ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಪ್ರಣಬ್ ಮುಖರ್ಜಿಗೆ ಸಿಕ್ಕಿದ ಆಕಾಶ ಮತ್ತು ಅವಕಾಶ

ಉನ್ನತ ಹುದ್ದೆಗೇರಿರುವ ಅನೇಕರಿಗೆ ತಮ್ಮ ಸ್ಥಾನ, ಅಧಿಕಾರದ ಮಹತ್ವ, ವಿಸ್ತಾರ, ವ್ಯಾಪ್ತಿಯೇ ಗೊತ್ತಿರುವುದಿಲ್ಲ. ತಮಗಿಂತ ಮೊದಲಿನವರು ಹೇಗೆ ಅಧಿಕಾರ ನಡೆಸಿ ಹೋಗಿದ್ದಾರೋ, ಅದೇ ನೆರಳಿನಲ್ಲಿ ಆಶ್ರಯ ಪಡೆಯುತ್ತಾರೆ. ತಮ್ಮ ಹುದ್ದೆಯ ಹರವು ಅವರಿಗೆ ಗೊತ್ತಿರುವುದಿಲ್ಲ.

ಟಿ.ಎನ್. ಶೇಷನ್ ಮುಖ್ಯ ಚುನಾವಣಾ ಅಧಿಕಾರಿಯಾಗುವ ತನಕ, ಈ ದೇಶದ ಚುನಾವಣಾ ಆಯೋಗದ ಮುಖ್ಯಸ್ಥರಿಗೆ ಅಷ್ಟೊಂದು ಅಧಿಕಾರವಿದೆಯಾ ಎಂಬ ಸಂಗತಿಯೇ ತಿಳಿದಿರಲಿಲ್ಲ. ಚುನಾವಣೆ ಘೋಷಣೆಯಾದಂದಿನಿಂದ ಅದು ಮುಗಿದು ಫಲಿತಾಂಶ ಪ್ರಕಟವಾಗುವ ತನಕ ಅವರು ದೇಶದ ಎಲ್ಲ ರಾಜಕಾರಣಿಗಳನ್ನು ಕಿರುಬೆರಳಿನಲ್ಲಿ ಕುಣಿಸಿದರು. ಅಕ್ಷರಶಃ ಇಡೀ ದೇಶ ಆ ಅವಧಿಯಲ್ಲಿ ಅವರ ಆದೇಶದಂತೆ ನಡೆಯುತ್ತಿತ್ತು. ಒಬ್ಬ ಮುಖ್ಯ ಚುನಾವಣಾಧಿಕಾರಿಯ ಅಸಲಿ ತಾಕತ್ತೇನೆಂಬುದನ್ನು ಶೇಷನ್ ತೋರಿಸಿ ‘ವಿಶೇಷ’ನ್ ಎಂದು ಅನಿಸಿಕೊಂಡರು. ಅವರ ಹಿಂದಿನವರ ಅಧಿಕಾರ ಅಜ್ಞಾತವಾಸಕ್ಕೆ ಸಮನಾಗಿತ್ತು.

