ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

‘ನಾನು ಕೇಜ್ರಿವಾಲರ ಸಂದರ್ಶನ ಮಾಡಲೇಬಾರದಿತ್ತು’!

arvind kejriwal aam aadmi party leaderನೂರೆಂಟು ನೋಟ
ವಿಶ್ವೇಶ್ವರ ಭಟ್

ಹೀಗೆ ಬರೆದರೆ ನಾನು ಅರವಿಂದ ಕೇಜ್ರಿವಾಲ ವಿರೋಧಿ ಎಂದು ಭಾವಿಸಬೇಕಿಲ್ಲ.

ಈ ಮಾತನ್ನು ಯಾಕೆ ಹೇಳುತ್ತಿದ್ದೇನೆ ಅಂದ್ರೆ ಸಾಮಾಜಿಕ ತಾಣಗಳಾದ ಫೇಸ್‌ಬುಕ್ ಅಥವಾ ಟ್ವಿಟರ್‌ನಲ್ಲಿ ಆಮ್ ಆದಿ ಪಕ್ಷ (ಆಪ್) ಹಾಗೂ ಕೇಜ್ರಿವಾಲ ನಡೆ-ನುಡಿ ಬಗ್ಗೆ, ನಿರ್ಧಾರಗಳ ಬಗ್ಗೆ ಒಂದು ಸಣ್ಣ ಟೀಕೆ, ಅನಿಸಿಕೆ, ಸಲಹೆ, ಭಾವನೆ, ಅಂಬೋಣ, ಯೋಚನೆಯನ್ನು ವ್ಯಕ್ತಪಡಿಸಿದರೆ ಸಾಕು, ನೂರಾರು ಜನ ತಕ್ಷಣ ಮುಗಿಬೀಳುತ್ತಾರೆ. ಮೋದಿಭಕ್ತರಿರಬೇಕು, ನಮೋ ಬ್ರಿಗೇಡ್ ಸದಸ್ಯನಿರಬೇಕು ಎಂಬ ನಿರ್ಧಾರಕ್ಕೆ ಬರುತ್ತಾರೆ. ಇನ್ನು ಕೆಲವರು ಮೋದಿಯಿಂದ ಹಣ ಪಡೆದು (Pa‌id med‌ia) ಹೀಗೆ ಹೇಳುತ್ತಿರಬೇಕು ಎಂದು ಟೀಕಿಸುತ್ತಾರೆ.

ಕೇಜ್ರಿವಾಲ ಹಾಗೂ ಅವರ ಬಳಗಕ್ಕೆ ತುಸು ಇರುಸು-ಮುರುಸಿನ ಪ್ರಶ್ನೆ ಕೇಳಿದರೂ ಸಾಕು ಈ ಪ್ರಶ್ನೆ ಕೇಳುವಂತೆ ನಿಮಗೆ ಯಾರು ಹಣ ಕೊಟ್ಟಿದ್ದಾರೆಂಬುದು ಗೊತ್ತು ಎಂದು ಅವರ ಅಕ್ಕಪಕ್ಕದವರು ಪ್ರಶ್ನೆ ಕೇಳಿದವರಿಗೆ ಕೇಳಿಸುವಂತೆ ಗುಸುಗುಸು, ಪಿಸಪಿಸ ಮಾಡುತ್ತಾರೆ. ಸ್ವತಃ ಕೇಜ್ರಿವಾಲ ಅವರೇ ಈ ಪ್ರಶ್ನೆಯನ್ನು ಮಾಧ್ಯಮದವರ ಮುಂದೆ ಕೇಳಿ ಮುಜುಗರಕ್ಕೆ ಸಿಲುಕಿದ್ದನ್ನು ನೋಡಿದ್ದೇವೆ. ನಮ್ಮನ್ನು ಯಾರೂ ಪ್ರಶ್ನಿಸಲೇಬಾರದು ಎಂಬ ಧೋರಣೆಯನ್ನು ಕೇಜ್ರಿವಾಲ ಹಾಗೂ ಭಜನಾಮಂಡಳಿ ತಳೆದಂತಿದೆ. ಹೀಗಾಗಿ ಅವರಿಗೆ ಅಹಿತಕರವಾದ ಪ್ರಶ್ನೆ ಕೇಳಿದರೆ, ಟ್ವೀಟ್ ಮಾಡಿದರೆ, ತಕ್ಷಣ ಇವರು ತಮ್ಮ ವಿರೋಧಿಗಳಿರಬೇಕು, ಮೋದಿ ಬೆಂಬಲಿಗರಿರಬೇಕು, Pa‌id med‌iaದವರು, ಯಾರೋ ಹೇಳಿ ಕಳಿಸಿಕೊಟ್ಟಿದ್ದಾರೆ…ಎಂಬ ನಿರ್ಧಾರಕ್ಕೆ ಬರುತ್ತಾರೆ.

ಇದು ಭಯಾನಕ, ಕ್ಷುಲ್ಲಕ, ಕುತ್ಸಿತ ಮನಸ್ಥಿತಿ. ಇದು ಕೇಜ್ರಿವಾಲ ಹಾಗೂ ಅವರ ಪಕ್ಷಕ್ಕೆ ಶೋಭೆ ತರುವಂಥದ್ದಲ್ಲ.

Arvind-Kejriwalಖ್ಯಾತ ಚಿಂತಕ, ಬರಹಗಾರ ವಿ.ಎಸ್. ನೈಪಾಲ್ ಹೇಳಿದ ಮಾತು ಇಲ್ಲಿ ಪ್ರಸ್ತುತ. ‘ಭಾರತದ ರಾಜಕಾರಣಿಗಳ ಬಹಳ ದೊಡ್ಡ ಪ್ರತಿಭೆ ಅಂದರೆ ಸಹನೆ ಹಾಗೂ ಟೀಕೆಗಳನ್ನು ಸಹಿಸುವ ತಾಳ್ಮೆ. ರಾಜಕಾರಣಿಗಳು ಟೀಕೆಗೆ ಗುರಿಯಾಗುವಂತೆ ಬೇರೆಯಾರಾದರೂ ಆಗಿದ್ದರೆ, ಅವರು ಒಂದು ದಿನವೂ ನೆಮ್ಮದಿಯಿಂದ ನಿದ್ರಿಸಲಾರರು. ಭಾರತದ ಪ್ರಜಾಪ್ರಭುತ್ವದ ಬೇರನ್ನು ಇನ್ನಷ್ಟು ಕೆಳಕ್ಕೆ ತೆಗೆದುಕೊಂಡು ಹೋಗಿ ಗಟ್ಟಿಗೊಳಿಸುವುದು ಈ ಸಹನೆ, ತಾಳ್ಮೆ ಹಾಗೂ ಟೀಕೆಗಳನ್ನು ಮನ್ನಿಸುವ ಮನೋಭಾವ’ ಎಂದು ನೈಪಾಲ್ ‘W‌o‌unded C‌iv‌il‌i​z​at‌i‌on’​ ಎಂಬ ತಮ್ಮ ಕೃತಿಯಲ್ಲಿ ಹೇಳಿದ್ದಾರೆ. ರಾಜಕೀಯದಲ್ಲಿರುವವರು ಕೇಳಿಸಿಕೊಳ್ಳಲೇಬೇಕಾದ ಮಾತುಗಳಿವು.

