ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಮೋದಿ ಜತೆ ಫೋಟೋ ತೆಗೆಸಿಕೊಳ್ಳೋದು ತಪ್ಪಾ?

ನನ್ನ ಓದುಗರ ಪ್ರೀತಿ ಬಹಳ ದೊಡ್ಡದು! ಅದೇ ನನಗೆ ಶ್ರೀರಕ್ಷೆ!

ಇಲ್ಲದಿದ್ದರೆ ವಿಧಿ ಆಟ ಹೇಗಿರುತ್ತಿತ್ತೋ ಎಂಬುದನ್ನು ಊಹಿಸುವುದೂ ಕಷ್ಟ. ಉಗ್ರರ ಸಂಚನ್ನು ಬೆಂಗಳೂರು ಪೊಲೀಸರು ವಿಫಲಗೊಳಿಸಿದ್ದಾರೆ. ಲಷ್ಕರೆ ತೊಯ್ಬಾ ಸಂಘಟನೆ ಸಂಘಟನೆಯ ಉಗ್ರರು ಉದ್ಯಮಿ ವಿಜಯಸಂಕೇಶ್ವರ, ಸಂಸದ ಪ್ರಹ್ಲಾದ ಜೋಶಿ, ಸಹೋದ್ಯೋಗಿ ಮಿತ್ರ ಪ್ರತಾಪಸಿಂಹ ಹಾಗೂ ನನ್ನನ್ನು ಹತ್ಯೆ ಮಾಡಲು ಯೋಜಿಸಿದ್ದರಂತೆ. ಅವರಿಗೆ ಅಂಥ ದುರ್ಬುದ್ಧಿ ಯಾಕೆ ಬಂತೋ ಎಂಬುದು ನನಗೆ ಇಲ್ಲಿತನಕ ಅರ್ಥವಾಗುತ್ತಿಲ್ಲ. ಅಂಥ ‘ಘನಂದಾರಿ’ ಯಾವ ಕೆಲಸವನ್ನೂ ನಾವು ಮಾಡಿದ್ದೆವು? ಉಹುಂ… ಗೊತ್ತಾಗುತ್ತಿಲ್ಲ.

