ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.
ಮುಂದೆ ಓದಿ...ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.
ಮುಂದೆ ಓದಿ...ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.
ಮುಂದೆ ಓದಿ...ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ
ಮುಂದೆ ಓದಿ...ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.
ಮುಂದೆ ಓದಿ...ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.
ಮುಂದೆ ಓದಿ...ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!
ಮುಂದೆ ಓದಿ...ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.
ಮುಂದೆ ಓದಿ...
ಕೆಲ ತಿಂಗಳ ಹಿಂದೆ ಹಿರಿಯರೊಬ್ಬರ ಜತೆ ಮಾತನಾಡುತ್ತಿದ್ದೆ. ಅವರು ನನ್ನ ಆತ್ಮೀಯ ವಲಯದವರು. ಮಾತು ಏನಕ್ಕೆಲ್ಲ ಹೊರಳಿ ಬಂದು ನಿಂತಿದ್ದು ಓಶೊ ರಜನೀಶ್ ವಿಷಯಕ್ಕೆ. ಓಶೊ ವಿಚಾರ ಬರುತ್ತಲೇ ಹುರುಪಾದ ನಾನು, ಆತನ ಕಟ್ಟರ್ ಅಭಿಮಾನಿ ಎಂದು ಉಲ್ಲಸಿತನಾಗಿ ಹೇಳಿಕೊಂಡೆ. ಒಶೊನ ಪುಸ್ತಕ, ಸಿಡಿ ಯಾವುದೂ ಬಿಟ್ಟಿಲ್ಲ. ಅಲ್ಲದೇ ಆತನ ಪುಸ್ತಕಗಳನ್ನೂ ಕನ್ನಡಕ್ಕೆ ತಂದಿದ್ದೇನೆ. ಒಶೊ ವಿಚಾರಧಾಟಿ ನನ್ನ ಮೇಲೆ ಬೀರಿದ ಪರಿಣಾಮ ಅಪಾರ ಎಂದೆ. ಅವರೇನೂ ಅದಕ್ಕೆ ಪ್ರತಿಯಾಗಿ ಅಂಥ ಉತ್ಸಾಹದ ಪ್ರತಿಕ್ರಿಯೆಯೇನನ್ನೂ ಕೊಡಲಿಲ್ಲವಾದ್ದರಿಂದ ಮಾತು ಅಲ್ಲಿಗೇ ಬರ್ಖಾಸ್ತಾಯಿತು.
ಆದರೆ ಆ ಭೇಟಿಯ ನಂತರದ ಪರಿಣಾಮಗಳು ನನಗೆ ನಿಧಾನವಾಗಿ ಗಮನಕ್ಕೆ ಬರತೊಡಗಿದವು. ಆಗಾಗ ಫೋನಿನಲ್ಲಿ ಮಾತಿಗೆ ಸಿಗುತ್ತಿದ್ದ ಆ ಹಿರಿಯ ಮಿತ್ರರು ತದನಂತರದಲ್ಲಿ ನನ್ನಿಂದ ಒಂದು ಅಂತರ ಕಾಪಾಡಿಕೊಳ್ಳತೊಡಗಿದರು. ಅವರು ನನ್ನ ಸಹವಾಸವನ್ನು ಬೇಕೆಂದೇ ತಪ್ಪಿಸುತ್ತಿದ್ದಾರೆ ಎಂಬುದು ಅವರ ವರ್ತನೆಗಳಿಂದಲೇ ನನಗೆ ನಿಚ್ಚಳವಾಗಿಹೋಯಿತು. ನನಗೆ ಒಂಥರ ಗೊಂದಲ, ಆಶ್ಚರ್ಯ, ಕಸಿವಿಸಿಗಳೆಲ್ಲ ಕಾಡತೊಡಗಿದವು. ಇವರೇಕೆ ಹೀಗಾಡುತ್ತಿದ್ದಾರೆ? ನನ್ನಿಂದ ಆಗಿರುವ ತಪ್ಪಾದರೂ ಏನು ಎಂಬೆಲ್ಲ ಪ್ರಶ್ನೆಗಳು ಗಿರಕಿ ಹೊಡೆದವು.
ಇದನ್ನು ಅವರಿಂದಲೇ ಪರಿಹರಿಸಿಕೊಂಡ ಹೊರತು ಸಮಾಧಾನವಿಲ್ಲ ಎಂದುಕೊಂಡು ಅವರನ್ನೇ ನೇರವಾಗಿ ಕೇಳಿದೆ- ನೀವು ನನ್ನನ್ನು ದೂರ ಮಾಡುತ್ತಿರುವುದಕ್ಕೆ ಕಾರಣವೇನು? ಅದಕ್ಕೆ ಅವರು ಅಷ್ಟೇ ನೇರವಾಗಿ ಹೇಳಿದರು- ‘ನೀವು ಓಶೊ ರಜನೀಶನ ಭಕ್ತರು ಎಂದ ಮೇಲೆ ನಿಮ್ಮಿಂದ ದೂರ ಇರಲೇಬೇಕು. ಅಂಥ ಸೆಕ್ಸ್ ಗುರುವನ್ನು ನೀವು ಇಷ್ಟಪಡುತ್ತೀರಿ ಎಂದಮೇಲೆ ನಿಮ್ಮ ಸಹವಾಸ ಕಷ್ಟವೇ.’
ಅವರ ಉತ್ತರ ಕೇಳಿ ನನಗೆ ಆಘಾತವಾಯಿತು. ನಾನು ಹೇಳಿದೆ- ‘ಓಶೊ ಲೈಂಗಿಕತೆ ಬಗ್ಗೆ ಬರೆದಿರುವುದು ಶೇ. 2ರಷ್ಟಿರಬಹುದು. ಆತ ಹೇಳಿದ ಉಳಿದ ವಿಚಾರಗಳ ಹರವು ದೊಡ್ಡದು. ನಿಮಗೆ ಓಶೊ ಕುರಿತು ಅಂಥ ಅಭಿಪ್ರಾಯಗಳು ಬರುವುದಕ್ಕೆ ನೀವು ಅವನ ಯಾವ ಪುಸ್ತಕ ಓದಿದ್ದೀರಿ’ ಎಂದು ಕೇಳಿದೆ.
