ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಅಂಕಣ: ‘ರೂಲ್ ಕಾಲ್’

 • ಅಪಸ್ವರ ಎತ್ತುವವರಲ್ಲಿ ನೀವೇ ಕೊನೆಯವರಾಗಿ

  ಮಾತೆತ್ತಿದರೆ ನಕಾರಾತ್ಮಕವಾಗಿ ಮಾತಾಡು ವುದು ಒಂದು ಕಾಯಿಲೆ. ಕೆಲವರಿಗೆ ಇದೊಂದು ವಾಸಿಪಡಿಸಲಾಗದ ಕಾಯಿಲೆ. ಅವರು ಪ್ರತಿಯೊಂದರಲ್ಲೂ ಹುಳುಕು ಹುಡುಕುತ್ತಾರೆ. ನೀವು ಚಂದ್ರನನ್ನು ತೋರಿಸಿ, ಅವರು ಚಂದ್ರನೊಳಗಿರುವ ಕಪ್ಪು ಕಲೆಯನ್ನು ಎತ್ತಿ ತೋರಿಸುತ್ತಾರೆ. ಗುಲಾಬಿ ಹೂವನ್ನು ತೋರಿಸಿ, ಅದರ ಮುಳ್ಳು ಚುಚ್ಚುತ್ತದೆ ಎಂದು ಹೇಳುತ್ತಾರೆ. ಜಿಲೇಬಿ ಬಹಳ ಚೆನ್ನಾಗಿದೆ ಅಂದ್ರೆ, ಅದಕ್ಕೆ ಬಣ್ಣ ಹಾಕಿದ್ದು ಹೆಚ್ಚಾಯಿತು ಅಂತಾರೆ. ಇಂಥವರು ಐಶ್ವರ್ಯ ರೈ ಅನ್ನು ನೋಡಿ, ಅವಳ ಮೂಗು ತುಸು ನೀಳವಾಗಿದಿದ್ದರೆ ಚೆನ್ನಾಗಿರುತ್ತಿದ್ದಳು ಎಂದು ಹೇಳಲು ಹಿಂದೇಟು ಹಾಕಲಾರರು. ಇವರಿಗೆ […]

 • ಯಾರೂ ನಿಕೃಷ್ಟರಲ್ಲ

  ಪ್ರತಿದಿನ ನಾನು ಕನಿಷ್ಠ ಇಪ್ಪತ್ತು ಮಂದಿಯ ನ್ನಾದರೂ ಭೇಟಿ ಮಾಡುತ್ತೇನೆ. ಈ ಪೈಕಿ ಏಳೆಂಟು ಮಂದಿ ಹೊಸಬರು. ಅಂದರೆ ಅದಕ್ಕಿಂತ ಮೊದಲು ಭೇಟಿ ಮಾಡಿದವರಲ್ಲ. ಪ್ರತಿಯೊಬ್ಬರೂ ನನ್ನಲ್ಲಿ ಹೊಸ ಹೊಸ ವಿಚಾರ ಗಳನ್ನು ಹೇಳುತ್ತಾರೆ. ತಮ್ಮ ಅಪರೂಪದ ಅನುಭವಗಳನ್ನು ಹಂಚಿಕೊಳ್ಳು ತ್ತಾರೆ. ಪ್ರತಿಯೊಬ್ಬರೂ ಒಂದಿಲ್ಲೊಂದು ವಿಧದಲ್ಲಿ ಪರಿಣತರು, ನುರಿತವರು. ಅವರೆಲ್ಲರಿಗೂ ಹೇಳಲು ಒಂದು ಕತೆ, ಪ್ರಸಂಗ, ಅನುಭವವಿರುತ್ತದೆ. ಎಲ್ಲರೂ ಒಂದು ಹೊಸ ಸಂಗತಿಯನ್ನು ಹೇಳುತ್ತಾರೆ. ಅಂದರೆ ಪ್ರತಿಯೊಬ್ಬರ ಭೇಟಿಯಿಂದಲೂ ಒಂದಷ್ಟು ಹೊಸ ಸಂಗತಿಗಳನ್ನು ತಿಳಿಯಬಹುದು. ಕಲಿಯಬಹುದು. ಅವರು […]