ನನ್ನಂತೆ ಕೋಟ್ಯಂತರ ಭಾರತೀಯ ಪ್ರಜೆಗಳು ಕೇಜ್ರಿವಾಲ ಹಾಗೂ ಅವರ ಆಮ್ ಆದ್ಮಿ ಪಕ್ಷದ ಬಗ್ಗೆ ಗೌರವ, ಭರವಸೆ ಇಟ್ಟುಕೊಂಡಿದ್ದಾರೆ. ಅವರ ಪಕ್ಷದಿಂದ ಹೊರಗೆ ನಿಂತು, ಆ ಪಕ್ಷದ ವಿಲಕ್ಷಣ ಟೋಪಿ ಧರಿಸದೇ, ‘ಆಪ್ ಪ್ರಯೋಗ ಹುಸಿಯಾಗಬಾರದು. ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯನ್ನು ಕುಕ್ಕರಗಾಲಿನಲ್ಲಿ ಕುಳ್ಳಿರಿಸಲು ಆಮ್ ಆದಿ ಪಕ್ಷ ಬೇಕೇ ಬೇಕು. ಕೇಜ್ರಿವಾಲರಿಂದಾಗಿ ಕೆಲವು ಗುಣಾತ್ಮಕ ಬದಲಾವಣೆಗಳಾಗುತ್ತಿವೆ. ದೇಶದ ಪ್ರಜಾಪ್ರಭುತ್ವದ ದೃಷ್ಟಿಯಿಂದ ಇದು ಶುಭ ಸೂಚನೆ. ಕಾಂಗ್ರೆಸ್ ಹಾಗೂ ಬಿಜೆಪಿಗೆ ಹೆಚ್ಚಿನ ವ್ಯತ್ಯಾಸವಿಲ್ಲದ ಈ ದಿನಗಳಲ್ಲಿ, ಪ್ರಾದೇಶಿಕ ಪಕ್ಷಗಳೆಲ್ಲ ಕುಟುಂಬದ ವ್ಯವಸ್ಥೆಯ ಹಿಡಿತದಲ್ಲಿ ನರಳುತ್ತಿರುವ ಈ ಕೆಟ್ಟ ಸನ್ನಿವೇಶದಲ್ಲಿ ಆಪ್ ಉದ್ಭವ ನಿಜಕ್ಕೂ ಹೊಸ ಗಾಳಿ’ ಎಂದು ಭಾವಿಸಿರುವ ಜನರಿದ್ದಾರೆ. ಇಂಥವರು wa‌it & wat‌c‌h ಸ್ಥಿತಿಯಲ್ಲಿಯೂ ಇದ್ದಿರಬಹುದು. ಆಪ್ ಭರವಸೆ ಮೂಡಿಸಿದರೆ, ಅವರು ಆ ಪಕ್ಷದ ಮತದಾರರಾಗಿಯೂ ಪರಿವರ್ತಿತರಾಗಬಹುದು.

ಆದರೆ ಇದಕ್ಕೆಲ್ಲ ಕಾಲಾವಕಾಶ ನೀಡಬೇಕು. ತುಸು ಸಹನೆ ಬೆಳೆಸಿಕೊಳ್ಳಬೇಕು. ಬೇರೆಯವರ ಮಾತುಗಳನ್ನು ಕೇಳಿಸಿಕೊಳ್ಳುವ ವ್ಯವಧಾನ ರೂಢಿಸಿಕೊಳ್ಳಬೇಕು. ಅನ್ಯರ ಟೀಕೆಗಳನ್ನು ಗೌರವಿಸುವ, ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸುವ, ಕಿವಿ ಮಾತು ಎಂದು ಭಾವಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು. ಅಷ್ಟಕ್ಕೂ ಆಪ್ ಪಕ್ಷದ ಬೆನ್ನೆಲುಬು ಅಂದ್ರೆ ಸ್ಲಮ್ಮಿನಲ್ಲಿರುವ ಅಶಿಕ್ಷಿತರಲ್ಲ, ಆದರೆ ಸುಶಿಕ್ಷಿತರು. ಹೀಗಾಗಿ ಆಪ್‌ನಿಂದ ಬೇರೆಯದೇ ಆದ ನಡೆ, ನಡಾವಳಿಕೆಯನ್ನು ಜನ ನಿರೀಕ್ಷಿಸುತ್ತಾರೆ. ವಿಭಿನ್ನವಾದ ರಾಜಕೀಯ ಸಂಸ್ಕೃತಿ, ಆಚಾರವನ್ನು ಬಯಸುತ್ತಾರೆ. ಇದು ತೀರಾ ಸಹಜವಾದುದು. ಈ ವಿಷಯದಲ್ಲಿ ಆಪ್ ನಿರಾಸೆ ಮಾಡಿದರೆ, ಅನುಮಾನ, ಸಂಕೋಚದಿಂದ ರಾಜಕೀಯಕ್ಕೆ ಬಂದ, ಬರುತ್ತಿರುವ ಅಸಂಖ್ಯ ವಿದ್ಯಾವಂತರಿಗೆ ತೀವ್ರ ನಿರಾಸೆ, ಭ್ರಮನಿರಸನವಾಗುವುದು ನಿಶ್ಚಿತ. ಈ ಹಿನ್ನೆಲೆಯಲ್ಲಿ ಜನ ಆಪ್‌ನಿಂದ ಜವಾಬ್ದಾರಿಯುತ, ಸಂಪನ್ನ, ಸುಬಗ ನಡೆಯನ್ನು ಬಯಸುತ್ತಾರೆ.

