ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.
ಮುಂದೆ ಓದಿ...ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.
ಮುಂದೆ ಓದಿ...ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.
ಮುಂದೆ ಓದಿ...ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ
ಮುಂದೆ ಓದಿ...ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.
ಮುಂದೆ ಓದಿ...ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.
ಮುಂದೆ ಓದಿ...ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!
ಮುಂದೆ ಓದಿ...ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.
ಮುಂದೆ ಓದಿ...
ಸಮಕಾಲೀನ ವಸ್ತುಸ್ಥಿತಿಯತ್ತ ಗಮನಹರಿಸಿದಾಗ ಶೀತಲ ಸಮರದ ದಿನಗಳನ್ನು ದಾಟಿ ಜಗತ್ತು ಜಾಗತೀಕರಣದ ಕಪಿಮುಷ್ಟಿಯ ಹೊಡೆತಕ್ಕೆ ಸಿಕ್ಕು ತತ್ತರಿಸುತ್ತಿರುವ ಸಂಗತಿ ಪಾಶ್ಚಾತ್ಯ ದೇಶಗಳ ಚಿಂತಕರನ್ನು ಸಹಜ ಆತಂಕಕ್ಕೆ ಗುರಿ ಮಾಡಿರುವ ಈ ಸನ್ನಿವೇಶ ನಮ್ಮ ಮುಂದೆ ಒದಗಿಬರುವ ಸಮಾಜದ ನೈಜ ಚಿತ್ರಣದ ದಿಕ್ಕು ದೆಸೆಗಳನ್ನು ವಸಾಹತುಶಾಹಿ ದಿನಗಳ ವಿಸ್ಮೃತಿಯಂತೆ ಗೋಚರಿಸಿದರೂ ಅದು ನಮ್ಮ ನಡುವೆ ಮನೆ ಮಾಡಿರುವ ಆರೋಗ್ಯಕರ ಮನಸ್ಸುಗಳ ಮಧ್ಯೆ ವಿಘಟಿತ ಆಕ್ರೋಶಗಳ ಒಟ್ಟಂದದ ಫಲವಾಗಿ ಕಾಣದೇ ಒಂದು ಸಮೂಹದ ಪ್ರಜ್ಞೆಯಾಗಿ ಕಾಣುತ್ತಿರುವುದು ಹಾಗೂ ಈ ಚಿಂತನೆಯ ಮೂಲದ್ರವ್ಯವನ್ನೇ ಪಶ್ಚಿಮದ ಚಿಂತಕರು ಜಾಗತೀಕರಣದ ಗುಣಾವಗುಣಗಳ ಸೋಜಿಗದ ಮರು ಅವತರಿಣಿಕೆಯ ವೈಭವ ಎಂದು ಬಣ್ಣಿಸುತ್ತಿರುವುದು ನಾವು ನೆಲೆ ನಿಂತ ಸಂದರ್ಭದ ಅತ್ಯಂತ ಕುತೂಹಲದ ಕ್ಷಣ ಮತ್ತು ನಾವು ಆಂದುಕೊಂಡಿರುವ ಪ್ರಜ್ಞಾವಂತ ಸಮಾಜದ ಜನರ ಸೋಪಜ್ಞತೆಗೆ ಬಗೆದ ಅನ್ಯಾಯ ಎಂದು ಭಾವಿಸಬಹುದು.
ನಿಮಗೆ ಏನಾದರೂ ಅರ್ಥವಾಯಿತಾ?
