ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಸಂದರ್ಭವೆಂಬುದು ಹೇಳಿ ಕೇಳಿ ಬರುವುದಿಲ್ಲ !  

ಮೂವತ್ತು ವರ್ಷ ವಯಸ್ಸಿನ ಒಬ್ಬ ಯುವಕನಿದ್ದ. ಆತ ರೂಪವಂತ. ಗುಣವಂತ. ಅಷ್ಟೊಂದು ಚಿಕ್ಕ ವಯಸ್ಸಿಗೇ ಎರಡೆರಡು ಡಿಗ್ರಿ ಮಾಡಿಕೊಂಡಿದ್ದ. ಒಂದು ದೊಡ್ಡ ಕಂಪನಿಯಲ್ಲಿ ಅತ್ಯುತ್ತಮ ಸಂಬಳದ ನೌಕರಿಯೂ ಅವನಿಗಿತ್ತು. ಅವನ ಸೌಂದರ್ಯ, ಕೌಟುಂಬಿಕ ಹಿನ್ನೆಲೆ, ವಿದ್ಯಾಭ್ಯಾಸ ಹಾಗೂ ನೌಕರಿ… ಈ ಎಲ್ಲವನ್ನೂ ಗಮನಿಸಿದ ಹಲವರು ಅವನನ್ನು ಅಳಿಯನನ್ನಾಗಿ ಮಾಡಿಕೊಳ್ಳಲು ನಾಮುಂದು-ತಾಮುಂದು ಎಂದು ಬರತೊಡಗಿದರು. ಕನ್ಯಾಪಿತೃಗಳ ಮಾತು ಒತ್ತಟ್ಟಿಗಿರಲಿ; ಈ ಚೆಲುವನನ್ನು ಬುಟ್ಟಿಗೆ ಹಾಕಿಕೊಳ್ಳಲೆಂದು ಅದೆಷ್ಟೋ ತರುಣಿಯರು ಮುಂದಾದರು.

ಅಂಥ ಸಂದರ್ಭಗಳಲ್ಲೆಲ್ಲ- ‘ನೀನು ನನ್ನಷ್ಟು ಸುಂದರವಾಗಿಲ್ಲ’, ‘ನೀನು ನನಗಿಂತ ಕಡಿಮೆ ವಿದ್ಯಾವಂತೆ’, ‘ನನ್ನ ಶ್ರೀಮಂತಿಕೆಗೆ ನೀನು ಸಮನಲ್ಲ’, ‘ನೀನು ಕೃಷ್ಣ ಸುಂದರಿ. ಹಾಗಾಗಿ ಮದುವೆ ಆಗೋದು ಕಷ್ಟ…’  ಇಂಥವೇ ಹತ್ತಾರು ಕಾರಣಗಳನ್ನು ಹುಡುಗ ಹೇಳಿಕೊಂಡು ಬಂದ. ಈತ ತಿರಸ್ಕರಿಸಿಕೊಂಡು ಬಂದಂತೆಲ್ಲ ಅವನನ್ನು ಮದುವೆಯಾಗಲು ದುಂಬಾಲು ಬೀಳುವ ಹುಡುಗಿಯರ ಸಂಖ್ಯೆಯೂ ಸ್ವಲ್ಪ ದಿನ ಹೆಚ್ಚುತ್ತಲೇ ಹೋಯಿತು. ಆದರೆ, ಈ ಹುಡುಗ ಎಲ್ಲರಲ್ಲೂ ಒಂದಲ್ಲ ಒಂದು ಐಬು ಹುಡುಕಿ ಅವರನ್ನು ತಿರಸ್ಕರಿಸುತ್ತಿದ್ದ.