ಅದಕ್ಕವರು- ‘ಆತನ ಪುಸ್ತಕಗಳನ್ನು ಓದಿಲ್ಲ. ಅವನ ಬಗ್ಗೆ ಇತರರು ಹೇಳಿರುವುದನ್ನು ಕೇಳಿದ್ದೇನೆ’ ಎಂದರು. ಓಶೊ ಅಪಾರ್ಥಕ್ಕೆ ಎಡೆ ಆಗಿರುವುದೇ ಹೀಗೆ! ‘ವೈ ಆರ್್ಯು ಸೋ ಮಿಸ್್ಅಂಡರ್್ಸ್ಟುಡ್್’ ಎಂದು ಓಶೋಗೆ ಒಬ್ಬರು ಪ್ರಶ್ನೆ ಕೇಳಿದ್ದರು. ಅದಕ್ಕೆ ಓಶೊ ಹೇಳಿದ ಉತ್ತರ ಸ್ವಾರಸ್ಯಕರವಾಗಿದೆ. ಓಶೋನನ್ನು ಅರ್ಥ ಮಾಡಿಕೊಂಡವರಿಗಿಂತ ಅಪಾರ್ಥ ಮಾಡಿಕೊಂಡವರೇ ಹೆಚ್ಚು. ಇದನ್ನು ನಿವಾರಿಸುತ್ತ ಓಶೋ ಹೇಳಿದ ಉತ್ತರದಲ್ಲಿ ನನ್ನ ಸ್ನೇಹಿತರ ಆಕ್ಷೇಪಣೆಗಳಿಗೂ ಸಮಜಾಯಿಷಿ ಇದೆ. ಓದಿ.
ತುಂಬಾ ದಿನಗಳಿಂದ ನಡೆದುಕೊಂಡು ಬಂದ ಸಂಪ್ರದಾಯದ ವಿರುದ್ಧವಾಗಿ, ಒಂದು ನಂಬಿಕೆಯ ವಿರುದ್ಧವಾಗಿ, ಆಚರಣೆಯ ವಿರುದ್ಧವಾಗಿ ಒಂದು ಧರ್ಮಕ್ಕೆ ಇರಬಹುದಾದ ಇತಿ-ಮಿತಿಗಳ ವಿಷಯವಾಗಿ ಧಿಕ್ಕಾರದ ಧಾಟಿಯಲ್ಲಿ ಮಾತಾಡಿದರೆ ಸಾಕು- ಅಂಥವರನ್ನು ಜನ ತುಂಬ ಬೇಗ ಅಪಾರ್ಥ ಮಾಡಿಕೊಳ್ಳುತ್ತಾರೆ. ದುರಹಂಕಾರಿ ಎಂಬ ಹಣೆಪಟ್ಟಿ ಅಂಟಿಸುತ್ತಾರೆ. ಪರ್್ಫೆಕ್ಟ್ ಪರ್ಸನ್ ಕಮ್ ಫ್ರಂ ಮೆಂಟಲ್ ಹಾಸ್ಪಿಟಲ್ ಎಂದು ವ್ಯಂಗ್ಯವಾಡುತ್ತಾರೆ. ಒಂದು ಆಚರಣೆಯ ವಿರುದ್ಧ ಸಂಪ್ರದಾಯದ ವಿರುದ್ಧ, ಧರ್ಮವೊಂದಕ್ಕೆ ಇರುವ ಕಟ್ಟುಪಾಡುಗಳ ವಿರುದ್ಧ ಮಾತಾಡಿರುವುದರಲ್ಲಿ ಸತ್ಯವೂ ಇರಬಹುದೇನೋ ಎಂದು ಒಬ್ಬನೂ ಯೋಚಿಸುವುದೇ ಇಲ್ಲ. ನಿಜದ ಸಂಗತಿ ಏನು ಗೊತ್ತೆ? ಧರ್ಮ, ಆಚರಣೆ ಹಾಗೂ ಕಟ್ಟುಪಾಡುಗಳ ವಿರುದ್ಧ ಒಂಟಿಧ್ವನಿ ಕೇಳಿಬರುತ್ತದಲ್ಲ; ಅದು ಬಹುಪಾಲು ಸತ್ಯವಾಗಿರುತ್ತದೆ. ಆದರೆ. ಅದನ್ನು ಒಪ್ಪುವ ಸ್ಥಿತಿಯಲ್ಲಿ ನಾನು ಹಾಗೂ ನಮ್ಮ ಸುತ್ತಲಿನ ಸಮಾಜ ಇರುವುದಿಲ್ಲ.
ಒಂದು ಉದಾಹರಣೆ ಕೇಳಿ: ಇವತ್ತು ನಾವೆಲ್ಲ ಆಗೊಮ್ಮೆ ಈಗೊಮ್ಮೆ- ಈ ಜಗತ್ತು ಕಂಡ ಶ್ರೇಷ್ಠ ತತ್ತ್ವಜ್ಞಾನಿ ಎಂದರೆ ಸಾಕ್ರಟೀಸ್ ಎಂದು ಉದ್ಗರಿಸುತ್ತೇವೆ. ಈ ಸಾಕ್ರಟೀಸ್, ಕ್ರೈಸ್ತ ಧರ್ಮದಲ್ಲಿರುವ ಹುಸಿ ಘೋಷಣೆಗಳು, ಆಚರಣೆಗಳು ಹಾಗೂ ಕಟ್ಟುಪಾಡುಗಳ ವಿರುದ್ಧ ನೂರಾರು ವರ್ಷಗಳ ಹಿಂದೆಯೇ ದನಿ ಎತ್ತಿದ. ಅವನ ಮಾತಿನ ಹಿಂದೆ ಏನಾದರೂ ಸತ್ಯವಿರಬಹುದೆ ಎಂದು ಯಾರೂ ಯೋಚಿಸಲಿಲ್ಲ. ಬದಲಿಗೆ ಅವನನ್ನು ಅಪಾರ್ಥ ಮಾಡಿಕೊಂಡರು. ಕ್ರಿಶ್ಚಿಯನ್ ವಿರೋಧಿ ಎಂಬ ಹಣೆಪಟ್ಟಿ ಅಂಟಿಸಿದರು. ಆತನ ಮಾತು ಹಾಗೂ ಅಭಿಪ್ರಾಯ ಕೇಳುವ ಆಸಕ್ತಿಯನ್ನೇ ತೋರದೆ ಅವನಿಗೆ ಊಟದಲ್ಲಿ ವಿಷ ಹಾಕಿ ಸಾಯಿಸಿಬಿಟ್ಟರು. ಕಂದಾಚಾರದ ವಿರುದ್ಧ, ಸಂಪ್ರದಾಯದ ವಿರುದ್ಧ ಕೇಳಿಬಂದ ಒಂಟಿದನಿಯ ಸದ್ದನ್ನು ಅಡಗಿಸಿದ್ದು ಹೀಗೆ.
