ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಕೆಲ ಆಲೋಚನೆಗಳ ತಳಿರಿನ ಮಧ್ಯೆ ಹೊಸ ಅಂಕಣಗಳ ತೋರಣ

vbhat.in ಆರಂಭವಾಗಿ ಇನ್ನೂ ಒಂದು ತಿಂಗಳು ಸಹ ಆಗಿಲ್ಲ, ಆಗಲೇ ಐವತ್ತು ಸಾವಿರಕ್ಕಿಂತ ಹೆಚ್ಚು ಮಂದಿ ಈ ವೆಬ್ ಸೈಟ್ ಗೆ ಭೇಟಿ ಕೊಟ್ಟಿದ್ದಾರೆ. ಓದುಗರಿಂದ ದೊರೆತ ಪ್ರತಿಕ್ರಿಯೆ ಮಾತ್ರ ಅಭೂತಪೂರ್ವ. ಪ್ರತಿ ದಿನ ಏನಿಲ್ಲವೆಂದರೂ ೨೦೦ ಈಮೇಲ್ (ಮಿಂಚಂಚೆ)ಗಳಿಗೆ ಉತ್ತರಿಸುವ ಹೊತ್ತಿಗೆ ಫಡ್ಚಾ ! ಹಾಗಾಗಿರುತ್ತದೆ ನನ್ನ ಹಾಲತ್ತು. ಎಲ್ಲೆಲ್ಲಿಯ ಓದುಗರು, ಎಂಥೆಂಥ ಸಮಾಚಾರ, ಎಷ್ಟೆಲ್ಲ ಅಕ್ಕರೆ, ಹಿತವಾದ ತಿವಿತ, ಭರಪೂರು ಮೋಜು, ಸಮಯ ಜಾರಿದ್ದು ಗೊತ್ತಾಗದಂಥ ಹರಟೆ, ತರಹೇವಾರಿ ಸಲಹೆ-ಸಾಂತ್ವನ, ಪ್ರೀತಿಯ ಮುಸಲಧಾರೆ, ಕೇಳ್ರಪ್ಪೋ ಕೇಳಿಗೆ ಪ್ರಶ್ನೆಗಳ ಪ್ರವಾಹ, ಈ ನೆಪದಲ್ಲಿ ಸಿಕ್ಕ ಸಾವಿರಾರು ಜನ, ಅವರ ಗೊತ್ತು- ಪರಿಚಯ..ಈ ವೆಬ್ ಸೈಟ್ ಅನುಭವ ಹೇಳಲು ಅಸಾಧ್ಯ.

ಇಷ್ಟೇ ಅಲ್ಲ, ಅನೇಕರು ತಾವೂ ಬರೆಯಬಹುದಾ ಎಂದು ಕೇಳಿದ್ದಾರೆ, ಇನ್ನು ಕೆಲವರು ತಮ್ಮ ಲೇಖನಗಳನ್ನು ಕಳಿಸಿಕೊಟ್ಟಿದ್ದಾರೆ, ಮಂಗಳೂರಿನ ವ್ಯಂಗ್ಯಚಿತ್ರಕಾರರೊಬ್ಬರು ಪ್ರತಿದಿನ ನನ್ನ ಚಿತ್ರಗಳನ್ನು ಪ್ರಕಟಿಸುವುದಾರೆ ಕಳಿಸುತ್ತೇನೆ ಅಂದಿದ್ದಾರೆ. ಕಳಿಸಲು ಆರಂಭಿಸಿದ್ದಾರೆ ಕೂಡ. ನಾನು ಅವರಿಗೆ ಜಾಗ ಕಲ್ಪಿಸಿ ಕೊಡಬೇಕಾಗಿದೆ. ಕವನಗಳಿಗೂ ತಾಣ ಇರಲಿ ಎಂದು ಹೇಳಿದ್ದು ತೀರ್ಥಹಳ್ಳಿಯ ಆಕಾಂಕ್ಷಾ ದೀಕ್ಷಿತ್. ನ್ಯೂಯಾರ್ಕಿನಲ್ಲಿ ನೆಲೆಸಿರುವ ಸಾಫ್ಟ್ ವೇರ್ ಎಂಜಿನಿಯರ್ ಸಂಕೀರ್ತನ ಶರ್ಮ ಒಂದು ‘ಅಂಕಣ’ವನ್ನು ಜಿ ಕೆಟಗರಿಯಲ್ಲಿ ಕೊಡಿಸಿ ಎಂದು ಹೇಳಿದ್ದಾರೆ !

