ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಮೈಸೂರಿಗೆ ಹೊರಟ ಪ್ರತಾಪ್‌ಗೆ ಶುಭವಾಗಲಿ

16-pratapನನಗೆ ಪ್ರತಾಪ್ ಅವರಲ್ಲಿ ಇಷ್ಟವಾಗುತ್ತಿದ್ದ ಸಂಗತಿಗಳೆಂದರೆ ನಿರಂತರ ಅಧ್ಯಯನಶೀಲತೆ, ಹುಡುಕಾಟ, ಸಂಶೋಧನೆ ಹಾಗೂ ಕ್ಷಣಕ್ಷಣಕ್ಕೆ update ಆಗುವ ರೀತಿ. ಪ್ರತಾಪ್ ಮುಂಗೋಪಿ, ಒರಟ ಎಂದು ಹೇಳುವವರುಂಟು. ಅದು ತಕ್ಕಮಟ್ಟಿಗೆ ನಿಜ ಕೂಡ. ಒಂದು ರೀತಿಯಲ್ಲಿ ಅವರು ಹೆಸರಿಗೆ ತಕ್ಕ ಹಾಗೆ ಸಿಂಹವೇ.

ಮೊನ್ನೆ ಪ್ರತಾಪ್ ಸಿಂಹ ಬಂದು ರಾಜೀನಾಮೆ ಕೊಟ್ಟರು!

ಇಂಥದೊಂದು ಸಂದರ್ಭ ಬರಬಹುದೆಂದು ನಾನು ಕನಸುಮನಸಿನಲ್ಲಿಯೂ ಎಣಿಸಿರಲಿಲ್ಲ. ನಾವು ‘ವಿಜಯ ಕರ್ನಾಟಕ’ದಲ್ಲಿದ್ದಾಗ ಪ್ರತಾಪ್ ಬರೆದ ಲೇಖನದಿಂದ ಪ್ರತಿಭಟನೆಗಳಾದಾಗ ಐದಾರು ಪ್ರಸಂಗಗಳಲ್ಲಿ ಮ್ಯಾನೇಜ್‌ಮೆಂಟ್ ಅವರ (ಪ್ರತಾಪ್) ರಾಜೀನಾಮೆ ಪಡೆಯುವಂತೆ ಹೇಳಿದ್ದರೂ ನಾನು ರಾಜೀನಾಮೆಗೆ ಆಗ್ರಹಿಸಿರಲಿಲ್ಲ. ಒಂದು ಸಲವಂತೂ, ‘ಇನ್ನು ಒಂದು ಗಂಟೆಯೊಳಗೆ ಪ್ರತಾಪ್ ರಾಜೀನಾಮೆ ಪತ್ರ ನನ್ನ ಟೇಬಲ್ ಮೇಲಿರಬೇಕು’ ಎಂಬ ಆದೇಶ ಬಂದಾಗಲೂ ಈ ವಿಷಯವನ್ನು ಪ್ರತಾಪ್‌ಗೇ ಹೇಳಿರಲಿಲ್ಲ. ಪರಿಸ್ಥ್ಥಿತಿಯನ್ನು ಹೇಗೋ ನಿಭಾಯಿಸಿದ್ದಾಯಿತು.

ಪ್ರತಾಪ್‌ಗೂ ಕೆಲವು ಉತ್ತಮ ಆಫರ್‌ಗಳು ಬಂದಿದ್ದವು. ಪತ್ರಿಕೆಯೊಂದಕ್ಕೆ ಸಂಪಾದಕರಾಗಿ ಎಂದು ಕೇಳಿಕೊಂಡಾಗಲೂ ಅವರು ನನ್ನನ್ನು ಬಿಟ್ಟು ಹೋಗಲಿಲ್ಲ. ನಾನು ‘ವಿಜಯ ಕರ್ನಾಟಕ’ಕ್ಕೆ ರಾಜೀನಾಮೆ ನೀಡಿದಾಗ ಪ್ರತಾಪ್ ಮರುಕ್ಷಣವೇ ತಾವೂ ರಾಜೀನಾಮೆ ಕೊಟ್ಟರು. ಹಾಗೆ ನೋಡಿದರೆ ಅವರು ರಾಜೀನಾಮೆ ಕೊಡುವ ಸ್ಥಿತಿಯಲ್ಲಿರಲಿಲ್ಲ. ಅವರು ಮದುವೆಯಾಗಿ ಹದಿನೇಳು ದಿನಗಳಾಗಿದ್ದವು . ರಾಜೀನಾಮೆ ಕೊಟ್ಟರೆ ಮುಂದೇನು ಎಂಬ ಪ್ರಶ್ನೆ ಭೂತಾಕಾರವಾಗಿತ್ತು. ಆದರೆ ಪ್ರತಾಪ್ ಅವನ್ನೆಲ್ಲ ಯೋಚಿಸಲಿಲ್ಲ. ‘ನೀವು ಇರದ ಕಡೆ ನಾನೂ ಇರುವುದಿಲ್ಲ’ ಎಂದು ಎದ್ದು ಬಂದುಬಿಟ್ಟರು.

