ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಅಂಕಣ: ‘ನೂರೆಂಟು ಮಾತು’

 • ಕೋಟ್ಯಂತರ ಜನರ ಕಣ್ಣೀರು ಒರೆಸಿದ ಆ ಎರಡು ಹನಿ !

  ನೂರೆಂಟು ನೋಟ- ವಿಶ್ವೇಶ್ವರ ಭಟ್ ಮೊನ್ನೆ ಸೋಮವಾರ ಬೆಳಗ್ಗೆ ನನ್ನ ತಾಯಿ ‘ಕನ್ನಡಪ್ರಭ’ ಪತ್ರಿಕೆಯ ಶೀರ್ಷಿಕೆಯನ್ನು ನಿಧಾನವಾಗಿ, ಒಂದೊಂದೇ ಪದವನ್ನು ಹೆಕ್ಕಿ ಹೆಕ್ಕಿ ಓದುತ್ತಿದ್ದರು-“ಖುಷಿಗೊಂದು ನೆಪ ಸಿಕ್ಕಿದೆ. ಇನ್ನು ಮುಂದೆ ಯಾವ ಮಗುವಿಗೂ ಪೋಲಿಯೋ ಬಾಧಿಸಲ್ಲ. ಭಾರತ ಇನ್ನು ಪೋಲಿಯೋ ಮುಕ್ತ” ಈ ಶೀರ್ಷಿಕೆಯನ್ನು ಇನ್ನೊಮ್ಮೆ ದಿಟ್ಟಿಸಿ, ಕನ್ನಡಕ ತೆಗೆದು ನಿರಾಳವಾಗಿ ಉಸಿರು ತೆಗೆದುಕೊಳ್ಳುತ್ತಿದ್ದಂತೆ ಅವರಿಗೆ ಅರಿವಿಲ್ಲದಂತೆ ಎರಡು ಕಣ್ಣೀರ ಹನಿ ಕೆನ್ನೆಗೆ ಇಳಿದಿತ್ತು. ಆ ಶೀರ್ಷಿಕೆ ಅವರಲ್ಲಿ ಮೂಡಿಸಿದ ಭಾವಧಾರೆಯ ಒರತೆಯ ಮೂಲ ಯಾವುದಿರಬಹುದು ಎಂಬುದನ್ನು […]

 • ಅಮೆರಿಕ ಅಧ್ಯಕ್ಷ ಮೌನವ್ರತ ಪಾಲಿಸಿದರೆ ವಿಶ್ವದಲ್ಲಿ ಶಾಂತಿ!

  ನೂರೆಂಟು ನೋಟ- ವಿಶ್ವೇಶ್ವರ ಭಟ್ ಯೋಗಿ ದುರ್ಲಭಜೀ ಅವರೊಂದಿಗಿನ ಮಾತುಕತೆಯನ್ನು ಈ ವಾರವೂ ಮುಂದುವರಿಸುತ್ತೇನೆ. ಅವರು ಹೇಳಿದ್ದ ಎಷ್ಟೋ ಸಂಗತಿಗಳನ್ನು ನಿಮಗೆ ಹೇಳಲಿಲ್ಲವೆನಿಸುತ್ತದೆ. ಇನ್ನು ಅವರು ಮೌನವ್ರತಕ್ಕೆ ಕುಳಿತರೆ ಮಾತಾಡುವುದು ಎಂದೋ? ‘ಯೋಚನೆಗಳು, ಕಲ್ಪನೆಗಳು ಸುಂದರ. ಆದರೆ ಮಾತುಗಳು ಅಸಹ್ಯ. ನಮಗೆ ಮಾತು ಅನಿವಾರ್ಯವಲ್ಲ. ಮನುಷ್ಯನಿಗೂ ದೇವರು ಮಾತುಗಳನ್ನು ಕೊಡಬಾರದಿತ್ತು.’ ಎಂದು ಯೋಗಿಜೀ ಆಗಾಗ ಹೇಳುತ್ತಿರುತ್ತಾರೆಂದು ಅವರ ಶಿಷ್ಯರಾದ ಯೋಗಿ ನಿಶ್ಚಿಂತಜೀ ಸಹ ಮೊನ್ನೆ ಹೇಳಿದ್ದು ತಮಾಷೆಯಾಗಿ ಕಂಡಿತು. ‘ನಾನೇನಾದರೂ ಮುಖ್ಯಮಂತ್ರಿಯೋ, ಪ್ರಧಾನಿಯೋ ಆದರೆ ಜನರೆಲ್ಲ ವರ್ಷದಲ್ಲಿ […]

 • ಸಾರ್ವಜನಿಕವಾಗಿ ಮಾನ, ಮರ್ಯಾದೆ ಬಿಟ್ಟವರೆಂದರೆ ಭಾರತೀಯರು!

