುದನ್ನು ಕಲಿಯುವಾಗ ಎಡವಿ ಬೀಳುವುದು ಸಹಜವೆಂದು ಸುಮ್ಮನಾಗಬಹುದು…
    ಆದರೆ ದೇಶವನ್ನು ಮುನ್ನಡೆಸುತ್ತೇನೆ ಎಂದು ಮುಂದೆ ಬಂದಿರುವ ನಾಯಕ(!!?) ನ ಬಾಯಿಂದ ಬಂದಿರುವ ಇಂತಹ ಮಾತುಗಳು..ನಿಜಕ್ಕೂ ದೇಶದ ಸಾವಿರಾರು ಸಿಖ್ಖರಿಗೆ ಮಾಡಿದ ಅವಮಾನ
    ಅಲ್ಲಾ.., ಇವರ ತಾಯಿ ಸತ್ತರೆ ದೊಡ್ಡ ದುರಂತ ದೊಡ್ಡ ಮರ ಧರೆಗೆ ಉರುಳಿದಂತೆ… ಅದೇ ಹತ್ಯಾಕಾಂಡದಲ್ಲಿ ಸಾವಿರಾರು ವಿವಾಹಿತ ಮಹಿಳೆಯರು ಸತ್ತರಲ್ಲಾ.. ಅವರ ಮಕ್ಕಳ ಬಗ್ಗೆ ಇವರಿಗೆ ಕಿಂಚಿತ್ತೂ ಕನಿಕರವಿಲ್ಲವೇ?
    ನಿಮ್ಮ ಲೇಖನ ಹರಿದು ಕಳೆದು ಹೋಗಿ ಕಣ್ಮರೆಯಾಗಿದ್ದ ಇತಿಹಾಸದ ಪ್ರಮುಖ ಪುಟವೊಂದು ಮತ್ತೆ ದೊರಕಿದಂತಾಗಿದೆ.. ಇದಂತೂ ಸತ್ಯ!!

 2. Dear Mr. Bhatt,
  You are Exactly Right,

 3. mourya •

  ರಾಹುಲ್ರವರ ಮಾತುಗಳನ್ನು ನಂಬಬಹುದೇ? ಇವರ ಇಂತ ವರಸೆಗಳು ಹೊಸದೆನಲ್ಲವಲ್ಲ..ದೇಶಕ್ಕೆ ಮುಸ್ಲಿಂ ಭಯೋತ್ಪಾದನೆಗಿಂತ ಹಿಂದೂ ಭಯೋತ್ಪಾದನೆಯೇ ಅತ್ಯಂತ ಅಪಾಯಕಾರಿ ಎಂದಿದ್ದ ಮಹಾನ್ ಚಿಂತಕ ಇವರು.ಬಹುಶಃ ಮತಾಂತರ ವಿರೊದಿಸುವ ಹಿಂದೂಗಳು ಇವರಿಗೆ ಭಯೋತ್ಪಾದಕರಂತೆ ಅನ್ನಿಸಿರಬೇಕು.ಇನ್ನು ಸಿಖ್ ಹತ್ಯಾಕಾಂಡದ ಬಗ್ಗೆ ಇವರ ಮಾತುಗಳು ದಾವೂದ್ ನ ಬಾಯಲ್ಲಿ ದೇಶಪ್ರೇಮದ ಮಾತುಗಳು ಬಂದಂತೆ ..ಎಲ್ಲರು ನಂಬಲೇಬೇಕು.ನಮ್ಮ ಜನ ನಂಬದೆ ಇರುತ್ತಾರೆಯೇ? ಮುಂದಿನ ಚುನಾವಣೆಯಲ್ಲಿ ಕಡೆಯ ಪಕ್ಷ 100 MP ಗಳನ್ನಾದರೂ ಕಾಂಗ್ರೆಸ್ಸ್ ಗೆ ಕೊಟ್ಟೆ ಕೊಡುತ್ತಾರೆ…

 4. beena123 •

  ಚೆನ್ನಾಗಿ ವಿಶ್ಲೇಷಿಸಿದ್ದೀರಿ .

  ಪಾಪ ರಾಹುಲ್ ಗೆ ಅಷ್ಟೊಂದು ಪ್ರಶ್ನೆಗಳನ್ನು ಕೇಳಿದರೆ ಹೇಗೆ ಉತ್ತರ ಕೊಡುತ್ತಾರೆ.

