ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಅಂಕಣ: ‘ಸುದ್ದಿಮನೆ ಕತೆ’

 • ಅವರು ಅಲೆಮಾರಿ, ಆದರೆ ಸದಾ ಮನದಲ್ಲಿ ನೆಲೆಸುವ ಬರಹಗಾರ!

  ಸುಮಾರು ಐದಾರು ವರ್ಷಗಳ ಹಿಂದೆ ಪಿಕೊ ಅಯ್ಯರ್ ಬರೆದ Falling Off The Map ಎಂಬ ಪುಸ್ತಕ ಓದಿದ್ದೆ. ಅದಕ್ಕಿಂತ ಮೊದಲು ಪತ್ರಿಕೆ, ನಿಯತಕಾಲಿಕಗಳಲ್ಲಿ ಅವರು ಬರೆದ ಲೇಖನಗಳನ್ನು ಓದಿದ್ದೆ. ಅವೆಲ್ಲ ಪ್ರವಾಸೋದ್ಯಮಕ್ಕೆ ಸಂಬಂಧಿಸಿದವುಗಳಗಿದ್ದವು. ಪಿಕೊ ಅಯ್ಯರ್ ಅಂದ್ರೆ travel and tourism ಬಗ್ಗೆ ಬರೆಯುವ ಅಲೆಮಾರಿ ಪತ್ರಕರ್ತರಿರಬೇಕು ಅಂತಾನೇ ಭಾವಿಸಿದ್ದೆ. ಆದರೆ ಅವರ ಬರಹಗಳು ಇಷ್ಟವಾಗುತ್ತಿದ್ದವು. ಅವರು ಯಾವುದೇ ಊರಿನ ಬಗ್ಗೆ ಬರೆದರೂ, ಅದರಲ್ಲೊಂದು ವಿಶೇಷ ಒಳನೋಟವನ್ನು ಕಾಣುವಷ್ಟು ಇತರ ಬರಹಗಳಿಗಿಂತ ಭಿನ್ನವಾಗಿರುತ್ತಿದ್ದವು. ಹೀಗಾಗಿ ಈ […]

 • ತಮ್ಮ ಪತ್ರಿಕೆಗೆ ಬರೆಯುತ್ತಿದ್ದ ವರದಿಗಾರನ ಬಗ್ಗೆ ಸಂಪಾದಕರಿಗೇ ಗೊತ್ತಿರಲಿಲ್ಲ!

  ಬಸ್‌ನಲ್ಲಿ ಸಂಚರಿಸುವ ಪ್ರಯಾಣಿಕರ ವಿವರಗಳೆಲ್ಲ ಸಾರಿಗೆ ಮಂತ್ರಿಗೆ ಗೊತ್ತಿರುವುದು ಹೇಗೆ ಸಾಧ್ಯವಿಲ್ಲವೋ, ಪತ್ರಿಕೆಯಲ್ಲಿ ಪ್ರಕಟವಾಗುವ ಅಕ್ಷರ ಅಕ್ಷರವನ್ನೂ ಓದಲು ಅದರ ಸಂಪಾದಕರಿಗೆ ಸಾಧ್ಯವಾಗಲಿಕ್ಕಿಲ್ಲ. ಆದರೆ ಪತ್ರಿಕೆಯಲ್ಲಿ ಯಾವ ಪುಟದಲ್ಲಿ ಪ್ರಮುಖ ಸುದ್ದಿ ಪ್ರಕಟವಾಗುತ್ತಿದೆ ಎಂಬ ಮಾಹಿತಿ ಅವರಿಗೆ ಇರುತ್ತದೆ. ಅಲ್ಲದೇ ತನ್ನ ಪತ್ರಿಕೆಯಲ್ಲಿ ಎಷ್ಟು ಮಂದಿ ಇದ್ದಾರೆ, ಯಾರು ಯಾವ ಊರಿನಲ್ಲಿ ವರದಿಗಾರರಾಗಿದ್ದಾರೆ, ಕಚೇರಿಯಲ್ಲಿ ಯಾರು ಯಾವ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ, ಅಂಕಣಕಾರರು ಯಾರು, ಅವರೇನು ಬರೆಯುತ್ತಾರೆ, ಯಾವ ದಿನ ಯಾರ ಅಂಕಣ ಪ್ರಕಟ ವಾಗುತ್ತದೆ… ಮುಂತಾದ ವಿವರಗಳೆಲ್ಲ […]

