ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಕುರ್ಚಿಯಿಂದ ಇಳಿಯಲಾರೆ ಎಂದು ಡಿವಿಸ್ ಹೇಳಿದ್ದೇಕೆ?

‘ಈ ಸದಾನಂದಗೌಡರನ್ನು ಮುಖ್ಯಮಂತ್ರಿ ಮಾಡೋಣ. ಬಹಳ ನಂಬಿಕಸ್ಥ. ನಾನು ಹೇಳಿದಂತೆ ಕೇಳುತ್ತಾರೆ. ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿ ಎಂದಾಗ ಕೆಳಗಿಳಿಯುತ್ತಾರೆ. ಅವರನ್ನು ಮುಂದಿಟ್ಟುಕೊಂಡು ನಾನೇ ರಾಜ್ಯವಾಳಬಹುದು.’

ಹೀಗಂತ ಬಿ.ಎಸ್. ಯಡಿಯೂರಪ್ಪನವರು ಯೋಚಿಸಿ ಸದಾನಂದಗೌಡರನ್ನು ಮುಖ್ಯಮಂತ್ರಿ ಕುರ್ಚಿಯ ಮೇಲೆ ಕುಳ್ಳಿರಿಸಿದರು ತಾನೆ? ಆದರೂ ಗೌಡರು ಯಡಿಯೂರಪ್ಪನವರಿಗೆ ಕೈಯೆತ್ತಿದ್ದೇಕೆ? ಮೋಸ ಮಾಡಿದ್ದೇಕೆ?
ಅದಕ್ಕೆ ಕಾರಣ ಯಡಿಯೂರಪ್ಪನವರು ಈಗ ನಾನು ಹೇಳಲಿರುವ ಕತೆ ಕೇಳದಿರುವುದು. ಕೇಳಿದ್ದರೆ ಖಂಡಿತವಾಗಿಯೂ ಹಾಗೆ ಮಾಡುತ್ತಿರಲಿಲ್ಲ.

ಬಡ ಯುವಕನೊಬ್ಬ ಚೆನ್ನಾಗಿ ಓದಿ, ಸಾಕಷ್ಟು ಪರಿಶ್ರಮದಿಂದ ಅಮೆರಿಕಕ್ಕೆ ಹೋದ. ಅಲ್ಲಿ ಕೈ ತುಂಬಾ ಸಂಪಾದಿಸಿದ. ಆತ ಜೀವನದಲ್ಲಿ ಊಹಿಸದ್ದಕ್ಕಿಂತ ಹೆಚ್ಚು ಹಣ ಬಂತು. ಹತ್ತು ವರ್ಷವಾದ ಮೇಲೆ ಸ್ವದೇಶಕ್ಕೆ ಬಂದವನು ಸುಂದರ ಯುವತಿಯನ್ನು ಹುಡುಕಿ ಮದುವೆಯಾದ.

ಕೆಲಸದ ಒತ್ತಡ ಅದೇನಿತ್ತೋ? ಮದುವೆಯಾದ ಒಂದು ವಾರಕ್ಕೆ ಪುನಃ ಅಮೆರಿಕಕ್ಕೆ ಹೋಗಬೇಕಾಗಿ ಬಂತು. ಹೆಂಡತಿಗೆ ವಿಸಾ ಇಲ್ಲದ್ದರಿಂದ ಅವನ ಜತೆ ಅಮೆರಿಕಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಅಲ್ಲದೇ ತಕ್ಷಣ ಹೆಂಡತಿಯನ್ನು ಅಲ್ಲಿಗೆ ಕರೆಸಿಕೊಳ್ಳಲು ಆಗಲಿಲ್ಲ.

ಈ ಮಧ್ಯೆ ತನ್ನ ಹೆಂಡತಿಯ ಶೀಲ, ನಡತೆಯ ಬಗ್ಗೆ ಅವರಿಗೆ ಗಾಬರಿ ಹುಟ್ಟಿಸುವ ಸಂಗತಿಗಳು ಸ್ನೇಹಿತರಿಂದ ಗೊತ್ತಾದವು. ತಾನು ಮೋಸ ಹೋದೆ ಎಂದು ಭಾವಿಸಿ ಹೆಂಡತಿಯಿಂದ ವಿಚ್ಛೇದನ ಪಡೆಯಲು ನಿರ್ಧರಿಸಿ ಅರ್ಜಿ ಹಾಕಿದ. ಆತನಿಗೆ ಬೇಗನೆ ವಿಚ್ಛೇದನವೂ ದಕ್ಕಿತು. ಆತನ ಹೆಂಡತಿ ತನ್ನ ಹಣೆಬರಹ ಎಂದು ಹಳಿದುಕೊಂಡು ಸುಮ್ಮನಾದಳು.

