ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಅಂಕಣ: ‘ನಂಗೆ ಇಷ್ಟಾನೋ’

 • ಒಂದು ಸೋಲು, ಸೋಲಲ್ಲ

  ಜೀವನದಲ್ಲಿ ಪದೇ ಪದೆ ಫೇಲ್ ಆದವರು ಸೋಲಿನ ರುಚಿ, ಕಹಿ, ಸಿಹಿ ಎಲ್ಲವನ್ನೂ ಅರಿತಿರುತ್ತಾರೆ. ಸೋಲನ್ನು ದಕ್ಕಿಸಿಕೊಂಡು, ಅದರ ಅವಮಾನವನ್ನು ಸಹಿಸಿಕೊಂಡು ಪುನಃ ಮೊದಲಿನಂತಾಗಲು ಪ್ರಯತ್ನಿಸುತ್ತಾರೆ. ಆದರೆ ಜೀವನದಲ್ಲಿ ಯಶಸ್ಸನ್ನು ಕಂಡವರು, ಸೋಲನ್ನೇ ಕಾಣದವರು ಏಕಾಏಕಿ ಫೇಲ್ ಆದಾಗ ಚಡಪಡಿಸುತ್ತಾರಲ್ಲ, ಒಳಗೊಳಗೇ ಬೇಯುತ್ತಾರಲ್ಲ, ಅದನ್ನು ನೋಡಲಾಗುವುದಿಲ್ಲ. ಯಶಸ್ಸು ಅವರಲ್ಲೊಂದು ದಾರ್ಷ್ಟ್ಯವನ್ನು ರೂಪಿಸಿರುತ್ತದೆ. ಯಶಸ್ಸಿನ ಗುಂಗಿನಲ್ಲಿ ಅವರು ಮೈಮರೆತಿರುತ್ತಾರೆ. ಜೀವನ ಸದಾ ಹೀಗೇ ಇರುತ್ತದೆಂದು ಭಾವಿಸಿರುತ್ತಾರೆ. ಆದರೆ ಹಠಾತ್ತನೆ ಸೋಲು ಎದುರಾದರೆ ಅವರಿಗೆ ಅದನ್ನು ಹೇಗೆ ಸ್ವೀಕರಿಸಬೇಕೆಂಬುದೇ ಗೊತ್ತಾಗದೇ […]

 • ವಿಶ್ವದ ಕೊನೆ ಹಾಗೂ ವಿಶ್ವ ನಾಯಕರ ನಾನಾ ನಮೂನೆ

  ನಂಗೆ ಇಷ್ಟಾನೋ ವಿಶ್ವೇಶ್ವರ ಭಟ್ ಹಿರಿಯ ಪತ್ರಕರ್ತ ಮಿತ್ರರಾದ ಎಚ್.ಎನ್. ಆನಂದ ಅವರು ಹೇಳಿದ ಈ ಕಾಲ್ಪನಿಕ ಹಾಸ್ಯ ಪ್ರಸಂಗವನ್ನು ನಿಮಗೆ ಹೇಳದಿರುವುದಾದರೂ ಹೇಗೆ? ಮೋದಿ ಪ್ರಿಯರು ಇದನ್ನು ಹೇಳಿ ಹೇಳಿ ಸವೆಸುವ ‘ಅಪಾಯ’ವಿದೆ. ಹಾಸ್ಯೋತ್ಸವಗಳಲ್ಲಿ ಗಂಗಾವತಿ ಝ್ಛ್ಝೀ ಖ್ಯಾತಿಯ ಪ್ರಾಣೇಶ್‌ಗೆ ಸಿಕ್ಕರೆ ಚಪ್ಪರ ಹಾರುವ ಚಪ್ಪಾಳೆ ಗ್ಯಾರಂಟಿ. ಇರಲಿ. ಒಂದು ದಿನ ದೇವರಿಗೆ ಏನನಿಸಿತೋ ಏನೋ, ಈ ಜಗತ್ತಿಗೆ ಮಂಗಳ ಹಾಡಲು ನಿರ್ಧರಿಸಿದ. ಈ ವಿಶ್ವದಲ್ಲಿರುವ ಮೂವರು ಅತ್ಯಂತ ಪ್ರಭಾವಿ ವ್ಯಕ್ತಿಗಳನ್ನು ಕರೆಯಲು ನಿರ್ಧರಿಸಿದ. ಆತ […]

 • ರಾಹುಲ್ ಮಾತಿಗಿಂತ ಮನಮೋಹನ ಮೌನವೇ ಲೇಸು!