 • ತಪ್ಪುಗಳಿಲ್ಲದ ಪತ್ರಿಕೆ ಇದೆಯೇ ಎಂಬ ಪ್ರಶ್ನೆಯ ಬೆಂಬತ್ತಿ

  ತಪ್ಪುಗಳೇ ಇಲ್ಲದ ಪತ್ರಿಕೆಗಳಿರಬಹುದಾ? ಒಂದೂ ತಪ್ಪಿಲ್ಲದ ಪತ್ರಿಕೆಯನ್ನು ಪ್ರಕಟಿಸುವುದು ಸಾಧ್ಯವಾ? ಈ ಪ್ರಶ್ನೆಯನ್ನು ಖ್ಯಾತ ಪತ್ರಕರ್ತ ಹಾಗೂ ‘ದಿ ಯುನಿವರ್ಸಲ್ ಜರ್ನಲಿಸ್ಟ್’ ಪುಸ್ತಕದ ಲೇಖಕ ಡೆವಿಡ್ ರ್‍ಯಾಂಡಲ್‌ಗೆ ಕೇಳಿದಾಗ ಅವರು ಹೇಳಿದ್ದು- ‘ಅದೊಂದು ಸುಂದರ ಪ್ರಶ್ನೆ ಹಾಗೂ ಸುಂದರ ಕಲ್ಪನೆ. ಇದೇ ರೀತಿಯ ಪ್ರಶ್ನೆಯನ್ನು ಅಮೆರಿಕದ ಅಧ್ಯಕ್ಷರಾಗಿದ್ದ ಥಾಮಸ್ ಜೆಫರ್‌ಸನ್‌ಗೆ ಕೇಳಿದಾಗ ಅವರು ಹೇಳಿದ್ದು’Perhaps an editor might divide his paper into four chapters; heading the first, Truth; the second, Probabilities; […]

 • ಅಲ್ಪವಿರಾಮಕ್ಕೆ ಕೊಡಬೇಕಾದ ಗಮನ ಸ್ವಲ್ಪಕ್ಕಿಂತ ಹೆಚ್ಚು

  ‘ಅಲ್ಪ ವಿರಾಮ(comma) ಅಂದ್ರೆ ಅಷ್ಟು ಮುಖ್ಯ ಅಂತ ಗೊತ್ತೇ ಇರಲಿಲ್ಲ.’ ಹಾಗಂತ ನೀವು ಹೇಳದಿದ್ದರೆ ಕೇಳಿ. ಆದರೆ ಸುದ್ದಿಮನೆಯಲ್ಲಿ ಅಲ್ಪವಿರಾಮ ಸೇರಿದಂತೆ ಸಂಕೇತಾಕ್ಷರಗಳಿಗೆ ಸಿಗಬೇಕಾದಷ್ಟು ಮಹತ್ವ ಸಿಗುತ್ತಿಲ್ಲ. ಬರಹಗಾರರಿಗೂ ಅಷ್ಟೆ, ಅಲ್ಪವಿರಾಮ ಅಂದ್ರೆ ಅಷ್ಟಕ್ಕಷ್ಟೆ. ಇಲ್ಲೊಂದು ಪ್ರಸಂಗ ಹೇಳಬೇಕು. ಒಮ್ಮೆ ಬರಹಗಾರನೊಬ್ಬ  ಪತ್ರಿಕೆಗೊಂದು ಲೇಖನ ಕಳಿಸಿದ. ಜತೆಯಲ್ಲಿ ಸಂಪಾದಕರಿಗೊಂದು ಪತ್ರವನ್ನಿಟ್ಟಿದ್ದ- “ಮಾನ್ಯ ಸಂಪಾದಕರೇ, ನಾನೊಂದು ಲೇಖನ ಬರೆದಿದ್ದೇನೆ. ಆದರೆ ಲೇಖನದಲ್ಲೆಲ್ಲೂ ಅಲ್ಪವಿರಾಮ, ಪೂರ್ಣವಿರಾಮ ಹಾಕಿಲ್ಲ. ನೀವು ಎಲ್ಲಿ ಬೇಕಾದರೂ ಅವುಗಳನ್ನಿಡಬಹುದು.’ ಸಂಪಾದಕರಿಗೆ ಈ ಕಾಗದ ಓದಿ ಸಿಟ್ಟು […]

 • ಹೀಗೊಂದು ಕೃತಿಚೌರ್ಯ ಪ್ರಕರಣ ಹಾಗೂ ಕ್ಷಮಾಯಾಚನೆ!