‘ಅದೆಲ್ಲ ಇರಲಿ, ಈಗ ಫ್ರೀ ಇದ್ದೀರಿ, ಏನು ಕೆಲಸ? ನೆಪ ಹೇಳದೇ ನೀವು ಪ್ರತಿದಿನ ಬರೆಯಬೇಕು’ ಎಂದು ಕಟ್ಟಪ್ಪಣೆ ಕೊಡಿಸಿದವರು ಅವೆಷ್ಟೋ !?

ನನ್ನ ಸಮಸ್ಯೆ ಬರೆಯುವುದಲ್ಲ, ಬರೆಯದೇ ಇರುವುದು. ಪ್ರತಿದಿನ ಸುಮಾರು ಐದು ತಾಸು ಓದದಿದ್ದರೆ, ಬರೆಯದಿದ್ದರೆ ತಿಂದಿದ್ದು ಜೀರ್ಣವಾಗುವುದಿಲ್ಲ. ಹೆಂಡತಿ, ಮಗನ ಮೇಲೆ ವಿನಾಕಾರಣ ಚಿಟಿಚಿಟಗುಟ್ಟುತ್ತಿರುತ್ತೇನೆ. ಹೀಗಾಗಿ ಅವರ ನೆಮ್ಮದಿಗಾಗಿ ನನ್ನನ್ನು ನನ್ನ ಪಾಡಿಗೆ ಓದಲೋ, ಬರೆಯಲೋ ಬಿಟ್ಟುಬಿಡುತ್ತಾರೆ. ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ನನಗೆ ಪತ್ರಿಕೆಯಿಲ್ಲದಿರಬಹುದು, ಆದರೆ ನಾನು ಯಾವ ಅಂಕಣವನ್ನೂ ಬರೆಯದೇ ಸುಮ್ಮನಾಗಿಲ್ಲ.

ಕೆಲಸಕ್ಕೆ ರಾಜೀನಾಮೆ ನೀಡಿದಂದಿನಿಂದ ಬರವಣಿಗೆಯನ್ನು ನಿಲ್ಲಿಸಿದ್ದೇ ಇಲ್ಲ. ರಾಜೀನಾಮೆ ನೀಡಿದ ದಿನ (ಬುಧವಾರ)ವೂ ನಾನು ನನ್ನ ಗುರುವಾರದ ಅಂಕಣ ‘ನೂರೆಂಟು ಮಾತು’ ಬರೆದಿಟ್ಟಿದ್ದೆ. ಈಗಲೂ ನಾನು ಬರೆಯುವ ಯಾವ ಅಂಕಣವನ್ನೂ ಮಿಸ್ ಮಾಡಿದ್ದಿಲ್ಲ. ನನ್ನ ದೊಡ್ಡ ಸಮಸ್ಯೆ ಅಂದ್ರೆ ನಾನೆಂದೂ ಕನ್ನಡ ಅಕ್ಷರಗಳನ್ನು ಕಂಪ್ಯೂಟರ್ ನಲ್ಲಿ ಕಂಪೋಸ್ ಮಾಡಿದವನಲ್ಲ. ಪ್ರತಿದಿನ ಕಂಪ್ಯೂಟರ್ ಮುಂದೆ ಕನಿಷ್ಠ ನಾಲ್ಕು ತಾಸು ಕುಳಿತುಕೊಂಡರೂ, ಕನ್ನಡ ಬೆರಳಚ್ಚು ನನಗೆ ಒಲಿಯಲಿಲ್ಲ. ಅದಕ್ಕಿಂತ ಹೆಚ್ಚಾಗಿ ನಾನದನ್ನು ಒಲಿಸಿಕೊಳ್ಳಲಿಲ್ಲ. ನನಗೆ ಪಟ್ಟಾಗಿ ಕುಳಿತು ಬರೆಯುವುದರಲ್ಲಿಯೇ ಮಹದಾನಂದ ! ಪೆನ್, ಕಾಗದಗಳನ್ನೆಲ್ಲ ಜೋಡಿಸಿಟ್ಟುಕೊಂಡು ಬರೆಯಲಾರಂಭಿಸಿದರೆ ನನಗೆ ಅನೆಸ್ತೇಶಿಯಾ ಕೊಟ್ಟ ಹಾಗೆ.ಮುಗೀತು, ನನ್ನನ್ನು ಯಾರೂ ಅಲ್ಲಾಡಿಸಲು ಅಗೊಲ್ಲ.

ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ಬರೆದಿದ್ದನ್ನು ವೆಬ್ ಸೈಟ್ ಗೆ ಅಪ್ ಲೋಡ್ ಮಾಡೋಣವೆಂದರೆ ಅದೇ ಕಂಪೋಸಿಂಗ್ ಸಮಸ್ಯೆ. ನನ್ನ ಬವಣೆ ನೋಡಿ, ಸ್ನೇಹಿತರೊಬ್ಬರು ತಾವೇ ಈ ಕೆಲಸ ಮಾಡಿಕೊಡುವುದಾಗಿ ಮುಂದೆ ಬಂದರು. ಹಾಗಂತ ಅವರೇನು ಡಿಟಿಪಿ ಆಪರೇಟರ್ ಅಲ್ಲ. ವಿಪ್ರೋದಲ್ಲಿ ಎಂಜಿನಿಯರ್!

ಪ್ರತಿ ದಿನ ನಾನು ಬರೆದಿದ್ದನ್ನು ಕಂಪೋಸ್ ಮಾಡಿಕೊಡುತ್ತಿದ್ದರು. ಅವರಿಗೆ ಎಷ್ಟು ದಿನಾಂತ ಈ ಕೆಲಸ ಹಚ್ಚೋದು? ನನಗೆ ಬಹಳ ಕೆಟ್ಟೆನಿಸುತ್ತಿತ್ತು. ಹಾಗೆಂದು ಅವರೇನೂ ಬೇಸರಿಸಿಕೊಳ್ಳುತ್ತಿರಲಿಲ್ಲ. ‘ದಯವಿಟ್ಟು ಬರೆದಿದ್ದನ್ನು ಕಳಿಸಿಕೊಡಿ, ಬಿಡುವಿನ ವೇಳೆಯಲ್ಲಿ ಕಂಪೋಸ್ ಮಾಡುತ್ತೇನೆ’ ಎಂದು ಹೇಳುತ್ತಿದ್ದರು. ಅಲ್ಲದೇ ಬಹಳ ಶ್ರದ್ಧೆಯಿಂದ ಆ ಕೆಲಸ ಮಾಡಿಕೊಡುತ್ತಿದ್ದರು. ನನಗೇ ಯಾಕೋ ಇದು ಸರಿ ಕಾಣುತ್ತಿರಲಿಲ್ಲ.

ಕಳೆದ ೧೦-೧೨ ದಿನಗಳ ಹಿಂದೆ ಬೆಳಗ್ಗೆ ಐದಕ್ಕೆ ಎದ್ದವನು ಕಂಪೋಸ್ ಮಾಡಲು ಕುಳಿತೆ. ಮಗು ಆಗ ತಾನೆ ಅಂಬೆಗಾಲಲ್ಲಿ ನಡೆಯುವಂತೆ, ಅಲ್ಲೊಂದು ಇಲ್ಲೊಂದು ಹೆಜ್ಜೆ ಹಾಕಿ ನಡೆಯುವಂತೆ, ಕೀಬೋರ್ಡ್ ಮೇಲೆ ನಡೆಯಲಾರಂಭಿಸಿದೆ. ಕೀಬೋರ್ಡ್ ಮೇಲೆ ಗಮನಹರಿಸಿದರೆ ಬರಹದ ಹರಿವು ಎಲ್ಲೆಲ್ಲೋ ಹರಿದು, ಯೋಚನೆಗಳು ದಿಕ್ಕಾಪಾಲಾಗುತ್ತಿದ್ದವು. ಈ ಜನ್ಮದಲ್ಲಿ ನನಗೆ ಕನ್ನಡ ಕಂಪೋಸಿಂಗ್ ಕೈಹಿಡಿಯಲಿಕ್ಕಿಲ್ಲ, ಅದಕ್ಕಿಂತ ಹೆಚ್ಚಾಗಿ ನನ್ನ ಮುದ್ದಾದ (?) ಕೈಬರಹ ಅಭ್ಯಾಸದ ಕೊರತೆಯಿಂದ ವಿರೂಪಗೊಳ್ಳಬಹುದು ಎಂದೆಲ್ಲ ಸಂಕಟವಾಯಿತು. ಆದರೂ ಪರವಾಗಿಲ್ಲ, ಮುಂದುವರಿಸೋಣ ಎಂದು ದಿನಕ್ಕೆ ಒಂದು ಗಂಟೆ ಕನ್ನಡ ಅಕ್ಷರಗಳನ್ನು ಕಂಪೋಸ್ ಮಾಡಲಾರಂಭಿಸಿದೆ.