ಇದಾಗಿ ಮೂರ್ನಾಲ್ಕು ತಿಂಗಳಾದ ತರುವಾಯ, ಆತನಿಗೆ ತಾನು ಮಾಡಿದ್ದು ತಪ್ಪು ಎಂಬುದು ಮನವರಿಕೆಯಾಯಿತು. ತಂದೆ-ತಾಯಿ, ಸಹೋದರಿಯರೆಲ್ಲ ಬಂದು ‘ನೀನು ತಪ್ಪು ಮಾಡಿದೆ. ನಿನ್ನ ಹೆಂಡತಿ ಬಹಳ ಒಳ್ಳೆಯವಳು. ನೀನು ಗಾಳಿ ಮಾತು ಕೇಳಿ ದುಡುಕಿನ ನಿರ್ಧಾರಕ್ಕೆ ಬಂದೆ. ಈಗಲೂ ಕಾಲ ಮಿಂಚಿಲ್ಲ. ಅವಳಲ್ಲಿ ಕ್ಷಮೆ ಕೋರಿ ಪುನಃ ವಿವಾಹವಾಗು’ ಎಂದು ಮನವಿ ಮಾಡಿಕೊಂಡರು. ಅದಕ್ಕೆ ಆತ ಒಪ್ಪಿದ.

ಆದರೆ ಇಲ್ಲೊಂದು ಸಣ್ಣ ಅಡಚಣೆ ಎದುರಾಯಿತು. ಅದೇನೆಂದರೆ ಅವರ ಜಾತಿಯ ಆಚರಣೆ, ಸಂಪ್ರದಾಯದ ಪ್ರಕಾರ ವಿಚ್ಛೇದಿತ ಹೆಂಡತಿಯನ್ನು ಪುನಃ ಮದುವೆಯಾಗುವಂತಿರಲಿಲ್ಲ. ಹೆಂಡತಿ ಮತ್ತೊಂದು ಮದುವೆಯಾಗಿ, ಕನಿಷ್ಠ ಒಂದು ವಾರ ಸಂಸಾರ ಮಾಡಿ ವಿಚ್ಛೇದನ ಪಡೆದ ಬಳಿಕ ಮೊದಲನೆಯವನನ್ನು ವರಿಸಬಹುದಿತ್ತು. ಅದಕ್ಕೆ ಹುಡುಗ-ಹುಡುಗಿ ಒಪ್ಪಿದರು. ಹುಡುಗಿಯನ್ನು ಯಾರ ಜತೆ ಮದುವೆ ಮಾಡುವುದು ಎಂಬ ಪ್ರಶ್ನೆ ಎದುರಾಯಿತು.

ಅದಕ್ಕೆ ‘ಅಮೆರಿಕ’ ಮಿದುಳಿಗೆ ಒಂದು ಯೋಚನೆ ಹೊಳೆಯಿತು. ತನ್ನ ಡ್ರೈವರ್್ನನ್ನು ಕರೆದು, ‘ನೋಡು, ನೀನು ತುಂಬಾ ವಿಶ್ವಾಸಿ ಎಂಬ ಕಾರಣದಿಂದ ನಿನಗೆ ಹೇಳುತ್ತಿದ್ದೇನೆ. ನೀನು ನನ್ನ ಹೆಂಡತಿಯನ್ನು ಮದುವೆಯಾಗಬೇಕು. ಒಂದು ವಾರ ಸಂಸಾರ ಮಾಡಿದ ಬಳಿಕ ಅವಳಿಗೆ ವಿಚ್ಛೇದನ ಕೊಡಬೇಕು. ಈ ಅವಧಿಯಲ್ಲಿ ಅವಳ ಜತೆ ಮಲಗಬಾರದು. ಒಂದೇ ರೂಮಿನಲ್ಲಿ ಇರಕೂಡದು. ಇದಕ್ಕೆ ಒಪ್ಪಿದರೆ ಕೈ ತುಂಬಾ ಹಣ ಕೊಡ್ತೇನೆ’ ಎಂದ. ಅದಕ್ಕೆ ಡ್ರೈವರ್ ಒಪ್ಪಿದ.

