ಅಂಕಣ: ‘ಬ್ರೇಕಿಂಗ್ ನ್ಯೂಸ್’
-
ಗೆಲುವಿನ ಸೋಪಾನಕ್ಕೆ ರಿಚರ್ಡ್ ಬ್ರಾನ್‌ಸನ್ ದಿಕ್ಸೂಚಿ!
ಬ್ರಾನ್ಸನ್ ಬಗ್ಗೆ ಎಷ್ಟೇ ಬರೆದರೂ ಹಳತೆನ್ನಿಸುವುದಿಲ್ಲ. ಏಕೆಂದರೆ ಆತ ಯಾವಾಗಲೂ ಹೊಸ ವಿಚಾರಗಳನ್ನೇ ಹರವಿಡುತ್ತಾನೆ. ಹಾಗೆಂದೇ ರಿಚರ್ಡ್ ಬ್ರಾನ್ಸನ್ ಇತ್ತೀಚೆಗೆ ಬರೆದ ಲೇಖನವೊಂದು ಇಲ್ಲಿದೆ. ಸಾಧನೆಯ ಹಾದಿಯಲ್ಲಿ ವಿರಾಮ- ತೃಪ್ತಿಗಳಿಗೂ ಪ್ರಾಮುಖ್ಯವಿದೆ. ಆ ತಂಪನ್ನು ಬಿಚ್ಚಿಡುವ ಧ್ವನಿಯೂ ಜತೆಯಾಗಿದೆ.
ಬಿಸಿನೆಸ್‌ನ ವಿಷಯಕ್ಕೆ ಬಂದರೆ, ಇವತ್ತಿಗೂ ಎಲ್ಲರೂ ಕೇಳುವ ಪ್ರಶ್ನೆ ಇದೊಂದೇ: ಯಶಸ್ಸಿನ ಕೀಲಿ ಕೈ ಎಲ್ಲಿದೆ? ಒಂದು ವ್ಯವಹಾರದಲ್ಲಿ ಸಕ್ಸಸ್ ಆಗಬೇಕಾದರೆ ಅನುಸರಿಸಲೇಬೇಕಾದ ಮಾರ್ಗದರ್ಶಿ ಸೂತ್ರಗಳು ಯಾವುವು? ಕೇವಲ ಶ್ರದ್ಧೆ ಹಾಗೂ ನಿರಂತರ ಶ್ರಮದಿಂದಲೇ ಯಶಸ್ಸು ಸಿಕ್ಕಿ ಬಿಡುತ್ತಾ? [...] -
ಫುಲ್ ಟಾಕ್‌ಟೈಂ ಇದೆ. ನಿಮ್ಮ ನಂಬರ್‌ಗೆ ಕರೆನ್ಸಿ ಬಿಡಲಾ ಭಟ್ರೇ?
ಕೇಳ್ರಪ್ಪೋ ಕೇಳಿ
* ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಭಾರೀ ಮಳೆಗೆ ಆಗುಂಬೆ ಪ್ರಸಿದ್ಧಿ. ಭಾರೀ ಪ್ರೀತಿಗೆ?
ಆಗುಂಬೆಯ ಪ್ರೇಮ ಸಂಜೆ!
* ಫ್ಯಾಷನ್ ಡಿಸೈನರ್ ಮಧು, 9945737427
ಹೆಣ್ಣಿನ ಮನಸ್ಸು ‘ಟಚ್‌ಸ್ಕ್ರೀನ್’ನಂತೆ ಮುಟ್ಟಿದ ಕೂಡಲೇ ತೆರೆದುಕೊಳ್ಳುವುದಿಲ್ಲ ಏಕೆ?
ಪ್ರೊಡಕ್ಷನ್ ಮಿಸ್ಟೇಕ್ ಇರಬೇಕು. ಕಸ್ಟಮರ್ ಕೇರ್ ಸಂಪರ್ಕಿಸಿ!
* ಸರಸ್ವತಿ ರಮೇಶ, ಹನುಮನಾಳು
ಅನುಭವ ಮಂಟಪದಿಂದ ಕಲ್ಯಾಣ ಮಂಟದವರೆಗೂ ಎಷ್ಟು ದೂರವಾಗುವುದು ಭಟ್ಟರೇ?
ಕಲ್ಯಾಣ ಮಂಟಪದಿಂದ ಅನುಭವ ಮಂಟಪ ತುಂಬ ಹತ್ತಿರ!