ನನಗೇ ಅಚ್ಚರಿಯೆನಿಸುವಂತೆ, ಈಗ ಕೀಬೋರ್ಡ್ ನನಗೆ ಆಪ್ತವಾಗುತ್ತಿವೆ, ಕಂಪೋಸಿಂಗ್ ನನ್ನ ಕೈ ಹಿಡಿದಿದೆ. ಹತ್ತು ನಿಮಿಷಗಳಲ್ಲಿ ನೂರು ಪದಗಳ ಸ್ಪೀಡ್ ದಕ್ಕಿದೆ.

ಈ ಮಧ್ಯೆ ನಾನು ಹೊಸ ದೀಕ್ಷೆ ಸ್ವೀಕರಿಸಿದ್ದೇನೆ. ಅದಕ್ಕೆ ‘ಟ್ವೀಕ್ಷೆ’ ಎನ್ನಬಹುದು. ದಿನಾ ಒಂದೆರಡು ತಾಸು ಐಪ್ಯಾಡ್ ನಲ್ಲಿ ಟ್ವೀಟ್ (tweet) ಮಾಡುತ್ತೇನೆ. ಮಜವೋ ಮಜ..! ಯಾರುಯಾರೆಲ್ಲ ಬಂದು ಡಿಕ್ಕಿ ಹೊಡೆದು ಹೋಗುತ್ತಾರೆ. ನಾನೂ ಅದನ್ನೇ ಮಾಡಬಹುದು. ಅಮಿತಾಬ್, ಅಮಿರ್ ಖಾನ್, ಪ್ರೀತಿಶ್ ನಂದಿ, ಸುಷ್ಮಾ ಸ್ವರಾಜ್, ರಾಜ್ ದೀಪ್, ಬರ್ಖಾ, ಜಯಲಲಿತಾ, ಮಲ್ಲಿಕಾ ಶರಾವತ್, ನಂದಿತಾ ದಾಸ್…. ನಮ್ಮ ಯಡಿಯೂರಪ್ಪ, ಕುಮಾರಸ್ವಾಮಿ…!..ಮುಂತಾದವರೆಲ್ಲ ಟ್ವಿಟ್ಟರ್ ನಲ್ಲಿದ್ದಾರೆ. ಇವರೆಲ್ಲರ ಜತೆ ಟ್ವೀಟ್ ಮಾಡಬಹುದು. ಮೊನ್ನೆ ತರಲೆಯೊಬ್ಬ ಸಕತ್ ಆಗಿ ಟ್ವೀಟ್ ಮಾಡಿದ್ದ – ‘ನಾನು ನನ್ನ ನಾಯಿಯನ್ನು ಪೋಸ್ಟಮನ್ ರೀತಿ ಡ್ರೆಸ್ ಮಾಡಿದೆ. ಆನಂತರ ಬಂದ ಪೋಸ್ಟಮನ್ ತನಗೆ ತಾನೇ ಕಚ್ಚಿಕೊಂಡ.’

ಈ ಮಧ್ಯೆ ಬಿಡುವಿನ ವೇಳೆಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ತನ್ನ ತಾಯಿ ಬಗ್ಗೆ ಬರೆದ – A Remarkable Mother – ಎಂಬ ಪುಸ್ತಕವನ್ನು ಅನುವಾದ ಮಾಡುತ್ತಿದ್ದೇನೆ.

ಲೈಫು ಇಷ್ಟೇ ಅಲ್ಲ, ಭಲೇ ಮಜಾ ಆಗಿದೆ…ಇವೆಲ್ಲವನ್ನೂ ಬರೆದರೆ ಹೇಗಿರುತ್ತದೆ ?

ಈ ಎಲ್ಲ ಆಲೋಚನೆಗಳ ತಳಿರಿನ ನಡುವೆ ಹೊಸ ಅಂಕಣಗಳು ಸದ್ಯದಲ್ಲಿಯೇ ತೋರಣಗಟ್ಟಲಿವೆ. Please wait…

ಆಗಬಹುದಲ್ವಾ?

74 Comments

 1. ಹ ಹ .. ಎಲ್ಲವೂ ಸುಲಭ .. ಆದ್ರೆ ಖಂಡಿತವಾಗಿ ಮೊದಲು ಕಾಗದದಲ್ಲಿ ಬರೆಯುವುದು ಒಳ್ಳೇದು ಅಂತ ನನ್ನ ಅಭಿಪ್ರಾಯ .. ಶುಭದಿನ.

