ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.
ಮುಂದೆ ಓದಿ...ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.
ಮುಂದೆ ಓದಿ...ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.
ಮುಂದೆ ಓದಿ...ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ
ಮುಂದೆ ಓದಿ...ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.
ಮುಂದೆ ಓದಿ...ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.
ಮುಂದೆ ಓದಿ...ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!
ಮುಂದೆ ಓದಿ...ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.
ಮುಂದೆ ಓದಿ...
ಕರ್ನಾಟಕ ಕಾದ ಸೀಸದಂತಾಗಿದೆ. ರಣರಣ ಬಿಸಿಲು. ಸುಡುಸುಡು ಬೇಸಿಗೆ. ಮೈಯಲ್ಲಿ ಸದಾ ಬೆವರ ಒರತೆ, ಉಪ್ಪುಪ್ಪು ಜಲಪಾತ. ಬೇಸಿಗೆಯ ಝಳಕ್ಕೆ ಮನಸ್ಸೂ ಒದ್ದೆ ಒದ್ದೆ. ಇನ್ನೊಂದು ತಿಂಗಳು ಕಳೆಯುವುದರೊಳಗೆ ಬದುಕು ಹೈರಾಣ. ಮರವನ್ನು ಗಲಗಲ ಅಲುಗಾಡಿಸಿದರೂ ಎಲೆಗಳು ಅಲ್ಲಾಡಿ ಗಾಳಿ ಸಿಂಪಡಿಸುವುದಿಲ್ಲ. ಮನಸ್ಸು ಸೆಕೆಯ ಬೇಗುದಿಯಲ್ಲಿ ಕಲ್ಲವಿಲ. ಒಂದು ತಂಗಾಳಿಯ ಹಿತವಾದ ಬೀಸು ಅಂದ್ರೆ ಏನು ಎಂಬುದನ್ನು ಸುಲಭವಾಗಿ
ಅರ್ಥೈಸಿಕೊಳ್ಳುವ ಕಾಲವಿದು.
ಬೇಸಿಗೆಯ ಘಟ್ಟ ಹತ್ತುತ್ತಿರುವಾಗ, ತೀರಾ ಸೀರಿಯಸ್ ಬರೆದರೆ ಏದುಸಿರು ಬಂದು ಘಟ್ಟ ಏರಲು ಕಷ್ಟವಾದೀತೆಂದು, ನನ್ನ ಸ್ಕ್ರ್ಯಾಪ್್ಬುಕ್ ತೆಗೆದರೆ ಅಲ್ಲೊಂದಿಷ್ಟು ಎಂದೋ ಓದಿದ, ಸಂಗ್ರಹಿಸಿದ ಒಂದಿಷ್ಟು ಜೋಕು, ಪೋಲಿಯಾಗುವುದರಿಂದ ಸ್ವಲ್ಪದರಲ್ಲೇ ಬಚಾವ್ ಆದ ಜೋಕುಗಳು, ಕೆಲ ಪ್ರಸಂಗಗಳು, ಕಲ್ಪಿತ ಘಟನೆಗಳು ಸಿಕ್ಕವು.
ಸುಖಾ ಸುಮ್ಮನೆ ನಿಮ್ಮ ಸಹನೆಯ ಮುರಕೊಳ್ಳುವ ಬದಲು ಹಿತವಾದ ತಂಗಾಳಿಯಂತೆ ಇಂಥ ಕೆಲವು ‘ಝಲಕು’ ಬೀಸಿದರೆ ಹೇಗೆ ಎಂದು ಅವುಗಳನ್ನು ಇಲ್ಲಿ ಕೊಡುತ್ತಿದ್ದೇನೆ. ಆಷ್ಟರ ಮಟ್ಟಿಗೆ ಇವು ನಿಮ್ಮ ಸೆಕೆ ಕಡಿಮೆಗೊಳಿಸಿದರೆ, ನನ್ನ ಗಂಟಲು ತಂಪಾದೀತು.