 • ನಿಮ್ಮನ್ನು ನೀವೇ ಆಳಬೇಕು

  ಹೀಗಂದ್ರೆ ಬೇರೆಯವರ ಮಾತುಗ ಳನ್ನು ಕೇಳಬಾರದು, ಅನ್ಯರ ಉಪದೇಶ ಗಳಿಗೆ ಕಿವಿಯಾಗಬಾರದು ಅಂತಲ್ಲ. ಅವರೆಲ್ಲರ ಮಾತುಗಳನ್ನು ಕೇಳಬೇಕು. ಬೇರೆಯವರ ಕಿವಿಮಾತು, ಸಲಹೆ ಗಳನ್ನು ಗಂಭೀರವಾಗಿಯೇ ಕೇಳ ಬೇಕು. ಉಡಾಫೆ ಮಾಡಬಾರದು. ಆದರೆ ಕೊನೆಯಲ್ಲಿ ಮಾತ್ರ ನಾವೇ ನಿರ್ಧಾರ ತೆಗೆದುಕೊಳ್ಳ ಬೇಕು. ಬೇರೆಯವರ ಅಧೀನದಲ್ಲಿರುವುದು ನಮ್ಮ ಸ್ವಾತಂತ್ರ್ಯ ಹಾಗೂ ಸ್ವಾಭಿಮಾನಕ್ಕೆ ಯಾವತ್ತೂ ಧಕ್ಕೆಯೇ. ಆಗ ಬೇರೆಯ ವರು ನಮ್ಮನ್ನು ಆಳುತ್ತಾರೆ, ಸವಾರಿ ಮಾಡುತ್ತಾರೆ. ಸಹಜವಾಗಿ ನಾವು ನಮ್ಮತನವನ್ನು ಕಳೆದುಕೊಳ್ಳಬೇಕಾಗುತ್ತದೆ. ಮರದ ಮೇಲೆ ಕುಳಿತ ಹಕ್ಕಿಯಿದೆಯಲ್ಲ, ಅದಕ್ಕೆ ಮರ ಬೇಕು, […]

 • ನಮ್ಮಂಥ ಸುಖಿಗಳು ಬೇರಾರಿಲ್ಲವೆಂದು ಭಾವಿಸಿ

  ಇದನ್ನು ಪಾಲಿಸುವುದು ಕಷ್ಟ. ಹಾಗೆಂದು ಬಹಳ ಕಷ್ಟವಲ್ಲ. ಸುಲಭವಾಗಿಯೂ ಪಾಲಿಸಬಹುದು. ಯಾಕೆಂದರೆ ಯೋಚಿಸಲು, ಅಂದುಕೊಳ್ಳಲು, ಭಾವಿಸಲು, ಕಲ್ಪಿಸಿಕೊಳ್ಳಲು ಬಹಳ ಕಷ್ಟಪಡಬೇಕಿಲ್ಲ. ಅನೇಕರು ಸ್ಥಿತಿವಂತರಾಗಿರುತ್ತಾರೆ. ಒಳ್ಳೆಯ ನೌಕರಿ, ಸ್ವಂತ ಮನೆ, ಹೆಂಡತಿ, ಮಕ್ಕಳು, ಕಾರು ಎಲ್ಲವೂ ಇರುತ್ತದೆ. ಆದರೆ ಅವರಿಗಿರುವ ಕಷ್ಟ ಒಂದೆರಡಲ್ಲ. ಅವರ ಜತೆ ಹತ್ತು ನಿಮಿಷ ಕಳೆದರೆ ತಲೆಚಿಟ್ಟು ಹಿಡಿಯುವುದೊಂದು ಬಾಕಿ. ಅದೇ ಇವೇನೂ ಇಲ್ಲದವರು ದುಃಖಿಸುವುದು ಸಹಜ ಬಿಡಿ. ನಾವು ಸುಖಜೀವನ ನಡೆಸಿದರಷ್ಟೇ ಸಾಲದು. ನಾವು ಸುಖಿಗಳೆಂದು ಭಾವಿಸಿಕೊಳ್ಳಬೇಕು. ಒಂದು ವೇಳೆ ಅಷ್ಟೇನೂ ಸುಖಜೀವನ […]

