ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.
ಮುಂದೆ ಓದಿ...ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.
ಮುಂದೆ ಓದಿ...ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.
ಮುಂದೆ ಓದಿ...ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ
ಮುಂದೆ ಓದಿ...ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.
ಮುಂದೆ ಓದಿ...ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.
ಮುಂದೆ ಓದಿ...ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!
ಮುಂದೆ ಓದಿ...ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.
ಮುಂದೆ ಓದಿ...ಭಾನುವಾರ, 24 ಅಕ್ಟೋಬರ್ 2010
ಅಂದು ವಾಜಪೇಯಿ ಹೇಳಿದ್ದನ್ನು ಬಿಜೆಪಿ ನಾಯಕರು ಕೇಳಿಸಿಕೊಳ್ಳಲಿ!
ಕರ್ನಾಟಕದಲ್ಲಿ ಎಲ್ಲರೂ ಕೋಟಿಯ ಮಾತಾಡುತ್ತಿದ್ದಾರೆ!
ಒಂದೆರಡಲ್ಲ, ಇಪ್ಪತ್ತು, ಇಪ್ಪತ್ತೈದು, ಮೂವತ್ತು, ಐವತ್ತು ಕೋಟಿಯ ಮಾತಾಡುತ್ತಿದ್ದಾರೆ. ಇಪ್ಪತ್ತೈದು ಕೋಟಿಗೂ ಐವತ್ತು ಕೋಟಿಗೂ ಇರುವ ವ್ಯತ್ಯಾಸವೆಂದರೆ ನಿಜಕ್ಕೂ ಅಷ್ಟು ಹಣವಾ ಅಥವಾ ಕೇವಲ ಶಬ್ದವಾ ಅಥವಾ ಸೌಂಡಾ ಗೊತ್ತಾಗುತ್ತಿಲ್ಲ. ‘ಕೌನ್ ಬನೇಗಾ ಕರೋಡ್‌ಪತಿ?’ ಕಾರ್ಯಕ್ರಮ ಟಿವಿ ಯಲ್ಲಿ ಪ್ರಸಾರವಾಗುವಾಗಲೂ ಕೋಟಿ ಬಗ್ಗೆ ಜನ ಈ ರೀತಿ ಮಾತಾಡುತ್ತಿರಲಿಲ್ಲ. ಶಾಸಕರ ಖರೀದಿಗೆ ದಲ್ಲಾಳಿಗಳಂತೆ ನೇಮಕಗೊಂಡ ರಾಜಕೀಯ ಧುರೀಣರಂತೂ ಸಲೀಸಾಗಿ ಕೋಟಿಗಳಲ್ಲಿ ವ್ಯವಹಾರ ಕುದುರಿಸುವುದನ್ನು ಸಿ.ಡಿಗಳಲ್ಲಿ ನೋಡಿ ದರೆ ಯಾರಿಗಾದರೂ ದಿಗಿಲಾಗದೇ ಇರದು.
ಕಾಂಗ್ರೆಸ್‌ನ ಶಾಸಕರು ದೇಶ ರಕ್ಷಣೆಗಾಗಿ ಅಥವಾ ಮುಖ್ಯಮಂತ್ರಿ ಅವರ ಮೇಲಿನ ಪ್ರೀತಿಯಿಂದಾಗಿ ಅಥವಾ ಬಿಜೆಪಿ ಮೇಲಿನ ಮಮತೆಯಿಂದಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿಲ್ಲ ಎಂಬ ಸಂಗತಿ ಎಲ್ಲರಿಗೂ ಗೊತ್ತಿದೆ. ಹಣ, ಅಧಿಕಾರ ಹಾಗೂ ಇನ್ನಿತರ ಆಮಿಷಗಳು ಅವರನ್ನು ಹಾಗೆ ಮಾಡಿಸುತ್ತಿವೆ. ಅಪದ್ಧಗಳನ್ನು ನುಡಿಸುತ್ತಿವೆ. ಆಪರೇಷನ್ ಮಾಡುವವರಿಂದ ಹಾಗೂ ಅದಕ್ಕೆ ಒಳಗಾಗುವವರಿಂದ ಹಗಲು ದರೋಡೆ ನಡೆಯುತ್ತಿದೆ ಎಂಬುದು ರಾಜ್ಯದ ಜನರಿಗೆ ಗೊತ್ತು. ಆದರೆ ಯಾರೂ ಚಕಾರ ಎತ್ತುತ್ತಿಲ್ಲ. ಜನರಿಗೂ ರೇಜಿಗೆ ಹುಟ್ಟಿಸಿಬಿಟ್ಟಿದೆ ಈ ವಿದ್ಯಮಾನ. ಪ್ರಾಯಶಃ ರಾಜ್ಯ ರಾಜಕಾರಣ ಇಂಥ ರಸಾತಳವನ್ನು ತಲುಪಿರಲಿಲ್ಲ.
