ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಅಂಕಣ: ‘ನೂರೆಂಟು ಮಾತು’

  • ಹೇಳಿ, ಮತದಾರನೆದುರು ಅದ್ಯಾವ ಆಯ್ಕೆ ಇದೆ?

    ಈ ಸಲದ ಚುನಾವಣೆಯಲ್ಲಿ ಎಲ್ಲರೂ ಮತದಾನದಲ್ಲಿ ಪಾಲ್ಗೊಳ್ಳುವಂತೆ ಅರಿವು ಮೂಡಿಸಲೆಂದು ನನ್ನ ಸಹೋದ್ಯೋಗಿ ಮಿತ್ರರು ಸೇರಿ ಒಂದು ನಿಮಿಷದ ಚಿತ್ರ ಮಾಡಿ ನನಗೆ ತೋರಿಸಿದರು. ತಳ್ಳುಗಾಡಿಯಲ್ಲಿ ತರಕಾರಿ ಮಾರುವವನ ಮುಂದೆ ಗೃಹಿಣಿಯೊಬ್ಬಳು ಚೌಕಾಶಿ ಮಾಡಿ ತರಕಾರಿ ಖರೀದಿಸುವ ದೃಶ್ಯ. ಆಕೆಗೆ ಯಾವ ತರಕಾರಿಯೂ ಇಷ್ಟವಾಗುವುದಿಲ್ಲ. ಇದು ಬಲಿತಿದೆ, ಇದು ಕೊಳೆತಿದೆ, ಇದಕ್ಕೆ ಇಷ್ಟೊಂದು ಬೆಲೆಯಾ, ಕಮ್ಮಿ ಕೊಡೊಲ್ವಾ, ಇಷ್ಟು ರೇಟಿಗೆ ಕೊಟ್ಟರೆ ಕೊಳ್ಳುತ್ತೇನೆ…ಎಂದೆಲ್ಲ ಆಕೆ ಚೌಕಾಶಿ ಮಾಡುತ್ತಿರುತ್ತಾಳೆ. ತರಕಾರಿಯವನ ಹಾಗೂ ಆ ಗೃಹಿಣಿಯ ಮಾತುಕತೆಯನ್ನು ಪಕ್ಕದಲ್ಲಿ ನಿಂತ [...]

  • ಒಂದೊಂದೇ ತುಣುಕು, ಭಾವಕೋಶಕ್ಕೆ ಗುಟುಕು

    ನಿಮ್ಮ ಜತೆ ಸದಾ ಒಂದು ಪುಟ್ಟ ನೋಟ್‌ಬುಕ್ ಇಟ್ಟುಕೊಳ್ಳಿ. ದಿನಾಲೂ ನಿಮಗೆ ಏನೇನೋ ಯೋಚನೆ, ಕಲ್ಪನೆ ಸರಿದು ಹೋಗುತ್ತಿರುತ್ತದೆ. ಅವುಗಳಲ್ಲಿ ನಿಮಗೆ ಇಷ್ಟವಾದುದನ್ನು ನೋಟ್ ಮಾಡಿಕೊಳ್ಳಿ. ಪುಸ್ತಕ ಓದುವಾಗ, ಸಿನಿಮಾ ನೋಡುವಾಗ, ಗೆಳೆಯರೊಂದಿಗೆ ಹರಟೆ ಮುಗಿಸಿದಾಗ, ಗಣ್ಯರನ್ನು ಭೇಟಿ ಮಾಡಿ ಬಂದ ನಂತರ, ಸೆಮಿನಾರ್ ಅಥವಾ ಕಾರ್ಯಕ್ರಮದಲ್ಲಿ ಭಾಷಣ ಕೇಳುವಾಗ ನಿಮಗೆ ಇಷ್ಟವಾದ ಸಂಗತಿ, ಸಾಲು, ಜೋಕು, ಕತೆ…ಹೀಗೆ ಎಲ್ಲವನ್ನೂ ನೋಟ್ಸ್ ಮಾಡಿಕೊಳ್ಳುತ್ತಾ ಹೋಗಬೇಕು. ಒಂದೆರಡು ವರ್ಷಗಳ ಬಳಿಕ ಸುಮ್ಮನೆ ತೆರೆದು ನೋಡಬೇಕು.
    ಎಂಥ ಮಜಾ ಆಗಿರುತ್ತದೆ ಗೊತ್ತಾ? [...]

