ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಬೆಂಗಳೂರು ನಿಮ್ಮ ಕೈ ತಪ್ಪಿ ಹೋದರೆ ಅಚ್ಚರಿಪಡಬೇಡಿ !

‘ನಾನು ಕಳೆದ ಹದಿನೇಳು ತಿಂಗಳುಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದೇನೆ. ಮೊದಲ ದಿನದಿಂದಲೂ ಕಬ್ಬನ್್ಪಾರ್ಕ್್ಗೆ ಭೇಟಿ ನೀಡುವುದನ್ನು ರೂಢಿ ಮಾಡಿಕೊಂಡಿದ್ದೇನೆ. ಕರ್ನಾಟಕದ ಎಲ್ಲ ಸಂರಕ್ಷಿತ ಅರಣ್ಯ, ರಾಷ್ಟ್ರೀಯ ಉದ್ಯಾನವನ, ಅಣೆಕಟ್ಟುಗಳನ್ನೆಲ್ಲ ಸುತ್ತಿದ್ದೇನೆ. ರಾಜ್ಯದ ವನ್ಯಜೀವಿಗಳ ಸುಮಾರು ಐದು ಸಾವಿರಕ್ಕೂ ಹೆಚ್ಚು ಚಿತ್ರಗಳನ್ನು ಸೆರೆ ಹಿಡಿದಿದ್ದೇನೆ. ಪ್ರತಿದಿನವನ್ನೂ ಇಲ್ಲಿನ ಅರಣ್ಯ, ವನ್ಯಜೀವಿ, ಕಾಡು, ಮರಗಳ ಸಾಂಗತ್ಯದಲ್ಲಿ ಕಳೆದಿದ್ದೇನೆ.’
ಆಸಾಮಿ ಭಲೇ ಇಂಟರೆಸ್ಟಿಂಗ್ ಇದಾನೆ ಅಂತ ಅಂದುಕೊಂಡೆ.

ಇತ್ತೀಚೆಗೆ ನಗರದ ಓಬೇರಾಯ್ ಹೋಟೆಲ್್ನಲ್ಲಿ ಆಕಸ್ಮಿಕವಾಗಿ ಪರಿಚಿತನಾದ ಸ್ಕಾಟ್್ಲ್ಯಾಂಡ್ ಮೂಲದ ರಿಚರ್ಡ್ ಸ್ಟಿಕ್್ಮ್ಯಾನ್ ಎಂಬಾತನ ಬಗ್ಗೆ ಹೇಳುತ್ತಿದ್ದೇನೆ. ಆತ ಅಲ್ಲಿಗೆ ಊಟಕ್ಕೆ ಬಂದಿರಲಿಲ್ಲ. ಓಬೇರಾಯ್ ಹೋಟೆಲ್್ನ ಆವರಣದಲ್ಲಿರುವ ನೂರಾರು ವರ್ಷಗಳ ಮರಗಳಲ್ಲಿ ಆಶ್ರಯ ಪಡೆದಿರುವ ಪಕ್ಷಿಗಳ ಫೋಟೋ ಕ್ಲಿಕ್ಕಿಸಲೆಂದು ಮೂರು ದಿನಗಳಿಂದ ಅಲ್ಲಿಯೇ ಬೀಡುಬಿಟ್ಟಿದ್ದ. ಮೂರು ದಿನಗಳ ಹಿಂದೆ ಸೆರೆಸಿಕ್ಕ ಬಾವಲಿಗಳ ಚಿತ್ರಗಳನ್ನೆಲ್ಲ ತೋರಿಸಿದ. ನನಗೆ ಆತನ ಅಭಿರುಚಿಗಳು ಅತಿಯಾಗಿ ರುಚಿಸಿದವು. ಮೊದಲ ಭೇಟಿಯಲ್ಲೇ ಎರಡು ಜನ್ಮಗಳ ಸ್ನೇಹಿತರೇನೋ ಎಂಬಂತೆ ಹತ್ತಿರವಾದೆವು. ಹೋಗುವಾಗಲೇ ಗೊತ್ತಾಗಿದ್ದು ಆತ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿರುವ, ಸಾಫ್ಟ್್ವೇರ್ ಎಂಜಿನಿಯರ್. ಮಾಡಲು ಕೈ ತುಂಬಾ ಕೆಲಸಗಳಿವೆ. ಅವೆಲ್ಲವುಗಳ ಮಧ್ಯದಲ್ಲಿಯೇ ಸ್ಟಿಕ್್ಮ್ಯಾನ್ ಹಕ್ಕಿ, ಕಾಡು ಅಂತೆಲ್ಲ ತಿರುಗುತ್ತಾನೆ.