ಎಲ್ಲವೂ ಅಂದುಕೊಂಡಂತೆ ಆಯಿತು. ಮದುವೆಯಾಯಿತು. ಹೆಂಡತಿಯ ರೂಪ, ಗುಣ, ನಡತೆ, ಶೀಲ, ಹಾವಭಾವ ಎಲ್ಲವೂ ಡ್ರೈವರ್್ಗೆ ಹಿಡಿಸಿತು. ಅವಳ ವ್ಯಕ್ತಿತ್ವಕ್ಕೆ ಮೋಹಿತನಾದ. ಅವಳನ್ನು ಬಿಟ್ಟರೆ ಜೀವನವೇ ನಶ್ವರ ಎಂದೆನಿಸಿತು. ಏನೇ ಆಗಲಿ, ವಚನ ಭ್ರಷ್ಟನಾದರೂ ಪರವಾಗಿಲ್ಲ, ತನ್ನ ಮಾಲೀಕನಾದವನು ಏನು ಬೇಕಾದರೂ ತಿಳಿದುಕೊಳ್ಳಲಿ. ಜನ ಏನಾದರೂ ಅಂದುಕೊಳ್ಳಲಿ, ಅವಳಿಗೆ ವಿಚ್ಛೇದನ ಕೊಡಬಾರದು, ಅವಳ ಜತೆಯೇ ಸಂಸಾರ ಮುಂದುವರಿಸಬೇಕು ಎಂದು ನಿರ್ಧರಿಸಿಬಿಟ್ಟ.

ಆತ ಬಂದು ತನ್ನ ಹೆಂಡತಿಯನ್ನು ಬಿಟ್ಟು ಕೊಡುವಂತೆ ಡ್ರೈವರ್್ನನ್ನು ಕೇಳಿದರೆ, ಸಾಧ್ಯವೇ ಇಲ್ಲ ಎಂದುಬಿಟ್ಟ.
ಯಡಿಯೂರಪ್ಪನವರು ಈ ಪ್ರಸಂಗ ಕೇಳಿದ್ದರೆ ಕರ್ನಾಟಕದ ರಾಜಕೀಯ ಇತಿಹಾಸ ಬೇರೆಯಾಗಿರುತ್ತಿತ್ತು. ಏನಂತೀರಾ?

>>>>>

ಇತರರಿಗಿಂತ ನಾವೆಷ್ಟು ಭಿನ್ನ?

ಒಂದೊಂದು ಊರಿನಲ್ಲಿ ಒಂದೊಂದು ಸಂಪ್ರದಾಯ. ನಮಗೆ ಸರಿಕಂಡಿದ್ದು, ಬೇರೆಯವರಿಗೆ ಸರಿ ಕಾಣದೇ ಹೋಗಬಹುದು. ಸಾಮಾನ್ಯವಾಗಿ ನಮಗೆ ಪರಿಚಿತರಲ್ಲದವರನ್ನು ನಾವು ಭೇಟಿ ಮಾಡಿದಾಗ, ನಮ್ಮ ಹೆಸರನ್ನು ಹೇಳಿ, ಅವರ ಹೆಸರನ್ನು ಕೇಳಿ ಪರಸ್ಪರ ಪರಿಚಯಿಸಿಕೊಳ್ಳುತ್ತೇವೆ. ಐಸ್್ಲ್ಯಾಂಡ್ ಎಂಬ ಪುಟ್ಟ ದೇಶದಲ್ಲಿ ಭೇಟಿಯಾದ ಕೂಡಲೇ ಹೆಸರನ್ನು ಹೇಳುವ ಸಂಪ್ರದಾಯ ಇಲ್ಲ.