ಕನ್ನಡ ಪತ್ರಿಕೋದ್ಯಮ ಕಂಡ ಅತ್ಯಂತ ನಿರ್ಭೀತ, ಬುದ್ಧಿವಂತ, ಎದೆಗಾರಿಕೆಯ ಪತ್ರಕರ್ತರ ಪೈಕಿ ಪ್ರತಾಪ್ ಕೂಡಾ ಒಬ್ಬರು. ಪ್ರತಾಪ್ ವಿಷಯದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಹೇಳಬಹುದಾದರೆ ಅವರು ಇವನ್ನೆಲ್ಲ ತೀರಾ ಚಿಕ್ಕವಯಸ್ಸಿನಲ್ಲಿ ಸಾಬೀತು ಮಾಡಿ ತೋರಿಸಿದರು. ‘ವಿಜಯ ಕರ್ನಾಟಕ’ ಸೇರಿದಾಗ ಅವರಿಗೆ ಇಪ್ಪತ್ತೆರಡು ವರ್ಷ ವಯಸ್ಸು. ಆಗ ಅವರು ಬರೆದ ಅಕ್ಷರಗಳು ಪತ್ರಿಕೆಯಲ್ಲಿ ಮೂಡುವುದಿರಲಿ, ಅವರಿಗೆ ಮೀಸೆಯೇ ಸರಿಯಾಗಿ ಮೂಡಿರಲಿಲ್ಲ. ನಾನು ಸಂಪಾದಕನಾಗಿ ಬಂದಾಗ ಮೊದಲ ದಿನ ಸಂಪಾದಕೀಯ ಪುಟವನ್ನು ಹಿಡಿದು ನನಗೆ ತೋರಿಸಲು ಬಂದರು. ಅದರಲ್ಲಿ ಅವರ ಲೇಖನವೂ ಇತ್ತು. ವಿದೇಶಿ ವಿದ್ಯಮಾನಗಳ ಬಗ್ಗೆ ಬರೆದಿದ್ದರು. ಅವರ ಬರಹ, ಜ್ಞಾನ, ವಿಷಯಾಸಕ್ತಿ ಕಂಡು ಅಚ್ಚರಿಯಾಯಿತು. ‘ಇದು ನಿಮ್ಮದೇ ಸ್ವಂತ ಲೇಖನವಾ ಅಥವಾ ಅನುವಾದವಾ?’ ಅಂತ ಕೇಳಿದೆ. ಅದನ್ನು ಅವರೇ ಸ್ವಂತವಾಗಿ ಬರೆದಿದ್ದರು.

‘ನನಗೆ ವಿದೇಶಿ ವಿದ್ಯಮಾನ, ಇತಿಹಾಸ, ರಾಜಕೀಯ, ಧಾರ್ಮಿಕ ಸ್ಥಿತ್ಯಂತರ, ರಾಷ್ಟ್ರೀಯತೆಯ ಕುರಿತ ವಿಷಯಗಳಲ್ಲಿ ಆಸಕ್ತಿ’ ಎಂದು ಹೇಳಿದ್ದರು. ಆಗ ಅವರು ಅಂಕಣ ಬರೆಯುತ್ತಿರಲಿಲ್ಲ. ಬಿಡಿ ಬಿಡಿ ಲೇಖನಗಳನ್ನಷ್ಟೇ ಬರೆಯುತ್ತಿದ್ದರು ಹಾಗೂ ಬೇರೆಯವರ ಲೇಖನಗಳನ್ನು ಅನುವಾದಿಸುತ್ತಿದ್ದರು. ಒಮ್ಮೊಮ್ಮೆ ಇಡೀ ಪುಟಕ್ಕೆ ಬೇಕಾಗುವಷ್ಟು ಸಾಮಗ್ರಿಯನ್ನು ಅವರೊಬ್ಬರೇ ಬರೆದೋ, ಅನುವಾದಿಸಿಯೋ ತುಂಬಿಸುತ್ತಿದ್ದರು. (ಈ ಕೆಲಸವನ್ನು ಅವರೊಬ್ಬರೇ ಆರೇಳು ವರ್ಷ ಮಾಡಿದ್ದು ಬೇರೆ ಮಾತು)

