ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಅಂಕಣ: ‘ಸ್ಫೂರ್ತಿಸೆಲೆ’

  • ಸ್ಪೂರ್ತಿಸೆಲೆ – 17 ಜೂನ್ 2013

    ನಿಮ್ಮ ಸ್ವಂತ ಶ್ರಮದಿಂದ ಜೀವನದಲ್ಲಿ ಪ್ರಸಿದ್ಧ ವ್ಯಕ್ತಿಯಾಗಲು ಶ್ರಮಿಸಬೇಕು. ಅದಕ್ಕೆ ನಿಮ್ಮದೇ ಆದ ದಾರಿಯನ್ನು ಕಂಡುಕೊಳ್ಳಬೇಕು. ಆದರೆ ಇಂಥ ಪ್ರಯತ್ನದಲ್ಲಿ ಕೆಲವೊಂದು ಬಾರಿ ಹಿನ್ನಡೆಗಳು ಕಂಡು ಬರುತ್ತವೆ. ಅದಕ್ಕೆ ಎದೆಗುಂದಬಾರದು. ಅಂತಿಮವಾಗಿ ಗೆಲವು ನಿಮ್ಮದೆ.

  • ಸುಪ್ರಭತಾ – 15 ಜೂನ್ 2013

    ನಿಮ್ಮ ಜೀವನವೇ ಒಂದು ಅಮೂಲ್ಯ ಸಂಗತಿ. ಇದು ಇಡೀ ಜಗತ್ತಿಗೆ ಒಂದು ಸಂದೇಶ ಕೊಡುತ್ತಿರುತ್ತದೆ. ಹೀಗಾಗಿ ನಿಮ್ಮ ಜೀವನದಿಂದ ಯಾವ ರೀತಿ ಸಂದೇಶ ಹೋಗುತ್ತದೆ ಎಂಬ ಕಲ್ಪನೆ ಇರಲಿ. ಇರುವಷ್ಟು ದಿನ ಉತ್ತಮವಾಗಿ ಬದುಕಿ, ಜಗತ್ತಿಗೆ ಆದರ್ಶವಾಗಿ.

  • ಸುಪ್ರಭತಾ – 13 ಜೂನ್ 2013

    ಇಂದು ಎಂಬುದು ನಿಮ್ಮ ಮುಂದಿನ ಜೀವನದ ಮೊದಲನೆಯ ದಿನ ಎಂದು ಭಾವಿಸಿದರೆ, ಅದರ ಮಹತ್ವ ಚೆನ್ನಾಗಿ ಅರ್ಥವಾಗುತ್ತದೆ. ಈ ದಿನ ಪದೇ ಪದೆ ಬರುವುದಿಲ್ಲ. ಅದನ್ನು ಚೆನ್ನಾಗಿ ಉಪಯೋಗಿಸಿಕೊಂಡು ಸಾರ್ಥಕಪಡಿಸಿಕೊಳ್ಳಿ.

  • ಸುಪ್ರಭತಾ – 10 ಜೂನ್ 2013

    ಜೀವನವೆಂಬ ಆಟದಲ್ಲಿ, ಒಮ್ಮೊಮ್ಮೆ ಜನ ಫುಟ್‌ಬಾಲ್ ಆಡುತ್ತಿದ್ದೇವೆಂದು ಭಾವಿಸಿ ನಮಗೆ ಒದೆಯುತ್ತಾರೆ. ಆದರೆ ಅವರಿಗೆ ಗೊತ್ತಿರುವುದಿಲ್ಲ, ಅವರು ನಮ್ಮನ್ನು ಗೋಲ್‌ಗೆ ಹತ್ತಿರ ತಲುಪಿಸುತ್ತಿದ್ದಾರೆಂದು. ಎಲ್ಲ ಹಿನ್ನಡೆಯೂ ನಿಮಗೆ ಕೆಡುಕಾಗುವುದಿಲ್ಲ.

  • ಸುಪ್ರಭತಾ – 07 ಜೂನ್ 2013

    ನೀವು ಮಾಡುವ ಕೆಲಸಗಳ ಅಡ್ಡಪರಿಣಾಮ ಇತರರ ಮೇಲೂ ಆಗುತ್ತದೆ ಎಂಬ ಅರಿವು ಇರಲಿ. ನೀವು ಮಾಡುವ ಕೆಲಸಗಳು ನಿಮಗಷ್ಟೇ ಅನ್ವಯವಾಗುತ್ತವೆ ಎಂಬ ಭ್ರಮೆಯಿಂದ ಹೊರಗೆ ಬನ್ನಿ. ಏನೇ ಮಾಡಿದರೂ, ಅದು ಇತರರಿಗೆ ಅಡ್ಡಿಯಾಗದಂತಿರಲಿ.

