ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಒಂದು ಸರ್ಕಾರ ಪತನವಾದರೆ ಏನೇನೆಲ್ಲ ಆಗುತ್ತವೆ ಗೊತ್ತಾ?

ಯಡಿಯೂರಪ್ಪ ಸರಕಾರದ ಭವಿಷ್ಯ ಅಯೋಮಯ!

ಈ ಅಂಕಣ ಬರೆಯುವ ಹೊತ್ತಿಗೆ ಎಲ್ಲವೂ ಅನಿಶ್ಚಿತವಾಗಿಯೂ ಕಾಣುತ್ತಿದೆ. ಇದು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮಾತ್ರ ಅನ್ವಯಿಸುವಂಥದ್ದಲ್ಲ. ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರಿಗೂ ಈ ಅನಿಶ್ಚಿತತೆ ಕಾಡುತ್ತಿದೆ. ಇವರಿಬ್ಬರಿಗಿಂತ ಹೆಚ್ಚಾಗಿ ರಾಜ್ಯದ ಜನತೆಯೂ ಈ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಸರಕಾರ ಅಥವಾ ಆಡಳಿತ ಯಂತ್ರಕ್ಕೆ ಲಕ್ವಾ ಹೊಡೆದು ವಾರವಾಗುತ್ತಾ ಬಂತು. ಎಲ್ಲವೂ ಸರಿ ಹೋಗಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಮುಂದುವರೆಯುವಂತಾದರೆ ಪರವಾಗಿಲ್ಲ. ರಾಷ್ಟ್ರಪತಿ ಆಳ್ವಿಕೆ, ವಿಧಾನಸಭೆಯನ್ನು ಅಮಾನತ್ತಿನಲ್ಲಿಡುವ ಪ್ರಯತ್ನಗಳೇನಾದರೂ ಆದರೆ ಮತ್ತಷ್ಟು ಗೊಂದಲ, ಗೋಜಲು ಸಹಜ.

ಒಂದು ಸರಕಾರ ಹೋಗಿ, ಇನ್ನೊಂದು ಸರಕಾರ ಬಂದರೆ, ಒಬ್ಬ ಮುಖ್ಯಮಂತ್ರಿ ಹೋಗಿ, ಮತ್ತೊಬ್ಬರು ಬಂದರೆ ಏನಾಗುತ್ತದೆ ಎಂದು ಸಾಮಾನ್ಯರು ಕೇಳಬಹುದು. ಅಕಾಲಿಕವಾಗಿ ಒಂದು ಸರಕಾರ ಬಿದ್ದು ಹೋದರೆ, ಸರಕಾರದ ನಾಯಕತ್ವ ಬದಲಾದರೆ ಆ ರಾಜ್ಯ ಪ್ರಗತಿಯಲ್ಲಿ ಎರಡು ವರ್ಷ ಹಿಂದಕ್ಕೆ ಹೋಗುತ್ತದೆ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೇಳುತ್ತಿದ್ದರು. ಮುಖ್ಯಮಂತ್ರಿ ಬದಲಾದ ಮಾತ್ರಕ್ಕೆ ರಾಜ್ಯಕ್ಕೇನೂ ಆಗುವುದಿಲ್ಲವೆಂದು ಭಾವಿಸುವವರು ಸೂಕ್ಷ್ಮ ಸಂವೇದನೆಯನ್ನು ಕಳಕೊಂಡವರು. ಒಬ್ಬ ಮುಖ್ಯಮಂತ್ರಿ ಬದಲಾದರೆ ಅದರ ಪರಿಣಾಮ ಗೊತ್ತಿದ್ದೋ, ಗೊತ್ತಿಲ್ಲದೆಯೋ ಎಲ್ಲರ ಮೇಲೂ ಆಗುತ್ತದೆ. ಸರಾಗವಾಗಿ ತಿರುಗುತ್ತಿದ್ದ ಅಭಿವೃದ್ಧಿ ಚಕ್ರ ಹಠಾತ್ತನೆ ನಿಲ್ಲುತ್ತದೆ. ಮತ್ತೊಬ್ಬರು ಬಂದು ಚಾಲನೆ ಕೊಡುವವರೆಗೆ, ಕೊಟ್ಟ ಮೇಲೂ ಕೆಲ ದಿನಗಳವರೆಗೆ ಅದರ ನಕಾರಾತ್ಮಕ ಪರಿಣಾಮ ಬಾಧಿಸುತ್ತಿರುತ್ತದೆ.

