ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ವಾಜಪೇಯಿ ಕುರಿತ ನನ್ನ ಕೃತಿ ಈಗ ಮಾರುಕಟ್ಟೆಯಲ್ಲಿ ಲಭ್ಯ

ನಿಮಗೊಂದು ಸಿಹಿ ಸುದ್ದಿ. ನನ್ನ ಪ್ರಪ್ರಥಮ ಕೃತಿ – ‘ಅಜಾತಶತ್ಱು’ ಪುನರ್ ಮುದ್ರಣಗೊಂಡಿದೆ.

ಇದು ನಾನು ಸುಮಾರು ಹದಿನೈದು ವರ್ಷಗಳ ಹಿಂದೆ ಬರೆದ ಪುಸ್ತಕ. ಈ ಅವಧಿಯಲ್ಲಿ ಈ ಪುಸ್ತಕದ ಇಪ್ಪತ್ತೈದಕ್ಕೂ ಹೆಚ್ಚು ಸಾವಿರ ಪ್ರತಿಗಳು ಮಾರಾಟವಾಗಿವೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಈ ಪುಸ್ತಕವನ್ನು ಕೇಳಿ ನನಗೆ ಬರೆದವರು, ಫೋನ್ ಮಾಡಿದವರು ಅವೆಷ್ಟೊ ಮಂದಿ. ಅವರೆಲ್ಲರಿಗೆ ಉತ್ತರಿಸಿ ಉತ್ತರಿಸಿ ಸುಸ್ತಾಗಿದ್ದೆ. ಕೆಲವರಂತೂ ನನಗೆ ಮುಂಗಡ ಹಣ ಕಳಿಸಿದ್ದೂ ಉಂಟು.

ಇನ್ನು ಕೆಲವರಂತೂ ಪತ್ರ ಬರೆದು, ಇಮೇಲ್ ಕಳಿಸಿ ಕಾಲಕಾಲಕ್ಕೆ ವಿಚಾರಿಸುತ್ತಿದ್ದರು. ಪದೇ ಪದೆ ಕೇಳುತ್ತಿದ್ದವರಿಗೆ ಉತ್ತರಿಸಿ ಸೋತಿದ್ದೆ.

ಹಾಗಂತ ಈ ಪುಸ್ತಕವನ್ನು ಮರುಮುದ್ರಿಸದೇ ಇರುವುದಕ್ಕೆ ಬೇರೆ ಯಾವ ಬಲವಾದ ಕಾರಣಗಳಿರಲಿಲ್ಲ. ಯಾವುದಕ್ಕೂ ಕಾಲ ಕೂಡಿ ಬರಬೇಕು ಅಂತಾರಲ್ಲ. ಅಲ್ಲಿ ತನಕ ಏನೇ ಮಾಡಿದರೂ ಕಾರ್ಯಸಿದ್ಧಿಯಾಗುವುದಿಲ್ಲ. ಈ ಪುಸ್ತಕದ ವಿಷಯದಲ್ಲೂ ಹಾಗೇ ಆಯಿತು. ಅಷ್ಟಕ್ಕೂ ಈ ಕೃತಿಯ ಸ್ವಾಮ್ಯವನ್ನು ನಾನು ಸಂಪೂರ್ಣ್ವವಾಗಿ ಪ್ರಕಾಶಕರಿಗೇ ಬಿಟ್ಟುಕೊಟ್ಟಿದ್ದೆ. ಹೀಗಾಗಿ ಪುಸ್ತಕ ಪ್ರಕಟವಾಗದೇ ಇರುವುದರಲ್ಲಿ ನನ್ನ ‘ಕೈವಾಡ’ವಿರಲಿಲ್ಲ.

