ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಅಂಕಣ: ‘ರೂಲ್ ಕಾಲ್’

  • ಪ್ರತಿದಿನವೂ ಹೊಸತಾಗಿರಲಿ

    ಅನೇಕ ಮಂದಿ ಪ್ರತಿದಿನ ಬೆಳಗ್ಗೆ ಏಳುವಾಗ ನಿರಾಸಕ್ತಿಯಿಂದ ಏಳು ತ್ತಾರೆ. ಅವರ ಪಾಲಿಗೆ ಇಂದು ಅಂದ್ರೆ ನಿನ್ನೆಯ ಹಾಗೆ, ಅದರಲ್ಲೇನು ಹೊಸತನ ಎಂದು ಕೇಳುತ್ತಾರೆ. ಅವರು ಯಾಕೆ ಹಾಗೆ ಭಾವಿಸಿರುತ್ತಾ ರೆಂದರೆ ಅವರಿಗೆ ಮೊನ್ನೆ, ಆಚೆ ಮೊನ್ನೆ ಸಹ ಹಾಗೇ ಇರುತ್ತದೆ. ನಾಳೆ, ನಾಡಿದ್ದು ಕೂಡ ಹಾಗೆಯೇ. ಹೀಗಾಗಿ ಅವರು ಪ್ರತಿ ಬೆಳಗನ್ನೂ ಸ್ವಲ್ಪವೂ ಖುಷಿ, ಆನಂದವಿಲ್ಲದೇ ಬಹಳ ನೀರಸವಾಗಿ ಆಹ್ವಾನಿರುತ್ತಾರೆ.
    ಹೀಗೆ ಭಾವಿಸುವ ಬದಲು ಪ್ರತಿದಿನವೂ ಹೊಸ ಅವಕಾಶ, ಹೊಸ ಸಾಧನೆಗೆ ಸಿಕ್ಕ ಅಪೂರ್ವ ಅವಕಾಶ ವೆಂದುಕೊಂಡರೆ, [...]

  • ಅಧಿಕಾರಕ್ಕೆ ಬಂದಾಗ ಯಾರನ್ನು ದೂರವಿಡಬೇಕು?

    ನೀವು ಅಧಿಕಾರಕ್ಕೆ ಬಂದ ತಕ್ಷಣ ಮಾಡಬೇಕಾದ ಮೊದಲ ಕೆಲಸ ಅಂದ್ರೆ ನಿಮ್ಮ ಹೆಂಡತಿ, ಮಕ್ಕಳನ್ನು ದೂರವಿಡುವುದು. ಒಂದು ವೇಳೆ ಹಾಗೆ ಮಾಡದಿದ್ದರೆ ಮತ್ತ್ಯಾರೂ ಅಲ್ಲ, ಇವರೇ ನಿಮ್ಮನ್ನು ಅಧಿಕಾರದಿಂದ ದೂರವಿಡುತ್ತಾರೆ. ಈ ಮಾತು ಸುಳ್ಳಲ್ಲ. ಅಧಿಕಾರಕ್ಕೆ ಬರುತ್ತಿದ್ದಂತೆ ಹೆಂಡತಿ, ಮಕ್ಕಳು ಹಾಗೂ ಬಂಧು ಬಳಗವನ್ನು ದೂರವಿಡದಿದ್ದರೆ, ಇವರಿಂದಾಗಿಯೇ ಅಧಿಕಾರ ಕಳೆದುಕೊಳ್ಳಬೇಕಾಗುತ್ತದೆ. ಹೆಂಡತಿ-ಮಕ್ಕಳೇ ಶತ್ರುಗಳಾಗಿ ಪರಿಣಮಿಸುತ್ತಾರೆ. ಆದ್ದರಿಂದ ಅವರನ್ನು ದೂರವಿಟ್ಟಷ್ಟೂ ಸುರಕ್ಷಿತ.
    ಯಾರೋ ಏನೋ ಪ್ರೀತಿಯಿಂದ ಮತ ಹಾಕಿ ಗೆಲ್ಲಿಸಿದವರು ಅಧಿಕಾರದಲ್ಲಿರುವವರನ್ನು ಸಹಿಸಿಯಾರು, ಆದರೆ ಅವರ ಹೆಂಡತಿ, ಮಕ್ಕಳು, ಅಳಿಯಂದಿರನ್ನಲ್ಲ. [...]