  • ಸ್ಪೂರ್ತಿಸೆಲೆ

    ಸಂಬಂಧಗಳೆಂದರೆ ಗಾಜಿನ ಹಾಗೆ. ಜೀವನದಲ್ಲಿ ಅನಿವಾರ್ಯ ಪರಿಸ್ಥಿತಿಯಲ್ಲಿ ಅದನ್ನು ಮುರಿಯಲೇಬೇಕಾದ ಪರಿಸ್ಥಿತಿ ಉಂಟಾದರೆ ಅಂಥ ನಿರ್ಣಯ ಕೈಗೊಳ್ಳುವುದೇ ಉತ್ತಮ. ಏಕೆಂದರೆ ಒಡೆದ ಮನಸ್ಸುಗಳಿಂದ ನೋವು ಅನುಭವಿಸುವುದಕ್ಕಿಂತ ಅದು ಉತ್ತಮ ನಿರ್ಧಾರವಾಗುತ್ತದೆ.

  • ಸ್ಪೂರ್ತಿಸೆಲೆ – 16 ಮಾರ್ಚ್ 2013

    ಯಾವುದನ್ನೂ ಚಿಂತಿಸದೆ, ಹೆಚ್ಚು ಕೆಲಸ, ಕಡಿಮೆ ಬಯಕೆ, ಮೊಗದಲ್ಲಿ ಮುಗುಳ್ನಗು, ದೊಡ್ಡ ಕನಸುಗಳ ಮೂಲಕ ಉತ್ತಮ ಬದುಕು ಹೊಂದಿ. ಆಗ ನೀವೆಷ್ಟು ಅದೃಷ್ಟವಂತರೆಂದು ತಿಳಿಯುತ್ತದೆ.

  • ಸ್ಪೂರ್ತಿಸೆಲೆ – 17 ಮಾರ್ಚ್ 2013

    ಯಾವುದನ್ನೂ ಚಿಂತಿಸದೆ, ಹೆಚ್ಚು ಕೆಲಸ, ಕಡಿಮೆ ಬಯಕೆ, ಮೊಗದಲ್ಲಿ ಮುಗುಳ್ನಗು, ದೊಡ್ಡ ಕನಸುಗಳ ಮೂಲಕ ಉತ್ತಮ ಬದುಕು ಹೊಂದಿ. ಆಗ ನೀವೆಷ್ಟು ಅದೃಷ್ಟವಂತರೆಂದು ತಿಳಿಯುತ್ತದೆ.

  • ಸ್ಪೂರ್ತಿಸೆಲೆ – 04 ಮಾರ್ಚ್ 2013

    ಜೀವನದಲ್ಲಿ ಕಷ್ಟಗಳಿಗಿಂತ ಸುಖವೇ ಹೆಚ್ಚಿರುತ್ತದೆ. ನೋವಿಗಿಂತ ನಲಿವೇ ಜಾಸ್ತಿಯಿರುತ್ತದೆ. ಆದರೆ ಸಣ್ಣಪುಟ್ಟ ನೋವುಗಳು ಬಂದಾಗ ಬರಿದಾಯಿತೆಂಬಂತೆ ವರ್ತಿಸುತ್ತೇವೆ. ನಮ್ಮ ಆನಂದದ ಮೇಲೆ ನೋವುಗಳಿಗೆ ಸವಾರಿ ಮಾಡಲು ಬಿಡಬೇಡಿ.

  • ಸ್ಪೂರ್ತಿಸೆಲೆ – 18 ಜನೆವರಿ 2013

    ಜೀವನದಲ್ಲಿ ಎಲ್ಲೂ ನಿಲ್ಲಬೇಡಿ, ಚಲನಶೀಲರಾಗಿರಿ ಎಂದರೆ ಹಿಂದಿನ ಎಲ್ಲಾ ವಿಚಾರಗಳನ್ನೂ ಮರೆತುಬಿಟ್ಟು ನಡೆವುದು ಎಂದಲ್ಲ. ಹೀಗೆಂದರೆ, ಹಿಂದೆ ಆಗಿರುವುದನ್ನು ಸ್ವೀಕರಿಸುವುದರ ಜೊತೆ ಜೊತೆಗೆ ಬದುಕು ಸಾಗುತ್ತಿರಲಿ ಎಂದರ್ಥ.