  ಅವರಿಗೆ ಹೇಳಿಕೊಟ್ಟ ರೈಮ್ಸ್ ನನ್ನು ಯಥಾ ವತ್ತಾಗಿ ಹೇಳಿದ್ದಾರೆ. ಅವರಿಗೆ ” ಜಾಕ್ ಅಂಡ್ ಜಿಲ್ ವೆಂಟ್ ಅಪ್ ದಿ ಹಿಲ್ ..” ಅಷ್ಟೇ ಹೇಳುವುದಕ್ಕೆ ಗೊತ್ತು. ಜಾಕ್ ಅಂಡ್ ಜಿಲ್ ಯೇಕೆ ಹಿಲ್ ಕಡಗೆಯೇ ಹೋದರು ಎಂದು ಪ್ರಶ್ನಿಸಿದರೆ – ಪಾಪ ಎಲ್ಲಿ ಉತ್ತರ ಕೊಡುತ್ತಾನೆ ! ಅದಕ್ಕೆ ಉತ್ತರ ಮ್ಯಾಡಂ(?) ಹೇಳಿ ಕೊಟ್ಟಿಲ್ಲ.

  ಆದ್ದರಿಂದಲೇ ತಬ್ಬಿಬ್ಬಾಗಿ ಉತ್ತರಿಸಿದ್ದು. ಇನ್ನು ಈ ಮನುಷ್ಯ ದೇಶವನ್ನು ಹೇಗೆ ಆಳುತ್ತಾನೋ ನೋಡಬೇಕು !

 5. bhaaratheeya •

  Ee lekhana oodidadare Hindu aada nange rakta kudiyotte. Aadare obba sikh aagi adhikaarada melina vyamoohakke Soniya, Rahul mattu avara kutumbadavara kaalu nekkoo naayiya haage ee deshada ‘pradhaani’ yaagiruva Maouni Mohana Singh ninna janmakke nanna edagaala ekkadininda nadubeedili hodeyabeku… Ade Rahul anno katte vayasssaadaru buddhi belide irovana kelage kelasa maadalu ivanige hinjarike ilwanthe…

 6. namagondu nyaya, pararigondu nyaya…. all politicians are doing this! identifying the sincere one is extremely difficult in the present situation for the common man mainly due to media mess.

 7. Hi Sir,

  This is Kallesh and i am the continious reader of ur article, news paper. Today (30/01/2014) i read article about SIKKH HATYAKANDA and what irresponsible Rahul gandhi explaining nonsense answers to interview with Arnab goswamy.
  if we look at all these incidents onething is miracle, from last 60 years (from nehru to till manmohan government) we saw many scams, anti social activities but still congress government is ruling our country under the guidence of GANDHI family.
  i dont understand where our system lies.

  seeking your response,

  Thanks,
  Kallesh

 8. Nice article about Sikhs.. thank you for remembering history for us……
  Keep it up sir good luck…..

  – Guru Raja

 9. Wow…. wonderful,classy and touching write up from editor’s side…..
  You have written it in a beautiful way…..
  Rahul’s answers were very immature and he was so uncomfortable during
  the interview

  Veena Ananth

 10. Bengaluru Huduga •

  Dear Modi, Just say “I will investigate sikh massacre, and I will give justice to Sikh community”… I will convert minimum 100 congress vote to BJP…..

 11. Bengaluru Huduga

  Dear Modi, Just say “I will investigate sikh massacre, and I will give justice to Sikh community”… I will convert minimum 100 congress vote to BJP…..

 12. Dear sir,

  Its a Fentastic article and focused about real truth .

 13. rajesh •

  Good article , please expose modi also…

 14. mantu patil •

  ಎಂತಹ ಲೇಖನ ಗುರುಗಳೆ, ಒಂದು ಕ್ಷಣ 1984 ರ ಆ ಅಮಾಯಕ ಸಿಖ್ಖ್ ರ ನರಮೇದ ಕಣ್ಣ ಮುಂದೆ ಬಂದಂತಾಯಿತು ನಿಮ್ಮ ಲೇಖನ ಓದಿ. ಈ ನರಮೇದದಲ್ಲಿ ಆಗಿನ ಕಾಂಗ್ರೆಸ್ ಮುಖಂಡರ ನೇರ ಕೈವಾಡವಿತ್ತು ಎಂಬುದು ಇಡಿ ಜಗತ್ತಿಗೆ ಗೊತ್ತಿದ್ದರು, ಜಾಣ ರಾಹುಲ ಗಾಂದಿಯವರು ನಾನು ಗಲಭೆಯಲ್ಲಿ ಭಾಗವಹಿಸಿಲ್ಲ ಎಂದು ಪಲಾಯನ ಮಾಡುವುದು ಎಷ್ಟು ಸರಿ.

 15. I had tears in my eyes after reading and seeing the pictures..

 16. Dear sir
  I just read your article in Kannada prabha news paper, now Im realizing that how much the congress party had done mischievous and cruel things on Sikh community, and to India. It is really a motivational and the fact that every Indian should know about this.
  Sir i request you to write this article in leading news papers of India. And also requesting you to write about an article on Gujarat riots.