Kejriwalಕಾಂಗ್ರೆಸ್-ಬಿಜೆಪಿಗಿಂತ ತಾವು ಸಂಪೂರ್ಣ ಭಿನ್ನ ಎಂದು ಹೇಳಿಕೊಳ್ಳುವ ಆಪ್‌ನಿಂದ ಇಷ್ಟನ್ನಾದರೂ ಬಯಸುವುದರಲ್ಲಿ ತಪ್ಪೇನಿಲ್ಲ ಬಿಡಿ. ಸಮಾಜವಾದಿ ಪಕ್ಷದಿಂದಾಗಲಿ, ಬಹುಜನ ಸಮಾಜ ಪಕ್ಷದಿಂದಾಗಲಿ ಇಂಥ ನಡೆಯನ್ನು ಯಾರೂ ನಿರೀಕ್ಷಿಸುವುದಿಲ್ಲ. ಆ ಪಕ್ಷಗಳು, ಅವುಗಳ ನಾಯಕರು ಇರುವ ರೀತಿಯೇ ಹಾಗೆ. ಆ ಬಗ್ಗೆ ಯಾರ ನಿರೀಕ್ಷೆಯೂ ಇಲ್ಲ. ತಕರಾರೂ ಇಲ್ಲ. ಆದರೆ ಈ ಮಾತನ್ನು ಆಪ್ ಬಗ್ಗೆ ಹೇಳುವಂತಿಲ್ಲ. ಗಾಜಿನ ಮನೆಯಲ್ಲಿ ಕುಳಿತವರು ಕಲ್ಲನ್ನು ಹೊಡೆಯಲು ಹೋಗಬಾರದು. ನಗ್ನತೆಯನ್ನು ವಿರೋಧಿಸುವವರು ಖಾಸಗಿಯಾಗಿ, ಬಚ್ಚಲುಮನೆಯಲ್ಲೂ ನಗ್ನರಾಗಬಾರದು. ಹರಿಶ್ಚಂದ್ರ ಎಂದು ಹೆಸರಿಟ್ಟುಕೊಂಡವರು ಎಂಥ ಮಾತನ್ನಾದರೂ ಹೇಳಿ ಜೀರ್ಣಿಸಿಕೊಳ್ಳಬಹುದು. ಆದರೆ ಸತ್ಯಹರಿಶ್ಚಂದ್ರ ಎಂದು ಹೆಸರನ್ನಿಟ್ಟುಕೊಂಡವರು ಅಪ್ಪಿತಪ್ಪಿಯೂ ಸುಳ್ಳು ಹೇಳುವಂತಿಲ್ಲ. ಈ ಮಾತು ಆಪ್‌ಗೆ ಚೆನ್ನಾಗಿ ಅನ್ವಯವಾಗುತ್ತದೆ. ಈ ದೇಶದಿಂದ ಭ್ರಷ್ಟಾಚಾರ ನಿರ್ಮೂಲನೆ, ಶಿಷ್ಟಾಚಾರ ಪಾಲನೆಯ ಭಾವನೆಯೊಂದಿಗೆ ಅಧಿಕಾರಕ್ಕೆ ಬಂದ ಆಪ್, ತನ್ನನ್ನು ‘ಸತ್ಯಹರಿಶ್ಚಂದ್ರ’ ಎಂದು ಬಿಂಬಿಸಿಕೊಂಡಿರುವುದರಿಂದ ಈ ವಿಷಯದಲ್ಲಿ ಬಹಳ ಕಟ್ಟುನಿಟ್ಟಾಗಿ ಇರಲೇಬೇಕಾಗುತ್ತದೆ. ಹೀಗಾಗಿ ಈ ವಿಷಯದಲ್ಲಿ ತುಸು ಏರುಪೇರಾದರೂ ಆಪ್‌ನ್ನು ಬೆಂಬಲಿಸುವವರಿಗೆ ನಿರಾಸೆಯಾಗುತ್ತದೆ. ‘ಇವರೂ ಅಷ್ಟೇನಾ’ ಎಂದು ಮೂಗು ಮುರಿಯುತ್ತಾರೆ. ಈ ದೇಶದಲ್ಲಿ ಬದಲಾವಣೆಯಾಗಬಹುದು, ರಾಜಕೀಯ ಸಚ್ಛಾರಿತ್ರವಂತರು, ಸುಶಿಕ್ಷಿತರು, ಮುಖ್ಯವಾಹಿನಿಗೆ ಬರುವಂತಾಗಬೇಕು. ಹಣಬಲ, ತೋಳ್ಬಲವಿಲ್ಲದೆಯೂ ಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಭಾವನೆ ನೆಲೆಯೂರುವ ಸಲುವಾಗಿಯಾದರೂ ಆಪ್ ಪ್ರಯೋಗ ಯಶಸ್ವಿಯಾಗಬೇಕು. ಇಲ್ಲದಿದ್ದರೆ ಆಪ್ ಒಂದು ಜೋಕ್ ಆಥವಾ Fl‌u‌ke ಆಗಿ ಪರಿಣಮಿಸುವ ಅಪಾಯವಿದೆ. ಈ ಕಾರಣಕ್ಕಾಗಿಯಾದರೂ ಆಪ್ ಇರಬೇಕು.

ಅಷ್ಟಕ್ಕೂ ಆಪ್ ಉತ್ತಮ ಆಶಯ, ಬದಲಾವಣೆ, ಹೊಸ ಗಾಳಿಯ ಸಂಕೇತ. ಅದಕ್ಕೆ ಸೋಲಾದರೆ ನಮ್ಮ ಪ್ರಜಾಸತ್ತೆಯ ಮೂಲಧರ್ಮಕ್ಕೆ ಸೋಲಾದಂತೆ.
ಮೊನ್ನೆ ಪಾಕಿಸ್ತಾನದಿಂದ ಹತ್ತು ಪತ್ರಕರ್ತರು ಬೆಂಗಳೂರಿಗೆ ಬಂದಿದ್ದರು. ಆ ಪೈಕಿ ಹಿರಿಯ ಪತ್ರಕರ್ತೆ ಮಾರಿಯಾನ ಬಾಬರ್ ಎಂಬುವವರು ನಮ್ಮ ಆಫೀಸಿಗೆ ಬಂದಿದ್ದಳು. ಅವಳ ಜತೆ ಚರ್ಚಿಸುವಾಗ ಆಮ್ ಆದಿ ಪಕ್ಷಕ್ಕೆ ಸಂಬಂಧಿಸಿದಂತೆ ಈ ಎಲ್ಲ ವಿಷಯಗಳು ಪ್ರಸ್ತಾಪವಾದವು. ಆಪ್ ಆರಂಭವಾಗುವುದಕ್ಕಿಂತ ಮೊದಲೇ, ಅಣ್ಣಾ ಹಜಾರೆ ಸಾರಥ್ಯದ ಜನಲೋಕಪಾಲ ಮಸೂದೆಗೆ ಆಗ್ರಹಿಸಿ ನಡೆದ ಚಳವಳಿಯಿಂದಲೇ ಕೇಜ್ರಿವಾಲರನ್ನು ಫಾಲೋ ಮಾಡುತ್ತಾ ಬಂದಿರುವ ಮಾರಿಯಾನ ಬಾಬರ್‌ಗೆ ಭಾರತ ಪ್ರವಾಸ ನಿಕ್ಕಿಯಾದಾಗ ಅವಳ ಅಜೆಂಡಾದಲ್ಲಿ ಮೊಟ್ಟಮೊದಲ ಆದ್ಯತೆಯಿದ್ದಿದ್ದು ಹೇಗಾದರೂ ಮಾಡಿ ದಿಲ್ಲಿಯಲ್ಲಿ ಕೇಜ್ರಿವಾಲರ ಸಂದರ್ಶನ ಮಾಡಬೇಕೆಂಬುದು. ‘ಪ್ರಧಾನ ಮಂತ್ರಿಯವರಂತೂ ಸಿಗುವುದಿಲ್ಲ, ಸಿಕ್ಕರೂ ಅವರ ಜತೆಗಿನ ಸಂದರ್ಶನಕ್ಕಿಂತ ಅರವಿಂದ ಕೇಜ್ರಿವಾಲರನ್ನು ಭೇಟಿಯಾಗಲೇಬೇಕು. ಕಾರಣ ಅವರು ಪ್ರಸ್ತುತ ಭಾರತದ ನೂತನ ಸೂಪರ್ ಸ್ಟಾರ್. ಅವರನ್ನು ಭೇಟಿಯಾಗದೇ ಪಾಕಿಸ್ತಾನಕ್ಕೆ ಮರಳಿದರೆ ಭಾರತ ಭೇಟಿ ಅಪೂರ್ಣವಾದೀತು’ ಎಂದು ಬಾಬರ್, ತಮ್ಮನ್ನು ಆಮಂತ್ರಿಸಿದ ವಿದೇಶಾಂಗ ವ್ಯವಹಾರಗಳ ಖಾತೆ ಅಧಿಕಾರಿಗಳಿಗೆ ಹೇಳಿದರಂತೆ. ಶತಾಯಗತಾಯ ಕೇಜ್ರಿವಾಲ ಜತೆ ಸಂದರ್ಶನ ಏರ್ಪಾಡು ಮಾಡುವಂತೆ ಗೋಗರೆದೆ ಎಂದು ತಮ್ಮ ಉತ್ಕಟ ಆಸೆಯನ್ನು ನನ್ನ ಮುಂದೆಯೂ ವ್ಯಕ್ತಪಡಿಸಿದರು.