***
ಇಂಗ್ಲಿಷ್ ಲೇಡಿ ಹಾಗೂ ಅವಳ ಹತ್ತು ವರ್ಷದ ಮಗ ನ್ಯೂಯಾರ್ಕಿನಲ್ಲಿ ಟ್ಯಾಕ್ಸಿಯಲ್ಲಿ ಪ್ರಯಾಣಿಸುತ್ತಿದ್ದರು. ನಲವತ್ತೆರಡನೆ ಬೀದಿಗೆ ಬರುತ್ತಿದ್ದಂತೆ ಮಾದಕವಾಗಿ ಡ್ರೆಸ್ ಮಾಡಿದ ನಾಲ್ಕೈದು ತರುಣಿಯರು ದಾರಿಯಲ್ಲಿ ಹೋಗುವ ಗಂಡಸರನ್ನು ಕರೆಯುತ್ತಿದ್ದುದನ್ನು ಲೇಡಿ ಹಾಗೂ ಅವಳ ಮಗ ಗಮನಿಸಿದರು.
‘ಮಮ್ಮಿ ಆ ತರುಣಿಯರು ಯಾರು?, ಅವರೇಕೆ ಗಂಡಸರನ್ನು ಕರೆಯುತ್ತಿದ್ದಾರೆ?’ ಎಂದು ಮಗ ಕೇಳಿದ. ತಾಯಿಗೆ ಏನು ಹೇಳಬೇಕೆಂದು ತಟ್ಟನೆ ತೋಚಲಿಲ್ಲ. ಕೇಳಿದರೂ ಕೇಳದಂತೆ ಸುಮ್ಮನಿದ್ದಳು. ಆದರೆ ಮಗ ಪದೇ ಪದೆ ಅದೇ ಪ್ರಶ್ನೆ ಕೇಳಿದಾಗ, ‘ಪುವರ್ ಲೇಡಿಸ್, ದಾರಿ ತಪ್ಪಿಸಿಕೊಂಡಿರಬೇಕು. ಡೈರೆಕ್ಷನ್ ಕೇಳುತ್ತಿರಬೇಕು’ ಎಂದಳು ಲೇಡಿ.
ಅವಳ ಈ ಮಾತುಗಳನ್ನು ಕೇಳಿಸಿಕೊಂಡ ಟ್ಯಾಕ್ಸಿ ಡ್ರೈವರ್, ‘ಯಾಕೆ ಸುಳ್ಳು ಹೇಳುತ್ತೀರಾ? ನಿಮ್ಮ ಮಗನಿಗೆ ಸತ್ಯ ಹೇಳಲು ಮುಜುಗರವೇಕೆ?’ ಎಂದು ಕೇಳಿದ.
ಇದರಿಂದ ಪ್ರಚೋದಿತನಾದ ಮಗ ಟ್ಯಾಕ್ಸಿ ಡ್ರೈವರ್್ನನ್ನುದ್ದೇಶಿಸಿ, ‘ಅಂಕಲ್, ನೀವಾದರೂ ಹೇಳಿ, ಅವರು ಯಾರು?’ ಎಂದು ಕೇಳಿದ.
ಅದಕ್ಕೆ ಟ್ಯಾಕ್ಸಿ ಡ್ರೈವರ್, ‘ಅವರಾ? ಅವರು ಪ್ರೊಸ್ಟಿಟ್ಯೂಟ್ಸ್!’ ಎಂದ.
ಮಗನ ಕುತೂಹಲ ಹೆಚ್ಚಾಯಿತು. ಆ ಲೇಡಿಯ ಕೋಪ ಸಹ ಹೆಚ್ಚಾಯಿತು. ‘ಮಮ್ಮಿ, ಪ್ರೊಸ್ಟಿಟ್ಯೂಟ್ಸ್ ಅಂದ್ರೆ ಯಾರು?’ ಎಂದು ಮಗ ಕೇಳಿದ.
ಆ ಮಹಿಳೆಗೆ ಎಲ್ಲಿತ್ತೋ ಸಿಟ್ಟು, ‘ನ್ಯೂಯಾರ್ಕಿನ ಟ್ಯಾಕ್ಸಿ ಡ್ರೈವರ್್ಗಳು ಹುಟ್ಟೋದೇ ಅವರಿಂದ’ ಅಂದಳು.
ಮಗನಿಗೆ ಅರ್ಥವಾಗಲಿಲ್ಲ. ‘ಹಾಗಂದ್ರೆ ಏನು ಮಮ್ಮಿ?’ ಎಂದ. ಅದಕ್ಕೆ ಟ್ಯಾಕ್ಸಿ ಡ್ರೈವರ್, ‘ಮುಚ್ಕೊಂಡು ಸುಮ್ನೆ ಕುತ್ಕೋ’ ಎಂದು ಗದರಿದ.
