ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಅಂಕಣ: ‘ತಪ್ಪಾಯ್ತು ತಿದ್ಕೋತೀವಿ’

 • ವ್ಯಂಗ್ಯಚಿತ್ರವು ವ್ಯಕ್ತಿಯ ತೇಜೋವಧೆ ಮಾಡುವ ಉದ್ದೇಶವನ್ನು ಹೊಂದಿರುವುದಿಲ್ಲ

  ತಪ್ಪಾಯ್ತು ತಿದ್ಕೋತೀವಿ ಈ ಅಂಕಣದಲ್ಲಿ ಪ್ರಕಟವಾದ ಹರಳಹಳ್ಳಿ ಪುಟ್ಟರಾಜು ಅವರ ಪತ್ರಕ್ಕೆ ಓದುಗರಿಂದ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಬಹುತೇಕರು ಪ್ರತಾಪ್ ಸಿಂಹ ಹಾಗೂ ಪತ್ರಿಕೆಯ ನಿಲುವು ಮತ್ತು ವಿನ್ಯಾಸವನ್ನು ಸಮರ್ಥಿಸಿದ್ದಾರೆ. ಓದುಗರ ಪ್ರೀತಿ, ಅಭಿಮಾನಕ್ಕೆ ನಾವು ಋಣಿ. ಅದರಲ್ಲಿ ಆಯ್ದ ಪತ್ರವನ್ನು ಮಾತ್ರ ಇಲ್ಲಿ ನೀಡುತ್ತಿದ್ದೇನೆ. ಮಂಡ್ಯದಿಂದ ಕೊಕ್ಕಡ ವೆಂಕಟ್ರಮಣ ಭಟ್ ಅವರು ಬರೆಯುತ್ತಾರೆ- ‘ಮಿತ್ರ ಹರಳಹಳ್ಳಿ ಪುಟ್ಟರಾಜು ಅವರು ಚೆನ್ನಾಗಿ ಬರೆಯುತ್ತಾರೆ. ಸಂತೋಷ. ಆದರೆ ಬರೆದುದೆಲ್ಲವೂ ಚೆನ್ನವೆಂದು ಹೇಗೆ ಒಪ್ಪೋಣ. ನಮ್ಮ ಇಂದಿನ ಪ್ರಧಾನಿಯವರ ಮುಖವನ್ನು […]

 • ನನಗಂತೂ ಗೊತ್ತಿಲ್ಲ, ಸರಿಯಾದ ಮಾಹಿತಿ ಕೊಡುವಿರಾ?

  ತಪ್ಪಾಯ್ತು ತಿದ್ಕೋತೀವಿ ಶ್ರೀವತ್ಸ ಕುರುಡಿ ಮಿಂಚಂಚೆ ಕಳುಹಿಸಿದ್ದಾರೆ. ಜ.2ರ ಕ್ರೀಡಾ ಪುಟದ ಸುದ್ದಿಯ ತಪ್ಪನ್ನು ಗಮನಕ್ಕೆ ತಂದಿದ್ದಾರೆ. ‘ಪುಟ 15ರಲ್ಲಿ ‘ಶುಮಾಕರ್ ಆರೋಗ್ಯ ಚೇತರಿಕೆ, ಅಪಾಯದಿಂದ ಪಾರಾಗಿಲ್ಲ’ ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟವಾಗಿದೆ. ಸುದ್ದಿಯ ಕೊನೆಯಲ್ಲಿ ಒಂದು ಹಾಸ್ಯದ ತುಣುಕು ಸೇರಿಕೊಂಡಿದೆ. ‘ಅವರ ವಯಸ್ಸು ಹಾಗೂ ದೈಹಿಕ ಪರಿಸ್ಥಿತಿ ಅವರಿಗೆ ಬೆಂಬಲವಾಗಿದೆ. ಅವರ ಸ್ಥಿತಿ ಮತ್ತಷ್ಟು ಚೇತರಿಕೆ ಕಾಣಲು ಕೋಮಾದಲ್ಲಿ ಇರಿಸಲಾಗಿದೆ’ ಎಂದು ಪ್ರಕಟವಾಗಿದೆ. ಯಾವುದೇ ವ್ಯಕ್ತಿಯ ಆರೋಗ್ಯ ಚೇತರಿಕೆಯಾಗಲು ಕೋಮಾದಲ್ಲಿ ಇಡುತ್ತಾರೆಯೇ, ಹಾಗಿದ್ದರೇ ಅದು ಹೇಗೆ?’ […]

 • ‘ಗೋವಿಂದಾ! ಗೋವಿಂದಾ! ಗೋವಿಂದ!!’