‘ಅರವಿಂದ ಕೇಜ್ರಿವಾಲರು ಸಿಕ್ಕಿದರಾ?’ ಎಂದು ಕೇಳಿದೆ.

ಒಂದು ನಿಮಿಷ ಆಕೆ ಮೌನ ತಾಳಿದಳು.

mariana-baabar-aug04‘ಸಿಗದೇ ಇದ್ದರೆ ಒಳ್ಳೆಯದಿತ್ತೇನೋ? ಕೇಜ್ರಿವಾಲ ಕೊನೆಗೂ ಸಿಗಲಿಲ್ಲ ಎಂಬ ಒಂದು ಭಾವ ಮಾತ್ರ ಮನಸ್ಸಿನಲ್ಲಿ ಕೊರೆಯುತ್ತಿತ್ತು. ಆದರೆ ಅವರನ್ನು ಭೇಟಿ ಮಾಡಿ, ಒಂದು ಗಂಟೆ ಮಾತಾಡಿದ ಬಳಿಕ ಅವರ ಬಗ್ಗೆ ನನ್ನ ಮನಸ್ಸಿನಲ್ಲಿ ಊದಿಕೊಂಡಿದ್ದ ಬಲೂನು ಠುಸ್ಸೆಂದು ಒಡೆದು ಹೋಯಿತು. ಅವರ ಸಂದರ್ಶನ ಒಂದು ಫ್ಲಾಪ್‌ಷೋ. Ve‌ry ve‌ry d‌isa​p​p‌o‌int‌in‌g.​ ಅವರು ಬಹಳ ಬೋರಿಂಗ್ ರಾಜಕಾರಣಿ. un‌imp‌r​e​s​s‌i​ve ಆದ ವ್ಯಕ್ತಿ. ದಿಲ್ಲಿ ಮತದಾರರು ಅವರನ್ನಾಗಲಿ, ಅವರ ಪಕ್ಷವನ್ನಾಗಲಿ ಹೇಗೆ ಅಧಿಕಾರಕ್ಕೆ ತಂದಿರಬಹುದು? ನಾನು ಗಂಭೀರವಾಗಿ ಯೋಚಿಸುತ್ತಿದ್ದೇನೆ. ಕೇಜ್ರಿವಾಲ ಇದ್ದಾರಲ್ಲ, ಅವರು ನಮ್ಮ ಇಮ್ರಾನ್‌ಖಾನ್ ಇದ್ದ ಹಾಗೆ. ಇಮ್ರಾನ್‌ನನ್ನು ನೋಡಿದವರಿಗೆ, ರಾಜಕೀಯ ಪಿಚ್‌ನಲ್ಲಿ ನಿರಾಸೆಯಾಗುವುದು ನಿಕ್ಕಂಟಿ. ಕೇಜ್ರಿವಾಲ ಕೂಡ ಅಷ್ಟೆ. ನಾನು ವಾಪಸ್ ಹೋಗಿ ಇಮ್ರಾನ್ ಬಗ್ಗೆ ಬರೆಯುವಾಗ, ‘ಇಮ್ರಾನ್: ಪಾಕಿಸ್ತಾನದ ಕೇಜ್ರಿವಾಲ’ ಎಂದು ಬರೆಯಬಹುದು’ ಎಂದು ಜೋರಾಗಿ ನಕ್ಕರು.

ನನಗೆ ಅವರ ಮಾತಿನಲ್ಲಿ ಸಂಪೂರ್ಣ ನಂಬಿಕೆ ಬರಲಿಲ್ಲ. ಹೀಗಾಗಿ ನಾನು ನಗಲಿಲ್ಲ.

‘ಕೇಜ್ರಿವಾಲ ನನ್ನ ವಿರೋಧಿಯೂ ಅಲ್ಲ. ನಾನು ಅವರ ವಿರೋಧಿಯೂ ಅಲ್ಲ. ನನಗೆ ಅನಿಸಿದ್ದನ್ನು ಹೇಳುತ್ತಿದ್ದೇನೆ. ಅವರನ್ನು ಭೇಟಿ ಮಾಡುವಾಗ ಇದ್ದ ಉತ್ಕಟ ಆಸೆ, ಭೇಟಿ ಮಾಡಿದ ನಂತರ ನಿರಾಸೆಯಾಗಿ ಪರಿಣಮಿಸಿತ್ತು ಅಂದ್ರೆ ನೀವೇ ಊಹಿಸಿ’ ಎಂದಳು. ‘ನೀವು ಎಂದಾದರೂ ಅವರನ್ನು (ಕೇಜ್ರಿವಾಲ) ಭೇಟಿಯಾಗಿದ್ದಿದ್ದರೆ ನನ್ನ ಮಾತನ್ನು ಅನುಮೋದಿಸುತ್ತಿದ್ದೀರಿ. ಅಷ್ಟರಮಟ್ಟಿಗೆ ನೀವು ಬಚಾವ್. ಕೇಜ್ರಿವಾಲರ ತಪ್ಪಿಲ್ಲ ಬಿಡಿ. ನನಗೆ ಅರ್ಥವಾಗದವರು ದಿಲ್ಲಿಯ ಮಂದಿ. ಹೇಗೆ ಇಂಥ ನೀರಸ, ಪೇಲವ, ನಿರುತ್ಸಾಹದಾಯಕ ವ್ಯಕ್ತಿಗೆ ಅವರು ಹೇಗೆ ತಮ್ಮನ್ನಾಳುವ ಅಧಿಕಾರ ಕೊಟ್ಟರು ಎಂಬುದೇ ಸೋಜಿಗ’ ಎಂದಳು.