ಒಂದೆರಡು ತಿಂಗಳುಗಳ ಕಾಲ ಪತ್ರಿಕಾಲಯದಲ್ಲಿ ಪ್ರತಾಪ್ ಚಟುವಟಿಕೆ, ತಲ್ಲೀನತೆ, ಆಸಕ್ತಿ, ಬರಹ, ವಿಷಯ ಹರವು, ಎದೆಗಾರಿಕೆ, ಉಮ್ಮೇದಿ, ಸ್ವಲ್ಪ ಮಟ್ಟಿನ ಉಡಾಳತನ, ಹುಂಬ ಧೈರ್ಯವನ್ನೆಲ್ಲ ಕಂಡು, ‘ಪ್ರತಾಪ್, ನೀವು ಅಂಕಣ ಬರೆಯುತ್ತೀರಾ?’ ಎಂದು ಕೇಳಿದೆ. ಅವರು ಮರುಮಾತಿಲ್ಲದೇ ಆಯಿತು ಎಂದರು. ‘ಪ್ರತಾಪ್, ಸಂಪಾದಕೀಯ ಪುಟವನ್ನು ಸ್ವಲ್ಪ ನೀವೇ ನೋಡಿಕೊಳ್ಳುತ್ತೀರಾ?’ ಎಂದು ಕೇಳಿದೆ. ಆಗಬಹುದು ಎಂದರು.

ಈ ಮಾತನ್ನು ಯಾಕೆ ಹೇಳುತ್ತಿದ್ದೇನೆ ಅಂದ್ರೆ ಯಾವುದೇ ಪತ್ರಿಕೆಯಲ್ಲಿ ಸಂಪಾದಕೀಯ ಪುಟವನ್ನು 25-30 ವರ್ಷ ಅನುಭವವಿರುವ, ನಿವೃತ್ತಿಯ ಸನಿಹವಿರುವ, ಬಿಪಿ, ಶುಗರ್ ಅಂಟಿಸಿಕೊಂಡು ಎರಡು ಆಪರೇಶನ್ ಆಗಿರುವ ಹಿರಿಯ ತಲೆಗಳು ನಿರ್ವಹಿಸುತ್ತಾರೆ. ಹೊಸಪತ್ರಿಕೆಯ ಆತ್ಮವೂ ಹೊಸದಾಗಿರಬೇಕು ಎಂಬುದು ನನ್ನ ಯೋಜನೆಯಾಗಿತ್ತು. ಅಂಕಣಕಾರರಾಗಲು ಸಹ ಸಂಪಾದಕೀಯ ಪುಟ ನಿರ್ವಹಣಾಕಾರರಿಗೆ ಇರಬೇಕಾದ ‘ಅರ್ಹತೆ’ಗಳೇ ಇರಬೇಕೆಂಬ ಕಾಲ ಅಂದು ಇತ್ತು. ಇಪ್ಪತ್ತನಾಲ್ಕು ವರ್ಷದ ‘ಪೋರ’ನೊಬ್ಬ ಅಂಕಣ ಬರೆಯಲು ಆರಂಭಿಸಿದ್ದು, ಸಂಪಾದಕೀಯ ಪುಟ ನಿರ್ವಹಿಸಿದ್ದು ಕನ್ನಡ ಪತ್ರಿಕೋದ್ಯಮದಲ್ಲೊಂದೇ ಅಲ್ಲ, ಭಾರತೀಯ ಪತ್ರಿಕೋದ್ಯಮದಲ್ಲೇ ಒಂದು ದಾಖಲೆ. ಅಷ್ಟೇ ಅಲ್ಲ, ಇದೊಂದು ಅಪೂರ್ವ, ಆದರ್ಶ ನಿದರ್ಶನ. ಅಂಬೆಗಾಲು ಇಡುವ ಹೊತ್ತಿನಲ್ಲಿ ಪ್ರತಾಪ್, ದಾಪುಗಾಲು ಇಟ್ಟಿದ್ದರು.