ಹಾಗೆಂದು ಶೇಷನ್ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಲಿಲ್ಲ. ತಮ್ಮ ಅಧಿಕಾರ ವ್ಯಾಪ್ತಿ ಮೀರಿ ವರ್ತಿಸಲಿಲ್ಲ. ಒಬ್ಬ ಮುಖ್ಯ ಚುನಾವಣಾಧಿಕಾರಿಗೆ ಏನೇನೆಲ್ಲ ಸಂವಿಧಾನದತ್ತ ಅಧಿಕಾರವಿದೆಯೋ ಅವೆಲ್ಲವನ್ನೂ ಅವರು ಪರಿಣಾಮಕಾರಿಯಾಗಿ ಬಳಸಿಕೊಂಡರು. ಈ ಬಳಕೆಯಿಂದ ಸಹಜವಾಗಿ ಅವರಿಗೆ ಜನಪ್ರಿಯತೆ, ಸ್ವೀಕಾರಾರ್ಹ ಗುಣ ಪ್ರಾಪ್ತವಾಯಿತು. ಶೇಷನ್ ಸುತ್ತ ಪ್ರಭಾವಳಿ ನಿರ್ಮಾಣವಾಯಿತು. ಇದನ್ನು ಅವರು ಸಮರ್ಥವಾಗಿ ಉಪಯೋಗಿಸಿಕೊಂಡರು. ಶೇಷನ್ ಎದುರು ಹಾಕಿಕೊಂಡರೆ ಅಪಾಯ ತಪ್ಪಿದ್ದಲ್ಲ ಎಂಬ ಸಂದೇಶ ರವಾನೆಯಾಯಿತು. ನಿಜಕ್ಕೂ ಅವರು ಚುನಾವಣೆ ಸಂದರ್ಭದಲ್ಲಿ ರಾಜಕಾರಣಿಗಳಿಗೆ ಸಿಂಹಸ್ವಪ್ನರಾಗಿದ್ದರು.

ಈ ಮಾತನ್ನು ಲೋಕಾಯುಕ್ತರಾಗಿದ್ದ ವೆಂಕಟಾಚಲಯ್ಯ ಹಾಗೂ ಸಂತೋಷ ಹೆಗ್ಡೆಯವರಿಗೂ ಹೇಳಬಹುದು. ಇವರಿಬ್ಬರೂ ಅಧಿಕಾರಕ್ಕೆ ಬರುವ ತನಕ ಲೋಕಾಯುಕ್ತ ಎಂಬ ಸಂಸ್ಥೆಯಿದೆಯೆಂಬುದು ಹೆಚ್ಚಿನವರಿಗೆ ಗೊತ್ತಿರಲಿಲ್ಲ. ಲೋಕಾಯುಕ್ತರಾಗಿದ್ದವರು ಅಲ್ಲಿ ತನಕ ಗ್ರಾಮಲೆಕ್ಕಿಗರು, ಶಾನುಭೋಗರು, ತಹಸೀಲ್ದಾರರು, ಕಾನ್್ಸ್ಟೇಬಲ್್ಗಳನ್ನು ಹಿಡಿದುಕೊಂಡಿದ್ದರು. ‘ಲೋಕಾಯುಕ್ತರ ಬಲೆಗೆ ಗ್ರಾಮಲೆಕ್ಕಿಗ’ ಎಂಬ ಪತ್ರಿಕಾ ಹೆಡ್್ಲೈನ್ ಕಿರಿಕಿರಿಯಾಗುವಷ್ಟು ಸಾಮಾನ್ಯವಾಗಿತ್ತು. ವೆಂಕಟಾಚಲಯ್ಯ ಮತ್ತು ಸಂತೋಷ ಹೆಗ್ಡೆಯವರು ಲೋಕಾಯುಕ್ತರಾದ ಬಳಿಕ ದೊಡ್ಡ ದೊಡ್ಡ ‘ತಿಮಿಂಗಿಲ’ಗಳು ಬಲೆಗೆ ಬೀಳಲಾರಂಭಿಸಿದವು. ಐಎಎಸ್, ಐಪಿಎಸ್ ಅಧಿಕಾರಿಗಳ ಮನೆಗಳ ಮೇಲೂ ದಾಳಿ ನಡೆದವು. ಲಂಚ ಸ್ವೀಕರಿಸುವಾಗ ಶಾಸಕರನ್ನೂ ಹಿಡಿದರು.