ನನಗೆ ಇವೆಲ್ಲವುಗಳಿಗಿಂತ ಆತ ಹೇಳಿದ ಕೆಲವು ವಿಚಾರಗಳು ಆಳವಾಗಿ ನಾಟಿದವು. ‘ಕರ್ನಾಟಕ ರಾಜಕೀಯವಾಗಿ ಬಹಳ ಜಾಗೃತ ರಾಜ್ಯ. ಪ್ರತಿದಿನ ಪತ್ರಿಕೆಗಳಲ್ಲಿ ರಾಜಕೀಯ ಸುದ್ದಿಯೇ ತುಂಬಿರುತ್ತವೆ.’ ರಾಜಕೀಯ ನಾಯಕರು ಇಲ್ಲಿನ ಜನರ ಜೀವನದ ಮೇಲೆ ಅಸಾಧಾರಣ ಪ್ರಭಾವ ಹೊಂದಿದ್ದಾರೆ. ನಾನು ಬಂದು ಹದಿನೇಳು ತಿಂಗಳುಗಳಾದವು. ಆದರೆ ಇಲ್ಲಿನ ಮುಖ್ಯಮಂತ್ರಿಯಾಗಲಿ, ಮಂತ್ರಿಯಾಗಲಿ, ಜನಪ್ರತಿನಿಧಿಗಳಾಗಲಿ, ಪ್ರತಿಪಕ್ಷನಾಯಕರಾಗಲಿ ಸಾರ್ವಜನಿಕವಾಗಿ ಪ್ರಾಣಿ, ಪಕ್ಷಿ, ಕಾಡು, ಅಣೆಕಟ್ಟು, ನೀರು, ಪರಿಸರ ಸಂರಕ್ಷಣೆ ಬಗ್ಗೆ ಮಾತಾಡಿದ್ದನ್ನು ಕೇಳಿಲ್ಲ. ಕಬ್ಬನ್ ಪಾರ್ಕ್ ನಿರ್ವಹಣೆ ಬಹಳ ಕೆಟ್ಟದಾಗಿದೆ. ಲಾಲ್್ಬಾಗ್ ಸಹ ಅಷ್ಟೇ. ಇಲ್ಲಿನ ಸರಕಾರಕ್ಕೆ ಪ್ರಾಣಿ, ಪಕ್ಷಿಗಳ ಹಿತ ಕಾಯುವುದರಲ್ಲಿರುವ ಮಹತ್ವವೇ ಗೊತ್ತಿಲ್ಲ. ಮುಂದೊಂದು ದಿನ ಕಬ್ಬನ್್ಪಾರ್ಕ್ ಸಂಪೂರ್ಣ ನೆಲಸಮವಾದರೂ ಆಶ್ಚರ್ಯವಿಲ್ಲ. ಜನರಿಗೂ ಅದರ ಬಗ್ಗೆ ಗಮನ ಹರಿಸುವಷ್ಟು ಪುರುಸೊತ್ತಿಲ್ಲ. ಅರಣ್ಯರಕ್ಷಣೆ ಸರಕಾರದ ಕೆಲಸ ಎಂದು ಅವರು ಭಾವಿಸಿದ್ದಾರೆ. ಜನರಿಗೇ ಬೇಡವಾದದ್ದು ಸರಕಾರಕ್ಕೇಕೆ ಬೇಕು?’ ಎಂದು ಸ್ಟಿಕ್್ಮ್ಯಾನ್ ಮಾತು ನಿಲ್ಲಿಸಿದ.