ಕೇಂದ್ರದಲ್ಲಿ ವಿ.ಪಿ. ಸಿಂಗ್, ಚಂದ್ರಶೇಖರ್, ದೇವೇಗೌಡ, ಐ.ಕೆ. ಗುಜ್ರಾಲ್ ಅವರ ಸರಕಾರಗಳು ಅಲ್ಪ ಕಾಲಾವಧಿಯಲ್ಲಿ ಪತನಗೊಂಡ ನಂತರ ವಾಜಪೇಯಿ ಅವರು ಲೋಕಸಭೆಯಲ್ಲಿ ಒಂದು ಚಿಕ್ಕ ಪ್ರಸಂಗವನ್ನು ಹೇಳಿದ್ದರು. ಒಂದು ಸರಕಾರ ಅನಿಶ್ಚಿತ ಸ್ಥಿತಿಗೆ ಸಿಲುಕಿದರೆ, ಅಥವಾ ಪತನಗೊಂಡು ಹೊಸ ಸರಕಾರ ಬಂದರೆ ಏನೆನೆಲ್ಲ ಆಗುತ್ತದೆ ಗೊತ್ತಾ? ಎಂದು ವಾಜಪೇಯಿ ಆ ಪ್ರಸಂಗ ವಿವರಿಸಿದ್ದರು.

ಚಂದ್ರಶೇಖರ್ ಸರಕಾರ ಪತನಗೊಳ್ಳುವುದಕ್ಕಿಂತ ಎರಡು ತಿಂಗಳ ಮೊದಲು ಅವರಿಗೆ ಪರಿಚಯವಿದ್ದವರೊಬ್ಬರು, ಅವರ ಸರಕಾರದಲ್ಲಿನ ಪ್ರವಾಸೋದ್ಯಮ ಖಾತೆ ಸಚಿವರನ್ನು  ಭೇಟಿ ಮಾಡಿದ್ದರಂತೆ. ಅವರ ಬೇಡಿಕೆಯೇನೆಂದರೆ, ಪ್ರವಾಸೋದ್ಯಮ ಖಾತೆ ಅಧೀನದಲ್ಲಿರುವ ಸುಮಾರು ನಲವತ್ತಕ್ಕೂ ಹೆಚ್ಚು ಪಂಚತಾರಾ ಹೋಟೆಲ್ ಗಳಿಗೆ ಇಲಿ, ಜಿರಳೆ ಮದ್ದನ್ನು ಪೂರೈಸುವ ಗುತ್ತಿಗೆಯನ್ನು ಗಿಟ್ಟಿಸುವುದು. ಇದು ಏನಿಲ್ಲವೆಂದರೂ ಕೋಟ್ಯಂತರ ರುಪಾಯಿ ವ್ಯವಹಾರ. ಚಂದ್ರಶೇಖರ್ ಅವರ ಸ್ನೇಹಿತರು ಪ್ರವಾಸೋದ್ಯಮ ಸಚಿವರನ್ನು ಕಂಡು ಮಾಡಬೇಕಾದ “ವ್ಯವಹಾರ’ಗಳನ್ನೆಲ್ಲ ಮಾಡಿ ಮುಗಿಸಿದ್ದರು. ಆದರೂ ಅವರಿಗೆ ಗುತ್ತಿಗೆ ದೊರೆತಿರಲಿಲ್ಲ. ಇನ್ನೇನು ಸಿಗುತ್ತದೆ ಎನ್ನುವಾಗ ಸರಕಾರವೇ ಬಿದ್ದು ಹೋಯಿತು.