  ತಪ್ಪಾಯ್ತು ತಿದ್ಕೋತೀವಿ ಮೈಸೂರಿನ ಕೃಷ್ಣಮೂರ್ತಿ ಪುರಂನಿಂದ ಎಸ್.ರಾಘವೇಂದ್ರ ಮಿಂಚಂಚೆ ಕಳುಹಿಸಿದ್ದಾರೆ. ‘ನಮ್ಮ ಮೆಚ್ಚಿನ ‘ಕನ್ನಡಪ್ರಭ’ ಓದುಗರ ಪಾಲಿಗೆ ‘ಒಳಗೊಂದು ಹೊರಗೊಂದು’ ನೀತಿ ಅನುಸರಿಸುತ್ತೆ ಅಂತ ಕನಸು ಮನಸಲ್ಲೂ ಎಣಿಸಿರಲಿಲ್ಲ! ಇದಕ್ಕೆ ನಿದರ್ಶನ ಜನವರಿ 2ರ ಸಂಚಿಕೆ. ಸಿದ್ದರಾಮಯ್ಯ ಸಂಪುಟಕ್ಕೆ ಹೊಸದಾಗಿ ಹಳಬರಿಬ್ಬರ ಸೇರ್ಪಡೆ ಸಂಬಂಧ ಈ ನಿಲುವು ಜಗಜ್ಜಾಹೀರಾಗಿದೆ.’ ‘ಅಲ್ಪ ಪ್ರಾಣ ಮತ್ತು ಮಹಾ ಪ್ರಾಣಗಳನ್ನು ಬಳಸುವ ಸಂಬಂಧ ಉಂಟಾಗುತ್ತಿರುವ ತಾಕಲಾಟ ಮಾಧ್ಯಮಗಳನ್ನೂ ಬಿಟ್ಟಿಲ್ಲ. ಮಾಧ್ಯಮಗಳಿರಲಿ, ಓದುಗರನ್ನು ಬಿಟ್ಟಿಲ್ಲ. ಪ್ರಧಾನ ಸಂಪಾದಕರಿಗೆ ಮಿಂಚಂಚೆ ಕಳುಹಿಸುವ ಸಂಬಂಧ ಉಂಟಾಗುವ […]

 • ‘ಅಪರಾಧಿಗಳಿಗೆ’ ಎಂಬುದು ‘ನಿರಪರಾಧಿಗಳಿಗೆ’ ಎಂದಾಗಿಬಿಟ್ಟಿದೆ !

  ತಪ್ಪಾಯ್ತು ತಿದ್ಕೋತೀವಿ ಬೆಂಗಳೂರಿನ ವಿದ್ಯಾರಣ್ಯಪುರದಿಂದ ಎಚ್. ಆನಂದರಾಮ ಶಾಸ್ತ್ರಿ ಅವರು ಬರೆಯುತ್ತಾರೆ- “ಬೆಂಗಳೂರು ಫುಟ್ಬಾಲ್ ತಂಡ’ವು ನಿಮ್ಮ ಪತ್ರಿಕೆಯ ಮೇಲೆ ಮಾನನಷ್ಟ ಮೊಕದ್ದಮೆ ಹೂಡಬಹುದು. ತಯಾರಾಗಿರಿ. ನ.23ರ ಕ್ರೀಡಾ ವರದಿಯಲ್ಲಿ ನಿಮ್ಮ ಪತ್ರಿಕೆಯು ಬಿಎಫ್‌ಸಿಯ ಸ್ಟಾರ್ ಆಟಗಾರ, ನಾಯಕ, ಭಾರತ ತಂಡದ ನಾಯಕ ಸುನೀಲ್ ಛೆಟ್ರಿ ಅವರಿಗೆ ಅವಮಾನ ಮಾಡಿದೆ.’ “ತಂಡದ ಸ್ಟಾರ್ ಆಟಗಾರ ಸುನೀಲ್ ಛೆಟ್ರಿ ಅನುಪಸ್ಥಿತಿಯೇ ತವರಿನ ತಂಡಕ್ಕೆ ದೊಡ್ಡ ಸ್ಫೂರ್ತಿಯಾಗಿದೆ’ ಎಂದು ನಿಮ್ಮ ಕ್ರೀಡಾ ವರದಿಗಾರರು ವಿಶ್ಲೇಷಿಸಿದ್ದಾರೆ. ‘ಅನುಪಸ್ಥಿತಿಯೇ’ ಎಂಬುದರ ಬದಲು ‘ಉಪಸ್ಥಿತಿಯೇ’ […]

 • ವಾರಣಸಿ ಮತ್ತು ವಾರಾಣಸಿ ಃ ಯಾವುದು ಸರಿ?