ಹೀಗೆಯೇ ಇಪ್ಪತ್ತು ವರ್ಷಗಳು ಕಳೆದುಹೋದವು. ಅದೊಂದು ದಿನ, ಇವನ ಕಣ್ಣಿಗೆ ಒಬ್ಬಳು ಸುಂದರಿ ಕಾಣಿಸಿದಳು. ಅವಳ ಕೌಟುಂಬಿಕ ಹಿನ್ನೆಲೆ, ವಿದ್ಯಾಭ್ಯಾಸ ಮುಂತಾದ ವಿವರ ತಿಳಿದುಕೊಂಡ ಇವನು ಅದೊಂದು ಬೆಳಗ್ಗೆ ಅವಳ ಮುಂದೆ ನಿಂತು ಹೇಳಿದ: ‘ನನ್ನ ರೂಪು, ವಿದ್ಯೆ, ಅಂತಸ್ತಿಗೆ ನೀನು ಸರಿಸಾಟಿ ಅನ್ನಿಸುವಂಥ ಹುಡುಗಿ. ನಿನ್ನನ್ನು ಮದುವೆಯಾಗೋಣ ಅಂತಿದೀನಿ, ಒಪ್ಪಿಗೇನಾ…?’

ಆ ಹುಡುಗಿ ತಕ್ಷಣವೇ ಅಡ್ಡಡ್ಡ ಕತ್ತು ಒಗೆದು ನಿರ್ಧಾರದ ಧ್ವನಿಯಲ್ಲಿ ಹೇಳಿದಳು. ಕ್ಷಮಿಸಿ ಸರ್. ನನಗೂ-ನಿಮಗೂ ವಯಸ್ಸಿನಲ್ಲಿ ಭಾರೀ ಅಂತರವಿದೆ. ನಿಮ್ಮನ್ನು ನಾನು ಮದುವೆಯಾಗುವುದು ಸಾಧ್ಯವಿಲ್ಲದ ಮಾತು…

ಈ ಪ್ರಸಂಗದ ನೀತಿ ಇಷ್ಟೆ. ಸಂದರ್ಭ ಎಂಬುದು ಯಾವತ್ತೂ ಹೀಗೆ ಬಂದು ಹಾಗೆ ಹೋಗಿಬಿಡುತ್ತದೆ. ಅದು ಒದಗಿಬಂತು ಎಂದು ತಿಳಿದ ತಕ್ಷಣ ಅದರ ಉಪಯೋಗ ಪಡೆಯುವುದು ಜಾಣತನದ ಲಕ್ಷಣ. ಈ ಮಾತನ್ನು ಇನ್ನಷ್ಟು ಸರಳವಾಗಿ ಹೇಳುವುದಾದರೆ ಅವರಿಂದ ಬರಲಿ ಎಂದು ಯಾವತ್ತೂ ಕಾಯುತ್ತಾ ಕೂರಬಾರದು. ಅವಕಾಶ ಬರುವಂಥ ಪರಿಸ್ಥಿತಿಯನ್ನು ನಾವೇ ಸೃಷ್ಟಿಸಿಕೊಳ್ಳಬೇಕು.

…………….
 