‘ಸ್ಕಾಟ್್ಲ್ಯಾಂಡಿನಲ್ಲಿ ಕಾಡುಗಳನ್ನ ಹೇಗೆ ಇಟ್ಟುಕೊಂಡಿದ್ದೀರಿ?’ ಎಂದು ಕೇಳಿದೆ.

‘ನಮ್ಮ ತಲೆಯ ಕೂದಲುಗಳನ್ನು ಹೇಗೆ ಒಪ್ಪ-ಓರಣವಾಗಿ ಇಟ್ಟುಕೊಳ್ಳುತ್ತೇವಲ್ಲ, ಹಾಗೇ ಕಾಡುಗಳನ್ನು ಸಹ ಇಟ್ಟುಕೊಳ್ಳುತ್ತೇವೆ. ತಲೆಕೂದಲು ಇಲ್ಲದಿದ್ದರೆ ಏನೂ ತೊಂದರೆ ಇಲ್ಲ. ಸುಖವಾಗಿ ಬದುಕಬಹುದು. ಆದರೆ ಕಾಡು, ಹಕ್ಕಿ, ಪ್ರಾಣಿಗಳಿಲ್ಲದಿದ್ದರೆ ಪರಿಸರ ಸಮತೋಲನ ಸಾಧ್ಯವೇ? ಅಂಥ ಪರಿಸರವನ್ನು ಸ್ಕಾಟ್್ಲ್ಯಾಂಡ್್ನಲ್ಲಿ ಊಹಿಸಿಕೊಳ್ಳಲು ಸಹ ಸಾಧ್ಯವಿಲ್ಲ. ಆದರೆ ಕಬ್ಬನ್್ಪಾರ್ಕ್ ಇಲ್ಲದ ಬೆಂಗಳೂರನ್ನು ನಾನು ಊಹಿಸಿಕೊಳ್ಳಬಲ್ಲೆ. ಅಷ್ಟಕ್ಕೂ ಕಬ್ಬನ್್ಪಾರ್ಕ್ ಕಾಡು ಅಲ್ಲವೇ ಅಲ್ಲ.

ಯಾರೂ ಈ ಬಗ್ಗೆ ಚಿಂತಿಸುತ್ತಿಲ್ಲ. ಎಲ್ಲೂ ಸಹ ಒಂದು ಚರ್ಚೆಯಾಗಲಿ, ಸಂವಾದವಾಗಲಿ ನಡೆದಿದ್ದನ್ನು ನಾನಂತೂ ಕೇಳಿಲ್ಲ.’

‘ನಾನು ಕುತೂಹಲ ತಾಳಲಾರದೇ ಬೆಂಗಳೂರಿನ ಕೆಲವು ಬಡಾವಣೆಗಳಿಗೆ ಹೋಗಿದ್ದೆ. ನಗರ ಹೇಗೆ ಇರಬಾರದೆಂಬುದಕ್ಕೆ ಬೆಂಗಳೂರು ಉತ್ತಮ ನಿದರ್ಶನ. ಪ್ಲಾನ್ ಇಲ್ಲದೇ ನಗರವೊಂದು ಬೆಳೆಯುತ್ತಿದೆ. ಯಾರಿಗೆ ಏನೂ ಅನಿಸುತ್ತಿಲ್ಲ. ಬೆಂಗಳೂರು ವಿಶ್ವದ ಅತ್ಯಂತ ಸುಂದರ ನಗರವಾಗಬಹುದಿತ್ತು. ಆದರೆ ಅದಕ್ಕೆ ಸರಿ ವಿರುದ್ಧವಾಗಿ ಬೆಳೆಯುತ್ತಿದೆ. ಇನ್ನೂ ಹತ್ತು ವರ್ಷಗಳಲ್ಲಿ ಈ ನಗರದಲ್ಲಿ ಬದುಕುವುದೇ ದುಸ್ತರವಾದೀತು. ಬೆಂಗಳೂರು ನಿಮ್ಮ ಕೈ ತಪ್ಪಿ ಹೋದರೆ ಅಚ್ಚರಿಪಡಬೇಡಿ.’