  • ಆಫೀಸನ್ನು ಮನೆಯೆಂದೇ ಭಾವಿಸಿ

    ಅನೇಕರು ಆಫೀಸಿಗೆ ಕಾಟಾಚಾರಕ್ಕೆ ಹೋಗುತ್ತಿರುವುದಾಗಿ ಭಾವಿಸುತ್ತಾರೆ. ಆಫೀಸಿನ ಕೆಲಸ ಅಂದ್ರೆ ತಮ್ಮ ಕೆಲಸ ಅಲ್ಲ, ಅದು ಯಾರಿಗಾಗಿಯೋ ಮಾಡುವ ಕೆಲಸ ಎಂದು ಭಾವಿಸುತ್ತಾರೆ. ಹೀಗಾಗಿ ಆಫೀಸಿನ ಕೆಲಸದಲ್ಲಿ ತೊಡಗಿಸಿಕೊಳ್ಳುವುದಿಲ್ಲ. ತೊಡಗಿಸಿ ಕೊಂಡರೂ ಅಲ್ಲಿನ ರಾಜಕೀಯದಲ್ಲೋ, ಕಾಡು ಹರಟೆಯಲ್ಲೋ, ಕೆಲಸಕ್ಕೆ ಬಾರದ ವ್ಯವಹಾರದಲ್ಲೋ ತೊಡಗಿಸಿಕೊಳ್ಳುತ್ತಾರೆ. ಅದರಿಂದ ಅವರ ವೃತ್ತಿಗೆ ಹೊಡೆತ ಬೀಳುತ್ತದೆಂಬುದು ಸಹ ಗೊತ್ತಾಗುವುದಿಲ್ಲ. ಹೊಡೆತ ಬಿದ್ದ ಬಳಿಕ ತಮ್ಮ ವೃತ್ತಿ ಹಾಗೂ ಆಫೀಸನ್ನು ಮತ್ತಷ್ಟು ದ್ವೇಷಿಸಲಾರಂಭಿಸುತ್ತಾರೆ. ಇದರಿಂದ ಮತ್ತಷ್ಟು ಕಷ್ಟಕ್ಕೆ ಸಿಲುಕಿಹಾಕಿಕೊಳ್ಳುತ್ತಾರೆ.
    ಆಫೀಸು ಅಂದ್ರೆ ಮನೆ ಇದ್ದ ಹಾಗೆ. [...]

  • ನಿಮ್ಮ ಹಣೆಬರಹಕ್ಕೆ ಎಂದಿಗೂ ಮರುಗಬೇಡಿ

    ಇದು ಮನುಷ್ಯನ ಸ್ವಭಾವ. ಬೇರೆ ಯವರು ಆರ್ಡರ್ ಮಾಡಿದ ಆಹಾರವೇ ಚೆನ್ನಾಗಿದ್ದಿರ ಬಹುದೇನೋ,  ನನ್ನದು ಸ್ವಲ್ಪವೂ ಚೆನ್ನಾಗಿಲ್ಲ. ನಾನೂ ಅವರು ಆರ್ಡರ್ ಮಾಡಿದ್ದನ್ನೇ ಮಾಡಬೇಕಿತ್ತು ಎಂದು ಎಲ್ಲರೂ ಯೋಚಿಸುತ್ತಾರೆ. ನಮ್ಮ ಪ್ಲೇಟಿನಲ್ಲಿ ಇರುವುದನ್ನು ಕಂಡು ಬೇರೆಯವರೂ ಹಾಗೇ ಯೋಚಿಸುತ್ತಾರೆ ಎಂಬುದನ್ನು ಮರೆಯಬಾರದು.
    ಒಟ್ಟಾರೆ ಹೇಳುವುದಾದರೆ ಯಾರಿಗೂ ಸಮಾಧಾನವಿಲ್ಲ. ನನಗಿಂತ ಬೇರೆಯವರು ಉತ್ತಮ ಹಾಗೂ ನೆಮ್ಮದಿಯ ಜೀವನ ಸಾಗಿಸುತ್ತಿರಬಹುದು ಎಂದೇ ಎಲ್ಲರೂ ಭಾವಿಸಿರುತ್ತಾರೆ. ತನ್ನ ಮನೆ ಚಿಕ್ಕದು, ಪಕ್ಕದ ಮನೆಯವರ ಮನೆ ದೊಡ್ಡದು, ಹೀಗಾಗಿ ಆತ ತನಗಿಂತ ಸುಖವಾಗಿರಬಹುದು ಎಂದು [...]

  • ಸಮಸ್ಯೆಯನ್ನು ಸವಾಲು ಎಂದು ಸ್ವೀಕರಿಸಿ

    ಹಾಗೆ ನೋಡಿದರೆ ಜೀವನವೇ ಸಮಸ್ಯೆ. ಅದಿಲ್ಲದ ವ್ಯಕ್ತಿಗಳೇ ಇಲ್ಲ. ಅವರೆಷ್ಟೇ ಶ್ರೀಮಂತರಾಗಿರಲಿ ಅವರ ಸಮಸ್ಯೆಯೂ ಅಷ್ಟೇ ಶ್ರೀಮಂತವಾಗಿರುತ್ತದೆ. ಸಮಸ್ಯೆಯ ಸಂಗಾತಿ ಯಾರಂದ್ರೆ ಚಿಂತೆ. ಇವರಿಬ್ಬರೂ ಜಗತ್ತಿನಲ್ಲಿರುವ ಎಲ್ಲ ವ್ಯಕ್ತಿಗಳ ಜತೆ ಸಖ್ಯ ಮಾಡುತ್ತಾರೆ.
    ಜೀವನ ಸಮಸ್ಯೆ, ಸಂಕಷ್ಟಮಯ ಎಂದ ಮೇಲೆ ಅದನ್ನು ಇಡಿಯಾಗಿ ಸ್ವೀಕರಿಸಿ ಅದರ ಜತೆ ಸಹಜೀವನ ನಡೆಸುವುದು ಅಷ್ಟೇ ಮುಖ್ಯ.  ಪ್ರತಿದಿನವೂ ಸಮಸ್ಯೆ ಎಂದು ಕೈಕಟ್ಟಿ ಕುಳಿತರೆ ಬದುಕು ಸಾಗುವುದೆಂತು? ಸಮಸ್ಯೆಗೆ ಕೊನೆಯೆಂಬುದು ಇಲ್ಲ. ಅದು ನಿತ್ಯ ಧಾರಾವಾಹಿ. ಏನೋ ಸಂತಸದ ಸಮಯ ಕಳೆಯುತ್ತಿರುವಾಗಲೇ, ಸಮಸ್ಯೆ [...]