ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.
ಮುಂದೆ ಓದಿ...ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.
ಮುಂದೆ ಓದಿ...ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.
ಮುಂದೆ ಓದಿ...ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ
ಮುಂದೆ ಓದಿ...ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.
ಮುಂದೆ ಓದಿ...ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.
ಮುಂದೆ ಓದಿ...ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!
ಮುಂದೆ ಓದಿ...ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.
ಮುಂದೆ ಓದಿ...
ನನ್ನೊಬ್ಬನಿಂದ ಏನಾಗುತ್ತದೆ? ನಾನೊಬ್ಬನೇ ಏನು ತಾನೆ ಮಾಡಲು ಸಾಧ್ಯ? ನಾನು ಒಬ್ಬಂಟಿಯಾಗಿಬಿಟ್ಟೆ. ಇಲ್ಲದಿದ್ದರೆ ಏನು ಮಾಡುತ್ತಿದ್ದೆ ಗೊತ್ತಾ?
ಇಂಥ ಮಾತುಗಳನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ನನ್ನೊಬ್ಬನಿಂದ ಏನೂ ಸಾಧ್ಯವಿಲ್ಲ ಎಂಬುದು ಹಲವರ ಅಭಿಮತ. ಒಬ್ಬ ವ್ಯಕ್ತಿ ಹೆಚ್ಚೆಂದರೆ ಏನು ಮಾಡಬಹುದು? ಅವೆಲ್ಲ ನನ್ನಿಂದ ಆಗುಹೋಗುವ ಕಥೆಯಾ? ಎಂದು ನಾವೂ ಸಹ ಹೇಳಿ ಕೈ ಚೆಲ್ಲುತ್ತೇವೆ. ಇದರರ್ಥ ನಮ್ಮ ಸಾಮರ್ಥ್ಯದ ಬಗ್ಗೆ ನಮಗೇ ವಿಶ್ವಾಸವಿಲ್ಲ ಎಂದಂತಾಯಿತು. ನಾನೊಬ್ಬನೇ ಏನನ್ನೂ ಮಾಡಲಾರೆ. ಬೇರೆಯವರ ನೆರವಿಲ್ಲದೇ ನನ್ನಿಂದ ಏನೂ ಮಾಡಲು ಆಗುವುದಿಲ್ಲ ಎಂದಂತಾಯಿತು.
ಈ ಮಾತನ್ನು ಯಾಕೆ ಹೇಳುತ್ತಿದ್ದೇನೆ ಅಂದ್ರೆ ಮೊನ್ನೆ ಯೋಗಿ ದುರ್ಲಭಜೀ ಮಾತಿಗೆ ಸಿಕ್ಕಿದ್ದರು. ಅವರು ಅದೂ-ಇದೂ ಮಾತಾಡುತ್ತ ‘ಪವರ್ ಆಫ್ ಒನ್್’ ಎಂಬ ಪುಸ್ತಕದ ಬಗ್ಗೆ ಬಹಳ ಹೊತ್ತು ಮಾತಾಡಿದರು. ‘ನಾನೊಬ್ಬನೇ ಏನು ಮಾಡಲು ಸಾಧ್ಯ?’ ಎಂದು ಕೈ ಚೆಲ್ಲ್ಲುವವರು ಅವಶ್ಯ ಓದಲೇಬೇಕಾದ ಕೃತಿಯಿದು.
ಅಷ್ಟಕ್ಕೂ ಒಂದರ ಮಹತ್ವವಾದರೂ ಏನು?
ಒಂದು ಹಾಡು ನಿಮ್ಮಲ್ಲಿ ಆಧ್ಯಾತ್ಮಿಕ ಅನುಭೂತಿಯನ್ನು ಸೃಷ್ಟಿಸಬಲ್ಲುದು.