ಸಂತೋಷ ಹೆಗ್ಡೆಯವರು ಲೋಕಾಯುಕ್ತರಾಗಿದ್ದಾಗ ಮಂತ್ರಿಗಳು, ಮುಖ್ಯಮಂತ್ರಿಗಳಿಗೆ ದೂರು ನೀಡಿದರೆ ಅದಕ್ಕೆ ಪರಿಹಾರ ಸಿಕ್ಕೇ ಬಿಡುತ್ತದೆ ಎಂಬ ಖಾತ್ರಿಯಿಲ್ಲದ್ದರಿಂದ, ಜನ ಅವರಿಗೇ (ಹೆಗ್ಡೆಯವರಿಗೆ) ದೂರು ನೀಡುತ್ತಿದ್ದರು. ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗದಿದ್ದರೆ ಹೆಗ್ಡೆಯವರಿಗೆ ಹೇಳುತ್ತಿದ್ದರು. ಲೋಕಾಯುಕ್ತ ಹುದ್ದೆಯ ಘನತೆ, ಅಧಿಕಾರ ವ್ಯಾಪ್ತಿಯೇನೆಂಬುದನ್ನು ಅವರು ತೋರಿಸಿಕೊಟ್ಟರು.
ಅಧಿಕಾರಕ್ಕೇರಿದ ಪ್ರತಿಯೊಬ್ಬರಿಗೂ ಇಂಥ ಅವಕಾಶ ತೆರೆದುಕೊಳ್ಳುತ್ತದೆ. ಆದರೆ ಬಹುಪಾಲು ಜನ ಅದನ್ನು ಚಲಾಯಿಸುವುದೇ ಇಲ್ಲ. ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳಬೇಕಿಲ್ಲ, ಕನಿಷ್ಠ ಉಪಯೋಗಿಸಿಕೊಂಡರೂ ಸಾಕು. ಅದನ್ನೂ ಮಾಡುವುದಿಲ್ಲ.

ಈ ಮಾತನ್ನು ಇಲ್ಲಿ ಯಾಕೆ ಪ್ರಸ್ತಾಪಿಸುತ್ತಿದ್ದೇನೆ ಅಂದರೆ, ಮೊನ್ನೆ ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನಕ್ಕೇರಿದ ಪ್ರಣಬ್ ಮುಖರ್ಜಿಯವರಿಗೆ ಈಗ ಅಂಥದೇ ಅವಕಾಶ ತೆರೆದುಕೊಂಡಿದೆ. ನಮ್ಮ ದೇಶದ ರಾಷ್ಟ್ರಪತಿಯನ್ನು ‘ರಬ್ಬರ್್ಸ್ಟಾಂಪ್್’ ಎಂದು ಅಣಕಿಸುವುದುಂಟು. ವಿಪರ್ಯಾಸವೆಂದರೆ ಅದು ಅಣಕವಲ್ಲ, ವಾಸ್ತವವಾಗಿ ಪರಿಣಮಿಸಿರುವುದು. ಪ್ರಧಾನಿಯವರು, ಆಡಳಿತ ಪಕ್ಷದ ಮುಖ್ಯಸ್ಥರು ಹೇಳಿದ್ದಕ್ಕೆಲ್ಲ ಗೋಣು ಆಡಿಸುವುದೇ ಅವರ ಕಾಯಕ ಎಂದು ಭಾವಿಸಿರುವವರೂ ಉಂಟು.