ಕಾರಣ ಇಷ್ಟೆ. ಆ ದೇಶದಲ್ಲಿನ ಎಲ್ಲ ಗಂಡಸರ ಹೆಸರು ಸನ್ (ಗ್ರಿಮ್್ಸನ್, ಜಾನ್್ಸನ್, ಡೆವಿಡ್್ಸನ್…)ದಿಂದ ಕೊನೆಗೊಳ್ಳುತ್ತದೆ. ಹೆಂಗಸರ ಹೆಸರು ಡಾಟಿರ್ (ಜೆಸಿಕಾಡಾಟಿರ್, ಲೂಸಿಡಾಟಿರ್, ಎಮಿಲಾಡಾಟಿರ್…) ದಿಂದ ಕೊನೆಗೊಳ್ಳುತ್ತದೆ. ಅಲ್ಲದೇ ಆ ದೇಶದ ಜನಸಂಖ್ಯೆಯಲ್ಲಿ ಸುಮಾರು ಮೂರು ಲಕ್ಷವಿರುವುದರಿಂದ, ಜನರ ಹೆಸರನ್ನು ಕೇಳುವ ಸಂಪ್ರದಾಯ ಅಷ್ಟಾಗಿ ಇಲ್ಲ. ಐಸ್್ಲ್ಯಾಂಡಿನ ಜನ ಭಾರತದಂಥ ದೇಶಕ್ಕೆ ಬಂದಾಗ, ಇಲ್ಲಿನ ಜನರ ಹೆಸರನ್ನು ಕೇಳಿಯೇ ಗಲಿಬಿಲಿಗೊಳ್ಳುತ್ತಾರೆ.

‘ಯಾಕೆ ಭಾರತದಲ್ಲಿ ಅಷ್ಟೊಂದು ಹೆಸರಿನ ಜನರಿದ್ದಾರೆ? ಸಾಲದು ಎಂಬಂತೆ ಒಬ್ಬನಿಗೇ ಎರಡು-ಮೂರು ಹೆಸರುಗಳು? ಅರ್ಥವೇ ಆಗುವುದಿಲ್ಲ’ ಎಂದು ಐಸ್್ಲ್ಯಾಂಡಿನ ನನ್ನ ಮಿತ್ರ ನನಗೆ ಸದಾ ಕೇಳುತ್ತಾನೆ. ‘ಈ ದೇಶದಲ್ಲಿ ಜನಸಂಖ್ಯೆ ಹೆಚ್ಚು. ಹೀಗಾಗಿ ಜನರ ಹೆಸರುಗಳೂ ಹೆಚ್ಚು’ ಎಂಬ ಸರಳ ಉತ್ತರ, ಸಮಜಾಯಿಷಿ ಕೊಟ್ಟರೂ, ಅವನಿಗೆ ಸಂಪೂರ್ಣ ಸಮಾಧಾನವಾಗುವುದಿಲ್ಲ. ಆಗಾಗ ಸಿಕ್ಕಾಗ ಈ ಪ್ರಶ್ನೆಯನ್ನು ಕೇಳದೇ ಹೋಗುವುದಿಲ್ಲ.

ಈ ಮಾತನ್ನು ಹೇಳುವಾಗ ಒಂದು ಪ್ರಸಂಗ ನೆನಪಾಗುತ್ತದೆ. ತುಸು ಪೋಲಿಯಾಗಿದೆ ಎಂದೆನಿಸಬಹುದು. ಆದರೆ ಅಶ್ಲೀಲವಾಗಿಲ್ಲದಿರುವುದರಿಂದ ನಿಮ್ಮೊಂದಿಗೆ ಹಂಚಿಕೊಳ್ಳಬಹುದೆನಿಸುತ್ತಿದೆ.