ಇಲ್ಲಿ ಯಾವ ಪಕ್ಷದವರೂ ಸುಭಗರಲ್ಲ. ಈ ಹೇಯ, ನೀಚ ರಾಜಕಾರಣಕ್ಕೆ ಎಲ್ಲರೂ ಸಮಸಮ ಕಾಣಿಕೆಗಳನ್ನು ನೀಡಿದ್ದಾರೆ. ಯಾರಿಗೂ ಮತ್ತೊಬ್ಬರನ್ನು ದೂರುವ ನೈತಿಕ ಹಕ್ಕಿಲ್ಲ. ಹತ್ತು ಮರ್ಡರ್, ಹದಿನೈದು ರೇಪ್ ಮಾಡಿದವರ ಮುಂದೆ ನಾಲ್ಕು ಮರ್ಡರ್, ಹತ್ತು ರೇಪ್ ಮಾಡಿದವನೇ ವಾಸಿ ಕಣ್ರೀ ಎನ್ನುವಂತಾಗಿದೆ.
ಕುಮಾರಸ್ವಾಮಿ, ಸಿದ್ದರಾಮಯ್ಯನವರೇನಾದರೂ ಆಪಾದನೆ ಮಾಡುತ್ತಾ, ಯಡಿಯೂರಪ್ಪನವರು ಅಷ್ಟು ತಿಂದಿದ್ದಾರೆ, ಇಷ್ಟು ನುಂಗಿದ್ದಾರೆ ಅಂದ್ರೆ, ತಕ್ಷಣ ಯಡಿಯೂರಪ್ಪನವರು, ಕುಮಾರಸ್ವಾಮಿ, ಸಿದ್ದರಾಮಯ್ಯನವರು ಅವರ ಅಧಿಕಾರ ಅವಧಿಯಲ್ಲಿ ತಿಂದಿದ್ದು, ನುಂಗಿದ್ದನ್ನೆಲ್ಲ ಹರವಿ ಇಡುತ್ತಾರೆ. ಕುಮಾರಸ್ವಾಮಿ, ಸಿದ್ದರಾಮಯ್ಯ ತಿಂದಿದ್ದೇ ಯಡಿಯೂರಪ್ಪನವರಿಗೆ ಶ್ರೀರಕ್ಷೆಯಾದರೆ, ತಮಗಿಂತ ಇವರು ಮುಂದಿದ್ದಾರಲ್ಲ ಎಂದು ಕುಮಾರಸ್ವಾಮಿ, ಸಿದ್ದರಾಮಯ್ಯನವರಿಗೆ ಕರುಬು. ಇದನ್ನು ಬಿಟ್ಟರೆ ಇಲ್ಲಿ ಬೇರೆ ಯಾವ ಉದ್ದೇಶವಾಗಲಿ, ಸದುದ್ದೇಶವಾಗಲಿ ಇದ್ದಂತಿಲ್ಲ. ಹೀಗಿರುವಾಗ ಯಾರನ್ನಂತ ದೂರೋಣ, ದೂಷಿಸೋಣ?