ಅಂದಿನಿಂದ ಹಿಂದಿನವಾರದ ತನಕ ಪ್ರತಾಪ್ ಬರಹಗಳಿಗೆ ಕನ್ನಡ ಅಕ್ಷರಲೋಕವೇ ಸಾಕ್ಷಿಯಾಗಿದೆ. ಅವರು ಅಂಕಣವನ್ನು ಮೀರಿ ಬೆಳೆದಿದ್ದಾರೆ. ಅಭಿಮಾನಿಗಳು ಹಾಗೂ ವಿರೋಧಿಗಳನ್ನು ಸಮಸಮ ಪ್ರಮಾಣದಲ್ಲಿ ಪಡೆದಿದ್ದಾರೆ. ತಲೆ ಮೇಲೆ ಕುಳ್ಳಿರಿಸಿಕೊಂಡು ಅಭಿಮಾನಪಡುವ ಬಹುದೊಡ್ಡ Fan following ಅವರಿಗಿದೆ. ಅದನ್ನು ಕಂಡು ಸಿನಿಮಾ ನಟನೂ ಕರುಬಬೇಕು. ಆ ರೀತಿ ಜನ ಅವರನ್ನು ಇಷ್ಟಪಡುತ್ತಾರೆ, ಮುತ್ತಿಕೊಳ್ಳುತ್ತಾರೆ. ಹಾಗೆಯೇ ಅವರನ್ನು ವಿರೋಧಿಸುವ, ಹೊಸಕಿ ಹಾಕಬೇಕು, ಸಾಯಿಸಿಬಿಡಬೇಕೆಂದು ಹೊಂಚು ಹಾಕುವ ಗುಂಪೂ ಇದೆ. ಭಯೋತ್ಪಾದಕರ ‘ಹಿಟ್‌ಲಿಸ್ಟ್‌’ನಲ್ಲಿಯೂ ಇದ್ದಾರೆ. ಗನ್ನು ಹಾಗೂ ಪೆನ್ನು ಹಿಡಿದು ತಿರುಗುತ್ತಾರೆ. ಟೆರರಿಸ್ಟ್‌ಗಳು ಟಾರ್ಗೆಟ್ ಮಾಡಿದ ಬಳಿಕ ಅವರ ಬರಹದಲ್ಲಿ ಮೊನಚು ಕಡಿಮೆಯಾಗಬಹುದು ಎಂದು ನಿರೀಕ್ಷಿಸಿದ್ದೆ. ಪ್ರತಾಪ್ ಮತ್ತಷ್ಟು ಧೈರ್ಯದಿಂದ ಹಾಗೂ Clever ಆಗಿ ಬರೆಯಲಾರಂಭಿಸಿದರು.