‘ಪಾಕಿಸ್ತಾನದ ಪತ್ರಕರ್ತರನ್ನೆಲ್ಲ ಕೇಜ್ರಿವಾಲ ತಮ್ಮ ಕಚೇರಿಗೆ ಆಹ್ವಾನಿಸಿದ್ದರು. ಹಾಗೆ ನೋಡಿದರೆ ಅಂತಾರಾಷ್ಟ್ರೀಯ ಪತ್ರಕರ್ತರ ತಂಡಕ್ಕೆ ಅವರು ಮುಖ್ಯಮಂತ್ರಿಯಾದ ನಂತರ ನೀಡಿದ ಮೊದಲ ಸಂದರ್ಶನ ಅದಾಗಿತ್ತು. ಅವರಲ್ಲಿ ಯಾವ ವಿಷಯದ ಬಗ್ಗೆ ಸಹ ಸ್ಪಷ್ಟತೆ ಇರಲಿಲ್ಲ. ಆರಂಭದ ನಾಲ್ಕೈದು ಪ್ರಶ್ನೆಗಳಿಗೆ ಅವರು ಉತ್ತರಿಸಿದ ರೀತಿ ಕಂಡು ನಾವು ನಿಬ್ಬೆರಗಾದೆವು. ಅವರಿಗೆ ಪ್ರಶ್ನೆ ಕೇಳಲು ನಮ್ಮಲ್ಲಿದ್ದ ಪೈಪೋಟಿ ಆವಿಯಾಗಿ, ನಾವು ಪ್ರಶ್ನಾರಹಿತವಾಗಿ ಹೋದೆವು.’ ಎಂದು ಬಾಬರ್ ಹೇಳಿದಳು.
ಇಷ್ಟಾದರೂ ನನಗೆ ಅವಳ ಮಾತುಗಳಲ್ಲಿ ನಂಬಿಕೆ ಬಂದಿರಲಿಲ್ಲ. ನಾನು ಆಕೆಯ ಮಾತುಗಳಿಗೆ ತಣ್ಣನೆಯ ಪ್ರತಿಕ್ರಿಯೆ ನೀಡುತ್ತಿದ್ದೆ. ‘ನನ್ನ ಮಾತಿನಲ್ಲಿ ನಿಮಗೆ ವಿಶ್ವಾಸ ಬರದಿದ್ದರೆ, ನಾನು ನಮ್ಮ ದೇಶದ ಪತ್ರಿಕೆಗೆ ಬರೆದ ವರದಿಯನ್ನು ನೋಡಿ. ಈ ವರದಿಗೆ ‘T‌he ‌News’ ಪತ್ರಿಕೆ ಪ್ರಾಮುಖ್ಯ ನೀಡಿ ಪ್ರಕಟಿಸಿದೆ’ ಎಂದು ವರದಿಯನ್ನು ಟೇಬಲ್ ಮೇಲೆ ಹರವಿಟ್ಟಳು. Un‌imp‌r​e​s​s‌i​ve Kej‌r‌i​w​al me​e​ts Pa‌k‌i​s​tan‌i j‌o‌u‌rna​l‌i​s​ts ‌in Del‌h‌i ಎಂಬ ಹೆಡ್ಡಿಂಗ್‌ನಲ್ಲಿ ಸುದೀರ್ಘ ವರದಿ ಪ್ರಕಟವಾಗಿತ್ತು. ಇದನ್ನು ನೋಡಿ ‘ಈಗಲಾದರೂ ನಂಬಿಕೆ ಬಂತಾ?’ ಎಂದು ಕೇಳಿದಳು.

‘ಕೇಜ್ರಿವಾಲ ಸಂದರ್ಶನದಲ್ಲಿ ಆತ್ಮವಿಶ್ವಾಸ, ಭರವಸೆ, ಉತ್ಸಾಹವನ್ನು ತೋರಿಸಲೇ ಇಲ್ಲ. ಅವರ ಮಾತಿನಲ್ಲಿ ಗೊಂದಲವಿತ್ತು. ನಾವು ಕೇಳಿದ ಪ್ರಶ್ನೆಗಳಿಗೆ ನೀಡಿದ ಉತ್ತರಕ್ಕೆ ನಾವು ಉಪಪ್ರಶ್ನೆ ಹಾಕಿದರೆ ಅವರು ಗೊಂದಲಕ್ಕೊಳಗಾದಂತೆ ವರ್ತಿಸಿದರು. ತಾವೇನು ಮಾತಾಡುತ್ತಿದ್ದೇನೆ ಎಂಬ ಪರಿವೆಯೇ ಇರಲಿಲ್ಲ. ಇಂಗ್ಲಿಷಿನಲ್ಲಿ ಆರಂಭಿಸಿ ಹಿಂದಿಯಲ್ಲಿ ಮುಗಿಸುತ್ತಿದ್ದರು. ಅವರ ಹಿಂದಿಯಲ್ಲಿ ಬರೀ ಸಂಸ್ಕೃತ ಶಬ್ದಗಳೇ ತುಂಬಿರುತ್ತಿದ್ದವು. ನಮಗೆ ಅರ್ಥವಾಗದಿದ್ದಾಗ ಪುನಃ ಇಂಗ್ಲಿಷಿಗೆ ಭಾಷಾಂತರಿಸಲು ಹರಸಾಹಸ ಪಡುತ್ತಿದ್ದರು. ಇನ್ನೊಂದು ಹೆಚ್ಚಿನ ಪ್ರಶ್ನೆ ಕೇಳಿದರೆ ಅವರಿಗೆ ಹಿಂಸೆ ಕೊಡುತ್ತಿದ್ದೇವಾ ಎಂಬ ಭಾವನೆ ನಮ್ಮಲ್ಲಿ ಮೂಡುತ್ತಿತ್ತು. ನನಗಂತೂ ಅನಿಸುತ್ತಿತ್ತು, ಈ ಮನುಷ್ಯನಿಗೆ ಪಾಕಿಸ್ತಾನ ಎಂಬ ದೇಶ ಮಗ್ಗುಲಿಗೆ ಇದೆ ಎಂಬ ಸಂಗತಿ ತಿಳಿದಿದೆಯಾ? ಭೂಗೋಳ ಓದುವಾಗ ಪಾಕಿಸ್ತಾನದ ಕುರಿತು ಓದಿರಲಿಕ್ಕಿಲ್ಲವಾ?’

M_Id_456191_Arvind_Kejriwal‘ಭಾರತದಾಚೆಗಿನ ಯಾವ ವಿಷಯದ ಬಗ್ಗೆ ಕೇಳಿದರೂ ಒಂದು ಪದದ ಉತ್ತರ ಕೊಡುತ್ತಿದ್ದರು. ಹೌದು, ಇಲ್ಲ, ಇದ್ದಿರಬಹುದು, ಹೇಗೆ ಸಾಧ್ಯ, ಗೊತ್ತಿಲ್ಲ, ಅದೇಗೆ, ಅದ್ಯಾಕೆ, ಹೇಗೆ… ಎಂಬ ಉತ್ತರ ಅವರಿಂದ ಬರುತ್ತಿತ್ತು. ನನ್ನ ಮೂವತ್ತೈದು ವರ್ಷಗಳ ಪತ್ರಿಕೋದ್ಯಮ ಅನುಭವದಲ್ಲಿ ಇದೊಂದು ಅತ್ಯಂತ ಕೆಟ್ಟ ಸಂದರ್ಶನ’ ಎಂದಳು ಬಾಬರ್.

‘ನಾನಂತೂ ಕೇಜ್ರಿವಾಲರ ಸಂದರ್ಶನದಿಂದ ತಪ್ಪಿಸಿಕೊಂಡು ಬರುವುದು ಹೇಗೆ? ಎಂದು ಆಗಲೇ ಯೋಚಿಸಲಾರಂಭಿಸಿದೆ. ನನ್ನಂತೆ ನನ್ನ ಸಹೋದ್ಯೋಗಿ ಮಿತ್ರರೂ ಚಡಪಡಿಸಲಾರಂಭಿಸಿದ್ದರು. ಕೇಜ್ರಿವಾಲರಿಗೆ ಇನ್ನೊಂದು ಪ್ರಶ್ನೆ ಕೇಳಿದರೆ, ಅಲ್ಲಾಹು ನನ್ನನ್ನು ಶಿಕ್ಷಿಸಬಹುದು ಎಂದು ಅನಿಸಲಾರಂಭಿಸಿತು. ಕೇಜ್ರಿವಾಲ ಪದೇ ಪದೆ ಕೆಮ್ಮುತ್ತಿದ್ದರು. ಅವರಿಗೆ ಕೆಮ್ಮು ವರದಾನವಾಗಿ ಪರಿಣಮಿಸಿತ್ತು. ಒಂದೆರಡು ವಾಕ್ಯ ಹೇಳಿ ಕೆಮ್ಮುವಾಗ, ಹತ್ತು -ಹದಿನೈದು ಸೆಕೆಂಡ್ ಯೋಚಿಸಲು, ಮುಂದಿನ ವಾಕ್ಯ ಹೇಳಲು ಸಮಯ ಸಿಗುತ್ತಿತ್ತು. ಅದನ್ನೂ ಅವರು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಿಲ್ಲ.’

‘ಕೇಜ್ರಿವಾಲ ಹೇಳಿದ ಒಂದು ಸಂಗತಿ ನನಗೆ ಭಲೇ ತಮಾಷೆಯಾಗಿ ಕಂಡಿತು. ಅವರು ಹೇಳಿದರು- ನಾವು ಶಾಂತಿಯುತವಾಗಿ ಬಾಳಬೇಕು. ನಾನು ಪಾಕಿಸ್ತಾನಕ್ಕೆ ಇನ್ನೂ ಹೋಗಿಲ್ಲ. ಅಲ್ಲದೇ ನನಗೆ ಪಾಕಿಸ್ತಾನದ ಬಗ್ಗೆ ಹೆಚ್ಚು ಗೊತ್ತಿಲ್ಲ. ಅಂತಾರಾಷ್ಟ್ರೀಯ ವಿಷಯ ಹಾಗೂ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ನಿಮಗೆ ಏನಾದರೂ ಕೇಳುವುದಿದ್ದರೆ ನೀವು ದಯವಿಟ್ಟು ನಮ್ಮ ರಾಷ್ಟ್ರಪತಿಯವರನ್ನು ಭೇಟಿ ಮಾಡಿ.’

‘ನನಗೆ ನಗಬೇಕೋ, ಅಳಬೇಕೋ ಗೊತ್ತಾಗಲಿಲ್ಲ. ಕೇಜ್ರಿವಾಲರನ್ನು ಅವರ ಅಭಿಮಾನಿಗಳು, ಬೆಂಬಲಿಗರು ಭಾರತದ ಭವಿಷ್ಯದ ಪ್ರಧಾನಿ ಎಂದು ಹೇಳುತ್ತಿದ್ದಾರೆ. ಮಾಧ್ಯಮಗಳು ಅವರಿಗೆ ಇನ್ನಿಲ್ಲದ ಪ್ರಾಧಾನ್ಯ ನೀಡುತ್ತಿವೆ. ಆದರೆ ಈ ಮನುಷ್ಯನನ್ನು ನೋಡಿದರೆ ಹೀಗೆ ಹೇಳುತ್ತಾರೆ, ಅದೂ ವಿದೇಶಾಂಗ ವ್ಯವಹಾರಗಳ ಖಾತೆ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ. ಭಾರತ-ಪಾಕ್ ಸಂಬಂಧಗಳ ಬಗ್ಗೆ ಪ್ರಶ್ನೆ ಬಯಸಿದರೆ ರಾಷ್ಟ್ರಪತಿಯವರನ್ನು ಭೇಟಿ ಮಾಡಿ ಅಂತಾರಲ್ಲ. ಹಾಗೆ ಹೇಳಿದಾಗ ನನಗೆ ನಮ್ಮ ಇಮ್ರಾನ್‌ಖಾನೇ ವಾಸಿ ಎಂದೆನಿಸಿತು, ಸುಳ್ಳಲ್ಲ’ ಎಂದಳು ಮಾರಿಯಾನ ಬಾಬರ್. ಅವಳ ಮಾತಿನಲ್ಲಿ ಗೇಲಿ, ಚೋದ್ಯ ಇರಲಿಲ್ಲ.