* ಜಗದೀಶ ಎಸ್. ಬೆಳಗಾವಿ, 8722444410
ಫುಲ್ ಟಾಕ್‌ಟೈಂ ಇದೆ. ನಿಮ್ಮ ನಂಬರ್‌ಗೆ ಕರೆನ್ಸಿ ಬಿಡಲಾ ಭಟ್ರೇ?
ನಂದು ಪೋಸ್ಟ್‌ಪೇಯ್ಡು. ಆಗಾಗರೀಚಾರ್ಜ್ [...] -
ಹೃದಯದ ಮಾತು ಮೇಲೋ, ಮನಸಿನ ಮಾತು ಮೇಲೋ?
* ಕಾಳಿದಾಸ, ರಾಮಕೃಷ್ಣನಗರ, ಮೈಸೂರು
ಹೃದಯದ ಮಾತು ಮೇಲೋ, ಮನಸಿನ ಮಾತು ಮೇಲೋ?
- ಯಾರ ಹೃದಯ, ಯಾರ ಮನಸು ಎಂಬುದರ ಮೇಲೆ ಅವಲಂಬಿಸಿರುತ್ತದೆ!
* ಮಾಗಡಿ ಶ್ರೀನಿವಾಸ್, 9902797767
ಹಗರಣಗಳಿಗೆ ಹೋದ ಮಾನ, ಅಕ್ಕಿ ಕೊಟ್ರೆ (2 ರುಪಾಯಿಗೆ) ಬರುತ್ತಾ?
- ಮಾನ ಬಂದೇನು ಪ್ರಯೋಜನ? ಬರಬೇಕಿರುವುದು ಅಧಿಕಾರ!
* ವಿ. ಹೇಮಂತಕುಮಾರ್, 9035992900
ಇಲ್ಲೊಬ್ಬಳು ಒಂದು ಪ್ಲಸ್ ಒಂದು ಮೂರು ಅಂತಿದ್ದಾಳಲ್ಲ, ಹೇಗೆ?
- ಹೇಗೆ ಅಂತ ನಾನವಳಿಂದ ವಿವರವಾಗಿ ತಿಳಿದುಕೊಂಡ ಮೇಲೆ ನಿನಗೆ ಹೇಳಿದರೆ ಸಾಕಲ್ವಾ?
* ನೇರಲಗುಡ್ಡ ಶಿವಕುಮಾರ್, ಶಿರಾ 9480343742
ಕ್ಯಾರೆಕ್ಟರ್‌ಗೂ ಕಾಂಟ್ರವರ್ಸಿಗೂ ಇರುವ [...] -
ಚುಕ್ಕಿಗಳಂಥ ಮಿನುಗು ಕತೆಗಳಲ್ಲಿ ಆಗಸದಗಲ ನೀತಿ!
ಜೀವನವೆಂಬುದು ನೀವು ಯಾವುದಕ್ಕೆ ಹೆಚ್ಚು ಆದ್ಯತೆ ಕೊಡುತ್ತೀರಿ ಎಂಬುದರ ಮೇಲೆ ನಿರ್ಧರಿತವಾಗುತ್ತದೆ. ಕುಟುಂಬಕ್ಕೆ ಮೊದಲ ಆದ್ಯತೆ ನೀಡಿ. ನಿಮ್ಮ ಪ್ರೀತಿ ಪಾತ್ರರೊಂದಿಗೆ ಹೆಚ್ಚು ಸಮಯ ಕಳೆಯಿರಿ.
ಬಿಸಿಲಿನ ಝಳದೊಂದಿಗೆ ಚುನಾವಣೆಯ ಕಾವೂ ಸೇರಿಕೊಂಡಿದೆ. ರಾಜಕಾರಣಿಗಳೆಲ್ಲ ನಿಮ್ಮ ಮನೆ ಬಾಗಿಲಲ್ಲಿ ಜಮಾಯಿಸಿ ತಮ್ಮ ತಮ್ಮ ಕತೆ ಹೇಳುವ, ಕನಸು ತೋರಿಸುವ ಸಮಯ. ಇವರದ್ದೆಲ್ಲಾ ಕತೆ ಯಾರಿಗೆ ಬೇಕಿದೆ ಎಂಬ ಪ್ರಶ್ನೆ ಥಟ್ಟನೆ ನಿಮ್ಮ ಮನದಲ್ಲಿ ಎದ್ದರೆ ಅದಕ್ಕೆ ನನ್ನ ಅನುಮೋದನೆಯೂ ಇದೆ. ಹಾಗೆಂದೇ ಇಲ್ಲಿ ಬೇರೆಯದೇ ಹರವಿನ ಮೂರು ಕತೆಗಳ [...] -
ಬಿರುಗಾಳಿಯ ಆರ್ಭಟಕ್ಕೆ ಅವನೇಕೆ ಬೆದರಲಿಲ್ಲ?