  ನೂರೆಂಟು ನೋಟ- ವಿಶ್ವೇಶ್ವರ ಭಟ್ ‘ಹೊಸ ವರ್ಷದ ಶುಭಾಶಯಗಳು’ ಅಂದೆ. ‘ನಿಮಗೂ ಶುಭಾಶಯಗಳು’ ಎಂದರು ಯೋಗಿ ದುರ್ಲಭಜೀ. ‘ನೀವು ಫೋನ್ ಮಾಡ್ತೀರಿ ಅಂದುಕೊಂಡಿದ್ದೆ. ಸಂತಸವಾಯಿತು. ಅಂದ ಹಾಗೆ, ಎಲ್ಲ ದಿನವೂ ಹೊಸ ವರ್ಷ ಅಂತೀವಿ. ಆದರೆ ಜಗತ್ತಿನಾದ್ಯಂತ ಈ ಒಂದು ದಿನ ಅದೆಷ್ಟು ಕಾತರ, ನಿರೀಕ್ಷೆ, ಆಕಾಂಕ್ಷೆಗಳು ಗರಿಗೆದರುತ್ತವೆ ಅಲ್ಲವಾ? ವರ್ಷವಿಡೀ ಒಳ್ಳೆಯದಾಗಲಿ ಎಂದು ಈ ದಿನ ಆಶಿಸುವುದಿದೆಯಲ್ಲ, ಜನರ ನಿರೀಕ್ಷೆಗಳು ಎಷ್ಟೊಂದು ಮುಗ್ಧ ಎಂದೆನಿಸುತ್ತದೆ. ಆದರೂ ಎಲ್ಲರ ಆಸೆಗಳು ಈಡೇರಲಿ’ ಎಂದರು ಯೋಗೀಜೀ. ‘ಡಿಸೆಂಬರ್ 31ರ […]

 • ಆಸ್ಕರ್, ಮೊಯ್ಲಿ ಶಿರಾಡಿಘಾಟ್ನಲ್ಲಿ ಪ್ರಯಾಣಿಸಿದರೆ ಬೆಟ್ಸ್!

  ನೂರೆಂಟು ನೋಟ- ವಿಶ್ವೇಶ್ವರ ಭಟ್ ನಾನು ಕುಣಿಗಲ್ಲನ್ನು ದಾಟಿದ್ದೆ. ಸ್ನೇಹಿತರಾದ ಟಿ.ಎನ್. ಸೀತಾರಾಮ್ಗೆ ಫೋನ್ ಮಾಡಿದೆ. ತಾವು ಮೂಡಿಗೆರೆ ಸಮೀಪ ಇರುವುದಾಗಿ ತಿಳಿಸಿದರು. ‘ಮಂಗಳೂರಿಗೆ ಹೋಗಬೇಕಾದ ನೀವು, ಅಲ್ಲಿ ಯಾಕೆ ಇದ್ದೀರಿ?’ ಎಂದು ಕೇಳಿದೆ. ‘ಅಯ್ಯೋ, ಸಕಲೇಶಪುರದ ಮಾರ್ಗ ಸಂಪೂರ್ಣವಾಗಿ ಹಾಳಾಗಿ ಹೋಗಿದೆ. ನೀವು ಆ ಮಾರ್ಗದಲ್ಲಿ ಬರಲೇಬೇಡಿ. ಸ್ವಲ್ಪ ಸುತ್ತಾದರೂ ಪರವಾಗಿಲ್ಲವೆಂದು ಈ ಮಾರ್ಗದಲ್ಲಿ ಹೋಗುತ್ತಿದ್ದೇನೆ’ ಎಂದರು. ನಾವಿಬ್ಬರೂ ಮಂಗಳೂರಿಗೆ ಹೋಗಿ, ಮರುದಿನ ಮೂಡಬಿದ್ರಿಯಲ್ಲಿ ನಡೆಯುತ್ತಿದ್ದ ಆಳ್ವಾಸ್ ನುಡಿಸಿರಿ ಕಾರ್ಯಕ್ರಮದ ‘ಮಾಧ್ಯಮ’ ಗೋಷ್ಠಿಯಲ್ಲಿ ಪಾಲ್ಗೊಳ್ಳುವವರಿದ್ದೆವು. ಆಗಲೇ […]

 • ಮಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಎಂಬ ಹೊಸ ಬ್ರಾನ್ಸನ್!

  ಇತ್ತೀಚೆಗೆ ಓದುಗ ಮಿತ್ರರೊಬ್ಬರು, ‘ನೀವು ಈ ದಿನಗಳಲ್ಲಿ ಯಾಕೋ ದುಬೈ ರೂಲರ್ ಮಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರ ಹಿಂದೆ ಬಿದ್ದಿದ್ದೀರಿ ಅಂತ ಅನಿಸುತ್ತಿದೆ. ಆಗಾಗ ಅವರ ಬಗ್ಗೆ ಬರೆಯುತ್ತೀರಿ. ಅವರನ್ನು quote ಮಾಡುತ್ತೀರಿ. ಏನಿದರ ವಿಶೇಷ?’ ಎಂದು ಕೇಳಿ ಪತ್ರ ಬರೆದಿದ್ದರು. ನಾನು ಅವರಿಗೆ ಒಂದು ಸಾಲಿನ ಉತ್ತರ ಬರೆದೆ-‘ಹೌದು. ನನ್ನ ಪಾಲಿಗೆ ಮಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಹೊಸ ರಿಚರ್ಡ್ ಬ್ರಾನ್ಸನ್!’ ಅಷ್ಟಕ್ಕೂ ಪತ್ರಕರ್ತರಾದವರು ಸಾಧಕರು ಹಾಗೂ ಸಮಯ ಸಾಧಕರ ಹಿಂದೆ […]

 • ಶೀಲಾ ದೀಕ್ಷಿತರನ್ನು ಸೋಲಿಸಿದ್ದು ‘ಆಪ್‌’ ಅಲ್ಲ, ಪಿಎಂ!

  ನಮ್ಮಲ್ಲೊಂದು ಮಿಥ್ಯೆಯಿತ್ತು. ಅದು ಒಡೆದು ಚೂರಾಗಿದೆ. ಅದೇನೆಂದರೆ ನಾವು ಮಾತು ಮಾತಿಗೆ ಹೇಳುತ್ತಿದ್ದೆವು. ಈ ವ್ಯವಸ್ಥೆ ಬದಲಾಗೊಲ್ಲ, ಈ ರಾಜಕೀಯ ಸುಧಾರಿಸದಷ್ಟು ಹಾಳಾಗಿ ಹೋಗಿದೆ. ಭರವಸೆಯಿಡುವ ನಾಯಕರೇ ಇಲ್ಲ. ನಮ್ಮ ಮಧ್ಯೆ ಭ್ರಷ್ಟರು, ಲಫಂಗರು, ಕೊಲೆಗಡುಕರು ತುಂಬಿಹೋಗಿದ್ದಾರೆ. ಇವರಿಗೆ ನಮ್ಮನ್ನು ಆಳುವ ಜವಾಬ್ದಾರಿ ಕೊಟ್ಟುಬಿಟ್ಟಿದ್ದೇವೆ. ರಾಜಕಾರಣದಲ್ಲಿ ಪ್ರಾಮಾಣಿಕರಿಗೆ ಆಸ್ಪದವೇ ಇಲ್ಲವಾ, ಹಣಬಲ, ತೋಳ್ಬಲವುಳ್ಳವರ ಮಧ್ಯೆ ಸಂಭಾವಿತರು ಆರಿಸಿಬರುವುದಾದರೂ ಹೇಗೆ. ಈ ಕೆಟ್ಟು ಕಿಲುಬಾಗೆದ್ದುಹೋದ ರಾಜಕೀಯ ರಂಗವನ್ನು ಸ್ವಚ್ಛಗೊಳಿಸುವುದು ಸಾಧ್ಯವೇ ಇಲ್ಲವಾ… ಎಂದೆಲ್ಲ ಮಾತಾಡಿಕೊಳ್ಳುತ್ತಿದ್ದೆವು. ಇದು ಎಂಥ ಕಾಡು […]

 • ಇದು ಯಾರು ಬರೆದ ‘ವಿಧಿ’ಯೋ?

