ಅಂಕಣ: ‘ಕೇಳ್ರಪ್ಪೋ ಕೇಳಿ’
-
ಮಳೆ ಬರೀ ಬೆಂಗಳೂರಲ್ಲಷ್ಟೇ ಬರ್ತಾ ಇದೆಯಲ್ಲ, ಇಲ್ಲಿಗೂ ಸ್ವಲ್ಪ ಕಳಿಸಿಕೊಡ್ತೀರಾ?
ಕೇಳ್ರಪ್ಪೋ ಕೇಳಿ
* ಪ್ರಮೋದ್ ಕುಮಾರ್, ಎಚ್‌ಆರ್‌ಬಿ ಲೇಔಟ್, ರಾಯಚೂರು
ಭಟ್ರೆ ಮಳೆ ಬರೀ ಬೆಂಗಳೂರಲ್ಲಷ್ಟೇ ಬರ್ತಾ ಇದೆಯಲ್ಲ, ಇಲ್ಲಿಗೂ ಸ್ವಲ್ಪ ಕಳಿಸಿಕೊಡ್ತೀರಾ?
ಮಳೆ ಹುಡುಗಿನ್ನೇ ನಿಮ್ಮೂರಿಗೆ ಕಳಿಸಿದ್ವಲ್ಲ ಮಾರಾಯ, ವಾಪಸ್ ಕಳುಹಿಸಿಬಿಟ್ರಿ!
* ವಿ. ಹೇಮಂತಕುಮಾರ, ಬೆಂಗಳೂರು, 9035992900
ಸ್ನೇಹದಿಂದ ಜಗತ್ತಾ? ಪ್ರೀತಿಯಿಂದ ಜಗತ್ತಾ?
ಜಗತ್ತು ಇರುವುದರಿಂದ ಪ್ರೀತಿ, ಸ್ನೇಹ ಎಲ್ಲಾ.
* ಪತ್ನಿಯನ್ನು ಪ್ರೀತಿಯಿಂದ ‘ಕಿಚನ್ ಕ್ವೀನ್’ ಅಂತಾನೂ ಕರೆಯಬಹುದಲ್ವೇ?
ಹಾಗಂದ ತಕ್ಷಣ ಅವಳು ಬೇಗ ಮಾಡು ‘ಕಿಚನ್ ಕ್ಲೀನ್’ ಅಂದಾಳು ಹುಶಾರ್.
* ಬಿ.ಎಂ. ಪರಶಿವಮೂರ್ತಿ, ವಿಜಯನಗರ, ಬೆಂಗಳೂರು
ಮದುವೆ ಆದವನಿಗೆ ಹೆಂಡ್ತಿ- ಮಕ್ಕಳ ಚಿಂತೆ. ಮದುವೆ [...] -
ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವವರಿಗೆ ನಿಮ್ಮ ಕಿವಿಮಾತು?
ಕೇಳ್ರಪ್ಪೋ ಕೇಳಿ
* ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಕೋಟ್ಯಧಿಪತಿ ಕಾರ್ಯಕ್ರಮದಲ್ಲಿ ಕೇಳುವಂಥವು ‘ಬದುಕು ಬದಲಿಸೋ ಪ್ರಶ್ನೆಗಳು’. ಕೇಳ್ರಪ್ಪೋ ಕೇಳಿಯಲ್ಲಿ..?
- ಮಾಮೂಲಿ ಬದುಕಿಗೆ ಕೊಂಚ ಕಚಗುಳಿ ಇಡುವ ಪ್ರಶ್ನೆಗಳು.
* ವಿಷ್ಣುಶಂಕರ್, ಶಿವಮೊಗ್ಗ
ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವವರಿಗೆ ನಿಮ್ಮ ಕಿವಿಮಾತು?
- ಮಣ್ಣಾಗಿದ್ದರೂ ಪರವಾಗಿಲ್ಲ, ಡೆಟಾಲ್ ಸೋಪನ್ನೇ ಬಳಸಿ. ಇದು ಕೀಟಾಣುಗಳಿಂದ ಕೊಡುತ್ತೆ ಹಂಡ್ರೆಡ್ ಪರ್ಸೆಂಟ್ ಸುರಕ್ಷೆ!
* ರಮೇಶ್ ಭಟ್ ಆವರ್ಸೆ, ಕುಂದಾಪುರ 9164276058
ಕಾಫಿ ಜತೆ ಹೆಂಡ್ತಿ ಸರೀನಾ ಅಥವಾ ಗರ್ಲ್‌ಫ್ರೆಂಡ್ ಸರೀನಾ?
- ಕಾಫಿ ಜತೆ ಯಾರಾದ್ರೂ ಇದ್‌ಕೊಳ್ಳಲಿ, ನಿಮ್ ಜತೆ ಯಾರಿರಬೇಕು ಯೋಚ್ನೆ [...] -
‘ಕೇಳ್ರಪ್ಪೋ ಕೇಳಿ’ಗೆ ಎಷ್ಟು ಬಾರಿ ಕೇಳಿದರೂ ಸುಸ್ತೇ ಆಗದಿರುವ ಗುಟ್ಟೇನು?
