ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಕನ್ನಡಪ್ರಭದಲ್ಲಿ ‘ನೂರೆಂಟು ಮಾತು’ ಆರಂಭ !

ನನ್ನ ಆತ್ಮೀಯ ಓದುಗರಿಗೆ ನೂರೆಂಟು ನಮಸ್ಕಾರಗಳು.

ನೀವು ಇಷ್ಟು ದಿನಗಳಿಂದ ಕೇಳುತ್ತಿದ್ದ ಪ್ರಶ್ನೆಗಳಿಗೆ ಇಂದು ಉತ್ತರ ನೀಡಿದ್ದೇನೆ. ಸ್ವಲ್ಪ ವಿಳಂಬವಾದದ್ದು ನಿಜ. ಆದರೆ ನನ್ನ ದೃಷ್ಟಿಯಲ್ಲಿ ಇದು ಶೀಘ್ರವೇ. ಮೊನ್ನೆ ಏಳಕ್ಕೆ ನಾನು ‘ಕನ್ನಡಪ್ರಭ’ ಸೇರಿ ಒಂದು ತಿಂಗಳಾಯಿತು. ಈ ಗುರುವಾರದಿಂದ ನನ್ನ ‘ನೂರೆಂಟು ಮಾತು’ ಅಂಕಣ ಪತ್ರಿಕೆಯಲ್ಲಿ ಆರಂಭವಾಗಿದೆ.

ನಾನು ‘ವಿಜಯ ಕರ್ನಾಟಕ’ ಬಿಟ್ಟಾಗ ಈ ಅಂಕಣವನ್ನುತಾವು ಬಹಳ ಮಿಸ್ ಮಾಡಿಕೊಳ್ಳುತ್ತಿರುವುದಾಗಿ ಅನೇಕ ಮಂದಿ ತಿಳಿಸಿದ್ದರು. ಅವರೆಲ್ಲರಿಗೆ ಉತ್ತರಿಸುವುದು ನನಗೆ ತುಸು ಕಷ್ಟವೂ ಆಗಿತ್ತು. ಅವರೆಲ್ಲರ ಒಂದೇ ಡಿಮ್ಯಾಂಡ್ ಏನೆಂದರೆ ವೆಬ್ ಸೈಟ್ ನಲ್ಲಾದರೂ ‘ನೂರೆಂಟು ಮಾತು’ ಶುರು ಮಾಡಿ ಎಂದು. ಆನಂತರ ‘ಕನ್ನಡಪ್ರಭ’ ಸೇರುತ್ತಿದ್ದಂತೆ ಪುನಃ ಅದೇ ವರಾತ. ಸೇರಿ ಒಂದು ವಾರವಾಯಿತು.. ಹದಿನೈದು ದಿನಗಳಾದವು…ಯಾವಾಗ ಶುರು ಎಂಬ ಪ್ರಶ್ನೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಆದಷ್ಟು ಬೇಗ ಈ ಅಂಕಣ ಬರೆಯುವುದು.

ಹಾಗೆ ನೋಡಿದರೆ ನಾನು ಇನ್ನೂ ಒಂದು ತಿಂಗಳು ಬಿಟ್ಟು ‘ನೂರೆಂಟು ಮಾತು’ ಆರಂಭಿಸೋಣ ಎಂದುಕೊಂಡಿದ್ದೆ. ಕಾರಣ ಇಷ್ಟೆ, ನಾನು ಇನ್ನೂ ಸರಿಯಾಗಿ ತಳ ಊರಬೇಕಾಗಿದೆ, ಹೊಸ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ, ಸಹೋದ್ಯೋಗಿಗಗಳ ಜತೆ ಕುಳಿತು ಮುಖಾಮುಖಿಯಾಗಬೇಕಾಗಿದೆ, ಅವರೆಲ್ಲರಿಗೆ ನನ್ನ ಸಮಯ ಕೊಡಬೇಕಾಗಿದೆ, ಪತ್ರಿಕೆಯ ಜಾಹೀರಾತು ಮತ್ತು ಪ್ರಸರಣ ವಿಭಾಗಗಳ ಮಿತ್ರರೊಂದಿಗೆ ಕುಳಿತು ಪಟ್ಟಾಂಗ ಹೊಡೆಯಬೇಕಾಗಿದೆ, ಹೊಸ ಯೋಜನೆಗಳನ್ನು ರೂಪಿಸಬೇಕಾಗಿದೆ, ಅವರು ನನಗೆ ಹೊಂದಿಕೊಳ್ಳುವುದಕ್ಕಿಂತ ಮಿಗಿಲಾಗಿ ನಾನು ಅವರಿಗೆ ಹೊಂದಿಕೊಳ್ಳಬೇಕಾಗಿದೆ… ಇವುಗಳಿಗೆಲ್ಲ ಕೊಂಚ ಸಮಯ ಬೇಕು.
ಹೀಗಾಗಿ ಅಂಕಣ ಬರಹಗಳನ್ನು ಮುಂದೂಡಲು ನಿರ್ಧರಿಸಿದ್ದೆ.

