ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.
ಮುಂದೆ ಓದಿ...ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.
ಮುಂದೆ ಓದಿ...ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.
ಮುಂದೆ ಓದಿ...ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ
ಮುಂದೆ ಓದಿ...ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.
ಮುಂದೆ ಓದಿ...ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.
ಮುಂದೆ ಓದಿ...ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!
ಮುಂದೆ ಓದಿ...ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.
ಮುಂದೆ ಓದಿ...
ಅವನ ನಿಜವಾದ ಹೆಸರು ಬಹುಶಃ ಯಾರಿಗೂ ಗೊತ್ತಿರಲಿಲ್ಲ. ಎಲ್ಲರೂ ಅವನನ್ನು ಚಾನ್ ಎನ್ನುತ್ತಿದ್ದರು. ಸ್ಮಶಾನದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಚಾನ್, ಸದಾ ಚಟುವಟಿಕೆಯಿಂದಿದ್ದ ಮನುಷ್ಯ. ದಿನವೂ ಹತ್ತಾರು ಸಾವುಗಳನ್ನು ನೋಡುವುದೇ ಅದೆಷ್ಟೋ ವರ್ಷಗಳಿಂದ ಅವನ ಬದುಕಾಗಿಹೋಗಿತ್ತು. ಈ ಸಂದರ್ಭದಲ್ಲಿ ಮನೆ ಮನೆಯ ಕಷ್ಟಗಳು, ಗುಟ್ಟುಗಳು ಬಹಿರಂಗವಾಗುತ್ತಿದ್ದವು. ಒಳಜಗಳಗಳು ಚಾನ್್ನ ಕಣ್ಣ ಮುಂದೆಯೇ ನಡೆದುಹೋಗುತ್ತಿದ್ದವು. ಕೆಲವೊಂದು ಸಂದರ್ಭದಲ್ಲಿ ಚಾನ್, ಎಲ್ಲವನ್ನೂ ನೋಡುತ್ತಾ ಮೂಕಪ್ರೇಕ್ಷಕನಂತೆ ಉಳಿದುಬಿಡುತ್ತಿದ್ದ. ಕೆಲವು ಸಂದರ್ಭಗಳಲ್ಲಿ ಎಲ್ಲರಿಗೂ ಸಮಾಧಾನ ಹೇಳಿ ಅವರ ಮೆಚ್ಚುಗೆಗೆ ಪಾತ್ರನಾಗುತ್ತಿದ್ದ. ಚಾನ್್ಗೆ ಮದುವೆಯಾಗಿತ್ತಾ? ಅದು ಯಾರಿಗೂ ಗೊತ್ತಿರಲಿಲ್ಲ. ಸ್ಮಶಾನಕ್ಕೆ ಬಂದವರಿಗೆ ತಮ್ಮವೇ ಆದ ಸಾವಿರ ಸಂಕಟಗಳಿರುತ್ತಿದ್ದವು. ಹಾಗಾಗಿ, ಚಾನ್್ನ ಕಷ್ಟ-ಸುಖ ಕೇಳಲು ಯಾರಿಗೂ ಸಮಯವಾಗಲಿ, ಆಸಕ್ತಿಯಾಗಲಿ ಇರಲಿಲ್ಲ. ಚಾನ್ ಕೂಡ ಯಾರೊಂದಿಗೂ, ಯಾವತ್ತೂ ತನ್ನ ಬದುಕಿನ ಕಥೆ ಹೇಳಿಕೊಂಡವನಲ್ಲ. ಅಂತ್ಯಸಂಸ್ಕಾರದ ಸಂದರ್ಭದಲ್ಲಿ ತನ್ನಿಂದ ಸಾಧ್ಯವಾದ ಸಹಾಯ ಮಾಡುತ್ತಾ, ಅದೇ ಸ್ಮಶಾನದ ಅಂಚಿನಲ್ಲಿದ್ದ ಒಂದು ಮನೆಯಲ್ಲಿ ಆರಾಮಾಗಿದ್ದ. ಆ ಪುಟ್ಟ ಮನೆ, ಅವನ ಪಾಲಿಗೆ ಕಚೇರಿ ಕಂ ಮನೆ- ಎರಡೂ ಆಗಿತ್ತು.
ಪ್ರತಿ ತಿಂಗಳ 5ನೇ ತಾರೀಖಿಗೆ ಸರಿಯಾಗಿ ಚಾನ್್ನ ಹೆಸರಿಗೆ, ರಿಜಿಸ್ಟರ್ಡ್ ಪೋಸ್ಟ್ ಮೂಲಕ ಒಂದು ಕವರ್ ಬರುತ್ತಿತ್ತು. ನಗರದಲ್ಲಿದ್ದ ಶ್ರೀಮಂತ ಕುಟುಂಬದ ಹೆಂಗಸೊಬ್ಬಳು ಅದನ್ನು ಕಳುಹಿಸುತ್ತಿದ್ದಳು. ಕೆಲವು ವರ್ಷಗಳ ಹಿಂದೆ ಸಂಭವಿಸಿದ್ದ ಕಾರು ಅಪಘಾತದಲ್ಲಿ ಆಕೆಯ ಮಗ ತೀರಿಕೊಂಡಿದ್ದ. ಈ ಸ್ಮಶಾನದಲ್ಲಿಯೇ ಅವನ ಅಂತ್ಯಸಂಸ್ಕಾರ ಮಾಡಲಾಗಿತ್ತು. ಆ ಜಾಗದಲ್ಲಿ ಒಂದು ಸಮಾಧಿಯನ್ನೂ ನಿರ್ಮಿಸಲಾಗಿತ್ತು. ಅದಕ್ಕೆ ಹೂವಿನ ಅಲಂಕಾರ ಮಾಡಲೆಂದೇ ಆ ಹೆಂಗಸು ಕವರಿನೊಳಗೆ ಹಣವಿಟ್ಟು ಪೋಸ್ಟ್ ಮೂಲಕ ಕಳಿಸುತ್ತಿದ್ದಳು. ಕವರ್್ನೊಳಗೆ ಒಂದು ಪತ್ರವೂ ಇರುತ್ತಿತ್ತು- ‘ಈ ಪತ್ರದೊಂದಿಗೆ 1000 ರು.ಗಳನ್ನು ಕಳಿಸಿರುತ್ತೇನೆ. ಈ ಹಣಕ್ಕೆ ಬರುವ ಹೂವನ್ನು ಖರೀದಿಸಿ, ಅದರಿಂದ ನನ್ನ ಮಗನ ಸಮಾಧಿಯನ್ನು ಅಲಂಕರಿಸಬೇಕಾಗಿ ವಿನಂತಿ…’ ಇದಿಷ್ಟೂ ಆ ಪತ್ರದ ಸಾರಾಂಶವಾಗಿರುತ್ತಿತ್ತು.