ಅವರೂ ಸರಿ, ಇವರೂ ಸರಿ ಎಂದು ಬರೆಯುವುದು ಪ್ರತಾಪ್‌ಗೆ ಗೊತ್ತಿಲ್ಲ. ಏನೆಂದುಕೊಳ್ಳುತ್ತಾರೋ ಎಂದು ಮಧ್ಯಮಾರ್ಗ ಅನುಸರಿಸುವುದೂ ಗೊತ್ತಿಲ್ಲ. ಗುಂಡು ಹೊಡೆದಂತೆ ಹೇಳಿಬಿಡಬೇಕು. ನಾನು ಜಗತ್ತಿನ ಯಾವುದೇ ಮೂಲೆಯಲ್ಲಿರಲಿ, ಪ್ರತಾಪ್ ಲೇಖನವನ್ನು ಎರಡೆರಡು ಸಲ ಓದಿ, ಅವರ ಹರಿತವನ್ನು ಕಡಿಮೆ ಮಾಡಿ, ಒಮ್ಮೊಮ್ಮೆ ವಾಕ್ಯ ವಾಕ್ಯ, ಪ್ಯಾರಾ ಪ್ಯಾರಾ ಎಡಿಟ್ ಮಾಡಿ ಮುದ್ರಣಕ್ಕೆ ಕಳಿಸುತ್ತಿದ್ದೆ. ಅವರು ಬರೆದಿದ್ದನ್ನು ಹಾಗೆಯೇ ಪ್ರಿಂಟ್ ಹಾಕಿದ್ದರೆ ನಾನು ಕನಿಷ್ಠ ಐವತ್ತು ಸಲ ಕೆಲಸ ಕಳೆದುಕೊಳ್ಳಬೇಕಿತ್ತು! ಅಷ್ಟು ಎಡಿಟ್ ಮಾಡಿದ ನಂತರವೂ ಪ್ರತಾಪ್ ಲೇಖನದಲ್ಲಿನ ಕಾವು ಸುಡುತ್ತಿತ್ತು. ಅಂದರೆ ಅದರ unedited ರೂಪ ಹೇಗಿದ್ದಿರಬಹುದು ಎಂಬುದನ್ನು ಯೋಚಿಸಬಹುದು.

ಪ್ರತಾಪ್ ಅವರನ್ನು ಸಹಿಸದವರು ಅವರನ್ನು ಬಲಪಂಥೀಯ, ಕೋಮುವಾದಿ ಎಂದೆಲ್ಲ ಹೇಳುವುದುಂಟು. ಆದರೆ ಅವರು ಬಲಪಂಥೀಯರನ್ನು, ಕೋಮುವಾದಿಗಳನ್ನು ಸಹ ಬಿಟ್ಟವರಲ್ಲ. ಬಿಜೆಪಿ, ಆರೆಸ್ಸೆಸ್‌ನ್ನೂ ಸಹ ಟೀಕಿಸದೇ ಬಿಟ್ಟಿಲ್ಲ.

ನನಗೆ ಪ್ರತಾಪ್ ಅವರಲ್ಲಿ ಇಷ್ಟವಾಗುತ್ತಿದ್ದ ಸಂಗತಿಗಳೆಂದರೆ ನಿರಂತರ ಅಧ್ಯಯನಶೀಲತೆ, ಹುಡುಕಾಟ, ಸಂಶೋಧನೆ ಹಾಗೂ ಕ್ಷಣಕ್ಷಣಕ್ಕೆ update ಆಗುವ ರೀತಿ. ಪ್ರತಾಪ್ ಮುಂಗೋಪಿ, ಒರಟ ಎಂದು ಹೇಳುವವರುಂಟು. ಅದು ತಕ್ಕಮಟ್ಟಿಗೆ ನಿಜ ಕೂಡ. ಅವರನ್ನು ನಿಭಾಯಿಸುವುದು ಬಹಳ ಕಷ್ಟ. ಒಂದು ರೀತಿಯಲ್ಲಿ ಅವರು ಹೆಸರಿಗೆ ತಕ್ಕ ಹಾಗೆ ಸಿಂಹವೇ. ಕಚೇರಿಯಲ್ಲಿ ಸಹೋದ್ಯೋಗಿಗಳೂ ಒಂದು ಅಂತರ ಕಾಪಾಡಿಕೊಂಡೇ ಅವರ ಜತೆ ಮಾತಾಡುತ್ತಾರೆ. ಯಾವಾಗ ‘ಗುರ್ರ್‌’ ಅಂತಾರೋ ಗೊತ್ತಾಗೊಲ್ಲ. ಕಾರಣ ಇಷ್ಟೆ. ಅವರಿಗೆ ನಾಟಕೀಯತೆ, ಠಕ್ಕು ಗೊತ್ತಿಲ್ಲ. ದಡ್ಡತನ mediocre ಬುದ್ಧಿಮತ್ತೆಯಿದ್ದೂ ಸೋಗು ಹಾಕುವವರನ್ನು ಅವರು ಸಹಿಸಿಕೊಳ್ಳುವುದಿಲ್ಲ. ‘ನೀನು ಬರೆದಿದ್ದು ಸರಿ ಇಲ್ಲ, ಹೀಗೆ ಬರೆಯಬಹುದಿತ್ತಲ್ಲ’ ಎಂದು ಹೇಳುವ ಬದಲು, ನೇರವಾಗಿ ‘ನೀನು ದಡ್ಡನಿದ್ದೀಯಾ, ಮೂರ್ಖಶಿಖಾಮಣಿ ನೀನು’ ಎಂದು ಮುಖಕ್ಕೆ ಹೊಡೆದಂತೆ ಹೇಳಿಬಿಡುತ್ತಾರೆ. ಅದು ಅವರ ದೌರ್ಬಲ್ಯವಲ್ಲ, ತಾಕತ್ತು. ಪ್ರತಾಪ್ ಇಂದು ಪ್ರತಾಪ್ ಆಗಿದ್ದರೆ ಅದಕ್ಕೆ ಅವರ ನೇರವಂತಿಕೆ, ದಿಟ್ಟತನ, ಪ್ರಾಮಾಣಿಕತೆಯೇ ಕಾರಣ.