ಈ ಪ್ರಸಂಗವನ್ನು ಅತ್ಯಂತ ಸ್ವಾರಸ್ಯವಾಗಿ ತಮ್ಮದೇ ಧಾಟಿಯಲ್ಲಿ ಬಣ್ಣಿಸಿದ ವಾಜಪೇಯಿ ಕೊನೆಯಲ್ಲಿ ಒಂದು “ಪಂಚ್ ಲೈನ್’ ಬಿಟ್ಟರು- “ನೋಡಿದ್ರಾ? ಸರಕಾರ ಬಿದ್ದರೆ ಏನಾಗುತ್ತದೆ ಅಂತ ಕೇಳುತ್ತಾರಲ್ಲ, ಅಂಥವರು ಈ ಪ್ರಸಂಗದಿಂದ ತಿಳಿದುಕೊಳ್ಳಲಿ. ಚಂದ್ರಶೇಖರ್ ಸರಕಾರ ಹೋಗಿದ್ದರಿಂದ ದೇಶದೆಲ್ಲೆಡೆಯಿರುವ ಪ್ರವಾಸೋದ್ಯಮ ಇಲಾಖೆ ಹೋಟೆಲ್್ಗಳಲ್ಲಿರುವ ಎಲ್ಲ ಇಲಿ, ಹೆಗ್ಗಣ, ತಿಗಣೆ, ಜಿರಳೆಗಳೆಲ್ಲ ಬದುಕಿಕೊಂಡವು. ಅಂಥ ಯಕಃಶ್ಚಿತ ಕ್ರಿಮಿ ಕೀಟಗಳ ಮೇಲೆ ಅಷ್ಟು ಪರಿಣಾಮ ಬೀರುವುದಾದರೆ, ಇನ್ನು ಮನುಷ್ಯರ ಮೇಲೆ ಎಂಥ ಪರಿಣಾಮವಾಗಬಹುದು?’

ಯಡಿಯೂರಪ್ಪನವರ ಸರಕಾರವೇನಾದರೂ ಹೋದರೆ, ಈಗಾಗಲೇ ಕೊಬ್ಬಿರುವ “ಇಲಿ, ಹೆಗ್ಗಣ’ಗಳ ಕತೆಯೇನಾಗಬಹುದು? ಜನಸಾಮಾನ್ಯರ ರಕ್ತ ಹೀರುವ ತಿಗಣೆಗಳೇನಾಗಬಹುದು?

ಬಿಡಿ, ಜನಸಾಮಾನ್ಯರನ್ನೆಲ್ಲ ಯಾರು ಕೇಳ್ತಾರೆ?
** ** ** ** **

ಎಲ್ಲರನ್ನೂ ಹೇಗೆ ಖುಷಿಪಡಿಸಬಹುದು?

ಎಂಟು ವರ್ಷದ ಬಾಲಕ ಐಸ್್ಕ್ರೀಮ್ ಪಾರ್ಲರ್ ಗೆ ಹೋದ. ಒಂದು ಕೋನ್ ಐಸ್ ಕ್ರೀಮ್ ಗೆ ಎಷ್ಟು ಎಂದು ಕೇಳಿದ. ವೇಟರ್ ಹೇಳಿದ- “ಅದಕ್ಕೆ ಹದಿನೈದು ರು. ಆಗುತ್ತದೆ.’ ತಕ್ಷಣ ಆ ಬಾಲಕ ಕಿಸೆಯಲ್ಲಿರುವ ಹಣವನ್ನು ಎಣಿಸಿದ. ಮಧ್ಯಮ ಗಾತ್ರದ ಕೋನ್ ನೋಡಿ, “ಇದಕ್ಕೆ ಎಷ್ಟಾಗುತ್ತದೆ?’ ಎಂದು ಕೇಳಿದ. ಅದಕ್ಕೆ ವೇಟರ್ “ಹನ್ನೆರಡು ರು. ಆಗುತ್ತದೆ’ ಎಂದ. ತೀರಾ ಚಿಕ್ಕ ಕೋನ್ ನೋಡಿ, “ಇದಕ್ಕೆ ಎಷ್ಟಾಗುತ್ತದೆ ಅಂಕಲ್?’ ಎಂದು ಕೇಳಿದ. ವೇಟರ್್ಗೆ ಸಿಟ್ಟು ಬಂತು. ತೀರಾ ಸಿಡುಕಿನಿಂದ “ಹತ್ತು ರು. ಆಗುತ್ತದೆ, ಬೇಕು ಅಂದ್ರೆ ಹೇಳು, ಬರೀ ರೇಟ್ ಕೇಳ್ತಾ ಇದ್ದೀಯಾ. ನಾನ್್ಸೆನ್ಸ್’ ಎಂದ.