ಸಾಕ್ರಟೀಸ್ ಸತ್ತ ನಿಜ. ಆದರೆ ಆತ ಪ್ರತಿಪಾದಿಸಿದ ವಿಷಯಗಳು ಸಾಯಲಿಲ್ಲ. ಇಂತಿಂಥ ವಿಷಯವಾಗಿ ಆತ ಧಿಕ್ಕಾರದ ಕೂಗು ಹಾಕಿದನಂತೆ ಎಂಬ ಮಾತು ಅವರಿವರ ಮೂಲಕ ಜೀವಂತವಾಗಿ ಉಳಿದುಕೊಂಡೇ ಬಂತು. ಇವತ್ತು ಸಾಕ್ರಟೀಸ್್ನ ವಿಚಾರಣೆ ನಡೆಸಿದವರು ಯಾರು? ಅವನಿಗೆ ಊಟದಲ್ಲಿ ವಿಷ ಹಾಕುವಂತೆ ಆದೇಶ ನೀಡಿದವರು ಯಾರು? ಈ ಆದೇಶವನ್ನು ಪಾಲಿಸಿದವರು ಯಾರು ಎಂಬುದನ್ನು ಬಲ್ಲವರಿಲ್ಲ. ಆದರೆ, ಸಾಕ್ರಟೀಸ್್ನ ಹೆಸರು ಹಾಗೂ ಆತ ಮೊಳಗಿಸಿದ ಧಿಕ್ಕಾರದ ಧ್ವನಿ ಎಲ್ಲರಿಗೂ ನೆನಪಿದೆ. ಕಾರಣವಿಷ್ಟೆ.
ಸಾಕ್ರಟೀಸ್ ಹೇಳಿದ್ದ ಮಾತುಗಳು ಕಹಿಯಾಗಿದ್ದವು. ಒರಟಾಗಿದ್ದವು. ಕೋಪ ಬರಿಸುವಂತಿದ್ದವು. ಆದರೆ ಅವನ ಮಾತುಗಳ ಹಿಂದೆ ಸತ್ಯವಿತ್ತು.
ನೆನಪಿಡಿ, ಎಂಥ ಪ್ರತಿರೋಧ ಎದುರಾದರೂ ಸತ್ಯ ಸಾಯುವುದಿಲ್ಲ. ತುಂಬ ನಿಧಾನವಾಗಿಯಾದರೂ ಸರಿ, ಅದು ತನ್ನ ಅಸ್ತಿತ್ವವನ್ನು ಸಾಧಿಸಿಯೇ ತೀರುತ್ತದೆ.
ಧರ್ಮಾಚರಣೆಯಲ್ಲಿರುವ ಹುಳುಕುಗಳನ್ನು ಎತ್ತಿ ತೋರಿಸಿದ ಕಾರಣಕ್ಕೆ ಸಾಕ್ರಟೀಸ್್ಗೆ ಅಥೆನ್ಸ್್ನಲ್ಲಿ, ಮೂಢನಂಬಿಕೆ ಹಾಗೂ ಗೊಡ್ಡು ಆಚರಣೆಗಳ ವಿರುದ್ಧ ಮಾತಾಡಿದ ಕಾರಣಕ್ಕೆ ಗೌತಮ ಬುದ್ಧನಿಗೆ ಬಿಹಾರದಲ್ಲಿ ಪ್ರತಿರೋಧ ಎದುರಾಯಿತು. ಈಗ ನನ್ನ ಪಾಡೂ ಹೀಗೇ ಆಗಿದೆ. ನನ್ನ ನಿಲುವನ್ನು, ವಾದಸರಣಿಯನ್ನು ವಿರೋಧಿಸುವ ಜನ ಪ್ರಪಂಚದ ಉದ್ದಗಲಕ್ಕೂ ಕಾಣಸಿಗುತ್ತಾರೆ. ನನ್ನ ಮಾತುಗಳ ಹಿಂದೆ ಏನಾದರೂ ಸತ್ಯವಿರಬಹುದೇ ಎಂದು ಯೋಚಿಸುವ ಮನಸು ಯಾರಿಗೂ ಇಲ್ಲ. ಒಂದು ಸಮಾಧಾನವೆಂದರೆ, ವಿರೋಧಿಗಳು ಇದ್ದಾರಲ್ಲ; ಅದೇ ಪರಿಸರದಲ್ಲಿ ನನ್ನನ್ನು ಅಭಿಮಾನಿಸುವ ಮಂದಿಯೂ ಇದ್ದಾರೆ. ವಿರೋಧಿಗಳಿದ್ದಾರಲ್ಲ; ಅವರು ಧಿಕ್ಕಾರ ಕೂಗಲಿಕ್ಕೆಂದೇ ಬಂದವರು. ವಾಸ್ತವ ಏನೆಂದು ಅರ್ಥಮಾಡಿಕೊಳ್ಳುವ ಕನಿಷ್ಠ ಜ್ಞಾನ ಕೂಡ ಅವರಿಗೆ ಇರುವುದಿಲ್ಲ. ಹಾಗಾಗಿ ಅವರು ಮನಸ್ಸಿಗೆ ಬಂದಂತೆ ಒದರಾಡುತ್ತಲೇ ಇರುತ್ತಾರೆ. ಒಂದು ಸುಳ್ಳನ್ನು ಹತ್ತು ಬಾರಿ ಮೇಲಿಂದ ಮೇಲೆ ಹೇಳಿಬಿಟ್ಟರೆ ಅದೇ ಸತ್ಯವಾಗಿಬಿಡುತ್ತದೆ ಎಂಬ ಭ್ರಮೆಗೆ ಬಿದ್ದಿರುತ್ತಾರೆ.