ಆದರೆ ಓದುಗರು ಕೇಳಬೇಕಲ್ಲ, ಹೀಗಾಗಿ ಪ್ರೀತಿಯಿಂದ ನಿಮ್ಮ ಬೇಡಿಕೆಗೆ ಮಣಿದು ಮತು ನನ್ನ ಒತ್ತಾಸೆಗೆ ಶರಣಾಗಿ ಬರೆಯಲಾರಂಭಿಸಿದ್ದೇನೆ. ಇನ್ನು ಮುಂದೆ ಪ್ರತಿ ಗುರುವಾರ ‘ನೂರೆಂಟು ಮಾತು’ ಮೂಲಕ ನಾನು ಇಣುಕುತ್ತೇನೆ. ಈ ವಾರ ‘ವಿಕ’ ಸೇರಿದ ದಿನಗಳು ಮತ್ತು ‘ಕನ್ನಡಪ್ರಭ’ದಲ್ಲಿನ ನನ್ನ ಆರಂಭದ ದಿನಗಲ ಮೆಲುಕು ಹಾಕಿದ್ದೇನೆ. ನಿಮಗೆ ನನ್ನ ಬಗ್ಗೆ ಗೊತ್ತಿರದ ಕೆಲವು ಸಂಗತಿಗಳು ಗೊತ್ತಾದೀತು.

ನನ್ನಿಂದ ಈ ಅಂಕಣವನ್ನು ಮತ್ತೆ ಆರಂಭಿಸಿದ ನಿಮಗೆಲ್ಲ ನನ್ನ ಮ್ಮಾಮ್ಮಾ ದೊಡ್ಡ ನಮಸ್ಕಾರಗಳು! I love You all.

60 Comments

 1. ತುಂಬಾ ಧನ್ಯವಾದಗಳು. ನಿಮ್ಮ ಬರವಣಿಗೆ ಹೀಗೆ ಮುಂದುವರೆಯಲಿ.

  • Namaskara sir,

   Nanu Nimma old sa-udyogi. . .

   Nimmondige Vijay Karnataka Patrikeyali. Asst Circulation Manager. agidde.. Arambadinda 1999. . .
   Eega Hosa Digantha Patrikeyalli Circulation Manager agiddene. . .
   Nanage modalindalu baravanigeyalli asakthi. . Late city Vijay Karnataka and Vijay times patrikeyali Suddi bareyutidde. . .
   Nimmage gothirabahudu.. 2 – 3 bari Nimma balige bandu Sampadakiya Vibagadali avakasha koridde. . . nenapidiya sir.

   E – visheya just nimage nenapu madide. .asste.. Estte agali nivu nammavaru. . . Namma janangadavaru. . . Abimana idde iruthe. .

   Nivu Mathe Pen idirodu . . Marukatteyali sparde shuruvagide. . Super. .

   Nimma ankanna arambavagirodu thumba santhosha tandidde. . . .

   Nimma baravanige VISHWA KANNADADA HANEYA BHATTAGLI. . . HANEGE BHATT EDDRENE SUNDARA ALVA SIR. .

   NAMMA NENAPIRALI. . . . .