ಕ್ಷಮಿಸಿ. ಸ್ವಾಮಿ, ಇದನ್ನು ಬರೆದವನು ನಾನಲ್ಲ. ಇದು ನಮ್ಮ ಕನ್ನಡದ ಖ್ಯಾತ ವಿಮರ್ಶಕ ಮತ್ತು ಚಿಂತಕರೊಬ್ಬರು ಬರೆದ ಪುಸ್ತಕದಲ್ಲಿನ ಒಂದು ‘ಪುಟ್ಟ’ ವಾಕ್ಯ. ಈ ವಾಕ್ಯವನ್ನು ಪ್ರಯತ್ನ ಪಟ್ಟು ಕನಿಷ್ಠ ಹತ್ತು ಬಾರಿಯಾದರೂ ಓದಿರಬೇಕು, ಉಹುಂ… ಅರ್ಥವಾಗುತ್ತಿಲ್ಲ. ಅರ್ಥ ಆದಂತೆ ಆಗುತ್ತದೆ, ಆದರೆ ಆಗುವುದಿಲ್ಲ. ಹೀಗೆ ಅರ್ಥ ಮಾಡಿಕೊಂಡರೆ ಹೇಗೆ ಅಂತ ಅಂದುಕೊಳ್ಳುತ್ತಿದ್ದಂತೆ, ಹಾಗಿರಲಿಕ್ಕಿಲ್ಲ ಅಂತನಿಸುತ್ತದೆ. ಪದ ಪದವನ್ನು ಹೆಕ್ಕಿ ಹೆಕ್ಕಿ ಓದಿ, ನಿಧಾನವಾಗಿ ಗ್ರಹಿಸುತ್ತಾ ಓದುತ್ತಾ ಸಾಗಿದಂತೆ ಗೊಂದಲವಾಗಿ ಹಿಂದೆ ಓದಿದ್ದೆಲ್ಲಾ ಮರೆತುಹೋಗಿ, ಮುಂದೆ ಓದಲಾಗದೇ, ಪುನಃ ಹಿಂದಕ್ಕೆ ಹೊರಳಿ ಮೊದಲಿನಿಂದ ಓದಲಾರಂಭಿಸಿದರೆ ಮತ್ತೆ ಅದೇ ವಿಘ್ನ.
ಸರಿ, ಹಾಗಾದರೆ ಒಂದೇ ಉಸುರಿನಲ್ಲಿ ಗಟ್ಟಿಯಾಗಿ ಓದೋಣ, ನಂತರ ಅರ್ಥ ಮಾಡಿಕೊಳ್ಳಬಹುದು ಎಂದುಕೊಂಡು ಓದಿದರೆ, ಒಂದೇ ಉಸಿರಿಗೆ ಓದಲೂ ಆಗುವುದಿಲ್ಲ.
ಈ ದೀರ್ಘ ವಾಕ್ಯವನ್ನು ಬಿಡಿಬಿಡಿಯಾಗಿ ಒಡೆದು ಓದಿದರೆ ಹೇಗೆ? ಉತ್ತಮ ಐಡಿಯಾ! ಹಾಗೆ ಮಾಡಿ ಓದಿದ್ದೂ ಆಯ್ತು. ಹಿಂದಿನ ವಾಕ್ಯಕ್ಕೂ, ಮುಂದಿನ ವಾಕ್ಯಕ್ಕೂ ಸಂಬಂಧವೇ ಇಲ್ಲ.
ಏನು ಮಾಡೋದು, ನನ್ನ ಹೆಂಡತಿಯನ್ನು ಕರೆದು ಅವಳಿಗೆ ಓದಿ ಅದರ ಅರ್ಥ ಹೇಳು ಅಂದೆ. ಯಾಕಂದರೆ ಒಂದೊಂದು ಸಲ ಯಾರಿಂದಲೂ ಸಾಧ್ಯವಾಗದ್ದು , ಮತ್ತೊಬ್ಬರು ಬಂದು, ಅದಾ ಅದು ಹಾಗಲ್ಲ, ಹೀಗೆ….. ಎಂದು ಬಾಳೆಹಣ್ಣು ಸುಲಿದಿಟ್ಟವರಂತೆ ಸುಮ್ಮನೆ ನಡೆದುಬಿಡುತ್ತಾರೆ. ನನ್ನ ಹೆಂಡತಿ ಎರಡು ಬಾರಿ ಓದಿದಳು. ಅವಳಿಗೂ ತಲೆಬುಡ ಅರ್ಥವಾಗಲಿಲ್ಲ. ಬರೆಯೋದು ಅಲ್ಲದೇ ಓದುಗರ ಪ್ರಾಣ ಹಿಂಡೋದು ಅಂದ್ರೆ ಇದೇ ಎಂಬ ಸಂಪಾದಕೀಯ ಬೇರೆ ಬರೆದಳು.