 • ಕಲಾತ್ಮಕತೆ, ಅಚ್ಚರಿ ರೂಢಿಸಿಕೊಳ್ಳಿ

  ಇತ್ತೀಚೆಗೆ ಖ್ಯಾತ ಡಿಸೈನರ್ ದಶರಥ ಪಟೇಲ್ ನಿಧನರಾ ದರು. ಅವರು ಯಾವತ್ತೂ ಒಂದು ಮಾತನ್ನು ಹೇಳುತ್ತಿದ್ದರು. ಅದೇನೆಂದರೆ If you don’t make things for your own surprise, you become like  baker, everyday making the same round bread to sell. ನೀನು ಮಾಡುವ ಕೆಲಸ ನಿನಗೇ ಅಚ್ಚರಿ ಉಂಟು ಮಾಡದಿದ್ದರೆ, ಬೇಕರಿ ಅಂಗಡಿಯವನಂತೆ ಪ್ರತಿದಿನವೂ ಅದೇ ಗೋಲಾಕಾರದ ಒಂದೇ ನಮೂನೆಯ ಬ್ರೆಡ್ ಮಾಡಿ ಮಾರುತ್ತೀಯಾ, ಎಂಥಾ ಮಾತು! ಬೇಕರಿ ಅಂಗಡಿಯವನನ್ನು […]

 • ಜನರನ್ನು ಗೌರವದಿಂದ ನಡೆಸಿಕೊಳ್ಳಿ

  ಮಾವನ ಸಂಪನ್ಮೂಲಕ್ಕಿಂತ ಮಾನವ ಸಂಪನ್ಮೂಲ ದೊಡ್ಡದು. ಮೊದಲನೆಯದು ಬಹುಬೇಗ ಕರಗಿ ಹೋಗಬಹುದು. ಎರಡನೆಯದು ಎಂದೂ ಕರಗದು. ಮೂಲತಃ ನಾವು ಸಂಘಜೀವಿಗಳು. ನಾವು ದ್ವೀಪಗಳಲ್ಲ. ನಮ್ಮ ಸುತ್ತ ಬೇಲಿ ಹಾಕಿಕೊಂಡು ಬದುಕಲು ಆಗುವುದಿಲ್ಲ. ಜನರ ಜತೆ ಬೆರೆಯಲೇಬೇಕು. ಬೆರೆಯಬೇಕೆಂದರೆ ಅವರನ್ನು ಗೌರವದಿಂದ ಕಾಣಬೇಕು. ಪ್ರೀತಿಸಬೇಕು. ಹಾಗೂ ಅದಕ್ಕಿಂತ ಹೆಚ್ಚಾಗಿ ಜನರನ್ನು ಅರ್ಥ ಮಾಡಿಕೊಳ್ಳಬೇಕು. ಜೀವನದಲ್ಲಿ ನೀವು ಮೇಲಮೇಲಕ್ಕೆ ಹೋದಂತೆಲ್ಲ ಹೆಚ್ಚು ಹೆಚ್ಚು ಜನರ ಸಂಪರ್ಕಕ್ಕೆ ಬರುತ್ತೀರಿ. ಅವರನ್ನು ಅವಲಂಬಿಸುತ್ತೀರಿ. ಆಗ ಮೊದಲಿಗಿಂತ ಅವರನ್ನು ಚೆನ್ನಾಗಿ ನಡೆಸಿಕೊಳ್ಳಬೇಕಾಗುತ್ತದೆ. ನಾನು ಯಾರ […]