***
ಕೀಲೂ ಬಿಸಿನೆಸ್ ಟ್ರಿಪ್್ಗೆ ಹೋಗಿದ್ದಾಗ ವಿಮಾನ ನಿಲ್ದಾಣದಲ್ಲಿ ಟಾಯ್ಲೆಟ್್ಗೆ ಹೋಗಬೇಕಾಯಿತು. ಕೆಲಸ ಇನ್ನೇನು ಪೂರ್ತಿಯಾಗುವಷ್ಟರಲ್ಲಿ ಅವನಿಗೆ ಗೊತ್ತಾಯಿತು, ಟಾಯ್ಲೆಟ್ ಪೇಪರ್ ಖಾಲಿಯಾಗಿದೆಯೆಂದು. ಮುಂದಿನ ಟಾಯ್ಲೆಟ್್ನಲ್ಲಿ ಎರಡು ಷೂಗಳಿರುವುದನ್ನು ಕಂಡ ಕೀಲೂಗೆ ಅಲ್ಲಿ ಯಾರೋ ಇರುವುದು ಖಾತ್ರಿಯಾಯಿತು. ‘ಹಲೋ ಫ್ರೆಂಡ್, ನಿನ್ನಲ್ಲಿ ಟಾಯ್ಲೆಟ್ ಪೇಪರ್್ಗಳಿವೆಯಾ?’ ಎಂದು ಕೇಳಿದ. ಅತ್ತ ಕಡೆಯಿಂದ ‘ಇಲ್ಲ ಸ್ವಾಮಿ, ಇಲ್ಲೂ ಸಹ ಟಾಯ್ಲೆಟ್ ಪೇಪರ್ ಇಲ್ಲ’ ಎಂಬ ದನಿ ಬಂತು.
ಕೀಲೂಗೆ ಗಾಬರಿಯಾಯಿತು. ‘ಆರೆ ಗೋಟಾವಳಿ ಆಯ್ತಲ್ಲ’ ಎಂದುಕೊಂಡ. ಆದರೆ ಏನಾದರೂ ಪರಿಹಾರ ಕಂಡುಕೊಳ್ಳಲೇಬೇಕಿತ್ತು. ‘ಹಲೋ ಫ್ರೆಂಡ್, ನಿನ್ನ ಹತ್ತಿರ ನ್ಯೂಸ್ ಪೇಪರ್ ಆಗಲಿ, ಮ್ಯಾಗಜಿನ್್ಗಳಾಗಲೀ ಇವೆಯಾ?’ ಎಂದು ಕೀಲೂ ಕೇಳಿದ್ದಕ್ಕೆ, ‘ಇಲ್ಲವಲ್ಲ’ ಎಂಬ ದನಿ ಬಂತು.
ಕೀಲೂಗೆ ದಿಗಿಲಾಯಿತು. ‘ಹಲೋ ಫ್ರೆಂಡ್, ಒಂದು ಚೂರು ಕಾಗದವಾದರೂ ಇದೆಯಾ?’ ಎಂದು ಕೇಳಿದ.
ಇದಕ್ಕೆ ಅತ್ತ ಕಡೆಯಿಂದ ದನಿ ಬಂತು- ‘ರೋನಾಲ್ಡ್ ರೇಗನ್್ನ ಸ್ಟಾಂಪ್ ಇದೆ, ಕೊಡಲೇನು?’
***
ಅಮೆರಿಕದ ಪತ್ರಿಕೆಗಳಿಗೆ ಜಗತ್ತು ಅಂದ್ರೆ ಅಮೆರಿಕ! ಅಮೆರಿಕವೇ ಸರ್ವಸ್ವ! ಹೇಗೆ ಅಂತ ಕೇಳ್ತೀರಾ? ಹಾಗಿದ್ರೆ ಓದಿ. ಒಮ್ಮೆ ಅಮೆರಿಕ ಅಧ್ಯಕ್ಷ ರೋನಾಲ್ಡ್ ರೇಗನ್ ಹಾಗೂ ರಷ್ಯಾ ಅಧ್ಯಕ್ಷ ಮಿಖಾಯಿಲ್ ಗೊರ್ಬಚೇವ್ ಭೇಟಿಯಾದರು. ಅವರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು, ಯಾರ ದೇಶ ನಂಬರ್ 1 ಎಂಬ ಪ್ರಶ್ನೆ ಎದುರಾಯಿತು.