ಪ್ರತಾಪ್ ಯಾವುದೇ ಸುದ್ದಿಮನೆಗಾದರೂ ಶೋಭೆತರಬಲ್ಲ ಭೂಷಣಪ್ರಾಯ. ತಾವೊಬ್ಬರೇ ಅಲ್ಲ, ತಮ್ಮ ಜತೆಗಿರುವವರು, ಸಂಪರ್ಕಕ್ಕೆ ಬರುವವರು, ಸಹೋದ್ಯೋಗಿಗಳು, ಸರೀಕರಲ್ಲೂ ಪ್ರಭಾವ ಬೀರಬಲ್ಲ, ಅವರಲ್ಲಿ ಹೊಸ ಚಿಂತನೆ ಮೂಡಿಸಬಲ್ಲ ವ್ಯಕ್ತಿ. ಒಂದು ಸುದ್ದಿಮನೆಯ ಬೌದ್ಧಿಕ ಚೇತನವನ್ನು ಅರಳಿಸುವ ತಾಕತ್ತು, ಜಾಣ್ಮೆ ಅವರಿಗಿದೆ.

ಪ್ರತಾಪ್ ಈ ಒಂದೂವರೆ ದಶಕದಲ್ಲಿ ಒಂದೂ ನೆಪ ಹೇಳದೇ ಬರೆದರು. ರಾಷ್ಟ್ರೀಯ ವಾದವನ್ನು ಪ್ರಬಲವಾಗಿ ಪ್ರತಿಪಾದಿಸಿದರು. ಈ ಪ್ರಕ್ರಿಯೆಯಲ್ಲಿ ತಾವೂ ಗಟ್ಟಿಯಾಗುತ್ತಾ ಹೋದರು. ತಾವು ಕೆಲಸ ಮಾಡಿದ ಪತ್ರಿಕೆಯನ್ನೂ ರೂಪಿಸಲು ನೆರವಾದರು. ಶನಿವಾರದ ಅವರ ಅಂಕಣವನ್ನು ಇಡೀ ರಾಜ್ಯದ ಜನತೆ ಎದುರು ನೋಡುತ್ತಿತ್ತು ಅಂದರೆ ಅತಿಶಯೋಕ್ತಿಯೇನಲ್ಲ. ಒಬ್ಬ ಪತ್ರಕರ್ತನಾಗಿ ಅವರು ‘ಸ್ಟಾರ್‌’ ಸ್ಥಾನಮಾನ, ಜನಪ್ರಿಯತೆಯನ್ನು ಗಿಟ್ಟಿಸಿಕೊಂಡರು. ಅಷ್ಟಾದರೂ ಅವರ ತಲೆ ಅವರ ಕುತ್ತಿಗೆಯ ಮೇಲೆಯೇ ಇತ್ತು. ಕಲಿಯುವ, ತಿಳಿದುಕೊಳ್ಳುವ ಸಂಯಮ, ಸೌಜನ್ಯವನ್ನು ಕಡಿಮೆ ಮಾಡಿಕೊಳ್ಳಲಿಲ್ಲ. ಬರವಣಿಗೆಯಲ್ಲಿ ಪ್ರತಾಪ ಹಾಗೂ ಸಿಂಹ ಘರ್ಜನೆ ಮೆರೆಯುವ ಅವರು ಖಾಸಗಿಯಾಗಿ, ಅಂತರಂಗದಲ್ಲಿ ಮಾತ್ರ ಆಪ್ತ ಸ್ನೇಹಿತ, ನಿಸ್ಪೃಹ ಹೃದಯಿ. ಆದರೆ ಬಹಳ ಮಂದಿಗೆ ಅವರು ಈ ಗುಣವನ್ನು ತೋರಿಸದೇ ಬಚ್ಚಿಟ್ಟುಕೊಂಡಿರುವುದರಿಂದ ಹಲವರಿಗೆ ಇನ್ನೂ ಒರಟ, ಬಿರುಸು.