ಅವನಿಗೆ ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಬೆಳಗಿನಿಂದ ದುಡಿಮೆಯಲ್ಲಿ ಮೈಮೆರೆತಿದ್ದ ಆತ, ಸಂಜೆಯಾಗುತ್ತಿದ್ದಂತೆಯೇ ಮನೆಗೆ ಹೊರಟ. ಜೊತೆಯಲ್ಲಿ ಹೆಂಡತಿಯೂ ಇದ್ದಳು. ಮನೆಗೆ ಮರಳುವ ದಾರಿಯಲ್ಲಿ, ಅವರು ನದಿಯೊಂದನ್ನು ದಾಟಬೇಕಿತ್ತು. ಇವರ ದುರದೃಷ್ಟಕ್ಕೆ ಅವತ್ತು ದೋಣಿ ನಡೆಸಲು ಅಂಬಿಗನೂ ಇರಲಿಲ್ಲ. ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ವ್ಯಕ್ತಿ ಸೇನೆಯಲ್ಲಿದ್ದು ಬಂದವನು. ಅವನಿಗೆ ಸೇನೆಯಲ್ಲಿದ್ದಾಗಲೇ ದೋಣಿ ಚಾಲನೆಯ ತರಬೇತಿ ಸಿಕ್ಕಿತ್ತು. ಅದೇನನ್ನೂ ಹೆಂಡತಿಗೆ ತಿಳಿಸದೆ, ‘ದೋಣಿ ಹತ್ಕೋ, ನಾನು ಕರ್ಕೊಂಡು ಹೋಗ್ತೇನೆ’ ಎಂದ.
ಅರ್ಧ ನದಿಯನ್ನು ದಾಟುವ ಮೊದಲೇ ಭಾರೀ ಬಿರುಗಾಳಿ ಎದ್ದಿತು. ರಭಸದ [...] -
ಬೆಳಕು, ಬೆರಗಿನ ಸೂಕ್ತಿಗಳು…
ಖಾಲಿ ಜೇಬಿನೊಂದಿಗೆ ನಡೆಯುತ್ತಾ ಹೋದರೆ, ಎದುರಾಗುವ ಒಂದೊಂದು ತಿರುವೂ ಒಂದೊಂದು ಪಾಠ ಹೇಳಿಕೊಡುತ್ತದೆ. ಜೇಬು ತುಂಬಿಸಿಕೊಂಡು ಹೊರಟವರಿಗೆ ಎದುರಾಗುವ ಪ್ರತಿ ತಿರುವೂ ದಾರಿ ತಪ್ಪಿಸುತ್ತದೆ.
ಮೂರು ಅಥವಾ ನಾಲ್ಕು ವಾಕ್ಯಗಳಲ್ಲಿ ಮುಗಿದು ಹೋಗುವ ಸೂಕ್ತಿಗಳಿವು. ಒಂದರ್ಥದಲ್ಲಿ ಇವುಗಳನ್ನು ಮಾಡರ್ನ್ ಸುಭಾಷಿತಗಳು ಎನ್ನಬಹುದೇನೋ. ಇವೆಲ್ಲಾ ಫಾರ್ವರ್ಡ್ ಮೇಲ್‌ನ ರೂಪದಲ್ಲಿ ಬಂದಿರುವುದರಿಂದ ಇವುಗಳ ಮೂಲ ಲೇಖಕರು ಯಾರೆಂದು ಗೊತ್ತಿಲ್ಲ. ಸ್ವಾರಸ್ಯವೇನೆಂದರೆ, ಈ ಸೂಕ್ತಿಗಳಲ್ಲಿ ಬೆರಗಿದೆ, ಬೆಳಕಿದೆ. ಬುದ್ಧಿವಾದವಿದೆ. ಜೀವನ ದರ್ಶನವಿದೆ. ಮನುಷ್ಯ ಹೇಗೆ ಬದುಕಬೇಕು? ಯಾವ ಸಂದರ್ಭದಲ್ಲಿ ಹೇಗಿರಬೇಕು ಎಂಬುದರ ವಿಚಾರಣೆಯೂ [...] -
ಕೆಂದ್ರ ಬಜೆಟ್ ಅಂದ್ರೆ ‘ಲೈಫ್ ಆಫ್ ರು.ಪೈ.’ ತಾನೆ?