ಮತ್ತಷ್ಟು ಜಗ್ಗಿದ ಆ ಒಂದು ವಾಕ್ಯ

ಕೆಲ ವಾರಗಳ ಹಿಂದೆ ‘ಕೈ ಜಗ್ಗಿ ಕಾಡಿದ ಒಂದು ವಾಕ್ಯ’ದ ಕುರಿತು ಬರೆದಿದ್ದೆ. ಅದಕ್ಕೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದವು. ಎಲ್ಲರೂ, ‘ಉಸ್ಸಪ್ಪಾ… ಈ ಒಂದು ಪ್ಯಾರಾದ ಒಂದು ವಾಕ್ಯವನ್ನೂ ತಿರುಗಾ ಮುರುಗಾ ಅವೆಷ್ಟು ಬಾರಿ ಓದಿದರೂ ಅರ್ಥವಾಗುತ್ತಿಲ್ಲ. ಇದನ್ನು ಕೆತ್ತಿದ ವಿಮರ್ಶಕ ಮಹಾಶಯರಿಗೆ ದೊಡ್ಡ ನಮಸ್ಕಾರ’ ಎಂಬ ಧಾಟಿಯಲ್ಲೇ ಪ್ರತಿಕ್ರಿಯಿಸಿದ್ದರು. ಚಿತ್ರ ಕಲಾವಿದರಾದ ಚಿಂತಾಮಣಿ ಜಿ. ಜಿ. ಅವರು ಆ ವಾಕ್ಯವನ್ನು ತಾವು ಅರ್ಥ ಮಾಡಿಕೊಂಡಿರುವ ಬಗೆಯಲ್ಲಿ ಮರು ರಚನೆ ಮಾಡಿ ಕಳುಹಿಸಿಕೊಟ್ಟಿದ್ದಾರೆ. ಅವರ ಪೂರ್ವಭಾವಿ ಟಿಪ್ಪಣಿಯನ್ನೂ ವಾಕ್ಯ ರಚನೆಯನ್ನೂ ನಿಮ್ಮ ಮುಂದಿರಿಸುತ್ತಿದ್ದೇನೆ. ಇದನ್ನು ಓದಿದ ನಂತರ ನಿಮ್ಮಲ್ಲೊಂದು ಸ್ಪಷ್ಟ ಚಿತ್ರಣ ಮೂಡಿತೋ ಅಥವಾ ಮಾಡರ್ನ್ ಆರ್ಟ್ ನೋಡಿದ ಹಾಗಾಯಿತೋ ನೀವೇ ತಿಳಿಸಿ.

ಅವರು ಬರೆಯುತ್ತಾರೆ- ನನ್ನ ಗಮನಕ್ಕೆ ಬಂದ ಪ್ರಕಾರ, ಕಲಾ ಬರಹಗಾರ/ವಿಮರ್ಶಕರ ಲೇಖನದಲ್ಲಿ ಇಂತಹ ವಾಕ್ಯಗಳನ್ನು ಹಲವಾರು ನೋಡಿದ್ದೇನೆ. ಇದು ನಮ್ಮ ಕಲಾ ಬರಹಗಾರರ ಕ್ರಿಯಾತ್ಮಕತೆ. ಹಲವಾರು ಕಲಾ ಕಮ್ಮಟಗಳಲ್ಲಿ ಇಂತಹ ಸನ್ನಿವೇಶಗಳನ್ನು ಅನುಭವಿಸಿದ್ದೇನೆ. ಆಂಗ್ಲ ಭಾಷೆಯನ್ನು ಕೆಲವೊಂದು ಸಲ ಕನ್ನಡಕ್ಕೆ ಅನುವಾದ ಮಾಡಿದಾಗ ಇಂತಹ ಸನ್ನಿವೇಶಗಳನ್ನು ಸೃಷ್ಟಿಸುತ್ತಾರೆ. ಬುದ್ಧಿವಂತ ಲೇಖಕರು ತಮ್ಮ ಪಾಂಡಿತ್ಯ ಪ್ರದರ್ಶನ ಮಾಡುವ ರೀತಿ ಇದು. ಕಲೆಯ ವೃತ್ತಿಯಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ. ನನ್ನ ಪ್ರಕಾರ ಇದರ ಅರ್ಥ ಈ ರೀತಿ ಇರಬಹುದು-