‘ಸಾರ್, ನಿಮಗೆ ಹಾಗೂ ನರೇಂದ್ರ ಮೋದಿಯವರಿಗೆ ಕನೆಕ್ಷನ್ ಇದೆಯಂತೆ. ಪ್ರತಾಪಸಿಂಹ ಮೋದಿ ಬಗ್ಗೆ ಪುಸ್ತಕ ಬರೆದಿದ್ದಾರಂತೆ. ಅವರಿಗೂ ಮೋದಿ ಜತೆ ನಂಟಿದೆಯಂತೆ. ನೀವಿಬ್ಬರೂ ಆಗಾಗ ಮೋದಿಯವರನ್ನು ಭೇಟಿ ಮಾಡುತ್ತೀರಂತೆ. ಮೋದಿಯವರನ್ನು ಹೊಗಳಿ ಲೇಖನ ಬರೆಯುತ್ತೀರಂತೆ. ಅದಕ್ಕಾಗಿಯೇ ನಿಮ್ಮನ್ನು ಟಾರ್ಗೆಟ್ ಮಾಡಿದ್ದಾರಂತೆ. ಈ ಕುರಿತು ನಿಮ್ಮನ್ನು ಇಂಟರ್್ವ್ಯೂ ಮಾಡಬೇಕಿದೆ’ ಎಂದರು ಟಿವಿ ಚಾನೆಲ್್ನ ವರದಿಗಾರರು.
ಭಲೇ ತಮಾಷೆ ಎಂದೆನಿಸಿತು. ನಗಬೇಕೋ, ತಲೆ ಚಚ್ಚಿಕೊಳ್ಳಬೇಕೋ ತಿಳಿಯಲಿಲ್ಲ. ನಾನಾಗಲಿ, ಪ್ರತಾಪ್ ಆಗಲಿ ನರೇಂದ್ರ ಮೋದಿಯವರನ್ನು ಮೂರ್ನಾಲ್ಕು ಸಲ ಭೇಟಿ ಮಾಡಿದ್ದು ನಿಜ. ಪ್ರತಾಪ್ ಮೋದಿ ಕುರಿತು ಪುಸ್ತಕ ಬರೆದಿದ್ದೂ ನಿಜ. ಮೋದಿಯವರು ಕಳೆದ ಏಳೆಂಟು ವರ್ಷಗಳಲ್ಲಿ ಗುಜರಾತ್್ನಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಲೇಖನ ಬರೆದಿದ್ದು, ಅವನ್ನು ಪ್ರಿಂಟ್ ಮಾಡಿದ್ದು ನಿಜ. ಅಷ್ಟು ಮಾತ್ರಕ್ಕೆ ಟಾರ್ಗೆಟ್ ಮಾಡುವುದಾದರೂ ಯಾಕೆ? ಮೋದಿಯವರೇನು ದಾವೂದ್ ಇಬ್ರಾಹಿಂನಾ? ಮೋದಿಯವರೇನು ದೇಶದ್ರೋಹಿಯಾ? ಮೋದಿ ಬೆಂಗಳೂರಿಗೆ ಬರಲಿ, ದಿಲ್ಲಿಗೆ ಹೋಗಲಿ ನೂರಾರು ಪತ್ರಕರ್ತರು ಅವರನ್ನು ಭೇಟಿ ಮಾಡುತ್ತಾರೆ. ಅದರಲ್ಲಿ ತಪ್ಪೇನಿದೆ? ಮೋದಿಯವರ ಬಗ್ಗೆ ನೂರಾರು ಮಂದಿ ಹೊಗಳಿ ಬರೆದಿದ್ದಾರೆ. ಸ್ವತಃ ಖ್ಯಾತ ನಟ ಅಮಿತಾಭ್ ಬಚ್ಚನ್ ಮೋದಿ ನೇತೃತ್ವದ ಗುಜರಾತ್ ಸರ್ಕಾರಕ್ಕೆ ‘ಬ್ರ್ಯಾಂಡ್ ಅಂಬಾಸಿಡರ್್’ ಆಗಿದ್ದಾರೆ. ರತನ್್ಟಾಟಾ, ಮುಕೇಶ್ ಅಂಬಾನಿ, ಲಕ್ಷ್ಮಿ ಮಿತ್ತಲ್್ರಂಥ ಉದ್ಯಮಿಗಳು ಮೋದಿಯವರನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. ‘ಅತ್ಯಂತ ಉತ್ತಮ ಆಡಳಿತವಿರುವ ರಾಜ್ಯಸರ್ಕಾರ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಎಲ್ಲ ಸಮೀಕ್ಷೆಗಳೂ ‘ಭವಿಷ್ಯದ ಪ್ರಧಾನಿ’ ಎಂದು ಹೇಳಿವೆ. ರಾಹುಲ್್ಗಾಂಧಿ ಜತೆಗಿನ ಪೈಪೋಟಿಯಲ್ಲಿ ಹೆಚ್ಚಿನ ಅಂಕಗಳನ್ನು ನೀಡಿವೆ. ‘ಟೈಮ್್’ ಮ್ಯಾಗಜಿನ್್ನಂಥ ಪ್ರತಿಷ್ಠಿತ ಅಂತಾರಾಷ್ಟ್ರೀಯ ವಾರಪತ್ರಿಕೆ ಮೋದಿಯವರನ್ನು ಕುರಿತು ಮುಖಪುಟ ಲೇಖನ ಬರೆದಿದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅದರಲ್ಲಿ ತಪ್ಪೇನು ಬಂತು?