ಒಂದು ಹೂವು ಒಂದು ಕನಸನ್ನು, ಒಂದಿಷ್ಟು ಆಹ್ಲಾದವನ್ನು ಮೂಡಿಸಬಲ್ಲುದು. ಒಂದು ಮರ ಒಂದು ದಟ್ಟ ಅರಣ್ಯದ ಹುಟ್ಟಿಗೆ ಕಾರಣವಾಗಬಹುದು. ಒಂದು ಬೀಜ ಒಂದು ತೋಟವನ್ನು ಸೃಷ್ಟಿಸಬಹುದು. ಒಂದು ಹಕ್ಕಿಯಿದೆಯಲ್ಲ, ಅದು ವಸಂತದ ತಂಪೆರೆಯಬಹುದು.
ಒಂದು ನಗೆ ಸ್ನೇಹಕ್ಕೆ, ಸಂಬಂಧಕ್ಕೆ, ಸಂತತಿಗೆ ಕಾರಣವಾಗಬಹುದು. ಒಂದು ಚಪ್ಪಾಳೆ ಅಸಂಖ್ಯ ಜನರಲ್ಲಿ ಪ್ರೇರಣೆ, ಸ್ಫೂರ್ತಿಗೆ ಪ್ರೇರಕವಾಗಬಲ್ಲುದು. ಆಕಾಶದಲ್ಲಿ ಮೂಡುವ ಒಂದು ನಕ್ಷತ್ರ ಸಮುದ್ರದಲ್ಲಿನ ಒಂದು ಹಡಗಿಗೆ ದಾರಿದೀಪವಾಗಬಹುದು. ಮಾರ್ಗದರ್ಶಕವಾಗಬಹುದು. ಒಂದು ಸಂಕಲ್ಪ ಒಂದು ಮಹತ್ವಾಕಾಂಕ್ಷೆಯ ಈಡೇರಿಕೆಗೆ ಪ್ರೇರಣೆಯಾಗಬಹುದು.
ಒಂದು ಮತ ಒಂದು ದೇಶದ ಗತಿಯನ್ನು ಬದಲಿಸಬಹುದು. ಒಂದು ಸಣ್ಣ ಸೂರ್ಯರಶ್ಮಿ ಇಡೀ ಕೋಣೆಗೆ ಬೆಳಕನ್ನು ನೀಡಬಲ್ಲುದು. ಒಂದು ಮೇಣದ ಬತ್ತಿ ಕತ್ತಲೆಯನ್ನು ಹೊಡೆದೋಡಿಸಬಹುದು. ಒಂದು ಒಳ್ಳೆಯ ಮಾತು ಕೋಟ್ಯಂತರ ಜನರಿಗೆ ಸ್ಫೂರ್ತಿಯಾಗಬಹುದು.
ಒಂದು ಹೆಜ್ಜೆ ಸುದೀರ್ಘ ಪ್ರಯಾಣಕ್ಕೆ ನಾಂದಿಯಾಗಬಹುದು. ಒಂದು ಪದವಿದೆಯಲ್ಲ ಅದು ಪ್ರಾರ್ಥನೆ, ಮಹಾ ಕಾವ್ಯಕ್ಕೆ ಅಡಿಗಲ್ಲಾಗಬಹುದು. ಒಂದು ಸಣ್ಣ ಭರವಸೆ ಒಂದು ಜೀವಕ್ಕೆ ಆಸರೆಯಾಗಬಹುದು. ಜೀವಿಸುವ ಆಸೆಗೆ ತಂಪನ್ನೆರೆಯಬಹುದು. ಒಂದು ಸ್ಪರ್ಶ, ತಬ್ಬುಗೆ, ಅಪ್ಪುಗೆ ಅವರ್ಣನೀಯ ಆನಂದಕ್ಕೆ ಕಾರಣವಾಗಬಹುದು.