ಒಮ್ಮೆ ಗಂಡ-ಹೆಂಡತಿ ಬಾಹ್ಯಾಕಾಶ ಯಾನಕ್ಕೆ ಹೊರಟರು. ಹಾಗೇ ಹೊರಟಾಗ ಅವರು ಬೇರೊಂದು ಗ್ರಹದ ಮೇಲೆ ಪದಾರ್ಪಣೆ ಮಾಡಿದರು. ನೋಡ್ತಾರೆ, ಅಲ್ಲೂ ಸಹ ಮನುಷ್ಯರೇ ಇದ್ದರು, ಏನೇನೂ ವ್ಯತ್ಯಾಸವಿಲ್ಲ, ಥೇಟಾನುಥೇಟು ಮನುಷ್ಯರೇ. ಈ ಗಂಡ-ಹೆಂಡತಿಗೆ ಬಹಳ ಖುಷಿಯಾಯಿತು. ಭೂಮಿಯಿಂದ ಬಂದ ಈ ದಂಪತಿಯನ್ನು ಆ ಗ್ರಹದಲ್ಲಿರುವ ದಂಪತಿಗಳು ತಮ್ಮ ಮನೆಗೆ ಬರ ಮಾಡಿಕೊಂಡು, ಕಾಫಿ ಕೊಟ್ಟು ಅತಿಥಿ ಸತ್ಕಾರ ಮಾಡಿದರು. ಇಬ್ಬರೂ ದಂಪತಿಗಳ ಮಧ್ಯೆ ಬಹುಬೇಗ ಸಲುಗೆ ಮೂಡಿತು. ಆರಾಮವಾಗಿ ಹರಟೆ ಹೊಡೆಯಲಾರಂಭಿಸಿದರು. ನಮ್ಮ ಭೂಮಿಯಲ್ಲಿ ಹಾಗಿದೆ, ಹೀಗಿದೆ ಎಂದು ಇವರು ಬಾಯ್ತುಂಬಾ ಬಣ್ಣಿಸಿದರೆ, ನಮ್ಮ ಗ್ರಹದಲ್ಲಿ ಅದೂ, ಇದೂ, ಹಾಗೆ-ಹೀಗೆ ಎಂದು ಅವರು ಸ್ವಾರಸ್ಯಕರವಾಗಿ ಬಣ್ಣಿಸುತ್ತಿದ್ದರು. ಸುಮಾರು ಎರಡು ಗಂಟೆಗಳ ಕಾಲ ಅವರ ಹರಟೆ ಸಾಗಿತು.

ಈ ಮಧ್ಯೆ ಎರಡೂ ದಂಪತಿಗಳಿಗೆ ಒಂದು ಪ್ರಶ್ನೆ ಬಗ್ಗೆ ತೀವ್ರ ಜಿಜ್ಞಾಸೆ ಮೂಡಿತು. ಅದೇನೆಂದರೆ ಮಕ್ಕಳು ಹೇಗೆ ಹುಟ್ಟುತ್ತಾರೆಂಬ ಪ್ರಶ್ನೆ. ‘ನೀವು ಮಕ್ಕಳನ್ನು ಹೇಗೆ ಹುಟ್ಟಿಸುತ್ತೀರಿ?’ ಎಂದು ಭೂಮಿಯಿಂದ ಬಂದವರು ಕೇಳಿದರೆ ‘ನಿಮ್ಮ ಗ್ರಹದಲ್ಲಿ ಮಕ್ಕಳು ಹೇಗೆ ಜನ್ಮತಾಳುತ್ತಾರೆ?’ ಎಂದು ಅತಿಥೇಯ ಗ್ರಹವಾಸಿ ದಂಪತಿಗಳು ಕೇಳಿದರು. ಇಬ್ಬರಿಗೂ ಈ ಪ್ರಶ್ನೆಗೆ ಉತ್ತರ ಹುಡುಕುವ ತವಕ. ಆದರೆ ನೀವು ಹೇಳಿ, ನೀವು ಹೇಳಿ ಎಂದು ಪರಸ್ಪರರನ್ನು ಒತ್ತಾಯಿಸಲಾರಂಭಿಸಿದರು. ಕೊನೆಗೆ ಆ ಗ್ರಹದ ದಂಪತಿಗಳೇ ವಿವರಿಸುವುದು ಎಂದಾಯಿತು.
‘ಬಹಳ ಸುಲಭ.’ ಎಂದು ಹೇಳಿದ ಆ ದಂಪತಿಗಳು ಫ್ರಿಜ್್ನ ಬಾಗಿಲನ್ನು ತೆರೆದರು. ಭೂಮಿಯಿಂದ ತೆರಳಿದ ದಂಪತಿಗಳಿಗೆ ಆಶ್ಚರ್ಯ. ‘ನೀವೇನು ಮಾಡ್ತಾ ಇದ್ದೀರಾ? ನಮಗೆ ಅರ್ಥವಾಗುತ್ತಿಲ್ಲ. ಮಕ್ಕಳನ್ನು ಹುಟ್ಟಿಸುವುದಕ್ಕೂ, ಫ್ರಿಜ್್ಗೂ ಏನು ಸಂಬಂಧ?’ ಎಂದು ಉದ್ಗಾರ ತೆಗೆದರು.