 • ಬೇರೆಯವರ ಜೀವನದಲ್ಲೂ ನಾವು ನೆಲೆಸಬೇಕು

  ಬಹುತೇಕ ಮಂದಿ ತಮ್ಮ ಜೀವನದ ಬಗ್ಗೆ ತಲೆಕೆಡಿಸಿಕೊಳ್ಳುತ್ತಾರೆ. ತಾವಾಯಿತು, ತಮ್ಮ ಹೆಂಡತಿ ಮಕ್ಕಳಾಯಿತು. ಒಂದು ರೀತಿಯಲ್ಲಿ ಅವರದು ಅಪಾರ್ಟ್‌ಮೆಂಟ್ ಜೀವನ. ತಮ್ಮ ಪಕ್ಕದ ಅಪಾರ್ಟ್‌ಮೆಂಟ್‌ನಲ್ಲಿ ಯಾರಿರುತ್ತಾರೆ, ಅವರುಯಾರು, ಏನು ಮಾಡ್ತಾರೆ. ಹೀಗೆ ಯಾವ ಸಂಗತಿಗಳೂ ಗೊತ್ತಿರುವುದಿಲ್ಲ. ಯಾಕೆಂದರೆ ನಮಗೆ ಅವರ ಬಗ್ಗೆ ತಿಳಿದುಕೊಳ್ಳಲು ಇಷ್ಟವಿಲ್ಲ ಎಂಬುದಕ್ಕಿಂತ ನಮ್ಮ ಪ್ರಪಂಚದಲ್ಲಿಯೇ ಮುಳುಗಿರುತ್ತೇವೆ. ನಮ್ಮ ಸುತ್ತ ಗೋಡೆ ಕಟ್ಟಿಕೊಳ್ಳುತ್ತೇವೆ. ಹೀಗಾಗಿ ನಮಗೆ ಬೇರೆಯವರ ಜೀವನದಲ್ಲಿ ನೆಲೆಸಲು ಸಾಧ್ಯವಾಗುವುದೇ ಇಲ್ಲ. ಅವರೂ ಸಹ ನಮ್ಮನ್ನು ದೂರವೇ ಇಟ್ಟಿರುತ್ತಾರೆ. ಬೇರೆಯವರ ಜೀವನದಲ್ಲಿ ನೆಲೆಸುವುದು […]

 • ನಗುವಿನಿಂದ ಆರಂಭಿಸಿ ನಿಮ್ಮ ದಿನವನ್ನು

  ಇವತ್ತು ಇಡೀ ದಿನ ನನ್ನ ಮುಖದಲ್ಲಿ ನಗುವನ್ನು ಮಾಸಲು ಕೊಡುವುದೇ ಇಲ್ಲ-ಹಾಗೊಂದು ರೂಲನ್ನು ಬೆಳ್ಳಂಬೆಳಗ್ಗೆ ಹಾಸಿಗೆಯಲ್ಲೇ ನಿಮಗೆ ನೀವೆ ವಿಧಿಸಿಕೊಂಡು ಎದ್ದೇಳಿ. ಅದಕ್ಕೇನೂ ಬಹಳಷ್ಟು ಕಷ್ಟಪಡಬೇಕಾದದ್ದೇನೂ ಇಲ್ಲ. ನಿದ್ದೆ ನಿಮ್ಮನ್ನು ನಿನ್ನೆಯ ಎಲ್ಲ ಜಂಜಡ, ಸಮಸ್ಯೆಗಳನ್ನು ಮರೆಸಿ ಮನಸ್ಸನ್ನು ಹಗುರಾಗಿಸಿರುತ್ತದೆ. ಹೊಸತನ್ನು ಯೋಚಿಸಲು ಸ್ವಚ್ಛ ಬಿಳಿಯ ಕಾಗದದಂತೆ ಮನಃಪಟಲ ಸಿದ್ಧಗೊಂಡಿರುತ್ತದೆ. ನಾವು ಇಂಥ ಬಿಳಿಹಾಳೆಯಲ್ಲಿ ದಿನದ ಬರವಣಿಗೆಗೆ ಶ್ರೀಕಾರ ಹಾಕುವ ಮೊದಲೇ ಬೇಕಾದ್ದು, ಬೇಡದ್ದು…ಅರ್ಥಹೀನ, ಅನರ್ಥಕಾರಿ ಹೀಗೆ ಏನೆಂದರೆ ಅದನ್ನು ಗೀಚಲಾರಂಭಿಸಿಬಿಟ್ಟಿರುತ್ತೇವೆ. ಎಷ್ಟೋ ವೇಳೆ ಎಚ್ಚರಾಗಿದ್ದರೂ ಹಾಸಿಗೆಯಲ್ಲೇ […]