‘ವಸಾಹತುಶಾಹಿಗಳು ಬಂದು ಹೋದರು. ಶೀತಲ ಸಮರವಾಯಿತು. (ಅಂದರೆ ನಿಜವಾದ ಯುದ್ಧವಲ್ಲ) ಸಮಕಾಲೀನ ದಿನಗಳಿವು. ಜಾಗತೀಕರಣಕ್ಕೆ ಸಿಲುಕಿದ್ದೇವೆ. ನಮ್ಮ ದೇಶದ ಸ್ಥಿತಿ ಪಾಶ್ಚಾತ್ಯ ಚಿಂತಕರಿಗೆ ಸಹಜವಾಗಿ ಆತಂತಕಕ್ಕೆ ಗುರಿ ಮಾಡಿದೆ. ವಸಾಹತುಶಾಹಿಗಳ ಕಾಲದಲ್ಲಿ ಆದ ಸಂಗತಿಗಳನ್ನು ಮರೆತ್ತಿದ್ದೆವೆಯೇ ಎಂದು ಅನಿಸುತ್ತದೆ. ನಮ್ಮ ಸಮಾಜ ಆರೋಗ್ಯಕರವಾಗಿರುವಂಥದ್ದು. ಆದರೂ ನಡೆಯುತ್ತಿರುವ ಸಂಗತಿಗಳು ವಿಘಟಿತ ಆಕ್ರೋಶಗಳ ಒಟ್ಟಂದದ ಫಲವಾಗಿ ಕಾಣುತ್ತಿಲ್ಲ. ಸಮೂಹದ ಪ್ರಜ್ಞೆಯಾಗಿ ಕಾಣುತ್ತಿದೆ.
ಜಾಗತೀಕರಣದ ಗುಣಾವಗುಣವಾಗಿಯೂ ಪಾಶ್ಚಿಮಾತ್ಯರು ಈ  ಚಿಂತನೆಯ ಮೂಲದ್ರವ್ಯವನ್ನೇ ಆಶ್ಚರ್ಯವಾಗಿ ನೋಡುತ್ತಾರೆ. ಪಾಶ್ಚಿಮಾತ್ಯರ ಗಾಳಿ ಈ ರೀತಿ ಕಾಣುತ್ತಿದೆ ಎಂದು ನಂಬುತ್ತಾರೆ. ತನ್ನಿಂದ ತಾನೇ ಅರಿಯುವ ಶಕ್ತಿಯನ್ನು ಕಳೆದುಕೊಂಡಿರುವ ಭಾವನೆಯಿದೆ. ಈ ಸಂದರ್ಭವನ್ನು ಅವಲೋಕಿಸಿ ಪ್ರಜ್ಞಾವಂತ ಸಮಾಜದ ಕುತೂಹಲತೆಯ ಕ್ಷಣವನ್ನು, ಸ್ವಂತಿಕೆಯನ್ನು ಪ್ರಶ್ನಿಸುವಂತಿದೆ. ಅಂದರೆ ಸಮಾಧಾನದ ಬದುಕು, ಸ್ವಂತಿಕೆಯ, ಕ್ರಿಯಾತ್ಮಕತೆಯ ಬದುಕನ್ನು ಕಳೆದುಕೊಂಡ ಅನಿರ್ವಾಯತೆಯ ಭೀತಿ ಈ ವಾಕ್ಯದಲ್ಲಿ ಅಡಗಿದೆ.
 
…………….

ನಾನು ಸತ್ತಾಗಲೇ ನಿನಗೆ ಸಂತೋಷ!

ಒಬ್ಬ ರಾಜನಿದ್ದ. ನಾನುಂಟು ಮೂರು ಲೋಕವುಂಟು ಎಂಬುದು ಅವನ ವಾದವಾಗಿತ್ತು. ಸದಾ ತನ್ನ ಮಾತೇ ನಡೆಯಬೇಕೆಂದು ಆತ ಆಸೆಪಡುತ್ತಿದ್ದ. ತನ್ನ ಮಾತನ್ನು, ಅಭಿಪ್ರಾಯವನ್ನು ಒಪ್ಪದವರನ್ನು ನಿಂದಿಸುತ್ತಿದ್ದ, ಶಿಕ್ಷಿಸುತ್ತಿದ್ದ.