ಇನ್ನೊಂದು ಬದಿಯಲ್ಲಿ- ನನ್ನನ್ನು ಅಭಿಮಾನದಿಂದ ನೋಡುವವರಿದ್ದಾರೆ. ಅವರು ‘ಸತ್ಯ’ ಎಂಬುದಕ್ಕೆ ರೂಪಕ. ಇವತ್ತಲ್ಲ ನಾಳೆ ವಾಸ್ತವ ಏನೆಂಬುದು ಎಲ್ಲರಿಗೂ ತಿಳಿದೇ ತಿಳಿಯುತ್ತದೆ. ಹಾಗಾಗಿ ವಿನಾಕಾರಣ ಗೊಂದಲ ಎಬ್ಬಿಸುವುದೇಕೆ ಎಂಬುದು ಅವರ ನಿಲುವಾಗಿರುತ್ತದೆ. ಆದರೆ, ದೂರದಲ್ಲಿ ನಿಂತು ಪರ-ವಿರೋಧದ ಕೂಗುಗಳನ್ನಷ್ಟೇ ಗಮನಿಸಿ ತೀರ್ಪು ಕೊಡುತ್ತಾರಲ್ಲ; ಆ ಜನ ಧಿಕ್ಕಾರ ಕೂಗುವವರ, ಅಂದರೆ- ಸುಳ್ಳಿನ ಪರ ಇರುವವರ ಕಡೆಗೇ ಜೈ ಅಂದುಬಿಡುತ್ತಾರೆ.
ಇಂಥ ಸಂದರ್ಭದಲ್ಲೆಲ್ಲ ನಾನು ಹೇಳುವ ಮಾತು ಒಂದೇ: ನೀವು ನಡೆಯುವ ಹಾದಿ ಸತ್ಯದ್ದಾಗಿದ್ದರೆ, ನ್ಯಾಯದ ಪರವಾಗಿ ಇದ್ದರೆ ಆರಾಮಾಗಿ ಮುಂದೆ ಸಾಗಿ. ಏಕೆಂದರೆ, ನೂರು ಮಂದಿ ಒಟ್ಟಾಗಿ ಕೂಗಿದರೂ ಸತ್ಯವನ್ನು ಸರ್ವನಾಶ ಮಾಡಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಸಾವಿರ ಮಂದಿ ಜತೆಗಿದ್ದರೂ ಕೂಡ ಒಂದು ಸುಳ್ಳಿನ ಪರವಾಗಿ ವಾದಿಸಲು ಹೋಗಬಾರದು. ಏಕೆಂದರೆ, ಸತ್ಯ ಅಷ್ಟು ಸುಲಭವಾಗಿ ಕಣ್ಮರೆಯಾಗುವುದಿಲ್ಲ.
ಬೇಸರ ಮೂಡಿಸುವಂಥ, ಕಿರಿಕಿರಿ ಅನ್ನಿಸುವಂಥ ನಂಬಿಕೆಗಳು, ಆಚರಣೆಗಳು ಎಲ್ಲ ಧರ್ಮಗಳಲ್ಲೂ ಇವೆ. ಆದರೆ ಅದನ್ನು ಮುಕ್ತವಾಗಿ ಹೇಳುವುದನ್ನೇ ಅಪರಾಧ ಎಂದು ಭಾವಿಸುವ ಮನಸ್ಸುಗಳಿವೆ. ನಾವೆಲ್ಲ ತಿಳಿದಿರುವಂತೆ ಹೆಸರು ನೂರೆಂಟಿರಬಹುದು. ಆದರೆ ದೇವರು ಒಬ್ಬನೇ. ಯಾವ ಧರ್ಮವೂ ಹಿಂಸೆಯನ್ನು ಒಪ್ಪುವುದಿಲ್ಲ. ಅಸಮಾನತೆಯನ್ನು ಪೋಷಿಸುವುದಿಲ್ಲ. ಆದರೆ ಒಂದು ಧರ್ಮವನ್ನೇ ಗುತ್ತಿಗೆ ತೆಗೆದುಕೊಂಡವರಂತೆ ವರ್ತಿಸುವ ಜನ ಮಾತ್ರ ತಮ್ಮ ಮೂಗಿನ ನೇರಕ್ಕೆ ಕಾನೂನುಗಳನ್ನು ಮಾಡುತ್ತಾರೆ. ಅದನ್ನು ಉಲ್ಲಂಘಿಸಿದವರಿಗೆ ಘೋರ ಶಿಕ್ಷೆ ವಿಧಿಸುವ ಮಾತಾಡಿ ಒಂದಿಡೀ ಸಮುದಾಯ ಹಾಗೂ ಪರಿಸರದ ತಿಳಿಗೊಳಕ್ಕೆ ಕಲ್ಲು ಹೊಡೆದುಬಿಡುತ್ತಾರೆ.