ಮ್ಯಾರಥಾನ್ ಓಟದಲ್ಲಿ ಯಾರು ಗೆಲ್ಲುತ್ತಾರೋ ಅವರ ದೇಶ ನಂಬರ್ 1 ಎಂದು ಅವರಲ್ಲಿ ತೀರ್ಮಾನವಾಯಿತು. ಆ ಮೂಲಕ ಮೂರನೆಯ ವಿಶ್ವಯುದ್ಧವನ್ನು ತಡೆಯುವುದು ಅವರ ಉದ್ದೇಶವಾಗಿತ್ತು.
ಮರುದಿನ ಬೆಳಗ್ಗೆ ಎಂಟು ಗಂಟೆಗೆ ಎರಡೂ ದೇಶಗಳ ನಾಯಕರು ಓಟಕ್ಕೆ ಸಿದ್ಧರಾಗಿ ನಿಂತರು. ಎರಡೂವರೆ ತಾಸಿನ ನಂತರ ಗೊರ್ಬಚೇವ್ ಗುರಿ ತಲುಪಿದರು. ಇದಾದ ಆರು ಗಂಟೆಗಳ ನಂತರ ರೇಗನ್ ಸಹ ಗುರಿ ತಲುಪಿದರು.
ಮರುದಿನ ‘ವಾಷಿಂಗ್್ಟನ್ ಪೋಸ್ಟ್್’ ಪತ್ರಿಕೆಯಲ್ಲಿ ಪ್ರಕಟವಾದ ವರದಿ- ‘ವಿಶ್ವದೆಲ್ಲೆಡೆ ಕುತೂಹಲ ಮೂಡಿಸಿದ್ದ ಮ್ಯಾರಥಾನ್ ಓಟದ ಸ್ಪರ್ಧೆಯಲ್ಲಿ ಅಮೆರಿಕದ ಅಧ್ಯಕ್ಷರು ಅಭೂತಪೂರ್ವವೆಂಬಂತೆ ಎರಡನೆ ಸ್ಥಾನ ಗಿಟ್ಟಿಸಿದರು. ಈ ಓಟದಲ್ಲಿ ರಷ್ಯಾ ಅಧ್ಯಕ್ಷ ಗೊರ್ಬಚೇವ್ ಸಹ ಭಾಗವಹಿಸಿದ್ದರೆಂದು ತಿಳಿದು ಬಂದಿದೆ. ಅವರು ಕೊನೆ ಸ್ಥಾನ ಗಳಿಸಿದವರಿಗಿಂತ ಒಂದು ಸ್ಥಾನ ಹೆಚ್ಚು ಗಳಿಸಿದರೆಂದು ಗೊತ್ತಾಗಿದೆ.’
***
ಕೀಲೂ ತನ್ನ ನಾಯಿ ಜತೆ ಸಿನಿಮಾ ವೀಕ್ಷಿಸುತ್ತಿದ್ದ. ಹೀರೋನ ಕಂಡ ತಕ್ಷಣ ನಾಯಿ ಖುಷಿಯಿಂದ ಬೊಗಳುತ್ತಿತ್ತು. ವಿಲನ್್ನನ್ನು ನೋಡಿದಾಗ ವಿಚಿತ್ರವಾಗಿ ಕೂಗುತ್ತಿತ್ತು. ದುಃಖದ ಸಂದರ್ಭದಲ್ಲಿ ಸುಮ್ಮನೆ ಕುಳಿತು ಕಣ್ಣೀರುಗರೆಯುತ್ತಿತ್ತು. ಲವ್ ಸೀನ್ ಬಂದಾಗ ಬಾಲ ಅಲ್ಲಾಡಿಸುತ್ತಾ ನಲಿಯುತ್ತಿತ್ತು.
ಕೀಲೂನ ಪಕ್ಕದಲ್ಲಿ ಕುಳಿತ ಪ್ರೇಕ್ಷಕ ಇವೆಲ್ಲವನ್ನೂ ಕುತೂಹಲದಿಂದ ಗಮನಿಸುತ್ತಿದ್ದ. ‘ಸಾರ್, ನಿಮ್ಮ ನಾಯಿ ಅದ್ಭುತ. ನಿಜಕ್ಕೂ ಅದು ಇಡೀ ಸಿನಿಮಾವನ್ನು ಎಂಜಾಯ್ ಮಾಡುತ್ತಿರುವಂತಿದೆ. ಗ್ರೇಟ್ ಡಾಗ್್’ ಎಂದು ಪ್ರಶಂಶಿಸಿದ.