  ‘ಒಂದು ಮೂಲದಿಂದ ಕದ್ದರೆ ಅದು ಕೃತಿಚೌರ್ಯ. ಅದೇ ಹಲವಾರು ಮೂಲಗಳಿಂದ ಕದ್ದರೆ ಸಂಶೋಧನೆ’ ಎಂಬುದು ಹಳೆಯ ಮಾತು. ‘ಎಲ್ಲ ಬರಹಗಾರರು ಕೃತಿಚೌರ್ಯ ಮಾಡುತ್ತಾರೆ. ಆದರೆ ಉತ್ತಮ ಬರಹಗಾರ ಕೃತಿಚೌರ್ಯ ಮಾಡಿದ್ದು ಗೊತ್ತಾಗುವುದಿಲ್ಲ’ ಎಂಬ ಮಾತು ಎಲ್ಲರಿಗೂ ಗೊತ್ತಿರುವಂಥದ್ದೇ. ‘ಬರಹಗಾರರಾದವರು ಹೆಚ್ಚು ಯೋಚಿಸಬಾರದು. ಯಾಕೆಂದರೆ ಅದು ಕೃತಿಚೌರ್ಯದ ಮೇಲೆ ಪ್ರಭಾವ ಬೀರುತ್ತದೆ’ ಎಂಬುದು ವಕ್ರತುಂಡೋಕ್ತಿ. ಕೃತಿಚೌರ್ಯದ ಬಗ್ಗೆ ವಿಲಿಯಮ್ ರಾಲ್ಫ್ ಇಂಗೆ ಹೇಳಿದ ಮಾತು ಮಾರ್ಮಿಕ-Originality is undetected plagiarism. ಇದನ್ನೇ ಜಾರ್ಜ್ ಎ. ಮೂರ್ ಇನ್ನೊಂದು ರೀತಿಯಲ್ಲಿ […]

 • ಸುದ್ದಿಮನೆ ಎಂಬ ಕಾರ್ಖಾನೆಯಲ್ಲಿ ಆಗೀಗ ಆಗುವ ಅವಘಡಗಳು

  ಸುದ್ದಿಮನೆ ಒಂದು ಕಾರ್ಖಾನೆ ಇದ್ದಂತೆ. ಸುದ್ದಿ ತರುವವರು ಹಾಗೂ ಅದನ್ನು ಪರಿಷ್ಕರಿಸುವವರು ಇಲ್ಲಿ ಅಕ್ಷರಶಃ ಯಂತ್ರಗಳಂತೆ ಕಾರ್ಯನಿರ್ವಹಿಸಬೇಕಾಗುತ್ತದೆ. ಗುಣ ಮಟ್ಟದ ಉತ್ಪನ್ನ ತಯಾರಿಕೆಗೆ ಸಾಕಷ್ಟು ಕಸರತ್ತು ನಡೆಯುತ್ತದೆ. ಈ ಕಸರತ್ತಿಗೆ ಪೈಪೋಟಿಯ ಲೇಪವಿದೆ. ಹಿಂದಾದರೆ ‘ಇಂದಿನ ಸುದ್ದಿ ನಾಳೆಗೆ ರದ್ದಿ’ ಎಂಬ ಮಾತು ಚಾಲ್ತಿಯಲ್ಲಿತ್ತು. ಆದರೆ ಈಗಿನ ಪೈಪೋಟಿ ಯುಗದಲ್ಲಿ ‘ ಇಂದಿನ ಸುದ್ದಿ ಇಂದೇ ರದ್ದಿ’ ಎಂಬಂತಾಗಿದೆ. ಹೀಗಾಗಿ ಸುದ್ದಿ ಬೇಟೆಯ ವಸ್ತು. ಸುದ್ದಿ ಬೇಟೆ ಆಡಲು ವರದಿಗಾರರಲ್ಲಿ ಸದಾ ಪೈಪೋಟಿ. ಸ್ಪರ್ಧಾ ಯುಗದಲ್ಲಿ ಸೆಣಸಬೇಕಿರುವುದರಿಂದ […]