ಒಂದು ಧರ್ಮದ, ಒಂದು ಸಂದೇಶದ ಹಿಂದೆ ಹೊರಟವರು ಎಷ್ಟೊಂದು ಕೇವಲವಾಗಿ ವರ್ತಿಸುತ್ತಾರೆ ಎಂಬುದಕ್ಕೆ ಒಂದು ಉದಾಹರಣೆ ಕೇಳಿ- ಸಾಯುವ ಮುನ್ನ ಎಲ್ಲ ಶಿಷ್ಯಂದಿರನ್ನೂ ಹತ್ತಿರ ಕರೆದು ಗೌತಮ ಬುದ್ಧ ಹೇಳಿದ: ‘ಬಂಧುಗಳೇ, ಇದೀಗ ನನ್ನ ಕೊನೆಯ ಕ್ಷಣ. ಮುಂದಿನ ದಿನಗಳಲ್ಲಿ ಆನಂದ ನಿಮಗೆ ಮಾರ್ಗದರ್ಶಕನಾಗಿರುತ್ತಾನೆ. ಆಸೆಯೇ ದುಃಖಕ್ಕೆ ಮೂಲ. ಇದೇ ನನ್ನ ಸಂದೇಶ. ನೀವೆಲ್ಲ ಆಸೆಯನ್ನು ಬಿಟ್ಟು ಬದುಕಿ. ಯಾವುದೇ ಕಾರಣಕ್ಕೂ ನನ್ನ ವಿಗ್ರಹವನ್ನು ಸ್ಥಾಪಿಸುವ, ಅದನ್ನು ಪೂಜಿಸುವ ಕೆಲಸ ಮಾಡಬೇಡಿ. ವಿಗ್ರಹಾರಾಧನೆ ಸಲ್ಲದು…’
ಮುಂದೆ ಆಗಿದ್ದೇನು? ಬುದ್ಧನ ಅನುಯಾಯಿಗಳು, ಆ ಮಹಾತ್ಮನ ಸಂದೇಶ ಮರೆತರು. ಪ್ರತಿಯೊಬ್ಬರೂ ಆಸೆಗೆ ಬಿದ್ದರು. ಎಲ್ಲರೂ ಬುದ್ಧ ಪ್ರತಿಮೆ ಸ್ಥಾಪಿಸಲು ಮುಂದಾದರು. ಚೀನಾದಲ್ಲಿ, ಒಂದು ಬೃಹತ್ ದೇವಾಲಯದಲ್ಲಿ ಹತ್ತು ಸಾವಿರ ಬುದ್ಧನ ಮೂರ್ತಿಗಳನ್ನು ಸ್ಥಾಪಿಸುವ ಕೆಲಸ ಯಶಸ್ವಿಯಾಗಿ ನಡೆಯಿತು. ಮುಂದೆ ಬಂಗಾರದಲ್ಲಿ ಬುದ್ಧನ ವಿಗ್ರಹ ನಿರ್ಮಿಸುವ, ಅದಕ್ಕೆ ವಜ್ರಾಭರಣಗಳಿಂದ ಅಲಂಕಾರ ಮಾಡುವ ಕೆಲಸವೂ ತುಂಬ ಯಶಸ್ವಿಯಾಗಿ ನಡೆಯಿತು. ಆದರೆ, ಬುದ್ಧನ ತತ್ತ್ವದ ಪಾಲನೆಯಾಗಲಿ, ಆತ ತೋರಿದ ಹಾದಿಯಲ್ಲಿ ನಡೆವ ಕೆಲಸವನ್ನಾಗಲಿ ಹೆಚ್ಚಿನವರು ಮಾಡಲಿಲ್ಲ. ಈ ಕಾರಣವನ್ನೇ ಮುಂದಿಟ್ಟುಕೊಂಡು ಬೌದ್ಧ ಧರ್ಮದಲ್ಲಿ ಈಗ ಮತ್ತೆ ವಿಗ್ರಹಾರಾಧನೆ ಆರಂಭವಾಗಿದೆ ಎಂದರೆ- ಬುದ್ಧನ ಅನುಯಾಯಿಗಳ ದೃಷ್ಟಿಯಲ್ಲಿ ಅದು ಘೋರ ಅಪರಾಧವಾಗುತ್ತದೆ. ಇದೇ ರೀತಿ ಯಾವುದಾದರೊಂದು ಸಣ್ಣ ಹುಳುಕು ತೋರಿಸಿದರೆ, ಅದನ್ನೇ ಮುಂದಿಟ್ಟುಕೊಂಡು ಧರ್ಮವಿರೋಧಿ ಎಂಬ ಹಣೆಪಟ್ಟಿ ಕಟ್ಟಲು ಆಯಾ ಧರ್ಮದ ಮುಖಂಡರುಗಳು ತುದಿಗಾಲಲ್ಲಿ ನಿಂತಿರುತ್ತಾರೆ.
ಆದರೆ, ಈ ಹಿಂದೆಯೇ ಹೇಳಿದ ಹಾಗೆ, ಸತ್ಯ ಯಾವತ್ತಿದ್ದರೂ ಸತ್ಯವೇ. ಆಚರಣೆಗಳು, ಕಟ್ಟುಪಾಡುಗಳು ಹಾಗೂ ನಂಬಿಕೆಗಳ ಹಿಂದಿರುವ ಸತ್ಯ ಇವತ್ತಲ್ಲ ನಾಳೆ ಎಲ್ಲರಿಗೂ ಗೋಚರವಾಗುತ್ತದೆ. ಅಂಥ ಸಂದರ್ಭಕ್ಕಾಗಿ ತಾಳ್ಮೆಯಿಂದ ಕಾಯಬೇಕು, ಅಷ್ಟೆ.