ಅಂಗೈ ಹುಣ್ಣಿಗೆ ಕನ್ನಡಿ ಯಾಕೆ ಬೇಕು? ಇದನ್ನು ಸ್ಟಿಕ್್ಮ್ಯಾನ್ ಬಾಯಲ್ಲಿ ಕೇಳಬೇಕಾ? ಆದರೆ ಅವನಲ್ಲಿರುವ ಕಾಳಜಿ ಮಾತ್ರ ನನ್ನನ್ನು ಒಂದಷ್ಟು ಕಾಲ ಯೋಚನೆಗೆ ನೂಕಿತು.

ಶನಿವಾರ ರಾತ್ರಿ ಊಟಕ್ಕೆ ಕರೆಯಬೇಕೆಂದು ಅದೇ ಮಧ್ಯಾಹ್ನ ಫೋನ್ ಮಾಡಿದೆ. ‘ಅಣಶಿ ಕಾಡಿಗೆ ಹೋಗುತ್ತಿದ್ದೇನೆ. ಸೋಮವಾರ ಸಿಗುತ್ತೇನೆ.’ ಎಂದ.

ಯಾಕೋ ಅಪರಾಧ ಪ್ರಜ್ಞೆ ಕಾಡಲಾರಂಭಿಸಿತು.

** ** ** ** ** **

ಆ ಒಂದು ಸಾಲು!

ಬೊಳುವಾರರ ‘ಸ್ವಾತಂತ್ರ್ಯದ ಓಟ’ ಕಾದಂಬರಿ ಓದಲು ಈ ಬೇಸಿಗೆ ಬೇಕು. ಅದು ಈ ಕೆಟ್ಟ ಬಿಸಿಲಿನ ಝಳಕ್ಕೆ ಸಾಂತ್ವನವಾಗಬಹುದು ಎಂಬ ಆಶಯದೊಂದಿಗೆ ಕಾದಂಬರಿ ಸಿಕ್ಕ ತಕ್ಷಣವೇ ಓದಲು ಆರಂಭಿಸಿದೆ.

ಕಾದಂಬರಿ ಆರಂಭವಾಗುವುದಕ್ಕೆ ಮುನ್ನಾ ಪುಟದಲ್ಲಿದ್ದ ಒಂದು ಸಾಲು ತೀವ್ರವಾಗಿ ಕಾಡಿತು. ಅದನ್ನು ಓದಿದ ನಂತರ ಕೆಲಕಾಲ ಓದಲು ಸಾಧ್ಯವಾಗಲೇ ಇಲ್ಲ. ಆ ಒಂದು ಸಾಲು ಅಸಂಖ್ಯ ಭಾವತರಂಗಗಳನ್ನು ಎಬ್ಬಿಸಿತು. ಯೋಚಿಸಿದಷ್ಟೂ ದಡ ದೂರವಾಗುತ್ತಾ ಹೋಗುತ್ತಿದೆಯೇನೋ ಅನಿಸಿತು.

ಬೊಳುವಾರು ಬರೆದಿದ್ದರು-‘ಅತಿಥಿ ಅವನ ಅನ್ನದೊಂದಿಗೆ ಬರುತ್ತಾನೆ; ಅನ್ನ ಕೊಟ್ಟವರ ಪಾಪಗಳನ್ನು ತಿನ್ನುತ್ತಾನೆ.’

ಕಾದಂಬರಿ ಹಲವು ನಿರೀಕ್ಷೆಗಳನ್ನು ಹುಟ್ಟಿಸಿತು.!

** ** ** ** ** **

ಗೆಲುವೊಂದರ ಹಿಂದೆ ಎಂಥಾ ಗುಟ್ಟು!