   N.VENKATESH BABU
   CIRCULATION MANAGER – HOSA DIGANTHA

 2. tumbaa dhanyavaadagalu Sir . 🙂

  -SubbuSullia

 3. ಭಟ್ಟರ ಅಭಿಮಾನಿಗಳಿಗೆ ಇನ್ನು ರಸದೌತಣ. ನಿಮ್ಮ ನೂರೆಂಟು ಮಾತು ಓದಲು ಉತ್ಸುಕನಾಗಿದ್ದೇನೆ. ನಿಮಗೆ ತೊಂದರೆಯಾದರೂ ಇಷ್ಟ ಬೇಗ ಅಂಕಣ ಪುನರಾರಂಭಿಸಿರುವದು ನಿಮಗೆ ಅಭಿಮಾನಿಗಳ ಮೇಲೆ ಎಷ್ಟು ಅಭಿಮಾನವಿದೆ ಎಂಬುದು ತಿಳಿಯುತ್ತದೆ.

 4. please.. mr. bhat also start ur unique and my Favorite VAKRATUNDOKTI….

 5. we toooooooooooooooooooo………………..

 6. Thumbha nirikshisidda ankanagalu baralaarambhisiruvudu namagella ishta.

  vandanegalu.

 7. thank you,sir.

 8. ತುಂಬಾ ಧನ್ಯವಾದಗಳು…. No words to explain to your article….. waiting for some more changes in KP…… awsome the way Kp is changing…. Briallint WORK !!!

 9. Thank you. naavu kaayutha iddeve.

 10. thank u somuch sir & we love you

 11. thanks. We are awaiting for the same.

 12. ತುಂಬಾ ಸಂತೋಷವಾಗಿದೆ…. ಸರ್.

 13. Thnaks much for writing sir!

 14. Hmmm….adoo satyave anni. But nimma baravanige illade enanno kaledukonda bhava aavarisutte. So we want ur article

 15. Tan Q….. Love u too…!

 16. Tumba olleya lekhana 🙂 v love u too 🙂

 17. we were eagerly waiting, thank u si

 18. we were eagerly waiting,thank you sir

 19. Preethiya Bhatre,

  Nimma Noorentu maathu aarambha aadaddakke nanna abhinandanegalu. e shanivara bethale maani barthaane antha guarantee aaythu nimma noorentu maathu banda nanthra.Nimma hosa innings KP yalli bharjari yaagi nadeyali antha namma haaraike.
  Aadare Bhatre, nimma lekhana dashte aaptha vaagi KP yoo ottaare yaagi barali. Neevu VK yalli kone konege maadidantha Kumaraswamy ge addapallakki uthsava illoo nadeyadirali. Kumaraswamy Yeddy virudhdha enu helidaroo mukhaputa news, ade Kumaraswamy virudhdha ulidavaru enu helidaru patrike ya yaavudo moole ge thallibiduvudu.maatravalla HDK melina ella aaropa galige box nalli HDK adannu reject illa savaalu esediddaare antha haako budhdhi nillali.

  Sari. Nimma abhipraya oppona. sariyaada, nyaaya sammathavallada yaavude moola dinda banda duddoo akramave, bhrashtaachaarave. dayavittu ide HDK family indu kotigattale (Election Commission ge thorisida) hana ellinda banthu antha nimma sampaadakatva dalle keluvanthaagali. aa naithikathe nimage ide antha nannantha odugana na nambike,.

  Naanobba Mangalorenavanu. Neevu VK yalli nimma VK niryaana da aaaa koneya dinagalalli VK subscribe maadodannu nillisida halavaaru mandigalalli naanoo obba. Bhrashtaachara da virudhdha yudhdha ghoshane maadida neevu Kumaraswamy ya kaiya aayudha aagodu beda. nimma melina innoo sampoorna nashisi hogada preethi yinda eega Kannadaprabha neevu sampaadakaraada nanthra tharisuththiddene.nanna mitra rigoo heliddene. nimma kurithaada halavu abhipraya gala saara heegide: Bhatru devegowda kutumba da prachaara poshakaru. Yaddy yannu virodhisuvude ondamsha da kaaryakrama. e yaddy virodhi neethiyindaagi uththama vimarshaka P.Thyagaraj thamma vimarshaa shakthi yanne kaledukondiddaare annodu.
  Ivu preethiyinda namma preethiya Bhatrige nimma preethiya abhimaani ya arike. innu neevuntu, KP untu. HDK family yannu adda pallakki yalli koorisi avarannu hegala mele horuva mattakke neevu hogalaariri anno bayake ashte nammadu.
  Namage VK ge serida 2000-2006 olagina Bhatru beku ashte.
  Nimma, Janardhan Bhat