ದುರಂತವೆಂದರೆ, ಇಲ್ಲಿಯತನಕ ಅಧಿಕಾರಕ್ಕೆ ಬಂದವರ ಪೈಕಿ ಒಂದಿಬ್ಬರನ್ನು ಹೊರತುಪಡಿಸಿದರೆ, ರಾಷ್ಟ್ರಪತಿಗಳಾದವರು ‘ರಬ್ಬರ್ ಸ್ಟಾಂಪ್್’ ಎಂಬ ಅಭಿದಾನದಿಂದ ಹೊರಬರಲೇ ಇಲ್ಲ. ರಾಷ್ಟ್ರಪತಿಗಳಾದವರು ‘ರಬ್ಬರ್ ಸ್ಟಾಂಪ್್’ ಆಗಿ ಇರಬೇಕಿಲ್ಲ. ಅವರಿಗೆ ನಮ್ಮ ಸಂವಿಧಾನ ಅಪರಿಮಿತ ಅಧಿಕಾರ ನೀಡಿದೆ. ಘನತೆ, ಗೌರವ, ಸಾರ್ವಭೌಮತ್ವ ನೀಡಿದೆ. ಮೂರು ಸೇನೆಗಳ ಮಹಾದಂಡನಾಯಕರೂ ಅವರೇ. ಕೇಂದ್ರ ಸರ್ಕಾರ ಹಾಗೂ ಪ್ರಧಾನಿಗೆ ಹಿರಿಯಣ್ಣನಾಗಿ ಕೆಲಸ ಮಾಡಲು ಅವಕಾಶವಿದೆ. ಪ್ರಧಾನಿ ಹಾಗೂ ರಾಷ್ಟ್ರಪತಿ ಒಟ್ಟಾಗಿ ಕೆಲಸ ಮಾಡಬಹುದು ಎಂಬುದನ್ನು ಇಲ್ಲಿತನಕ ರಾಷ್ಟ್ರಪತಿಭವನಕ್ಕೆ ಬಂದ ಯಾರೂ ಅರಿಯದಿರುವುದು ವಿಚಿತ್ರವೇ ಸರಿ. ಇದಕ್ಕೆ ಕಾರಣ ರಾಷ್ಟ್ರಪತಿಯಾಗಿ ಆಯ್ಕೆಯಾದವರು ಪ್ರಧಾನಿಯವರ ನಿಯಂತ್ರಣದಲ್ಲಿದ್ದವರು ಅಥವಾ ರಾಜಕೀಯವಾಗಿ ಅವರಿಗಿಂತ ಕಿರಿಯರು, ಶ್ರೇಣಿಯಲ್ಲಿ ಕೆಳಗಿನವರು.. ಇತ್ಯಾದಿ. ರಾಷ್ಟ್ರಪತಿಯಾಗಿ ಆಯ್ಕೆಯಾಗುವ ಮುನ್ನ ಪ್ರತಿಭಾ ಪಾಟೀಲ್ ಅವರು ರಾಜ್ಯಪಾಲರಾಗಿದ್ದರು. ಅವರು ರಾಷ್ಟ್ರಪತಿಯಾದ ಬಳಿಕ ಪ್ರಧಾನಿಯವರಿಗಾಗಲಿ, ಅವರನ್ನು ಆರಿಸಿದ ಸೋನಿಯಾ ಗಾಂಧಿಯವರಿಗಾಗಲಿ ಉಪಕೃತರಾಗಿಯೇ ಇರುವುದು ಸಹಜ. ಅಂಥವರಿಂದ ಯಾವ ಸಲಹೆ, ಸೂಚನೆ, ಮಾರ್ಗದರ್ಶನ ನಿರೀಕ್ಷಿಸಬಹುದು? ಪ್ರಧಾನಿಯವರೇ ರಾಷ್ಟ್ರಪತಿ ಅಭ್ಯರ್ಥಿಯನ್ನು ಸೂಚಿಸುವುದರಿಂದ, ಅವರು ತಮಗಿಂತ ಲೈಟ್್ವೇಟ್ ವ್ಯಕ್ತಿಯನ್ನೇ ಅಲ್ಲಿ ಕುಳ್ಳಿರಿಸಿರುತ್ತಾರೆ.

ಈ ಕಾರಣದಿಂದ ಉನ್ನತ ಹುದ್ದೆಗೇರಿದರೂ ರಾಷ್ಟ್ರಪತಿಯಾದವರಿಗೆ ತಮ್ಮ ಸ್ಥಾನಕ್ಕೆ ನ್ಯಾಯವೊದಗಿಸಲು ಸಾಧ್ಯವಾಗಿರಲಿಲ್ಲ.

