ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ನಿಮಗೆ ನಿಮಗಿಂತ ಉತ್ತಮ ಮಾರ್ಗದರ್ಶಕ ಮತ್ತೊಬ್ಬರಿಲ್ಲ!

dont_talk_by_ParanoidBirdಅನೇಕರಲ್ಲಿ ಒಂದು ಗುಣವಿದೆ. ಅದೇನೆಂದರೆ ತಮ್ಮ ಎಲ್ಲ ಗೋಳು, ಸಂಕಟಗಳನ್ನು ಸ್ನೇಹಿತರು, ಬಂಧು-ಬಾಂಧವರು ಹಾಗೂ ಸಹೋದ್ಯೋಗಿಗಳ ಮುಂದೆ ಹರಡಿಕೊಳ್ಳುತ್ತಾರೆ, ಹೇಳಿಕೊಳ್ಳುತ್ತಾರೆ. ಹಾಗೆ ಹೇಳಿಕೊಳ್ಳುವ ಮೂಲಕ ತಾವು ಹಗುರಾಗಿದ್ದೇವೆಂದು ಭಾವಿಸುತ್ತಾರೆ.

ನಮ್ಮ ಕಷ್ಟಗಳನ್ನು ಬೇರೆಯವರ ಮುಂದೆ ಹೇಳಿಕೊಂಡರೆ, ಹಂಚಿಕೊಂಡರೆ ಅದರ ಭಾರ ಹೇಗೆ ಕಡಿಮೆಯಾಗುತ್ತದೆ?

ನಮ್ಮ ತೊಂದರೆಗಳನ್ನು ನಮಗೆ ಬೇಕಾದವರ ಮುಂದೆ ಹೇಳಿಕೊಳ್ಳುವುದರಿಂದ ಸಲಹೆ, ಮಾರ್ಗದರ್ಶನದ ರೂಪದಲ್ಲಿ ಒಂದಷ್ಟು ಸಹಾಯ ಸಿಗಬಹುದು. ಮನಸ್ಸಿನಲ್ಲಿ ಮಡುಗಟ್ಟಿದ ಭಾವನೆಗಳನ್ನು ಹರಿಯಬಿಟ್ಟಾಗ, ಒಂದಷ್ಟು ರಿಲೀಫ್ ಸಿಗಬಹುದು. ನಮ್ಮ ಕಷ್ಟಗಳಿಗೆ ಸ್ನೇಹಿತರು ಪರಿಹಾರೋಪಾಯ ಸೂಚಿಸಬಹುದು. ಹೆಚ್ಚೆಂದರೆ ಹಣಕಾಸಿನ ನೆರವನ್ನೂ ನೀಡಬಹುದು. ಕೆಲವೊಮ್ಮೆ ಮನಸ್ಸಿನಲ್ಲಿಯೇ ಇಟ್ಟುಕೊಂಡು ಎಲ್ಲವನ್ನೂ ನುಂಗಿಕೊಂಡು ಒಳಗೊಳಗೇ ಪರಿತಪಿಸುವ ಬದಲು ನಾಲ್ಕು ಜನರ ಮುಂದೆ ಹೇಳಿಕೊಂಡಾಗ ಸಾಂತ್ವನ ಸಿಗುವುದು ಸುಳ್ಳಲ್ಲ.