ಅತಿಥೇಯ ದಂಪತಿಗಳು ವಿವರಿಸುವ ಮುನ್ನ, ಎರಡು ಬಾಟಲಿಗಳನ್ನು ತಂದರು. ಒಂದರಲ್ಲಿ ಹಸುರು ನೀರು, ಇನ್ನೊಂದರಲ್ಲಿ ಕೆಂಪು ನೀರಿತ್ತು. ಆ ಎರಡು ಬಾಟಲಿಗಳಲ್ಲಿದ್ದ ನೀರನ್ನು ಇನ್ನೊಂದು ದೊಡ್ಡ ಬಾಟಲಿಗೆ ಹಾಕಿ ಮಿಕ್ಸ್ ಮಾಡಿದರು.

ಇದನ್ನು ನೋಡಿ ಭೂಮಿಯಿಂದ ಹೋದ ದಂಪತಿಗಳು ಬಿದ್ದು ಬಿದ್ದು ನಗಲಾರಂಭಿಸಿದರು. ‘ಹಾಗ್ಯಾಕೆ ನಗ್ತೀರ? ನಮ್ಮ ಗ್ರಹದಲ್ಲಿ ಎಲ್ಲರೂ ಮಕ್ಕಳನ್ನು ಹೀಗೆಯೇ ಹುಟ್ಟಿಸುತ್ತಾರೆ. ‘ಎರಡೂ ದ್ರವಗಳನ್ನು ಒಂದೇ ಬಾಟಲಿಗೆ ಮಿಕ್ಸ್ ಮಾಡಿದ ನಂತರ ಅದನ್ನು ಫ್ರಿಜ್್ನಲ್ಲಿ ಒಂಭತ್ತು ತಿಂಗಳು ಇಡುತ್ತೇವೆ. ನಂತರ ಮಗುವನ್ನು ಹೊರತೆಗೆಯುತ್ತೇವೆ’ ಎಂದರು ಆ ಗ್ರಹದ ದಂಪತಿಗಳು. ಭೂಮಿಯಿಂದ ಹೋದ ದಂಪತಿಗಳು ಇನ್ನೂ ನಗುತ್ತಲೇ ಇದ್ದರು.

‘ಮೈಗಾಡ್! ನೀವು ಮಕ್ಕಳನ್ನು ಈ ರೀತಿ ಹುಟ್ಟಿಸುತ್ತೀರಾ? ನಾವು ನಮ್ಮ ಭೂಮಿಯಲ್ಲಿ ಆ ರೀತಿಯಿಂದ ಕೋಲ್ಡ್ ಕಾಫಿ ಮಾಡ್ತೇವೆ’ ಎಂದು ಹೇಳಿ ಹೊಟ್ಟೆ ಹಿಡಿದುಕೊಂಡು ಮತ್ತೆ ನಗಲಾರಂಭಿಸಿದರು. ‘ಇದು ನಿಮಗೆ ವಿಚಿತ್ರವೆನಿಸಬಹುದು. ಆದರೆ ನಮ್ಮ ಗ್ರಹದಲ್ಲಿ ಸಾವಿರಾರು ವರ್ಷಗಳಿಂದ ಇದೇ ರೀತಿಯಲ್ಲಿ ಮಕ್ಕಳನ್ನು ಹುಟ್ಟಿಸುವ ಸಂಪ್ರದಾಯ ಜಾರಿಯಲ್ಲಿದೆ. ಅದಿರಲಿ, ನಿಮ್ಮ ಭೂಮಿಯ ಮೇಲೆ ಹೇಗೆ ಮಕ್ಕಳನ್ನು ಹುಟ್ಟಿಸುತ್ತೀರಿ?’ ಎಂದು ಅತಿಥೇಯ ಗ್ರಹದ ದಂಪತಿಗಳು ಕೇಳಿದರು.