  • ಎಲ್ಲ ಸಮಸ್ಯೆಗಳಿಗೂ ಪರಿಹಾರದ ಪಾಠ ಹೇಳುತ್ತದೆ ಪ್ರಕೃತಿ!

    Go back to nature!
    ಹಾಗಂತ ಹೇಳಿದವನು ಆಪಲ್ ಕಂಪ್ಯೂಟರ್ ಮುಖ್ಯಸ್ಥ ದಿವಂಗತ ಸ್ಟೀವ್ ಜಾಬ್ಸ್. ಸ್ಟೀವ್ ಜಾಬ್ಸ್‌ಗೆ ಬ್ಲಾಗರ್‌ನೊಬ್ಬ ‘ಜಗತ್ತಿನೆಲ್ಲೆಡೆ ನಿಮ್ಮ ಕಂಪನಿಯ ಕಂಪ್ಯೂಟರ್, ಐಫೋನ್, ಐಪಾಡ್, ಐಪಾಡ್ ಟಚ್ ಮುಂತಾದ ಉಪಕರಣಗಳೆಲ್ಲ ಭಾರೀ ಸಂಖ್ಯೆಯಲ್ಲಿ ಮಾರಾಟವಾಗುತ್ತಿರುವುದನ್ನು ನೋಡಿದರೆ ಭಯವಾಗುತ್ತದೆ. ಇವೆಲ್ಲವುಗಳನ್ನು ತಯಾರಿಸುವುದರಿಂದ ಪ್ರಕೃತಿ ಮೇಲೆ ಎಂಥ ಪರಿಣಾಮವಾಗಬಹುದು? ಈ ಉಪಕರಣಗಳನ್ನು ರೀಚಾರ್ಜ್ ಮಾಡಲು ಪ್ರತಿದಿನ ಎಷ್ಟು ಕರೆಂಟು ಬೇಕು? ಪರಿಸರದ ಮೇಲೆ ನೀವು ಎಂಥ ಆಕ್ರಮಣ ಮಾಡುತ್ತಿದ್ದೀರಿ ಎಂಬುದರ ಕಲ್ಪನೆ ನಿಮಗಿದೆಯಾ?’ ಎಂದು ಕೇಳಿದ್ದಕ್ಕೆ ಆತ [...]

  • ನೀರು ಉಳಿಸಲು ಇವರು ಮನೆ ಮನೆ ನಲ್ಲಿ ರಿಪೇರಿ ಮಾಡ್ತಾರೆ!

    ಅಬಿದ್ ಸುರತಿ ಎಂಬ ಹೆಸರನ್ನು ನೀವೆಲ್ಲ ಕೇಳಿರಬಹುದು. ಭಾರತ ಕಂಡ ಹೆಸರಾಂತ ಲೇಖಕರಲ್ಲಿ ಅಬಿದ್ ಸುರತಿ ಕೂಡ ಒಬ್ಬರು. ಹಿಂದಿ ಹಾಗೂ ಗುಜರಾತಿ ಭಾಷೆಯಲ್ಲಿ ಸಣ್ಣ ಕಥೆಗಳು, ಕಾದಂಬರಿಗಳು, ನಾಟಕಗಳು, ಏಕಾಂಕಗಳನ್ನು ಬರೆದಿರುವುದು ಅಬಿದ್ ಸುರತಿಯವರ ಹೆಚ್ಚುಗಾರಿಕೆ. ಅವರ ಕೃತಿಗಳು, ಹತ್ತಕ್ಕೂ ಹೆಚ್ಚು ಭಾಷೆಗೆ ಅನುವಾದವಾಗಿವೆ. ಸಾಹಿತ್ಯ ಕ್ಷೇತ್ರದಲ್ಲಿನ ಶ್ರೇಷ್ಠ ಸಾಧನೆಯನ್ನು ಪರಿಗಣಿಸಿ, ಅವರಿಗೆ ರಾಷ್ಟ್ರೀಯ ಪುರಸ್ಕಾರ ನೀಡಲಾಗಿದೆ. ಜೊತೆಗೆ, ಹಿಂದಿ ಸಾಹಿತ್ಯ ಸಂಸ್ಥಾ ಪ್ರಶಸ್ತಿ, ಗುಜರಾತ್ ಸರ್ಕಾರ ನೀಡುವ ಗುಜರಾತ್ ಗೌರವ್ ಪ್ರಶಸ್ತಿ ಕೂಡ ಅಬಿದ್ [...]