ಬಾಲಕ ಮಧ್ಯಮ ಗಾತ್ರದ ಕೋನ್ ಐಸ್ ಕ್ರೀಮ್ ಕೊಡುವಂತೆ ಹೇಳಿದ. ಅದನ್ನು ತಿಂದು ಮುಗಿಸುತ್ತಿದ್ದಂತೆ, ವೇಟರ್ ಬಿಲ್ ತಂದಿಟ್ಟ. ಹನ್ನೆರಡು ರು. ಎಂದು ಬಿಲ್ ನಲ್ಲಿತ್ತು. ವೇಟರ್ ಟೇಬಲ್ ಗೆ ಬಂದಾಗ ಅವನಿಗೆ ಆಘಾತವಾಯಿತು. ಆ ಬಾಲಕ ಹನ್ನೆರಡು ರು. ಬಿಲ್ ಕೊಟ್ಟು, ಮೂರು ರು. ಟಿಪ್ಸ್ ಬಿಟ್ಟು ಹೋಗಿದ್ದ!

ಹೌದೋ, ಅಲ್ಲೋ, ನಮ್ಮಲ್ಲಿರುವ ಸಣ್ಣ ಪುಟ್ಟ ಸಂಗತಿಗಳಿಂದಲೇ ಇತರರನ್ನು ಖುಷಿಪಡಿಸಬಹುದು!

** ** ** ** **
 
ಕುಡಿತದ ಭಾನಗಡಿ

ಆ ರಾತ್ರಿ ಮಗ ಮನೆ ತಲುಪುವಾಗ ಮಧ್ಯರಾತ್ರಿಯಾಗಿತ್ತು. ಚೆನ್ನಾಗಿ ಕುಡಿದು ಬಿಟ್ಟಿದ್ದ. ತಂದೆ ನೋಡಿದರೆ ಬೈಯ್ತಾರೆ ಎಂಬುದು ಗೊತ್ತಾದದ್ದೇ ತಡ, ಮಗ ಸರಸರನೆ “ಲ್ಯಾಪ್ ಟಾಪ್ ತೆಗೆದುಕೊಂಡು ಕೆಲಸ ಮಾಡಲು ಆರಂಭಿಸಿದ.
ತಂದೆ :  ಕುಡಿದು ಬಂದಿದ್ದೀಯಾ ಹೌದೋ ಇಲ್ವೋ?
ಮಗ :  ಇಲ್ಲವಲ್ಲ.
ತಂದೆ : ಹಾಗಾದರೆ ಬ್ರೀಫ್ ಕೇಸ್ ನ್ನು ಓಪನ್ ಮಾಡಿಕೊಂಡು ಏನ್ ಮಾಡ್ತಾ ಇದ್ದೀಯಾ?

** ** ** ** **
 
ಬ್ರಿಲಿಯಂಟ್ ಉತ್ತರ ಬರೆದರೂ ಹೀಗಾ?

ಪ್ರಶ್ನೆ  :ಟಿಪ್ಪು ಸುಲ್ತಾನ ಯಾವ ಕಾಳಗದಲ್ಲಿ ಮೃತಪಟ್ಟನು?
ಉತ್ತರ : ಕೊನೆ ಕಾಳಗದಲ್ಲಿ.

ಪ್ರಶ್ನೆ : ಆಸಿಡ್ ಕುಡಿದಾಗ ಅಜೀರ್ಣವಾದರೆ ತಪ್ಪಿಸುವುದು ಹೇಗೆ?
ಉತ್ತರ :ಆಸಿಡ್ ಕುಡಿಯದಿರುವುದು.