 2. ಖಂಡಿತಾ ಆಗಬಹುದು. ಹೊಸ ಅಂಕಣಗಳು, A Remarkable Mother -ಅನುವಾದಕ್ಕೆ ನಾವೆಲ್ಲರೂ ಕಾಯುತ್ತಿದ್ದೇವೆ.
  ಹಲವರು ನಿಮ್ಮ ಲೇಖನ ಅಂಕಣಗಳಿಗೆ ನಿದ್ದೆಗೆಟ್ಟು ಕಾಯುವರು,
  ಕೆಲವರು(?) ಈ ಸುದ್ದಿಯಿಂದ ನಿದ್ದೆಗೆಡುವರು…!!!

 3. Sir,

  Omme nimma ankana odida mele besara aguthe.., yake gottaa..???, B coz I hav to wait again to read ur article….

 4. ತಳಿರಿನ ತಂಪಿಗೆ, ಜೊತೆಗೆ ನಿಮ್ಮ ತೋರಣದ ಸುಳಿವಿನ ಸಿಂಚಿಗೆ ದನ್ಯವಾದಗಳು ಸರ್… ನಿಮ್ಮ ಆಲೋಚನಾ ಲಹರಿಯಲ್ಲಿ ನಮ್ಮನ್ನ ತೇಲಿಸುತ್ತಾ ಇರಿ…

 5. agabahudu marayre

 6. Sir,

  This is what i’ve been waiting for. Kannada authors to come on internet and share namma Kannada with the WORLD (not for blaming each other even on the net). Thanks for doing such a noble job.

  Regards,
  Basava.

 7. Good luck sir.. keep rocking always..

 8. kanditha naavu nimma hosa ankanagalige kaayutteve.

 9. ಭಟ್ ಸರ್ ಹೇಗಿದ್ದೀರಾ? ನೀವು ಹೊಸ ಪುಸ್ತಕ ಅನುವಾದ ಮಾಡುತ್ತಿರುವುದು ಕೇಳಿ ತುಂಬಾ ಸಂತೋಷವಾಯಿತು. ಹೀಗೇ ಬರೆಯುತ್ತಿರಿ.

 10. Sir..bahala dinagala nantara tamma manadaLada aase..aakankshe..utsaaha da maatu galannu melina lekanadalli odalu

  sikkidavu..thumba santhosha ayithu..heege manadaaLada maatugalu aagaga barali..

 11. plz do not stop thursday artile

 12. ಸ್ವಾಮಿ ಟೈಪಿಂಗ್ ಕಲಿಯಲು ಅಷ್ಟು ಕಷ್ಟ ಯಾಕೆ ಪಡ್ಟೀರಿ. ಅದಕ್ಕಾಗಿಯೇ TYPING MASTER ಅನ್ನೋ software ಇದೆ . google ಮಾವನನ್ನ ಕೇಳಿದ್ರೆ ಮಾಹಿತಿ ಕೊಡ್ತಾನೆ. Gವನದಲ್ಲಿ ಖುಷಿಯಾಗಿರೋದು ಹೇಗೆ ಅನ್ನೋದನ್ನ ನಿಮ್ ಹತ್ರ ಕಲಿಬೇಕು. ಅಂದಹಾಗೆ ನಿಮ್ಮ ಲೇಖನಗಳ ಮಧ್ಯೆ ಹವಿಗನ್ನಡದ ಪದಪ್ರಯೋಗ ಖುಷಿ ಕೊಡುತ್ತಿದೆ.
  ಇಂತಿ ನಿಮ್ಮ “ಅಭಿಮಾಣಿ”

 13. ಆಗಬಹುದು ಸಾರ್ ……..

 14. We Don’t want you to stick in web,
  we want our Bhat’s in News paper,
  Come On , Come on Director, Star maker.

 15. I really liked this simple prose. It’s immutable VB style. Why we like you, you know. For you it’s a maamooli write up but for us it’s unforgettable experience. That’s the magic of your pen. Keep it up

 16. ವಾವ್ ..ಸರ್ ..ಕೆಲವರು ಎಲ್ಲಿದ್ದರೂ ..ಹೇಗಿದ್ದರೂ …ಏನೇ ಆದರೂ .. ಸಂತಸ ತರುತ್ತಾರೆ …:)

 17. stop writing in web site, we want u in news paper or magazine, hope u wil do it very soon

 18. ಅಸಾಧ್ಯವಾದದ್ದು ಯಾವುದಿದೆ ಈ ಜಗದೊಳು

 19. ಈ ಬರಹ ಚುಟುಕಾದರೂ ಮನಮುಟ್ಟುವಂತಿದೆ. ನನಗೆ ಬಹಳ ಇಷ್ಟವಾಯಿತು.

