ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಕಣ್ಣೆದುರಿಗಿನ ಸೋಲನ್ನು ಹೇಗೆ ಎದುರಿಸಬೇಕು ?

ಡೇಲಿ ಡೋಸ್ – ಇದು ಪ್ರತಿದಿನದ ಅಂಕಣ

CHESS WC-ANANDಸೋಲು ನಮ್ಮ ಮುಂದೆ ನಿಂತು ಅಣಕಿಸುತ್ತಿರುತ್ತದೆ. ಇನ್ನು ಕೆಲವೇ ಕ್ಷಣಗಳಲ್ಲಿ ಸೋಲುವುದು ಗ್ಯಾರಂಟಿಯೆಂಬುದು ಮನವರಿಕೆಯಾಗಿ ಹೋಗಿರುತ್ತದೆ. ಅಂಥ ಸಂದರ್ಭದಲ್ಲಿ ಸೋಲನ್ನು ಎದುರಿಸುವುದು, ಸೋಲಿಗೆ ಮುಖಾಮುಖಿಯಾಗುವುದು ನಿಜಕ್ಕೂ ಸವಾಲು. ಇಂಥ ಕ್ಷಣದಲ್ಲಿ ನಾವು ಹೇಗೆ ವರ್ತಿಸುತ್ತೇವೆ ಎಂಬುದು ನಾವು ಸೋಲನ್ನು ಹೇಗೆ ನಿಭಾಯಿಸುತ್ತೇವೆ ಎಂಬುದನ್ನು ನಿರ್ಧರಿಸುತ್ತದೆ. ಕೆಲವೊಮ್ಮೆ ಸೋಲಿಗಿಂತ ಆ ಸಂದರ್ಭದಲ್ಲಿ ನಮ್ಮ ಪ್ರತಿಕ್ರಿಯೆ, ವರ್ತನೆಯೇ ಬಹಳ ಮುಖ್ಯವಾಗುತ್ತದೆ.

ನನಗೆ ಈ ಸಂದರ್ಭದಲ್ಲಿ ನೆನಪಾಗುವವನು ಖ್ಯಾತ ಚೆಸ್ ಆಟಗಾರ ವಿಶ್ವನಾಥನ್ ಆನಂದ. ಇತ್ತೀಚೆಗೆ ನಾನು ಪತ್ರಿಕೆಯೊಂದರಲ್ಲಿ ಅವರ ಸಂದರ್ಶನ ಓದುತ್ತಿದ್ದೆ. ಅವರಿಗೆ ಮೂರೇ ಮೂರು ಪ್ರಶ್ನೆಗಳನ್ನು ಕೇಳಲಾಗಿತ್ತು. ನಿಮ್ಮ ಜೀವನದ ಅತ್ಯಂತ ಕಷ್ಟದಾಯಕವಾದ ಕ್ಷಣಗಳು ಯಾವುವು? ಅದನ್ನು ನೀವು ಹೇಗೆ ನಿಭಾಯಿಸಿದಿರಿ? ಹಾಗೂ ಆ ಘಟನೆಯಿಂದ ನೀವು ಕಲಿತ ಪಾಠವೇನು? ಈ ಮೂರು ಪ್ರಶ್ನೆಗಳಿಗೆ ವಿಶ್ವನಾಥನ್ ಆನಂದ ಹೇಗೆ ಉತ್ತರಿಸಬಹುದು ಎಂಬ ಕುತೂಹಲವಿತ್ತು.

ಮೊದಲನೆಯ ಪ್ರಶ್ನೆಗೆ ಅವರು ಹೇಳಿದ್ದು: ‘ಇತ್ತೀಚೆಗೆ ಚೆನ್ನೈಯಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಪಂದ್ಯದಲ್ಲಿ ಒಂಭತ್ತನೇ ಗೇಮ್‌ನಲ್ಲಿ ಮ್ಯಾಗ್ನಸ್ ಕಾರ್ಲಸನ್ ವಿರುದ್ಧ ನಾನು ಸೋಲುವುದು ಖಚಿತವಾಗಿತ್ತು. ಇಷ್ಟು ದಿನಗಳವರೆಗೆ ನಾನು ಧರಿಸಿದ್ದ ವಿಶ್ವ ಚಾಂಪಿಯನ್ ಪಟ್ಟ ನನ್ನ ಕೈ ತಪ್ಪಿ ಹೋಗುತ್ತಿದೆಯೆಂಬುದು ನನಗೆ ಮನವರಿಕೆಯಾಯಿತು. ಆ ಚಾಂಪಿಯನ್ ಪಟ್ಟಕ್ಕೆ ಇಂದೇ ಕೊನೆಯ ದಿನ ಎಂಬುದು ಸಹ ಖಾತ್ರಿಯಾಯಿತು.’