ಒಬ್ಬ ಹುಡುಗ. ಆತ ಹುಟ್ಟಿನಿಂದಲೇ ಅಂಗವಿಕಲ. ಅವನಿಗೆ ಎಡಗೈ ಇರಲಿಲ್ಲ. ದೈಹಿಕ ವೈಕಲ್ಯ ಗೊತ್ತೇ ಇಲ್ಲ ಎಂಬಂತೆ ಆತ ಬೆಳೆದು ಬಿಟ್ಟ. ಅದೊಂದು ದಿನ, ಅಪ್ಪನ ಮುಂದೆ ನಿಂತು, ನಾನು ಕರಾಟೆ ಕಲೀಬೇಕು. ಕರಾಟೆ ಚಾಂಪಿಯನ್ ಆಗಬೇಕು ಅಂದ. ‘ನೀನು ಅಂಗವಿಕಲ ಕಣೋ. ಕರಾಟೆ ಕಲೀಬೇಕಾದ್ರೆ ಎರಡೂ ಕೈ ಇರಬೇಕು. ಹಾಗಾಗಿ ಈ ಯೋಚನೆ ಕೈ ಬಿಡು’ ಎಂದು ಹೇಳಿದರೆ ಮಗನ ಮನಸ್ಸಿಗೆ ನೋವಾಗುತ್ತದೆ ಎನಿಸಿದಾಗ ಆ ತಂದೆ ಒಂದೂ ಮಾತಾಡಲಿಲ್ಲ. ಒಬ್ಬ ಹೆಸರಾಂತ ಕರಾಟೆ ಮಾಸ್ಟರ್ ಬಳಿಗೆ ಮಗನನ್ನು ಕರೆದೊಯ್ದು ಎಲ್ಲ ವಿಷಯ ತಿಳಿಸಿದ.

ಆ ಗುರು, ಈ ಹುಡುಗನನ್ನು ಸೂಕ್ಷ್ಮವಾಗಿ ಗಮನಿಸಿದರು. ಈ ಗುರುಗಳು ಹೇಳಿಕೊಟ್ಟಿದ್ದು ಒಂದೇ ಒಂದು ಬಗೆಯ ವಿದ್ಯೆ. ಅದೇ ಆಶ್ರಮದಲ್ಲಿರುವ ಉಳಿದ ವಿದ್ಯಾರ್ಥಿಗಳು ಕರಾಟೆಯಲ್ಲಿ ಚಾಲ್ತಿಯಲ್ಲಿದ್ದ ಹತ್ತಾರು ಬಗೆಯ ಪಟ್ಟುಗಳನ್ನು ಕಲಿತರು. ಅವುಗಳನ್ನು ಆಗಿಂದ್ದಾಗ್ಗೆ ಪ್ರದರ್ಶಿಸಿ ಜಂಬ ಕೊಚ್ಚಿಕೊಂಡರು. ಆಗೆಲ್ಲ ಈ ವಿಕಲಾಂಗ ಹುಡುಗನಿಗೆ ಎಂಥದೋ ಕಳವಳ. ಯಾಕೋ ಸಂಕಟ. ಉಳಿದವರಿಗೆಲ್ಲ ಹತ್ತಾರು ಪಟ್ಟುಗಳನ್ನು ಹೇಳಿಕೊಡುವ ಗುರುಗಳು ನನಗೆ ಮಾತ್ರ ಪದೇ ಪದೆ ಒಂದನ್ನೆ ಹೇಳಿಕೊಡುತ್ತಿದ್ದಾರೆ. ಬಹುಶಃ ನಾನು ಅಂಗವಿಕಲ ಎಂಬ ಕಾರಣಕ್ಕೆ ಹೀಗೆ ಮಾಡುತ್ತಿರಬಹುದು ಎಂದೆಲ್ಲ ಅನುಮಾನಪಟ್ಟ. ಒಂದೆರಡು ಸಂದರ್ಭದಲ್ಲಿ ಇದನ್ನೆಲ್ಲ ಹೇಳಲೆಂದು ಗುರುಗಳ ಮುಂದೆ ಹೋದ. ಇವನು ಮಾತು ಶುರು ಮಾಡುವ ಮೊದಲೇ – ಮುಂದಿನ ತಿಂಗಳು ಕರಾಟೆ ಚಾಂಪಿಯನ್್ಶಿಪ್ ಶುರುವಾಗುತ್ತೆ. ಚೆನ್ನಾಗಿ ಅಭ್ಯಾಸ ಮಾಡು ಎಂದು ಬಿಟ್ಟರು. ಅಷ್ಟೇ ಅಲ್ಲ; ತಾವೇ ಎದುರು ನಿಂತು ಅಭ್ಯಾಸ ಮಾಡಿಸಿದರು.