ಇಲ್ಲಿ ಬಹಳ ಮುಖ್ಯವಾದ ಸಂಗತಿಯೇನೆಂದರೆ ನೀವು ನಿಮ್ಮ ಕಷ್ಟಗಳನ್ನು, ವೈಯಕ್ತಿಕ ಸಮಸ್ಯೆಗಳನ್ನು ಯಾರ ಮುಂದೆ ಹೇಳಿ–ಕೊಳ್ಳುತ್ತಿದ್ದೀರಿ ಎಂಬುದು. ಆತನೋ, ಆಕೆಯೋ, ನಿಮ್ಮ ಸಮಸ್ಯೆ–ಗಳನ್ನು ಕಾಪಾಡು–ವಷ್ಟು ನಿಯತ್ತು ಉಳ್ಳವರಾಗಿರಬೇಕು. ನಿಮಗೆ ಸೂಕ್ತ ಸಲಹೆ, ಸೂಚನೆ, ಮಾರ್ಗದರ್ಶನ, ಸಾಂತ್ವನ, ಸಮಾಧಾನ ಹೇಳುವಷ್ಟು ಪ್ರಬುದ್ಧರಾಗಿರಬೇಕು. ಅವರ ಸಲಹೆ-ಸಾಂತ್ವನಗಳು ಆ ಕ್ಷಣದಲ್ಲಿ ನಿಮಗೆ ನೆಮ್ಮದಿ ಸಿಗುವಂತಿರಬೇಕು. ಅಲ್ಲದೇ ಅಗತ್ಯ ಬಿದ್ದರೆ ನಿಮಗೆ ಹಣಕಾಸಿನ ನೆರವು ನೀಡಲು ಹಿಂದೇಟು ಹಾಕುವವರಾಗಿರಬಾರದು. ವೈದ್ಯರ ಮುಂದೆ ತನ್ನ ರೋಗಗಳ ಮಾಹಿತಿಯೆಲ್ಲವನ್ನೂ ಹೇಳಿಕೊಳ್ಳುತ್ತಾನಲ್ಲ, ಹಾಗೆ ಹೇಳಿಕೊಂಡಾಗ ವೈದ್ಯ ಮುಂದೆ ಮಾಡಬೇಕಾದ ಕಾರ್ಯಗಳ ಬಗ್ಗೆ ಪ್ರವೃತ್ತನಾಗು–ತ್ತಾನಲ್ಲ, ಅಂಥ ಸಾಂತ್ವನವಾದರೂ ಕೊಡುವವರ ಮುಂದೆ ತಮ್ಮ ಗೋಳು, ವೈಯಕ್ತಿಕ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು.

ನಿಮ್ಮ ವೈಯಕ್ತಿಕ ಅಥವಾ ಖಾಸಗಿ ಸಂಗತಿಗಳನ್ನು ಬೇರೆಯವರ ಮುಂದೆ ಹಂಚಿಕೊಳ್ಳುವುದೆಂದರೆ, ನಿಮ್ಮ ವ್ಯಕ್ತಿತ್ವದ ರಹಸ್ಯದ ತಿಜೋರಿ ಬೀಗದ ಕೈಯನ್ನು ಬೇರೆಯವರಿಗೆ ಕೊಟ್ಟ ಹಾಗೆ. ನಿಮ್ಮ ಕುರಿತಾದ ಆ ಮಾಹಿತಿಯನ್ನು ಅವರು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು. ಅಲ್ಲಿಯವರೆಗೆ ನೀವು ಕಾಪಾಡಿಕೊಂಡು ಬಂದ ನಿಮ್ಮ ಖಾಸಗಿ ಅಂಶಗಳೆಲ್ಲ ಬಹಿರಂಗವಾಗಬಹುದು. ಆ ಮೂಲಕ ನಿಮ್ಮ ಚಾರಿತ್ರ್ಯಹರಣವಾಗಬಹುದು. ನೀವೇ ಕೋಲು ಕೊಟ್ಟು ಹೊಡೆಸಿಕೊಳ್ಳುವ ಪರಿಸ್ಥಿತಿ ಬರಬಹುದು. ನಿಮ್ಮೆಲ್ಲ ಗುಟ್ಟುಗಳನ್ನು ಯಾರ ಮುಂದೆ ಹೇಳಿಕೊಳ್ಳುತ್ತೀರೋ ಅವರು ನಿಮ್ಮನ್ನು ಬ್ಲ್ಯಾಕ್‌ಮೇಲ್ ಮಾಡಬಹುದು. ಈ ಅಂಜಿಕೆಯಿಂದ ನೀವು ಅವರಿಗೆ ಸದಾ ಗೊಡ್ಡು ಸಲಾಮು ಹೊಡೆಯುತ್ತಾ ಇರಬೇಕಾದ ಪರಿಸ್ಥಿತಿಗೆ ನಿಮ್ಮನ್ನೇ ನೀವು ನೂಕಿಕೊಳ್ಳಬಹುದು.