 20. ಸರ್, ನಮಗೆ ನಿಮ್ಮ ಅಂಕಣಗಳೆಂದರೆ ಬಹಳ ಬಹಳ ಇಷ್ಟ. ಅದಕ್ಕಾಗಿ ನಾನು ಕಳೆದ ಏಳು ವರ್ಷಗಳಿಂದ ವಿಜಯ ಕರ್ನಾಟಕ ಪತ್ರಿಕೆ ಓದುತ್ತಿದ್ದೆ. ಈಗ ನಿಮ್ಮ ಬರಹಗಳಿಲ್ಲದೇ ಖಾಲಿ ಖಾಲಿ ಎನಿಸುತ್ತಿದೆ. ಬೇಗ ಬನ್ನಿ, ನಿಮ್ಮ ಬರಹಗಳ ಧಾರೆ ಹರಿಯಲಿ.

 21. sir,….SUPER….we all are expecting the same… innu hosa ankanna daa Utta badasii….

 22. Sir,

  Why don´t you upload directly what you write in paper. It is a better way to save time.

  Regards,
  Nagaraja

 23. i liked it.
  it is your style. As usual.

 24. adella sari pathrekeyalli oodidastu kushi idaralli siguvudillavalla

 25. you can scan and upload what ever you have wrote … I don’t think your handwriting is so bad as mine 🙂

 26. ಅಭಿನಂದನೆಗಳು ಸರ್ , ಬರೆಯಿರಿ ಎಲ್ಲಿ ಬರೆದರೆನಂತೆ ಒಳ್ಳೆಯದನ್ನು ಬರೆಯುತ್ತಿದ್ದೀರಿ …. ಗಣಕಗಳನ್ನೂ ಬಿಡಬೇಡಿ …ಯಾಕೆಂದರೆ ನೀವು ಪತ್ರಕರ್ತರು

 27. NanagaNtoo ee putta baraha odi bahala santosha aaytu. Nimbi barahada Shakku nanage tuba ishtavaaguttade. Ee lekhanada sheershikeye sogasaagide.
  Thank you

 28. Nimma yaava lekhanavanno naanu ee tanaka miss maadilla. Neevu nammannella odalu hachchcidavaru. Namma makkaligoo nimbi barahagalannu odu heluttene. Eega Nervi VK yalli illaddu nanagantoo aragisilollalu aaguttilla. Naanu VK ododanne bittiddene. Bega yaavudaadaroo patrikege Banni, please

 29. Simply superb..we are all waiting Bhat sir

 30. Preetiya V.Bhat,

  Nimma E-Ankana Super aagide. we are not missing you. The problem is my parents are missing you.
  You should even consider the people who are not very much aware of Internet. they are very traditional
  and love to read news paper.
  Morning tea at my home has become “ordinary” taste, as you are not there to give the aroma.
  No morning discussions, no late evening fights, i can say that its kind of boring.
  We need you
  1) To guide us
  2) Keep us motivated
  3) Create Awareness among people
  4) last but not Least “TIMEPASS HARATE” .

  Please come back quickly. its not good to make people wait.

  Regards
  Shankar KV
  9686222886
  shankar.hp@gmail.com
  Bangalore

 31. ..namaste bhatrige,
  nimma baraha munduvarisi. Nurentu maatu athwa vakrathndokthi! keep it up.

 32. bareha chennagide.dhanyavaada

 33. ella barahagarara samasye idu. hosatondu vicharakke basiraaguvudu. adannu jopaanavaagi belesuvudu. dina tumbida balika hettu haguraaguvudu. matte matte hosa vicharagala basirigaagi hudukaata. idontara `bittenedaru bidadi maaye’.