ಒಂದು ರುಪಾಯಿ, ತೊಂಬತ್ತೊಂಬತ್ತನ್ನು ನೂರು ರುಪಾಯಿಯಾಗಿ ಮಾಡಬಹುದು. ಒಂದು ಪ್ರತಿಜ್ಞೆ ದೇಶದ ಭವಿಷ್ಯವನ್ನು ಬದಲಿಸಬಹುದು. ಒಂದೇ ಒಂದು ಪ್ರಮಾದ ನಿಮ್ಮ ಚಾರಿತ್ರ್ಯ ಹರಣಕ್ಕೆ ಕಾರಣವಾಗಬಹುದು. ಅದೇ ನಿಮ್ಮ ಅಂತ್ಯವೂ ಆಗಬಹುದು.
ಒಂದು ಪುಟ್ಟ ಐಡಿಯಾ ಇಡೀ ಜಗತ್ತಿನ ಸ್ವರೂಪವನ್ನೇ ಪರಿವರ್ತಿಸಬಹುದು! ಹೀಗಿರುವಾಗ ನೀವು ಒಬ್ಬರೇ ಏನೆಲ್ಲ ಮಾಡಬಹುದು ತಾನೆ? ಇನ್ನೊಮ್ಮೆ ‘ನನ್ನೊಬ್ಬನಿಂದ ಏನಾದೀತು?’ ಎಂದು ಹೇಳಬೇಡಿ.
……………………
ಅತಿಥಿ ಸತ್ಕಾರ
ಮೊನ್ನೆಯ ಗುರುವಾರದ ‘ನೂರೆಂಟು ನೋಟ’ ಅಂಕಣದಲ್ಲಿ ‘ಚಿಕನ್ ಸೂಪ್ ಫಾರ್ ದಿ ಸೋಲ್್’ ಪುಸ್ತಕದ ಜಾಕ್ ಕೇನ್್ಫೀಲ್ಡ್ ಕುರಿತು ಸಂಕ್ಷಿಪ್ತವಾಗಿ ಪ್ರಸ್ತಾಪಿಸಿದ್ದೆ. ಇದನ್ನು ಓದಿದ ಪತ್ರಿಕೆಯ ಓದುಗರಲ್ಲೊಬ್ಬರಾದ ವೀಣಾ ಅನಂತ ಅವರು, ‘ಕನ್ನಡದಲ್ಲೂ ಇದೇ ಮಾದರಿಯ ಪುಸ್ತಕವನ್ನು ನೀವ್ಯಾಕೆ ಬರೆಯಬಾರದು? ಅದಕ್ಕೆ ಪಾಲಕ್ ಸೂಪ್ ಫಾರ್ ದಿ ಸೋಲ್್’ ಅಂತ ಹೆಸರಿಡಬಹುದು ಅಥವಾ ಮುದ್ದೆಸಾರ್ ಫಾರ್ ದಿ ಸೋಲ್ ಅಂತಾನೂ ಕರೆಯಬಹುದು. ನಿಜಕ್ಕೂ ಉತ್ತಮ ಸಲಹೆಯೇ. ಪರಿಗಣಿಸಬಹುದು.
‘ಚಿಕನ್ ಸೂಪ್ ಫಾರ್ ದಿ ಸೋಲ್್’ ಕೃತಿಯ ಬಗ್ಗೆ ಅನೇಕ ಮಂದಿ ಓದುಗರು ಕುತೂಹಲದಿಂದ ಪ್ರಶ್ನಸಿದ್ದಾರೆ. ಅದ್ಯಾವ ರೀತಿಯ ಪುಸ್ತಕ ಎಂದು ಕೇಳಿದ್ದಾರೆ. ನನ್ನ ಸಂಗ್ರಹದಲ್ಲಿರುವ ‘ಚಿಕನ್ ಸೂಪ್…’ ಪುಸ್ತಕವೊಂದು ಅತಿಥಿ ಸತ್ಕಾರಕ್ಕೆ ಸಂಬಂಧಿಸಿದುದಾಗಿದೆ. ಆ ವಿಷಯಕ್ಕೆ ಸಂಬಂಧಪಟ್ಟಂತೆ ಐವತ್ತಕ್ಕೂ ಹೆಚ್ಚು ನಿದರ್ಶನ, ಕತೆ, ಅನುಭವ, ದೃಷ್ಟಾಂತ, ನೈಜ ಘಟನೆಗಳಿವೆ. ಆ ಪೈಕಿ ಒಂದು ಘಟನೆ ಹೇಳುತ್ತೇನೆ. ಪುಸ್ತಕದ ಬಗ್ಗೆ ಒಂದಷ್ಟು ಐಡಿಯಾ ಬರಬಹುದು.
