ಅಂಕಣ: ‘ವಕ್ರತುಂಡೋಕ್ತಿ’
-
ವಕ್ರತುಂಡೋಕ್ತಿ
ಹುಡುಗರೇ ಡ್ರೆಸ್ ವಿಷಯದಲ್ಲಿ ಹೆಚ್ಚು ಜಾಗ್ರತೆ ವಹಿಸಬೇಕು. ಸಂದರ್ಶನಕ್ಕೆ ಹೋದಾಗ ಶರ್ಟಿನ ಗುಂಡಿಗಳು ತೆಗೆದುಕೊಂಡಿದ್ದರೆ ಅಶಿಸ್ತು ಎಂದು ಪರಿಗಣಿಸಲಾಗುತ್ತದೆ. ಹುಡುಗಿಗಾದರೆ ಅದೇ ಕಾರಣಕ್ಕೆ ಕೆಲಸ ಸಿಕ್ಕೀತು.
-
ವಕ್ರತುಂಡೋಕ್ತಿ – 09 ಏಪ್ರಿಲ್ 2013
ಪ್ರೀತಿಯನ್ನು ಹಣದಿಂದ ಕೊಳ್ಳಲಾಗುವುದಿಲ್ಲ ನಿಜ. ಆದರೆ ಅದಕ್ಕೆ ಬೆಲೆಯನ್ನಂತೂ ತೆರಬೇಕಾಗುತ್ತದೆ.
-
ವಕ್ರತುಂಡೋಕ್ತಿ – 16 ಮಾರ್ಚ್ 2013
ಬಿಜಿನೆಸ್ ಮೀಟಿಂಗ್ಗಳ ಒಂದು ಲಾಭವೇನೆಂದರೆ, ಆ ಮೀಟಿಂಗ್ನಲ್ಲಿ ಭಾಗವಹಿಸಿದವರು ಇಲ್ಲದಿದ್ದರೂ ಕಂಪನಿ ಚೆನ್ನಾಗಿ ನಡೆಯುತ್ತದೆಂಬುದು ಗೊತ್ತಾಗುತ್ತದೆ.
-
ವಕ್ರತುಂಡೋಕ್ತಿ – 04 ಮಾರ್ಚ್ 2013
ಎಲ್ಲರಿಗೂ ಒಬ್ಬ ಮೂರ್ಖ ಗೆಳೆಯನಿರುತ್ತಾನೆ. ನಿಮಗೆ ಅಂತಹ ಗೆಳೆಯನಿಲ್ಲವೆಂದರೆ, ಆ ‘ಮೂರ್ಖ’ ನೀವೇ ಆಗಿರಬಹುದು.
-
ವಕ್ರತುಂಡೋಕ್ತಿ – 03 ಫೆಬ್ರವರಿ 2013
ಕುಡಿತ ಕಡಿಮೆ ಮಾಡುವುದಕ್ಕೆ ಉತ್ತಮ ಮಾರ್ಗವೆಂದರೆ ಮದುವೆಗೆ ಮುಂಚೆ ದುಃಖವಾದಾಗಷ್ಟೇ ಕುಡಿಯಬೇಕು. ಮದುವೆ ನಂತರ ಖುಷಿಯಾದಾಗಲಷ್ಟೇ ಕುಡಿಯಬೇಕು.
-
ವಕ್ರತುಂಡೋಕ್ತಿ – 31 ಜನೆವರಿ 2013
‘ನೀನು ನನ್ನ ಬೆಸ್ಟ್ ಫ್ರೆಂಡ್’ ಎಂದು ಗೆಳೆಯನಿಗೆ ಹೇಳಬಹುದು, ಆದರೆ ‘ನೀನು ನನ್ನ ಬೆಸ್ಟ್ ವೈಫ್’ ಅಂತ ಹೆಂಡತಿಗೆ ಹೇಳದಿರಿ!
-
ವಕ್ರತುಂಡೋಕ್ತಿ – 28 ಜನೆವರಿ 2013
ಯಾರಿಗೂ ಬಹಳ ಹೊತ್ತು ಯೋಚನೆ ಮಾಡಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಬಹಳ ಹೊತ್ತು ಯೋಚನೆ ಮಾಡಲಾರಂಭಿಸುತ್ತಿದ್ದಂತೆ ತಾನು ಯಾವುದೋ ನಿರ್ಜನ ಪ್ರದೇಶಕ್ಕೆ ಬಂದಿದ್ದೇನೆ ಎಂದು ಅನಿಸಲಾರಂಭಿಸುತ್ತದೆ.
-
ವಕ್ರತುಂಡೋಕ್ತಿ – 18 ಜನೆವರಿ 2013
ನಮಗೆ ಇಷ್ಟವಾಗದ ಕೆಲಸಗಳ ಪಟ್ಟಿಗೆ ‘ರೆಸ್ಯೂಮ್್’ ಎಂದು ಕರೆಯಬಹುದು.
-
ವಕ್ರತುಂಡೋಕ್ತಿ – 16 ಜನೆವರಿ 2013
ನಮ್ಮನ್ನೇ ನಗೆಗೀಡು ಮಾಡಿಕೊಂಡರೆ ಆಯಸ್ಸು ವೃದ್ಧಿಸುವುದಂತೆ. ಹೆಚ್ಚು ಆಯಸ್ಸು ಬೇಡದವರು ಹೆಂಡತಿ ಮೇಲೆ ಜೋಕ್ ಮಾಡುವ ಸಾಹಸಕ್ಕೆ ಕೈಹಾಕಬಹುದು.
-
ವಕ್ರತುಂಡೋಕ್ತಿ – 15 ಜನೆವರಿ 2013
ದೇವರು ಗಂಡಸರಿಗಿಂತ ಮೊದಲು ಹೆಂಗಸರನ್ನು ಹುಟ್ಟಿಸಿದ. ಕಾರಣ ಫೈನಲ್ ಕಾಪಿಗಿಂತ ಮೊದಲು ಕಚ್ಚಾ ಕಾಪಿ ತೆಗೆಯುತ್ತಾರಲ್ಲ!