  • ಸಿಂಹಗಳೊಂದಿಗೆ ‘ಸಹಜ ಪ್ರೀತಿ’ಗೆ ಬಿದ್ದವನ ಬೆರಗು!

    ಇದು ಟಿವಿ ಚಾನೆಲ್ ಸೇರಿದ್ದರ ಪ್ರಭಾವವೋ ಅಥವಾ ಸಹಜ ಸೆಳೆತವೋ ಅಥವಾ ಎರಡೂ ಇರಬಹುದು, ಇತ್ತೀಚೆಗೆ ಸಿನಿಮಾ ಮತ್ತು ಡಾಕ್ಯುಮೆಂಟರಿಗಳನ್ನು ಹೆಚ್ಚಾಗಿ ನೋಡಲಾರಂಭಿಸಿದ್ದೇನೆ. ಒಂದು ಪುಸ್ತಕ ಓದಿದ ಸುಖ, ಸಮಾಧಾನ ಸಿಗುತ್ತದೆ. ಪುಸ್ತಕ ಓದಲು ಕನಿಷ್ಟ ಒಂದೆರಡು ದಿನಗಳಾದರೂ ಬೇಕು. ಸಿನಿಮಾ, ಡಾಕ್ಯುಮೆಂಟರಿಗಳು ಹಾಗಲ್ಲ, ಒಂದೆರಡು ತಾಸಿನಲ್ಲಿ ನೋಡಿ ಮುಗಿಸಬಹುದು.
    ಆದರೆ ಪುಸ್ತಕ ಓದಿನ ರುಚಿಯೇ ಬೇರೆ. ಈ ಮಾತನ್ನು ಸಿನಿಮಾ, ಡಾಕ್ಯುಮೆಂಟರಿಗಳಿಗೂ ಅನ್ವಯಿಸಬಹುದು. ನ್ಯಾಶನಲ್ ಜಿಯಗ್ರಾಫಿಕ್, ಬಿಬಿಸಿ, ಡಿಸ್ಕವರಿ ಮುಂತಾದ ಸಂಸ್ಥೆಗಳು ಕೆಲವು ಅದ್ಭುತವೆನಿಸುವ ಡಾಕ್ಯುಮೆಂಟರಿಗಳನ್ನು ಹೊರತಂದಿವೆ. [...]

  • ಮಗನ ಸಾವಿನ ಪ್ರಶ್ನೆಗೆ, ದೇವರು ಕೊಟ್ಟ ಉತ್ತರ!

    ಮಗನನ್ನು ಆಸ್ಪತ್ರೆಗೆ ಸೇರಿಸಿ ಆಗಲೇ ತಿಂಗಳಾಗುತ್ತಾ ಬಂತು. ಡಾಕ್ಟರು ಖಡಕ್ಕಾಗಿ ಏನೂ ಹೇಳುತ್ತಿಲ್ಲ. ‘ಬಂದಿರುವ ಕಾಯಿಲೆ ಜ್ವರವೋ, ತಲೆನೋವೋ, ಕೀಲುನೋವೋ ಆಗಿದ್ದರೆ, ಇಂತಿಷ್ಟೇ ದಿನದಲ್ಲಿ ವಾಸಿಯಾಗುತ್ತದೆ ಎಂದು ಹೇಳಬಹುದಿತ್ತು. ಆದರೆ, ನಿಮ್ಮ ಮಗುವಿಗೆ ಬಂದಿರುವ ಕಾಯಿಲೆ ಅಂತಿಂಥದ್ದಲ್ಲ; ಕ್ಯಾನ್ಸರ್. ಅದಕ್ಕೆ ಚಿಕಿತ್ಸೆ ಕಷ್ಟ. ಆದರೂ ನಮ್ಮ ಪ್ರಯತ್ನ ನಾವು ಮಾಡ್ತೇವೆ. ಈ ದಿನಗಳಲ್ಲಿ ತುಂಬಾ ಜನ ಕ್ಯಾನ್ಸರ್ ಗೆದ್ದಿದ್ದಾರೆ. ಈ ಸಂಬಂಧವಾಗಿ ಪ್ರತಿ ತಿಂಗಳೂ ಪೇಪರಿನಲ್ಲಿ ಸುದ್ದಿ ಪ್ರಕಟವಾಗುತ್ತಿದೆ. ನಿಮ್ಮ ಮಗನ ಕಾಯಿಲೆಯೂ ಗುಣವಾಗಲಿ ಎಂದೇ ಪ್ರಾರ್ಥಿಸೋಣ. [...]