ಆದರೆ ಇತ್ತೀಚಿನ ವರ್ಷಗಳಲ್ಲಿ ಮೊದಲ ಬಾರಿಗೆ ಎಂಬಂತೆ ರಾಷ್ಟ್ರಪತಿ ಪದವಿಗೇರಿದ ಪ್ರಣಬ್ ಮುಖರ್ಜಿಯವರಿಗೆ ಅಪರೂಪದ ಅವಕಾಶ ಒದಗಿ ಬಂದಿದೆ. ಅನುಭವದಲ್ಲಿ ಮುಖರ್ಜಿ ಪ್ರಧಾನಿ ಡಾ. ಮನಮೋಹನಸಿಂಗ್್ಗಿಂತ ಹಿರಿಯರು. ಸಾರ್ವಜನಿಕ ಜೀವನದಲ್ಲಿ ಅಪಾರ ಅನುಭವ ಹೊಂದಿದವರು. ರಾಜಕೀಯವಾಗಿ ಪ್ರಧಾನಿಯವರಿಗಿಂತ ಹೆಚ್ಚು ಕ್ರಿಯಾಶೀಲರಾಗಿದ್ದವರು. ಅಂಥ ಮುಖರ್ಜಿಯವರಿಗೆ ರಾಷ್ಟ್ರಪತಿ ಸ್ಥಾನದ ವಿಸ್ತಾರವನ್ನು ಪಸರಿಸುವ ಅವಕಾಶ ಒದಗಿಬಂದಿದೆ. ತಾವು ರಬ್ಬರ್್ಸ್ಟಾಂಪ್ ಅಲ್ಲ, ರಾಷ್ಟ್ರಪತಿಯಾದವರು ರಬ್ಬರ್ ಸ್ಟಾಂಪ್ ಆಗಿರಬೇಕಾಗಿಯೂ ಇಲ್ಲ ಎಂಬುದನ್ನು ಸಾಬೀತುಪಡಿಸಲು ಇದು ಉತ್ತಮ ಸಂದರ್ಭ. ಜತೆಗೆ ಪ್ರಧಾನಿಗೆ ಯೋಗ್ಯ ಹಿರಿಯಣ್ಣನಾಗಿ, ಸರ್ಕಾರಕ್ಕೆ ಉತ್ತಮ ಮಾರ್ಗದರ್ಶಕನಾಗಿ, ಸಂವಿಧಾನದ ಹಿತರಕ್ಷಕನಾಗಿ ನಿಜವಾದ ಅರ್ಥದಲ್ಲಿ ಪ್ರಥಮ ಪ್ರಜೆಯಾಗಲು ಇದೊಂದು ಅಪೂರ್ವ ಅವಕಾಶ. ಯಾವ ರಾಷ್ಟ್ರಪತಿಗೂ ಸಿಗದ ಛಾನ್ಸ್ ಮುಖರ್ಜಿಯವರಿಗೆ ಸಿಕ್ಕಿದೆ.

ರಾಷ್ಟ್ರಪತಿ ಸ್ಥಾನವೆಂಬ ಎತ್ತರದ ಆಕಾಶದ ಅವಕಾಶವನ್ನು ಮುಖರ್ಜಿಯವರು ಎಷ್ಟರಮಟ್ಟಿಗೆ ಬಳಸುತ್ತಾರೋ?

>>>>>>>>>

ಸಾವು- ಸಾಂತ್ವನ

ಈ ಹಿಂದೆ ನೂರೆಂಟು ನೋಟ ಅಂಕಣದಲ್ಲಿ ಗತಿಸಿದ ಸಾತ್ವಿಕ್್ರನ್ನು ನೆನಪಿಸಿಕೊಳ್ಳುತ್ತಾ, ಅವರ ಪಾಲಕರಿಗೆ ಸಾಂತ್ವನ ಹೇಳುವಂತಿದ್ದ ಕೆಲ ಕತೆಗಳನ್ನು ಕಟ್ಟಿ ಕೊಟ್ಟಿದ್ದೆ. ಆ ಪೈಕಿ ಹಾಗೆ ಉಳಿದುಕೊಂಡಿದ್ದ ಕತೆಯೊಂದು ಇಲ್ಲಿದೆ.