ಭೂಮಿಯಿಂದ ತೆರಳಿದ ದಂಪತಿಗಳು ಪೀಕಲಾಟಕ್ಕೆ ಬಿದ್ದರು. ತಪ್ಪಿಸಿಕೊಳ್ಳುವಂತಿಲ್ಲ. ತಾವು ಹೇಗೆ ಮಕ್ಕಳನ್ನು ಹುಟ್ಟಿಸುತ್ತೇವೆ ಎಂಬುದನ್ನು ವಿವರಿಸಲೇಬೇಕಾಗಿತ್ತು. ಆದರೆ ಅದನ್ನು ಹೇಗೆ ವಿವರಿಸುವುದು? ತಡಬಡಾಯಿಸಿದರು. ಆದರೆ ಭೂಮಿಯಿಂದ ಆಗಮಿಸಿದವರು ಬೇರೆ ಯಾರೂ ಇಲ್ಲದ್ದರಿಂದ, ತುಸು ಮುಜುಗರವಾದರೂ, ಬಣ್ಣಿಸಲು ಆರಂಭಿಸುವ ಮುನ್ನ ವಿವಸ್ತ್ರರಾಗಿ ಪ್ರೀತಿಸಲಾರಂಭಿಸಿ ಕ್ರಿಯೆಗೆ ತೊಡಗಿದರು.

ಇದನ್ನು ಕಂಡ ಆ ಗ್ರಹದ ದಂಪತಿಗಳು ಚಾವಣಿ ಹಾರಿ ಹೋಗುವಂತೆ ಜೋರಾಗಿ ನಗಲಾರಂಭಿಸಿದರು. ‘ಯೂ ಇಡಿಯಟ್ಸ್! ಇದೂ ಒಂದು ಪದ್ಧತಿನಾ? ಥೂ….ಥೂ…. ಗಲೀಜು..ಗಲೀಜು.. ನೀವು ಮಕ್ಕಳನ್ನು ಈ ರೀತಿ ಹುಟ್ಟಿಸುತ್ತೀರಾ? ನಮ್ಮ ಗ್ರಹದಲ್ಲಿ ನೀವು ಮಾಡಿದಂತೆ ಮಾಡಿ ನಾವು ಹಾಟ್ ಕಾಫಿಯನ್ನು ತಯಾರಿಸುತ್ತೇವೆ’ ಎಂದು ಹೇಳಿದವರೇ ಪುನಃ ಹೊಟ್ಟೆ ಹಿಡಿದುಕೊಂಡು ನಗಲಾರಂಭಿಸಿದರು.
ಈ ಪ್ರಸಂಗ ಇಲ್ಲಿಗೆ ಮುಗಿಯಿತು.

ಆದರೂ ಇದಕ್ಕೊಂದು ಬೇರೆ ಅಂತ್ಯ ಇದೆ. ಅದೇನೆಂದರೆ, ಅವರವರ ಗ್ರಹಗಳಲ್ಲಿ ಕಾಫಿ ತಯಾರಿಸುವ ವಿಧಾನಗಳಿಗೆ ಮತ್ತೊಂದು ಗ್ರಹದಲ್ಲಿ ವಿರೋಧವಿದೆ. ಯಾಕೆಂದರೆ ಅವರೆಲ್ಲ ಆಗ ತಾನೇ ಕಾಫಿ ಸೇವಿಸಿದ್ದರು!

-ವಿಶ್ವೇಶ್ವರ ಭಟ್

4 Comments

  1. Dear Sir,

    I really like it, If it is real story than why d”t you send this msg to Shri Yadiyurappji. I think this is better idea.

  2. Bahala Sogasagide eradu prasangagalu.. Officena kelasada ottadada madye odide… iga ottada kadimeyadantenisi refresh ade.. Dhanyavadagalu…

  3. DVS has taken a good decission not to retun CM post yeddi. he already spoiled Karnataka’s name with corruption & other illigal activities. gr8 DVS keep it up.

  4. SIR…STORYGALU TUMBA TAMASHEYAGIDE….NEEV MODALE YEDIYURAPPANAVARIGE EE STORY HELABEKITTU

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.