 • ನಾವು ಪ್ರತಿದಿನವೂ ಒಳ್ಳೆಯರಾಗಬೇಕು

  ಈ ರೂಲ್‌ಇದೆಯಲ್ಲಾ, ಇದನ್ನು ಅನುಸರಿಸುವುದು ಬಹಳ ಕಷ್ಟ. ಯಾಕೆಂದರೆ ಈ ನಿಯಮವನ್ನು ಒಂದೂ ದಿನ ಸಡಿಲಿಸುವಂತಿಲ್ಲ. ಪ್ರತಿದಿನವೂ ಕಠಿಣ ವ್ರತದಂತೆ, ಶಪಥದಂತೆ, ಪ್ರೀತಿಯಂತೆ. ಶಾಸನದಂತೆ ಆಚರಿಸಬೇಕು. ಒಂದು ದಿನ ಪಾಲಿಸದಿದ್ದರೂ ಗ್ರಹಚಾರ ತಪ್ಪಿದ್ದಲ್ಲ. ಒಂದು ದಿನ ಉಲ್ಲಂಘಿಸಿದರೂ ಜೀವನವಿಡೀ ಜನರ ಟೀಕೆಗೆ, ನಿಂದನೆಗೆ ಗುರಿಯಾಗಬೇಕು. ಉದಾಹರಣೆಗೆ ನಿಮ್ಮ ಹೆಂಡತಿಯಿರಬಹುದು, ಮಕ್ಕಳಿರಬಹುದು ಅದರ ಜತೆ ಎಂದಿಗೂ ಸುಳ್ಳು ಹೇಳುವಂತಿಲ್ಲ. ಮೋಸ ಮಾಡುವಂತಿಲ್ಲ. ಈ ನಿಯಮವನ್ನು ಒಂದು ದಿನದ ಮಟ್ಟಿಗೆ ಮುರಿದಿರಿ ಎನ್ನಿ. ಅವರು ನಿಮ್ಮನ್ನು ಜೀವನವಿಡೀ ನಂಬುವುದಿಲ್ಲ. ಸದಾ […]

 • ಜನರನ್ನು ಅರ್ಥ ಮಾಡಿಕೊಳ್ಳಿ

  ನನಗಂತೂ ಇದು ನಿರಂತರ ಪಾಠ. ಪ್ರಾಯಶಃ ನಾನೇನಾದರೂ ಇನ್ನೂರು ವರ್ಷಗಳು ಬದುಕಿದ್ದರೆ, ಕೊನೆಯ ದಿನದ ತನಕವೂ ಈ ಮಾತನ್ನು ನಾನು ಒಂದು ನಿಯಮ ಎಂಬಂತೆ ಪಾಲಿಸುತ್ತೇನೆ. ಪ್ರತಿದಿನವೂ ಕಲಿಯುವ ಪಾಠವಿದು. ನಮ್ಮ ತಂದೆ, ತಾಯಿ, ಹೆಂಡತಿ, ಮಕ್ಕಳು, ಅಣ್ಣ, ತಮ್ಮ, ಅಕ್ಕ, ತಂಗಿ, ಬಾಸ್, ಡ್ರೈವರ್, ಮನೆ ಕೆಲಸದಾಕೆ… ಹೀಗೆ ಯಾರೇ ಇರಲಿ, ಅವರೆಲ್ಲರನ್ನೂ ದಿನವೂ ಭೇಟಿ ಮಾಡುತ್ತೇವೆ. ಅವರೊಂದಿಗೆ ಸದಾ ವ್ಯವಹರಿಸುತ್ತೇವೆ. ಆದರೂ ಅವರನ್ನು ಕ್ಷಣಕ್ಷಣವೂ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಯಾರೂ ಸಹ ಸಂಪೂರ್ಣ ಅರ್ಥವಾಗಿದ್ದಾರೆ ಎಂದೇನಿಲ್ಲ. ಬಹಳ […]