 • ಪತ್ರಿಕೆಯಲ್ಲಿ ಸುದ್ದಿಗಾಗಿ ಜೀಕುವಾಗಿನ ಜೋಕು ಜೋಕಾಲಿ

  ಪತ್ರಕರ್ತರು ಬೇರೆ ಅಲ್ಲ, ಓದುಗರು ಬೇರೆ ಅಲ್ಲ. ಪತ್ರಿಕೆ ಯಿಂದಾಗಿ ಓದುಗರಲ್ಲಿ, ಓದುಗರಿಂದಾಗಿ ಪತ್ರಿಕೆಯಲ್ಲಿ ಸದಾ ತಿಳಿಹಾಸ್ಯ, ರಂಜನೆ ಇದ್ದೇ ಇರುತ್ತದೆ. ಸದಾ ಸುದ್ದಿಯಿಂದ ಗಿಜಿಗುಡುವ ಸುದ್ದಿಮನೆಯಲ್ಲಿ ಹಾಸ್ಯಪ್ರಸಂಗಗಳಿಗೇನೂ ಕೊರತೆ ಯಿಲ್ಲ. ಇಂಥ ರಸಪಾಕಗಳೆಲ್ಲ ಸೇರಿಯೇ ಪತ್ರಿಕೆ ಹೊರಹೊಮ್ಮುತ್ತದೆ. ಪತ್ರಿಕೆ ಹೊರಬಿದ್ದ ನಂತರವೂ ಹಾಸ್ಯಪ್ರಸಂಗಗಳು ಮುಂದುವರಿ ಯುತ್ತವೆ. ಅಂಥ ಕೆಲವು ಪ್ರಸಂಗಗಳನ್ನು ಮೆಲುಕು ಹಾಕೋಣ. * * ಒಂದು ಕಾರು ಅಪಘಾತಕ್ಕೀಡಾಯಿತು. ತಕ್ಷಣ ನೂರಾರು ಮಂದಿ ಸೇರಿದರು. ಅಲ್ಲಿ ಏನಾಗುತ್ತಿದೆಯೆಂದು ಗೊತ್ತಾಗದಷ್ಟು ಗೊಂದಲ, ಗೌಜು. ವರದಿಗಾರನೊಬ್ಬ ಸ್ಥಳಕ್ಕೆ […]

 • ಪ್ರಮಾದಗಳಾಗುವವರೆಗೆ ಸಂಪಾದಕರು ಕ್ಷಮೆ ಯಾಚಿಸುತ್ತಲೇ ಇರಬೇಕಾಗುತ್ತದೆ!

  ‘ಕೆಲವು ಸಂಪಾದಕರು ಬರೆಯುತ್ತಾರೆ ಹಾಗೂ ಪ್ರತಿದಿನ ವಿಷಾದವನ್ನು ಮಾತ್ರ ಬರೆಯುತ್ತಾರೆ’ ಎಂಬ ಮಾತು ಸುದ್ದಿಮನೆಯಲ್ಲಿ ಚಾಲ್ತಿಯಲ್ಲಿದೆ. ಇದು ಸುಳ್ಳೇನಲ್ಲ. ಸಂಪಾದಕರ ಬರವಣಿಗೆಯಲ್ಲಿ ವಿಷಾದ ಬರಹ ಅವಿಭಾಜ್ಯ ಅಂಗ. ಕೆಲವರಿಗೆ ಅದೇ ಮುಖ್ಯ ಬರಹ. ಅದೆಷ್ಟೇ ದೊಡ್ಡ ಅಥವಾ ಚಿಕ್ಕ ಪತ್ರಿಕೆಯಿರಬಹುದು, ಅದರ ಸಂಪಾದಕರಿಗೆ ಕ್ಷಮೆಯಾಚಿಸುವುದು, ವಿಷಾದ ವ್ಯಕ್ತಪಡಿಸುವುದು ದೈನಂದಿನ ಕೆಲಸಗಳಲ್ಲೊಂದು. ಕೆಲವು ಪತ್ರಿಕೆಗಳಂತೂ ಇದನ್ನೇ ‘ದೈನಂದಿನ ಅಂಕಣ’ಗಳಂತೆ ಪ್ರಕಟಿಸುತ್ತವೆ. ಇಂಗ್ಲಿಷ್ ಪತ್ರಿಕೆಗಳಂತೂ Corrections and Clarifications (ತಪ್ಪು-ಒಪ್ಪು)ಎಂಬ ಶೀರ್ಷಿಕೆಯಡಿಯಲ್ಲಿ ತಾವು ದಿನವೂ ಮಾಡುವ ತಪ್ಪುಗಳನ್ನು ಪ್ರಕಟಿಸಿ ಕೈತೊಳೆದುಕೊಳ್ಳುತ್ತವೆ. […]