ಕೇಳ್ರಪ್ಪೋ ಕೇಳಿ
* ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
‘ಕೇಳ್ರಪ್ಪೋ ಕೇಳಿ’ಗೆ ಎಷ್ಟು ಬಾರಿ ಕೇಳಿದರೂ ಸುಸ್ತೇ ಆಗದಿರುವ ಗುಟ್ಟೇನು?
ಇದು ಸುಸ್ತಾಗೋ ‘ಕೇಳಿ’ಯಲ್ಲ!
* ಎಂ. ಮೃತ್ಯುಂಜಯಪ್ಪ, ಚಿತ್ರದುರ್ಗ
ಮೂಢರಿರುವವರೆಗೂ ಮಠಾಧಿಪತಿಗಳು, ಮೂರ್ಖರಿರುವವರೆಗೂ ಮುಖಂಡರು ಎಂಬುದು ಝ್ಛ್ಝೀ ಅಂಬೋಣ. ನೀವೇನಂತೀರಿ?
ಮೊಬೈಲ್ ಇರುವವರೆಗೂ ಸಿಮ್್ಕಾರ್ಡ್್ಗಳು!
* ಲಕ್ಕೂರು ಎಂ. ನಾಗರಾಜ, 900538954
ಪ್ರತಿ ಸೆಕೆಂಡ್, ಪ್ರತಿ ನಿಮಿಷ, ಗಂಟೆ, ದಿನ, ಪ್ರತಿ ವರ್ಷ ಜೀವನಪೂರ್ತಿ ‘ಕನ್ನಡಪ್ರಭ’ ದಿನಪತ್ರಿಕೆ ಓದುವರಿಗೆ ನಿಮ್ಮ ಮಾತು ಏನು?
ಎಲ್ಲಾದರೂ ಇರಿ, ಹೇಗಾದರೂ ಇರಿ, ಎಂದೆಂದಿಗೂ ಹೀಗೇ ಇರಿ!
* ಲಕ್ಕೂರು ಎಂ. ನಾಗರಾಜ, 900538954
ಪ್ರತಿ [...] -
ಕೇಳ್ರಪ್ಪೋ ಕೇಳಿ – 5-4-2012
ಸುಮಾ ಶೇಖರ್, ಶಿವಮೊಗ್ಗ
- ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂದು ನಮಗೆ ಮುಂಚೆಯೇ ಯಾಕೆ ಗೊತ್ತಾಗಲಿಲ್ಲ?
ಗೊತ್ತಾದರೂ ಕುಡಿದೇ ಪರೀಕ್ಷಿಸೋಣ ಎಂಬ ಅತಿ ಬುದ್ಧಿವಂತಿಕೆ!
~~~~~~~~~~~~~~~~~~~~
ಜೆ. ಪುಟ್ಟಸ್ವಾಮಿ, ವಿದ್ಯಾರಣ್ಯಪುರಂ, ಮೈಸೂರು
- ನಮ್ಮ ‘ವಿಶ್ವ’ ಬಿಜಿ ಆದಾಗಲೆಲ್ಲ, ಮತ್ತು ಹೊರದೇಶಕ್ಕೆ ಹೋದಾಗ ನಮ್ಮ ‘ಪ್ರಣತಿ’ ಕಾಲಂ ಬರೆಯಲ್ಲ ಯಾಕೆ?
ಜತೆಯಲ್ಲಿ ಅವಳನ್ನೂ ಕರೆದುಕೊಂಡುಹೋಗುವುದರಿಂದ!
~~~~~~~~~~~~~~~~~~~~
ಚಿರಾಯು, ಮೈಸೂರು
- ಸದನದಲ್ಲಿ ‘ಚಿಯರ್ ಗರ್ಲ್ಸ್್’ಗಳಿಂದ ಆಗಾಗ ನೃತ್ಯ ಮಾಡಿಸಿದರೆ ಬ್ಲೂಬಾಯ್ಸ್್ಗಳಿಗೆ ಖುಷಿಯಾಗುತ್ತಿತ್ತಲ್ವೇ?
ಆಗ ಸದನದಲ್ಲಿ ಪತ್ರಕರ್ತರ ಹಾಗೂ ಸಾರ್ವಜನಿಕರ ಗ್ಯಾಲರಿಯೂ ಭರ್ತಿ!