  • ಪ್ರೇಮಿಗಳ ದಿನಕ್ಕೆ ಜೀವನ ಪ್ರೀತಿಯ ಕತೆಗಳ ಗುಚ್ಛ

    ನಾನು ಹಲವು ಬಾರಿ ಯೋಗಿ ದುರ್ಲಭಜೀ ಕುರಿತು ಪ್ರಸ್ತಾಪಿಸಿದ್ದೇನೆ. ಅವರ ವ್ಯಕ್ತಿತ್ವ, ವಿಚಾರ ಅನೇಕರಿಗೆ ಇಷ್ಟವಾಗಿದೆ. ಇನ್ನು ಕೆಲವರಿಗೆ ಅವರ ವ್ಯಕ್ತಿತ್ವ ನಿಗೂಢವೂ ಹೌದು. ಮೂಲತಃ ವಜ್ರದ ವ್ಯಾಪಾರಿಯಾಗಿರುವ ಅವರು ಸಾವಿರಾರು ಕೋಟಿ ರೂಪಾಯಿ ಗಳಿಸಿ, ಗಳಿಸಿದ್ದೆಲ್ಲವನ್ನೂ ದಾನ ಮಾಡಿ, ಪುನಃ ಆರಂಭದಿಂದ ಶುರು ಮಾಡಿ, ಮತ್ತೆ ಹಣ ಗಳಿಸಿ ಅದನ್ನೆಲ್ಲ ಸಮಾಜಕ್ಕೆ ಅರ್ಪಿಸುವ ಅವರ ಮನೋಭಾವ ಹಲವರಿಗೆ ವಿಚಿತ್ರವಾಗಿ ಕಂಡಿರಲಿಕ್ಕೂ ಸಾಕು. ದುರ್ಲಭಜೀ ಅವರಿಗೆ ಗಳಿಸುವುದೂ ಗೊತ್ತು. ಗಳಿಸಿದ್ದೆಲ್ಲ ತನ್ನದಲ್ಲ, ಅದು ಸಮಾಜದ್ದು ಎಂದು ಬರಿದಾಗುವ [...]

  • ಮುಳ್ಳಿನ ಹಾದಿಗೆ ಹೂ ಹಾಸಿದವರ ಹೃದಯಂಗಮ ಕತೆ

    ‘ಸಾರ್, ಮಹೇಶ್ ಎಂಬುವವರು ಸುಮಾರು ಎರಡು ತಾಸಿನಿಂದ ನಿಮಗಾಗಿ ಕಾಯುತ್ತಿದ್ದಾರೆ. ಕರೆಯಲಾ?’ ಎಂದು ನನ್ನ ಸೆಕ್ರೆಟರಿ ರವಿಚಂದ್ರ ಹೇಳಿದರು. ನಾನು ಈಗಲೋ ಆಗಲೋ ಬಡಿಯುವ ಜ್ವಾಲಾಮುಖಿ ಪರ್ವತದ ಮೇಲೆ ಕುಳಿತವರ ಸ್ಥಿತಿಯಲ್ಲಿದ್ದೆ. ಭಗವಂತ ಬಂದು ‘ವರ ಕೇಳು’ ಅಂತ ಹೇಳಿದರೂ ‘ವರವೂ ಬೇಡ, ವಧುವೂ ಬೇಡ. ನನ್ನ ಪಾಡಿಗೆ ನನ್ನನ್ನು ಬಿಟ್ಟು ಬಿಡು’ ಎಂದು ಹೇಳುತ್ತಿದ್ದೆನೇನೋ? ಟಿವಿ ಚಾನೆಲ್ ಹುಟ್ಟಿಸುವ ಮನಸ್ಥಿತಿ ಅಂಥದು. ನನ್ನ ಭಾವನೆ ಅರ್ಥಮಾಡಿಕೊಂಡ ರವಿಚಂದ್ರ, ಹೊರಗೆ ನನಗಾಗಿ ಕಾಯುತ್ತಿದ್ದ ಮಹೇಶನಿಗೆ, ‘ಇಂದು ಭೇಟಿ [...]

  • ಎಲ್ಲರ ಬದುಕಿನಲ್ಲೂ ದೇವರಂತೆ ಯಾರಾದರೂ ಬಂದೇ ಬರುತ್ತಾರೆ!