ಬೇರೆಯವರ ಮುಂದೆ ನಿಮ್ಮ ‘ಪುರಾಣ’ ಹೇಳಿಕೊಳ್ಳುವುದರಿಂದ ಸಮಸ್ಯೆ ಖಂಡಿತ ಬಗೆಹರಿಯುವುದಿಲ್ಲ, ಕಡಿಮೆಯೂ ಆಗುವು–ದಿಲ್ಲ. ಅದರ ಬದಲು ಜಿಛಿ ಛ್ಛ್ಛಿಛ್ಚಿಠಿ ಹೆಚ್ಚುತ್ತಾ ಹೋಗುತ್ತದೆ. ನಿಮ್ಮನ್ನು ಗೌರವಿಸುತ್ತಿದ್ದವರು, ಇಷ್ಟಪಡುತ್ತಿದ್ದವರು ನಿಮ್ಮ ಪರಿಸ್ಥಿತಿ ನೋಡಿ ಕ್ರಮೇಣ ದೂರವಾಗಬಹುದು. ಅಂತರ ಕಾಪಾಡ–ಬಹುದು, ನಿಕೃಷ್ಟವಾಗಿಯೂ ಕಾಣಬಹುದು, ಲಘುವಾಗಿ ಪರಿಗಣಿಸಬಹುದು.

ನಿಮ್ಮ ಸಮಸ್ಯೆಗಳನ್ನು ಬೇರೆಯವರ ಮುಂದೆ ಹೇಳಿಕೊಳ್ಳಬೇಡಿ. ನಿಮಗೆ ನಿಮಗಿಂತ ಉತ್ತಮ ಸ್ನೇಹಿತ, ಹಿತ ಚಿಂತಕ, ಮಾರ್ಗದರ್ಶಕ ಮತ್ತೊಬ್ಬರಿಲ್ಲ. ಅವನ ಹೊರತಾಗಿ ಬೇರೆಲ್ಲೂ ಸಾಧ್ಯವಾದಷ್ಟು ಮಟ್ಟಿಗೆ ಹೇಳಿಕೊಳ್ಳಬೇಡಿ.

*****

ವೈ-ಫೈ ಎಂಬ ಉಚಿತ ಸೇವೆ

ಕಳೆದ ವಾರ ತಾಜ್ ಗ್ರುಪ್ ಆಫ್ ಹೋಟೆಲ್‌ನವರು ಪತ್ರಿಕಾ ಹೇಳಿಕೆಯನ್ನು ಕಳಿಸಿಕೊಟ್ಟಿದ್ದರು. ಭಾರತ ಸೇರಿದಂತೆ ಜಗತ್ತಿನಲ್ಲಿ–ರುವ ತಮ್ಮ ಸಂಸ್ಥೆಯ ೧೨೫ ಹೋಟೆಲ್‌ಗಳಲ್ಲಿ ಉಳಿದು–ಕೊಳ್ಳುವ ಗ್ರಾಹಕರೆಲ್ಲರಿಗೂ ಉಚಿತ ವೈ-ಫೈ ಸೇವೆ ಒದಗಿಸುತ್ತಿರುವುದಾಗಿ ಅದರಲ್ಲಿ ಹೇಳಿಕೊಂಡಿದ್ದರು. ಆ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿಯವರನ್ನು ಸಂಪರ್ಕಿಸಿ, ಅವರ ಜತೆ ಚರ್ಚಿಸಬೇಕೆನಿಸಿತು. ಫೋನ್ ಮಾಡಿದಾಗ ಸಿಕ್ಕರು. ‘ಭಾರತದಲ್ಲಿ ಇಂಥ ಸೇವೆ ಒದಗಿಸುತ್ತಿರುವ ಮೊದಲ ಹೋಟೆಲ್’ ಎಂದು ಅಭಿಮಾನದಿಂದ ಕೊಚ್ಚಿಕೊಂಡರು.

‘ಆಫ್ರಿಕಾ, ಯುರೋಪಿನ ಯಾವುದೇ ಹೋಟೆಲ್‌ಗಳಲ್ಲಿ ಉಳಿದುಕೊಂಡರೂ, ವೈ-ಫೈ ಸೇವೆಯನ್ನು ಕಳೆದ ಮೂರು ವರ್ಷಗಳಿಂದಲೂ ಉಚಿತವಾಗಿ ಕೊಡುತ್ತಿದ್ದಾರೆ. ಆದರೆ ನೀವು ಮಾತ್ರ ತಾಸಿಗೆ ೩೦೦-೪೦೦ ರು ವಸೂಲು ಮಾಡುತ್ತಿದ್ದಿರಿ. ಈಗ ಹಾದಿ ಬೀದಿಯಲ್ಲೆಲ್ಲ ಉಚಿತ ವೈ-ಫೈ ನೀಡುವಾಗ, ನಿಮ್ಮ ಹೋಟೆಲ್‌ನಲ್ಲಿ ಈಗ ಉಚಿತ ವೈ-ಫೈ ಸೇವೆ ನೀಡುವುದು ಯಾವ ಘನಂದಾರಿ ಕೆಲಸ ಎಂದು ಹೇಳಿಕೊಳ್ಳುತ್ತೀರಿ? ಕೆಲವು ಏರ್‌ಲೈನ್‌ಗಳು ಸಹ ಈಗ ಉಚಿತ ಆನ್‌ಬೋರ್ಡ್ ವೈ-ಫೈ ಸೇವೆ ನೀಡುತ್ತಿವೆ. ಎಂಟು-ಹತ್ತು ತಾಸಿನ ವಿಮಾನ ಪ್ರಯಾಣದಲ್ಲಿ ಸತತ ಕೆಳಜಗತ್ತಿನೊಂದಿಗೆ ಸಂಪರ್ಕದ–ಲ್ಲಿರಬಹುದು. ಹೀಗಿರುವಾಗ ನಿಮ್ಮದೇನು ಮಹಾ?’ ಎಂದು ಕೇಳಿದೆ.