  ನಂಗೆ ಇಷ್ಟಾನೋ- ವಿಶ್ವೇಶ್ವರ ಭಟ್ ರಾಹುಲ್ ಗಾಂಧಿಯವರೇನೋ ಸಂದರ್ಶನ ಕೊಟ್ಟು ಹೊರಟುಬಿಟ್ಟರು. ಆದರೆ ಕಾಂಗ್ರೆಸ್ ವಕ್ತಾರರ ಪಾಡು ಯಾರಿಗೂ ಬೇಡ. ಎಲ್ಲ ಟಿವಿ ಚಾನೆಲ್‌ಗಳಲ್ಲಿ ಅವರು ತಡಬಡಿಸುವುದು ರಾಷ್ಟ್ರೀಯ ತಮಾಷೆಯಾಗಿಬಿಟ್ಟಿದೆ.ಖಾಸಗಿಯಾಗಿ ಪತ್ರಕರ್ತರ ಮುಂದೆ ತಮ್ಮ ಅಳಲನ್ನು ತೋಡಿಕೊಳ್ಳಲಾರಂಭಿಸಿದ್ದಾರೆ. ಒಂದು ಸಂದರ್ಶನ ಈ ಪರಿ ಚರ್ಚೆ, ವಾದ-ವಿವಾದ, ಕೋಲಾಹಲ ಸೃಷ್ಟಿಸಬಹುದೆಂದು ಯಾರೂ ಅಂದುಕೊಂಡಿರಲಿಲ್ಲ. ಸ್ವತಃ ಸಂದರ್ಶನ ನೀಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‌ಗಾಂಧಿ ಅವರಿಗೂ ಸಂದರ್ಶಿಸಿದ ‘ಟೈಮ್ಸ್‌ನೌ’ ಟಿವಿ ಚಾನೆಲ್‌ನ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರಿಗೂ ಇದು ಗೊತ್ತಿದ್ದಿರಲಿಕ್ಕಿಲ್ಲ. […]

 • ಏನೋ ಹೇಳಲು ಹೋಗಿ ಏನೋ ಆಯಿತು!

  ನಂಗೆ ಇಷ್ಟಾನೋ- ವಿಶ್ವೇಶ್ವರ ಭಟ್ ಸ್ನೇಹಿತರಾದ ಎಸ್. ಷಡಕ್ಷರಿ ಅವರು ಮೊನ್ನೆ ಫೋನ್ ಮಾಡಿ, ‘ಉಡುಪಿ ಪರ್ಯಾಯದಲ್ಲಿ ನಿಮ್ಮನ್ನು ಸನ್ಮಾನಿಸುತ್ತಿರುವ ಫೋಟೋವನ್ನು ಪತ್ರಿಕೆಯಲ್ಲಿ ನೋಡಿದೆ’ ಎಂದರು. ಅಷ್ಟೇ ಹೇಳಿದ್ದರೆ ಪರವಾಗಿರಲಿಲ್ಲ. ಅದಾದ ನಂತರ ಮತ್ತೊಂದನ್ನು ಸೇರಿಸಿದರು. ‘ಆ ಫೋಟೋದಲ್ಲಿ ನೀವು ಬಹಳ ಸಭ್ಯರಂತೆ, ಸಂಭಾವಿತರಂತೆ ಕಾಣುತ್ತಿದ್ದಿರಿ’ ಎಂದರು. ಅದಕ್ಕೆ ನಾನು ‘ಏನ್ಸಾರ್, ಇದು ಪ್ರಶಂಸೆಯೋ, ತಕರಾರೋ, ಟೀಕೆಯೋ ಗೊತ್ತಾಗುತ್ತಿಲ್ಲ’ ಎಂದೆ. ‘ಹಾಗಲ್ಲ. ನೀವು ಸದಾ ಪ್ಯಾಂಟು, ಶರ್ಟನ್ನು ಧರಿಸಿರುತ್ತೀರಿ. ಆದರೆ ಫೋಟೋದಲ್ಲಿ ನೀವು ಬಿಳಿ ಶರ್ಟು ಹಾಗೂ […]

 • ನಮ್ಮ ಕಾಲವೇ ಚೆನ್ನಾಗಿತ್ತು, ಈಗ ಕಾಲ ಕೆಟ್ಟು ಹೋಯ್ತು!