  ನೂರೆಂಟು ನೋಟ- ವಿಶ್ವೇಶ್ವರ ಭಟ್ ಸಂವಿಧಾನದ 370 ನೇ ವಿಧಿ ಬಗ್ಗೆ ಮುಕ್ತ ಚರ್ಚೆಯಾಗಲಿ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹೇಳಿದ್ದಿ ತಪ್ಪಾ ? ಈ ದೇಶದಲ್ಲಿ ಕೆಲವು ವಿಷಯಗಳ ಬಗ್ಗೆ ಮಾತಾಡಲೇಬಾರದು, ಪ್ರಶ್ನಿಸಕೂಡದು. ಅಂಥ ವಿಷಯವನ್ನು ಪ್ರಸ್ತಾಪಿಸಿದರೆ ಸಾಕು; ಎಲ್ಲರೂ ನಿಮ್ಮ ಮೇಲೆ ಎಗರಿ ಬಂದು ಮುಗಿಬೀಳುತ್ತಾರೆ. ಅಲ್ಲಿಗೆ ಬಾಯಿ ಮುಚ್ಚಬೇಕು. ಅಷ್ಟಾಗಿಯೂ ನೀವು ಸುಮ್ಮನಾಗದಿದ್ದರೆ ಬಾಯಿ ಮುಚ್ಚಿಸುವ ಇತರ ತಂತ್ರಗಳನ್ನು ಪ್ರಯೋಗಿಸಲಾಗುತ್ತದೆ. ಇಲ್ಲಸಲ್ಲದ ಹಣೆಪಟ್ಟಿಯನ್ನು ಅಂಟಿಸಲಾಗುತ್ತದೆ. ಮೊನ್ನೆ ಭಾನುವಾರ ಜಮ್ಮುದಲ್ಲಿ ನಡೆದ […]

 • ‘ಭಾರತ ರತ್ನ’ ಪಡೆಯುವ ಅರ್ಹತೆ ಅಟಲ್‌ಗಿಲ್ಲವೇ?

  ನೂರೆಂಟು ನೋಟ- ವಿಶ್ವೇಶ್ವರ ಭಟ್ ತಮ್ಮ ಹೆಸರಿನಲ್ಲಿ ಯಾವುದೇ ಸರ್ಕಾರಿ ಯೋಜನೆ, ಸಂಸ್ಥೆಗಳು ಇರಕೂಡದೆಂದು ಅಟಲ್ ಸ್ಪಷ್ಟ ಸೂಚನೆ ನೀಡಿದ್ದರು. ಆದರೂ ಗ್ರಾಮೀಣ ರಸ್ತೆ ಯೋಜನೆಯನ್ನು ಘೋಷಿಸುವಾಗ ‘ಅಟಲ್ ಗ್ರಾಮ್ ಸಡಕ್ ಯೋಜನಾ’ ಎಂದು ಹೆಸರಿಸಿ ಯೋಜನೆಯ ಕರಡನ್ನು ಮುಂದಿಟ್ಟಾಗ, ತಮ್ಮ ಹೆಸರನ್ನು ಕಾಟು ಹೊಡೆದು ‘ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನಾ’ ಎಂದು ತಿದ್ದಿದರು ಅಟಲ್! ಇಂಥ ವ್ಯಕ್ತಿಯ ವಿಷಯದಲ್ಲೂ ಚೌಕಾಶಿ ಮಾಡಬೇಕೆ? ಒಂದು ಸಣ್ಣ ವಿವಾದವಿಲ್ಲದೇ ‘ಭಾರತ ರತ್ನ’ದಂಥ ಅತ್ಯುನ್ನತ ಗೌರವ, ಪ್ರಶಸ್ತಿಯನ್ನು ಕೊಡಲು ನಮಗೆ ಆಗುವುದಿಲ್ಲವಲ್ಲ. […]

 • ಯಾರನ್ನೂ ಬಿಡಲ್ಲ ಅಂದವರು ಮಾಡಿದ್ದೇನು?