  • ನಿಮ್ಮ ಬರಹ ನೋಡಿದರೆ ಭಟ್ಟರ ಅಭಿಮಾನಿ ವೇಷದಲ್ಲಿ ಇರೋ ಬಿಜೆಪಿಯ ಪೂರ್ಣಾವಧಿ ಕಾರ್ಯಕರ್ತನಂತೆ ಅನಿಸುತ್ತದೆ.ಕುಮಾರಸ್ವಾಮಿ ದುಡ್ಡು ಮಾಡಿದ್ದರೆ ಅಂದಾಕ್ಷಣ ಯಡ್ಡಿಯೂ ಮಾಡಬಹುದೇ?? ನಿಮ್ಮ ಪ್ರಕಾರ ಯಾರು ತಪ್ಪು ಮಾಡಿದ್ದರೋ
   ಅವರೂ ಬೇರೆಯವರು ತಪ್ಪು ಮಾಡಿದರೂ ಸುಮ್ಮನಿರಬೇಕಾ?? ನನ್ನ ಪ್ರಕಾರ ಇಬ್ಬರೂ ರಾಜಕಾರಣಿಗಳೇ ಹಾಗೂ ಬ್ರಷ್ಟಾಚಾರದ ಅಪರಾವತಾರಗೆಳೆ
   ಚಿಂತಿಸ ಬೇಡಿ.ಇನ್ಮೇಲೆ KP ಹಾಗೂ ಬಿಜೆಪಿ bhai bhai.ಏನಂತೀರ ಭಟ್ ಸಾರ್.

 20. Wow.. Really happy news.. Thank you sir…

 21. thank u so much sir….

 22. ಎಲ್ಲ ಸರಿ ಆದರೆ ಮುದ್ರಿಸುತ್ತಿರುವ ಪೇಪರಿನ ಗುಣಮಟ್ಟದಲ್ಲಿ ಇನ್ನೂ ಸುಧಾರಣೆಯಾಗಬೇಕಿದೆ. ಒಳಗಿನ ಪುಟಗಳನ್ನು ಓದಬೇಕೆನ್ನಿಸುವುದಿಲ್ಲ. ದಯವಿಟ್ಟು ಗಮನ ನೀಡಿ.

  ವೀಣಾ ವಿಜಯನರಸಿಂಹ, ಧಾರವಾಡ.

 23. ತುಂಬಾ ಸಂತೋಷ. …ಕನ್ನಡ ಪ್ರಭವನ್ನು ಮರು ವಿನ್ಯಾಸ ಮಾಡಿದರೆ ಒಳ್ಳೆಯದು……ಸಾಹಿತಿಗಳಿಂದ ಅಂಕಣ ಮೂಡಿಬಂದರೆ ಚೆನ್ನಾಗಿರುತ್ತೆ.

 24. nimma lekhana matte patrikegalalli oduttiruvdu nanage “nurentu mathu”galinda helidru kadimeye…….!

  danyavada sir……………………….

 25. ನೋಡ್ತಾ ನೋಡ್ತಾ ಇದ್ದ ಹಾಗೆ ಏನೇನೊ ಶುರು ಮಾಡಿ ಬಿಟ್ರಿ

 26. I was too happy to see your article. I was missing it from long time. Sir, please continue with your articles on people, books. I have

 27. HAppy..HAppy..HAppy..HAppy..HAppy..HAppy..HAppy..HAppy..HAppy..HAppy..HAppy..HAppy..

 28. ಸರ್, ನಿಮ್ಮ ಅಂಕಣ ಪ್ರಾರಂಭವಾಗಿರುವುದು ಖುಶಿ ನೀಡಿತು. ನಮ್ಮೂರಲ್ಲಿ ಕನ್ನಡಪ್ರಭ ಪತ್ರಿಕೆ ಅಷ್ಟು ಸುಲಭವಾಗಿ ಲಭ್ಯವಾಗುವುದಿಲ್ಲವಾದ ಕಾರಣ ಈಗ ಆನ್‌ಲೈನ್ ಆಗಿ ಪತ್ರಿಕೆಯನ್ನು ಓದತೊಡಗಿದ್ದೇನೆ. ‘ಸುದ್ದಿಮನೆ ಕಥೆ’ ಹಾಗೂ ‘ಜನಗಳ ಮನ’ ಅಂಕಣಗಳೂ ಶೀಘ್ರದಲ್ಲೇ ಮೂಡಿಬರಲಿ.