ಚಾಂಪಿಯನ್್ಶಿಪ್ ನಡೆವ ದಿನ ಬಂದೇ ಬಂತು. ಅವತ್ತು ಈ ಹುಡುಗನಿಗೆ ಗೆಲ್ಲುವೆನೆಂಬ ವಿಶ್ವಾಸವೇ ಇರಲಿಲ್ಲ. ಏಕೆಂದರೆ, ಆತ ಕಲಿತಿದ್ದುದು ಒಂದೇ ಒಂದು ಬಗೆಯ ಪಟ್ಟು. ಎದುರಾಳಿ ಬೇರೊಂದು ತಂತ್ರ ಬಳಸಿದರೆ ಏನು ಮಾಡಬೇಕು ಎಂಬುದೇ ಇವನಿಗೆ ಗೊತ್ತಿರಲಿಲ್ಲ. ಅವನು ಈ ಅನುಮಾನದಲ್ಲಿ ಒದ್ದಾಡುತ್ತಿದ್ದಾಗಲೇ ಸ್ಪರ್ಧೆ ಆರಂಭವಾಗುವ ಸೂಚನೆ ಸಿಕ್ಕಿತು. ಅಖಾಡಕ್ಕಿಳಿಯುವ ಮುನ್ನ ಗುರುವಿಗೆ ಶಿರಬಾಗಿ ನಮಿಸಿದ. ಗೆಲುವೊಂದೇ ನನ್ನ ಗುರಿ ಎಂದುಕೊಂಡು ಹೋರಾಡು. ಗೆದ್ದು ಬಾ…’ ಎಂದಷ್ಟೇ ಗುರುಗಳು ಹೇಳಿದರು. ಈ ವೇಳೆಗಾಗಲೇ ಎದುರಾಳಿ ಸ್ಪರ್ಧಿ, ಆಖಾಡ ಪ್ರವೇಶಿಸಿ ಬಗೆಬಗೆಯ ಚಮತ್ಕಾರ ಪ್ರದರ್ಶಿಸಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದ.

ಕಡೆಗೊಮ್ಮೆ ಸ್ಪರ್ಧೆ ಶುರುವಾಗಿಯೇ ಬಿಟ್ಟಿತು. ಎಲ್ಲರೂ ಈ ಒಂಟಿ ಕೈ ಹುಡುಗನನ್ನು ಅಯ್ಯೋ ಪಾಪ ಎಂಬಂತೆ ನೋಡುವವರೇ. ಆದರೆ, ಇಪ್ಪತ್ತು ನಿಮಿಷದ ನಂತರದಲ್ಲಿ ಪವಾಡವೊಂದು ನಡೆದು ಹೋಯಿತು. ಈ ಒಂಟಿ ಕೈ ಹುಡುಗನ ಏಟುಗಳಿಗೆ ಎದುರಾಳಿ ತತ್ತರಿಸಿ ಹೋಗಿದ್ದ. ತುಂಬ ಸುಲಭದಲ್ಲಿ ಸೋಲೊಪ್ಪಿಕೊಂಡಿದ್ದ! ತನ್ನ ಗೆಲುವನ್ನು ನಂಬಲಾರದೆ ನಂಬಿದ ಈ ಹುಡುಗ ಕಡೆಗೊಮ್ಮೆ ಗುರುಗಳನ್ನು ಕೇಳಿದ: ‘ಗುರುಗಳೇ,. ಇಂಥದೊಂದು ಗೆಲುವು ನನ್ನಿಂದ ಹೇಗೆ ಸಾಧ್ಯವಾಯ್ತು? ನನ್ನ ಪ್ರತಿಸ್ಪರ್ಧಿ ಹತ್ತಕ್ಕೂ ಹೆಚ್ಚು ಪಟ್ಟುಗಳನ್ನು ಕಲಿತಿದ್ದ. ದೈಹಿಕವಾಗಿಯೂ ಜೋರಾಗಿದ್ದ. ಹಾಗಿದ್ದರೂ ಅವನು ಸೋತಿದ್ದು ಏಕೆ?’