ಇಂಥ ಹಿನ್ನೆಲೆಯ ರಾಜ ಅದೊಂದು ಬಾರಿ ಬೇಟೆಗೆ ಹೊರಟ. ಒಂದೆರಡು ಚಿರತೆಗಳು ಕಾಣಿಸಿದವು. ಅವುಗಳನ್ನು ಬೇಟೆಯಾಡಿದ. ಹಿಂತಿರುಗುವ ಸಂದರ್ಭದಲ್ಲಿ ದಾರಿತಪ್ಪಿ ಪರಿವಾರದಿಂದ ಬೇರೆಯಾದ. ಸಿಕ್ಕಿದ್ದೇ ದಾರಿ ಎಂದುಕೊಂಡು ಈತ ಬರುತ್ತಿದ್ದಾಗ ಅಲ್ಲಿ ಕಣ್ಮುಚ್ಚಿ ತಪಸ್ಸಿಗೆ ಕುಳಿತಿದ್ದ ಒಬ್ಬ ಋಷಿ ಕಾಣಿಸಿದ. ಈ ರಾಜ ತಕ್ಷಣವೇ ಅವನ ಬಳಿ ಹೋಗಿ ಕೇಳಿದ: ನಾನು ಒಂದು ದೇಶದ ಚಕ್ರವರ್ತಿ. ನನ್ನ ಬಳಿ ಅಪಾರ ಸೈನ್ಯವಿದೆ. ಬೆಲೆ ಕಟ್ಟಲು ಆಗದಷ್ಟು ವಜ್ರ-ವೈಢೂರ್ಯಗಳಿವೆ. ನನ್ನ ಅಂತಃಪುರದ ತುಂಬಾ ಪ್ರಾಯದ ಸುಂದರಿಯರಿದ್ದಾರೆ. ನರ್ತಕಿಯರಿದ್ದಾರೆ. ಎಂಟು ಮಂದಿ ಹೆಂಡತಿಯರಿದ್ದಾರೆ. ಅಷ್ಟೆಲ್ಲ ಇದ್ದರೂ ನಾನು ಸಂತೋಷವಾಗಿಲ್ಲ. ಹೇಳು ನನಗೆ ಯಾವಾಗ ಸಂತೋಷ ಸಿಗುತ್ತದೆ?
ತನ್ನ ತಪಸ್ಸಿಗೆ ಭಂಗವಾಗಿದ್ದರಿಂದ ಋಷಿಗೆ ತುಂಬ ಬೇಸರವಾಯಿತು. ಆತ ಸಿಡಿಮಿಡಿಯಿಂದ ಕಣ್ತೆರೆದು ಎದುರಿಗಿದ್ದ ರಾಜನನ್ನು ನೋಡಿದ. ರಾಜ ಮತ್ತೆ ಅದೇ ಪ್ರಶ್ನೆಯನ್ನು ರಿಪೀಟ್ ಮಾಡಿದ. ಆಗ ಋಷಿ- ‘ನಾನು ಸತ್ತಾಗಲೇ ನಿನಗೆ ಸಂತೋಷ ಸಿಗುವುದು’ ಎಂದು ಹೇಳಿ ಮತ್ತೆ ಕಣ್ಮುಚ್ಚಿಕೊಂಡು ಧ್ಯಾನಕ್ಕೆ ಕೂತುಬಿಟ್ಟ.

ಈ ಬಗೆಯ ಉತ್ತರ ಕೊಡುವ ಮೂಲಕ ಋಷಿ ತನ್ನನ್ನು ಅವಮಾನಿಸುತ್ತಿದ್ದಾನೆ ಎಂಬ ಭಾವ ರಾಜನಿಗೆ ಬಂತು. ಸಿಟ್ಟಿನಿಂದ ಆತ ನಿಂತಲ್ಲೇ ಕಂಪಿಸತೊಡಗಿದ. ತನ್ನನ್ನು ಅವಮಾನಿಸಿದ ಋಷಿಯನ್ನು ಕೊಂದುಬಿಡುವ ಉದ್ದೇಶದಿಂದ ಕತ್ತಿ ಹಿರಿದು ಮುಂದಾದ. ಆಗ ಛಕ್ಕನೆ ಕಣ್ತೆರೆದ ಋಷಿ- ಅಯ್ಯೋ ಮೂಢಾ, ‘ನಾನು’ ಎಂದರೆ ನಿನ್ನ ಎದುರಿಗಿರುವ ನಾನಲ್ಲ. ನಿನ್ನ ‘ಒಳಗಿರುವ’ ನಾನು! ನಾನು ಎಂಬ ಅಹಂಭಾವ ಅಳಿಯುತ್ತದೆ ನೋಡು, ಅವತ್ತೇ ಸಂತೋಷವೆಂಬುದು ನಿನ್ನ ಕೈಹಿಡಿಯುತ್ತದೆ ಎಂದು ವಿವರಿಸಿದ.