  ತಪ್ಪಾಯ್ತು ತಿದ್ಕೋತೀವಿ ಬೆಂಗಳೂರಿನ ವಿ.ಹೇಮಂತಕುಮಾರ್ ಅವರು ಪತ್ರ ಕಳುಹಿಸಿದ್ದಾರೆ. ‘ಸೆ.3ರ 4ನೇ ಪುಟದಲ್ಲಿ ಪತಿಯನ್ನೇ ಕೊಂದ ಪತ್ನಿ, ಪ್ರಿಯಕರ’ ಸುದ್ದಿಯಲ್ಲಿ, ‘ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲಗೈದ ಮಹಿಳೆ ಹಾಗೂ ಆಕೆಯ ಪ್ರಿಯಕರ ಸತೀಶ್‌ನನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ. ಆ.28ರಂದು ಬಿಟಿಎಂ ಬಡಾವಣೆಯ 2ನೇ ಹಂತದಲ್ಲಿ ಆಟೋ ಚಾಲಕ ಅರುಣ್‌ನನ್ನು ಚಾಕುವಿನಿಂದ ಇರಿದು ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿತ್ತು’ ಎಂದಿದೆ. ಆದರೆ ಸುದ್ದಿ ಮಧ್ಯೆ ಪ್ರಕಟವಾಗಿರುವ ಚಿತ್ರದ ಕೆಳಗಡೆ ‘ಕೊಲೆಯಾದ ಹರೀಶ್‌’ ಎಂದಿದೆಯಲ್ಲ. ಕೊಲೆಯಾದವನ ಹೆಸರು […]

 • ನೂರಕ್ಕೆ ನೂರು ದೋಷರಹಿತವಾಗಿ ಪ್ರಕಟಿಸುವ ಉದ್ದೇಶ ಅಂಕಣದ್ದಲ್ಲ

  ತಪ್ಪಾಯ್ತು ತಿದ್ಕೋತೀವಿ ಮಂಡ್ಯದಿಂದ ಕೊಕ್ಕಡ ವೆಂಕಟ್ರಮಣ ಭಟ್ ಅವರು ಬರೆಯುತ್ತಾರೆ- ‘ಜು.17ರಂದು ಪುಟ 5ರಲ್ಲಿ ‘ಜಲಾಶಯಗಳ ಸ್ಥಿತಿಗತಿ’ಯ ಮೇಲೆ ಕಣ್ಣಾಡಿಸುತ್ತಿರುವಾಗ ನಿಜಕ್ಕೂ ಹೆದರಿ ಹೋದೆ. ಹೇಮಾವತಿಯ ಗರಿಷ್ಠ ಮಟ್ಟ 2922 ಅಡಿ ಇದೆ; ‘ಇಂದಿನ ಮಟ್ಟ 29,006 ಅಡಿ’ ಎಂದಿದೆ. ಗರಿಷ್ಠ ಮಟ್ಟಕ್ಕಿಂತ 26084 ಅಡಿಗಳಷ್ಟು ಹೆಚ್ಚು ನೀರು ಅದು ಹೇಗೆ ಜಲಾಶಯದಲ್ಲಿ ತುಂಬಿತೆಂಬ ಯಕ್ಷ ಪ್ರಶ್ನೆಗೆ ನಾನು ಉತ್ತರವನ್ನು ಬಯಸುವುದಿಲ್ಲ! ಒಂದು ಸೊನ್ನೆಯನ್ನು ನಡುವಿನಿಂದ ಕಳಚಿಕೊಂಡು ಓದುತ್ತೇನೆ ಬಿಡಿ!’ ‘ಪತ್ರಿಕೆಯಲ್ಲಿ ಈ ರೀತಿ ಉಂಟಾಗುವ ತಪ್ಪು […]

