ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

‘ವಿಜಯವಾಣಿ’ ಹೆಸರು ಬಳಸದಂತೆ ಸಂಕೇಶ್ವರರಿಗೆ ನೋಟಿಸ್

ವಿಜಯ ಸಂಕೇಶ್ವರ ಅವರ ಹೊಸ ಪತ್ರಿಕೆ ಬರುತ್ತಿದೆ. ಕನಡ ಪತ್ರಿಕೋದ್ಯಮ ಹೊಸ ಸಂಚಲನದತ್ತ ಮುಖ ಮಾಡಿದೆ. ಏಪ್ರಿಲ್ 1ರಂದು ರಾಮನವಮಿ ದಿನ ‘ವಿಜಯವಾಣಿ’ ಆರಂಭವಾಗಲಿದೆ. ಈಗಾಗಲೇ ವಿಜಯ ಸಂಕೇಶ್ವರ ಅವರು ‘ವಿಜಯ ಕರ್ನಾಟಕ’ ಆರಂಭಿಸಿ ತೋರಿಸಿದ್ದರಿಂದ ಹೊಸ ಪತ್ರಿಕೆ ಕುರಿತು ಜನರಲ್ಲಿ ಸಾಕಷ್ಟು ಕುತೂಹಲ ಮತ್ತು ಆಸಕ್ತಿ ಎರಡೂ ಇದೆ.

ಆದರೆ ಸುದ್ದಿ ಅದಲ್ಲ. ‘ವಿಜಯ ಕರ್ನಾಟಕ’ದ ವತಿಯಿಂದ ಹೊಸ ಪತ್ರಿಕೆಗೆ ಆರಂಭಕ್ಕೆ ಮುನವೇ ನೋಟೀಸ್ ನೀಡಿರುವುದು ಸದ್ಯದ ಬಿಸಿ ಸುದ್ದಿ. ‘ವಿಜಯವಾಣಿ’ ಎಂಬ ಹೆಸರು ಬಳಸುವಂತಿಲ್ಲ ಎಂಬುದು ನೋಟೀಸ್ ನೀಡಲು ಕಾರಣ ಅನುವುದು ದೊಡ್ಡ ಸುದ್ದಿ!

‘ವಿಜಯವಾಣಿ’ ಎಂಬ ಹೆಸರಿನಲ್ಲಿ ‘ವಿಜಯ’ ಇರುವುದರಿಂದ ನೀವು ಆ ಹೆಸರು ಬಳಸುವಂತಿಲ್ಲ ಎಂಬುದು ನೋಟೀಸಿನ ಹೂರಣ. ಹೇಗಾದರೂ ಮಾಡಿ ಪತ್ರಿಕೆ ಪ್ರಕಟಣೆ ಮುಂದೂಡಿ, ಆರಂಭಿಕ ವಿಘ್ನ ಉಂಟು ಮಾಡಬೇಕೆಂಬ ಉದ್ದೇಶ ಇದ್ದಂತಿದೆ ಎಂಬುದು ಯಾರಿಗಾದರೂ ಮೇಲ್ನೋಟಕ್ಕೆ ಎದ್ದು ಕಾಣುವ ಅಂಶ.

ಆದರೆ ನೋಟೀಸ್ ನೀಡಿದ ಕಾರಣವೇ ಯಾಕೋ ವಿಚಿತ್ರವಾಗಿದೆ. ‘ವಿಜಯವಾಣಿ’ ಎಂಬ ಹೆಸರಿನಲ್ಲಿ ‘ವಿಜಯ ಕರ್ನಾಟಕ’ ಹೆಸರಿನ ‘ವಿಜಯ’ ಎಂಬ ಶಬ್ದ ಸೇರಿದೆ ಎಂಬುದೇ ತಕರಾರು.

ಹಾಗಾದರೆ ‘ವಿಜಯ ಕರ್ನಾಟಕ’ದಲ್ಲಿ ‘ಸಂಯುಕ್ತ ಕರ್ನಾಟಕ’ ಪತ್ರಿಕೆ ಹೆಸರಿನ ‘ಕರ್ನಾಟಕ’ ಸೇರಿದೆ. ಅವರೂ ತಕರಾರು ಮಾಡಬಹುದಿತ್ತು!

‘ವಿಜಯವಾಣಿ’ ಎಂಬ ಹೆಸರಿನಲ್ಲಿ ‘ಉದಯವಾಣಿ’ ಮತ್ತು ‘ಪ್ರಜಾವಾಣಿ’ ಪತ್ರಿಕೆಗಳ ‘ವಾಣಿ’ ಶಬ್ದವೂ ಸೇರಿದೆ. ಅವರೂ ತಕರಾರು ತೆಗೆಯಬುಹುದಲ್ಲ? ‘ಪ್ರಜಾವಾಣಿ’ ತುಂಬ ಹಳೆಯ ಪತ್ರಿಕೆ. ಅದಾದ ಮೇಲೆ ‘ಉದಯವಾಣಿ’ ಬಂದಿದ್ದು. ಹಾಗೆಯೇ ‘ವಿಜಯವಾಣಿ’ಯೂ ಬರಬಹುದು.

‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆ ಇರುವಂತೆ ‘ಹಿಂದುಸ್ತಾನ್ ಟೈಮ್ಸ್್’ ಇದೆ. ‘ಕೆನರಾ ಟೈಮ್ಸ್್’, ‘ಸುವರ್ಣ ಟೈಮ್ಸ್ ಆಫ್ ಕರ್ನಾಟಕ’ ಹೀಗೆ ಸಾಕಷ್ಟು ಹೆಸರುಗಳಿವೆ. ‘ಟೈಮ್ಸ್ ಆಫ್ ಇಂಡಿಯಾ’ ಜೊತೆಗೆ ಅವು ಪ್ರಕಟವಾಗುತ್ತಿವೆ.

ನನಗೆ ಗೊತ್ತಿರುವ ಪ್ರಕಾರ ‘ವಿಜಯವಾಣಿ’ ಎಂಬುದು ಕಳೆದ 30 ವರ್ಷಕ್ಕೂ ಹೆಚ್ಚಿನ ಅವಧಿಯಿಂದ ಅಸ್ತಿತ್ವದಲ್ಲಿರುವ ಹೆಸರು. ಪತ್ರಿಕೆ ದೊಡ್ಡ ಮಟ್ಟದಲ್ಲಿ ಇರಲಿಲ್ಲ. ಆದರೆ ‘ವಿಜಯವಾಣಿ’ ಹೆಸರಿನಲ್ಲಿ ಪತ್ರಿಕೆಯೊಂದು ಆಗಲೇ ನೋಂದಣಿಯಾಗಿತ್ತು ಎಂಬುದನು ಕೂಡ ಗಮನಿಸಬೇಕಾಗುತ್ತದೆ. ಪತ್ರಿಕೆಯ ಹೆಸರುಗಳಿಗೆ ಮಾನ್ಯತೆ ನೀಡುವ ಆರ್್ಎನ್್ಐ ಒಂದೇ ಹೆಸರಿನ ಎರಡು ಪತ್ರಿಕೆಗಳಿಗೆ ಅನುಮತಿ ನೀಡುವುದಿಲ್ಲ. ಅದು ಅನುಮತಿ ನೀಡಿದೆ ಅಂದರೆ ಅಲ್ಲಿಗೆ ಮುಗಿಯಿತು. ತಕರಾರಿಗೆ ಅವಕಾಶವಿಲ್ಲ.

ಇದು ಕ್ಷುಲ್ಲಕ ಕಾರಣದಂತೆ ಕಾಣುತ್ತದೆ. ಹೊಸ ಪತ್ರಿಕೆ ಮತ್ತು ಅದರಿಂದಾಗಬಹುದಾದ ಅಪಾಯದ ಭಯ ಈ ನೋಟೀಸ್ ಹಿಂದೆ ಕೆಲಸ ಮಾಡಿದಂತಿದೆಯಾ?

23 Comments

 1. Harsha Bharadwaj (@HarshaBharadwaj)
  3/28/12 11:03 PM
  @VishweshwarBhat What stupidity sir? It is his name. He started VK. If Times group have an issue they shoul change the name of VK.

 2. ಹೀಗೆಲ್ಲ ಆಗಬಾರದಿತ್ತು……

 3. ಪ್ರತಿಭೆ ಮತ್ತು ಪ್ರತಿಭಾವಂತರನ್ನು ಗುರುತಿಸುವಲ್ಲಿ ಮತ್ತು ಒಂದೆಡೆ ತರುವಲ್ಲಿ ಸಂಕೇಶ್ವರರ ಸಾಮರ್ಥ್ಯ ಏನೆಂಬುದು ನಾಡಿನ ಜನತೆಗೆ ಗೊತ್ತಿದೆ. ಅದ್ಯಾಕೆ ಅವರು ಸ್ವಂತಿಕೆ ಇರುವಂತಹ ಹೆಸರನ್ನು ತಮ್ಮ ಹೊಸಪತ್ರಿಕೆಗೆ ಹುಡುಕಲಾರರು ಅನ್ನೋದು ಗೊತ್ತಾಗುತ್ತಿಲ್ಲ. ಅವರ ಪತ್ರಿಕೆ ಭಿನ್ನವಾಗಿರುತ್ತೆ ಮತ್ತು ಅದ್ರಲ್ಲಿ ಹೊಸದೇನಾದ್ರೂ ಇದ್ದೇ ಇರುತ್ತೆ. ಹಾಗಿರುವಾಗ ಹೆಸರೇಕೆ ಬೇರೆ ಪತ್ರಿಕೆಗಳ ಅನುಕರಣೆಯಾಗಬೇಕು?