‘ನಾನು’ ಎಂದು ಮೆರೆಯುವ ಎಲ್ಲರಿಗೂ ಈ ಪ್ರಸಂಗವೊಂದು ಪಾಠ ಅಲ್ಲವೇ?

……………

ಒಂದರ ಬಗ್ಗೆ ಇನ್ನೊಂದಿಷ್ಟು…

ಕಳೆದ ವಾರ ‘ಪವರ್ ಆಫ್ ಓನ್್’ (ಒಂದರ ಮಹತ್ವ) ಬಗ್ಗೆ ಬರೆದಿದ್ದನ್ನು ಓದಿರಬಹುದು. ‘ನಾನೊಬ್ಬನೇ ಏನು ತಾನೇ ಮಾಡಲು ಸಾಧ್ಯ?’ ಎಂಬ ಬರಹಕ್ಕೆ ಪತ್ರಿಕೆಯ ಓದುಗರು ಹಾಗೂ ಸ್ನೇಹಿತರಾದ ಎಚ್. ಆನಂದರಾಮ ಶಾಸ್ತ್ರಿ ಅವರು ತಮ್ಮದನ್ನೂ ಸೇರಿಸಿ ಪ್ರತಿಕ್ರಿಯಿಸಿದ್ದಾರೆ.

‘ಒಂದರ ಮಹತ್ವ’ಕ್ಕೊಂದಷ್ಟು ಸೇರ್ಪಡೆ:

ಒಂದು ಮೊಬೈಲ್ ಫೋನು ಮೂವರು ಮಂತ್ರಿಗಳ ರಾಜೀನಾಮೆಗೆ ಕಾರಣವಾಗಬಹುದು.

ಒಂದು ಕುರ್ಚಿಯು ಮಾಜಿ ಮುಖ್ಯಮಂತ್ರಿಯ ತಳಮಳಕ್ಕೆ ಹಾಗೂ ಕೋಟ್ಯಂತರ ಪ್ರಜೆಗಳ ರೇಜಿಗೆಗೆ ಕಾರಣವಾಗಬಲ್ಲದು.

ಒಂದು ನಗೆಯು ಸಾವಿರಾರು ಕಾರ್ಟೂನ್್ಗಳಿಗೆ ಸ್ಫೂರ್ತಿಯಾಗಬಲ್ಲದು.

ಒಂದು ಕಾರ್ಟೂನು, ಪ್ರೊಫೆಸರೋರ್ವರನ್ನು ಬಂಧನಕ್ಕೀಡು ಮಾಡಬಹುದು.

ಒಂದು ವಾಕ್ಯವು ಮುಖ್ಯಮಂತ್ರಿಯ ವಿದೇಶ ಪ್ರವಾಸವನ್ನು ರದ್ದುಪಡಿಸಬಹುದು.

ಒಂದು ಸುಳ್ಳು, ದಂತ (ವೈದ್ಯೆ) ಕಥೆಯನ್ನು ಹುಟ್ಟು ಹಾಕಬಹುದು.

ಒಂದು ಸಂದರ್ಶನ, ‘ಭೀಮಾ ತೀರದ…’ ಸಂಬಂಧವಾಗಿ, ತೀರದ ವಿವಾದ ಸೃಷ್ಟಿಸಬಹುದು.

ಒಂದು ಸೆಂಚುರಿ ‘ಭಾವಿ ಭಾರತರತ್ನ (?)’ವನ್ನು ಇನ್ನಿಲ್ಲದಂತೆ ಕಾಡಬಹುದು.

ಒಂದು ಕ್ರಿಕೆಟ್ ಪಂದ್ಯ ಕೋಟಿಗಟ್ಟಲೆ ಜನರ ಇಡೀ ದಿನವನ್ನು ಕಸಿದುಕೊಳ್ಳಬಹುದು.