ಅದೊಂದು ಮುಂಜಾನೆ, ಚಾನ್್ನ ಮನೆಯಿಂದ ತುಸು ದೂರದಲ್ಲಿ ಕಾರೊಂದು ಬಂದು ನಿಂತಿತು. ಅದರಿಂದ ಕೆಳಗಿಳಿದ ಡ್ರೈವರ್, ಸರಸರನೆ ಚಾನ್್ನ ಬಳಿ ಬಂದು ಹೇಳಿದ: ‘ಕಾರಿನಲ್ಲಿ ಮೇಡಂ ಇದ್ದಾರೆ. ಅವರಿಗೆ ಕೆಳಗೆ ಇಳಿಯಲೂ ಆಗದಂಥ ನಿಶ್ಶಕ್ತಿ. ನಿಜ ಹೇಳಬೇಕೆಂದರೆ, ಆಕೆ ಇನ್ನು ಒಂದು ವಾರ ಬದುಕಿದರೆ ಅದೇ ಹೆಚ್ಚು. ಅಷ್ಟೊಂದು ದುರ್ಬಲವಾಗಿದ್ದಾರೆ. ನಾನು ಈ ಹೆಂಗಸಿನ ಹತ್ತಿರದ ಬಂಧು. ಸ್ಮಶಾನದಲ್ಲಿ ಈಕೆಯ ಮಗನ ಸಮಾಧಿಯೂ ಇದೆಯಂತೆ. ಆ ವಿಷಯವಾಗಿ ನಿನ್ನೊಂದಿಗೆ ಏನೋ ಹೇಳಬೇಕಿದೆಯಂತೆ. ಹಾಗಂತ ಈಕೆ ನಾಲ್ಕು ದಿನಗಳಿಂದಲೂ ಹೇಳುತ್ತಿದ್ದಳು. ಆಕೆಯ ಆರೋಗ್ಯ ದಿನಕ್ಕೊಂದು ರೀತಿ ಹದಗೆಡುತ್ತಿತ್ತು. ಇವತ್ತು ಸ್ವಲ್ಪ ಪರವಾಗಿಲ್ಲ. ಇದ್ದುದರಲ್ಲೇ ಪರವಾಗಿಲ್ಲ ಅನಿಸಿದ್ದರಿಂದ ಕರ್ಕೊಂಡು ಬಂದಿದೀನಿ. ನೀವು ತಪ್ಪು ತಿಳಿಯದೆ ಕಾರ್ ನಿಂತಿರುವ ಜಾಗಕ್ಕೆ ಬರುತ್ತೀರಾ… ಪ್ಲೀಸ್…’
ಚಾನ್್ಗೆ ತಕ್ಷಣವೇ, ಪ್ರತಿ ತಿಂಗಳೂ 5ನೇ ತಾರೀಖು ಬರುತ್ತಿದ್ದ ರಿಜಿಸ್ಟರ್ಡ್ ಪೋಸ್ಟ್್ನ ನೆನಪಾಯಿತು. ಡ್ರೈವರ್ ಕಡೆ ತಿರುಗಿ ಈತ ತಕ್ಷಣವೇ ಕೇಳಿದ- ‘ಆಕೆಯ ಹೆಸರು ಮೇಡಂ ವಿಲ್ಸನ್ ಅಂತ ತಾನೆ?’
‘ಹೌದು. ಕಾರ್್ನಲ್ಲಿ ಇರೋದು ಮೇಡಂ ವಿಲ್ಸನ್ ಅವರೇ’ ಎಂದ ಚಾಲಕ. ಸರಿ ನಡೀರಿ ಹಾಗಾದ್ರೆ. ಮೇಡಂ ವಿಲ್ಸನ್ ನಂಗೆ ತುಂಬಾ ಚೆನ್ನಾಗಿ ಗೊತ್ತು. ಮೂರು ವರ್ಷಗಳಿಂದ ಪ್ರತಿ ತಿಂಗಳೂ 5ನೇ ತಾರೀಖು ಸಿಗುವ ಹಾಗೆ ನನ್ನ ಹೆಸರಿಗೆ ಅವರು ದುಡ್ಡು ಕಳಿಸ್ತಾರೆ. ಈ ಹಣದಲ್ಲಿ ಹೂ ಖರೀದಿಸಿ, ಅಷ್ಟನ್ನೂ ನನ್ನ ಮಗನ ಸಮಾಧಿಯ ಮುಂದೆ ಇಡಿ ಎಂಬ ಒಕ್ಕಣೆಯ ಪತ್ರವನ್ನೂ ಹಣದ ಜೊತೇಲಿ ಇಟ್ಟಿರ್ತಾರೆ ಅಂದ ಚಾನ್.