 34. Web VB ok, paper innu start agalilla yaake??

 35. the great bhatre hats of you ?
  i proud of you ?
  raju
  rajudavanagere@gmail.com

 36. v r waiting for your new columns… plz make it soon…

 37. ಪಾಪ ಆ ವಿಪ್ರೋ ಅಭಿಯಂತಕನ ಗತಿ ಏನು? ದಯವಿಟ್ಟು ಅವರಿಗು ಸ್ವಲ್ಪ ಕೆಲಸ ಕೊಡಿ!
  ಅಭಿಪ್ರಾಯ ಬರೆಯುವ ಪುಣ್ಯಾತ್ಮರೆ! ದಯವಿಟ್ಟು ಕನ್ನಡದಲ್ಲಿ ಬರೆಯಿರಿ ಇದರಿಂದಾರು ನಮ್ಮ ಕನ್ನಡದ ಕಂಪು ಅಂತರ್ಜಾಲದಲ್ಲಿ ಹರಡಿ ಆ ಕನ್ನಡ ಕಂಪು ಬೆಳೆಯಲಿ.

 38. I have been watching your website since its inception! Excellent layout and content!! I like your neatness and creativity! Keep writing!

 39. Harsha Hegade has written that he is your “abhimaNi”. I like that kannada very much being a havyaka myself !!!

 40. Sir,
  Inspired by your Richard Branson’s article i have bought two novels of him …
  thank you so much

 41. Typing haage sir, kaaliyuvavaregu Brahma vidye. Kalita mele kapi Vidye.

 42. http://www.outlookindia.com/article.aspx?270213, Dr. Binayak Sen bagegina ee pustaka nimma mundina anuvvadada srakaagali.

 43. ನಿಮಗೆ ಟೈಪ್ ಮಾಡಲು ಕಷ್ಟವಾದರೆ ನನಗೆ ಕಳುಹಿಸಿ, ನಾನು ಟೈಪ್ ಮಾಡಿ ಕೊಡುತ್ತೇನೆ. ನನಗೆ ಕನ್ನಡ ಟೈಪ್ ಮಾಡಲು ತು೦ಬಾ ಇಷ್ಟ

 44. ಸೀದಾ ಕಂಪ್ಯೂಟರ್ ನಲ್ಲಿ ಬರೆಯೋದೆ ಉತ್ತಮ. ಎಷ್ಟೇ ಚಿತ್ತಿಲ್ಲದೆ ಬರೆಯೋ ಅಭ್ಯಾಸ ಇದ್ರೂ ಕೊನೆಗೆ ಅದು ಕಂಪ್ಯೂಟರ್ ಒಳ ಹೋಗಲೆ ಬೇಕು !

 45. actually i wanted ask one thing….one day i was reading mr rb’s blogs in thats kannada.com, his ARGUMENT was like

  one shouLd not stay with his/HER partner if you feel he/she is a wrong person .inspite divorce is better OPTION

  RATHER staying TOgethER.AND IN HIS RECENT EDITION (HI PAPER)THE SAME CONCEPT HE WAS DISCUSSING NOW

  HIS ARGUMENT IS FULL TO ULTA .STATING THAT WHATEVER MAMY BE THE SITUATION OR THE CONSEQUENCES NOT TO

  DISPURSE AND DIVORCE IS NOT THE SOLUTION AND TAKING THE EXAMPLE OF WRITER KUSHWANTH SING…….. i just

  felt he is one nonsense fellow. WHY THIS DUELITY ?IS THIS KIND OF ATTITUDE COMES ONLY TO JOURNOLISTS?

  BECAUSE I HAVE BEEN NOTICED BARKA DATT,rajdeep sardesai and many more. BecaUSE THEY DOESNT EVEN KNOW WHAT

  THEY SPEAK IN PAST AND FOR WHAT PHILOSOPHY THEY STICKED TO. I REALLY DONT UNDERSTAND . SORRY THIS

  COMMENT IS NOT AT ALL RELATED TO YOUR ARTICLE BUT STILL I JUST WANTED TO ASK SOME ONE AND THOUGHT U

  WUD BE BWTTER PERSON

 46. Sir, Since I don’t want to read VK without you, I stopped the subscription. But I am just glancing in Library. As soon as I came to know you are not there, I could not even touch it for a week. Even I myself do not know, I am so much addicted VB’s VK!! I am surprised myself. You believe it or not, this is true.

 47. Sir,nimma ee anubhava sooper aagi ide. Just haage summane browse maadta , ee nimma blog vishya tilidadde, i was on cloud 9.Sir, thanks a lot for creating this. And one more thing sir, nimma haagu PS ravara lekhana galu ilde iro VK patrike, Hrudaya ildiro manushya iddange…just a robot. dhanyavaadagalu..All the best for the blog.

 48. tumbaa great sir……neevu…….abhimaanigala abhimaanakke bele kodtideera….tumba great….