ಎರಡನೆಯ ಪ್ರಶ್ನೆಗೆ ಅವರು ಹೇಳಿದ್ದು: ‘ನಾನು ಒಂದು ರೋಚಕ ಪಂದ್ಯವಾಡಿದೆ ಎಂಬ ಬಗ್ಗೆ ನನಗೆ ಅತೀವ ಹೆಮ್ಮೆ, ಅಭಿಮಾನವಿದೆ. ನಾನು ಈ ಪಂದ್ಯದಲ್ಲಿ ಸೋತಿರಬಹುದು, ಪರವಾಗಿಲ್ಲ, ಆದರೆ ನನ್ನ ಸ್ಟೈಲಿನಲ್ಲಿ, ಎಂದಿನ ಸಹಜ ರೀತಿಯಲ್ಲಿ ಆಡಿದೆ ಎಂಬ ಬಗ್ಗೆ ಸಮಾಧಾನವಿದೆ.’

ಮೂರನೆಯ ಪ್ರಶ್ನೆಗೆ ಅವರು ಹೇಳಿದ್ದು: ‘ಜೀವನದಲ್ಲಿ ಸವಾಲುಗಳು ಎದುರಾದಾಗ ಅದನ್ನು ಸಹಜವಾಗಿ ಸ್ವೀಕರಿಸುತ್ತಾ ಮಜಾ ಅನುಭವಿಸಬೇಕು ಎಂಬುದನ್ನು ಇದರಿಂದ ಕಲಿತೆ. ಚೆಸ್ ಆಟದಲ್ಲಿ ನೀವು ಒಂದು ತಪ್ಪನ್ನು ಮಾಡುತ್ತೀರಿ. ಆನಂತರ ಮತ್ತೊಂದನ್ನು ಮಾಡುತ್ತೀರಿ. ಮೊದಲ ತಪ್ಪನ್ನು ಸರಿಪಡಿಸಲು ಹೋಗಿ ಇನ್ನೊಂದು ತಪ್ಪೆಸಗುತ್ತೀರಿ. ಕೊನೆಗೆ ಆತ್ಮಹತ್ಯೆಯೊಂದೇ ದಾರಿ ಎಂಬ ನಿರ್ಧಾರಕ್ಕೆ ಬರುತ್ತೀರಿ. ಆದರೆ ನಾನು ಆ ದಿನ ಒಂದು ನಿರ್ಧಾರಕ್ಕೆ ಬಂದೆ. ನಾನು ಒಂದು ವೇಳೆ ಸೋತರೂ, ಜನ ನನ್ನನ್ನು ಐದು ಬಾರಿ ವಿಶ್ವ ಚಾಂಪಿಯನ್ ಆಗಿದ್ದವ ಎಂಬುದನ್ನು ನೆನಪಿಟ್ಟುಕೊಳ್ಳುತ್ತಾರೆ. ಇಂಥ ಸಾಧನೆ ಮಾಡಿದವರು ಕೆಲವೇ ಕೆಲವು ಮಂದಿ. ಹೀಗಾಗಿ ಈ ಸೋಲನ್ನು ಬಹಳ ಗಂಭೀರವಾಗಿ ಪರಿಗಣಿಸಬಾರದು, ಆದರೆ ಅದರಿಂದ ಪಾಠ ಕಲಿಯಬೇಕೆಂದು ನಿರ್ಧರಿಸಿದೆ. Sometimes life is a bitch. But you have to put a Ctrl X and start again.

ಎಂಥ ಸರಿಯಾದ, ಪ್ರಬುದ್ಧ ಯೋಚನೆ, ನಿರ್ಧಾರ! ಇದನ್ನು ನಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬಹುದು.

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.