ಹಾಗಂತ ಟಿ.ವಿ. ವರದಿಗಾರರಿಗೆ ಹೇಳಿದೆ. ‘ಅದ್ಸರಿ, ನೀವು ಹಾಗೂ ಪ್ರತಾಪ್, ಮೋದಿ ಜತೆ ತೆಗೆಸಿಕೊಂಡ ಫೋಟೋಗಳು ಶಂಕಿತ ಉಗ್ರರ ಕಂಪ್ಯೂಟರ್ ಮತ್ತು ಲ್ಯಾಪ್್ಟ್ಯಾಪ್್ಗಳಲ್ಲಿ ಸಿಕ್ಕಿವೆಯಂತಲ್ಲ? ಮೋದಿಯವರನ್ನು ಪ್ರತಾಪ್ ಸಂದರ್ಶಿಸುತ್ತಿರುವ ಫೋಟೋಗಳು ಇವೆಯಂತಲ್ಲ?’ ಎಂದು ರಾಗ ಎಳೆದರು. ‘ಹೌದು, ಏನಾಯ್ತು ಈಗ? ಮೋದಿಯವರ ಜತೆ ಫೋಟೋ ತೆಗೆಸಿಕೊಂಡರೆ ಏನಾಯ್ತು? ಅಲ್ರೀ, ಅವರೇನು ದೇಶದ್ರೋಹಿಯಾ? ಭಯೋತ್ಪಾದಕರಾ? ಸ್ಮಗ್ಲರ್ರಾ? ಯಾರು? ಅವರು ಈ ದೇಶದ ಅತ್ಯಂತ ಜನಪ್ರಿಯ ಮುಖ್ಯಮಂತ್ರಿ ತಾನೆ? ಅವರ ಜತೆ ಫೋಟೋ ತೆಗೆಸಿಕೊಳ್ಳುವುದು ತಪ್ಪಾ?’ ಎಂದು ಕೇಳಿದೆ.
 
‘ಅವರನ್ನು ಬಿಡಿ ಒಂದು ವೇಳೆ ನೀವು, ಬೇರೆ ಮುಖ್ಯಮಂತ್ರಿಯವರನ್ನು ಭೇಟಿಯಾದಾಗ ಫೋಟೋ ತೆಗೆಸಿಕೊಳ್ಳುವುದಿಲ್ಲವಾ? ಅದರಲ್ಲಿ ತಪ್ಪೇನು ಬಂತು? ಪಾತಕಲೋಕದ ರೌಡಿಗಳ ಜತೆ, ವಿದೇಶಿ ವೇಶ್ಯೆಯರ ಜತೆ ಫೋಟೊ ತೆಗೆಸಿಕೊಂಡು ತಮ್ಮ ಪತ್ರಿಕೆಗಳಲ್ಲಿ ಅಚ್ಚು ಹಾಕಿಸಿಕೊಳ್ಳುವ ಪತ್ರಕರ್ತರಿದ್ದಾರೆ. ಅದಕ್ಕಿಂತ ಇದು ಸಾವಿರ ಪಾಲು ಮೇಲು. ಮೋದಿಯವರ ಜತೆಗಿನ ಆ ಫೋಟೋ ನನ್ನ  ಕ್ಠ್ಝಿಣಜಜ ್ಛ್ಟಟಟಜ್ಛಡ್ಝ್ಟಿಟಿ ಗಳಲ್ಲೊಂದು’ ಎಂದೆ. ಆ ಟಿವಿ ವರದಿಗಾರನಿಗೆ ಏನನಿಸಿತೋ ಏನೋ? ಮರು ಮಾತಾಡಲಿಲ್ಲ.’