ಬೇರೆ ದಾರಿಯೇ ಇಲ್ಲ, ಈ ವಾಕ್ಯವನ್ನು ನನ್ನ ಐಫೋನಿನಲ್ಲಿ ಫೋಟೊ ತೆಗೆದು, ಅಲ್ಲಿಂದಲೇ ನನ್ನ ಸ್ನೇಹಿತನೊಬ್ಬನಿಗೆ ಇಮೇಲ್ ಮಾಡಿದೆ. ಆತ ತಕ್ಷಣ ಪ್ರತಿಕ್ರಿಯಿಸಿದ - ‘ನನಗೆ ಜೋಕುಗಳೆಂದರೆ ಇಷ್ಟ. ಆದರೆ ಈ ರೀತಿ ನನ್ನನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಬೇಡ.’
ನನ್ನ ಕೋರಿಕೆ ಇಷ್ಟೇ - ನಿಮಗೆ ಈ ವಾಕ್ಯ ಅರ್ಥವಾದರೆ ತಿಳಿಸಿ.
ಆನಂತರ ಬರೆದವರ ಬಳಿ ಇವರೆಲ್ಲ ಬರೆದಿರುವುದು ಸರೀನಾ ಅಂತ ಕೇಳುತ್ತೇನೆ ಮತ್ತು ಸಾಧ್ಯವಾದರೆ ಅದರ ಅರ್ಥವನ್ನು ಅರ್ಥವಾಗುವ ಹಾಗೆ ಅರ್ಥ ಮಾಡಿಸಿ ಎಂದು ಕೋರುತ್ತೇನೆ.
…………………
ಕೊನೆ ಗಳಿಗೆಯಲ್ಲೂ ಬೇಕಿಲ್ಲ ಉದಾಸೀನ
ಮನೆಗಳ ನಿರ್ಮಾಣದಲ್ಲಿ ದೊಡ್ಡ ಹೆಸರು ಮಾಡಿದ್ದ ಕಂಟ್ರಾಕ್ಟರ್ ಒಬ್ಬರ ಬಳಿ ಮೇಸ್ತ್ರಿಯೊಬ್ಬ ಕೆಲಸ ಮಾಡುತ್ತಿದ್ದ. ಅವನು ಶ್ರದ್ಧಾವಂತ, ಪ್ರಾಮಾಣಿಕ ಮತ್ತು ಕಠಿಣ ಪರಿಶ್ರಮಿ. ಮೇಸ್ತ್ರಿ ಜೊತೆಗಿದ್ದಾನೆ ಎಂಬುದೇ ಕಂಟ್ರಾಕ್ಟರ್್ನ ದೊಡ್ಡ ಧೈರ್ಯವಾಗಿತ್ತು. ಮೇಸ್ತ್ರಿಯ ಪರಿಶ್ರಮದಿಂದ ತುಂಬ ಕಡಿಮೆ ಬಂಡವಾಳದಲ್ಲಿ ಅದ್ದೂರಿ ಮನೆಗಳನ್ನು ನಿರ್ಮಿಸುವುದು ಸಾಧ್ಯವಾಯಿತು. ಈ ಕಾರಣದಿಂದ ಕಂಟ್ರಾಕ್ಟರ್್ನ ಬಿಸಿನೆಸ್ ಜೊತೆಗೆ ಅವನ ಜನಪ್ರಿಯತೆಯೂ ಹೆಚ್ಚಿತು.