ಹದಿನೈದು ವರ್ಷಗಳ ಹಿಂದೆ ಬರೆದ ಕೃತಿಯಿದು. ಇದನ್ನು ಬರೆಯಲು ಅಧ್ಯಯನ, ತಿರುಗಾಟ, ಸಂದರ್ಶನ… ಎಂದು ನಾನು ಸುಮಾರು ಎರಡು ವರ್ಷ ತೆಗೆದುಕೊಂಡಿರಬಹುದು. ಈ ಪುಸ್ತಕಕ್ಕೆ ಒಂದು ಮುನ್ನುಡಿ ಬರೆದುಕೊಡಿ ಎಂದು ‘ಕನ್ನಡಪ್ರಭ’ದ ಅಂದಿನ ಸಂಪಾದಕರಾದ ವೈ.ಎನ್.ಕೃಷ್ಣಮೂರ್ತಿ (ವೈ.ಎನ್.ಕೆ) ಅವರಲ್ಲಿ ಕೇಳಿಕೊಂಡಾಗ ತುಂಬಾ ಪ್ರೀತಿಯಿಂದ ಬರೆದುಕೊಟ್ಟಿದ್ದರು.

ವೈ.ಎನ್.ಕೆ ಬರೆದಿದ್ದು – ‘ವಾಜಪೇಯಿ ಅವರಂಥ ಬಹುಮುಖಿಗಳ ಬಗ್ಗೆ ಬರೆಯುವುದು ಕಷ್ಟ. ಅವರ ಬಗ್ಗೆ ಮಾಹಿತಿ ಸಂಗ್ರಹಿಸುವುದೂ ಸುಲಭವಲ್ಲ. ನಿಜದ ಜತೆಗೆ ದಂತಕತೆಗಳೂ ಬೆರೆತು ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಮೂರನೆಯ ವ್ಯಕ್ತಿತ್ವವೊಂದು ನಿರ್ಮಾಣವಾಗಿರುತ್ತದೆ. ಅದನ್ನು ಹೊಕ್ಕು ನೋಡುವ ದೃಷ್ಟಿ ಇಲ್ಲದಿದ್ದರೆ ಅಂಥವರ ಬಗ್ಗೆ ಬರೆದಿದ್ದು ಪಕ್ವ ಬರೆವಣಿಗೆ ಎನಿಸುವುದಿಲ್ಲ. ವಿಶ್ವೇಶ್ವರ್ ಭಟ್ಟರಿಗೆ ಅಂಥ ಒಳನೋಟವಿದೆ ಎಂದು ಈ ಕೃತಿಯನ್ನು ಓದಿದ ಯಾರು ಬೇಕಾದರೂ ಧಾರಾಳವಾಗಿ ಹೇಳಬಹುದು.’

ಯಾವ ಪತ್ರಿಕೆಗೆ ವೈ.ಎನ್.ಕೆ. ಅವರು ಸಂಪಾದಕರಾಗಿದ್ದರೋ, ಅದೇ ಪತ್ರಿಕೆಗೆ ಈಗ ನಾನು ಸಂಪಾದಕ. ಈ ಸಂದರ್ಭದಲ್ಲಿ ವಾಜಪೇಯಿ ಕುರಿತ ಪುಸ್ತಕದ ಮರುಮುದ್ರಣವಾಗುತ್ತಿರುವುದು ಸಂತಸದ ಸಂಗತಿ.

ಪುಸ್ತಕ ಬಹಳ ಸೊಗಸಾಗಿ ಮೂಡಿ ಬಂದಿದೆ. ಮಿತ್ರ ಅಪಾರ ಮುಖಪುಟವನ್ನು ಚೆಂದವಾಗಿಸಿದ್ದಾರೆ. ಬೆಲೆ ಕೊಂಚ ಜಾಸ್ತಿಯಾಯಿತು(ಮುನ್ನೂರೈವತ್ತು ರೂ) ಎಂದೆನಿಸಬಹುದು. ಆದರೆ ಪುಸ್ತಕದ ಗುಣಮಟ್ಟದಲ್ಲಿ ರಾಜಿ ಆಗಿಲ್ಲ.