ಅದೊಂದು ರಾತ್ರಿ ಅಮೆರಿಕದ ಫಿಲಿಡೆಲ್ಫಿಯಾ ನಗರದಲ್ಲಿ ನಡೆದ ಪುಟ್ಟ ಘಟನೆಯಿದು. ಸುಮಾರು ಅರವತ್ತೈದು – ಎಪ್ಪತ್ತು ವರ್ಷದ ವೃದ್ಧ ತನ್ನ ಹೆಂಡತಿಯೊಂದಿಗೆ ಹೋಟೆಲ್್ಗೆ ಬಂದ. ‘ನಾನು ಈ ರಾತ್ರಿ ಈ ಹೋಟೆಲ್್ನಲ್ಲಿ ತಂಗಬೇಕೆಂದಿದ್ದೇನೆ, ರೂಮ್ ಇದೆಯಾ?’ ಎಂದು ಕೇಳಿದ, ರಿಸೆಪ್ಶೆನ್್ನಲ್ಲಿ ಇದ್ದವ ‘ ಇಲ್ಲ, ಎಲ್ಲ ರೂಮುಗಳು ಭರ್ತಿಯಾಗಿವೆ. ನಗರದಲ್ಲಿ ಮೂರು ಸಮಾವೇಶಗಳು ನಡೆಯುತ್ತಿವೆ. ಯಾವ ಹೋಟೆಲ್್ಗಳಲ್ಲೂ ರೂಮುಗಳಿರುವ ಸಾಧ್ಯತೆಯಿಲ್ಲ’ ಎಂದ.
ಅಷ್ಟೊತ್ತಿಗೆ ಮಧ್ಯರಾತ್ರಿ ಹನ್ನೆರಡೂವರೆ. ಆ ವೃದ್ಧ ದಂಪತಿಗಳಿಗೆ ಏನು ಮಾಡಬೇಕೆಂದೇ ತಿಳಿಯಲಿಲ್ಲ. ಅಲ್ಲಿಗೆ ಬರುವ ಮುನ್ನ ಏಳೆಂಟು ಹೋಟೆಲ್್ಗಳಿಗೆ ಹೋಗಿ ಬಂದಿದ್ದರು. ಕೊನೆ ಪ್ರಯತ್ನವಾಗಿ ಆ ಹೋಟೆಲ್್ಗೆ ಬಂದಿದ್ದರು.
ಬೇರೆ ದಾರಿ ಕಾಣದೇ ಆ ದಂಪತಿಗಳು ಆ ಹೋಟೆಲ್್ನಿಂದ ಖಿನ್ನಮನಸ್ಕರಾಗಿ ಹೊರಡುವ ಮುನ್ನ, ರಿಸೆಪ್್ಶನ್್ನಲ್ಲಿ ಇದ್ದವ, ‘ಸಾರ್, ನೀವು ತಪ್ಪು ಭಾವಿಸುವುದಿಲ್ಲ ಅಂದ್ರೆ ಒಂದು ಮಾತನ್ನು ಹೇಳ್ತೇನೆ. ಈ ನಡುರಾತ್ರಿ ನೀವು ಎಲ್ಲಿಗೆ ಹೋಗ್ತೀರಾ? ದಯವಿಟ್ಟು ಹೋಟೆಲ್ ಬೇಸ್್ಮೆಂಟ್್ನಲ್ಲಿ ನನ್ನ ಪುಟ್ಟ ರೂಮಿದೆ, ಅಲ್ಲಿ ನೀವಿಬ್ಬರೂ ಮಲಗಬಹುದು.’