  ನಂಗೆ ಇಷ್ಟಾನೋ!- ವಿಶ್ವೇಶ್ವರ ಭಟ್ ನಾನು ಚಿಕ್ಕವನಿದ್ದಾಗ ಅಮ್ಮ ಐದು ರುಪಾಯಿ ಕೊಟ್ಟು ಅಂಗಡಿಗೆ ಹೋಗಿ ಎರಡು ಕೆಜಿ ಅಕ್ಕಿ, ಒಂದು ಕೆಜಿ ಎಣ್ಣೆ ತೆಗೆದುಕೊಂಡು ಬಾ ಅಂತಿದ್ದರು. ನಾನು ಅಷ್ಟೇ ಹಣದಲ್ಲಿ ಚಾಕಲೇಟ್. ಬಿಸ್ಕೀಟ್ ಬಾಕ್ಸ್, ನೋಟ್‌ಬುಕ್, ಪೆನ್ನು, ಪೆನ್ಸಿಲ್, ಇರೇಸರ್, ಕಂಪಾಸ್‌ಬಾಕ್ಸ್ ಎಲ್ಲವನ್ನೂ ತರುತ್ತಿದ್ದೆ. ಇಬ್ಬರು ವಯಸ್ಸಾದವರು ಭೇಟಿಯಾದಾಗ ‘ಕಾಲ ಕೆಟ್ಟು ಹೋಯ್ತು, ನಮ್ಮ ಕಾಲದಲ್ಲಿ ಹೀಗಿರಲಿಲ್ಲ. ಆಗ ಎಷ್ಟು ಚೆನ್ನಾಗಿತ್ತು’ ಎಂದು ಮುಲುಗುವುದು, ಮೆಲುಕು ಹಾಕುವುದು ಸಹಜ. ನಾವು ಚಿಕ್ಕಂದಿನಿಂದಲೂ ವಯಸ್ಸಾದವರು ಹೀಗೆ […]

 • ಸೋತು ಸುಣ್ಣವಾದ ಮನಸ್ಸು ಹೇಗೆ ಯೋಚಿಸಬೇಕು?

  ನಂಗೆ ಇಷ್ಟಾನೋ!- ವಿಶ್ವೇಶ್ವರ ಭಟ್ ಘಟನಾ ಸ್ಥಳದಲ್ಲಿ ನಿಂತು ವರದಿ ಮಾಡುವ ಟಿವಿ ರಿಪೋರ್ಟರ್‌ನ ಮಾತುಗಳನ್ನು ಕೇಳಿಸಿಕೊಂಡಾಗ ಅತಿಶಯೋಕ್ತಿ ಅಂದ್ರೆ ಏನು ಎಂಬುದನ್ನು ‘ಲೈವ್‌’ ಆಗಿ ಅನುಭವಿಸಬಹುದು. ಬೆಂಕಿ ದುರಂತ ಸಂಭವಿಸಿದ ಜಾಗದ ಪಕ್ಕದಲ್ಲಿ ನಿಂತು ವರದಿ ಮಾಡುವ ರಿಪೋರ್ಟರ್‌ನ ಮಾತುಗಳಲ್ಲಿ ತನಗೇ ಬೆಂಕಿ ತಗುಲಿದೆಯೇನೋ ಎಂಬ ಧಾವಂತವಿರುತ್ತದೆ. ಇತ್ತೀಚೆಗೆ ಪತ್ರಿಕೆಯೊಂದರಲ್ಲಿ ಖ್ಯಾತ ಚೆಸ್ ಆಟಗಾರ ವಿಶ್ವನಾಥನ್ ಆನಂದ ಅವರ ಸಂದರ್ಶನ ಓದುತ್ತಿದ್ದೆ. ಅವರಿಗೆ ಮೂರೇ ಮೂರು ಪ್ರಶ್ನೆಗಳನ್ನು ಕೇಳಲಾಗಿತ್ತು. ನಿಮ್ಮ ಜೀವನದ ಅತ್ಯಂತ ಕಷ್ಟದಾಯಕವಾದ ಕ್ಷಣಗಳು […]

 • ಅವನು ಕುಡಿದಿದ್ದಕ್ಕೆ ನಾನೇಕೆ ಬೆಲೆ ತೆರಲಮ್ಮಾ?