 4. Today morning, when i read KP, I felt the same thing..about ‘samyukta karnataka’, Prajavani and Udayavani 🙂

 5. narasimha acharya (@nsimhacharya)
  3/28/12 11:27 PM
  @VishweshwarBhat this is truly heights of stupidity by TOI they already have lost readers base now this is only d attempt they cudhv done

 6. rao (@rao123123)
  3/28/12 11:36 PM
  @VishweshwarBhat because fear of competation from vijayavani and also jelousey from time mangament

 7. Shishir Kannantha (@shishirak)
  3/28/12 11:49 PM
  @VishweshwarBhat I think Sankeshwar aquired ‘Vijayavani’ which was registered long back.

 8. Stupidity. Unnecessary TOI advertisement to vijay Vaani. Vijay sankeshwar shud think of “Ananda varte” or “Sankeshwar suddi” or JUST “VRL “

 9. if Mr. Vijay Sankeshwar wants to start a new paper why he sold Vijaya Karnataka in the first place?

 10. ಪತ್ರಿಕೆ ಆರ್‌ಎನ್‌ಐ ನಲ್ಲಿ ರಿಜಿಸ್ಟರ್ ಆಗಿದ್ದು ಬಹಳ ಹಿಂದೆ..ಆಗಿಲ್ಲದ ಕ್ಯಾತೆ ಈಗ್ಯಾಕೆ..? ಇದು ವಿಜಯ ಕರ್ನಾಟಕದ ಸ್ವಾರ್ಥ ಹಾಗೂ ಕುತಂತ್ರಕ್ಕೆ ಹಿಡಿದ ಕನ್ನಡಿ….

 11. Hi Vbhat,

  When Regitrar for News Papers in India has given the title what is the problem with thipeople.
  Regards
  mgr

 12. vijaya vaanige vishva vijayavagali….

 13. ಅವರಿಂದಲೇ ಪತ್ರಿಕೆ ಕೊಂಡು ಈಗ ಅವರ ವಿರುದ್ದ ಅವರ ಹೆಸರು ಬಳಸದಂತೆ ನೋಟೀಸು ಕೊಡುವ ಟೈಂಸ್ ಧಣಿಗಳಿಗೆ ಏನೆನ್ನೋಣ?!

 14. If TOI has to make comments & issue notices on Vijaya Name ,They are now feared that Vijayavani would beat vijayakarnataka & Become No 1.Fight with Quality not with useless issues

  • ವಿಜಯವಾಣಿ ಹೆಸರಿಡುವುದರಿಂದ ವಿಜಯಕರ್ನಾಟಕಕ್ಕೆ ನಷ್ಟ ಖಂಡಿತ.., ತಾವು ಮುಂದೆ ಈ ಹೆಸರಿನ ಪತ್ರಿಕೆ ತರುತ್ತೇವೆ ಎಂದು ಸಂಕೇಶ್ವರರು
   ಘೋಷಿಸಿದ್ದರೆ ಬಹುಶಃ ವಿ.ಕ.ವನ್ನು ಅಷ್ಟು ಬೃಹತ್ ಮೊತ್ತಕ್ಕೆ TIMESನವರು ಕೊಳ್ಳುತ್ತಿರಲಿಲ್ಲ. ವಿಜಯವಾಣಿ ಹೆಸರಿಡುವ ಮುನ್ನ ಇದರ ಬಗ್ಗೆ ಸಂಕೇಶ್ವರರು ಯೋಚಿಸಬೇಕಿತ್ತು..

 15. sir, vijayavani tumkur local paper editor by venkateshmurthy

 16. Vijayavani………….. super tittle for sankeshwar

 17. Vijayavani………….. super tittle for sankeshwar

 18. ವಿಜಯವಾಣಿ ಹೆಸರಿಡುವುದರಿಂದ ವಿಜಯಕರ್ನಾಟಕಕ್ಕೆ ನಷ್ಟ ಖಂಡಿತ.., ತಾವು ಮುಂದೆ ಈ ಹೆಸರಿನ ಪತ್ರಿಕೆ ತರುತ್ತೇವೆ ಎಂದು ಸಂಕೇಶ್ವರರು
  ಘೋಷಿಸಿದ್ದರೆ ಬಹುಶಃ ವಿ.ಕ.ವನ್ನು ಅಷ್ಟು ಬೃಹತ್ ಮೊತ್ತಕ್ಕೆ TIMESನವರು ಕೊಳ್ಳುತ್ತಿರಲಿಲ್ಲ. ವಿಜಯವಾಣಿ ಹೆಸರಿಡುವ ಮುನ್ನ ಇದರ ಬಗ್ಗೆ ಸಂಕೇಶ್ವರರು ಯೋಚಿಸಬೇಕಿತ್ತು..

Trackbacks

 1. ToI group in squabble over Kannada paper title « sans serif
 2. Does Amitabh Bachchan own the name ‘Vijay’? « churumuri

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.