ಯಾರಿಗೆ ಬೇಡ ಹೇಳಿ, ಅಧಿಕಾರ ಎಲ್ಲರಿಗೂ ಬೇಕು. ಒಪ್ಪಲೇಬೇಕು. ಆದರೆ ಅದನ್ನು ಹಿಡಿಯುವ, ಹಿಡಿದಿಟ್ಟುಕೊಳ್ಳುವ ಮಾರ್ಗ, ಅನುಸರಿಸುವ ವಿಧಾನ, ತಂತ್ರಗಳೂ ಒಪ್ಪುವಂಥದ್ದೇ ಆಗಿರಬೇಕು, ಸರ್ವಮಾನ್ಯವಾಗಿರಬೇಕು. ಆಗಲೇ ಆ ಅಧಿಕಾರಕ್ಕೆ ಒಂದು ಮರ್ಯಾದೆ, ಭೂಷಣ. ಆದರೆ ‘ಆಪರೇಷನ್ ಕಮಲ’ದಂಥ ಶಾಸಕರ ಖರೀದಿಯನ್ನು ಮಾತ್ರ ಒಪ್ಪಲು ಸಾಧ್ಯವೇ ಇಲ್ಲ. ಇದು ಪ್ರಜಾತಂತ್ರಕ್ಕೇ ಮಾರಕ. ಬಿಜೆಪಿಯ ಈ ತಂತ್ರವನ್ನು ನಾಳೆ ಕಾಂಗ್ರೆಸ್, ಜೆಡಿಎಸ್ ಮಾಡಿದರೆ, ಅದನ್ನು ಬಿಜೆಪಿ ಹೇಗೆ ವಿರೋಧಿಸುತ್ತದೆ? ವಿರೋಧಿಸಲು ಯಾವ ನೈತಿಕತೆ ಯಿರುತ್ತದೆ? ಇದರಿಂದ ಇಡೀ ವ್ಯವಸ್ಥೆಯ ಮೇಲೆ ಜನರಿಗೆ ವಿಶ್ವಾಸ ಹೊರಟುಹೋಗುವುದಿಲ್ಲವಾ? ಅಷ್ಟಕ್ಕೂ ಇದರಲ್ಲಿ ಅದೆಂಥ ಆದರ್ಶವಿದೆ? ಅಧಿಕಾರ ಉಳಿಸಿಕೊಳ್ಳಲು ಅನ್ಯ, ಅಕ್ರಮ ಮಾರ್ಗ ಹಿಡಿಯುವುದು ಅದ್ಯಾವ ರಾಜಕೀಯ ಧರ್ಮ? ಅಧಿಕಾರ ಉಳಿಸಿಕೊಳ್ಳಲು ಎಂಥ ಮಾರ್ಗವನ್ನು ಬೇಕಾ ದರೂ ಅನುಸರಿಸಬಹುದು ಎಂದಾದರೆ ನಮ್ಮ ವಾಂಛೆ, ಕಾಮತೃಷೆಗಾಗಿ ಅತ್ಯಾಚಾರ, ಬಲಾತ್ಕಾರ ಮಾಡುವುದು ತಪ್ಪಲ್ಲ ಎಂದು ವಾದಿಸಿದಂತಾಗುವುದಿಲ್ಲವೇ? ಇದನ್ನು ಬಿಜೆಪಿ ಧುರೀಣರು ಒಪ್ಪಿಕೊಳ್ಳಬೇಕು, ಅರ್ಥಮಾಡಿಕೊಳ್ಳಬೇಕು. ಇಲ್ಲದಿದ್ದರೆ ನೈತಿಕತೆ ಆಧಾರದ ಮೇಲೆ ಕಟ್ಟಿದ ಈ ಸಮಾಜಸೌಧದ ಅಡಿಪಾಯ ಛಿದ್ರವಾಗಲು ಆಸ್ಪದ ನೀಡಿದಂತೆ. ಕೊನೆಗೆ ರೋಗಿಯೇ ಸತ್ತ ಮೇಲೆ ‘ಆಪರೇಷನ್’ ಮಾಡಿ ಪ್ರಯೋಜನವೇನು?