ಮೇಸ್ತ್ರಿ, ದಶಕಗಳ ಕಾಲ ಶ್ರದ್ಧೆಯಿಂದ ದುಡಿದ. ನಗರದ ಮೂಲೆ ಮೂಲೆಗಳಲ್ಲೂ ಯಾರ್ಯಾರಿಗೊ ಅಂದಚೆಂದದ ಮನೆ ಕಟ್ಟಿಕೊಟ್ಟ. ಈ ನಡುವೆ ಅವನಿಗೂ ವಯಸ್ಸಾಯಿತು. ಹೀಗಿರುವಾಗ ಒಂದು ದಿನ ಕಂಟ್ರಾಕ್ಟರ್್ನ ಬಳಿ ಹೋಗಿ ಹೇಳಿದ: ‘ಸ್ವಾಮಿ, ಇಷ್ಟು ದಿನ ನನಗೆ ನೌಕರಿ ಕೊಟ್ಟಿರಿ. ಪ್ರತಿ ತಿಂಗಳೂ ಒಳ್ಳೆಯ ಸಂಬಳ ಕೊಟ್ಟಿರಿ. ಕೇಳಿದಾಗೆಲ್ಲ ರಜೆ ಕೊಟ್ಟಿರಿ. ಈ ಕಾಳಜಿಗೆ ಧನ್ಯವಾದ. ಈಗ ನನಗೂ ವಯಸ್ಸಾಗ್ತಾ ಬಂತು. ಕೆಲಸ ಮಾಡಲು ಆಸಕ್ತಿಯೇನೋ ಇದೆ. ಆದರೆ ದೇಹ ಸಹಕರಿಸುತ್ತಿಲ್ಲ. ಹಾಗಾಗಿ ನಾನು ನಿವೃತ್ತಿ ಪಡೆಯಬೇಕು ಅಂತ ತೀರ್ಮಾನಿಸಿದ್ದೇನೆ. ದಯವಿಟ್ಟು ಅನುಮತಿ ಕೊಡಿ…’
ತನ್ನ ಕಂಪನಿಯ ಆಧಾರಸ್ತಂಭದಂತಿದ್ದ ಮೇಸ್ತ್ರಿ ನಿವೃತ್ತಿಯ ಮಾತಾಡುತ್ತಿರುವುದನ್ನು ಕೇಳಿ ಕಂಟ್ರಾಕ್ಟರ್್ಗೆ ಬೇಸರವಾಯಿತು. ‘ನಿಮ್ಮ ನಿರ್ಗಮನದಿಂದ ಅತ್ಯುತ್ತಮ ಕೆಲಸಗಾರನನ್ನು ನಾನು ಕಳೆದುಕೊಳ್ತಾ ಇದೀನಿ. ನಿಮ್ಮ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ. ನಿಮ್ಮನ್ನು ನಿವೃತ್ತಿ ಮಾಡಲಿಕ್ಕೆ ನನಗಂತೂ ಸ್ವಲ್ಪವೂ ಇಷ್ಟವಿಲ್ಲ. ಆದರೆ ನಿಮ್ಮ ವಯಸ್ಸನ್ನು ಗಮನಿಸಿ ನಾನೂ ಭಾರವಾದ ಮನಸ್ಸಿನಿಂದಲೇ ಒಪ್ಪಿಗೆ ಕೊಡ್ತಾ ಇದೀನಿ. ಅದಕ್ಕೂ ಮುಂಚೆ ಒಂದು ಕೋರಿಕೆ: ‘ನನಗೆ ನೀವು ಕಟ್ಟಕಡೆಯದಾಗಿ ಒಂದು ಮನೆ ಕಟ್ಟಿ ಕೊಡಿ. ನಂತರ ನಿಮ್ಮ ಬಯಕೆಯಂತೆ ನಿವೃತ್ತಿ ಪಡೆಯಿರಿ…’
ಎಷ್ಟಾದರೂ ಕಂಟ್ರಾಕ್ಟರ್ ಇಷ್ಟೂ ದಿನ ಬದುಕು ನೀಡಿದ್ದವನು. ಹಾಗಾಗಿ ಅವನ ಮಾತನ್ನು ತೆಗೆದುಹಾಕಲು ಮೇಸ್ತ್ರಿಗೆ ಸಾಧ್ಯವಾಗಲಿಲ್ಲ. ಅವನು ಮನಸ್ಸಿಲ್ಲದ ಮನಸ್ಸಿನಿಂದಲೇ ಈ ಕೆಲಸ ಒಪ್ಪಿಕೊಂಡ. ಸ್ವಲ್ಪ ಉದಾಸೀನದಿಂದಲೇ ನಿರ್ಮಾಣ ಕಾರ್ಯ ಆರಂಭಿಸಿದ. ಮೇಸ್ತ್ರಿಯ ಕೆಲಸದ ಬಗ್ಗೆ ತುಂಬಾ ನಂಬಿಕೆ ಇಟ್ಟುಕೊಂಡಿದ್ದ ಕಂಟ್ರಾಕ್ಟರ್ ಇತ್ತ ಕಡೆ ತಲೆ ಹಾಕಲೇ ಇಲ್ಲ. ಒಮ್ಮೆ ಕೆಲಸ ಒಪ್ಪಿಸಿದರೆ ಮಾಲೀಕರು ಮತ್ತೆ ಬರುವುದು ಅದು ಮುಗಿದ ನಂತರವೇ ಎಂಬುದು ಮೇಸ್ತ್ರಿಗೂ ಗೊತ್ತಿತ್ತು. ಹಾಗಾಗಿ ಕಟ್ಟಕಡೆಯ ಕೆಲಸದಲ್ಲಿ ಆತ ಮತ್ತಷ್ಟು ನಿರಾಸಕ್ತಿ ತೋರಿದ. ಅಂತೂ ಕಡೆಗೊಂದು ದಿನ ಮನೆ ನಿರ್ಮಾಣ ಕಾರ್ಯ ಮುಗಿಯಿತು. ಈವರೆಗಿನ ನನ್ನ ವೃತ್ತಿಜೀವನದಲ್ಲಿ ಕಳಪೆ ಗುಣಮಟ್ಟದಿಂದ ಕೂಡಿದ ಮನೆ ಎಂದರೆ ಇದೊಂದೇ. ಈ ಕುರಿತು ಕಂಟ್ರಾಕ್ಟರ್್ಗೆ ಯಾವುದೇ ಅನುಮಾನ ಬಾರದಿದ್ದರೆ ಸಾಕು ಎಂದು ತನಗೆ ತಾನೇ ಹೇಳಿಕೊಂಡ ಮೇಸ್ತ್ರಿ.
ಮನೆ ನಿರ್ಮಾಣದ ಕೆಲಸ ಮುಗಿದಿದೆ ಎಂಬುದು ಗೊತ್ತಾದ ತಕ್ಷಣ ಕಂಟ್ರಾಕ್ಟರ್ ಬಂದ. ಮನೆ ನಿರ್ಮಾಣಕ್ಕೆ ತಗುಲಿದ್ದ ಅಷ್ಟೂ ವೆಚ್ಚವನ್ನು ಮೇಸ್ತ್ರಿಗೆ ಪಾವತಿಸಿದ. ನಂತರ, ಆ ಮನೆಗೆ ಸರಳವಾಗಿ ಪೂಜಾವಿಧಿ ನೆರವೇರಿಸಿದ. ನಂತರ ಎಲ್ಲ ನೌಕರರ ಮುಂದೆ ಮೇಸ್ತ್ರಿಯ ಶ್ರದ್ಧೆ, ಅವನ ಪರಿಶ್ರಮವನ್ನು ಹೊಗಳಿದ. ನಂತರ ಆ ಮನೆಯ ಬೀಗದ ಕೈ ತೆಗೆದುಕೊಂಡವನೇ ಮೇಸ್ತ್ರಿಯ ಕೈಗಿಟ್ಟು ಹೇಳಿದ: ‘ಇಷ್ಟು ದಿನ ನೀವು ನೀಡಿದ ಪ್ರಾಮಾಣಿಕ ದುಡಿಮೆಗೆ ಕೃತಜ್ಞತೆ ಹೇಳುತ್ತಾ ಈ ಮನೆಯನ್ನು ನಿಮಗೆ ಕಾಣಿಕೆಯಾಗಿ ನೀಡುತ್ತಿದ್ದೇನೆ. ಇದು ನನ್ನ ಪುಟ್ಟ ಕಾಣಿಕೆ, ಸ್ವೀಕರಿಸಿ…’
ಈ ಮಾತು ಕೇಳಿ ಮೇಸ್ತ್ರಿ ದಂಗುಬಡಿದುಹೋದ. ಉಹುಂ, ಈ ಮನೆ ನನಗೆ ಬೇಡ ಎನ್ನುವ ಸ್ಥಿತಿಯಲ್ಲಿ ಅವನಿರಲಿಲ್ಲ ಅಥವಾ ಅದೇ ಮನೆಯನ್ನು ಸ್ವೀಕರಿಸಲೂ ಅವನು ಸಿದ್ಧನಿರಲಿಲ್ಲ. ಕಾರಣ ಆ ಮನೆಗೆ ಇರುವುದು ತುಂಬ ಕಡಿಮೆ ದಿನಗಳ ಆಯುಷ್ಯ ಎಂದು ಅವನಿಗೆ ಚೆನ್ನಾಗಿ ಗೊತ್ತಿತ್ತು. ಈ ವಿಷಯವನ್ನು ಬಹಿರಂಗವಾಗಿ ಹೇಳಿದರೆ ತನಗೇ ಮರ್ಯಾದೆ ಹೋಗುತ್ತದೆ ಎಂಬುದು ಖಚಿತವಾದಾಗ ಆತ ಎರಡನೇ ಮಾತಾಡದೇ ಕಂಟ್ರಾಕ್ಟರ್್ನ ಕೊಡುಗೆಯನ್ನು ಸ್ವೀಕರಿಸಿದ!