ಕೊನೆಯಲ್ಲಿ ಕೇಜ್ರಿವಾಲ ಹೇಳಿದರಂತೆ-‘ನಾನು ಕಾಂಗ್ರೆಸ್ ಬೆಂಬಲ ಕೋರಿ ಆ ಪಕ್ಷದ ನಾಯಕರಿಗೆ ಒಂದು ಕರೆಯನ್ನೂ ಮಾಡಲಿಲ್ಲ. ಈ ರಾಜಕಾರಣಿಗಳಿದ್ದಾರಲ್ಲ, ಅವರು ಪ್ರಜಾಪ್ರಭುತ್ವದ ಹೆಸರಲ್ಲಿ ಲೂಟಿ ಮಾಡುತ್ತಿದ್ದಾರೆ. ನಾನು ಜನತೆಗೆ ಕೇಳುತ್ತಿದ್ದೇನೆ ಈ ಲೂಟಿಕೋರರನ್ನು -ಸೋಲಿಸುತ್ತೀರೋ, ಪಾರ್ಲಿಮೆಂಟ್‌ಗೆ ಕಳಿಸುತ್ತೀರೋ?’
‘ನಾನು ಅವರನ್ನು ಭೇಟಿ ಮಾಡಬಾರದಿತ್ತು. ನನ್ನ ಕಲ್ಪನೆಯ ಕೇಜ್ರಿವಾಲ ಇವರೇನಾ? ಎಂದು ಈಗಲೂ ಅನಿಸುತ್ತಿದೆ’ ಎಂದಳು.

‘ಅಂದ ಹಾಗೆ ನೀವು ರಾಹುಲ್ ಗಾಂಧಿ ‘ಟೈಮ್ಸ್‌ನೌ’ ಚಾನೆಲ್‌ಗೆ ನೀಡಿದ ಸಂದರ್ಶನ ನೋಡಿದ್ದೀರಾ?’ ಎಂದು ಕೇಳಿದೆ.

ಆಕೆ ಜೋರಾಗಿ ನಕ್ಕಳು. ಆ ನಗುವಿನಲ್ಲಿ ಉತ್ತರ ಅಡಗಿತ್ತು.

– ವಿಶ್ವೇಶ್ವರ ಭಟ್
vbhat@me.com

15 Comments

 1. Vasantha Gowda •

  Very nice one, Please translate this into English and make it available for those who support AAP.. No knowledge about international relations still wants to become PM..

 2. beena123 •

  ಕಾಂಗ್ರೆಸ್ ಮತ್ತು ಆಪ್ ಜೊತೆ ಇದ್ದರೂ ಕಾಂಗ್ರೆಸ್ ಹುಷಾರಾಗಿ ಹೆಜ್ಜೆ ಇಡುತ್ತಿದೆ ಎನಿಸುತ್ತದೆ. ಆದರೆ ಈ ಆಪ್ ಮಾತ್ರ APE ಪಾರ್ಟಿ ಆಗಿದೆ. ಇವರ ಮಾತು, ಕಾರ್ಯ ಎಲ್ಲ ಪ್ರಶ್ನಾತೀರ್ತವೆ ? ಹೇಳುವುದು ಒಂದು ಮಾಡುವುದು ಒಂದು. ವಿದ್ಯುತ್ ಚಕ್ತಿ ಯನ್ನು ಕಮ್ಮಿ ದರದಲ್ಲಿ ಕೊಡುತ್ತೇನೆ ಎಂದು ಘೊಸಿಸಿ ಈಗ ಎಡವಟ್ಟಿಗೆ ಸಿಕ್ಕಿಹಾಕಿಕೊಂಡಿದ್ದಾರೆ. ವಿಧ್ಯುತ್ ಚಕ್ತಿ ಕೊಡುವ 3 ಕಂಪನಿಗಳನ್ನು ಮುಚ್ಚುತ್ತೇನೆ ಎಂದು ಹೇಳಿ ಹೆದರಿಸಿದರು. ಅದಕ್ಕೆ ಸಂಬಂದ ಪಟ್ಟ reguleting ಅತಾರಿಟಿ ಕಾನೂನು ಪ್ರಕಾರ ಅವುಗಳನ್ನು ಮುಚ್ಚಲು ಆಗುವುದೇ ಇಲ್ಲಾ. ಈಗ ಕೆಜ್ರಿವಲ್ ವಿಧ್ಯುತ್ ಚಕ್ತಿ ಗೆ ಏನು ಮಾಡುತ್ತಾರೆ. ಅದಕ್ಕೆ ಈ ಕೆಜ್ರಿವಲ್ ಹಾಗೂ ಅವರ ಪಾರ್ಟಿ ಎಳಸು ಎನ್ನುವುದು. ರಾಜಕೀಯ ದಲ್ಲಿ ಪ್ರಭುತ್ವ ಬರುವುದು ಅದರಲ್ಲಿ ಪಳಗಿದಾಗ. ಈಗಿನ ಆಪ್ ಪಾರ್ಟಿ ಪರಿಸ್ತಿತಿ ” ಕೋತಿಯ ಕೈಲಿ ಮಾಣಿಕ್ಯ ಕೊಟ್ಟಂಗಾಗಿದೆ “. ಇದಕ್ಕೆಲ್ಲ ಕಾರಣ ದೆಹಲಿಯ ಜನತೆಯೇ .

 3. beena123 •

  ” ನಾನು ಕೇಜ್ರಿವಾಲರ ಸಂದರ್ಶನ ಮಾಡಬಾರದಿತ್ತು’!” – ಲೇಕನ ಚೆನ್ನಾಗಿದೆ.. UNIMPRESSIVE ಕೆಜ್ರಿವಲ್ ಎಂದು ಎಲ್ಲಾ ಹೊರ ಮಾದ್ಯಮಗಳಿಗೆ ಗೊತ್ತಾಯಿತು. ಮೊನ್ನೆ ರಾಹುಲ್ ಗಾನ್ಧಿಯದೋ ಇದೆ ಕತೆ ಆಯಿತು. ಈ ಎಳಸು ನಾಯಕರುಗಳು – ತಾವೇನೋ SUPRME ಅಂದು ಕೊಂಡಿದ್ದಾರೆ ಅವರ ಬಿಟ್ಟರೆ ಈ ದೇಶದಲ್ಲೇ ಯಾರೋ ಸರಿಯಾಗಿಲ್ಲ. ಅವರೊಬ್ಬರೇ ಸರಿ ಎಂಬ ಪೊಗರು.