ಅಂದು ಬಿಜೆಪಿಯ ಜ್ಯೇಷ್ಠ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ ಮಾತು ನೆನಪಾಗುತ್ತಿದೆ. ಬಿಜೆಪಿ ಮಂದಿ ಅದನ್ನು ಕೇಳಿಸಿಕೊಳ್ಳಬೇಕು. ಇಂದು ಕರ್ನಾಟಕದಲ್ಲಿರುವ ವಾತಾವರಣ ಅಂದು ದಿಲ್ಲಿಯಲ್ಲಿ ಇತ್ತು. ವಾಜಪೇಯಿ ವಿಶ್ವಾಸಮತ ಕೋರಿದ್ದರು. ನಂಬರ್‌ಗೇಮ್ ನಡೆದಿತ್ತು. ಇಂಥ ಸಂದರ್ಭದಲ್ಲಿ ಸಂಸತ್ಸದಸ್ಯರನ್ನು ಖರೀದಿಸಬಹುದು, ಹೇಗೆ ಖರೀದಿಸಬಹುದು ಎಂಬುದಕ್ಕೆ ಪ್ರಧಾನಿಯಾಗಿದ್ದ ಪಿ.ವಿ. ನರಸಿಂಹರಾವ್ ಹಾಕಿಕೊಟ್ಟ ‘ಆದರ್ಶ’ಗಳು ಕಣ್ಣ ಮುಂದಿದ್ದವು. ಸೂಟ್‌ಕೇಸಿಗೆ ತಮ್ಮನ್ನು ಮಾರಿಕೊಳ್ಳುವ ಸಂಸದರು ಸಿದ್ಧರಾಗಿ ಕುಳಿತಿದ್ದರು. ಅಂದು ವಾಜಪೇಯಿ ಮನಸ್ಸು ಮಾಡಿದ್ದರೆ ಪ್ರತಿಪಕ್ಷಗಳ ಹತ್ತಿಪ್ಪತ್ತು ಸಂಸದರನ್ನು ಸೆಳೆಯುವುದು ದೊಡ್ಡ ಕೆಲಸವಾಗಿರಲಿಲ್ಲ. ಆದರೆ ವಾಜಪೇಯಿ ಅಂಥ ಹೇಸಿಗೆ ಕೆಲಸಕ್ಕೆ ಕೈಹಾಕಲಿಲ್ಲ. ಪರಿಣಾಮ, ಒಂದು ಮತದಿಂದ ವಾಜಪೇಯಿ ಸರಕಾರಕ್ಕೆ ಸೋಲುಂಟಾಯಿತು. ಅವರು ಅಧಿಕಾರ ಕಳೆದುಕೊಂಡರು.
ಅದಕ್ಕೂ ಮುನ್ನ ಅವರು ಸಂಸತ್ತಿನಲ್ಲಿ ಹೇಳಿದ ಮಾತು ಈಗಲೂ ಗುಂಯ್‌ಗುಡುತ್ತಿದೆ. (ಅವರ ಧಾಟಿ, ಭಂಗಿಯಲ್ಲೇ ಓದಿಕೊಳ್ಳಿ.) ‘ಬಾಜಾರ್ ಮೇ ಬಿಕನೆ ಕೆ ಲಿಯೇ ಬಹುತ್ ಸಾರೆ ಚೀಜ್ ಥಿ, ಬಾಜಾರ್ ಮೇ ದಲಾಲ್ ಭೀ ಬಹುತ್ ಥೆ, ಬಿಕನೆ ಕೆ ಲಿಯೇ ಮಾಲ್ ಭೀ ಬಹುತ್ ಥಾ, ಮಗರ್ ಖರೀದ್‌ನೆ ಕೆ ಲಿಯೇ ಖರೀದ್‌ದಾರ್ ನಹೀ ಥಾ.’ (ಬಜಾರ್‌ನಲ್ಲಿ ಮಾರಾಟಕ್ಕೆ ಹಲವಾರು ವಸ್ತುಗಳಿದ್ದವು. ಬಜಾರ್‌ನಲ್ಲಿ ದಲ್ಲಾಳಿಗಳೂ ಬಹಳ ಇದ್ದರು. ಮಾರಿಕೊಳ್ಳಲು ಮಾಲುಗಳೂ ಬಹಳ ಇದ್ದವು. ಆದರೆ ಅವನ್ನೆಲ್ಲ ಖರೀದಿಸಲು ಖರೀದಿದಾರನೇ ಇರಲಿಲ್ಲ.)