ವಾಜಪೇಯಿ ಅವರು ಹದಿಮೂರು ದಿನಗಳ ಕಾಲ ಪ್ರಧಾನಿ ಆದ ನಂತರ ಬರೆದ ಪುಸ್ತಕವಿದು. ಅವರು ಪ್ರಧಾನಿಯಾದ ದಿನಗಳ ಬಗ್ಗೆ ವಿವರಗಳಿಲ್ಲ. ಅವೆಲ್ಲ ನಿಮಗೆ ಗೊತ್ತು. ಅದಕ್ಕೂ ಹಿಂದಿನ ವಿವರಗಳು ಯಾರಿಗೂ ಗೊತ್ತಿಲ್ಲ. ಇದೇ ಈ ಪುಸ್ತಕದ ವೈಶಿಷ್ಟ್ಯ. ಸಪ್ನಾ ಬುಕ್ ಹೌಸ್ ಈ ಕೃತಿಯನ್ನು ಪ್ರಕಟಿಸಿದೆ. ಸಪ್ನಾ ಪುಸ್ತಕ ಮಳಿಗೆ ಸೇರಿದಂತೆ ರಾಜ್ಯದ ಎಲ್ಲ ಪುಸ್ತಕ ಮಳಿಗೆಗಳಲ್ಲಿ ಇದು ಲಭ್ಯ.

11 Comments

  1. ಆತ್ಮೀಯ ವಿಶ್ವೇಶ್ವರ ಭಟ್ ಅವರೇ…ಈ ನಿಮ್ಮ ಕೃತಿ ಇನ್ನಷ್ಟು ಹೆಸರುವಾಸಿಯಾಗಲಿ ಎಂದು ಹಾರೈಸುತ್ತೇನೆ. ಈ ಕೃತಿ ಸೇರಿದಂತೆ ನಿಮ್ಮ ಇನ್ನೂ ಕೆಲ ಕೃತಿಗಳನ್ನು ಓದಲು ಕಾಯುತ್ತಿದ್ದೇನೆ. ನನಗನಿಸಿದಂತೆ ಇಲ್ಲಿಯ ನಮ್ಮ ಸಣ್ಣ ಕನ್ನಡ ಸಮುದಾಯದಲ್ಲಿ ಇನ್ನೂ ಅನೇಕರು ಆಸಕ್ತರಿದ್ದಾರೆ.

  2. ಅಭಿನಂದನೆಗಳು ಸಾರ್…

  3. ಒಳ್ಳೇಯ ಕೆಲಸಕ್ಕೆ ಸಹಕಾರ ಶಬ್ಬಾಶ್ ಗಿರಿ ನಮ್ಮ ಜನರು ಕೊಟ್ಟೇ ಕೊಡುತ್ತಾರೆ.

    ಹಾದಿ ತಪ್ಪುವಾಗಲೂ ಎಚ್ಚರಿಸುತ್ತಾರೆ.

    ಎರಡನ್ನು ಸಮನಾಗಿ ಸ್ವೀಕರಿಸಿ, ನ್ಯಾಯ ಒದಗಿಸಬೇಕಷ್ಟೆ.

  4. Thanks sir

    Realy expected book. thank u so much……

    sanjay
    9986998624

  5. Tamage abhinandanegalu..

  6. Nice to know , I will buy when I come back to India..

    Nandakumar Hegde
    Kampala, Uganda

  7. Bhatt Sir,

    Thanks for this wonderful info and will definitely read this book, Request to write a book on his PM tenure and later also.

    Regards,
    Bharath

  8. Thank you, Even i was searching for this book for long time in many place’s.
    Yesterday brought book from Swapna Book House,

  9. thanq sir, i searched for this book like honeybee wanders fr honey. definitely i l buy this buk.
    i hv to to tel an amusing thing here. a journalism student named ramesh handrangi has written a book on late h y sharadaprasad, printed & published in mysore.but i searched everywhere in mysore & i did not get that buk. even i asked in mysore university, same answer repeated. sir can u please tel me where can i buy this book? dont disappoint me sir pls.

    • ಈ ಪುಸ್ತಕದ ಬಗ್ಗೆ ನನಗೆ ಗೊತ್ತಿಲ್ಲ. ಆದರೂ ಹುಡುಕಲು ಪ್ರಯತ್ನಿಸುವೆ.

  10. Hi Sir,

    Really good book……Thanks for re-publishing…

    N S

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.