‘ಅಲ್ಲಯ್ಯ, ಮೊನ್ನೆ ನಮ್ಮ ಆಫೀಸಿಗೆ ಚಿತ್ರದುರ್ಗದ ಕೋಟೆಯನ್ನು ಬರಿಗೈಲಿ ಹತ್ತುವ ‘ಕೋತಿರಾಮ’ ಎಂದೇ ಜನಪ್ರಿಯನಾದ ಜ್ಯೋತಿರಾಜ್ ಬಂದಿದ್ದ. ನಾನು ಅವನ ಜತೆಗೆ ನಿಂತೂ ಫೋಟೊ ತೆಗೆಸಿಕೊಂಡಿದ್ದೆ. ಹೀಗಿರುವಾಗ ಮೋದಿ ಜತೆ ಫೋಟೋ ತೆಗೆಸಿಕೊಳ್ಳದೇ ಇರ್ತೇನಾ? ಅದರಲ್ಲಿ ಅಂಥ ವಿಶೇಷವೇನಿದೆ?’ ಎಂದೆ. ಆತ ಏನೂ ಹೇಳಲಿಲ್ಲ. ‘ಈ ಕಾರಣದಿಂದ ಇಂಟರ್್ವ್ಯೂ ಬೇಡ’ ಎಂದೆ. ಆತ ಒತ್ತಾಯ ಮಾಡಲಿಲ್ಲ.

ಶಂಕಿತ ಉಗ್ರರ ಸಂಚನ್ನು ವಿಫಲಗೊಳಿಸುವ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಪೊಲೀಸ್ ಅಧಿಕಾರಿಯೊಬ್ಬರು ಸಹ ಹೇಳಿದರು-’ನಿಮಗೆ ಮತ್ತು ಪ್ರತಾಪ್್ಗೆ ನರೇಂದ್ರಮೋದಿ ಜತೆಗೆ ಸಂಪರ್ಕವಿದೆಯೆಂಬುದೇ ನಿಮ್ಮಿಬ್ಬರನ್ನು ಟಾರ್ಗೆಟ್ ಮಾಡಲು ಕಾರಣವಿದ್ದಂತಿದೆ. ಹಾಗಂತ ಶಂಕಿತ ಉಗ್ರಗಾಮಿಗಳಲ್ಲೊಬ್ಬ ಹೇಳಿದ್ದಾನೆ.’
ಆ ಕ್ಷಣಕ್ಕೆ ಉಗ್ರಗಾಮಿಗಳೂ ಇಷ್ಟೊಂದು ಪೆದ್ದರಿರುತ್ತಾರಾ ಎಂದೆನಿಸಿತು.ಈ ವಿಷಯವನ್ನು ಪ್ರತಾಪ್್ಗೆ ಹೇಳಿದೆ. ಆತ ಹೊಟ್ಟೆ ಹಿಡಿದುಕೊಂಡು ಜೋರಾಗಿ ನಗಲಾರಂಭಿಸಿದ. ‘ಏನ್ಸಾರ್, ಸುವರ್ಣ ಟಿವಿ ಹಾಗೂ ಕನ್ನಡಪ್ರಭಕ್ಕಾಗಿ ನರೇಂದ್ರ ಮೋದಿಯವರನ್ನು ಸಂದರ್ಶಿಸಬೇಕೆಂದು ಒಂದು ವರ್ಷದಿಂದ ನೀವು ಹರಸಾಹಸ ಮಾಡ್ತಾ ಇದೀರಿ. ಅವರ ಟೈಮ್ ಸಿಕ್ಕಿಲ್ಲ. ಹೀಗಿರುವಾಗ ಇವರು ಈ ರೀತಿ ಯೋಚನೆ ಮಾಡ್ತಾ ಇದ್ದಾರಲ್ಲಾ?’ ಎಂದು ಪ್ರತಾಪ್ ಹೇಳಿದ. ಆಗ ನಗುವ ಸರದಿ ನನ್ನದಾಗಿತ್ತು. ‘ಈ ವಿಷಯ ಮೋದಿಯವರಿಗೆ ಗೊತ್ತಾದರೆ ಅವರು ಹೇಗೆ ಪ್ರತಿಕ್ರಿಯಿಸಬಹುದು?’ ಎಂದು ಕೇಳಿದ. ‘ಹುಚ್ಚ ಪ್ಯಾಲಿ’ಗಳು ಎನ್ನಬಹುದು ಎಂದೆ. ಇಬ್ಬರೂ ನಗತೊಡಗಿದೆವು.