ನಂತರ, ಅವರಿಬ್ಬರೂ ಕಾರ್್ನ ಬಳಿಗೆ ಹೋದರು. ಹಿಂದಿನ ಸೀಟ್್ನಲ್ಲಿ ಅಜ್ಜಿ ಎಂದು ಹೇಳಬಹುದಾದ ಹೆಂಗಸೊಬ್ಬಳು ಮಲಗಿದ್ದಳು. ಆಕೆಯ ದೇಹ ಎಲುಬಿನ ಗೂಡಾಗಿತ್ತು, ಕಂಗಳು ಅರ್ಧ ಮುಚ್ಚಿದ್ದವು. ಆಕೆ ನಿಸ್ತೇಜಳಾಗಿ ಮಲಗಿದ್ದಳು. ಉಸಿರಾಡುತ್ತಿದ್ದಾಳೆ ಎಂಬುದನ್ನು ಗಮನಿಸಿದವರು ಮಾತ್ರ ಆಕೆ ಬದುಕಿದ್ದಾಳೆ ಎಂದು ಹೇಳಬಹುದಿತ್ತು. ಕಾರ್್ನ ಕಿಟಕಿಯ ಮೇಲೆ ಮೆಲ್ಲಗೆ ಸದ್ದು ಮಾಡಿದ ಡ್ರೈವರ್. ಶಬ್ದ ಕೇಳಿ ಆಕೆ ಎಚ್ಚರಗೊಂಡಳು. ಚಾನ್್ನ ಕಡೆ ನೋಡಿ- ‘ನಾನು ಮೇಡಂ ವಿಲ್ಸನ್್’ ಎಂದಳು.
‘ಹಾ, ಗೊತ್ತು ಮೇಡಂ. ನೀವು ಪ್ರತೀ ತಿಂಗಳ ಐದನೇ ತಾರೀಖು ದುಡ್ಡು ಕಳಿಸ್ತಾ ಇದ್ರಲ್ಲ, ನಾನು ಮೂರು ವರ್ಷದಿಂದ ಅಂಚೆಯವರಿಂದ ನಿಮ್ಮ ಕವರ್ ತಗೊಳ್ತಾ ಇದೀನಲ್ಲ…’ ಎಂದ ಚಾನ್.
ಈ ಮಾತು ಕೇಳಿ ಮೇಡಂ ವಿಲ್ಸನ್್ಳ ಕಂಗಳು ಮಿನುಗಿದವು. ಆಕೆ ಒಮ್ಮೆ ಗಂಟಲು ಸರಿಪಡಿಸಿಕೊಂಡು ಹೇಳಿದಳು- ‘ಈ ತಿಂಗಳು ಕವರ್ ಮೂಲಕ ಹಣ ಕಳಿಸಲಿಲ್ಲ. ಬದಲಾಗಿ ನಾನೇ ಬಂದಿದೀನಿ. ಯಾಕೆ ಗೊತ್ತಾ? ನಾನು ತುಂಬಾ ದಿನ ಬದುಕೋದಿಲ್ವಂತೆ. ಹಾಗಂತ ಡಾಕ್ಟರ್ ಹೇಳಿದ್ರು ಮೊನ್ನೆ. ಈ ವಯಸ್ಸಲ್ಲಿ ನಾನು ಬದುಕಿ ಅನುಭವಿಸಬೇಕಾದದ್ದು ಏನೂ ಇಲ್ಲ. ಭವಿಷ್ಯದ ಆಸೆಯಾಗಿದ್ದ ಮಗನನ್ನು ಕಳೆದುಕೊಂಡೆನಲ್ಲ, ಅವತ್ತೇ ನಾನು ಮಾನಸಿಕವಾಗಿ ಸತ್ತುಹೋಗಿದೀನಿ. ಹಾಗಾಗಿ ಸತ್ತು ಹೋಗ್ತೀನಲ್ಲ ಎಂಬ ಚಿಂತೆಯಾಗಲಿ, ಭಯವಾಗಲಿ ನನಗಿಲ್ಲ, ಸಾಯುವ ಮುಂಚೆ ಕಡೆಯದಾಗಿ ಮಗನ ಸಮಾಧಿ ನೋಡಬೇಕು ಅನ್ನಿಸ್ತು. ಹಾಗಾಗಿ ಬಂದಿದೀನಿ. ಮಗನ ಸಮಾಧಿಗೆ ಖುದ್ದಾಗಿ ಹೂವಿಡಬೇಕು ಎಂಬ ಆಸೆ ನನ್ನದು. ಸಮಾಧಿ ಇರುವ ಜಾಗಕ್ಕೆ ಕರ್ಕೊಂಡು ಹೋಗ್ತೀರಾ…ಪ್ಲೀಸ್…’
ಆಗಲಿ ಎಂಬಂತೆ ತಲೆಯಾಡಿಸಿದ ಚಾನ್, ಕಾರ್್ನ ಮುಂದಿನ ಸೀಟಿನಲ್ಲಿ ಕುಳಿತ. ಇಕ್ಕಟ್ಟಾದ ದಾರಿಯಲ್ಲಿ ಸಾಗಿದ ಕಾರನ್ನು ಒಂದೆಡೆ ನಿಲ್ಲಿಸಿ- ‘ಮೇಡಂ ವಿಲ್ಸನ್, ಇದೇ ನಿಮ್ಮ ಮಗನ ಸಮಾಧಿ’ ಅಂದ.
ಈ ಮಾತು ಕೇಳುತ್ತಿದ್ದಂತೆಯೇ ಮೇಡಂ ವಿಲ್ಸನ್ ಚುರುಕಾದಳು. ಯಾವುದೊ ಹೊಸ ಶಕ್ತಿ ತುಂಬಿಕೊಂಡವಳಂತೆ ಸರಾಗವಾಗಿ ಎದ್ದು ಕೂತಳು. ಲಗುಬಗೆಯಿಂದ ಕಾರ್್ನ ಕಿಟಕಿ ಗಾಜು ಇಳಿಸಿದಳು. ನಂತರ, ಎದೆಯ ಮೇಲೆ ಕೈ ಇಟ್ಟುಕೊಂಡು ಅದೇನೋ ಪ್ರಾರ್ಥಿಸಿದಳು. ಆ ಸಂದರ್ಭದಲ್ಲಿ ಇಡೀ ಸ್ಮಶಾನದಲ್ಲಿ ಮೌನ ಆವರಿಸಿತ್ತು. ಆಗೊಮ್ಮೆ ಈಗೊಮ್ಮೆ ಕೀಚ್ ಕೀಚ್ ಎನ್ನುವ ಪಕ್ಷಿಗಳ ಸದ್ದು ಬಿಟ್ಟರೆ ಬೇರಾವ ಶಬ್ದವೂ ಕೇಳಿಸುತ್ತಿರಲಿಲ್ಲ. ಆಕೆ, ನಡುಗುವ ಕೈಗಳಿಂದ, ಒಂದು ಜಾಜಿ ಮಲ್ಲಿಗೆಯ ಹಾರವನ್ನು ತೆಗೆದು, ಚಾನ್್ನ ಕೈಗಿಟ್ಟು, ನನ್ನ ಮಗನಿಗೆ ಇದನ್ನು ಅರ್ಪಿಸಿಬಿಡಿ ಎನ್ನುತ್ತಾ ಕಣ್ತುಂಬಿಕೊಂಡಳು. ಎರಡನೇ ಮಾತಿಲ್ಲದೆ ಚಾನ್ ಹಾಗೆಯೇ ಮಾಡಿದ.