ಹೇಮಂತ್ ಸಾಳುಂಕೆಗೆ ಅದು ಮರೆಯಲಾಗದ ಆಘಾತ. ಹದಿನೆಂಟು ವರ್ಷದ ಮಗಳು ಸ್ವಾತಿ ಅಪಘಾತದಲ್ಲಿ ಮೃತಪಟ್ಟಿದ್ದಳು. ಮಗಳು ನಿಧನಳಾಗಿ ಕೆಲ ದಿನಗಳಲ್ಲಿ ಅವರಿಗೊಂದು ಪತ್ರ ಬಂತು. ಆ ಪತ್ರ ಓದಿದ ಅವರಿಗೆ ನೋವು ತುಸು ಕಮ್ಮಿಯಾದಂತೆನಿಸಿತು. ಹೆಂಡತಿಗೆ ಓದಿ ಹೇಳಿದರು. ಮಗಳು ನೆನಪಾದಾಗಲೆಲ್ಲ ಆ ಪತ್ರವನ್ನು ಪದೇ ಪದೆ ಓದಿ ತಮಗೇ ಸಮಾಧಾನ ಹೇಳಿಕೊಳ್ಳುತ್ತಿದ್ದರು. ಆ ಪತ್ರದಿಂದ ಏನೋ ಸಾಂತ್ವನ ಸಿಗುತ್ತಿತ್ತು. ಅದರಲ್ಲಿ ಬರೆದಿತ್ತು.

ಪ್ರಿಯ ಶ್ರೀಮತಿ ಹಾಗೂ ಶ್ರೀ ಹೇಮಂತ್ ಸಾಳುಂಕೆ ಅವರಿಗೆ ನಮಸ್ಕಾರಗಳು. ನಿಮ್ಮ ಮಗಳ ನಿಧನಕ್ಕೆ ವಿಷಾದಿಸುವೆ. ನಾನೇಕೆ ಈ ಪತ್ರ ಬರೆಯುತ್ತಿದ್ದೇನೆ ಅಂದ್ರೆ ನನಗೂ ಮೂವರು ಮಕ್ಕಳು-ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗ. ಆ ಪೈಕಿ ಯಾರ ಸಾವನ್ನೂ ನಾನು ಸಹಿಸಿಕೊಳ್ಳಲಾರೆ. ಆ ಶಕ್ತಿ ನನಗಿಲ್ಲ.

ನಿಮ್ಮ ಮಗಳು ಅಪಘಾತಕ್ಕೀಡಾದಾಗ ನಾನು ಘಟನಾ ಸ್ಥಳದಲ್ಲಿದ್ದೆ. ಅವಳು ಕೊನೆಯುಸಿರೆಳೆಯುವ ದೃಶ್ಯಕ್ಕೆ ನಾನು ಸಾಕ್ಷಿಯಾಗಿದ್ದೆ. ಉಸಿರಾಟಕ್ಕೆ ಸಹಾಯವಾಗಲೆಂದು ಅವಳ ತಲೆಯನ್ನು ತನ್ನ ತೊಡೆಯ ಮೇಲೆ ಇಟ್ಟುಕೊಂಡಿದ್ದೆ. ಅವಳು ಮೂರ್ಛೆ ಹೋಗಿದ್ದಳು. ಕೊನೆಯಲ್ಲಿ ‘ಡ್ಯಾಡಿ, ಮಮ್ಮಿ….ಬೈ’ ಎಂದಷ್ಟೇ ಹೇಳಿದ್ದು ಕೇಳಿಸಿತು. ನಾನು ನನ್ನ ಕಿವಿಯನ್ನು ಅವಳ ಮುಖದ ಹತ್ತಿರಕ್ಕೆ ತಂದಾಗ ಅನಿಸಿತು ಅವಳ ಪ್ರಾಣ ಪಕ್ಷಿ ಹಾರಿ ಹೋಗಿದೆಯೆಂದು ಅವಳ ಮುಖವನ್ನು ದಿಟ್ಟಿಸಿದೆ. ಮುಖದಲ್ಲಿ ಮಂದಸ್ಮಿತವಿತು.್ತ ಶಾಂತತೆಯಿತ್ತು.