  Thank you sir

  Your follower
  Adarsha B S

 17. Sir…
  Nimma lekhana odi kanniru banthu …istu savistaravagi samagra mahitiyannu odugarige needida nimage krathajnate galu. Tappitastarige shiksheyagi madidavara athmakke shanti sigali endu haraisuttene.
  – Prathima

 18. If a young boy like me (20 year old) can understand what is the truth, then whom are they trying to convince that they are very innocent and honest…??

 19. anandp •

  these congress members are so worst they can do anything for power really im crying by reading this article how cruel human beings are in forest lion and tigers hunt deer and other animals but man not like that they hunt humans only really Rahul Gandhi is not fit to rule our nation he has to quit indian common man are helpless power less :-

 20. manjunath •

  True mirror of Sikhs carnage…..very good article

 21. c vidyashankara •

  ತನ್ನ ತಟ್ಟೆಯಲ್ಲಿ ಕತ್ತೆ ಸತ್ತಿದ್ದರೂ ಬೇರೆಯವರ ತಟ್ಟೆಯಲ್ಲಿನ ನೊಣ ಸತ್ತಿರುವ ವಿಷಯ ಹೇಳುವವರು ಜಾಸ್ತಿ ಜನ. ತಪ್ಪನ್ನು ಒಪ್ಪಿಕೊಳ್ಳುವುದರಲ್ಲಿ ದೊಡ್ಡ ಗುಣ ಇದೆ. ಅದರ ಜೊತೆಗೆ ಆಶ್ವಾಸನೆ ಜನಕ್ಕೆ ನೆಮ್ಮಧಿ ಕೊಡ ಬಹುದು ಹೊರತು, ಆ ವಿಷಯದಿಂದ ವಿಮುಖರಾಗುವೂದರಲ್ಲಿ ಅವರ ಮರ್ಮ ತಿಳಿಯುತ್ತದೆ.

 22. ರಂಗಸ್ವಾಮಿ ಮೂಕನಹಳ್ಳಿ . •

  ಭಟ್ಟರಿಗೆ ನಮಸ್ತೆ ,

  ಹಲವು ವರ್ಷ ದ ಹಿಂದೆ ಹೋಟೆಲ್ ಉಗಾಂಡಾ ಎನ್ನುವ ಚಿತ್ರ ನೋಡಿದ್ದೇ , ಜನಾಂಗಿಯ ದ್ವೇಷ , ರಸ್ತೆ ಎಲ್ಲಡೆ ಹೆಣ .., ಚಿತ್ರ ವೀಕ್ಷಿಸಿ ಹಲವು ದಿನ ನಾವೇಕೆ (ಮನುಷ್ಯರು ?) ಇಷ್ಟು ಕ್ರೂರ ? ಎಂದು ಪ್ರಶ್ನಿಸಿ ಕೊಂಡಿದ್ದೆ .., ನಮ್ಮ ದೇಶದಲ್ಲೇ ಇಂತಹ ದುರಂತ ನಡೆದಿದೆ ( ಸಿಕ್ ನೆರಮೇಧ ಎಲ್ಲರೂ ಕೇಳಿದ್ದವೆ , ಇಷ್ಟು ಡೀಟೇಲ್ ಗೊತ್ತಿರಲಿಲ್ಲ ) ಎಂದು ವಿವರವಾಗಿ ತಿಳಿಸಿದಕ್ಕೆ ತುಂಬಾ ಥ್ಯಾಂಕ್ಸ್ .

  ರಂಗಸ್ವಾಮಿ ಮೂಕನಹಳ್ಳಿ .

 23. H V •

  ಭಟ್ರೇ, ಆ ಮೂರ್ಖನಿಂದ ಇನ್ನೇನು ಉತ್ತರಗಳನ್ನು ನಿರೀಕ್ಷಿಸಬಹುದು? ಪಾಪ ಅವ್ನ ಅಮ್ಮ ಇತಿಹಾಸ ಪರೀಕ್ಷೆಗೆ ತಯಾರಿ ನಡೆಸಿ ಕಳ್ಸಿದ್ಲು, ಅಲ್ಲಿ ಅರ್ನಬ್ ಗಣಿತ ಪರೀಕ್ಷೆ ತಗೊಂಡರು, ಪಾಪ ಪಪ್ಪು ಫೇಲ್ ಆದ ಅಸ್ಟೆ… ಕೇಳಿದ ಪ್ರಶ್ನೆ ಕೂಡ ಅರ್ಥ ಆಗ್ತಾ ಇರ್ಲಿಲ್ಲ ಅಂತ ಮೂರ್ಖ ಅವ್ನು. ಏನ್ ಕೇಳಿದ್ರು ಕೊಟ್ಟಿರೋ ಉತ್ತರ – Women Empowerment , Candidate Selection , RTI, Process Change, ಇಸ್ಟೇ.. ಇಂಥ ದಡ್ಡ ಶಿಖಾಮಣಿಯನ್ನು ಪ್ರಧಾನಿ ಅಭ್ಯರ್ಥಿ ಅಂತಿದ್ದಾರಲ್ಲ, ಥೂ…