ಆಕೆಯ ಬಳಿ ಉತ್ತರವಿರಲಿಲ್ಲ. ಇಂದು ವೈ-ಫೈ ಐಷಾರಾಮಿ ಸಂಗತಿಯಲ್ಲ. ಅದು ಮೂಲಭೂತ ಸೌಕರ್ಯ. ಹೋಟೆಲ್‌ನಲ್ಲಿ ಫೋನ್ ಇಲ್ಲದಿದ್ದರೂ ಪರವಾಗಿಲ್ಲ, ವೈ-ಫೈ ಇರಲೇಬೇಕು. ಇಂದು ರೈಲು, ಬಸ್, ಟ್ಯಾಕ್ಸಿಗಳಲ್ಲಿ ಸಹ ವೈ-ಫೈ ಸೌಲಭ್ಯಗಳನ್ನು ನೀಡುತ್ತಿದ್ದಾರೆ. ‘ಚೀನಾದ ಮಹಾಗೋಡೆಯ ಮೇಲೆ ನಿಂತು ‘ಲೈವ್ ರಿಪೋರ್ಟಿಂಗ್’ ಮಾಡಲು ನಮ್ಮ ವೈ-ಫೈ ಸೇವೆ ಬಳಸಿ’ ಎಂದು ಹುವೈ ಟೆಲಿಕಮ್ಯುನಿಕೇಷನ್ ಸಂಸ್ಥೆ ಜಂಭ ಕೊಚ್ಚಿಕೊಳ್ಳುತ್ತದೆ. ಅಂದರೆ ಆ ಜಾಗದಲ್ಲೂ ತಮ್ಮ ವೈ-ಫೈ ಜಾಲ ಕ್ರಿಯಾ–ಶೀಲವಾಗಿದೆ ಎಂಬುದನ್ನು ಸೂಚ್ಯವಾಗಿ ಹೇಳುವುದು ಅದರ ಉದ್ದೇಶ. ನಾಳೆ ಹಿಮಾಲಯ ಪರ್ವತವನ್ನೇರಿದ ಪರ್ವತಾರೋಹಿ ಅಲ್ಲಿ ತನ್ನ ಮೊಬೈಲ್‌ನಿಂದ ಸೆಲ್ಫಿ ತೆಗೆದು, ವೈ-ಫೈಯಿಂದ ಫೇಸ್‌ಬುಕ್‌ಗೋ, ಟ್ವಿಟರ್‌ಗೋ, ವ್ಯಾಟ್ಸ್‌ಆ್ಯಪ್‌ಗೋ ಅಪ್‌ಲೋಡ್ ಮಾಡಿದರೆ ಅಚ್ಚರಿಪಡಬೇಕಿಲ್ಲ. ‘ಇಷ್ಟು ದಿನವಾದರೂ ನೀವೇಕೆ ಉಚಿತ ವೈ-ಫೈ ಕೊಡಲಿಲ್ಲ? ಇಷ್ಟು ದಿನ ನೀವು ಗ್ರಾಹಕರಿಂದ ವೈ-ಫೈಗಾಗಿ ಹಣ ಕಿತ್ತಿದ್ದು ಅಪರಾಧವಲ್ಲವೇ?’ ಎಂದು ಗ್ರಾಹ–ಕರು ಪ್ರಶ್ನಿಸಲು ಸಂಕೋಚಪಟ್ಟುಕೊಳ್ಳಬಾರದು. ನಮ್ಮ ಐಟಿ ಸಚಿವರಾದ ಎಸ್.ಆರ್. ಪಾಟೀಲರು ಬಾಗಲಕೋಟ ನಗರದಲ್ಲಿ ವೈ-ಫೈ ಜಾಲ ನೀಡಲು ಮುಂದಾಗಿರುವಾಗ ತಾಜ್ ಹೋಟೆಲ್‌ನ ಈ ಕ್ರಮ ಅವರ ಮನೋಭಾವವನ್ನಷ್ಟೇ ತೋರಿಸುತ್ತದೆ.