ಲಾಸ್ಟ್, ಬಟ್ ನಾಟ್ ಲೀಸ್ಟ್, ಒಂದು ಅಕ್ಷರ (ಅಥವಾ ಒತ್ತಕ್ಷರ), ಪತ್ರಿಕೆಯೊಂದರ ‘ತಪ್ಪೊಪ್ಪಿಗೆ’ (‘ತಪ್ಪಾಯ್ತು ತಿದ್ಕೋತೀವಿ’)ಗೆ ಕಾರಣವಾಗಬಹುದು.
ಇತಿ ‘ದಶಮುಖ’.

……………
ವಕ್ರತುಂಡೋಕ್ತಿ

ಕೆಲವರು ಎಲ್ಲಿಗೆ ಹೋದರೂ ಆನಂದವನ್ನುಂಟು ಮಾಡುತ್ತಾರೆ. ಇನ್ನು ಕೆಲವರು ಹೋದರೆ ಸಾಕು, ಆನಂದ!

……………

ಬದುಕಲ್ಲಿ ಕಷ್ಟವೆನಿಸುವ ಎರಡು ಸಂಗತಿಗಳು

1. ನಿಮ್ಮ ಐಡಿಯಾವನ್ನು ಯಾರದ್ದೋ ತಲೆಯಲ್ಲಿ ಬಿತ್ತುವುದು.

2. ಯಾರದ್ದೋ ಹಣವನ್ನು ನಿಮ್ಮ ಜೇಬಿಗೆ ನಾಟಿಸಿಕೊಳ್ಳುವುದು.

- ಮೊದಲನೆಯ ಅಂಶವನ್ನು ಸಾಧಿಸುವಲ್ಲಿ ಯಶಸ್ವಿಯಾದವನಿಗೆ ನಾವು ಶಿಕ್ಷಕ ಎಂದು ಕರೆಯುತ್ತೇವೆ.

-ಎರಡನೆಯದರಲ್ಲಿ ಯಶಸ್ವಿಯಾಗುವವನಿಗೆ ನಾವು ಬಾಸ್ ಎನ್ನುತ್ತೇವೆ.

- ಇವೆರಡರಲ್ಲೂ ಯಶಸ್ಸು ಹೊಂದುವವಳನ್ನು ಹೆಂಡತಿ ಎಂದು ಕರೆಯುತ್ತೇವೆ.

- ಇವೆರಡರಲ್ಲೂ ಸೋಲುವ ವ್ಯಕ್ತಿಯನ್ನು ನಾವು ಗಂಡ ಎನ್ನುತ್ತೇವೆ.

6 Comments

  1. Frist and lost article …………. thumba chennagide………Arthapurna Sir.

  2. ಹ್ಹ..ಹ್… ಚೆನ್ನಾಗಿದೆ ಸರ್. ನೀವು ನಿಜವಾಗ್ಲೂ ಗ್ರೇಟ್ ಸರ್… ಪ್ರತಿದಿನವೂ ಬರೀತೀರಾ… ಪ್ರತಿ ವಾರವೂ ಬರೀತೀರಾ…. ಇಂತಹ ಇಂಟರೆಸ್ಟಿಂಗ್ ವಿಷಯಗಳನ್ನು ಎಲ್ಲಿಂದ ಹೆಕ್ಕಿ ತರುತ್ತೀರಿ…? ನಿಮ್ಮ ಸರಕು ಮುಗಿಯುವುದಿಲ್ಲವೇ?

    -vishwanath Gudsi
    -9036822415

  3. konegu a ondu vakya ennu thaleyolage hatte ella…

    NAANU, Nanna hendthi, nanna makklu, nanna school, nanna pottelu annuvavarige hesru helade bhana bitri nodi.oduvavarige understand aagutte bidi a NANU yaru antha…sikkirodu matra rushi alla simha….lol

  4. hahahha lol sir nanna first comments na nimma mangalore friends kaili odisi ondsala.kelavu unparlimentary word serkondi de adralli:)

  5. sir nimma bravanige, nanage spurti.badukinalli na nondag nimma baravnige galanne oduttene,matte presh agtini

  6. nanu nimanna guru anta accept madiddene sir

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.