 24. Oh sir it was a Fine reporting on a past holocast that submerges the jalianwalabaag messacre .sir how can a congress man have ‘manassu’ that is abstract for sheepish bird brains. They have body and hand to lift When asked. By their leader. With the entry of gandhi in congress others became sheep and gandhi alone a man and thinker. He professed non-violence But for their leader they can do worst criminal acts be it stonning savarkars or sikhs. Pvn was equally Bad for cornering power. Rahul another lier from the same group. The strange thing is supreme court couldnot unearth the dastardly crime Inspite of its vast powers. In case of godhra it shifted venue of trial, the entire prosecution and punished hundreds of people. Ur article is to be preserved for the information on the subject. Thanks

  -Venkata Giriappa

 25. I was shocked to know the truth about Sikh Riot.
  My question to everyone, why can’t we, the people of India, stand for the justice ?
  It’s always just talks, articles, interviews and blaming. Why can’t we go out and do the things to be done ?
  People are afraid about the risks if they speak up. For how long, how long, we will tie the cloth on our eyes and wait for the people, elected by us, will provide the justice ??
  We, Indians, should do something. We, youths, future of India, should do something.
  30 years of wait for a clean and shut case is enough. Now at least, lets wake up and do something.

 26. Sir,

  Excellent article… But currently the article is readable in Kannada and this has to reach/make noise among the English and Hindi readers, for the reason that people who were not born in 1984 or who were toddlers during that time either are not told about it or are unaware of it. Lot of the history is been written to the whims and fancies of the political parties and the desire is that truth prevailed at all times… I request you to please have the article translated to English and Hindi so that it really touches the heart of people…

 27. ಧನ್ಯವಾದಗಳು ಶ್ರೀ ವಿಶ್ವೇಶ್ವರ ಭಟ್ ರವರೆ,

  ಈ ಅಂಕಣದಿಂದ ಸಾಕಷ್ಥು ವಿಚಾರಗಳು ತಿಳಿಯಿತು ಮತ್ತು ಕಾಂಗ್ರೇಸಿನ ಮೇಲೆ ಅಸಹ್ಯ ಭಾವನೆ ಬಂತು. ನೀವು ತಿಳಿಸಿರುವ ಇಷ್ಟು ವಿಷಯಗಳಲ್ಲಿ ಒಂದೂ ಕೂಡ ಆ ಮಗುವಿಗೆ(RGಯೇ ಹೇಳುವಂತೆ) ತಿಳಿದಿದ್ದಾಗ ಸಂದರ್ಶನದಲ್ಲಿ ಈ ವಿಚಾರವಾಗಿ ಮಾತನಾಡಬಾರದಿತ್ತು. ಕಾಂಗ್ರೇಸ್ ಎಂದರೆ ಏನು ಎಂಬುದನ್ನು ಬಹಳ ಚೆನ್ನಾಗಿ ಅರ್ಥವಾಗುವಂತೆ ಬರೆದಿದ್ದೀರ.

  ವಂದನೆಗಳು
  ಫುರುಷೋತ್ತಮ ರಾಜು

 28. moral compass is absent from the congress coterie. All the right noises are being made to breath in a fresh lease of life to GOP in the coming Loksabha election. your esteemed article is an eyeopener for the present day indian nationals.

 29. ಇನ್ನು ಮೇಲಾದ್ರೂ ನಮ್ಮ ಕರ್ನಾಟಕದ ಬುದ್ದಿಜೀವಿ, ಗ್ನಾನಪೀಠಿಗಳು “ನರಹಂತಕ, ಕೋಮುವಾದಿ, ನಾಯಿಮರಿ” ಅಂತ ಅಗಾಗ ಬಡಬಡಿಸುವುದನ್ನು ಬಿಟ್ಟು ತಿಕ ಮುಚ್ಚಿಕೊಂಡಿರಲಿ.

 30. I have read the book “I accuse” which is translated to by you as “Naaneke Mantriyatta Bootannesede”. This is more painful then the 1947 partition bloodshed.
  ******************************
  >>What I can’t believe/understand is how the Sikhs are electing the Congress governments in Punjab and elsewhere.