 29. namaskara sir….

  “NOORENTU MATHU’ tumba chennagide…….

  thanx……

 30. KP totally changing… we are so much happy now, good to see all my favorite writers in KP.
  Thank u so much sir…..

 31. Namaskar Vishwa sir ge

  Nivu article bareuvudannu nillisidakke kelavandu dina namm KUD Journalism students yallaru paper oduvudannu nillisi bittidvi …………………. adare ega nivu matte start madtene anta helidakke tumaba kushi aytu………. good luck Sir Vishwa sir…..

  with regards.

  Anil Kajagar
  MCJ dept KUD
  +9196209 04143

 32. Really great Sir! You have fulfilled our desire more than our expectation through so many different articles. Keep going!

 33. Dear Sir,

  Neevu kannada prabha seriddu tumba santhoshada sangathi. Eega kannad prabha dinadinda dinakke sundaravaagi. bartha ide. belagina odu tumba muda needutte. neevu v.k.dalliddaga nimma mobile no nannalli itthu,aaga koodale phone maadi athava sms moolaka abhipraya thilisutthidde. preethiya vandanegalu – srinivas deshpande Mangalore

 34. ಬರೆದರೆ ವಿಶ್ವೇಶ್ವರ
  ಉಳಿದೆಲ್ಲವೂ ನಶ್ವರ
  ಆಶೀರ್ವದಿಸಲಿ ನಿಮಗೆ ಆ ಪರಮೇಶ್ವರ !!

 35. Fantastic…… We love you too.

 36. Dear Sir,

  Super khushi aaytu ee news keli. 1st April ninda VK nilsi, kannada prabha patrike vodalu praarambha maadteve.
  Nivu sarva kaalakku Kannada prabha dalle nele nilluvantaagali anta haaraistene.

  Nimma sangadigaraada Pratap Simha, Shadakshari(kshana hottu aani muttu) avara ankanagalannu saha praarambhisi.
  Namge gottu avarella atyanta birusina jeevana nadstiddare anta, aadru kannada abhimaanigaligoskara bareyalu namma paravaagi nivu vakaalattu vahisi.

  Nimma abhimaani,
  Shreeharsha

 37. Aathmiya Bhattarige,

  Tamma Noorentu maathugalinda thumbida “Noorentu maathu ” ankanavannu modalinindalu oduthiddavaralli naanu obba..
  takshanave ankana ninthaddu besaravagithhu. Matte Shuruvadaddu thumba santhosha tandide.
  Na santhasavannu Noorentu maathugalalli varnisalare…

  Vandanegalondige,
  Giri
  RR Nagar, Bangalore.

 38. ಕನ್ನಡಪ್ರಭ ಚೆನ್ನಾಗಿ ಬರುತ್ತಿದೆ.ನಾನು ಪ್ರಣತಿ ಅಂಕಣ ಇಷ್ಟವಾಗಲಿಲ್ಲ.Expecting more from u.Let Epaper be more user friendly and please improve the paper layout.I wish all the best :).

 39. ODUGARA ABHIMAANA HECHCHAAYITHU
  PRATIYOBBRU NIREEKSHISIDDA PRATAVAARADA KANTHU
  SHURUVAAYITU NUURENTU MAATHU.
  KELAVARIGE IDU SANKATA TANDEETU

 40. ಇನ್ನೂ ಸರಿಯಾಗಿ ತಳವೂರಬೇಕಾಗಿರುವ ತಮ್ಮಿಂದ ಆಗಲೇ ನೂರೆಂಟು ಮಾತು!
  ಇನ್ನು ತಾವು ಸರಿಯಾಗಿ ತಳವೂರಿದ ಮೇಲೆ…?!