ಒಮ್ಮೆ ದೀರ್ಘವಾಗಿ ಉಸಿರೆಳೆದುಕೊಂಡ ಆಕೆ ಮತ್ತೆ ಕಣ್ಣು ಒರೆಸಿಕೊಂಡಳು. ಸುಕ್ಕುಗಟ್ಟಿದ್ದ ಆಕೆಯ ಕೆನ್ನೆಯ ಮೇಲೆ ಕಣ್ಣೀರಿನ ಪದರೊಂದು ಹಾಗೇ ಉಳಿಯಿತು. ಅದನ್ನು ಗಮನಿಸುವ ಸ್ಥಿತಿಯಲ್ಲಿ ಯಾರೂ ಇರಲಿಲ್ಲ. ಆಕೆ ಇನ್ನೇನು ಹೊರಡಬೇಕು ಅನ್ನುವಾಗಲೇ, ಚಾನ್ ಹೇಳಿಬಿಟ್ಟ- ‘ಮೇಡಂ, ನನ್ನಿಂದ ಮಹಾಪರಾಧವಾಗಿದೆ. ಕ್ಷಮಿಸಿ. ಏನೆಂದರೆ, ಇಷ್ಟು ದಿನ ನೀವು ಕಳುಹಿಸಿದ ಹಣದಿಂದ ನಾನು ಹೂ ಖರೀದಿಸಿದೀನಿ ನಿಜ. ಆದರೆ, ಅದನ್ನು ನಿಮ್ಮ ಮಗನ ಸಮಾಧಿಗೆ ಹಾಕಿಲ್ಲ!’
ಚಾನ್್ನ ಮಾತು ಕೇಳಿ ಆ ವೃದ್ಧೆಯ ಮುಖ ಬಾಡಿಹೋಯಿತು. ತಕ್ಷಣವೇ ಆಕೆ- ‘ಮೈ ಗಾಡ್್’ ಎಂದು ಉದ್ಗರಿಸಿದಳು. ನಂತರ- ನೀನು ಹೇಳ್ತಾ ಇರೋದು ನಿಜವಾ? ನೀನು ಹೇಳ್ತಿರೋದು ನಿಜವಾ ಎಂದು ಚಾನ್್ನನ್ನು ಎರಡೆರಡು ಬಾರಿ ಪ್ರಶ್ನಿಸಿದಳು.
ಈಗ ಚಾನ್ ತುಂಬಾ ಸ್ಪಷ್ಟವಾಗಿ ಹೇಳಿದ- ‘ಮೇಡಂ ವಿಲ್ಸನ್, ನಿಮಗೆ ಸುಳ್ಳು ಹೇಳಲಾರೆ. ನಿಮ್ಮ ಹಣವನ್ನು ನಾನು ದುರ್ಬಳಕೆ ಮಾಡಿಕೊಂಡಿಲ್ಲ. ಅದರಿಂದ ನಾನು ಹೂಗಳನ್ನು ಖರೀದಿಸಿದ್ದು ನಿಜ. ಅವುಗಳನ್ನು ನಿಮ್ಮ ಮಗನ ಸಮಾಧಿಗೆ ಶೃಂಗರಿಸಲು ಬಳಸಲಿಲ್ಲ ಎಂಬುದೂ ನಿಜ. ನಾನು ಖರೀದಿಸಿದೆನಲ್ಲ, ಅಷ್ಟೂ ಹೂಗಳು ಒಳ್ಳೆಯ ಕೆಲಸಕ್ಕೆ ಬಳಕೆಯಾಗಿವೆ. ವಾರಕ್ಕೊಮ್ಮೆ, ತಿಂಗಳಿಗೊಮ್ಮೆ ಆಸ್ಪತ್ರೆಗೆ, ವೃದ್ಧಾಶ್ರಮಗಳಿಗೆ, ಜೈಲುಗಳಿಗೆ ಭೇಟಿ ಕೊಡುವುದು ನನ್ನ ಅಭ್ಯಾಸ. ಪ್ರತಿಬಾರಿ ಆಸ್ಪತ್ರೆಯ ಮೆಟ್ಟಿಲು ಹತ್ತಿದಾಗಲೂ ಯಾರೋ ರೋಗಿ ಎದುರಾಗುತ್ತಿದ್ದ. ಆತನ ಕಂಗಳಲ್ಲಿ ಸಾವಿನ ಭೀತಿ ಇರುತ್ತಿತ್ತು. ನಿಮ್ಮ ಹಣದಿಂದ ಖರೀದಿಸಿದ್ದೆನಲ್ಲ, ಆ ಹೂವನ್ನು ರೋಗಿಗೆ ನೀಡುತ್ತಿದ್ದೆ. ಬೇಗ ಹುಶಾರಾಗಿ ಎಂದು ಹಾರೈಸುತ್ತಿದ್ದೆ. ಹೆಚ್ಚಿನ ಸಂದರ್ಭಗಳಲ್ಲಿ ಬೊಕೆಗಳ ಮೇಲೆ ನಿಮ್ಮ ಹೆಸರನ್ನೇ ಬರೆದಿರುತ್ತಿದ್ದೆ. ಜೈಲಿಗೆ ಹೋದಾಗಲೂ ಅಷ್ಟೆ: ಶಿಕ್ಷೆ ಮುಗಿಸಿ ಹೊಸ ಬದುಕಿನತ್ತ ಹೊರಳಿಕೊಂಡವರಿಗೆ ಮೊದಲು ಬೊಕೆ ನೀಡುತ್ತಿದ್ದೆ. ನಂತರ ಶುಭಹಾರೈಸುತ್ತಿದ್ದೆ. ವೃದ್ಧಾಶ್ರಮದಲ್ಲೂ ಇದೇ ಕೆಲಸವನ್ನು ಒಂದು ವ್ರತದಂತೆ ಮಾಡಿಕೊಂಡು ಬಂದೆ. ನಂಬಿ ಮೇಡಂ, ಬೊಕೆಯನ್ನು ಕಂಡಾಕ್ಷಣ ರೋಗಿಗಳ, ಕೈದಿಗಳ, ವೃದ್ಧ ತಂದೆ-ತಾಯಿಗಳ ಮೊಗ ಅರಳುತ್ತಿತ್ತು. ಅವರು ತುಂಬ ಸಂಭ್ರಮದಿಂದ ಹೂವಿನ ಮಾಧುರ್ಯದಲ್ಲಿ ಮುಳುಗಿಹೋಗುತ್ತಿದ್ದರು. ಕೆಲವರು, ನನಗೂ ಶುಭ ಕೋರುತ್ತಿದ್ದರು. ಕೆಲವೊಮ್ಮೆ ಭಾವೋದ್ವೇಗಕ್ಕೆ ಒಳಗಾಗಿ ಕಣ್ಣೀರು ಸುರಿಸುತ್ತಿದ್ದರು. ಹೀಗೆ ಮಾಡುವ ಬದಲು, ನಿಮ್ಮ ಮಗನ ನಿರ್ಜೀವ ಸಮಾಧಿಯ ಮುಂದೆ ನಾನು ಅಷ್ಟೂ ಹೂವುಗಳನ್ನು ಸುರಿದಿದ್ದರೂ ಏನೂ ಪ್ರಯೋಜನ ಆಗುತ್ತಿರಲಿಲ್ಲ. ಅಲ್ವಾ ಮೇಡಂ? ನನ್ನ ಮನಸ್ಸಿಗೆ ಸರಿ ಅನ್ನಿಸಿದ ಕೆಲಸ ಮಾಡಿದ್ದೇನೆ. ತಪ್ಪು ತಿಳ್ಕೋಬೇಡಿ. ಬೇಸರ ಆಗಿದ್ರೆ ಕ್ಷಮಿಸಿ…’
ಒಂದೆರಡು ನಿಮಿಷ ಮೇಡಂ ವಿಲ್ಸನ್ ಏನೊಂದೂ ಮಾತಾಡಲಿಲ್ಲ. ನಂತರ, ತನ್ನ ಮಗನ ಸಮಾಧಿಯನ್ನು ಒಂದೆರಡು ನಿಮಿಷ ದಿಟ್ಟಿಸಿ ನೋಡಿದಳು. ನಂತರ, ಬೇರೊಂದು ಮಾತಾಡದೆ ಕಾರ್್ನ ಬಾಗಿಲು ಹಾಕಿಕೊಂಡಳು. ಸಂದರ್ಭದ ಸೂಕ್ಷ್ಮತೆಯನ್ನು ಅರ್ಥ ಮಾಡಿಕೊಂಡ ಆಕೆಯ ಬಂಧು, ತಕ್ಷಣವೇ ಕಾರು ಸ್ಟಾರ್ಟ್ ಮಾಡಿದ. ಕಾರ್ ಹೋದ ದಿಕ್ಕನ್ನೇ ನೋಡುತ್ತಾ ನಿಂತ ಚಾನ್- ‘ಛೆ, ಇವತ್ತು ನಾನು ಹಾಗೆಲ್ಲಾ ಮಾತಾಡಬಾರದಿತ್ತು. ಸತ್ಯ ಹೇಳಿ ಆ ವೃದ್ಧೆಯ ಮನಸ್ಸಿಗೆ ಘಾಸಿ ಮಾಡಿಬಿಟ್ಟೆ. ಅದರ ಬದಲಿಗೆ ಒಂದು ಸುಳ್ಳು ಹೇಳಿದ್ದರೆ ಈಗಿನ ಸಂದರ್ಭ ಬೇರೆಯೇ ಆಗಿರ್ತಾ ಇತ್ತೇನೊ’ ಎಂದು ಪೇಚಾಡಿಕೊಂಡ.
ಹೀಗೇ ಐದಾರು ತಿಂಗಳು ಕಳೆದುಹೋದವು. ಈ ಅವಧಿಯಲ್ಲಿ ಹಿಂದಿನಂತೆ ಪ್ರತಿ ತಿಂಗಳೂ ಕವರ್ ಬರುವುದು ನಿಂತಿತ್ತು. ಓಹ್, ಆ ಮುದುಕಿ ತೀರಿಕೊಂಡಿರಬೇಕು. ಕೊನೆಗಾಲದಲ್ಲಿ ಆಕೆಯ ನೆಮ್ಮದಿ ಹಾಳುಮಾಡಿಬಿಟ್ಟೆ. ಅದೊಂದು ತಪ್ಪು ನನ್ನಿಂದ ಆಗಬಾರದಿತ್ತು ಎಂದು ಚಾನ್ ಮತ್ತೆ ಮತ್ತೆ ಅಂದುಕೊಳ್ಳುತ್ತಲೇ ಇದ್ದ. ಆದರೆ, ಅವನ ಅಂದಾಜುಗಳೆಲ್ಲ ಉಲ್ಟಾ ಆಗುವಂಥ ಕ್ಷಣವೊಂದು ಬಂದೇಬಿಟ್ಟಿತು. ಅದೊಂದು ಮುಂಜಾನೆ, ಅವನ ಮನೆಗೆ ತುಂಬ ಹತ್ತಿರದಲ್ಲೇ ಒಂದು ಕಾರ್ ನಿಂತಿತು. ಡ್ರೈವರ್ ಸೀಟಿನಲ್ಲಿದ್ದ ಹೆಂಗಸು, ಒಂದೇ ಸಮನೆ ಹಾರ್ನ್ ಮಾಡುತ್ತಿದ್ದಳು. ಯಾರಿರಬಹುದು ಎಂದು ಯೋಚಿಸುತ್ತಾ ಅತ್ತ ಬಂದ ಚಾನ್, ಮಾತೇ ಹೊರಡದೆ ನಿಂತುಬಿಟ್ಟ. ಏಕೆಂದರೆ, ಡ್ರೈವರ್ ಸೀಟಿನಲ್ಲಿ ಮೇಡಂ ವಿಲ್ಸನ್ ಕುಳಿತಿದ್ದಳು. ಆಕೆಯ ಕಂಗಳಲ್ಲಿ ಗೆಲುವಿತ್ತು.