 31. ನಿಮ್ಮ ಬರಹ ಬೆಚ್ಚಿ ಬೀಳಿಸುವಂತಿದೆ.ಆದರೂ ಸತ್ಯ ಭೀಭತ್ಸಕಾರಿ ಘಟನೆಗಳ ಅನಾವರಣ.ಇದು ಹೆಚ್ಚೂ ಕಡಿಮೆ ಭಾರತ ಹಾಗೂ ಪಾಕಿಸ್ತಾನಗಳ ವಿಭಜನೆಯ ಸಂದರ್ಭದಲ್ಲಿ ನಡೆದ ಕೊಮೂ ಗಲಭೆ ಹಾಗೂ ಮಾರಣ ಹೋಮವನ್ನು ನೆನಪು ಮಾಡಿಕೊಡುತ್ತದೆ.ಅಂದಿನ ಕಾಲದ ಜನರ ಅಂಧತ್ವ ಹೇಗಿತ್ತೆಂದರೆ ಬ್ರಿಟಿಶ್ ಆಢಳಿತದ ಸರ್ವಾಧಿಕಾರಿ ನೀತಿಗೆ ಒಗ್ಗಿಹೊಗಿದ್ದ ಜನಕ್ಕೆ ತಾವಿನ್ನೂ ಅದೇ ರೀತಿಯ ಆಳಿಸಿಕೊಳ್ಳುವ ಜನ ಎಂಬ ಭ್ರಮೆಯಿಂದಾ ಪೂರ್ತಿಯಾಗಿ ಹೊರಬಂದಿರಲಿಲ್ಲ ಅದಕ್ಕೆ ಕಾರಣ ಇಂದಿರಾ ಗಾಂಧಿ ಸಹ ಸರ್ವಾಧಿಕಾರಿ ಧೋರಣೆ ಹೊಂದಿದ್ದ ಒಬ್ಬ ಹೆಂಗಸಾಗಿದ್ದಳು.ಆಕೆ ಬೆಳೆದು ಬಂದ ರೀತಿಯೇ ಹಾಗೆ.ಆಕೆಗೆ ಕೆಲವು ಅಂಧ ಮತ್ತು ಸ್ವ ಹಿತಾಸಕ್ತಿ ಹೊಂದಿದಂಥ ಪ್ರಭಲವಾದ ಹಿಬಾಲಕರು ಇದ್ಧಂಥ ಸಂದರ್ಭ ಅದು ಬಿಂದ್ರನ್ ವಾಲೆಯನ್ನು ಬೆಳೆಸಿದವಳೇ ಆಕೆ ಆಮೇಲೆ ಅವನೇ ಯಾವಾಗ ಆಕೆಗೇ ಬಿಸಿ ತುಪ್ಪವಾದನೋ ಆಗ ಆತನನು ನಿಗ್ರಹಿಸಲು ಮಾಡಿಸಿದ್ದೇ ಆಕೆಯ ಬ್ಲೂಸ್ಟಾರ್ ಆಪರೇಶನ್.ಇದು ಒಂದು ರೀತಿಯ ಇಂದಿನ ಅಮೇರಿಕದವರ ನೀತಿ.ಆದರೆ ಅದಕ್ಕೆ ಆಕೆಯೇ ಬಲಿಯಾದಳು “ಮಾಡಿದ್ದುಣ್ಣೋ ಮಾರಾಯಿತಿ” ಅಂದ ಹಾಗಿತ್ತು.ಕಾಂಗ್ರೆಸ್ ಎನ್ನುವ ಪಕ್ಷದ ಇತಿಹಾಸ ಪ್ರಾರಂಭವಾಗಿದ್ದೇ ಬ್ರಿಟಿಶ್ ಆಢಳಿತವನ್ನು ಅನುಕರಿಸುವುದರ ಮೂಲಕ ಅಂದಮೇಲೆ ಅಲ್ಲಿ ಸರ್ವಾಧಿಕಾರಿ ನಡುವಳಿಕೆ ಇಲ್ಲದೆ ಹೇಗೆ ಸಾಧ್ಯ?!.ಇಂದಿಗೂ ಕಾಂಗ್ರೆಸ್ ಪಕ್ಷದಲ್ಲಿ ಅದೇ ಹೈ ಕಮಾಂಡ್ ನೀತಿ ಮುಂದುವರೆದು ಬಂದಿರುವುದಕ್ಕೆ ಅದೇ ಕಾರಣ.ಅದೇನೇ ಆಗಿರಲಿ ರಾಹುಲ್ ಗಾಂಧಿಗೆ ಇದ್ಯಾವುದನ್ನು ಅರಗಿಸಿಕೊಳ್ಳುವ ಅಥವ ಅರ್ಥ ಮಾಡಿಕೊಳ್ಳುವ ಪ್ರಭುದ್ಧತೆ ಬಂದಿದೆ ಎಂದು ಈ ದೇಶದ ಜನ ಒಪ್ಪುವುದಿಲ್ಲ.ಮತ್ತು ಆತ ಬೆಳೆದ ರೀತಿ ರಾಜಕಾರಣಕ್ಕೆ ಸರಿ ಹೊಂದುವುದೂ ಇಲ್ಲ.ಆತ ಎಂದಿಗೂ ಈದೇಶಕ್ಕೆ ಒಬ್ಬ ಸಮರ್ಥ ನೇತಾರ ಆಗಲಾರ ಅದು ಖಚಿತ.ಅದು ರಾಜೀವ್ ಹಾಗೂ ಸಂಜಯ್ ಗಾಂಧೀ ತಲೆಮಾರಿಗೆ ಅಂತ್ಯವಾಗಿದೆ.ಆದರೆ ಅವರ ಛಾಯೆ/ನೆರಳಿನಂತೆ ಭಾಸವಾಗುತ್ತಿರುವ ಈ ವ್ಯಕ್ತಿ ಎಂದೆಂದಿಗೂ ಈ ದೇಶವನ್ನು ಒಬ್ಬ ನಾಯಕನಾಗಿ ಮುಂದುವರೆಸಲಾರ.ಒಂದು ವೇಳೆ ಪ್ರಧಾನಿಯಾಗಲು ಹೊರೆಟರೆ ಮತ್ತೆ ಹತ್ಯೆಯ ಇತಿಹಾಸ ಮರುಕಳಿಸುತ್ತದೆ.ಏಕೆಂದರೆ ಬ್ಲೂಸ್ಟಾರ್ ಆಪರೇಶನ್ ಹಾಗೂ ಎಲ್.ಟಿ.ಟಿ.ಇ. ಮೇಲಿನ ಕಾರ್ಯಾಚರಣೆಯಲ್ಲಿ ನೊಂದು ಬೆಂದ ಜನರ ಕುಟುಂಬ ಇಂದಿಗೂ ಅವಕಾಶಕ್ಕಾಗಿ ಬೋಧಿ ಮುಚ್ಚಿದ ಕೆಂಡದಂತೆ ಕಾಯುತ್ತಿದೆ ಎನ್ನುವುದು ಸೂರ್ಯ ಚಂದ್ರರಿವುವಷ್ಟೇ ಸತ್ಯ.