ಯಾವತ್ತೂ ಅಷ್ಟೇ: ಒಂದು ಕೆಲಸಕ್ಕೆ ಕೈ ಹಾಕುವಾಗ, ಅದನ್ನು ಎಷ್ಟು ಸಾಧ್ಯವೋ ಅಷ್ಟು ಚೆನ್ನಾಗಿ ಮಾಡಿ ಮುಗಿಸಬೇಕು. ಹಾಗೆ ಮಾಡದೇ ಹೋದಲ್ಲಿ ಈ ಪ್ರಸಂಗದಲ್ಲಿ ಮೇಸ್ತ್ರಿಗೆ ಒದಗಿದ ಗತಿಯೇ ನಮ್ಮದೂ ಆಗಬಹುದು…
……………
ದುರಾಸೆ ನಮ್ಮನ್ನು ಕಾಪಾಡುವುದಿಲ್ಲ
ಒಂದು ಊರಲ್ಲಿ ಒಬ್ಬ ಆಸೆಬುರುಕನಿದ್ದ. ಆತ ಶ್ರೀಮಂತನೂ ಆಗಿದ್ದ. ಕಂಡದ್ದೆಲ್ಲಾ ನನಗೇ ಬೇಕು ಎಂಬುದೇ ಅವನ ನಿತ್ಯದ ಮಾತಾಗಿತ್ತು. ದುರಾಸೆ ಸಲ್ಲದು ಎಂಬ ಜನರ ಮಾತುಗಳನ್ನು ಕಿವಿಗೇ ಹಾಕಿಕೊಳ್ಳಲಿಲ್ಲ.
ಈತ ಒಮ್ಮೆ ಆಕಸ್ಮಿಕವಾಗಿ ತನ್ನಲ್ಲಿದ್ದ 30 ಚಿನ್ನದ ನಾಣ್ಯಗಳನ್ನು ಕಳೆದುಕೊಂಡ. ಮನೆಯಿಂದ ಜಮೀನಿಗೆ ಹೋಗುವ ಹಾದಿಯಲ್ಲಿ ನಾಣ್ಯಗಳಿದ್ದ ಗಂಟು ಎಲ್ಲಿ ಬಿತ್ತೋ, ಅವನಿಗೆ ತಿಳಿಯಲಿಲ್ಲ. ಈತ ಪೆಚ್ಚು ಮೊರೆ ಹಾಕಿಕೊಂಡು ತನ್ನ ಗೆಳೆಯನಾಗಿದ್ದ ಬಡವನ ಮನೆಗೆ ಬಂದು ಗೋಳು ಹೇಳಿಕೊಂಡು, ಸಮಾಧಾನದ ಮಾತು ಕೇಳಿ ಹಿಂತಿರುಗಿದ.
ಸ್ವಲ್ಪ ಸಮಯದ ನಂತರ ಜಮೀನಿಗೆ ಹೋಗಿದ್ದ ಬಡವನ ಮಗಳು ಬಂದಳು. ದಾರಿಯಲ್ಲಿ ಅವಳಿಗೆ ಚಿನ್ನದ ನಾಣ್ಯಗಳಿದ್ದ ಗಂಟು ಸಿಕ್ಕಿತ್ತು. ತಕ್ಷಣವೇ ಶ್ರೀಮಂತನನ್ನು ಕರೆಸಿದ ಬಡವ, ‘ನಿಮ್ಮ ಹಣವಿದ್ದ ಗಂಟು ಸಿಕ್ಕಿದೆ. ತಗೊಂಡು ಹೋಗಿ’ ಎಂದ.