ಮೇಡಂ, ನೀವಾ? ಎಂದು ಚಾನ್ ನಂಬಲಾಗದೆ ಉದ್ಗರಿಸಿದ. ಆಕೆ, ಕಾರ್್ನ ಬಾಗಿಲು ತೆರೆದು ಹೊರಬಂದು ಹೇಳಿದಳು: ಹೌದು, ನಾನೇ. ಆಗಲೊ ಈಗಲೊ ಸಾಯುವ ಸ್ಥಿತಿಯಲ್ಲಿದ್ದ ನಾನು ಇಷ್ಟು ಬೇಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು ಹೇಗೆ ಎಂಬುದು ನಿನ್ನ ಕುತೂಹಲ ಅಲ್ವಾ? ನಿನಗೆ ಆ ಗುಟ್ಟಿನ ವಿಷಯ ಹೇಳ್ತೇನೆ ಕೇಳು. ತಿಂಗಳುಗಳ ಹಿಂದೆ ಇಲ್ಲಿಗೆ ಬಂದಿದ್ದಾಗ, ನೀನು ಹೇಳಿದೆಯಲ್ಲ; ಆ ಮಾತುಗಳು ನನ್ನ ಮನಸ್ಸಿಗೆ ಬಲವಾಗಿ ನಾಟಿದವು. ಇಲ್ಲದವರಿಗೆ ಸಹಾಯ ಮಾಡಿ ಅವರ ಸಂಭ್ರಮ ನೋಡಿ ಖುಷಿಪಡಬೇಕೇ ವಿನಃ ಇಲ್ಲದ್ದಕ್ಕೆ ಕೊರಗುತ್ತಾ ನೆಮ್ಮದಿ ಕಳ್ಕೋಬಾರದು ಎಂದು ನೀನವತ್ತು ಹೇಳಿದ್ದೆ. ಇಲ್ಲಿಂದ ಆಸ್ಪತ್ರೆಗೆ ಹಿಂದಿರುಗಿದೆನಲ್ಲ; ಅವತ್ತೇ ಅಶಕ್ತರಿಗೆ ನೆರವಾಗಲು ನಿರ್ಧರಿಸಿದೆ. ಹಾಗೆಯೇ ಬದುಕಿದೆ. ಅವರ ಸಂಕಟ, ನೆರವು ಸಿಕ್ಕಾಗಿನ ಅವರ ಸಂಭ್ರಮ, ಅಪರಿಚಿತರ ಹಾರೈಕೆ.. ಇದನ್ನೆಲ್ಲ ನೋಡುತ್ತ ನೋಡುತ್ತ ಮಾತಲ್ಲಿ ಹೇಳಲಾರದಂಥ ಖುಷಿಯಾಯಿತು. ಧನ್ಯತಾಭಾವ ಮನಸ್ಸಿಗೆ ತುಂಬಿಕೊಂಡಿತು. ಮುಂದೆ ನನಗೇ ಗೊತ್ತಿಲ್ಲದ ಹಾಗೆ ನನ್ನ ಸಂಕಟಗಳು ಮರೆಯಾಗಿಹೋದವು. ಪರಿಣಾಮವಾಗಿ, ಎಷ್ಟೆಲ್ಲಾ ಮಾತ್ರೆ, ಟಾನಿಕ್್ಗೂ ವಾಸಿಯಾಗದ ನನ್ನ ಕಾಯಿಲೆ, ಆಕಸ್ಮಿಕವಾಗಿ ಒದಗಿಬಂದ ಸಂತೃಪ್ತಿಯಿಂದ ವಾಸಿಯಾಗಿಬಿಡ್ತು. ಈ ಗುಟ್ಟು ಡಾಕ್ಟರ್್ಗಳಿಗೆ ಅರ್ಥವಾಗಿಲ್ಲ. ಆದರೆ ನನಗೆ ಅರ್ಥವಾಗಿದೆ!
ಆಕೆ ಮಾತು ಮುಗಿಸಿ, ಮತ್ತೆ ನಕ್ಕಳು. ಚಾನ್, ಮಾತಿಲ್ಲದವನಂತೆ ಸುಮ್ಮನೇ ನಿಂತುಬಿಟ್ಟಿದ್ದ….
>>>>>>>>>>
ನಾನು ಹಾಗೂ ನನ್ನ ಮಗಳು ಭಾನು ಅಗ್ದಿ ಅಂದ್ರೆ ಅಗ್ದಿ ಸ್ನೇಹಿತೆಯರು. ನಾನು ಅವಳನ್ನು ಮಗಳೆಂದು ಅಂದುಕೊಂಡಿದ್ದಕ್ಕಿಂತ ಆಪ್ತ ಕಿರಿಯ ಗೆಳತಿ ಎಂದೇ ಭಾವಿಸಿದ್ದೆ. ಆಕೆ ಮದುವೆಯಾಗಿ ತನ್ನ ಗಂಡನ ಮನೆಗೆ ಹೋದಾಗ ನನಗೆ ಅವಳನ್ನು ಬಿಟ್ಟು ಇರಲಾಗಲಿಲ್ಲ. ಒಂದು ತಿಂಗಳ ಬಳಿಕ ಅವಳ ಗಂಡನ (ಅಳಿಯನ) ಮನೆಗೆ ಹೋದೆ. ನನ್ನ ಮನದಾಳದ ಭಾವನೆಗಳನ್ನು ತೋಡಿಕೊಂಡೆ. ಆತ ಅದಕ್ಕೆ ಸಮ್ಮತಿಸಿದ. ಅವರಿಬ್ಬರು ನಮ್ಮ ಮನೆಗೆ ಹತ್ತಿರದಲ್ಲೇ ವಾಸಿಸಲಾರಂಭಿಸಿದರು.