 32. skumar •

  ಪಾಪ ನಮ್ಮ ದೇಶವನ್ನ ಕಾಯೋ ಸಿಕ್ಕರಿಗೆ ಈಥರ ಆಗಿದ್ಧು ಕೇಳಿ ತುಂಬ ಬೇಜಾರು ಆಯಿತು. ಯಾವ ಇನ್ನೋಸೆಂಟ್ ಗಳಿಗೂ ಈರೀತಿ ಆಗಬಾರದು … ಅವ್ರು ಸಿಕ್ಕ , ಕ್ರಿಸ್ತ , ಸಾಬರು ಅಥವಾ ಹಿಂದೂ ಗಳೇ ಆಗ್ಲಿ … ನಮ್ಮ ದೇಶ ದ ರಾಜಕಾರಿಣಿಗಳು ಇದನ್ನ ಅರ್ಥ ಮಾಡಿಕೊ ಬೇಕು. ಇಷ್ಟು ಜನರನ್ನ ಕೊಂದ ವರಿಗೂ ಅದನ್ನ ಸಮರ್ಥಿಸಿಕೊನ್ದವರಿಗೂ ನನ್ನ ದಿಕ್ಕಾರ

 33. 1REBEL •

  ಸ್ವಾಮಿ ಭಟ್ರೇ ,ರಾಜೀವ್ ಗಾಂಧಿ ನೆ ಮುಂದೆ ನಿಂತು ಈ ಹತ್ಯ ಖಾಂಡ ನಡೆಸಿದ್ದು ಅಂತ ನಿಜ ಯಾಕೆ ಹೇಳ್ತಾ ಇಲ್ಲ

 34. aandp •

  if Rahul Gandhi becomes pm of our country its one of the greatest disaster of our nation and this generation are the most unfortunate guys and we witness the great disasters

 35. beena123 SS •

  ಜೈ ಹೊ ರಾಹುಲ್ ನ ಮುಕಕ್ಕೆ ಫೆವಿಕಾಲ್ ಹಚ್ಚಿದ್ದಾರಂತೆ . ಆದ್ದರಿಂದ ಬಾಯಿ ಅಂಟಿಕೊಂಡು ಬಿಟ್ಟಿದೆಯಂತೆ. ಬಿಡಿಸಿಕೊಳ್ಳಲು ಆಗುವುದಿಲ್ಲವಂತೆ