ಆದರೆ ಬೇರೆ ದಾರಿಯಿರಲಿಲ್ಲ. ಆ ದಂಪತಿಗಳು ಆತನ ಕೋಣೆಯಲ್ಲೇ ಮಲಗಿದರು.
ಮರುದಿನ ಆ ಹೋಟೆಲಿನಿಂದ ಹೊರಡುವ ಮುನ್ನ, ಆ ವೃದ್ಧ ಹೇಳಿದ-’ನನ್ನ ಜೀವನದಲ್ಲಿ ನಾನು ಅವೆಷ್ಟೋ ಹೋಟೆಲ್್ಗಳಿಗೆ ಹೋಗಿದ್ದೇನೆ. ಆದರೆ ಯಾರೂ ನಿನ್ನ ಹಾಗೆ ಅತಿಥಿ ಸತ್ಕಾರ ಮಾಡಿದ್ದನ್ನು ನೋಡಿಲ್ಲ. ನನ್ನ ಹೋಟೆಲ್್ಗೆ ನಿನ್ನಂಥ ಮ್ಯಾನೇಜರನೇ ಬೇಕು. ನೋಡೋಣ ಮುಂದೊಂದು ದಿನ ನಾನೇನಾದರೂ ಪಂಚತಾರಾ ಹೋಟೆಲ್್ನ್ನು ಕಟ್ಟಿದರೆ, ನಿನ್ನನ್ನೇ ಮ್ಯಾನೇಜರನ್ನಾಗಿ ನೇಮಿಸುತ್ತೇನೆ’.
ರಿಸೆಪ್್ಶನ್್ನಲ್ಲಿದ್ದ ವ್ಯಕ್ತಿ ವೃದ್ಧ ದಂಪತಿಗಳನ್ನು ಪಾದದಿಂದ ನೆತ್ತಿಯವರೆಗೊಮ್ಮೆ ನೋಡಿ ಸುಮ್ಮನೆ ನಕ್ಕ.
ಈ ಘಟನೆ ನಡೆದು ಎರಡು-ಮೂರು ವರ್ಷಗಳಾಗಿರಬಹುದು. ರಿಸೆಪ್್ಶನ್್ನಲ್ಲಿದ್ದ ವ್ಯಕ್ತಿ ಇದನ್ನು ಸಂಪೂರ್ಣವಾಗಿ ಮರೆತುಬಿಟ್ಟಿದ್ದ.
ಒಂದು ದಿನ ಅವನಿಗೊಂದು ಪತ್ರ ಬಂತು. ಅದು ಆ ವೃದ್ಧ ಬರೆದುದಾಗಿತ್ತು. ಆ ನಡುರಾತ್ರಿ ನಡೆದ ಘಟನೆಯನ್ನು ಪ್ರಸ್ತಾಪಿಸಿದ್ದ. ಜತೆಯಲ್ಲಿ ನ್ಯೂಯಾರ್ಕ್್ಗೆ ವಿಮಾನ ಟಿಕೆಟನ್ನು ಇರಿಸಿದ್ದ. ನ್ಯೂಯಾರ್ಕ್್ಗೊಮ್ಮೆ ಬರುವಂತೆ ವಿನಂತಿಸಿಕೊಂಡಿದ್ದ.
ವೃದ್ಧನ ಕೋರಿಕೆಯಂತೆ ಈತ ನ್ಯೂಯಾರ್ಕ್್ಗೆ ಹೋದ. ಅಲ್ಲಿನ 34ನೇ ಸ್ಟ್ರೀಟ್್ನಲ್ಲಿರುವ ಫಿಫ್ತ್ ಅವೆನ್ಯೂವ್್ದ ಒಂದು ಮೂಲೆಯಲ್ಲಿ ವಿಸ್ತರಿಸಿಕೊಂಡ ಹೊಸ, ಭವ್ಯ ಪಂಚತಾರಾ ಹೋಟೆಲ್್ನತ್ತ ಕರೆದುಕೊಂಡು ಹೋದ.