  ನಂಗೆ ಇಷ್ಟಾನೋ- ವಿಶ್ವೇಶ್ವರ ಭಟ್ ‘ಅಮ್ಮಾ, ಹೆಮ್ಮೆಯಿದೆ, ನಿನ್ನ ಮಾತಿಗೆ ಚ್ಯುತಿ ತರಲಿಲ್ಲ ನಾನು ಎಂದು. ಇವತ್ತೊಂದಿನ ಕುಡಿ ಏನಾಗಲ್ಲ ಎಂದರು. ಕುಡಿದಾಕ್ಷಣ ಗಾಡಿ ಓಡಿಸುವುದಕ್ಕೆ ಕಷ್ಟವಾಗುತ್ತೆ ಅನ್ನೋದೆಲ್ಲ ಸುಳ್ಳು ಎಂದು ಪುಸಲಾಯಿಸಿದರು. ಅವೆಲ್ಲದರ ನಡುವೆಯೂ ‘ಯಾವತ್ತೂ ಕುಡಿದು ಗಾಡಿ ಓಡಿಸಬೇಡ ಮಗನೇ’ ಎಂಬ ನಿನ್ನ ಮಾತುಗಳೇ ಹಿತವೆನಿಸಿ ಕಾಡಿದವು. ಮೊನ್ನೆ ರಾತ್ರಿ ನ್ಯೂ ಇಯರ್ ಪಾರ್ಟಿ ಮುಗಿದಿದೆ. ಹೊಸವರ್ಷವನ್ನು ಸಂಭ್ರಮದಿಂದ ಸ್ವಾಗತಿಸುವುದು ತಪ್ಪೇನೂ ಅಲ್ಲ. ಆದರೆ ನಮ್ಮೊಳಗೊಂದು ಉನ್ಮಾದವನ್ನು ತುಂಬಿಕೊಳ್ಳುವುದಕ್ಕೆ ಅದು ನೆಪವಾಗಿಬಿಡುತ್ತದೆ. ಮರುದಿನ ಪತ್ರಿಕೆ […]

 • ಈ ಗೀಳು, ಗುಂಗು ನಿಮ್ಮದಾಗಲಿ

  ನಂಗೆ ಇಷ್ಟಾನೋ- ವಿಶ್ವೇಶ್ವರ ಭಟ್ ‘ಹೊಸ ವರ್ಷ ಬರುತ್ತಿದೆ. ನಿಮ್ಮ ಸಂದೇಶ ಏನು?’ ಎಂದು ಯೋಗಿ ದುರ್ಲಭಜೀ ಅವರನ್ನು ಕೇಳಿದೆ. ‘ಪ್ರತಿ ವರ್ಷ ಸಂದೇಶ ಕೊಟ್ಟು ಕೊಟ್ಟು ಖಾಲಿಯಾಗಿದೆ’ ಎಂದು ಹೇಳಿ ಜೋರಾಗಿ ನಕ್ಕರು. ಅವರ ಶಿಷ್ಯರಾದ ಯೋಗಿ ನಿಶ್ಚಿಂತಜೀ ಸಹ ಜೋರಾಗಿ ನಗುವುದು ಕೇಳಿಸಿತು. ನಾನೂ ನನ್ನ ಪಾಲಿನ ನಗುವನ್ನು ಸೇರಿಸಿದೆ. ದುರ್ಲಭಜೀ ಅವರಿಗೆ ಏನನ್ನಿಸಿತೋ ಏನೋ? ‘ಇದನ್ನು ಸಂದೇಶ ಎಂದು ಭಾವಿಸಬೇಕಿಲ್ಲ. ಒಂದು ವೇಳೆ ಭಾವಿಸಿದರೆ, ಹೊಸ ವರ್ಷದ ಆಗಮನದ ಸಂದರ್ಭದಲ್ಲಿ ಮಾತ್ರ ಅಲ್ಲ, […]