ಅದಕ್ಕೆ ಕೀಲೂ ಹೇಳಿದ- ‘ಹೌದೌದು. ಅದಕ್ಕೆ ಸಿನಿಮಾ ಅಂದ್ರೆ ಬಹಳ ಇಷ್ಟ. ಪುಸ್ತಕ ಕಂಡ್ರೆ ಆಗೊಲ್ಲ!’
***
ಆತ ಮೂರಡಿ ಎತ್ತರದ ವಕೀಲ. ಆದರೆ ಅಸಾಧಾರಣ ಬುದ್ಧಿವಂತ. ಆತನಿಗೆ ತನ್ನನ್ನು ಮೀರಿಸುವವರು ಯಾರೂ ಇಲ್ಲವೆಂಬ ಒಣ ಜಂಭ. ಆತನ ಜಂಭ ಇಳಿಸುವವರು ಯಾರೂ ಇಲ್ಲವಲ್ಲ ಎಂದು ಎಲ್ಲರೂ ಅಂದುಕೊಳ್ಳುತ್ತಿದ್ದರು.
ಒಮ್ಮೆ ಮಹಿಳೆಯೊಬ್ಬಳು ತಾನು ಅತ್ಯಾಚಾರಕ್ಕೊಳಗಾಗಿದ್ದೇನೆಂದು ಆರೋಪಿಸಿ ಕೋರ್ಟಿನ ಮೊರೆ ಹೋದಳು. ಯಾರು ಅತ್ಯಾಚಾರ ಮಾಡಿದ್ದಾರೋ ಅವನ ಪರವಾಗಿ ಈ ವಕೀಲ ವಾದ ಮಾಡಲು ಬಂದ.
‘ಮೈ ಲಾರ್ಡ್ ಅಲ್ಲಿ ನಿಂತಿದ್ದಾನಲ್ಲ, ಅವನಿಂದ ನಾನು ಅತ್ಯಾಚಾರಕ್ಕೊಳಗಾಗಿದ್ದೇನೆ. ಬೆಳಗಾಗುವ ಹೊತ್ತಿಗೆ ಆತ ನನ್ನ ಪಕ್ಕದಲ್ಲಿಯೇ ಮಲಗಿದ್ದ.’ ಎಂದಳು.
ಅದಕ್ಕೆ ವಕೀಲ ಕೇಳಿದ- ‘ನೀವು ಹೇಳಿದ ಕತೆಯನ್ನು ನಂಬುವುದು ಕಷ್ಟ. ಒಂದು ವೇಳೆ, ಒಂದು ಮುಂಜಾನೆ ಎದ್ದಾಗ ನಿಮ್ಮ ಹಾಸಿಗೆ ಮೇಲೆ ನನ್ನನ್ನು ನೋಡಿದರೆ ಏನೆಂದು ಭಾವಿಸುತ್ತೀರಾ?’
ಚೋಟುದ್ದ ಎತ್ತರದ ವಕೀಲನನ್ನು ದಿಟ್ಟಿಸಿದ ಆ ಮಹಿಳೆ ಹೇಳಿದಳು- ‘ನನಗೆ ಗರ್ಭಪಾತ ಆಯಿತು ಅಂತ ಅಂದುಕೊಳ್ಳುತ್ತೇನೆ!’
***
ಚರ್ಚಿನ ಅನಾಥಾಲಯದಲ್ಲಿ ಬೆಳೆದ ಆ ಮೂವರು ತರುಣಿಯರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ ಕೊಡುವಾಗ, ಅಲ್ಲಿನ ಲೇಡಿ ವಾರ್ಡನ್ ಹೇಳಿದಳು- ‘ನಿಮ್ಮನ್ನು ಭಾರವಾದ ಹೃದಯದಿಂದ ಕಳಿಸಿಕೊಡುತ್ತಿದ್ದೇನೆ. ಜಗತ್ತು ಬಹಳ ಕೆಟ್ಟುಹೋಗಿದೆ. ಗಂಡಸರು ನಿಮ್ಮ ಕಡೆ ಕೆಟ್ಟ ದೃಷ್ಟಿಯಿಂದ ನೋಡುತ್ತಾರೆ. ಅವರು ನಿಮ್ಮನ್ನು ಕಾಫಿಡೇಗೆ ಕರೆದುಕೊಂಡು ಹೋಗ್ತಾರೆ, ಮೊಬೈಲ್ ತೆಗೆಸಿಕೊಡುತ್ತಾರೆ, ಸಿನಿಮಾ ತೋರಿಸುತ್ತಾರೆ, ಕಾರು, ಬೈಕ್ ಮೇಲೆ ‘ಜುಂ’ ಅಂತ ಸುತ್ತಿಸುತ್ತಾರೆ. ಕೊನೆಗೆ ನಿಮ್ಮ ಸ್ನೇಹವನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಮಾಡಬಾರದ್ದನ್ನು ಮಾಡಿ, ಸಾವಿರ ರುಪಾಯಿ ಕೊಟ್ಟು ಮನೆಗೆ ಕಳಿಸುತ್ತಾರೆ.’
ಆಕೆಯ ಮಾತು ಕೇಳಿದವರ ಪೈಕಿ ಒಬ್ಬ ತರುಣಿ ‘ಸಿಸ್ಟರ್, ಅಂದ್ರೆ ಗಂಡಸರು ನಮ್ಮನ್ನು ಬಳಸಿಕೊಂಡು ಹಣ ಕೊಟ್ಟು ಕಳಿಸುತ್ತಾರಾ?’ ಎಂದು ರಾಗ ಎಳೆದಳು. ಅದಕ್ಕೆ ವಾರ್ಡನ್ ‘ಹೌದಮ್ಮ ಹೌದು. ಅದ್ಸರಿ ನಿಂಗ್ಯಾಕೆ ಆ ಅನುಮಾನ?’ ಎಂದು ಕೇಳಿದ್ದಕ್ಕೆ ಆ ತರುಣಿ ಹೇಳಿದಳು- ‘ಹಾಗಾದ್ರೆ ಪಾದ್ರಿ ನಮಗೆ ಕಳೆದ ಎರಡು ವರ್ಷಗಳಿಂದ ಬರೀ ಬರ್ಗರ್ ಪಿಜ್ಜಾ ಮಾತ್ರ ಕೊಡುತ್ತಿದ್ದರು. ಒಂದು ಸಲವೂ ಹಣ ಕೊಡಲಿಲ್ಲ ನೋಡಿ ಸಿಸ್ಟರ್್’.
***
ಕೀಲೂ ತನ್ನ ಪತ್ನಿಯೊಂದಿಗೆ ಇಪ್ಪತ್ತೈದನೆ ವೆಡ್ಡಿಂಗ್ ಆ್ಯನಿವರ್ಸರಿಯನ್ನು ಆಚರಿಸಿಕೊಂಡ. ಆ ರಾತ್ರಿ ಅವರಿಬ್ಬರೂ ಒಂದು ರೊಮ್ಯಾಂಟಿಕ್ ಸಿನಿಮಾ ನೋಡಲು ಹೋದರು. ಆ ದಿನ ಮನೆಗೆ ಬಂದಾಗ ಪತ್ನಿ ಕೇಳಿದಳು- ‘ನೀವ್ಯಾಕೆ ಆ ಸಿನಿಮಾದ ಹೀರೋನ ಹಾಗೆ ಪ್ರೀತಿಸಬಾರದು?’
ಅದಕ್ಕೆ ಕೀಲೂ ಹೇಳಿದ- ‘ನಿನಗೆ ಗೊತ್ತಾ, ಆ ಕೆಲಸಕ್ಕಾಗಿ ಹೀರೋ ಎಷ್ಟು ಸಂಭಾವನೆ ಪಡೆಯುತ್ತಾನೆ ಅಂತ?’
***
ಟಿವಿ ಚಾನೆಲ್್ಗಳಿಗೆ ‘ಬ್ರೇಕಿಂಗ್ ನ್ಯೂಸ್್’ ಅಂದ್ರೆ ಆಕ್ಸಿಜನ್ ಇದ್ದ ಹಾಗೆ. ಹೀಗಾಗಿ ಅವು ‘ಬ್ರೇಕಿಂಗ್ ನ್ಯೂಸ್್’ಗಳಿಂದ ಉಸಿರಾಡುತ್ತಿರುತ್ತವೆ. ಕ್ಷಣಕ್ಷಣಕ್ಕೂ ಬ್ರೇಕಿಂಗ್ ನ್ಯೂಸನ್ನು ಬಿತ್ತರಿಸುತ್ತಿರುತ್ತವೆ. ಸುದ್ದಿ ಯಾವುದಾದರೂ ಆಗಬಹುದು. ಅದು ಬ್ರೇಕಿಂಗ್ ನ್ಯೂಸ್ ಆಗಲು ಲಾಯಕ್ಕು. ಅಂಥದ್ದೊಂದು ಕಾಲ್ಪನಿಕ ಘಟನೆ.