ವಾರದಲ್ಲಿ ಕನಿಷ್ಠ ಮೂರು ದಿನ ನಾವಿಬ್ಬರೂ ಭೇಟಿಯಾಗುತ್ತಿದ್ದೆವು. ಒಂದೋ, ನಾನು ಅವಳ ಮನೆಗೆ ಹೋಗುತ್ತಿದ್ದೆ, ಇಲ್ಲವೇ ಅವಳು ಬರುತ್ತಿದ್ದಳು. ಅವಳು ಬರಲಿ, ಬರದಿರಲಿ, ಪ್ರತಿದಿನ ನಾವಿಬ್ಬರೂ ಮೂರ್ನಾಲ್ಕು ಸಲ ಫೋನಿನಲ್ಲಿ ಮಾತಾಡಿಕೊಳ್ಳುತ್ತಿದ್ದೆವು. ‘ಅಮ್ಮ ನಿನಗಾಗಿ ಚಟ್ನಿ ಮಾಡಿದ್ದೇನೆ, ಸಾಂಬಾರು ಮಾಡಿದ್ದೇನೆ’ ಎಂದು ಬಂದು ಬಿಡುತ್ತಿದ್ದಳು. ವಿಚಿತ್ರವೆನಿಸಬಹುದು, ನಾವಿಬ್ಬರೂ ಆಗಾಗ ಪತ್ರ ಬರೆದುಕೊಳ್ಳುತ್ತಿದ್ದೆವು. ‘ಅಮ್ಮಾ, ನಾನು ನಿನ್ನ ಕ್ಲೋಸ್ ಫ್ರೆಂಡ್್’ ಎಂದು ಫೋನಿನಲ್ಲಿ ಹೇಳುತ್ತಿದ್ದಳು. ಪತ್ರದ ಕೊನೆಯಲ್ಲಿ ‘ನಿನ್ನ ಆಪ್ತ ಸ್ನೇಹಿತೆ’ ಎಂದು ಬರೆಯುತ್ತಿದ್ದಳು. ನನ್ನ ಪಾಲಿಗೆ ಭಾನು ಕೇವಲ ಮಗಳು ಅಥವಾ ಗೆಳತಿಯಷ್ಟೆ ಆಗಿರಲಿಲ್ಲ. ಅವಳೇ ನನಗೆ ಸರ್ವಸ್ವ. ಅವಳೇ ಜೀವನ. ನಾನು ಅವಳಿಗಾಗಿಯೇ ಈ ಭೂಮಿಯ ಮೇಲೆ ಬದುಕಿದ್ದೇನೆ ಎಂದು ಭಾವಿಸಿದ್ದೆ.
ಒಂದು ದಿನ ಹಠಾತ್ತನೆ ಮಿದುಳಿನ ರಕ್ತಸ್ರಾವದಿಂದ ಭಾನು ನಿಧನಳಾದಳು. ನನಗೆ ಹೇಗಾಗಿರಬೇಡ? ನಾನು ಸಂಪೂರ್ಣ ಜರ್ಝರಿತನಾದೆ. ಅವಳಿಲ್ಲದೇ ನನ್ನ ಜೀವನ ಶೂನ್ಯವೆಂದು ಅನಿಸಿತು. ಒಂದು ದಿನ ದೂಡುವುದು ಅಸಾಧ್ಯವೆಂದು ಅನಿಸಲಾರಂಭಿಸಿತು.
ಅವಳು ನಿಧನಳಾದಾಗ ಮಾನವ ಅಂಗಾಂಗ ರಕ್ಷಣ ಸಂಸ್ಥೆಯ ಕಾರ್ಯಕರ್ತರು ಅವಳ ಅಂಗಾಂಗಳನ್ನು ದಾನ ರೂಪದಲ್ಲಿ ನೀಡುವಂತೆ ಕೋರಿದ್ದರು. ನಾನು ಆ ಸ್ಥಿತಿಯಲ್ಲಿ ಅವರ ಕೋರಿಕೆಗೆ ಸಮ್ಮತಿಸಿದ್ದೆ. ಅವಳ ಅಂಗಾಂಗಳನ್ನು ದಾನ ನೀಡಿದ್ದ ವಿಷಯ ಮರೆತೇ ಹೋಗಿತ್ತು.
ಸುಮಾರು ಎರಡು ವರ್ಷಗಳ ನಂತರ, ನನಗೊಂದು ಪತ್ರ ಬಂತು. ಅದನ್ನು ಓದಿ ಅತೀವ ಆನಂದವಾಯಿತು. ಯುವಕನೊಬ್ಬ ಬರೆದ ಪತ್ರ ಅದಾಗಿತ್ತು. ಅವನ ದೇಹದಲ್ಲಿ ಭಾನು ಕಿಡ್ನಿ ಇತ್ತು.
ಪತ್ರದ ಕೊನೆಯಲ್ಲಿ ಆತ ಬರೆದಿದ್ದ-’ನಿನ್ನ ಆಪ್ತ ಸ್ನೇಹಿತೆ!’
ನನ್ನ ಆನಂದಕ್ಕೆ ಪಾರವೇ ಇರಲಿಲ್ಲ.
ನನ್ನ ಆಪ್ತ ಗೆಳತಿ ಭಾನು ಈಗಲೂ ಬದುಕಿದ್ದಾಳೆ. ನಾನು ಅವಳಿಗಾಗಿ ಬದುಕಿದ್ದೇನೆ. ನನ್ನ ಜೀವನಕ್ಕೆ ವಿಶೇಷ ಅರ್ಥ ಬಂದಿದೆಯೆಂದು ಅಂದುಕೊಳ್ಳುತ್ತೇನೆ. ಭಾನು ಸತ್ತು ಬದುಕಿದಳು. ಬದುಕಿನ ಅರ್ಥ ಬದಲಿಸಿದಳು. ಸಾವನ್ನು ಸಹ ಗೆದ್ದಳು.