  ತಮ್ಮ ಅಂಕಣಕ್ಕೆ ಬೇರೊಂದು ಹೆಸರು ನೀಡುವಿರೆಂಬ ನಿರೀಕ್ಷೆ ಇತ್ತು.

  ಹಳೆಯ ನೆನಪುಗಳ ನಿನ್ನೆಯ ಬರಹ ಖುಷಿ ನೀಡಿತು.

  ಶುಭಹಾರೈಕೆಗಳು.

 41. Dear Sir,

  We feel ‘second time lucky’ to see ‘Noorentu Maatu’ rolling out again. We only want more from you this time! Love you loads, Sir.

  With Best Regards,
  Chethan

 42. ಬರಿ ನೂರೆಂಟು ಮಾತು, ಮಾತ್ರ ಅಲ್ಲ ಸಾರ್ ಸುದ್ದಿಮನೆ ಕತೆ, ಜನಗಳ ಮನ ಮಂತಾದವುಗಳು ಯಾವಾಗ????????

  ಅವುಗಳ ಜೊತೆಗೆ ಪಿ. ತ್ಯಾಗರಾಜರ ಒಳಸುಳಿ, ಚಾಟಿ ಚಟಾಕಿ
  ರವಿ ಬೆಳಗೆರೆಯವರ ಸೂರ್ಯ ಶಿಕಾರಿ
  ಎ. ಆರ್. ಮಣಿಕಾಂತ್ ರವರ ಹಾಡು ಹುಟ್ಟುವ ಸಮಯ
  ಜೈರಾಜ್ ರವರ ಜೈತ್ರ ಯಾತ್ರೆ
  ಜಿ.ಎನ್ ಮೋಹನ್ರ ಮೀಡಿಯಾ ಮಿರ್ಚಿ
  ಕೆ.ವಿ. ಪ್ರಭಾಕರ್ ರವರ ಟಾಂಗ್
  ಡಿ ಆರ್ ಅಶೋಕ್ ರಾಮ್ ರ 360
  list ದೊಡ್ಡದಾಗ್ತ ಇದೆ …. ಇವೆಲ್ಲಾ ಯಾವಾಗ ಬರುತ್ತೆ ಅಂತಾ ಕಾಯ್ತಾ ಇದಿವಿ ಸಾರ್.

 43. ಧನ್ಯವಾದಗಳು ಸರ್…. ಮಹಿಳಾ ಕಾಲಂ ಪ್ರಾರಂಭಿಸಿದ್ದು ಸ್ವಾಗತಾರ್ಹ.. ಸಾಧ್ಯವಾದರೆ ಇನ್ನೂ ಎರಡು ಮಹಿಳಾ ಕಾಲಂ ಗಳನ್ನು ಆರಂಭಿಸಿ. supplement ಗಳಲ್ಲೂ ಬದಲಾವಣೆ ಇರಲಿ!

 44. Dear Mr.VB

  the tag line your are using in KB” nodtha iri………………………….madthivi” is it self shows that what you will do in future; definately i hope you will serve us delicious food to the readers through articles

  i already told many my friends to go for KB for the articles

  thank you & expecting some more dishes

 45. Naavu neevu yennenu madteera antha kayta ne ideevi. Dina dina hosa hosa prayoga.. NIMMALLINA HOSATANADA TUDITA HEEGE SAAGALI.

  sms
  ON APTHAMITRA TO
  9870807070

 46. very happy to read all yours and your team articles in kp.plese sir start munishree tarun sagars article also.
  paper quality is not good . veena mams article was nice.

 47. Mr. Bhat, Thank you for all you have done and about to do in Kannada media. We are looking at you and your team to be the change agent for our state and language.