ಒಮ್ಮೆ ಪೋಪ್, ವ್ಯಾಟಿಕನ್ ನಗರದಲ್ಲಿ ನಡೆದು ಹೋಗುತ್ತಿದ್ದಾಗ ಕಂಬಳಿ ಹುಳವನ್ನು ಗೊತ್ತಿಲ್ಲದೇ ಇನ್ನೇನು ಮೆಟ್ಟಬೇಕೆನ್ನುವಷ್ಟರಲ್ಲಿ ಅದು ಜೋರಾಗಿ ಕಿರುಚಿತಂತೆ, ‘ನಾನು ಮನುಷ್ಯ. ಆದರೆ ಕಂಬಳಿ ಹುಳುವಿನ ವೇಷದಲ್ಲಿದ್ದೇನೆ. ಯಾರೂ ನನ್ನನ್ನು ಬಚಾವ್ ಮಾಡುತ್ತಾರೋ ಅವರಿಗೆ ಜೀವನದಲ್ಲಿ ಬಯಸಿದ್ದೆಲ್ಲ ಸಿಗುತ್ತದೆ.’
ಪೋಪ್್ಗೆ ಅಚ್ಚರಿಯಾಯಿತು. ಜೀವನದಲ್ಲಿ ಪೋಪ್ ಆದ ಮೇಲೆ ಸರ್ವಸ್ವವೂ ಸಿಕ್ಕಂತೆ. ಅದಕ್ಕಿಂತ ದೊಡ್ಡ ಸ್ಥಾನಮಾನ ಯಾವುದೂ ಇಲ್ಲ. ಆದರೂ ಈ ಕಂಬಳಿ ಹುಳ ಏನೇನೋ ಬಡಬಡಿಸುತ್ತಿದೆ. ಪ್ರಾಣಿಗಳಲ್ಲೂ ದೇವರು ಇರುತ್ತಾನೆಂದು ನಾನೇ ಹಲವು ಸಲ ಹೇಳಿದ್ದೇನಲ್ಲ, ಈ ಕಂಬಳಿಹುಳವನ್ನು ರಕ್ಷಿಸೋಣ ಎಂದು ಪೋಪ್ ಅಂದುಕೊಂಡನಂತೆ.
ಬದುಕಿದೆಯಾ ಬಡಜೀವವೇ ಅಂದುಕೊಂಡಿತಂತೆ ಕಂಬಳಿಹುಳ. ‘ಈ ದಿನ ನಾನು ನಿನ್ನ ತಲೆದಿಂಬಿನ ಪಕ್ಕವೇ ಮಲಗಬೇಕು ಎಂಬ ಆಸೆಯಿದೆ. ನಡೆಸಿಕೊಡುತ್ತೀಯಾ? ನಾಳೆ ಬೆಳಗ್ಗೆ ನಿನಗೊಂದು ಅಚ್ಚರಿ ಕಾದಿದೆ’ ಎಂದು ಹೇಳಿತಂತೆ.
ಪೋಪ್್ಗೆ ವಿಪರೀತ ಕುತೂಹಲವುಂಟಾಯಿತು. ಆ ಕಂಬಳಿಹುಳವನ್ನು ಮೆಲ್ಲಗೆ ಕಟ್ಟಿ ಪೋಪ್ ತನ್ನ ತಲೆದಿಂಬಿನ ಬಳಿ ಇಟ್ಟುಕೊಂಡು ಮಲಗಿದನಂತೆ. ಬೆಳಗಾಗುವ ಹೊತ್ತಿಗೆ ಆ ಕಂಬಳಿಹುಳ ಚಿಟ್ಟೆಯಾಗಿ, ಚಿಟ್ಟೆ ಒಂದು ಸುಂದರ ತರುಣಿಯಾಗಿ ರೂಪಾಂತರವಾಗಿತ್ತು! ಆದರೆ ಆ ತರುಣಿ ಪೋಪ್ ಹಾಸಿಗೆ ಮೇಲೆ ಕಟ್ಟಿಹಾಕಲ್ಪಟ್ಟಿದ್ದಳು. ಬೆಳಗಾಗುತ್ತಲೇ ಕಾರ್ಡಿನಲ್ ಟೀ ತೆಗೆದುಕೊಂಡು ಪೋಪ್ ಕೋಣೆಗೆ ಬಂದ. ನೋಡ್ತಾನೆ, ಪೋಪ್ ಹಾಸಿಗೆ ಮೇಲೆ ಸುಂದರ ತರುಣಿ! ಆದರೆ ತಲೆದಿಂಬಿನ ಹತ್ತಿರದ ಮಂಚದ ಕಾಲಿಗೆ ಕಟ್ಟಿ ಹಾಕಲ್ಪಟ್ಟಿದ್ದಾಳೆ.