 • ಇಂತಹ ತಪ್ಪುಗಳು ಕಂಡಾಗ ನಕ್ಕು ಸುಮ್ಮನಾಗಬಹುದಾದದ್ದಷ್ಟೇ ನಾವು ಮಾಡಬಹುದಾದ ಕೆಲಸ

  ತಪ್ಪಾಯ್ತು ತಿದ್ಕೋತೀವಿ ಬೆಂಗಳೂರಿನ ರಾಜಾಜಿನಗರದಿಂದ ನಾಗೇಶ್ ಎಂಬುವರು ಬರೆಯುತ್ತಾರೆ- ‘ಜು.24ರಂದು ‘ಬೈಟು ಕಾಫಿ’ಯ ಕೊನೆಯ ಪುಟದ ‘ಟಾಪ್ಗೇರ್’ ವಿಭಾಗದಲ್ಲಿ ಒಂದು ಸುದ್ದಿ ಓದಿ ಅಚ್ಚರಿಯಾಯಿತು. ‘ವೆಸ್ಪಾ ವಿಕ್ಸ್’ ಎಂಬ ಶೀರ್ಷಿಕೆಯಲ್ಲಿ ವೆಸ್ಪಾ ಕಂಪನಿಯ ಹೊಸ ಸ್ಕೂಟರ್ ಕುರಿತು ಸುದ್ದಿ ಪ್ರಕಟಿಸಿದ್ದೀರಿ. ಹೆಸರು ಓದಿ ಅಚ್ಚರಿಯಾಯಿತು.’ ‘ವೆಸ್ಪಾ ಸಂಸ್ಥೆಯವರು ಕೇವಲ ತಲೆನೋವು ಇರುವವರಿಗಾಗಿ ಮಾತ್ರ ವಿಶೇಷವಾಗಿ ‘ವೆಸ್ಪಾ ವಿಕ್ಸ್’ ಮಾದರಿಯ ಸ್ಕೂಟರ್ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೇನೋ ಅಂದುಕೊಂಡೆ. ಆಸಕ್ತಿಯಿಂದ ಸುದ್ದಿ ಓದಿದರೆ, ಸುದ್ದಿಯಲ್ಲಿ ಎಲ್ಲೂ ಇದರ ಪ್ರಸ್ತಾಪವೇ ಇಲ್ಲ. […]

 • ಎಲ್ಲವನ್ನೂ ‘ವ್ಯಾಕರಣ’ ಬದ್ಧವಾಗಿ ಬರೆಯಲು ಸಾಧ್ಯವಿಲ್ಲ

  ತಪ್ಪಾಯ್ತು ತಿದ್ಕೋತೀವಿ ಮೈಸೂರಿನ ಜೆ.ಪಿ. ನಗರದಿಂದ ಬ್ಯಾಂಕ್ ಶಿವಕುಮಾರ ಅವರು ತುಂಬ ದಿನಗಳ ನಂತರ ಪತ್ರ ಬರೆದಿದ್ದಾರೆ. ಅವರು ಬರೆಯುತ್ತಾರೆ- ‘ದಿನಾಂಕ 08-06-2013 ರ ಕ.ಪ್ರ. ಪುಟ 5ರಲ್ಲಿ ‘ಕೇಂದ್ರದ ಹಗರಣದಿಂದ ದೇಶಕ್ಕೆ ಗೌರವ ಬಂದಿದೆಯಾ?’ ಶೀರ್ಷಿಕೆ ಅಡಿಯಲ್ಲಿ ಛಾಯಾಚಿತ್ರವೊಂದು ಪ್ರಕಟಗೊಂಡಿದ್ದು ಅದರಲ್ಲಿ ಸಚಿವ ಆರ್.ವಿ. ದೇಶಪಾಂಡೆ ಮತ್ತು ರಮಾನಾಥ ರೈಯವರು ನಿಂತಿರುವ ದೃಶ್ಯವಿರುತ್ತದೆ. ಆ ಚಿತ್ರದಡಿಯಲ್ಲಿ ‘ಮೇಲ್ಮನೆಯಲ್ಲಿ ಸಭಾತ್ಯಾಗ ಮಾಡುತ್ತಿರುವ ಸಚಿವರಾದ ಆರ್.ವಿ. ದೇಶಪಾಂಡೆ, ರಮಾನಾಥ ರೈ’ ಎಂದಿರುತ್ತದೆ. ಬಹುಶಃ ವರದಿಗಾರರಿಗೆ ಅರಿವಿಲ್ಲದೆ ಈ ರೀತಿ […]

 • ವಿದ್ಯುದ್ದೀಪ’ ಎಂಬುದು ಸರಿಯಾದ ಬಳಕೆ ಎಂಬುದು ಖಚಿತವಿತ್ತು. ಆದರೆ ಯಾವ ಸಂಧಿ ?