 4. Taru •

  ಸ್ವಾಮಿ, ಈ ಜಗತ್ತಿನಲ್ಲಿ ಎಲ್ಲರು ಒಂದೊಂದು ತರಹ. ಎಲ್ಲರು ಮಾತನಾಡುವಾಗ, ವ್ಯವಹರಿಸುವಾಗ ವಾಜಪೆಯ್ ಅಥವಾ ವಿಶ್ವೇಶ್ವರ ಭಟ್ ಆಗಬೇಕೆಂದೇನಿಲ್ಲ. ಎಲ್ಲರಿಗೂ ಅವರದೇ ಆದ ವ್ಯಕ್ತಿತ್ವ ಇರುತ್ತೆ. ಕೇಜ್ರಿವಾಲ ರಾಜಕೀಯವಾಗಿ ಅನನುಭವಿ ಯಾಗಿರಬಹುದು ಆದರೆ ಈ ಬ್ರಷ್ಟ ರಾಜಕಾರಣಿಗಳಿಗಿಂತ ತುಂಬಾ ಬಿನ್ನ. ತಾವೇ ಹೇಳಿದಂತೆ ಕೇಜ್ರಿವಾಲರಿಂದಾಗಿ ಕೆಲವು ಗುಣಾತ್ಮಕ ಬದಲಾವಣೆಗಳಾಗುತ್ತಿವೆ. ದೇಶದ ಪ್ರಜಾಪ್ರಭುತ್ವದ ದೃಷ್ಟಿಯಿಂದ ಇದು ಶುಭ ಸೂಚನೆಯಲ್ಲದೇ ಮತ್ತೇನು?

 5. 1REBEL •

  ಕೇವಲ ೨೮ ಸೀಟ್ ಗಳ್ನ ಗೆದ್ದು ಡೆಲ್ಲಿ ಗದ್ದುಗೆ ಹಿಡಿದ ಆಪ್ ನ,ಇಡಿ ಡೆಲ್ಲಿ ಜನ ಇವರನ್ನ (ಆಪ್) ನಂಬಿ ವೋಟು ಹಾಕಿದರು …ಜನ ಇವರನ್ನೇ ಅಧಿಕಾರಕ್ಕೆ ತಂದರು …..ಅಂತ ಹೇಳಿದ ಈ ಅಮಾಯಕ ಪತ್ರಕರ್ತೆಗೆ ಹೇನ್ ಹೇಳೋಣ …….

  ಸದ್ಯ ಈಕೆಗೆ ಕುಜಿಲಿವಾಲನಬುದ್ಧಿ ಮತ್ತೆ ಇಷ್ಟು ಅಂತ ಗೊತ್ಹಗಿದ್ದು ಒಳ್ಳೇದು ….ರಾಜ ತಾಂತ್ರಿಕತೆ ಬಗ್ಗೆ ,.ಪಕ್ಕದ ದೇಶಗಳ ಬಗ್ಗೆ ನೆ ಗೊತ್ಹಿಲ್ಲದವ್ನು ದೇಶ ಆಳೋಕೆ ಹೋಗ್ತಾನೆ ಅಂದ್ರೆ ನಗು ಬರುತ್ತೆ ………

  ಇನ್ನ ರಾಹುಲ್ ಗಾಂಧಿ ಬಗ್ಗೆ ಹೇಳೋದೇ ಬೇಡ ,ಹೆಸರು ಕೇಳಿದರೆನೆ ನಗು ಬರುತ್ತೆ

 6. Bhattre,
  Pls share the link of “the news”
  After google search I don’t any such article.

  Anyway coming to the main point…
  Sir gandasadvaru yavagalu neravagi matadodu mattu yedrigi ninthu joradadu.
  Hege konkana sutti mailarakke barbardu. Nimage nanu heliddu matina artha tilithu andra asste saku. Jai Karnataka.

 7. rahul avara hage kejrival saha namma deshada maana haraju hakibitralla. alpanige aishwarya bandantagide.

 8. ಕ್ರೇಜಿವಾಲರನ್ನು ಕ್ರೇಜಿ ಟೋಪಿ ವಾಲ ಎಂದು ಕರೆಯಬಹುದೇ

 9. Bhat,

  The Topic is very good. People (including myself) were carried away by AK’s speeches. You have written very nicely the facts.

  But people behind him are very nice people. They (myself) are hoping that Mr. AK will do something good.

  Thanks once again for the Article.

  RK

 10. Sir,

  This is a problem across political spectrum. As long as paid media exists, people are going to be suspicious about everything. Before AAP came into existence, it was NaMo on the defensive. And everyone who wrote against NaMo were attacked similarly as congress stooges or paid media or foreign funded organizations.

  Suspicion about the motives of the writer is always going to be there as long as paid media exists. Trying to make it about something peculiar about AAP or Kejriwal or their supporters is again “suspicious”.

 11. ಇದು ಒಂಥರಾ “ಕಾಮಿಡಿ ಇಂಟರ್ವೀವ್ ವಿಥ್ ಕೇಜ್ರಿವಾಲ್ “. ಕಪಿಲ್ ಶರ್ಮ ಗೆ ರಾಹುಲ್ ಗಾಂದಿ ಒಳ್ಳೆ ಸ್ಪರ್ಧಿ ಅಂತ ತಿಳಿದಿದ್ದವರಿಗೆಲ್ಲ , ಕೇಜ್ರಿವಾಲ್ ಕೂಡ ಪ್ರಭಲ ಸ್ಪರ್ಧಿ ಎನ್ನಿಸಬಹುದು …. 🙂 ಲೇಖನ ತುಂಬಾ ಚೆನ್ನಾಗಿದೆ ಸರ್ , ಧನ್ಯವಾದಗಳು.

 12. Jeevan Taru •

  You are right,

 13. Venkata Giriappa

  Namasthe visweswarji bhat sir,the heading gives an impression that it was your experince. But it was that of pakistani journalists.the end result wason the known lines only.ms maariyana babars concern for kejriwal was for his meteoric rise in politics. And now he is plumetting like a falling one in night sky. He is a spoiled brat of some foreign agency that feeds his ngo since 2001as said by an iimb professor. He could be doing it clandestinely even before. His roadshows are better than Work inside cms office. Mendak of the street(kuwa?). Big risk, may be for democracy and security. Delhi is capital of chaos and kejriwal an augery further. God save the nation. Thanks for article

 14. Sir,
  Read your article, what you say is true, also my personal opinion is Mr.Kejriwal should rule Delhi for 5 yrs and prove and then he can jump to national level, else he will be lost within a short period like Mr.chiranjivi,Mr.Vijaykanth etc etc. and this should not happen.
  And i have the highest regard for Mr.Kejriwal.

  He should change himself and clean our political system but slowly.

  Regards

  Gururaj

 15. Dear Sir,
  Just now read your column. I felt Ms Babur has just reiterated what millions of us know about Kejriwal n his bhajana mandal. What can expect from a man whose only credentials are shooting n scooting? What can expect from a man who meets a radical cleric to appease a particular community? What can expect from a man whose lietunents advocate for division of J&K n for secessionist to wage war on Indian State? You need no extraordinary quality to win elections by indulging in populism! For God sake, only n only Delhi has voted AAP not India. Ruling India is not ruling a college campus as a General Secretary of student union.
  Thank you.

  Regards,
  VIJAY KUMAR

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.