ಪ್ರಶ್ನೆ  : ಸ್ವಾತಂತ್ರ್ಯ ಘೋಷಣೆಗೆ ಸಹಿ ಹಾಕಿದ್ದು ಎಲ್ಲಿ?
ಉತ್ತರ :ಕಾಗದದ ಕೊನೆಯಲ್ಲಿ.

ಪ್ರಶ್ನೆ  : ವಿವಾಹ ವಿಚ್ಛೇದನಕ್ಕೆ ಕಾರಣಗಳೇನು?
ಉತ್ತರ : ವಿವಾಹ.

ಇಂಥ ಉತ್ತರ ಬರೆದ ವಿದ್ಯಾರ್ಥಿಗೆ ಸಿಕ್ಕಿದ್ದು ಸೊನ್ನೆ ಅಂಕ!
** ** ** ** ** 

ವಕ್ರತುಂಡೋಕ್ತಿ
ಕಾಲೇಜಿನಲ್ಲಿ ಪ್ರೊಫೆಸರ್ ಗಂಭೀರ ವಿಷಯದ ಕುರಿತು ಪಾಠ ಮಾಡುತ್ತಿದ್ದರೆ ನಾವು ಕಲಿಯಬಹುದಾದುದೇನೆಂದರೆ ಮೊಬೈಲ್ ಫೋನ್ ನ್ನು ನೋಡದೇ ಮೆಸೇಜ್ ಟೈಪ್ ಮಾಡುವುದು.
 
** ** ** ** **

ಏನಿರಬಹುದು?

ಸುನಿಲ್ ಬೈಂದೂರು ಕಳಿಸಿದ ಒಂದು ಮೆಸೇಜು. 2050ರಲ್ಲಿ ಶೆಲ್ ಅಥವಾ ಇಂಡಿಯನ್ ಆಯಿಲ್ ಕಂಪನಿ ಪೆಟ್ರೋಲ್ ಬಗ್ಗೆ ಯಾವ ರೀತಿ ಜಾಹೀರಾತಿನಿಂದ ಗ್ರಾಹಕರನ್ನು ಸೆಳೆಯಬಹುದು?
-ಹತ್ತು ಲೀಟರ್ ಪೆಟ್ರೋಲ್ ತುಂಬಿಸಿಕೊಂಡರೆ ಟಾಟಾ ನ್ಯಾನೋ ಕಾರು ಉಚಿತವಾಗಿ ಪಡೆಯಬಹುದು!

** ** ** ** ** **
 
ಚಿಕ್ಕ ರಾಜಿನಾಮೆ ಪತ್ರ
“ಡಿಯರ್ ಸರ್, ನಾನು ನಿಮ್ಮ ಪತ್ನಿಯನ್ನು ಪ್ರೀತಿಸುತ್ತಿದ್ದೇನೆ’
 
** ** ** ** **
ಜೇಠ್ಮಲಾನಿ ನೀಡಿದ ಉತ್ತರ

ಬೋಫೋರ್ಸ್ ಫಿರಂಗಿ ಹಗರಣ ತಾರಕಕ್ಕೇರಿದ್ದ ಸಂದರ್ಭ. ಖ್ಯಾತ ನ್ಯಾಯವಾದಿ ರಾಂ ಜೇಠ್ಮಲಾನಿ ಪ್ರತಿದಿನ ರಾಜೀವ್ ಗಾಂಧಿ ವಿರುದ್ಧ ಟೀಕಾಸ್ತ್ರ ಪ್ರಯೋಗಿಸುತ್ತಿದ್ದರು. ರಾಜೀವ್ ನೋಡುವಷ್ಟು ದಿನ ನೋಡಿದರು. ಜೇಠ್ಮಲಾನಿ ಅವರಿಗೆ ತಿರುಗೇಟು ಕೊಡಬೇಕೆಂದು ಕಾಯುತ್ತಿದ್ದಿರಬೇಕು. ಅದಕ್ಕೆ ಸರಿಯಾಗಿ ಒಂದು ದಿನ ಪತ್ರಕರ್ತರು ರಾಜೀವ್ ಅವರಿಗೆ “ನಿಮ್ಮ ಬಗ್ಗೆ ಜೇಠ್ಮಲಾನಿ ಮಾಡುತ್ತಿರುವ ಟೀಕೆಗಳಿಗೆ ಏನಂತೀರಿ?’ ಎಂದು ಕೇಳಿದರು. ಮೊದಲೇ ಅವರ ಬಗ್ಗೆ ಕ್ರುದ್ಧರಾಗಿದ್ದ ರಾಜೀವ್, “ಬೊಗಳುವ ನಾಯಿಗಳಿಗೆಲ್ಲ ನಾನು ಉತ್ತರ ಕೊಡಬೇಕಾ’ ಎಂದು ಕೇಳಿದರು.