*****

ಸಮೀಪ ಮಾಪಕ

ಸ್ನೇಹಿತರಾದ ಎಂ.ಪಿ. ಕುಮಾರ್ ಅವರು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭೇಟಿಯಾದಾಗ, ‘ನಮ್ಮ ಕಚೇರಿಯನ್ನು ನಿಮ್ಮ ಮನೆಗೆ ಹತ್ತಿರದಲ್ಲಿಯೇ ಇರುವ ಗ್ಲೋಬಲ್ ವಿಲೇಜ್‌ಗೆ ಸ್ಥಳಾಂತರಿಸಿದ್ದೇನೆ’ ಎಂದು ಹೇಳಿದರು. ಅದಕ್ಕೆ ಜತೆಯಲ್ಲಿಯೇ ಇದ್ದ ಮತ್ತೊಬ್ಬ ಸ್ನೇಹಿತರು ‘ಹಾಗಾದರೆ ನಿಮ್ಮ ಮನೆಗೆ ಬಹಳ ಹತ್ತಿರವಾ?’ ಎಂದು ಪ್ರಶ್ನಿಸಿದರು. ಅದಕ್ಕೆ ನಾನು ಹೇಳಿದೆ- ‘ಹೌದು, ನಾವು ಎಷ್ಟು ಹತ್ತಿರದಲ್ಲಿದ್ದೇವೆ ಅಂದ್ರೆ ಅವರ ಆಫೀಸಿನಲ್ಲಿ ವೈ-ಫೈ ಆನ್ ಮಾಡಿದರೆ ನಮ್ಮ ಮನೆಯ ತನಕ ಸಿಗ್ನಲ್ ಬರುತ್ತದೆ.’

*****

‘ಗೇ’ ಬಗ್ಗೆ ಅಭಿಪ್ರಾಯ

ಆ್ಯಪಲ್ ಮುಖ್ಯಸ್ಥ ಟಿಮ್ ಕುಕ್ ತಾವು ‘ಗೇ’ (ಸಲಿಂಗಿ) ಎಂದು ಘೋಷಿಸಿಕೊಂಡ ಬಳಿಕ ಅಮೆರಿಕದಲ್ಲಿ ಹಲವರು ತಾವು ಕೆಲಸ ಮಾಡುವ ಆಫೀಸುಗಳಲ್ಲಿ ತಾವೂ ‘ಗೇ’ ಎಂದು ಮುಕ್ತವಾಗಿ ಹೇಳಿಕೊಳ್ಳುತ್ತಿದ್ದಾರಂತೆ. ಇದನ್ನು ಕೇಳಿದ ಯೋಗಿ ದುರ್ಲಭಜೀ – ‘ಭಟ್ಟರೇ,‘ಗೇ’ಗಳ ಬಗ್ಗೆ ನಿಮ್ಮ ಅಭಿಪ್ರಾಯವೇನು?’ ಎಂದು ಕೇಳಿದರು. ಅದಕ್ಕೆ ನಾನು ಹೇಳಿದೆ- ‘ಆ ಬಗ್ಗೆ ನನ್ನ ಅಭಿಪ್ರಾಯ–ವೇನೂ ಇಲ್ಲ. ಆದರೆ ಈ ಅಂಕಣದ ಹೆಸರು (ನಂ‘ಗೇ’ ಇಷ್ಟಾನೋ) ನೋಡಿ ಕೆಲವರು ತಪ್ಪು ಭಾವಿಸುವ ಸಾಧ್ಯತೆಯಿದೆ.’