ಈ ಪ್ರಶ್ನೆಗೆ ಗುರುಗಳು ಉತ್ತರಿಸಿದ್ದು ಹೀಗೆ: ‘ಹೌದಲ್ವಾ? ನಿನಗೆ ಒಂದು ಕೈ ಇಲ್ಲ. ಅದನ್ನೇ ನೆಪ ಮಾಡಿಕೊಂಡು ಬೇರೆ ಬೇರೆ ಪಟ್ಟುಗಳನ್ನು ಹೇಳಿಕೊಡಲು ಹೋದರೆ, ಒಂದು ಕೈ ಇಲ್ಲ ಎಂಬ ಭಾವ ನಿನ್ನೊಳಗೆ ಉಳಿದುಬಿಡುತ್ತಿತ್ತು. ಆಗ ಸಹಜವಾಗಿ ಕರಾಟೆ ಕಲಿಯಲು ಆಗುತ್ತಿರಲಿಲ್ಲ. ಅದನ್ನು ಗಮನಿಸಿಯೇ ನಾನು ಬಗೆಬಗೆಯ ಪಟ್ಟುಗಳನ್ನು ಹೇಳಿಕೊಡಲೇ ಇಲ್ಲ. ನಿನಗೆ ಗೊತ್ತಿದ್ದುದು ಒಂದೇ ಬಗೆಯ ಯುದ್ಧತಂತ್ರ. ಹಾಗಾಗಿ ಪಂದ್ಯದ ಉದ್ದಕ್ಕೂ ನೀನು ಅದರ ಮೇಲೇ ಡಿಪೆಂಡ್ ಆಗಿಬಿಟ್ಟೆ. ಪ್ರತಿಸ್ಪರ್ಧಿಯೂ ಒಂದು ಕೈಯನ್ನು ರಕ್ಷಣೆಗೂ, ಇನ್ನೊಂದನ್ನು ಆಕ್ರಮಣಕ್ಕೂ ಬಳಸುತ್ತಾನೆ. ನಿನಗೆ ಒಂದು ಕೈ ಇರಲಿಲ್ಲ. ನೋಡು, ಆ ಕಾರಣದಿಂದ ಎದುರಾಳಿ ಮೊದಲೇ ಕಕ್ಕಾಬಿಕ್ಕಿಯಾದ. ರಕ್ಷಣೆಗೆಂದು ಕಲಿತ ಪಟ್ಟುಗಳನ್ನು ಹೇಗೆ ಪ್ರದರ್ಶಿಸಬೇಕು ಎಂಬುದೇ ಅವನಿಗೆ ತಿಳಿಯಲಿಲ್ಲ. ಈ ಗೊಂದಲದ ಜೊತೆಗೆ ಹತ್ತಾರು ಪಟ್ಟುಗಳು ಗೊತ್ತಿವೆ ಎಂಬ ಅಹಮಿಕೆಯೂ ಅವನ ಸೋಲಿಗೆ ಕಾರಣವಾಯಿತು’ ಅಂದರು.

1984ರಲ್ಲಿ ಬಂದ ‘ಕರಾಟೆ ಕಿಡ್್’ ಚಿತ್ರದಲ್ಲೂ ಇದೇ ಕಥೆಯ ಎಳೆ ಇದೆ. ಒಂದು ಗೆಲುವಿನ ಹಿಂದೆ ಇಂಥ ಗುಟ್ಟುಗಳು ಇರುತ್ತವೆ. ಹೌದಲ್ಲವೇ?

