ಅಂಕಣ: ‘ಬಿನ್ನಹ ಮತ’
-
ಸ್ಪೂರ್ತಿಸೆಲೆ – 12 ಫೆಬ್ರವರಿ 2012
ಜೀವನದಲ್ಲಿ ಸೋಲುವುದು ಅಂಥ ಮಹಾ ಸಂಗತಿಯಲ್ಲ. ಒಂದಿಲ್ಲೊಂದು ಸಂದರ್ಭದಲ್ಲಿ ಸೋಲು ಎಲ್ಲರಿಗೂ ತನ ತಾಕತ್ತನು ತೋರಿಸುತ್ತದೆ. ಅದಕ್ಕಾಗಿ ಪ್ರತಿಯಾಗಿ ನೀವೂ ನಿಮ್ಮ ತಾಕತ್ತನು ತೋರಿಸಿದರೆ ಸೋಲು ಓಡಿ ಹೋಗುತ್ತದೆ. ಈ ತಾಕತ್ತು ತೋರಲು ನೀವು ಸೋತರೆ ಅದು ನಿಜವಾದ ಸೋಲು.
-
ವಕ್ರತುಂಡೋಕ್ತಿ – 26 ಜನೆವರಿ 2012
ಸಂಸಾರ ರಾಜಕೀಯ ಪಕ್ಷ ಇದ್ದಂತೆ. ಆದರೆ ಹೆಂಡತಿಯದು ಸದಾ ಆಡಳಿತ ಪಕ್ಷ.
-
ಇನ್ನು ಹೆಚ್ಚು ದಿನ ನಿಮ್ಮನ್ನು ಕಾಯಿಸಬಾರದು!
ಹಾಗೆಂದು ಈ ಸಂಕ್ರಾಂತಿಯ ಉತ್ತರಾಯಣದ ಪುಣ್ಯಕಾಲದ ಸಂದರ್ಭದಲ್ಲಿ ನಿರ್ಧರಿಸಿದ್ದೇನೆ. ಹಾಗೆ ನೋಡಿದರೆ ನಾನು ನಿಮ್ಮನ್ನು ಕಾಯಿಸಿಲ್ಲ ಎಂದೇ ಹೇಳಬೇಕು. ಯಾಕೆಂದರೆ ನಾನು ‘ವಿಜಯ ಕರ್ನಾಟಕ’ ಕ್ಕೆ ರಾಜೀನಾಮೆ ನೀಡಿ ಇನ್ನೂ ನಲವತ್ತು ದಿನಗಳೂ ಆಗಿಲ್ಲ. ರಾಜೀನಾಮೆ ನೀಡುವಾಗ ಮುಂದಿನ ನೌಕರಿಯನ್ನು ಪ್ಲಾನ್ ಮಾಡಿರಲಿಲ್ಲ. ಒಂದು ವೇಳೆ ಹಾಗೆ ಮಾಡಿದ್ದಿದ್ದರೆ ರಾಜೀನಾಮೆ ಇನ್ನಷ್ಟು ವಿಲಂಬವಾಗುತ್ತಿತ್ತು. ಮುಂದುವರಿಯುವ ವಾತಾವರಣ ಇಲ್ಲವೆಂಬುದು ಸ್ಪಷ್ಟವಾಗಿತ್ತು. ನೀರಿಗೆ ಧುಮುಕುವಾಗ ಈಜು ಬರುತ್ತಿರಲಿಲ್ಲ. ಏನೇ ಆದರೂ ಮುಳುಗಲಾರೆ ಎಂಬ ದೃಢ ವಿಶ್ವಾಸವಿತ್ತು. ಅದೇ ಹುಚ್ಚು ಧೈರ್ಯದಿಂದ [...]
-
ನಾನೂ ದಿನವನ್ನು ಲೆಕ್ಕ ಹಾಕುತ್ತಿದ್ದೇನೆ, ಒಂದು, ಎರಡು, ಮೂರು…
ನನ್ನ ಇನ್ ಬಾಕ್ಸ್ ತುಂಬಾ ಭರ್ತಿ ಮೇಲ್ ಗಳು. ಬರೋಬ್ಬರಿ 1457!! ಯಾರಿಗೆಂದು ಉತ್ತರಿಸಲಿ, ಬಿಡಲಿ? ಹಾಗೆಂದು ಉತ್ತರಿಸದೇ ಬಿಡುವಂತಿಲ್ಲ. ಕಳೆದ ಎರಡು ದಿನಗಳಿಂದ ಅದೇ ಕೆಲಸ.. ಹೀಗಾಗಿ ಯಾವುದೇ ಹೊಸ ಪೋಸ್ಟ್ ಮಾಡಲಿಲ್ಲ. ಒಂದು ಸಾಲಿನ ಉತ್ತರವನ್ನೂ ಬರೆಯದಿದ್ದರೆ ಹೇಗೆ?
ಆದರೂ ಇನ್ನು 160 ಸ್ನೇಹಿತರಿಗೆ ಬರೆಯೋ ಕೆಲಸ ಬಾಕಿ ಉಳಿದಿದೆ. ನನ್ನ ವೆಬ್ ಸೈಟ್ ಗೆ ಈ ಪರಿಯ ಪ್ರತಿಕ್ರಿಯೆಯನ್ನು ನಾನಂತೂ ನಿರೀಕ್ಷಿಸಿರಲಿಲ್ಲ. ಕಳೆದ ಆರು ದಿನಗಳಿಂದ ಒಟ್ಟಾರೆ [...] -
ಇದು ನನಗೆ ರಜಾ ಕಾಲದ ಮೋಜಿನ ತಾಣವಲ್ಲ.
ನೀವು ತೋರಿದ ಅಭೂತಪೂರ್ವ ಪ್ರತಿಕ್ರಿಯೆಗೆ ಹೃದಯ ತುಂಬಿ ಬಂದಿದೆ. ಇಂಥ ಪ್ರತಿಕ್ರಿಯೆಯನ್ನು ನಿರೀಕ್ಷಿಸಿರಲಿಲ್ಲ. ಜಪಾನ್, ಹಾಂಗ್ ಕಾಂಗ್, ಜರ್ಮನಿ, ಅಮೇರಿಕಾ, ಸೇರಿದಂತೆ ಮೂವತ್ತೆರಡು ದೇಶಗಳಲ್ಲಿರುವ ಸಾವಿರಾರು ಓದುಗರು ನನ್ನ ಅಂತರ್ಜಾಲಕ್ಕೆ ಭೇಟಿ ನೀಡಿ ಓದಿದ್ದಾರೆ ಮತ್ತು ಶುಭ ಹಾರೈಸಿದ್ದಾರೆ. ಕೇವಲ ಒಂದೂವರೆ ದಿನದಲ್ಲಿ 5000+ hits, 30,000 page views ಆಗಿದೆ. ಒಂದೇ ದಿನ ಸುಮಾರು 1238 ಮಿಂಚಂಚೆಗಳು (ಈ ಮೇಲ್) ಬಂದಿವೆ. ಎಲ್ಲರಿಗೂ ಉತ್ತರಿಸಲು ಆಗುತ್ತಿಲ್ಲ. ಮನಸ್ಸು ಬಹಳ ಭಾರವಾದ ಕ್ಷಣವಿದು.
ಎಲ್ಲರಿಗೂ ಕೈ ಮುಗಿದು ನಮಸ್ಕರಿಸುತ್ತಾ ನಿಮ್ಮೆಲ್ಲರ [...]