    ತುಂಬ ಕಷ್ಟದ ಸಂದರ್ಭ ಎದುರಿಗಿದ್ದಾಗ, ತೀರಾ ಆಕಸ್ಮಿಕವಾಗಿ ಯಾರೋ ಒಬ್ಬರು ನೆರವಿಗೆ ಬರುತ್ತಾರೆ. ಅದನ್ನು ನೆನಪಿಸಿಕೊಂಡು ನಾವೆಲ್ಲ-’ದೇವರ ರೂಪದಲ್ಲಿ ಬಂದು ನಮ್ಮನ್ನು ಕಾಪಾಡಿಬಿಟ್ಟಿರಿ’ ಎಂದು ಉದ್ಗರಿಸಿರುತ್ತೇವೆ. ವಾಸ್ತವ ಏನೆಂದರೆ, ಬೇರೊಬ್ಬರ ಪಾಲಿಗೆ ದೇವರ ರೂಪದಲ್ಲಿ ನೆರವಾಗುವಂಥ ಸಂದರ್ಭಗಳು ಎಲ್ಲರ ಬದುಕಿನಲ್ಲೂ ಒಂದಲ್ಲ ಒಂದು ಸಂದರ್ಭದಲ್ಲಿ ಬಂದೇ ಬರುತ್ತದೆ. ಈ ಮಾತಿಗೆ ಸಾಕ್ಷಿಯಾಗುವಂಥ ಹೃದ್ಯ ಪ್ರಸಂಗವೊಂದನ್ನು ಓದುಗ ಸ್ನೇಹಿತರಾದ ಎಚ್.ಎಸ್.ಜಿ. ರಾವ್ ಹೇಳಿದರು. ಅದನ್ನು ನಿಮಗೆ ಹೇಳಲೇಬೇಕು ಎನಿಸುತ್ತಿದೆ. ಖಂಡಿತವಾಗಿಯೂ ಇದು ನಿಮಗೆ ಇಷ್ಟವಾಗುತ್ತದೆ.
    ಆ ಸೇನಾ ತುಕಡಿಯಲ್ಲಿ ಹದಿನೈದು [...]

  • ರಸ್ತೆ ತಿರುವಿನ ಕೌತುಕವನ್ನೇ ಕನಸಂತೆ ಹೊದ್ದ ಕತೆಗಳು!

    ಕೆಲವು ವಿಷಯಗಳೇ ಹಾಗೆ: ಅವು ಕೆಲವೇ ಪದಗಳೊಂದಿಗೆ ಮುಗಿದು ಹೋಗುತ್ತವೆ. ಆದರೆ, ಒಂದೇ ನಿಮಿಷದ ಓದಿಗೆ ಮುಗಿದು ಹೋಗುವ ಪ್ರಸಂಗಗಳು ಕೆಲವೊಮ್ಮೆ ಇಡೀ ದಿನ ಕಾಡುತ್ತವೆ. ಬದುಕಿನ ಅರ್ಥವಾಗದ ತಿರುವುಗಳ ಬಗ್ಗೆ ಯೋಚಿಸುವಂತೆ, ಧ್ಯಾನಿಸುವಂತೆ ಮಾಡುತ್ತವೆ. ಕೆಲವೊಂದು ಸಂದರ್ಭಗಳಲ್ಲಂತೂ ಕಣ್ಣೀರು ಹಾಕುವಂತೆ ಮಾಡಿ ಬಿಡುತ್ತವೆ. ಅಂತರ್ಜಾಲದಲ್ಲಿ ಸಿಕ್ಕಿದ ಅಂಥ ಕೆಲವು ಪ್ರಸಂಗಗಳ ಗುಚ್ಛ ನಿಮ್ಮೆದುರಿಗಿದೆ…
    >>>>>>>>>>
    - ಅಜ್ಜನಿಗೆ ಆಗಲೇ 70 ವರ್ಷ ತುಂಬಿದೆ. ಜಿಲ್ಲೆಯ ಯಶಸ್ವೀ ಉದ್ಯಮಿ ಎಂಬ ಹಣೆಪಟ್ಟಿ ಅವನಿಗೆ ಅಂಟಿಕೊಂಡಿದೆ. ವ್ಯಾಪಾರ-ವ್ಯವಹಾರದ ಎಲ್ಲ ಒಳಗುಟ್ಟುಗಳೂ ಅವನಿಗೆ [...]