ಬಜೆಟ್ ಸುದ್ದಿಯನ್ನು ಇಂದು ಹೇಗೆ ಕವರ್ ಮಾಡಿರಬಹುದು ಎಂಬ ಸಹಜ ಕುತೂಹಲದಿಂದ ಎಲ್ಲಾ ಪತ್ರಿಕೆಗಳನ್ನು ತಿರುವಿ ಹಾಕುತ್ತಿದ್ದೆ. ಒಂದೊಂದು ಪತ್ರಿಕೆಯಲ್ಲಿ ಒಂದೊಂದು ರೀತಿ. ಆದರೆ ಎಲ್ಲ ಪತ್ರಿಕೆಗಳ ಪ್ರಯತ್ನವನ್ನಂತೂ ಮೆಚ್ಚಲೇಬೇಕು. ಕನ್ನಡ ಪತ್ರಿಕೆಗಳು ಯಾವುದೇ ರೀತಿಯಿಂದಲೂ ಇಂಗ್ಲೀಷ್ ಪತ್ರಿಕೆಗಳಿಗೆ ಕಡಿಮೆಯೇನಿಲ್ಲ ಎಂಬುದನ್ನು ತೋರಿಸಿಕೊಟ್ಟಿವೆ.
ಈ ಮಧ್ಯೆ, ನನಗೆ ಇಷ್ಟವಾದದ್ದು ನಮ್ಮ ಪತ್ರಿಕೆಯ ಕಲಾವಿದ ಸುಧಾಕರ್ ದರ್ಬೆ ಬಿಡಿಸಿದ ಚಿತ್ರ. ‘ಲೈಫ್ ಅಫ್ ಪೈ’ ಚಿತ್ರ ಆಸ್ಕರ್ ಪ್ರಶಸ್ತಿ ಪಡೆದು ಸುದ್ದಿಯಲ್ಲಿರುವಾಗ ಅದರಿಂದ ಪ್ರಭಾವಿತರಾಗಿ [...] -
ಜೀವನದಲ್ಲಿ ಏನಾದರೂ ಸಾಧಿಸಬೇಕಾದ್ದು ಅನಿವಾರ್ಯವೇ ಭಟ್ರೇ?
ಕೇಳ್ರಪ್ಪೋ ಕೇಳಿ
* ಸಂತೇಬೆನ್ನೂರು ಫೈಜ್ನಟ್ರಾಜ್
ಜೀವನದಲ್ಲಿ ಏನಾದರೂ ಸಾಧಿಸಬೇಕಾದ್ದು ಅನಿವಾರ್ಯವೇ ಭಟ್ರೇ?
ಹಾಗೇನಿಲ್ಲ ಸುಮ್ಮನೇ ಕೂತಿದ್ದು ಕೂದಲು ಉಗುರು ಬೆಳೆದು ಗಿನ್ನಿಸ್ ದಾಖಲೆ ಸೃಷ್ಟಿಸಿ ಸಾಧನೆ ಮಾಡಬಹುದು.
* ವಿ. ಹೇಮಂತಕುಮಾರ, ಬೆಂಗಳೂರು, 9035992900
ನಿನ್ನ ತುಟಿ ಹಪ್ಪಳ. ಕಚ್ಚಿ ತಿನ್ನಲಾ ಅಂತ ಕೇಳ್ತಿದಾಳಲ್ಲ?
ಪರೋಕ್ಷವಾಗಿ ತುಟಿಗೆ ವ್ಯಾಸಲೀನ್ ಹಚ್ಕೊ ಅಂತ ಹೇಳ್ತಿದಾಳೆ!
* ರವಿಕುಮಾರ ಜಿ.ಬಿ. 9449669897
ಕೃಷಿ ಬಜೆಟ್ ಮಾಡಿದ ಹಾಗೆ ಮಠ-ಮಂದಿರಗಳಿಗೂ ಪ್ರತ್ಯೇಕ ಬಜೆಟ್ ಮಂಡಿಸಿದರೆ ಹೇಗಿರುತ್ತೆ?
ಅದಕ್ಕೆ ಋಷಿ ಬಜೆಟ್ ಎಂದು ಹೇಸರಿಡಬಹುದು!