ಹಣದ ಗಂಟು ನೋಡಿದಾಕ್ಷಣ ಶ್ರೀಮಂತನ ದುರಾಸೆ ಜಾಗೃತವಾಯಿತು. ಆತ ಹಣ ಎಣಿಸಿ, ನಂತರ ಹೀಗೆಂದ: ‘ಈ ಗಂಟಿನೊಳಗೆ ನಲವತ್ತು ಬಂಗಾರದ ನಾಣ್ಯಗಳಿದ್ದವು. ಹತ್ತು ನಾಣ್ಯಗಳನ್ನು ನಿಮ್ಮ ಮಗಳು ಹಾರಿಸಿದ್ದಾಳೆ. ಅವನ್ನು ಕೊಟ್ಟರೆ ಸರಿ. ಇಲ್ಲದಿದ್ದರೆ ಕೋರ್ಟಿಗೆ ಹೋಗ್ತೇನೆ’
ಬಡವನಿಗೆ ಮಗಳ ಪ್ರಾಮಾಣಿಕತೆಯ ಮೇಲೆ ನಂಬಿಕೆಯಿತ್ತು. ಶ್ರೀಮಂತನ ದುರಾಸೆಯ ಮಾತಿಗೆ ಆತ ಹೆದರದೆ, ಕೋರ್ಟಿಗೆ ಹೋಗೋಣ ನಡೆಯಿರಿ ಎಂದ. ನ್ಯಾಯಾಲಯದಲ್ಲೂ ಶ್ರೀಮಂತ ತಾನು ಕಳೆದುಕೊಂಡಿದ್ದು ನಲವತ್ತು ಚಿನ್ನದ ನಾಣ್ಯಗಳನ್ನು ಎಂದೇ ವಾದಿಸಿದ. ನ್ಯಾಯಾಧೀಶರು ಮಗಳನ್ನು ವಿಚಾರಿಸಿದರು:’ಸ್ವಾಮೀ, ನನಗೆ ಸಿಕ್ಕಿದ್ದು ಒಂದು ಗಂಟು. ಅದನ್ನು ಬಿಚ್ಚಿ ನೋಡದೇ ಅಪ್ಪನಿಗೆ ತಲುಪಿಸಿದೆ ಎಂದಳಾಕೆ.
ನಂತರ ನ್ಯಾಯಾಧೀಶರು ಹೀಗೆ ತೀರ್ಪು ಕೊಟ್ಟರು: ‘ಶ್ರೀಮಂತನೇ ಹೇಳಿದ ಪ್ರಕಾರ ಆತ ಕಳೆದುಕೊಂಡಿದ್ದು ನಲವತ್ತು ಚಿನ್ನದ ನಾಣ್ಯಗಳಿದ್ದ ಚೀಲ. ಆದರೆ ಬಡವನ ಮಗಳಿಗೆ ಸಿಕ್ಕಿರುವುದು 30 ನಾಣ್ಯಗಳಿರುವ ಚೀಲ. ಅಂದರೆ, ಈಗ ಸಿಕ್ಕಿರುವ ಹಣ ಶ್ರೀಮಂತನಿಗೆ ಸೇರಿದ್ದಲ್ಲ! ಹಾಗಾಗಿ ಈ ಹಣವನ್ನು ವಾರಸುದಾರರು ಬರುವ ತನಕ ಬಡವನೇ ಇಟ್ಟುಕೊಳ್ಳಬೇಕು. ಒಂದು ವೇಳೆ ವಾರಸುದಾರರು ಬಾರದೇ ಹೋದರೆ ಆ ಹಣ ಬಡವನಿಗೇ ಸೇರುತ್ತದೆ. ಮುಂದೆ ಯಾರಾದರೂ ನಲವತ್ತು ಚಿನ್ನದ ನಾಣ್ಯಗಳು ಸಿಕ್ಕಿವೆ ಎಂದು ಹೇಳಿದರೆ, ಅದನ್ನು ಶ್ರೀಮಂತನ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ…’
ಆಗ ಆತ ಗಾಬರಿಗೆ ಬಿದ್ದು ‘ನಾನು ಕಳೆದುಕೊಂಡಿದ್ದು 30 ಚಿನ್ನದ ನಾಣ್ಯಗಳನ್ನು ಸ್ವಾಮೀ. ಅತಿಯಾಸೆಗೆ ಬಿದ್ದು ಸುಳ್ಳು ಹೇಳಿದೆ. ಕ್ಷಮಿಸಿ. ಈಗ ಸಿಕ್ಕಿರೋ ಹಣವನ್ನು ಕೊಡಿಸಿ ಎಂದು ಪ್ರಾರ್ಥಿಸಿದ. ಆದರೆ ನ್ಯಾಯಾಧೀಶರು ಒಪ್ಪಲಿಲ್ಲ.