ನಿಮ್ಮ ಮಗಳು ನರಳಿ ಸಾಯಲಿಲ್ಲ. ಕೊನೆ ಕ್ಷಣದಲ್ಲೂ ಅವಳ ಜೊತೆಯಲ್ಲಿ ನೀವೇ ಇದ್ದಿರಿ. ಮೂರ್ಛಾವಸ್ಥೆಯಲ್ಲೂ ಅವಳು ನಿಮ್ಮ ನೆನಪಿನಲ್ಲಿ ಇದ್ದಳು. ಅವಳು ಕೊನೆಯುಸಿರೆಳೆದಿದ್ದು ಮಕ್ಕಳನ್ನು ಅತಿಯಾಗಿ ಪ್ರೀತಿಸುವ ತಂದೆಯ ತೊಡೆಯ ಮೇಲೆ. ವಿಧಿಯ ಇಚ್ಛೆ. ಆದರೆ ಅವಳು ನಿಮ್ಮ ಮಗಳಾಗಿದ್ದಳು.

ನಿಮ್ಮ ಮಗಳ ಕೊನೆಯ ಕ್ಷಣಗಳು ಹೇಗಿದ್ದವು ಎಂಬುದನ್ನು ಕೇಳುವ ಇಚ್ಛೆ ಉದ್ಭವಿಸಿದಾಗಲೆಲ್ಲ ನನ್ನನ್ನು ಸಂಪರ್ಕಿಸಬಹುದು. ನಾನು ನನ್ನ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ನಿಮ್ಮ ಮಗಳ ಆತ್ಮಕ್ಕೆ ಶಾಂತಿ ಕೋರುವ….

ಈ ಪತ್ರವನ್ನು ಓದಿದ ತಕ್ಷಣ ಹೇಮಂತ್ ಸಾಳುಂಕೆಗೆ ಆ ವ್ಯಕ್ತಿಯನ್ನು ಭೇಟಿಯಾಗಬೇಕೆನಿಸಿತು. ಪ್ರತಿಸಲ ಭೇಟಿಯಾದಾಗಲೆಲ್ಲ ಸಾಳುಂಕೆ ದಂಪತಿಗಳಿಗೆ ಅವ್ಯಕ್ತ ಸಾಂತ್ವನ ಸಿಗುತ್ತಿತ್ತು. ಕೆಲವೊಮ್ಮೆ ಮೂವರೂ ಜೋರಾಗಿ ಅಳುತ್ತಿದ್ದರು. ಮೂರು ಮಕ್ಕಳ ತಂದೆಗೆ, ಮಗಳನ್ನು ಕಳೆದುಕೊಂಡ ದಂಪತಿಯ ಸಂಕಟ, ವೇದನೆಯೆಂಬುದು ಗೊತ್ತಿತ್ತು. ಪ್ರತಿಸಲ ಸಾಳುಂಕೆ ದಂಪತಿಗಳಿಂದ ಬೀಳ್ಕೊಡುವ ಮುನ್ನ ಆತ ಹೇಳುತ್ತಿದ್ದ-’ನಿಮ್ಮ ಮಗಳು ನನ್ನಲ್ಲಿ ಜೀವಂತವಾಗಿದ್ದಾಳೆ, ನಿಮ್ಮಲ್ಲಿ ಜೀವಂತವಿರುವ ಹಾಗೆ.’

-ವಿಶ್ವೇಶ್ವರ ಭಟ್

4 Comments

  1. Second Story (?) is very nostalgic one. Eyes went moist !!

  2. V HEGEYARE THAVU BREYUV ANKNAVNNU NANU DHINVU ODUTHENE NIMMA BARAHA VECHARAGAL THILIVU , ADRLLIN SAMASYE ADKKE PARIHARAGALU NIMMA BHARAHADLLI IDHE .
    THANK YOU

  3. Ya, it is really a graet opportunity to Pranab to show the citizens “what is President of India?”, and I hope he will show it.

  4. After looking at a few of the blog posts on your
    website, I really appreciate your technique
    of blogging. I bookmarked it to my bookmark webpage list
    and will be checking back soon. Please visit my web site too and tell me what
    you think.

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.