 48. ನೂರೆಂಟು ಮಾತು ಮತ್ತೆ ಶುರುವಾಗಿದೆ ಸರಿ , ಗುರುಗಳೆ
  ಕನ್ನಡ ಫ್ರಭದಲ್ಲಿ ಅದಕ್ಕೆ ಮತ್ತೊಂದು ನಾಮಫಲಕವಿಡಬಹುದಿತ್ತು ಎಂಬುದು ನನ್ನ ಅಭಿಪ್ರಾಯ. ಇನ್ನೂ ಇಂದಿನಿಂದ ಪ್ರಾರಂಭವಾಗಿರುವ ಬೆತ್ತಲೇ ಜಗತ್ತು ಕೂಡ ಕನ್ನಡ ಫ್ರಭದ ಕೊರಳಲ್ಲಿ ಸುತ್ತಿಕೊಂಡ ವಿ ಕ ದ ನೇಮ್ ಪ್ಲೇಟ್ ಗಳು ಎಂದೆನಿಸುತ್ತಿದೆ . ನಿಮ್ಮ ಹಾಗು ಪ್ರತಾಪ್ ರ ಬರಹದ ಬಗ್ಗೆ ನಬ್ಬದು ನೋ ಕಾಮೆಂಟ್ಸ . ಅದರಲ್ಲಿರುವ ವಿಷಯಗಳ ಬಗ್ಗೆ ಬಿನ್ನಾಬಿಪ್ರಾಯಗಳಿರಬಹುದು . ಆದರೆ ನನ್ನ ಮಟ್ಟಿಗೆ ಹಿಡಿಸದಿರುವುದು ಆ ಟೈಟಲ್ ಗಳು ಅಷ್ಟೆ . ಹೇಳ ಬೆಕೆನಿಸದನ್ನು ಹೆಳಿದೆ ಅಷ್ಟೆ ……….. ಬೈರಪ್ಪನವರನ್ನು ಕನ್ನಡ ಫ್ರಭದ ಸಾಲುಗಳಿಗೆ ತಂದಿದ್ದು ಮತ್ತೆ ಪತ್ರಿಕೆಗಳು ತಂಭು ಸಾಹಿತ್ಯದೆಡೆಗೆ ಮುಖ ಮಾಡುತ್ತಿದೆ ಎಂಬುದರ ಸೂಚಕವೆಂಬತೆ ಕಾಣುತ್ತಿದೆ….

  ನನ್ನದೊಂದು ಪ್ರಶ್ನೆ ………………………… ಒಂದು ವಿಷಯಕ್ಕೆ ಸಂಭದಿಸಿದಂತೆ ಒಂದು ವರದಿಯನ್ನ ಆಳವಾಗಿ ಬರೆಯಲು , ಎನು ಮಾಡಬೇಕು ….

  • No problem, if they carry the same title for their article. They were a huge hit. Vbhat contributed lot to develop Vijaya Karnataka. The titles are his intellectual property. Let him use it..

 49. ನೂರೆಂಟು ಮಾತು ಮತ್ತೆ ಶುರುವಾಗಿದೆ ಸರಿ , ಗುರುಗಳೆ
  ಕನ್ನಡ ಫ್ರಭದಲ್ಲಿ ಅದಕ್ಕೆ ಮತ್ತೊಂದು ನಾಮಫಲಕವಿಡಬಹುದಿತ್ತು ಎಂಬುದು ನನ್ನ ಅಭಿಪ್ರಾಯ. ಇನ್ನೂ ಇಂದಿನಿಂದ ಪ್ರಾರಂಭವಾಗಿರುವ ಬೆತ್ತಲೇ ಜಗತ್ತು ಕೂಡ ಕನ್ನಡ ಫ್ರಭದ ಕೊರಳಲ್ಲಿ ಸುತ್ತಿಕೊಂಡ ವಿ ಕ ದ ನೇಮ್ ಪ್ಲೇಟ್ ಗಳು ಎಂದೆನಿಸುತ್ತಿದೆ . ನಿಮ್ಮ ಹಾಗು ಪ್ರತಾಪ್ ರ ಬರಹದ ಬಗ್ಗೆ ನಂದು ನೋ ಕಾಮೆಂಟ್ಸ . ಹಾಗೆ ಅದರಲ್ಲಿರುವ ವಿಷಯಗಳ ಬಗ್ಗೆ ಬಿನ್ನಾಬಿಪ್ರಾಯಗಳಿರಬಹುದು . ಆದರೆ ನನ್ನ ಮಟ್ಟಿಗೆ ಹಿಡಿಸದಿರುವುದು ಆ ಟೈಟಲ್ ಗಳು ಅಷ್ಟೆ . ಹೇಳ ಬೆಕೆನಿಸದನ್ನು ಹೆಳಿದೆ ಅಷ್ಟೆ ……….. ಬೈರಪ್ಪನವರನ್ನು ಕನ್ನಡ ಫ್ರಭದ ಸಾಲುಗಳಿಗೆ ತಂದಿದ್ದು ಮತ್ತೆ ಪತ್ರಿಕೆಗಳು ತಂಭು ಸಾಹಿತ್ಯದೆಡೆಗೆ ಮುಖ ಮಾಡುತ್ತಿದೆ ಎಂಬುದರ ಸೂಚಕವೆಂಬತೆ ಕಾಣುತ್ತಿದೆ….