ಎಂಥಾ ಮಾತು!!
ಯಡಿಯೂರಪ್ಪ ಹಾಗೂ ಈಶ್ವರಪ್ಪನವರಿಗೆ ಈ ಹಂತದಲ್ಲಿ ವಾಜಪೇಯಿ ಹಾಗೂ ಅವರ ಮಾತು ನೆನಪಾಗಬೇಕು. ‘ಆಪರೇಷನ್ ಕಮಲ’ವನ್ನು ಮುಂದುವರಿಸಿದರೆ ಮುಂದೊಂದು ದಿನ ‘ಕಮಲಕ್ಕೇ ಆಪರೇಷನ್’ ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು. ಈಗ ಆಪರೇಷನ್ ಕಮಲ ನಡೆಸದಿದ್ದರೆ ಸರಕಾರ ಬಿದ್ದುಹೋಗಿ, ಅಧಿಕಾರ ಹೋಗಬಹುದು ಎಂದಾದರೆ ಹೋಗಲಿ ಬಿಡಿ. ಮಾನ, ಮರ್ಯಾದೆ, ಆದರ್ಶ ಹಾಗೂ ನೈತಿಕತೆ ಮುಂದೆ ಅಧಿಕಾರ ಯಾವ ಮರದ ತೊಪ್ಪಲು? ಆದರ್ಶಗಳೇ ಇಲ್ಲದ ಅಧಿಕಾರ ಇದ್ದರೆಷ್ಟು, ಬಿಟ್ಟರೆಷ್ಟು? ಆದ್ದರಿಂದ ಯಡಿಯೂರಪ್ಪನವರೇ, ನೀವು ಬಲಿಕೊಡುವುದಿದ್ದರೆ ಸರಕಾರವನ್ನು ಬಲಿ ಕೊಡಿ, ಹೊರತು ಆದರ್ಶಗಳನ್ನಲ್ಲ. ಇನ್ನೂ ನಿಮ್ಮ ಪರವಾಗಿ ಇರುವ ರಾಜ್ಯದ ಜನತೆಗೆ ನಿರಾಸೆ ಮಾಡಬೇಡಿ. ಈಗ ಹೋದ ಅಧಿಕಾರ ಹುಡುಕಿಕೊಂಡು ನಿಮ್ಮ ಬಳಿಗೆ ಬರುತ್ತದೆ. ತ್ಯಾಗದಿಂದಲೂ ಕೈಬಿಟ್ಟಿದ್ದನ್ನು ಪುನಃ ಪಡೆಯಬಹುದು.
ಬಿಜೆಪಿ ನಾಯಕರಿಗೆ ಮತ್ತೆ ಮತ್ತೆ ವಾಜಪೇಯಿ ಮಾತು ನೆನಪಾದರೆ ಸಾಕು. ಅವರನ್ನು ಬರಿ ಬಾವುಟ, ಹೋರ್ಡಿಂಗ್, ಜಾಹೀರಾತುಗಳಿಗೆ ಸೀಮಿತಗೊಳಿಸದೇ, ನಮ್ಮ ಕಣ್ಣೆದುರಿಗೇ ಇರುವ ನಾಯಕನ ಮಾತು ಪ್ರೇರಣೆಯಾಗಲಿ.