‘ಪ್ರತಾಪ್, ಒಂದು ಕೆಲಸ ಮಾಡು. ನಿನ್ನ ಕಂಪ್ಯೂಟರ್್ನಲ್ಲಿರುವ ಫೋಟೋ ಇದೆಯಲ್ಲ, ಮೋದಿಯವರ ಜತೆ ನಾನು-ನೀನು ಇರುವ ಫೋಟೋವನ್ನು ಡೆವಲಪ್ ಮಾಡಿಸಿ, ಲ್ಯಾಮಿನೇಷನ್ ಮಾಡಿಸಿ ಕೊಡು ಅರ್ಜೆಂಟಾಗಿ. ನನ್ನ ಟೇಬಲ್ ಮೇಲೆ ಇಟ್ಟುಕೊಳ್ಳುತ್ತೇನೆ’ ಎಂದೆ. ‘ಒಂದಲ್ಲ ಸಾರ್, ಎರಡು ಕಾಪಿ ಮಾಡಿಸ್ತೇನೆ. ನಾನೂ ಇಟ್ಟುಕೊಳ್ತೇನೆ’ ಎಂದ ಪ್ರತಾಪ್.

>>>>>>>>>>>
ಪೆನ್, ಗನ್ ಹಾಗೂ ಮೆನ್

ಈ ಪರಿ ಫೋನ್, ಎಸ್ಸೆಮ್ಮೆಸ್, ಇ-ಮೇಲ್ ಹಿಂದೆಂದೂ ಬಂದಿರಲಿಲ್ಲ.

ಎಲ್ಲಡೆಯಿಂದ ಓದುಗರು, ಸ್ನೇಹಿತರು , ಅಪರಿಚಿತರು ಆರೋಗ್ಯ ವಿಚಾರಿಸಿಕೊಳ್ಳುತ್ತಿದ್ದಾರೆ. ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ. ಮನೆಗೆ ಬಂದು ಹೂಗುಚ್ಛ ಕೊಟ್ಟು ಹೋಗುತ್ತಿದ್ದಾರೆ. ಓದುಗರ ಪ್ರೀತಿಗೆ ಮೂಕನಾಗಿದ್ದೇನೆ. ಪ್ರೀತಿಯೆಂಬುದು ಅದೆಂಥ ಮಹಾನ್ ಸಾಧನೆ ಎಂಬುದು ಪದೇ ಪದೇ ಮನವರಿಕೆಯಾಗುತ್ತಿದೆ.

ಈ ಎಲ್ಲ ಘಟನೆಗಳ ಮಧ್ಯೆ ಕೆಲವು ಝ್ಝ್ಜಡಿಜ್ಠ ಟ್ಟಟಜಟಿಡಿಡ ಹೇಳಬೇಕು. ಪರಿಚಿತರೊಬ್ಬರು ಹೂಗುಚ್ಛ ಕೊಡುತ್ತಾ,’ಸಾರ್, ದೇವರು ನಿಮ್ಮ ಜತೆ ಇದ್ದಾನೆ, ಏನೂ ಆಗೋಲ್ಲಬಿಡಿ’ ಎಂದರು. ಅವರಿಗೆ ಹೇಳಿದೆ-’ಬದುಕಿದರೆ ಹೂಗುಚ್ಛ ಕೊಡುತ್ತಾರೆ. ಇಲ್ಲದಿದ್ದರೆ ಹೂಗುಚ್ಛ ಇಡುತ್ತಾರೆ.’