ಮೊನ್ನೆ ಪ್ರತಾಪ್ ಬಂದು ರಾಜೀನಾಮೆ ಪತ್ರ ಕೊಟ್ಟಾಗ ಅವರ ಕಣ್ಣಲ್ಲಿ ನೀರು ಧಾರೆಯಾಗಿತ್ತು. ಮಾತು ಸೋತು ಪರದಾಡುತ್ತಿದ್ದರು. ನನ್ನಲ್ಲೂ ಅದೇ ಭಾವವನ್ನು ವರ್ಗಾಯಿಸಿದ್ದರು. ‘ಸಾರ್ ನಾನು ನಿಮ್ಮ ಮುಂದೆ ರಾಜೀನಾಮೆ ಪತ್ರ ಹಿಡಿದು ನಿಲ್ಲುತ್ತೇನೆ ಎಂದು ಯೋಚಿಸಿರಲೇ ಇಲ್ಲ. ಎಲ್ಲವೂ ವಿಚಿತ್ರವಾಗಿ ತೋರುತ್ತಿದೆ. ನೀವು ಕಳಿಸಿಕೊಡುತ್ತಿರುವುದರಿಂದ ಹೋಗುತ್ತಿದ್ದೇನೆ’ ಎಂದಾಗ ಏನು ಹೇಳಬೇಕೋ ತಿಳಿಯದೆ ಸುಮ್ಮನಾದೆ.

ಪ್ರತಾಪ್ ಮೈಸೂರಿನ ಕಡೆ ಹೊರಟರು.

ಶುಭವಾಗಲಿ. I miss him.

– ವಿಶ್ವೇಶ್ವರ ಭಟ್

14 Comments

 1. we all miss him a lot as a journlist ,but we will find a new face of prathap a politician
  being a beloved reader last 8 years iam reading vbhat and prathap’s article’s but last saturday i come to know prathap is not going to write
  we miss him a lot,,,,,

 2. Naavu miss manadotivi sir, Andre, simha sariyaad jagakke hotta ide , Shubhavaagali

 3. Even we miss him from kannada Praba

 4. NO SIR U WUD NOT LET HIM GO. BCZ HE IS A BEST WRITER AND WE ALL LOVE HIS ARTICLES. WE READ THE ARTICLES THROUGH WEB IF NOT IN NEWS PAPER. PLZ GET HIM BACK SIR.

 5. True words Sir, we too miss him and his articles. Any how his thoughts and service to the country are more important. I wish him all the best to him sir.

 6. I am fan of you both…
  all the best prathap simha sir..

 7. hesarigu ondu comment ilvalla … “achchari”

 8. Looks like its Pratapa’s time to get ‘naked’ 🙂 All the best anyway

 9. please sir. avarige article bariyodanna nillisabedi anta heli…

 10. All the best Pratap simha sir….

 11. Sir , congrats ! SUVARNA 24 X 7 ‘s 6th Birthday today !

 12. all true. readers definetly miss him sir… we want to read his articles in further future … i hope he will definetly come back with his sword ( pen)

 13. Sir, nimmanta vyakti irovargu simhagalu huttne irtave bidi adre nav kood simha sir na miss madkotivi(odugaragi matra)

 14. One thing I would like to bring to everyone’s notice is that, most of the articles about international affairs by Mr Pratap Simha were direct translation of articles from Wikipedia. There is no one owner wikipedia so Simha survivied (by hunting in Wiki) so long without any copyright litigations.

  Bye bye WIKI SIMHA…. Sure you will come back to journalism after the elections when you lose it (back to wiki again) he he 🙂

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.