 • ಕಾಮನ್ಸೆನ್ಸ್ ಪಕ್ಕಕ್ಕಿಟ್ಟು ನಿಯಮ ಪಾಲಿಸಿದಾಗ…

  ನಂಗೆ ಇಷ್ಟಾನೋ!- ವಿಶ್ವೇಶ್ವರ ಭಟ್ ಸಾಮಾನ್ಯವಾಗಿ ನಾವು ಒಂದು ಜೋಕಿಗೆ ಒಂದು ಸಲ ನಗುತ್ತೇವೆ. ಆದರೆ ಕೆಲವರು ಎರಡು ಸಲ ನಗುತ್ತಾರೆ. ಜೋಕನ್ನು ಹೇಳಿದಾಗ (ಅರ್ಥವಾಗಲಿ, ಅರ್ಥವಾಗದಿರಲಿ) ಮೊದಲ ಸಲ ನಗುತ್ತಾರೆ ಹಾಗೂ ಜೋಕು ಅರ್ಥವಾದಾಗ ಎರಡನೆ ಸಲ ನಗುತ್ತಾರೆ-ಇನ್ನು ಕೆಲವರು ನೆನಪಿಸಿಕೊಂಡಾಗಲೆಲ್ಲ ಮೂರನೆ, ನಾಲ್ಕನೆ ಸಲ ನಗುವುದೂ ಉಂಟು. ಇದು ತಮಾಷೆಯಲ್ಲ. ಕೆಲವರು ಅದೆಷ್ಟು ಕಟ್ಟುನಿಟ್ಟಿನ ವ್ಯಕ್ತಿಗಳೆಂದರೆ ಅವರು ನಿಯಮವನ್ನು ಸ್ವಲ್ಪವೂ ಉಲ್ಲಂಘಿಸುವುದಿಲ್ಲ. ನೂರಕ್ಕೆ ನೂರು ನಿಯಮ ಪಾಲಿಸುತ್ತಾರೆ. ತಮ್ಮ ಕಾಮನ್‌ಸೆನ್ಸ್‌ನ್ನು ಪಕ್ಕಕ್ಕೆ ಇಟ್ಟು ನಿಯಮಗಳನ್ನು […]

 • ಸಸಿ ಬೆಳೆವ ಅಚ್ಚರಿ ನಮ್ಮಲ್ಲಿ ತುಂಬುವ ಜೀವಸ್ಫೂರ್ತಿ

  ಪ್ರತಿದಿನವೂ ನಾನು ಆಲೂಗಡ್ಡೆ ಹೊಲದಲ್ಲಿ, ನೆಟ್ಟ ಬೀಜ ಮೊಳಕೆಯೊಡೆಯಿತಾ, ಸಸಿ ಎಷ್ಟು ದೊಡ್ಡದಾಯಿತು ಎಂದು ನೋಡುತ್ತಿದ್ದೆ. ಅದು ದಿನದಿಂದ ದಿನ ಬೆಳೆದಂತೆಲ್ಲ ಖುಷಿಯಾಗುತ್ತಿತ್ತು. ಭೂಮಿಯೊಳಗೆ ಆಲೂಗಡ್ಡೆ ಎಷ್ಟು ದೊಡ್ಡ ಬೆಳೆದಿರಬಹುದು ಎಂಬ ಕಲ್ಪನೆಯೇ ನನ್ನಲ್ಲಿ ಒಂದು ರೀತಿಯ ಪುಳಕವನ್ನುಂಟು ಮಾಡುತ್ತಿತ್ತು. ಮೊನ್ನೆ ಶಿರಸಿಯಿಂದ ಬೆಂಗಳೂರಿಗೆ ಬರುವಾಗ ಅಕ್ಕಿಆಲೂರ ಸಮೀಪದ ಘಾಳಪುಜಿ ಎಂಬ ಸಣ್ಣ ಊರಿನಲ್ಲಿ ಕಾರು ನಿಲ್ಲಿಸಿ ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಬಸಪ್ಪ ಎಂಬ ರೈತನೊಂದಿಗೆ ಲೋಕಾಭಿರಾಮ ಮಾತಾಡುತ್ತಿದ್ದೆ. ಮಳೆ, ಚಳಿ, ಕೂಲಿ ಸಮಸ್ಯೆ, ಬೆಲೆ, […]