ಇನ್ನೂ ಮುಗಿದಿಲ್ಲ!
ಇಬ್ಬರು ಮಹಿಳೆಯರಿಗೆ ಜೈಲು ಶಿಕ್ಷೆಯಾಯಿತು. ಅವರಿಬ್ಬರನ್ನು ಜೈಲಿನಲ್ಲಿ ಒಂದೇ ಕೋಣೆಯಲ್ಲಿ ಹಾಕಲಾಯಿತು. ಹದಿನಾಲ್ಕು ವರ್ಷಗಳು ಉರುಳಿದವು. ಕೊನೆಗೆ ಬಿಡುಗಡೆಯ ದಿನ ಬಂತು. ಜೈಲಿನಿಂದ ಹೊರಬಂದ ಅವರು ಒಬ್ಬರನ್ನೊಬ್ಬರನ್ನು ತಬ್ಬಿಕೊಂಡು ಬೀಳ್ಕೊಡುವ ಮುನ್ನ ಪರಸ್ಪರ ಹೇಳಿಕೊಂಡರು- ‘ಉಳಿದ ವಿಷಯಗಳನ್ನು ಫೋನಿನಲ್ಲಿ ಮಾತಾಡಿಕೊಳ್ಳೋಣ!’

-ವಿಶ್ವೇಶ್ವರ ಭಟ್
** ** ** ** **
ಸುಪ್ರಭತಾ

ಪ್ರತಿದಿನ ಏಳುವಾಗ ಈ ದಿನವು ನಾವು ಅಂದುಕೊಂಡಿದ್ದನ್ನು ಸಾಧಿಸಲು ಸಿಕ್ಕ ಸದಾವಕಾಶ ಎಂದು ಭಾವಿಸಿ. ನಾವು ಆ ದಿನವನ್ನು ನೋಡುವ ರೀತಿಯೇ ಬದಲಾಗುತ್ತದೆ. ಹಾಗೆ ನಮ್ಮ ಜೀವನ ಸಹ.

7 Comments

 1. The article about Bangalore was really heart touching. In my school days, I used to write essays about earth, pollution and extinct wildlife. Today when I grow up city like Bangalore, everything is clear that, how we fail to establish a heaven on earth. We struggle every day for good air, water and food. The meaning of life has changed in the cities, to earn money, become richer, even though there are no moral values. The politics was supposed to be a community service to the people of India, by the people of India, without any benefits.
  I hope people shall think the way of development are in terms of preservation & improving our own nature.

 2. The lines told by Richard is 100% true.
  There are lot of reasons why the city is growing in uplanned way… We can’t always blame the karnataka govt.
  Always government plans acccording to the population growth forecatsing for few years,but we can see there is
  simply a unxepected rate of increasing population in bangalore.Providing such a big infrastrucure and basic needs
  to the public and maintaining is not a joke ..!!
  I agree that there are mistakes by govt but the root cause for this is population immigration from various
  parts of the country to bangalore. These immigrants are spoiling a rich culture and heritage of bangalore.
  We can observe that most of the people in IT companies are from other states. They are coming here and enjoying the
  top ost facilities provided which is available here ( I am speaking about the infrastructures and our peacefull green garden city
  atmosphere) this is deprived to our karnataka people.
  We need to prevent these immigrants from coming to city ( Otherwise ours will be second Mumbai!!! beacause localites are
  suffering from others due to lack of space and increased price ).

  • Hi ,

   I agree with the words of Manoj Joshi stating that the problem of infra @ bangalore is due to overflood
   of population from others states specially from Andhra ,Tamilnadu,Kerala……
   They have just come to bangalore n settled here from years together but still being for these many years in karnataka
   they never become kannadiga.
   They wont build a brotherhood they support there states in kaveri or tungabhadra issues……That is not accepatable.
   Bangalore is being saturated by these people …Most of the crime committed are by these people only.
   So govt must take action on this issue and prevent people coming from other state to karnataka..
   Kannada people are very soft and tolerable,but they think it as our weakness.
   Do they behave the same when we go to chennai ? or Bihar ?..

   Kannadiga’s just think its a high time.Our patience and silence is not our weakness.

   SAVE KANNADA..SAVE BENGALOORU…JAI KARNATAKA…

 3. HI sir,

  Really Bangalore is losing its beauty. so many buildings ,tech parks ,molls but very few books stalls .

 4. Really heart touching article..

 5. very nice article. liked it so much.

 6. This piece of writing gives clear idea in support of the new
  users of blogging, that in fact how to do running
  a blog.

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.