ಅದೇ ದಿನ ಪತ್ರಕರ್ತರು ಜೇಠ್ಮಲಾನಿ ಅವರನ್ನು ಭೇಟಿಯಾಗಿ, ರಾಜೀವ್ ನಿಮ್ಮ ಬಗ್ಗೆ ಹೀಗೆಲ್ಲ ಹೇಳಿದ್ದಾರಲ್ಲ, ನೀವೇನಂತೀರಿ? ಎಂದು ಕೇಳಿದಾಗ ಜೇಠ್ಮಲಾನಿ ಹೇಳಿದರು-” ಕಳ್ಳರನ್ನು ಕಂಡಾಗ ಮಾತ್ರ ನಾಯಿ ಬೊಗಳುತ್ತದೆ.’

ಇದಕ್ಕೆ ರಾಜೀವ್ ಪ್ರತಿಕ್ರಿಯಿಸಿದ್ದು ಎಲ್ಲೂ ವರದಿಯಾದಂತಿಲ್ಲ.
 

5 Comments

  1. Son: Dad, if you see a $10 bill and a $5 bill on the floor, which will you take?

    Dad: The $10 bill off course!

    Son: That’s so STUPID! Why not take both… :D

  2. Karnataka governor is worst among the all . Among the few worst Governors, so for we had till the date is, like, Buta Singh, Syed Sibte Razvi, Zameer are the few prominent names. But this Governor has surpassed them all. If you are having this kind of person at the helm of affairs, who holding the gun on your temple and asking to work, who will can work peace fully. If your Governor openly criticizing your Govt. all the time, then which officer will obey you and your order. Whomever opposition parties are existing in Karnataka in comparison to them, this Governor alone performed better than them put together. If Congress thinks that, through this Governor they could achieve their wishes and can face the next election, they are simply living in fools paradise. The local Congress leaders always liked to quote Tamil Nadu’s recent example. But they are conveniently for gotten, in well advance to the general election, Jayalalitha used to crisscross the state vigorously. Similarly during the Chanda babu Naidu regime, then Andhra Oppn. Leader , Rajashekhara Reddy organized many padayatra’s and toured the stateon foot exclusively. Ultimately all these hard work of theirs has not gone in vain. They were rewarded with handsome electoral result. Our local Congress leaders failing here only. They wanted to have every thing on the platter. Further they wanted the party should organize the resources for them to work. None of them is ready to sacrifice, few part of their amassed wealth for the sake of the party today. They became so much of lethargic and dependent that, even idea’s they have to borrow from others. JD (S) is no different , as they are always preferred for back door politics and searching for short cut to gain power, in the process they have conveniently forgotten the reality that, Devegowda lost his credibility in the politics. Today even lefties (self destructive fools) are not ready to believe him. Now the eternal truth donned to every one that Devegowda and his actions never crosses beyond his personal interest.

  3. Kauthuka:
    Karnatakada mundina Rajyapalaru hagu Mukhyamantri galu yaraguttare?
    Ibbara kurchigalu onde kabbinada adirininda madalpattirabeku..!
    =
    JOIN HIFRN
    to
    9219592195

  4. Nice one!. Neevu yaake J H Patel avra bagge (Olletanada bagge) baribaardu?

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.