>>>>>>>>>>
ಮೊನ್ನೆ ಬನ್ನೇರುಘಟ್ಟದಲ್ಲಿ ಆನೆದಾಳಿಗೆ ತುತ್ತಾಗಿ ಮೃತಪಟ್ಟ ಸಾತ್ವಿಕ್್ನ ತಂದೆ-ತಾಯಿಗಳ ವೇದನೆ ನೆನೆದು ಈ ಕತೆಗಳು ನೆನಪಾದವಾ? ಗೊತ್ತಿಲ್ಲ.
-ವಿಶ್ವೇಶ್ವರ ಭಟ್
————————
kshaNikavaada ee badukinalli maanava sambandhagaLa moulya illi tumba chennaagi chitritavaagide sir.. nannannu bhaava paravashanannaagi maaDitu.. tamage Shubhavaagali sir.
ondu maaDabahudu : but, naatakakke plot chikkadaytu : tele-film athawa film maadabahudu ; chennagide !
caption – Saatvka Saavu ; sankata Noovu !! – yendirabahuditte ? !
Really nice article. Vbhat touch was missing from long.
sir ,first article is superrrrrrrrrrrrrrrrrrrrrrrrrrrr…………………….
Namaste sir,
nimma lekahana tumba chennagittu. oodi manassige yeno samadhana aitu. tirihodavaru mattu bittu hodavarannu nenasikondu korago kinta olle kelasa madutta atma santrupti padedukolluvadu yesto vaasi.This article is really nice one.
wish you all the best sir. keep writing.
ಸರ್…..
ನಿಮ್ಮ ವಿಷಯ ತುಂಬಾ ಚೆನ್ನಾಗಿದೆ. ಓದಿ ತುಂಬಾ ಖುಷಿಯಾಯಿತು… ಮೊನ್ನೆ ಕಸ್ತೂರಿ ನ್ಯಜ್ ೨೪x೭ನಲ್ಲಿ ಇದೇ ರೀತಿಯ ಒಂದು ಕಥೆ ಟೆಲಿಕಾಸ್ಟ್ ಮಾಡಿದರು. ಅದು ಏನೆಂದರೆ ಒಬ್ಬ ಸ್ಮಾಶನ ಕಾಯುವವನು… ಅವನಿಗೆ ಗಾಲ್ಫ್ ಆಟವೆಂದರೆ ತುಂಬಾ ಇಷ್ಟ. ಆತ ಸ್ಮಶಾಣವನ್ನೇ ಗಾಲ್ಪ್ ಗ್ರೌಂಡಾಗಿ ಮಾಡಿಕೊಂಡು ಆಟವಾಟುತ್ತಾ ಕೆಲಸದ ಸಮಯದಲ್ಲಿ ಸ್ಮಾಶನಕ್ಕೆ ಕ್ರಿಮಿನಾಶಕ ಸಿಂಪಡಿಸುವ ಸಂದಭರ್ದಲ್ಲಿ ಅಲ್ಲಿ ಕೆಳಗೆ ಬಿದ್ದಿದ್ದ ಟೀ ಸ್ಟಿಕ್ ಅನ್ನು ಬಾಯಲ್ಲಿಟ್ಟುಕೊಂಡು… ಅದರ ಮೇಲೆ ಬಿದ್ದಿದ್ದ ವಿಷ ಅವನ ಬಾಯಿಂದ ದೇಹ ಸೇರಿ ಅಲ್ಲಿಯೇ ಸತ್ತುಬಿದ್ದ ಘಟನೆ ನೆನಪಿಗೆ ಬರುತ್ತದೆ ಸರ್. ನಿಮ್ಮ ಲೇಖನ ತುಂಬಾ ಚೆನ್ನಾಗಿದೆ. ಹಾಗೆಯೇ ನಿಮ್ಮ ಕನ್ನಡ ಪ್ರಭದಲ್ಲಿ ಹಿಂದೆ ಗಾಂಧಿ ಜೀ ಅವರ ಮಗನ ಲೇಖನವೂ ತುಂಬಾ ಚೆನ್ನಾಗಿತ್ತು ಸರ್.
ಧನ್ಯವಾದಗಳು.
ನಿಮ್ಮ ಪ್ರತಿ ಲೇಖನದ ಓದುಗ
ಹರೀಶ್ ಕುಮಾರ್ ಆರ್.
ವಿಜಯವಾಣಿ
ಮುಖಪುಟ ವಿನ್ಯಾಸಕಾರ
ಬೆಂಗಳೂರು
chan mukhantar estu jivakke santvana helidira thanks a lot
chan mukhantara yasto jivakke santavan helidira thanks a lot
Touching stories…
Down in their hearts, wise people know this truth:
the only way to help yourself is to help others.
Elbert Hubbard.
tumba chennagide sir
chaan maadida kelasa ondu subhadra paatha. . jeevanakke. . .sakaaraatmaka badukina definition torisi kotta udaataa jeeva . .thnaks for recap and reminder. . . .
nimma barehagalannu oduvudu ondu sukhaanubhava. . . .
(dooradarshana parichayada subrahmanya)
Bahushaha devaru kodo atyanta katina paristiti andre magana shradha karya Tande madodu. Devru satwik tandege e ankana odo moolaka novanna tadkolo shakthi kodli. Byrappa navaru VAMSHARUKSHA kadambari barebekadre ennastu noov agir beku (Srinivasa shrothri part)
ತುಂಬಾ ಅರ್ಥಗರ್ಭಿತವಾದ ಲೇಖನ. ಓದಿದ ನಂತರ ಮಾತುಗಳೇ ನಿಂತು ಹೋದವು. ಜೀವನದಲ್ಲಿ ಹಣ, ಅಂತಸ್ತು, ಪ್ರತಿಷ್ಟೆಗಳಿಗಿಂತ ಮಾನವ ಮೌಲ್ಯಗಳೇ ಮುಖ್ಯ ಹಾಗೂ ಅವು ಮಾತ್ರ ನಿಜವಾದ ಸಂತೋಷ ಕೊಡುತ್ತವೆ ಅನ್ನೋದು ಇದನ್ನು ಓದಿದರೆ ಸಾಕು ಅರ್ಥವಾಗುತ್ತೆ.
this is one of the best story i ever read
Supderb…………..
superb…………..