  Naveen
  Doha
  (State of Qatar)

 49. Nimmathaha kriyaasheela vyakthi summaniralu hege saadhya. Gottittu. eenaadaruu maadutteerendu.aadare patrfrikeya mulaka horabanni.

 50. Nimmathaha kriyaasheela vyakthi summaniralu hege saadhya?. Gottittu. Eenaadaruu maadutteerendu. Aadare patrrikeya muulaka horabanni.

 51. bhatre …….

  nimma ee baraha oduttiddare …. nange khaasbath nenapaagutide ……

  neevyaake …….

  illi khaasbath tarahada barahagalannu bareyabaaradu ….

  yaake naanu heege heltidenendare ….. eegina 2 tingala nimma anubhava …. bahusha 1 janmakkaaguvashtu parinaamakaari khaas bath nnu baresabahudeno antaa annistide …..

  en anteeraa ????????????

 52. ಬರೆಯುವುದೇ ಸುಲಭ, ಕುಟ್ಟಿ ಕೆಡೆಯುವುದು ಸುಂದರ ,ನುಡಿಯಲ್ಲಿ ಬರೆದ ಬರಹ ತುಂಗೆಯಲ್ಲಿ ನೀರುಪಾಲಾಗಬಾರದಷ್ಟೆ ………………?

 53. modalu ‘A Remarkable Mother’ anuvada maadi.

 54. HOW MUCH TIME HAS GONE! U R JOINING ‘KP’ I CONT SEA A SINGLE ARTICLE WHY?THIS IS NOT GOOD SIR!!

 55. K SIR AGABAHUDU

 56. Ree Saraa(Sir)…. Neev bareelik hatteerandra naav odaak hadeevi. Neev yenaara bareerla, namgadu Bhattokya (Veda vaakya) iddange…..

  Yours obediently
  Gnanendra

 57. Sir,

  Neevu bareyalebeku………..adaralli yeno visheshathe ede………..

 58. Dear Sir,

  Nanu vijayakarnatakadalli nimma pakka abhimani agidde.
  Nimma ankana ninta mele innu odalu sadhyavilla endu bhavisidde.
  website nodi bahala kushi aytu.shubhashayagalu sir.

 59. Sir, (kannada in english letters) Hosa ankanava!!!!!!!!!!!!!!!!!!!!!!!!!!! khandita kayteve. nanu istu dina kayta iddaddu adakke. Hasadu beku sir namge innu hosadu beku. nimma “anubhava”galanna hancikondare saku, ade dodda ankanavagi horahommadidre matte helhi.

 60. Sir, we people also looking for your new column!!!!!!!!!!!! we want something special, searching for ‘new’. ha ha ha. You just share your experiences with us. within a month you capture more readers.

 61. I am a Typist by profession. Provide me a job opportunity in your office.

 62. battre nima vikanesha helidiri nanna ge bahalakushi aaitu ttavu hosha akana yavaga praranbisutira?

 63. ಖಂಡಿತ ಸರ್. ನಿಮ್ಮ ಅಂಕಣಗಳ ತೋರಣವನ್ನ ನನ್ ಮನದ ಬಾಗಿಲಿಗೆ ಕಟ್ಟಲು ತಯಾರಿರ್ತಿನಿ. ನೀವ್ ಹೀಗೆ ಬರಿತಿರಿ.

 64. It’s Really Inspire to all Future writers, Thanku Sir

 65. sir this is suvarna neevu kannadaprabha seeridagininda nimma artikalls oodalu aguthhila elli pepar siguvudilla netnalli k p open madlu nanage agalilla anthoo kige sikkidiri

 66. nivu madiruva hosa prayatna ista aytu bhatre………

 67. Nanu vruttiyalli upanyasakanaagiddu. Bareyuva havyasa mattinashtide.nanage ankana baraha balu priyavada subject. Dilki bath emba hesarinalli yuvajanara mana seleyuva dhatiyalli bareyabekendu kondiddene. Nimma minchache tilisidare onderadu ankanavannu kalisuva ase IDE. Mechigeyadalli namagondu avakasha kottare navu nimage chiraruni. Haagu adara follow up GE nikatavagi bhaddanagiruttene. Thank you sir.

 68. This web site really has all of the information and facts
  I neesed about this subject and didn’t know who to ask.

 69. This is my first time go to see at here and i am really pleassant to read everthing at alone place.

 70. For most recent information you have to go too see the
  web and on world-wide-web I found this web page as a
  best web page for latest updates.

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.