ಅದೊಮ್ಮೆ ನಾನು ಜೈಪುರಕ್ಕೆ ಹೋಗಬೇಕಾಗಿ ಬಂತು. ಅಲ್ಲಿ ನನ್ನ ಅಭಿಮಾನಿಯೊಬ್ಬರ ಮನೆಯಲ್ಲಿ ವಾಸ್ತವ್ಯ. ಆತ ಆಗರ್ಭ ಶ್ರೀಮಂತ. ಮನೆಯೊಳಗೇ ಒಂದು ಗುಡಿ ಕಟ್ಟಿಸಿದ್ದ. ಮಂಗಳಾರತಿಗೆ ಬೆಳ್ಳಿಯ ತಟ್ಟೆ. ದೇವರಿಗೆ ದಿನಕ್ಕೊಂದು ಬಗೆಯ ಅಭಿಷೇಕ, ಅರ್ಚನೆ ಎಲ್ಲವೂ ನಡೆಯುತ್ತಿತ್ತು. ಆದರೆ ಏನಾಶ್ಚರ್ಯ! ಈ ಆಗರ್ಭ ಶ್ರೀಮಂತ ಒಂದೇ ಒಂದು ದಿನವೂ ಮನೆಯೊಳಗೇ ಇದ್ದ ದೇವಸ್ಥಾನಕ್ಕೆ ಕಾಲಿಡುತ್ತಿರಲಿಲ್ಲ. ಒಂದು ದಿನ ಅವನನ್ನು ಕೇಳಿದೆ: ‘ಮನೆಯೊಳಗೇ ದೇವಸ್ಥಾನ ಕಟ್ಟಿಸಿದ್ದೇಕೆ?’
‘ನನಗೆ ಭಗವಂತನ ಮೇಲೆ ತುಂಬಾ ಭಯ-ಭಕ್ತಿ. ಹಾಗಾಗಿ ಕಟ್ಟಿಸಿದೆ’ ಆತ ಉತ್ತರಿಸಿದ.
‘ಅದೇನೋ ಸರಿ. ಆದರೆ, ಒಂದು ದಿನವೂ ನೀನು ದೇವಾಲಯಕ್ಕೇ ಹೋಗುತ್ತಿಲ್ಲವಲ್ಲ ಮಿತ್ರಾ…’ ನಾನು ಮತ್ತೆ ಪ್ರಶ್ನೆ ಹಾಕಿದೆ.
‘ಕ್ಷಮಿಸಿ. ಅದಕ್ಕೆಲ್ಲಾ ನನಗೆ ಟೈಂ ಇಲ್ಲ. ಪೂಜೆ ಮಾಡುವುದಕ್ಕೆಂದೇ ಒಬ್ಬ ಅರ್ಚಕನನ್ನು ನೇಮಿಸಿದ್ದೇನೆ. ಆತ ದಿನಾ ಬೆಳಗ್ಗೆ ಬಂದು ಪೂಜೆ ಮಾಡಿ ಹೋಗ್ತಾನೆ. ಅದಕ್ಕೆ ಆತನಿಗೆ ಸಂಬಳ ಕೊಡ್ತೇನೆ. ನಾನೇ ಪೂಜೆ ಮಾಡಲು ಕೂತರೆ ಒಂದು ಗಂಟೆ ಕಳೆದುಹೋಗುತ್ತೆ. ಒಂದು ಗಂಟೆ ಅಂದ್ರೆ ಸುಮ್ನೆ ಆಯ್ತಾ? ಅದೇ ವೇಳೇಲಿ ನಾನು ಹೊರಗಿದ್ರೆ ಲಕ್ಷ ರುಪಾಯಿ ಬಿಸಿನೆಸ್ ಆಗುತ್ತೆ..’
ಅವನ ಮಾತು ಮುಗಿಯುತ್ತಿದ್ದಂತೆಯೇ ಹೇಳಿದೆ: ಮಿತ್ರಾ, ನಿನ್ನದು ತೋರಿಕೆಯ ಭಕ್ತಿ. ಕಾಟಾಚಾರದ ಭಕ್ತಿ. ಇದರಿಂದ ನಿನಗೂ ಪುಣ್ಯ ಲಭಿಸುವುದಿಲ್ಲ, ದೇವರಿಗೂ ಮೆಚ್ಚುಗೆಯಾಗುವುದಿಲ್ಲ. ಇದನ್ನು ಒಡೆಸಿ ಹಾಕಿಬಿಡು..’
ನನ್ನ ಮಾತು ಕೇಳಿ ಆತನಿಗೆ ಶಾಕ್ ಅಯಿತು. ಹಿಂದೆಯೇ ಸಿಟ್ಟು ಬಂತು. ವ್ಯಗ್ರನಾಗಿ ನನ್ನನ್ನೇ ನೋಡುತ್ತ ನಿಂತ. ಅವತ್ತಿಂದ ಮಾತು ಕಡಿಮೆಯಾಯಿತು. ಒಂದೆರಡು ದಿನಗಳ ನಂತರ ನಾನು ಎದ್ದು ಬಂದೆ. ಮುಂದೆ ಎರಡು ವರ್ಷಗಳ ನಂತರ ಮತ್ತೆ ಜೈಪುರಕ್ಕೆ ಹೋಗಬೇಕಾಗಿ ಬಂತು. ಆಗ ಈ ಅಭಿಮಾನಿ ಮತ್ತೆ ಎದುರಾದ. ಈ ಹಿಂದೆ ನಿಮ್ಮ ಮಾತನ್ನು ಅಪಾರ್ಥ ಮಾಡಿಕೊಂಡಿದ್ದೆ. ಕ್ಷಮಿಸಿ ಈಗ ನನಗೆ ವಾಸ್ತವ ಅರ್ಥವಾಗಿದೆ. ಈಗಲೂ ಅರ್ಚಕನಿಗೆ ಪ್ರತಿ ತಿಂಗಳೂ ಸಂಬಳ ಕೊಡುತ್ತೇನೆ. ಆದರೆ ಪೂಜೆಯ ಕೆಲಸವನ್ನು ನಾನೇ ಮಾಡುತ್ತಿದ್ದೇನೆ. ಆ ಒಂದು ಗಂಟೆಯ ಅವಧಿಯಲ್ಲಿ ಸಿಗುವ ಮಾನಸಿಕ ನೆಮ್ಮದಿಯ ಮುಂದೆ ನನ್ನ ಸಿರಿಸಂಪತ್ತೆಲ್ಲ ವ್ಯರ್ಥವೆಂದೇ ನನ್ನ ಭಾವನೆ’ ಎಂದ.