 • ಆಧುನಿಕ ಭಾರತದ ಚರಿತ್ರೆಗೆ ವರ್ಗೀಸ್ ಸಾಕ್ಷಿಯಾದಾಗ

  ಜೂನ್ 26, 1975ರಂದು ನಸುಕಿನ ಎರಡು ಗಂಟೆಗೂ ತುಸು ಮೊದಲು ನನ್ನ ಬೆಡ್‌ರೂಮ್‌ನ ದೂರವಾಣಿ ಸದ್ದು ಮಾಡಿತು. ಇಂದೋರ್‌ನ ‘ನಯಿ ದುನಿಯಾ’ ಪತ್ರಿಕೆಯ ಸಂಪಾದಕ ಅಭಯ್ ಛಾಜ್‌ಲಾನಿ ಅವರಿಂದ ಬಂದ ಕರೆಯಾಗಿತ್ತದು. ‘ದಿಲ್ಲಿಯಲ್ಲಿ ವಿಶೇಷವಾದ್ದೇನಾದರೂ ನಡೆಯಲಿ ದೆಯೇ’ ಎಂದು ವಿಚಾರಿಸಿದ ಅವರ ದನಿಯಲ್ಲಿ ಕಳವಳವಿತ್ತು. ‘ನಿಮಗೆ ಹಾಗೇಕೆ ಅನ್ನಿಸುತ್ತಿದೆ?’ ಎಂದು ನಾನು ಪ್ರಶ್ನಿಸಿದೆ. ಅದಕ್ಕವರು, ‘ಇಂದೋರ್‌ನ ಇತರ ಪತ್ರಿಕೆಗಳ ವಿಷಯದಲ್ಲಾದಂತೆ ತಮ್ಮ ಪತ್ರಿಕಾ ಕಚೇರಿಯ ಮೇಲೂ ದಾಳಿ ಆಗಿ ವೃತ್ತಪತ್ರಿಕೆಯ ಬಂಡಲ್‌ಗಳನ್ನು ಸೀಜ್ ಮಾಡಲಾಗಿದೆ. ರಾಜಕೀಯ ನಾಯಕರನ್ನು […]

 • ನಿಜಕ್ಕೂ ಪತ್ರಕರ್ತರೆಂದರೆ ದೂರವಿಡುವಷ್ಟು ತಲೆಹರಟೆಗಳಾ?

  ಪತ್ರಕರ್ತರನ್ನು ಎಲ್ಲರೂ ಇಷ್ಟಪಡುತ್ತಾರೆ ಎಂದೇನಿಲ್ಲ. ಕೆಲವರಿಗೆ ಅವರ ತಲೆ ಕಂಡರೆ ಆಗೊಲ್ಲ. ಹೆಸರು ಹೇಳಿದರೆ ಆಗೊಲ್ಲ. ಪತ್ರಕರ್ತರನ್ನು ಸದಾ ತಮ್ಮ ಬಳಿಯೇ ಇಟ್ಟುಕೊಳ್ಳುವ, ಇರಲೆಂದು ಬಯಸುವ ರಾಜಕಾರಣಿಗಳು ಸಹ ಒಳಗೊಳಗೇ ಪತ್ರಕರ್ತರ ಬಗ್ಗೆ ಬೇರೆಯ ಭಾವನೆ ಹೊಂದಿರುತ್ತಾರೆ. ಹಾಗೆಂದು ರಾಜಕಾರಣಿಗಳಿಗೆ ಪತ್ರಕರ್ತರು ಬೇಕೇಬೇಕು. ಅದು ಒಂದು ಹಂತದವರೆಗೆ ಮಾತ್ರ. ಆನಂತರ ಅವರ ಬಗ್ಗೆ ಒಂದು ರೀತಿಯ ಅಲರ್ಜಿ. ಹಿಂದಿ ನಟಿ ರೇಖಾಗೆ ಪತ್ರಕರ್ತರನ್ನು ಕಂಡರೆ ಆಗುತ್ತಿರಲಿಲ್ಲ. ಹೀಗಾಗಿ ಆಕೆ ಎಂದೂ ಅವರನ್ನು ಕರೆಯುತ್ತಿರಲಿಲ್ಲ. ಯಾವುದಾದರೂ ಪಾರ್ಟಿಯಲ್ಲಿ ಪತ್ರಕರ್ತರನ್ನು […]