 36. Sir i litterally had tears reading this,please it should reach every indian

 37. IF THIS ITALIAN NAMED RAUL IS GOING TO TAKE OUR COUNTRY IN HIS HAND THERE THERE WILL BE NO SIKH OR A HINDU WILL REMAIN IN OUR HINDUSTHAN. ALL WILL BE CONVERTED EITHER TO CHRISTIAN OR AS MUSLIM FOR SURE. PLEASE DONT LET THIS ITALIAN TO TAKE INCHARGE OF OUR BHARAT. LET THE MODI GOVT COME INTO RULE AND SEIZE THESE ALL PEOPLE AND PUT THEM INTO THE PRISONS IN ANDAMAN AND NICOBAR ISLANDS FOR REST OF THEIR LIFE OR MAKE THEM HANG. AFTER THAT ONLY OUR BHARAT WOULD BE A INDEPENDENT REPUBLIC COUNTRY. AS THE DREAM OF DR. A. P. J. ABDUL KALAM. THE NUMBER ONE COUNTRY OF WORLD………..

 38. Hello sir..
  As usual, of course and obviously, your article, was awesome!!! The article has something’ that makes the reader, spend few minutes of his life, to think on “ಸಿಖ್ ನರಮೇಧ!!” You removed the mask from Rahul Gandhi’s, or may be congress’ face!! “ಸಿಖ್ ನರಮೇಧ” is really the worst thing ever took place in India.. Who says the government of India (congress) didn’t support for the riot!! Hey Rahul Gandhi, dude wait, you will learn.. The people of India will teach you the right thing, in right time, in right aspect!! Shame on YOU, “YOUR CONGRESS” and your favourite ಎಚ್.ಕೆ.ಎಲ್. ಭಗತ್, ಜಗದೀಶ ಟೈಟ್ಲರ್, ಸಜ್ಜನಕುಮಾರ್, ಧರಂದಾಸ್ ಶಾಸ್ತ್ರಿ, ರಾಮ್‌ಪಾಲ್ ಸರೋಜ್, ಡಿಸಿಪಿ ಅಮೋದ್‌ಕಾಂತ್‌, ಸಜ್ಜನಕುಮಾರ, ಗೃಹ ಸಚಿವ ನರಸಿಂಹರಾಯ, ರ್ರಾಷ್ಟ್ರಪತಿ ಗ್ಯಾನಿ ಜೈಲ್‌ಸಿಂಗ್ etc etc.. ರಾಜೀವಗಾಂಧಿ sir, how could you say ’When a mighty tree falls, it is only natural that the earth around it does shake a little (ದೊಡ್ಡಮರ ಧರೆಗುರುಳಿದಾಗ ಅದರ ಸುತ್ತಲಿನ ಭೂಮಿ ತುಸು ಕಂಪಿಸುವುದು ಸಹಜ)..?! Anyway, complaining on you people is like a madness to breathing heavily, saying ” I want to finish the oxygen on the earth, so do I breathe heavily!. ” So Vishweshwar Bhat sir, thank you so much for you particular article.. It’s superb! And Modi ji, get ready!! 😉

 39. man •

  mind blowing article about the Sikh massacre…………. i never heard about this kind of incident has happened in our country …… so sad actually sikh peoples are contributed a lot for our country …………shame congress

 40. C S sundaresha sri •

  Those who don’t put Cheddi, no shame for them!!

 41. EndTheGame •

  Real daring article!! Hats off to you sir. Congress always speak about Godhra but now many people come to know that real communal party is CONgress!!! We expect the true stories from you. Thank you kannda prabha

 42. Prem •

  Arunachal-MLAs-son-dies-after-being-thrashed-by-shopkeepers-in-south-Delhi you don’t write about Rahul raised this issue on interview 2 days ago n asked if Goswami was mistreated in Delhi of racism. You only focused on thing what not to be said for political advantage. He has also show courage to talk against youth addition to drugs and druggist in Punjab and Chandigarh. Now tell me how is genuine?

 43. nidhi •

  Super article sir….