  ನನ್ನದೊಂದು ಪ್ರಶ್ನೆ ………………………… ಒಂದು ವಿಷಯಕ್ಕೆ ಸಂಭದಿಸಿದಂತೆ ಒಂದು ವರದಿಯನ್ನ ಆಳವಾಗಿ ಬರೆಯಲು , ಎನು ಮಾಡಬೇಕು ….

 50. ಭಟ್ಟರೇ, ನಮಸ್ಕಾರ. ಕನ್ನಡ ಪ್ರಭ ಈಗ ಬದಲಾವಣೆಯತ್ತ ಮುಖ ಮಾಡಿದೆ. ನಿಮ್ಮ ಸಾರಥ್ಯದಲ್ಲಿ ಇದು ಯಶಸ್ವೀ ಅಗುತದೆ ಎಂಬ ದೃಢ ವಿಶ್ವಾಸ ನನ್ನದು , ನಮ್ಮೆಲ್ಲರದು. ಕನ್ನಡ ಪ್ರಭ ತಲೆಬರಹವನ್ನು ವರ್ಣಿಕರಿಸಿ. ಹಾಗು ಒಳ ಪುಟಗಳನ್ನೂ ವರ್ಣಿಕರಿಸಿ. ಇದು ನಮ್ಮೆಲ್ಲರ ಕೋರಿಕೆ.

 51. ತುಂಬಾ ಸೊಗಸಾಗಿತ್ತು ನಿಮ್ಮ ನೊರೆಂಟು ಮಾತು …………ಇಷ್ಟು ದಿನಗಳ ವನವಾಸ ಮುಗಿಸಿ ಬಂದದಕ್ಕೆ ತುಂಬಾ ಧನ್ಯವಾದಗಳು ಭಟ್ರೇ …………………..

 52. Dayavittu KP yallina Dinachari emba hesarinalli ondu idee puta vannu waste maaduvudara badalu koodidashtu maahithi (economics/finance aadaroo) kodi. upadesha galu, huttuhabba, mobile jokes ella ellarigoo thilidiruvanthaddu. adakke ondu puta bekaa?
  Bhatra maantrika sparsha da anubhava KP yalli innoo aagilla. baree mukhaputa da headlines, ankana galu aarambha gondaddu bittare berenoo aagilla. KP ya page quality ondashtu uttama gollali. Nannamma heluththiddaru: iduvarege VK odi odi KP ya page nodidare odo manasaaguththilla. Bhatru iddare antha ododu ashte antha.
  Nanna kadeya bedike: ankana galu innoo hechchaagali.Editorial na mid 2 pages ankana galinda shrungaaragollali.

  Veena Bannanje yavarannu introduce maadida prayoga danthe ondashtu yuva manasugalu KP ge ankana bareyuvanthaagali.Nimma Bhyrappa prayoga danthe daily prachaara dinda maaru doora iruva innoo halavaaru chinthakara lekhana galu KP ge baruvanthaagali.

  Ivishte nanna bedike nanna preethiya Bhatrige.

 53. i have the habit of reading nurentu mathu in kannada prabha.. In last week nurentu mathu article v v bhat sir has mentioned about shiva charitha book by shiva shahir baba saheba purandara relating to shivaji. i want to know that wether the same book has been translated in kannada or not. If it was translated who is the translator of the book.

  Regards
  Sunil Chabriya

 54. Excellent article! We are linking to this great post on our website.
  Keep up the great writing.

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.