‘ಇದು ನಾನು ಕಟ್ಟಿಸಿರುವ ಹೋಟೆಲ್. ಈ ಹೋಟೆಲ್್ನ ಮ್ಯಾನೇಜರ್ ನೀನೇ ಆಗಬೇಕೆಂಬ ಕಾರಣಕ್ಕೆ ಇದನ್ನು ನಿರ್ಮಿಸಿದ್ದೇನೆ’ ಎಂದ ಆ ವೃದ್ಧ.
ಈತನಿಗೆ ನಂಬಲು ಸಾಧ್ಯವಾಗಲೇ ಇಲ್ಲ. ಅದು ನಿಜ ಎಂದು ಅರಿವಾಗುವ ಹೊತ್ತಿಗೆ ಬಹಳ ಸಮಯ ಹಿಡಿದಿತ್ತು. ಆ ಹೋಟಲ್್ನ್ನು ನಿರ್ಮಿಸಿದ ಆ ವೃದ್ಧನ ಹೆಸರು ವಿಲಿಯಮ್ ವಾಲ್ಡಾರ್ಫ್ ಎಸ್ಟೋರ್. ಹೋಟೆಲ್್ನ ಹೆಸರು ವಾಲ್ಡಾರ್ಫ್ ಎಸ್ಟೋರಿಯಾ ಹಾಗೂ ಆ ಹೋಟೆಲ್್ನ ಮ್ಯಾನೇಜರ್್ನ ಹೆಸರು ಜಾರ್ಜ್ ಸಿ. ಬೋಲ್ಡ್.
ನಮ್ಮ ನಡತೆ, ಹಾವಭಾವ, ಮಾತುಗಳನ್ನು ಒಬ್ಬರಲ್ಲ ಒಬ್ಬರು ಗಮನಿಸುತ್ತಲೇ ಇರುತ್ತಾರೆ ಅನ್ನುವುದಕ್ಕೆ ಇದೇ ನಿದರ್ಶನ.
…………………….
ನಿಮ್ಮ ಕುರಿತ ಹತ್ತು ನಿಜ ಸಂಗತಿಗಳು
1 ನೀವೀಗ ಇದನ್ನು ಓದುತ್ತಿದ್ದೀರಿ.
2 ಇದೊಳ್ಳೆ ಕಥೆ ಆಯ್ತಲ್ಲ. ನಮಗೇನು ಗೊತ್ತಿಲ್ಲದ ಸತ್ಯವಾ ಇದು ಎಂದುಕೊಂಡಿದ್ದೀರಿ.
4 ನಾನು ಮೂರನೇ ಪಾಯಿಂಟ್ ಹಾಗೆಯೇ ಬಿಟ್ಟಿದ್ದು ನಿಮಗೆ ಗೊತ್ತೇ ಆಗಲಿಲ್ಲ.
5 ಈಗ ನೀವು ಆ ಬಗ್ಗೆ ಗಮನಹರಿಸುತ್ತಿದ್ದೀರಿ.
6 ಅದೋ…ನೀವು ನಕ್ಕಿದ್ದೀರಿ..
7 ಇದೇನೋ ಬರಿ ಮಷ್ಕಿರಿ ಎಂದು ಗೊತ್ತಿದ್ದೂ ನೀವು ಓದುವುದನ್ನು ಮುಂದುವರಿಸಿದ್ದೀರಿ.
9 ನಾನು ಎಂಟನೇ ಪಾಯಿಂಟ್ ಬಿಟ್ಟಿದ್ದು ನಿಮಗೆ ಗೊತ್ತೇ ಆಗಲಿಲ್ಲ.