 44. vaijanath •

  very good sir

 45. Abdul Jaleel •

  ವಿಶ್ವೇಶ್ವರ ಭಟ್ರವರೆ

  ನಿಮ್ಮ ಲೇಕನದ ಬಗ್ಗೆ ನನ್ನ ಸಹಮತ ಇದೆ.
  ಕಾಂಗ್ರೆಸ್ ನಾಯಕರು ತಮ್ಮ ಮೇಲಿನ ನಾಯಕರನ್ನು ಖುಶಿಗೊಲಿಸಲು ಸಾವಿರಾರು ಅಮಾಯಕ ಸಿಕ್ಕರನ್ನು ಕೊಂದರು. ಅದರ ನಂತರ ರಾಜೀವ್ ಗಾಂಧಿಯಂತ ನಾಯಕರು ತಮ್ಮ ಪ್ರಬಾವ ಬಳಸಿ, ಕೊಲೆಗಡುಕರನ್ನು ರಕ್ಷಿಸಿದರು.

  ನಿಮ್ಮ ಲೇಕನದ ಮೂಲಕ ನಾನು ತಿಳಿದು ಕೊಂಡದ್ದು ಏನೆಂದರೆ,
  ರಾಹುಲ್ ಗಾಂಧಿ ಹೇಳುವುದು ಹಸಿ ಸುಳ್ಳಾಗಿದೆ, 1984 ಸಿಕ್ಕ್ ನರಮೇದ ಮತ್ತು 2002 ಮುಸ್ಲಿಮರ ನರಮೆದದ ನಡುವೆ ವ್ಯತ್ಯಾಸವಿಲ್ಲ. ಎರಡೂ ನರಮೇದವೂ ಒಂದೇ ರೀತಿಯದ್ದಾಗಿದೆ. ಅಂದಿನ ಸರಕಾರಗಳು ತಮ್ಮ ರಾಜಕೀಯ ಲಾಬಕ್ಕೊಸ್ಕರ ಅಮಾಯಕರ ನರಮೇದಕ್ಕೆ ಸಹಾಯ ಮಾಡಿದವು. ೧೯೮೪ರಲ್ಲಿ ರಾಜೀವ್ ಗಾಂಧಿ ಕೊಲೆಗಡುಕರನ್ನು ರಕ್ಷಿಸಿಸಿದರು, ಮತ್ತು ೨೦೦೨ರಲ್ಲಿ ನರೇಂದ್ರ ಮೋದಿ ಅಲ್ಲಿಯ ಕೊಲೆಗಡುಕರನ್ನು ರಕ್ಷಿಸಿಸಿದರು. ಡೆಲ್ಲಿ ಗಲಬೆಯನ್ನು ಹಿಂದೂಗಳು ಮಾಡಿದರೆಂದು ಅಂದಿನ ಕಾಂಗ್ರೆಸ್ ಸರಕಾರ ಹೇಳಿತು ಮತ್ತು ಗುಜರಾತ್ ಗಲಬೆಯನ್ನು ಹಿಂದೂಗಳು ಮಾಡಿದರೆಂದು ಅಂದಿನ BJP ಸರಕಾರ ಹೇಳಿತು. ವಾಸ್ತವ ಸಂಗತಿಯೇನೆಂದರೆ ಎರಡೂ ಗಲಭೆಯ ರೂವಾರಿಗಳು ಹಿಂದೂಗಳು ಆಗಿರಲಿಲ್ಲ, ಬದಲಾಗಿ ಅಂದಿನ ಸರಕಾರಗಳಗಿದ್ದವು.

  ಈ ಲೇಕನದ ಮೂಲಕ ತಾವು ರಾಹುಲ್ ಗಾಂದಿಯ ಸುಳ್ಳನ್ನು ಬಯಲು ಗೊಲಿಸಿದ್ದಿರಿ.

 46. RST •

  Why is it that anybody who writes the truth or facts is always called “Chaddi” ?

 47. amar •

  Very good article and I too hear same back from my Delhi friends.We need to stop this Congress party and if not country will be dying day by day like sikhs

 48. ಲೇಖನ ಓದಿ ಇತಿಹಾಸದ ಪೂರ್ಣ ದರ್ಶನ ಮಾಡಿಸಿದಿರಿ.. ಕಣ್ಣಲ್ಲಿ ನೀರು ಜಿನುಗುವಂತೆ ಆಯಿತು.. ಕೊಲೆಗಡುಕ ಸರಕಾರಕ್ಕೆ ಧಿಕ್ಕಾರವಿರಲಿ… ಇನ್ನೂ ಯಾರಾದರೂ ಇಂತಹ ಕೊಲೆಗಡುಕ, ಹಗರಣ ಯುಕ್ತ ಸರಕಾರದ ಬಗ್ಗೆ ಅಭಿಮಾನ/ಅನುಕಂಪ ಇಟ್ಟುಕೊಳ್ಳುವುದು, ಪಕ್ಷದ ಪರವಾಗಿ ಮತ ಚಲಾಯಿಸುವುದು ದೇಶದ್ರೋಹದಷ್ಟೇ ಘಾತಕವೇ ಸರಿ.

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.