  ಮಂಡ್ಯದಿಂದ ಕೊಕ್ಕಡ ವೆಂಕಟ್ರಮಣ ಭಟ್ ಅವರು ಬರೆಯುತ್ತಾರೆ- ‘ಜ.22ರಂದು ಮುಖಪುಟದಲ್ಲಿ ‘ಪಾಕೋಪಕಾರಿ’ ಎಂಬ ಶೀರ್ಷಿಕೆ ಕಂಡು ಸ್ಪಂದಿಸಬೇಕೆನಿಸಿತು. ಪಾಕ್‌ ಕಾರಿ ಪಾಕೋಪಕಾರಿ. ಇಲ್ಲಿ ಯಾವ ಪಾಕ ಎಂಬ ಪ್ರಶ್ನೆ ಮೂಡುತ್ತದೆ. ‘ಪಾಕುಪಕಾರಿ’ ಎಂದಿರಬೇಕಿತ್ತು. ಪಾಕ್‌ ಉಪಕಾರಿಪಾಕುಪಕಾರಿ ಎಂದಾಗಬೇಕಿತ್ತು.’ ‘ಅದೇ ದಿನದ ಸಂಚಿಕೆಯಲ್ಲಿ ‘ನಿಜ ವ್ಯಾಖ್ಯಾನ’ (ಗೋಪಾಲಕೃಷ್ಣ ಕೆ.ಸಿ.) ಲೇಖನದಲ್ಲಿ ‘ನ್ಯೂನ್ಯತೆ’ ಎಂಬ ಪದವನ್ನು ಮತ್ತೆಮತ್ತೆ ಬಳಸಿದ್ದಾರೆ. ಇದು ಸರಿಯಲ್ಲ. ‘ನ್ಯೂನತೆ’ ಎಂಬುದು ಶುದ್ಧರೂಪ.’ ‘ಜ.23ರ ಸಂಚಿಕೆಯ ‘ತಪ್ಪಾಯ್ತು ತಿದ್ಕೋತೀವಿ’ ಅಂಕಣದಲ್ಲಿ ವಿದ್ಯುತ್ ದೀಪ ಗೊಂದಲದ ಬಗೆಗೆ ಅಕಣದ […]

 • ಈ ಶೀರ್ಷಿಕೆ ಕೊಟ್ಟಿದ್ದರೆ ಹೆಚ್ಚು ಸೂಕ್ತ ಎಂದೆನಿಸುತ್ತಿತ್ತು !

  ತಪ್ಪಾಯ್ತು ತಿದ್ಕೋತೀವಿ ಮಂಡ್ಯ ಜಿಲ್ಲೆ ಪಾಂಡವಪುರದಿಂದ ಹರಳಹಳ್ಳಿ ಪುಟ್ಟರಾಜು ಅವರು ಬರೆಯುತ್ತಾರೆ- ‘ಜ.21ರ ಪತ್ರಿಕೆಯ ಪುಟ 4ರಲ್ಲಿ ಮಂಡ್ಯ ಸುದ್ದಿ ವಿಭಾಗದಲ್ಲಿ ‘ಶ್ರೀರಂಗಪಟ್ಟಣ ತಹಸೀಲ್ದಾರರಿಂದ ಪೋಲಿಯೋ ಲಸಿಕೆ’ ಎಂಬ ಶೀರ್ಷಿಕೆಯಲ್ಲಿ ವರದಿಯೊಂದು ಪ್ರಕಟವಾಗಿದೆ. ಈ ವರದಿಗೆ ಪೂರಕವಾಗಿ ಫೋಟೊ ಕೂಡ ಪ್ರಕಟವಾಗಿದ್ದು, ಅದರಡಿ ‘ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ತಹಸೀಲ್ದಾರ್ ಅರುಳ್‌ಕುಮಾರ್ ಪುತ್ರ ಲೌಕಿಕ್ ಅಶ್ವತ್ಥ್‌ಗೆ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು’ ಎಂಬ ವಾಕ್ಯ ಕೂಡ ಇದೆ. ಇದರಲ್ಲಿ ತಪ್ಪಾಗಿರುವುದೇನೆಂದರೆ ‘ಶ್ರೀರಂಗಪಟ್ಟಣದಲ್ಲಿ ತಹಸೀಲ್ದಾರರಿಂದ ಪೋಲಿಯೋ […]