10 ಈಗ ನೀವು ಅದನ್ನು ಚೆಕ್ ಮಾಡಿ, ಅರೆ ಮತ್ತೆ ಹೇಗೆ ಪಿಗ್ಗಿ ಬಿದ್ದುಬಿಟ್ಟೆ ಅಂತ ಪೆದ್ದಾಗಿ ನಗುತ್ತಿದ್ದೀರಿ.
11 ನಿಮಗೆ ಇದೊಂಥರ ಮಜಾ ಎನಿಸಿ, ಎಂಜಾಯ್ ಮಾಡ್ತಿದೀರಿ.
12 ಈ ಪಟ್ಟಿಯಲ್ಲಿ ಹತ್ತನ್ನು ದಾಟಿ ಹನ್ನೆರಡರವರೆಗೆ ಬಂದಿರುವುದು ನಿಮಗೆ ಗೊತ್ತೇ ಆಗಲಿಲ್ಲ!
-ವಿಶ್ವೇಶ್ವರ ಭಟ್
ನಾನೊಬ್ಬನೇ ಏನು ಮಾಡಲು ಸಾಧ್ಯ ಎಂಬುದಕ್ಕೆ ಉತ್ತಮ ಉದಾಹರಣೆ ಸಮಾಜ ಪರಿವರ್ತನೆಯ ಹಿರೇಮಟ ಅವರು
ಒಬ್ಬನೇ ಏನನ್ನು ಮಾಡಬಹುದು ? 1 .ಒಬ್ಬ ಬ್ರ್ಹಷ್ಟ ಮುಖ್ಯ ಮಂತ್ರಿಯನ್ನು ಗಾದಿಯಿಂದ ಇಳಿಸಬಹುದು 2 .ಲಕ್ಶಾಂಥರ ಕೋಟಿ ಆಸ್ತಿ ಹೊಂದಿರುವ ಇನ್ನೊಬ್ಬ ಕಳ್ಳ ಮಂತ್ರಿಯನ್ನು ಜೈಲಿಗೆ ಕಳಿಸಬಹುದು .3 .ನೈಸರ್ಗಿಕ ಸಂಪತ್ತಿನ ಲೂಟಿಯನ್ನು ತಡೆದು ಮುಂದಿನ ಪೀಳಿಗೆಗೂ ಉಳಿಯುವಂತೆ ಮಾಡಬಹುದು.4 .ಎಲ್ಲಕ್ಕಿಂತ ಮುಖ್ಯ ವಾಗಿ ನಾನೊಬ್ಬನೇ ಏನು ಮಾಡಲು ಸಾಧ್ಯ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಚಿಂತನೆಗೆ ನಮ್ಮನ್ನು ಹಚ್ಚಬಹುದು .
“ನಾನೊಬ್ಬನೇ ಏನು ತಾನೆ ಮಾಡಲು ಸಾಧ್ಯ?”—ಈ ಲೇಖನ ತುಂಬಾನೇ ಚೆನ್ನಾಗಿದೆ ಸಾರ್.
ennondu last point neevu hele ella.
13:bhatru ge mande sari ella:P
hahahahahhaa nice bhatre.
ಚೆನ್ನಾಗಿದೆ ಸರ್,
- vishwanath gudsi
Mob:9036822415
Worth reading
Power of one – ಲೇಖನಕ್ಕೆ ಧನ್ಯವಾದ. ಈ ಒಂದು ಕಾನ್ಸೆಪ್ಟ್ ಅನ್ನು ಎಲ್ಲರೂ ತಮ್ಮ ತಮ್ಮ ಜೀವನದಲ್ಲಿ ಅರಿತು ಅಳವಡಿಸಿಕೊಳ್ಳಬೇಕು.
one man can change the world , one minute can change life………. sanjay gowda
one man can change the world , one minute can change life………. sanjay gowda
Shri. Bhat sir, thank you for naration and message. so attractive-ananth
humanity can win all and do wonders.