ದುರಾಸೆ ಎಂದಿಗೂ ನಮಗೆ ಒಳ್ಳೆಯದು ಮಾಡುವುದಿಲ್ಲ ಎಂಬುದನ್ನು ಈ ಪುಟ್ಟ ಪ್ರಸಂಗ ಅದೆಷ್ಟು ನಾಜೂಕಾಗಿ ತಿಳಿಸುತ್ತದೆ ಅಲ್ವಾ?
-ವಿಶ್ವೇಶ್ವರ ಭಟ್
ಉದಾಸೀನತೆ ಹಾಗೂ ದುರಾಸೆಯ ಬಗೆಗಿನ ತಮ್ಮ ಬರಹ ಮನ ಮುಟ್ಟಿತು. ನಿಮ್ಮ ಬರವಣಿಗೆಯೆ ಶೈಲಿ ಆಪ್ಯಾಯಮಾನವಾಗಿದೆ.
ತಮಗೆ ಶುಭವಾಗಲಿ ಸ್ವಾಮಿ
Dear Sir,
Excellent story Sir. More such stories are expect in future.
With kind regards
Kusuma K
modala pyaara shalegalalli baro hondisi bareyiri prasne thara ede.Yeno ondu level ,jana tilkolli antha ee thara baredu thale hal madthare aste.artha avanigu gottiralla:)
If somebody else means just read n not worried much if not understood, but our bhats special person posted here to laugh
:P
Thanks for bhatru for such a joke
Earlier even i had go through such type articles in Kannada.Actually speaking i could not understood and i was thinking my self that may be am not such brilliant or not much command over Kannada language .Now I understood that actually its hype of writers to create specialty in them selves.Thanks a lot for sharing and clear the real face of such writers.I really cant say how much i laughed for such ur hit back.:):)
Abba!!
ond kshana gaabri aagittu, iden KANNADAne artha aagtillvalla anta!!!! taalme tagondu, mundina paragraphs oodidamele hoda jeeva bandangaytu..
cold war – globalisation – aatanka – aarogyakara manassu – aakrosha – kutoohalada kshana – anyaya
ond “gram”ashtu kooda artha aaglilla… atleast yellana comma adru use madidre swalpa try madbahudittu….
but d joke is awesommme!! LOL
Nice one,
ROFL:)
After Reading in all angels even I don’t understood and could not control my laugh. I
mostly dombaratadava edannu barediro chance ede, namma urallli bhoota ge arike maadodu egene:P
Artha yenadru tilita marayere, sumne bidbedi artha madiso thanaka:)
ಫೈನ್ ಸರ್. ಮನಸ್ಸು ಪ್ರಫುಲ್ಲವಾಯ್ತು. ಬಹಳ ದಿನ ಆಗಿತ್ತು ನಿಮ್ ಮನೆಗೆ ಭೇಟಿ ಕೊಟ್ಟು. ಇಷ್ಟು ಸಿಹಿಯಾದ ಊಟ ಸಿಕ್ಕಿದ್ದು ಸಖತ್ ಖುಷಿ ಆಯ್ತು. ಸದ್ಯವೇ ನಿಮ್ಮನ್ನ ಭೇಟಿ ಮಾಡುವ ಆಸೆ. ಒಮ್ಮೆ ಬರ್ತಿನಿ ನಿಮ್ಮ ಆಫೀಸ್ ಗೆ. ವಿತ್ ಯುವರ್ ಫರ್ಮಿಷನ್….
Ednna artha madisoo thanka nanantu bidalla nimmanna:P
bhatre 4 dina aaitu sari nidde madade, navu nidde madbeko bedvo? hagadre edara artha tilsi bega:P