ನಂಬುವುದು ಬೇರೆ, ನಂಬಿದಂತೆ ನಡೆಯುವುದು ಬೇರೆ
ಕಮ್ಯುನಿಸ್ಟ್ ಸಿದ್ಧಾಂತವನ್ನು ಪ್ರಬಲವಾಗಿ ಪ್ರತಿಪಾದಿಸುತ್ತಿದ್ದ ಬಡ ನಾಯಕರೊಬ್ಬರಿದ್ದರು. ಪ್ರತಿಷ್ಠಿತ ಸುದ್ದಿವಾಹಿನಿಯ ವರದಿಗಾರರೊಬ್ಬರು ಅವರ ಸಂದರ್ಶನ ನಡೆಸಿದರು.
ವರದಿಗಾರ ಕಮ್ಯುನಿಸ್ಟ್ ನಾಯಕರನ್ನು ಮೊದಲಿಗೆ “ನೀವು ಕಮ್ಯುನಿಸಂ ಸಿದ್ಧಾಂತವನ್ನು ಅಚಲವಾಗಿ ನಂಬುತ್ತೀರಾ ಅಥವಾ ಸುಮ್ಮನೆ ನಂಬಿದಂತೆ ತೋರಿಸಿ ಕೊಳ್ಳುತ್ತಿದ್ದೀರಾ?” ಎಂದು ಕೇಳಿದ.
ಆಗ ಆ ನಾಯಕ “ಹೌದು, ಖಂಡಿತವಾಗಿಯೂ ಈ ಸಿದ್ಧಾಂತವನ್ನು ನಾನು ನಂಬುತ್ತೇನೆ” ಎಂದು ಉತ್ತರಿಸಿದರು.
ಆಗ ವರದಿಗಾರ ಮತ್ತೊಂದು ಪ್ರಶ್ನೆ ಕೇಳಿದ; “ನೀವು ಎರಡು ಕಾರುಗಳನ್ನು ಹೊಂದಿದ್ದರೆ, ಒಂದು ಕಾರನ್ನು ಕಾರಿಲ್ಲದವರಿಗೆ ದಾನವಾಗಿ ನೀಡುತ್ತೀರಾ?”
ಆಗ ನಾಯಕ; “ಹೌದು, ಖಂಡಿತವಾಗಿಯೂ ನೀಡುತ್ತೇನೆ” ಎಂದರು.
“ನಿಮಗೆ ಎರಡು ಮನೆಗಳಿದ್ದರೆ ಒಂದು ಮನೆಯನ್ನು ಮನೆ ಇಲ್ಲದೆ, ಬೀದಿ ಬದಿ ಯಲ್ಲಿ ಬದುಕುತ್ತಿದ್ದವರಿಗೆ ನೀಡುತ್ತೀರಾ?” ಎಂದು ಮತ್ತೆ ವರದಿಗಾರ ಪ್ರಶ್ನಿಸಿದ.
ಆಗಲೂ ಕಮ್ಯುನಿಸ್ಟ್ ನಾಯಕನ ಉತ್ತರ ಅದೇ ಆಗಿತ್ತು; ‘ಹೌದು, ಖಂಡಿತವಾಗಿಯೂ ಕೊಡುತ್ತೇನೆ”.
ವರದಿಗಾರ ಮತ್ತೊಂದು ಪ್ರಶ್ನೆ ಕೇಳಿದ; “ನಿಮ್ಮ ಮನೆಯಲ್ಲಿ ಎರಡು ಕೋಳಿಗಳಿದ್ದರೆ ಒಂದು ಕೊಳಿಯನ್ನು ಕೋಳಿಸಾಕದೇ ಇದ್ದವನಿಗೆ ನೀಡುತ್ತೀರಾ?” ಪ್ರಶ್ನೆಗೆ ಕಮ್ಯುನಿಸ್ಟ ನಾಯಕ “ಖಂಡಿತವಾಗಿಯೂ ಇಲ್ಲ” ಎಂದು ಉತ್ತರಿಸಿದ.