~~~~~~~~~~~~~~~~~~~~
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
-’ವಿಶ್ವ ಚಾಂಪಿಯನ್್’ ಭಾರತ ಕ್ರಿಕೆಟ್ ತಂಡದವರಿಗೆ ಫೈನಲ್ ತಲುಪಲೂ [...] -
ಕೇಳ್ರಪ್ಪೋ ಕೇಳಿ – 10 ಜೂನ್ 2011
ಯತೀಶ್ (nryatish@gmail.com)
ನೀವು “ಕನ್ನಡಪ್ರಭ’ಕ್ಕೆ ಬದಲಾದರೆ ನಾವ್ಯಾಕೆ ಬದಲಾಗಬೇಕು ಹೇಳಿ?- ನಮ್ಮ ಮಾತನ್ನು ಕೇಳಿದವರಿಗೆ, ಪಾಲಿಸಿದವರಿಗೆ ಇಲ್ಲಿ ತನಕ ಒಳ್ಳೆಯದಾಗಿದೆ, ನೋಡಿ ವಿಚಾರ ಮಾಡಿ!
-
ಕೇಳ್ರಪ್ಪೋ ಕೇಳಿ – 10 ಜೂನ್ 2011
ಜಗದೀಶ ಮಠದ (jmathad@rediffmail.com)
ನಿಮ್ಮ ಬೆಂಬಲ ಬಾಬಾ ರಾಮದೇವ್್ಗೋ, ಯಡಿಯೂರಪ್ಪಗೋ ?- ಅವರೂ ಬಾಬಾರಾಮದೇವ್್ರನ್ನು ಬೆಂಬಲಿಸಿರುವುದರಿಂದ ಯಡಿಯೂರಪ್ಪನವರಿಗೆ. ಮೊದಲನೆಯವರನ್ನು ಬೆಂಬಲಿಸಿದರೆ ಯೋಗ. ಎರಡನೆಯವರನ್ನು ಬೆಂಬಲಿಸಿದರೆ ಯೋಗಾಯೋಗ!
-
ಕೇಳ್ರಪ್ಪೋ ಕೇಳಿ – 10 ಜೂನ್ 2011
ಸುರೇಶ ಹಾರೋಹಳ್ಳಿ
ಮೈಸೂರಿಗೆ ಹಠಾತ್ತನೆ ಆನೆಗಳು ನುಗ್ಗಿದ್ದು ಏಕೆ?- ಬಂಡೀಪುರ ಅರಣ್ಯಕ್ಕೆ ಬೆಂಗಳೂರಿನ ಪತ್ರಕರ್ತರು ನುಗ್ಗಿದ್ದೇ ಕಾರಣ ಎಂದು ಗುಪ್ತಚರ ಇಲಾಖೆ ವರದಿ ಕೊಟ್ಟಿದೆಯಂತೆ!
-
ಕೇಳ್ರಪ್ಪೋ ಕೇಳಿ – 10 ಜೂನ್ 2011
ಸೂರಜ್ ಎಸ್. ಕುಮಾರ್ (kumarssuraj@gmail.com)
ಪ್ರಣತಿ ನಿಮ್ಮ ಸಂಪಾದಕರ ಗರ್ಲ್್ಫ್ರೆಂಡ್ ಅಂತ ನನ್ನ ಟ್ಯಾಬ್ಲಾಯಿಡ್್ನಲ್ಲಿ ಬರೀಬೇಕು ಅಂತಿದೀನಿ. ನಿಮ್ಮ ಸಂಪಾದಕರು ಮಾನನಷ್ಟ ಮೊಕದ್ದಮೆ ಹಾಕಬಹುದಾ?- ಈ ವಿಷಯದಲ್ಲಂತೂ ಮಾನನಷ್ಟ ಮೊಕದ್ದಮೆ ಹಾಕುವಷ್ಟು “ಅರಸಿಕರು’ ಅವರಲ್ಲ ಮಾರಾಯ!
-
ಕೇಳ್ರಪ್ಪೋ ಕೇಳಿ – 10 ಜೂನ್ 2011
ಲೀಲಾವತಿ ಕೆ. (leela_k62@yahoo.co.in)
ತಪ್ಪಾಯ್ತು ತಿದ್ಕೋತೀವಿ’ ಅನ್ನೋ ಬದಲು “ತಪ್ಪಿದ್ರೆ ತಿದ್ಕೋತೀವಿ’ ಅನ್ನಬಾರದಾ?- ಈ ಎರಡರ ಪೈಕಿ ಏನೇ ಆದ್ರೂ ತಿದ್ದುಕೊಳ್ಳಲೇ ಬೇಕಲ್ಲ, ಬಿಡಿ ಯಾಕೆ ಚೌಕಾಶಿ?
-
ಕೇಳ್ರಪ್ಪೋ ಕೇಳಿ – 19 ಮೇ 2011
ಜನಾರ್ದನ್ ಹೆಗಡೆ, ಹನುಮಂತನಗರ
ನೀವು ಉಪಯೋಗಿಸುವುದು ಬರೀ ಆಪಲ್ ಪ್ರಾಡಕ್ಟ್ ಗಳನ್ನು ಮಾತ್ರವಂತೆ ನಿಜಾನಾ?- ತಿನ್ನುವುದೂ ಅದನ್ನೇ! Eat an apple a day, keep the doctors away. Use an Apple product always and keep everybody away ಎಂಬುದು ನನ್ನ ಸ್ಲೋಗನ್ನು.