ಸ್ನೇಹಿತರೊಬ್ಬರು ‘ಏನ್ಸಾರ್, ನೀವೂ ಹಿಟ್ ಲಿಸ್ಟ್್ನಲ್ಲಿ ಇದ್ದೀರಂತೆ, ಗಾಬರಿಯಾಯ್ತು’ ಅಂದರು. ನಾನು ಹೇಳಿದೆ-’ಹಿಟ್್ಲಿಸ್ಟ್್ನಲ್ಲಿ ಇರೋದು ಜಿರಳೆಗಳು ಮಾತ್ರ!’( ಜಿರಳೆಗಳನ್ನು ಸಾಯಿಸುವ ಔಷಧ-ಹಿಟ್ ಎಂಬುದು ಗೊತ್ತಿರಬಹುದು) ಆತ್ಮೀಯ ಸ್ನೇಹಿತೆಯೊಬ್ಬಳು ಕೇಳಿದಳು-’ನಿಮ್ಮ ಹೆಂಡತಿ ಬಹಳ ಗಾಬರಿಯಾಗಿರಬಹುದು ಅಲ್ವಾ? ಅವರ ಪ್ರತಿಕ್ರಿಯೆ ಹೇಗಿತ್ತು?’

‘ಇಲ್ಲ…ಇಲ್ಲ…ಅವಳೇಕೆ ಗಾಬರಿಯಾಗ್ತಾಳೆ ಹೇಳು? ಉಗ್ರಗಾಮಿಗಳಿಗೇಕೆ ಹೆದರ್ತೀರಾ, ನಾನಿಲ್ಲವಾ? ಎಂದು ಕೇಳಿದಳು’ ಎಂದೆ. ಹೆಂಡತಿಯ ಮುಂದೆ ಉಗ್ರಗಾಮಿಗಳೆಲ್ಲಾ ಅದ್ಯಾವ ಲೆಕ್ಕ ಎಂಬುದು ಇಂಗಿತವಾಗಿದ್ದಿರಬಹುದಾ? ಇದ್ದೀತು…ಇದ್ದೀತು. ದಿಲ್ಲಿಯಲ್ಲಿರುವ ‘ಔಟ್್ಲುಕ್್’ ವಾರಪತ್ರಿಕೆ ಸಂಪಾದಕ ಸ್ನೇಹಿತ ಕೃಷ್ಣಪ್ರಸಾದ್, ವಿಂಡ್ಸರ್ ಮ್ಯಾನರ್ ಹೊಟೇಲ್್ನಿಂದ ಕೇಕ್ ಕಳಿಸಿಕೊಟ್ಟಿದ್ದರು. ‘ಕಂಗ್ರಾಟ್ಸ್, ಹಿಟ್್ಲಿಸ್ಟ್್ನಲ್ಲಿದ್ದೀರಾ’ ಎಂದರು. ‘ಕೇಕ್ ತಿನ್ನಲು, ಮನೆಗೆ ಬೇಗ ಹೋಗಲು ಕಾರಣ ಸಿಕ್ತು ಬಿಡಿ’ ಎಂದು ಚಟಾಕಿ ಹಾರಿಸಿದರು.

ಆಫೀಸಿಗೆ ಇಷ್ಟು ದಿನ ಪೆನ್ ತೆಗೆದುಕೊಂಡು ಹೋಗ್ತಾ ಇದ್ದೆ. ಇನ್ಮುಂದೆ ಗನ್ ತೆಗೆದುಕೊಂಡು ಹೋಗಬೇಕಿದೆ.
ಜತೆಯಲ್ಲಿ ಗನ್್ಮೆನ್!
 
-ವಿಶ್ವೇಶ್ವರಭಟ್

9 Comments

  1. ಹಿಟ್ ಲೀಸ್ಟಿನಲ್ಲಿ ನಿಮ್ಮ ಹೆಸರು ಕೇಳಿ ಮನಸ್ಸಿಗೆ ತುಂಬಾ ಕಸಿವಿಸಿಯಾದದ್ದು ನಿಜ.