  – ವಿಶ್ವೇಶ್ವರ ಭಟ್ ಮುಂಬೈ ದಾಳಿಯ ಪಿತೂರಿದಾರರಾಗಿರುವ ಹಫೀಜ್ ಸಯೀದ್ ಹಾಗೂ ದಾವೂದ್ ಇಬ್ರಾಹಿಂ ಇಂದಿಗೂ ಪಾಕಿಸ್ತಾನದಲ್ಲಿ ಖುಲ್ಲಂಖುಲ್ಲ ಓಡಾಡಿಕೊಂಡಿದ್ದಾರೆ. ಅವರನ್ನು ರಾಜತಾಂತ್ರಿಕ ಕ್ರಮಗಳ ಮೂಲಕ ಮಟ್ಟ ಹಾಕಲು ಸಾಧ್ಯವಿಲ್ಲ ಎಂದಾದರೆ ಈ್ಟಢಜ್ಠಡಿ ಕಠಜ್ಠಛಡ್ಝ್ಟಿಟಿ ಮೂಲಕ ಮುಗಿಸಬಹುದಿತ್ತಲ್ಲವೇ? ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ನೇಪಾಳದ ಸಂಸದ ಮಿರ್ಜಾ ದಿಲ್ಷಾದ್ ಬೇಗ್‌ನನ್ನು 1998ರಲ್ಲಿ ಎನ್‌ಡಿಎ ಸರ್ಕಾರ ಪರಿಸಮಾಪ್ತಿಗೊಳಿಸಿದ ಉದಾಹರಣೆ ನಮ್ಮ ಮುಂದಿಲ್ಲವೇ? “ಡಿಯರ್ ಪ್ರೈಮ್ ಮಿನಿಸ್ಟರ್, ನಾನೊಬ್ಬ ಮುಂಬೈನ ಹುಲುಮಾನವ. 100 ಜನರು ಪ್ರಯಾಣಿಸಬಹುದಾದ ರೈಲ್ವೇ ಬೋಗಿಯಲ್ಲಿ ಇಲಿಗಳಂತೆ […]

 • ಸರಿ, ಹಾಗಾದರೆ ಇನ್ನೇಕೆ ತಡ?

  ಅವನ ಬಗ್ಗೆ ಅಲ್ಲಿ ಇಲ್ಲಿ ಸಿಕ್ಕಿದ ಲೇಖನ, ಪುಸ್ತಕಗಳನ್ನು ಓದಿಕೊಂಡು, ಅವನ ಹುಚ್ಚು ಸಾಹಸ, ಪರಿಶ್ರಮ, ಮುನ್ನುಗ್ಗುವಿಕೆ, ಯಶಸ್ಸುಗಳಿಗೆ ಬೆರಗಾಗಿ, ಈ ಕಾರಣಗಳಿಂದ ಅವನನ್ನು ಮೆಚ್ಚುತ್ತಾ, ನನಗೆ ಅಂಟಿದ ಗೀಳನ್ನು ನನ್ನ ಓದುಗರಿಗೂ ಅಂಟಿಸಿ, ಅವರಲ್ಲೂ ಅವನ ಬಗ್ಗೆ ಉಮ್ಮೇದು ಮೂಡಿಸಿದ ಬಳಿಕ, ನಾನು ಬರೆಯದಿದ್ದರೆ ಮುನಿಸಿಕೊಳ್ಳುವ, ಚಿಕ್ಕಧಮಕಿ ಹಾಕುವ, ಪ್ರೀತಿಯಿಂದ ಗದರುವ ಓದುಗರು ಹುಟ್ಟಿಕೊಂಡಿದ್ದಾರೆ. ಅವರ ‘ಧಮಕಿ’ಗೆ ನಾನು ಪದೇ ಪದೆ ಶರಣಾಗತನಾಗುತ್ತಿದ್ದೇನೆ. ನಾನು ಹೇಳುತ್ತಿರುವುದು ರಿಚರ್ಡ್ ಬ್ರಾನ್‌ಸನ್ ಬಗ್ಗೆ ಎಂಬುದು ನಿಮಗೂ ಗೊತ್ತು. ಅವನ […]