ಈ ಎಲ್ಲಾ ಘಟನೆಯನ್ನು ಪೋಪ್ ಕಾರ್ಡಿನಲ್್ಗೆ ವಿವರಿಸಿದನಂತೆ. ಕಾರ್ಡಿನಲ್ ನಂಬಲಿಲ್ಲ. ಕಂಬಳಿಹುಳ ಹುಡುಗಿಯಾಗುವುದುಂಟಾ? ಎಂದು ಕಾರ್ಡಿನಲ್ ಪ್ರಶ್ನಿಸಿದ. ಅವಳನ್ನು ನೀವು ಹಾಸಿಗೆ ಮೇಲೆ ಕುಳ್ಳಿರಿಸಿಕೊಳ್ಳುವುದುಂಟಾ? ಉಹುಂ…ಉಹುಂ… ಸಾಧ್ಯವೇ ಇಲ್ಲ ಎಂದು ವಾದಿಸಿದ.
ಆದರೂ ನೋಡೋಣ ಎಂದು ಈ ಎಲ್ಲಾ ಘಟನೆಗಳನ್ನು ಪತ್ರಕರ್ತರ ಮುಂದೆ ಹೇಳಿದ. ಅರೆಕ್ಷಣದಲ್ಲಿ ಎಲ್ಲ ಟಿವಿಗಳಲ್ಲೂ ಬ್ರೇಕಿಂಗ್ ನ್ಯೂಸ್! ಮಂಚಕ್ಕೆ ಕಟ್ಟಿ ಹಾಕಿ ತರುಣಿ ಮಾನಭಂಗಕ್ಕೆ ಯತ್ನ, ಪೋಪ್ ಕೈವಾಡ ಶಂಕೆ.
***
ಆಕೆ ತನ್ನ ಸ್ನೇಹಿತೆಗೆ ತನ್ನಲ್ಲಿರುವ ಮಿಂಕ್ ಪ್ರಾಣಿಯ ತುಪ್ಪಳದಿಂದ ಮಾಡಿದ ಕೋಟನ್ನು ಪ್ರದರ್ಶಿಸುತ್ತಿದ್ದಳು. ‘ನೀನು ಅದೃಷ್ಟವಂತೆ, ನಿನ್ನ ಗಂಡ ನಿನಗೆ ಎಷ್ಟು ಉತ್ತಮ ಕೋಟ್ ಕೊಟ್ಟಿದ್ದಾನೆ’ ಎಂದಳು ಸ್ನೇಹಿತೆ.
‘ಅದೃಷ್ಟ ಗಿದೃಷ್ಟ ಏನೂ ಇಲ್ಲ. ಕೆಲಸದಾಕೆಗೆ ಚುಂಬಿಸುವಾಗ ಸಿಕ್ಕಿಬಿದ್ದ. ಮಾಡಿದ ತಪ್ಪಿಗೆ ಈ ಕೋಟನ್ನು ಕೊಟ್ಟ’ ಎಂದಳಾಕೆ. ‘ ಹಾಗಾದ್ರೆ ನೀನು ಕೆಲಸದಾಕೆಯನ್ನು ಓಡಿಸಿದೆಯಾ?’ ಎಂದು ಕೇಳಿದಳು ಸ್ನೇಹಿತೆ.
ಅದಕ್ಕೆ ಆಕೆ ಹೇಳಿದಳು-’ ನಾನಿನ್ನೂ ಮಿಂಕ್ ಪ್ರಾಣಿಯ ಹ್ಯಾಟ್ ಖರೀದಿಸಬೇಕಿದೆ.’
- ವಿಶ್ವೇಶ್ವರ ಭಟ್
vbhat@me.com
PJ………Parkat jokes:)
Yaava joku chennagilla….
Really good jokes with mild comedy. Those who want to smile or laugh can enjoy and if you are not able to enjoy these jokes please contact nearby Doctor….thank you Sir