    ಮೋದಿಯವರ ಜೊತೆಗೆ ಫೋಟೋ ತೆಗೆಸಿಕೊಂಡ ಮಾತ್ರಕ್ಕೆ ಉಗ್ರರ ಹಿಟ್ ಲೀಸ್ಟಿನಲ್ಲಿ ಹೆಸರು ಬಂತು ಎಂದು ವಾದಿಸುವವರ ಬಗೆಗೆ ಮರುಕವಾಗುತ್ತದೆ. ನಾವು ದೊಡ್ಡ ಹೆಸರು ಮಾಡಿದವರ ಜೊತೆ ಫೋಟೋ ತೆಗೆಸಿಕೊಂಡ ಮಾತ್ರಕ್ಕೆ ಅವರು ನಮಗು ಬಹು ಪರಿಚಿತ ಅಥವಾ ಅವರ ಎಲ್ಲಾ ವಾದವನ್ನು ನಾವು ಒಪ್ಪುತ್ತೇವೆ ಅಂತಲೂ ಅಲ್ಲ, ಎನ್ನುವುದೂ ಪ್ರಶ್ನಿಸುವವರು ಅರ್ಥಮಾಡಿಕೊಳ್ಳಬೇಕಿತ್ತು.

    ಒಬ್ಬ ಸತ್ಯ ನಿಷ್ಟ ನೇರಾ ನೇರ ಪತ್ರಕರ್ತನಿಗೆ ಇಂತಹ ಪರೀಕ್ಷೆಗಳು ಅನಿವಾರ್ಯ. ಈ ಅಗ್ನಿ ಪರೀಕ್ಷೆಯಲ್ಲಿ ನೀವು ಗೆದ್ದು ಬಂದಿದ್ದೀರಿ. ಇನ್ನಷ್ಟು ಮೆರಗುಗೊಂಡಿದ್ದೀರಿ.

  2. sivaaaaa….mattomme huttibaaaa..anta advance agi helallaa..achyta,ananta,avyaya,avinashiyagi saakshaath vishweshwarane agu.. ananta taanantavagi agutihane nitya yogi…hahaaaaaaaaaa…

    Generally people for a cause,weather their cause is human or inhuman,are saner than the ordinary world. so the news must be bogus..
    vishweshwaranigene threatta!? tirupatigene laddunaa!!

  3. Hi Sir,

    Pathrakartharigu Ee rithiya sandharbhagalu eduragutthave endu keli thuba dukkha ayithu. Nimma pathrika rangada sadane innastu ettharakke hogali endu haraisuttene..

  4. ugrarannu hogali ndtv burka dath raigalu nodi aaramavagiddare

  5. V- FOR-VICTORY
    sir.. Ugragaami’gaLa Hit-least’nalli
    nimma hesaru ?realy shocked..
    pen- bareyoke, gun- ?
    yes, bareyo pen’ge thaakatthu
    thumbisikoLLoke..
    Take care sir !
    -Gorur naga,9480783803

  6. ರೀ ಭಟ್ರೆ..! ನೀವು ಅದೆಷ್ಟು ಭಯ ಪಟ್ಟಿದ್ದಿರಿ ಅನ್ನೊದು ನಿಮ್ಮ ಲೇಖನದಿಂದ ಗೊತ್ತಾಗ್ತಿದೆ…ಪತ್ರಕರ್ತನಾದವನು ಅಷ್ಟೊಂದು ಭಯಪಡಬಾರದು..!

  7. Alla sir nim kathe hingadre namma SOLDIERS yaavaglu targette alwa….

  8. istu dina nimma lekhana odutiddarinda ugrara listalli namma hesaru irabahuda,,,,,!!!!!!!!

  9. it’s again proved that.. katthiginth lekani hareeth..you are the two only writers who write bravely and optimistically in kannada journalism…

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.