ಆತ ಮುಂದುವರಿದು ಹೇಳಿದ: ‘ಮನೆಯೊಳಗೆ ದೇವಸ್ಥಾನ ಕಟ್ಟಿಸಿದೆನಲ್ಲ: ಆನಂತರ ಮಾಡಿದ ವ್ಯವಸ್ಥೆಯ ಬಗ್ಗೆ ಗೆಳೆಯರಿಗೆಲ್ಲ ಹೇಳಿದೆ. ಬಂಧುಗಳಿಗೂ ತಿಳಿಸಿದೆ. ತುಂಬ ಅದ್ಧೂರಿಯಾಗಿ ಗೃಹಪ್ರವೇಶ ನಡೆಯಿತು. ಸಾವಿರದ ಲೆಕ್ಕದಲ್ಲಿ ಅತಿಥಿಗಳು ಬಂದು ಹೋದರು. ಮನೆಯೊಳಗಿದ್ದ ದೇವಸ್ಥಾನ, ಪೂಜೆಗೆಂದು ನಿಯೋಜಿತನಾಗಿದ್ದ ಅರ್ಚಕನನ್ನೂ ಎಲ್ಲರೂ ನೋಡಿದರು. ಇಂಥದೊಂದು ವ್ಯವಸ್ಥೆ ಮಾಡಿದ್ದಕ್ಕೆ ಎಲ್ಲರೂ ಹೊಗಳಿದರು. ಒಲುಮೆಯ ಪೂಜೆಗೆ ಇಂಥ ಆಡಂಬರ ಬೇಕಿಲ್ಲ ಎಂಬ ಕಿವಿ ಮಾತನ್ನೂ ಯಾರೂ ಹೇಳಲಿಲ್ಲ. ಎಲ್ಲರ ಹೊಗಳಿಕೆಯ ಮಧ್ಯೆ ನಾನು ಮೈಮರೆತಿದ್ದೆ. ಮನೆಗೆ ಬಂದವರೆಲ್ಲ ನನ್ನನ್ನು ಹೊಗಳಲಿ ಎಂದು ಆಸೆಪಟ್ಟೆ. ಕಣ್ಣೆದುರಿಗಿರುವುದು ಸುಳ್ಳಿನ ಗೋಪುರ. ನನ್ನದು ತೋರಿಕೆಯ ಭಕ್ತಿ ಎಂದು ನನಗೆ ಅರ್ಥವಾಗಿರಲೇ ಇಲ್ಲ. ಇಂಥ ಸಂದರ್ಭದಲ್ಲಿ ನೀವು ಮನೆಗೆ ಬಂದಿರಿ. ಮರ್ಮಕ್ಕೆ ತಾಗುವಂಥ ಮಾತಾಡಿದಿರಿ. ಆ ಮೂಲಕ ದರ್ಶನ ಮಾಡಿಸಿದಿರಿ. ನಿಮಗೆ ಋಣಿ…’
ಯೆಸ್, ಸತ್ಯಕ್ಕೆ ಸಾವಿಲ್ಲ ಎಂಬ ನನ್ನ ನಂಬಿಕೆ ಅವತ್ತು, ಮತ್ತೆ ನಿಜವಾಗಿತ್ತು.
ಪ್ರತಿ ಸಂದರ್ಭದಲ್ಲೂ ನಾನು ಪ್ರತಿಪಾದಿಸುವುದಿಷ್ಟೇ: ಮನಸ್ಸಿನ ನಂಬಿಕೆಗೆ ವಿರುದ್ಧವಾಗಿ ಯಾವತ್ತೂ ನಡೆದುಕೊಳ್ಳಬೇಡಿ. ಕಂದಾಚಾರಗಳ ವಿರುದ್ಧ ಪ್ರತಿಭಟಿಸಲು ಹಿಂಜರಿಯ ಬೇಡಿ. ಸತ್ಯದ ಪರವಾಗಿ ನಿಲ್ಲಲು ಅಳುಕಬೇಡಿ. ಸುಳ್ಳಿನ ಪರವಾಗಿ ಮಾತಾಡಲು, ವಾದ ಮಾಡಲು ನೂರು ಮಂದಿಯೇ ಬಂದರೂ, ಕೊನೆಗೆ ಜಯವಾಗುವುದು ಸತ್ಯಕ್ಕೆ ಎಂಬುದನ್ನು ಮರೆಯಬೇಡಿ….
ತುಂಬ ಜನರಿಗೆ ಇಂಥಹ “ಕಟು ಸತ್ಯ” ನುಂಗಲಾರಧ ತುತ್ತಾಗಿರುತ್ತಧೆ. ಈ ರೀತಿಯ ಒಂದು ಉದಾಹರಣೆ ನನ್ನಲ್ಲಿಯೂ ಇದೆ.
ನಾನು ಚಿಕ್ಕವನಿದ್ಧಾಗ ನನಗೆ ಮೊದಲು ನೋಡಿದ ಧಾರಾವಾಹಿಯ ನೆನಪು ಬರುವುದು “ಚಾಣಕ್ಯ”. ನಮ್ಮ ತಂದೆ ಹಾಗು ತಾಯಿ ನನ್ನನು ಈ ಧಾರಾವಾಹಿ ನೋಡಲು ಪ್ರತಿ ಭಾನುವಾರ ನೆನಪಿಸಿ ನಮ್ಮ ಪಕ್ಕದ uncle ಮನೆಗೆ ಕಳುಹಿಸಿ ಕೊಡುತಿದ್ದರು . ನಾನು ಕೂಡ, ತುಂಬ ನಿಷ್ಠೆಯ ಮನಸಿನಿಂದ ನೋಡಲು ಹೋಗುತ್ತಿದೆ. ಕಾಲಕ್ರಮೇಣ ನಾನು ದೊಡ್ಡವನಾದ ಮೇಲೆ, ಒಂದು ದಿನ “ಚಾಣಕ್ಯನ ನೀತಿ” ಪುಸ್ತಕ ಕರೀದಿಸಿ ಮನೆಗೆ ತೆಗೆದುಕೊಂಡು ಹೋದೆ. ಆಗ, ನನ್ನ ತಂದೆ ನನಗೆ “ಬಾಯ್ ತುಂಬ” ಹೊಗಳಿ ಅ ಪುಸ್ತಕನ ಹರಿದುಹಾಕಿದರು. ಆಗ ನನಗೆ ತಿಳಿದಿದ್ದೆನೆಂದರೆ, ಚಾಣಕ್ಯ ಹೆಣ್ಣಿನ ಬಗ್ಗೆ ತುಂಬ “ಕೀಳಾಗಿ” ತಿಳಿಸಿ ಕೊಟ್ಟಿರುವುಧರಿಂದ ಅವನು ಒಬ್ಬtaboo ಆಗಿದ್ದ. ಅವಾಗಲೇ ನಾನು ಜನರನ್ನ hypocrites ಅಂತ consider ಮಾಡೋಕ್ಕೆ ಶುರು ಮಾಡ್ಧೆ!!