ನಾಯಕರ ಮಾತು ಕೇಳಿ ವರದಿಗಾರ ಬೆಚ್ಚಿಬಿದ್ದಿದ್ದ. “ನೀವು ಇದುವರೆಗೂ ನಾನು ಕೇಳಿದ ಪ್ರಶ್ನೆಗಳಿಗೆ “ಹೌದು, ಹೌದು ಕೊಡುತ್ತೇನೆ” ಎಂದು ಉತ್ತರಿಸುತ್ತಾ ಬಂದಿದ್ದೀರಿ. ಈಗ ಇದ್ದಕ್ಕಿದ್ದ ಹಾಗೆಯೇ, ಕೊಡುವುದಿಲ್ಲ ಎಂದು ಹೇಳಲು ಕಾರಣವೇನು?” ಎಂದು ಕೇಳಿಯೇಬಿಟ್ಟ.
ಆಗ ಕಮ್ಯುನಿಸ್ಟ್ ನಾಯಕ ಉತ್ತರಿಸಿದ್ದೇನು ಗೊತ್ತೇ?, “ನನ್ನ ಬಳಿ ಎರಡು ಕಾರುಗಳಿಲ್ಲ, ಎರಡು ಮನೆಗಳಿಲ್ಲ ಆದರೆ, ಎರಡು ಕೋಳಿಗಳಂತೂ ಇವೆ!”
ಇತ್ತೀಚೆಗೆ ಬಿಡುಗಡೆಯಾದ ಜೋಜಿವಲ್ಲಿ ಬರೆದ ‘೧೦೧: ಇವು ನಿಮ್ಮ ಜೀವನದಲ್ಲಿ ನಿಶ್ಚಿತವಾಗಿ ಪರಿವರ್ತನೆ ತರುತ್ತವೆ’ ಎಂಬ ಪುಸ್ತಕದಲ್ಲಿನ ಒಂದು ಸಣ್ಣಪ್ರಸಂಗ. ಇದು ಕೇವಲ ಕಮ್ಯುನಿಸ್ಟ್ ನಾಯಕರಿಗಷ್ಟೇ ಅನ್ವಯವಾಗುವುದಿಲ್ಲ. ಅವರು ನಿಮಿತ್ತ ಮಾತ್ರ. ಅವರ ಜಾಗದಲ್ಲಿ ಯಾವ ನಾಯಕನನ್ನು ಇಟ್ಟರೂ ಆದೀತು.
ಮದುವೆ
ಡಿಸೆಂಬರ್‌ನ ಕೊರೆಯುವ ಚಳಿಯಲ್ಲಿ ಗಂಡ, ಹೆಂಡತಿ ಬೆಂಕಿಯ ಮುಂದೆ ಎದುರು-ಬದರು ಕುಳಿತು ಚಳಿ ಕಾಯಿಸಿಕೊಳ್ಳುತ್ತಿದ್ದರು. ಅವರ ನಾಯಿ ಮತ್ತು ಬೆಕ್ಕೂ ಕೂಡ ಅಲ್ಲಿಯೇ ಬೆಂಕಿಯನ್ನೇ ನೋಡುತ್ತ ಸುಮ್ಮನೆ ಮಲಗಿದ್ದವು. “ನೋಡು, ನಮ್ಮ ನಾಯಿ ಮತ್ತು ಬೆಕ್ಕು ಕೂಡ ಒಟ್ಟಿಗೇ ಎಷ್ಟು ಚೆನ್ನಾಗಿ, ಶಾಂತಿಯಿಂದ ಇವೆ. ನಾವೂ ಹೀಗೆ ಇರಬಹುದಲ್ಲವೇ” ಎಂದು ಹೆಂಡತಿ ಗಂಡನಿಗೆ ಕೇಳಿದಳು.
“ಅದೇನೋ ಸರಿಯೇ, ಆದರೆ ನೀನು ಅವೆರಡನ್ನೂ ಒಟ್ಟಿಗೇ ಹಗ್ಗದಲ್ಲಿ ಕಟ್ಟಿಹಾಕು, ಆಗ ಏನಾಗುತ್ತೆ ನೋಡು” ಎಂದು ಗಂಡ ಉತ್ತರಿಸಿದ.
Your means of explaining all in this post is genuinely pleasant, every one be capable
of easily be aware of it, Thanks a lot.