* ರಮೇಶ ಭಟ್ ಆವರ್ಸೆ, ಕುಂದಾಪುರ, 9164276058
ಸುಖಕ್ಕೂ ದುಃಖಕ್ಕೂ ಇರುವ [...] -
ಕೆಲವು ದಂಪತಿಗಳು ರೂಮಿನಲ್ಲಿ ಮಂಚವಿದ್ದರೂ …
ಕೇಳ್ರಪ್ಪೋ ಕೇಳಿ
* ವಿ. ಹೇಮಂತಕುಮಾರ, ಬೆಂಗಳೂರು 9916707979
ಕೆಲವು ದಂಪತಿಗಳು ರೂಮಿನಲ್ಲಿ ಮಂಚವಿದ್ದರೂ ಅದರ ಮೇಲೆ ಮಲಗದೆ ಕೆಳಗಡೆ ಹಾಸಿಗೆ ಹಾಸಿಕೊಂಡು ಮಲಗುವ ಗುಟ್ಟೇನು?
ಮಂಚ ಶಬ್ದಮಾಡುತ್ತೆ ಅಂತ!
* ಕೊಕ್ಕಡ ವೆಂಕಟ್ರಮಣ ಭಟ್, 9972448183
ಕೆಜೆಪಿ ಧ್ವಜದಲ್ಲಿ ಹಳದಿ ಬಣ್ಣವನ್ನು ಏಕೆ ಬಳಸಿಕೊಂಡಿದ್ದಾರೆ?
ಮುಂದೆ ಆರೋಪ ಬಂದರೆ, ‘ನಾವೇನ್ ಮಾಡೋದು, ನಿಮ್ಮ ಕಣ್ಣಿಗೆ ಎಲ್ಲ ಹಳದಿಯೇ’ ಅಂತ ಪ್ರತಿಕ್ರಿಯಿಸೋಕೇ ಚೆನ್ನಾಗಿರುತ್ತೆ.
* ಅನುಷಾ ತಿಂಡ್ಲು, ಬೆಂಗಳೂರು
ನಿಮಗೆ ಹುಡುಗಿಯರೇಕೆ ಪ್ರಶ್ನೆ ಕೇಳಲ್ಲ? ಅಥವಾ ಕೇಳಿದ್ರೂ ನೀವು ಉತ್ತರ ಕೊಡಲ್ವೋ?
ಪ್ರಶ್ನೆ ಕೇಳೋಕೆ ಇಷ್ಟು ನಾಚಿಕೊಂಡ್ರೆ ಮುಂದೆ ಗತಿ?
* [...] -
ಸಾವಿನ ಮನೆಯಲ್ಲೂ ಟಿಆರ್‌ಪಿ ಬೇಳೆ ಬೇಯಿಸಬಹುದಾ?
ಸುದ್ದಿ ವಾಹಿನಿಗಳು ಮತ್ತು ಟಿ.ಆರ್.ಪಿ. ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಸುದ್ದಿ ವಾಹಿನಿಗಳ ಕಾರ್ಯವಿರ್ವಹಣೆ ವೀಕ್ಷಕರ ಟೀಕೆಗೆ ಗುರಿಯಾಗುತ್ತಿದೆ. ಅಜಿತ್ ಹನುಮಕ್ಕನವರ್ ಚರ್ಚೆಗೆ ನಾಂದಿ ಹಾಡಿದ ಬೆನ್ನಲ್ಲೇ ಸುವರ್ಣ ನ್ಯೂಸ್ ನಲ್ಲಿ ನನ್ನ ಮತ್ತೊಬ್ಬ ಸಹೋದ್ಯೋಗಿ ಮಿತ್ರರಾದ ವಿನಾಯಕ ಕೋಡ್ಸರ ಅವರು ತಮ್ಮ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ. ಮುಕ್ತ ಚರ್ಚೆಗೆ ಅವಕಾಶವಿದೆ.
- ವಿಶ್ವೇಶ್ವರ್ ಭಟ್
***********************ಆರು ತಿಂಗಳ ಹಿಂದೆ ಮೊಬೈಲ್‌ಗಳಲ್ಲಿ, ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದ ಒಂದು ಸಂದೇಶದ ಸಾಲು ಹೀಗಿತ್ತು. “ಸದನದಲ್ಲಿ ಸಚಿವರು ಅಶ್ಲೀಲ ಚಿತ್ರ ವೀಕ್ಷಿಸಿದ ಘಟನೆಯ ಕಾವು [...]