gud artical
ನಿಜ ಸಾರ್, ಅತ್ಯುತ್ತಮ ಲೇಖನ, ಓಶೋ ಲೈಂಗಿಕತೆ ಶೇ.೨ರಷ್ಟು ಬರೆದಿರಬಹುದು, ಆದರೆ ಅವರ ಇತರ ವಿಚಾರಗಳು ಸ್ಪೂರ್ತಿದಾಯಕ. ಬದುಕಿನಲ್ಲಿ ನಿತ್ಯ ಎದುರಾಗುವ ಸಮಸ್ಯೆಗಳಿಗೆ ಓಶೋ ಸರಳವಾಗಿ ನೀಡುವ ಪರಿಹಾರ ಅದ್ಭುತ. ಆದರೆ ವಿರೋಧಿಗಳು ಅಂದೂ ಇದ್ದರು, ಇಂದೂ ಇದ್ದಾರೆ, ಎಂದೆಂದಿಗೂ ಇರುತ್ತಾರೆ. ಲೋಕದ ಡೊಂಕಿನಂತೆ. ನನಗನ್ನಿಸುತ್ತೆ ವಿರೋಧಿಗಳು ಇದ್ದರೇನೇ ಮಜಾ ಅಂತ.
For your kind information, Socrates existed during 469 BC – 399 BC long before Christ was born. I wonder what did he say about Christianity !! This is an article by today’s most celebrated Kannada journalist and the head of leading newspaper and News channel !! God help the followers
1. Osho has never said that Socrates was against Christians, he has said that Socrates was against the so called concept of “God”.
but this doesn’t spoil the article, the message is clear; Socrates had guts to speak against so called messiahs(25 centuries ago) and later people accepted, it it doesn’t matter much which religion it was or who it was.
2.Same with sex also, why you consider it as a taboo, just because your society or so called religions speak against it? don’t be prejudiced and against it(remember if you are against sex it means you are against yourself, because sex is there within you and you are condemning it). This is what Osho has said about sex, just read any of his book and I bet it brings some kind of transformation in you.
“My message is not a doctrine, not a philosophy. My message is a certain alchemy, a science of transformation.”
-Osho
ಸಾಕ್ರಿಟಿಸ್ರವರ ಕಾಲದಲ್ಲಿ ಕ್ರೈಸ್ತ ಧರ್ಮ ಹುಟ್ಟಿರಲೇ ಇಲ್ಲ, ಕ್ರೈಸ್ತ ಧರ್ಮ ಹುಟ್ಟುವ ೪ ಶತಮಾನಗಳ ಮುಂಚೆಯೇ ಅವರ ಜನ್ಮವಾಗಿತ್ತು, ಇಂಥ ತಪ್ಪುಗಳು ಪೂರ್ತಿ ಲೇಖನದ ಮಹತ್ವವನ್ನೇ ಹಾಳು ಮಾಡಬಹುದಲ್ಲವೇ??
Yes……. SATHYA MEVA JAYATHE
Nice article sir, its profound .. Most of the people do jump to conclusions without knowing the entire story !
Sir,
At the time of Socrates there was no Christianity. Then how come he opposed it. Please read this link sir.
http://en.wikipedia.org/wiki/Socrates
Thanks and Regards,
Shiva
ಸತ್ಯವೇ ನಮ್ಮ ತಾಯಿ ತಂದೆ.
ಸತ್ಯವೇ ನಮ್ಮ ಬಂಧು ಬಳಗ
ಸತ್ಯವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾಪರಮಾತ್ಮನು…….ಸತ್ಯಮೇವಜಯತೆ.
Yaava kaalada shaastra Enu heLidarenu…
ninnedeya danigoo migilaada Shaastravihudenu…?
-Kuvempu
The one and only one thing which doesn’t change even at the most critical situations of time is nothing but the TRUTH..!!
- Albert Einstein.
tamma ee lekhana tumba chennagide sir.. tamage Shubhavaagali..
i love this article and specially this line “ನೆನಪಿಡಿ, ಎಂಥ ಪ್ರತಿರೋಧ ಎದುರಾದರೂ ಸತ್ಯ ಸಾಯುವುದಿಲ್ಲ. ತುಂಬ ನಿಧಾನವಾಗಿಯಾದರೂ ಸರಿ, ಅದು ತನ್ನ ಅಸ್ತಿತ್ವವನ್ನು ಸಾಧಿಸಿಯೇ ತೀರುತ್ತದೆ.”. thanks a million for giving this super article for us..:)
Awesome articel sir.
I just want to say I am beginner to blogs and seriously savored your web site. Most likely I’m planning to bookmark your website . You certainly have amazing writings. Thanks a bunch for revealing your web-site.
Nijakku olle lekhana sir. Budha heldange maadokintha avna moorthi pooje maadidre punya baruthe anno nambike janakke! enmadodu. Ella mahanvyakthigala vicharadallu agirodu ide. Aagaga intha vicharagalanna theredido nimge athmeeya danyavadagalu. Sathyasathyathegala paraamarshe munduvareyali.
NICE SIR