*****

ಒಂದು ವರ್ಷದ ಬಳಿಕ

‘ಈ ಜೋಕನ್ನು ಗಂಗಾವತಿ ಬೀಚಿ ಅವರ ಬಾಯಿಂದ ಕೇಳುವ ಆಸೆ. ಅವರಿಗೆ ತಲುಪಿಸಿ’ ಎಂದು ತವರಕೆರೆಯ ಚಂದ್ರಣ್ಣ ವಾಟ್ಸ್‌ಆ್ಯಪ್ ಮಾಡಿದ್ದಾರೆ. ಕೋಲ್ಯನ ಹತ್ತಿರ ೩೫೦ ಸಿಸಿ ಬುಲೆಟ್ ಇತ್ತು. ಆದರೆ ತನ್ನ ಗರ್ಲ್ ಫ್ರೆಂಡಳನ್ನು ಅದರ ಮೇಲೆ ಕುಳ್ಳಿರಿಸಿಕೊಂಡು ಹೋಗಲು ಆಗುತ್ತಿರಲಿಲ್ಲ. ಕಾರಣ ಬುಲೆಟ್ ಬೈಕಿನ ಸದ್ದು. ಹೀಗಾಗಿ ಆತ ಬುಲೆಟ್ ಬೈಕ್ ಮಾರಾಟ ಮಾಡಿ ಪಲ್ಸರ್ ೧೦೦ ಸಿಸಿ ಬೈಕ್ ಖರೀದಿಸಿದ. ಕೆಲದಿನಗಳ ನಂತರ ಅದೇ ಹುಡುಗಿಯ ಜತೆ ಕೋಲ್ಯನ ಮದುವೆಯಾಯಿತು. ಒಂದು ವರ್ಷದ ಬಳಿಕ, ಕೋಲ್ಯ ಬುಲೆಟ್ ೫೦೦ ಸಿಸಿ ಬೈಕನ್ನು ಖರೀದಿಸಲು ನಿರ್ಧರಿಸಿದ.

*****

ಮಾರ್ಕ್‌ನ ಟೀಶರ್ಟ್

ಫೇಸ್‌ಬುಕ್‌ನಂತೆ ಅದರ ಸಂಸ್ಥಾಪಕ, ಮುಖ್ಯಸ್ಥ ಮಾರ್ಕ್ ಝಕರ್‌ಬರ್ಗ್ ಸಹ ಪರಿಚಿತ. ಆದರೆ ಎಷ್ಟು ಜನ ಅವನು ಧರಿಸುವ ಶರ್ಟ್‌ನ್ನು ಗಮನವಿಟ್ಟು ನೋಡಿದ್ದಾರೋ ಗೊತ್ತಿಲ್ಲ. ಫೇಸ್‌ಬುಕ್ ಮೂಲಕ ಜಗತ್ತಿನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಮುಂದಿನ ಸಾಲಿನಲ್ಲಿ ಜಾಗ ಪಡೆದಿರುವ ಝಕರ್‌ಬರ್ಗ್‌ನಿಗೆ ಧರಿಸಲು ಅಂಗಿಯೇ ಇಲ್ಲವೇನೋ ಎಂಬಂತೆ ಸದಾ ಬೂದು ಬಣ್ಣದ ಟೀ ಶರ್ಟ್‌ನಲ್ಲಿಯೇ ಕಂಗೊಳಿಸುತ್ತಾನೆ. ಇತ್ತೀಚೆಗೆ ಸ್ಪೇನಿನ ಬಾರ್ಸಿಲೊನಾದಲ್ಲಿ ನಡೆದ ವಿಶ್ವ ಮೊಬೈಲ್ ಸಮಾವೇಶದಲ್ಲಿ ಭಾಗವಹಿಸಿದ್ದ ಝಕರ್‌ಬರ್ಗ್‌ಗೆ ಕೇಳಿದರು- ‘ನೀವು ಸದಾ ಒಂದೇ ಬಣ್ಣದ ಟೀ-ಶರ್ಟ್‌ನ್ನು ಮಾತ್ರ ಧರಿಸುತ್ತೀರಲ್ಲ ಕಾರಣವೇನು?’

ಇಂಥ ಸೂಕ್ಷ್ಮ ಸಂಗತಿಗಳನ್ನೆಲ್ಲ ಜನ ಗಮನಿಸುತ್ತಾರಲ್ಲ ಎಂದು ಝಕರ್‌ಬರ್ಗ್‌ಗೆ ಅಚ್ಚರಿ–ಯಾಯಿತು. ಅದಕ್ಕೆ ಆತ ಹೇಳಿದ್ದು-‘ಪ್ರತಿ ದಿನ ಬೆಳಗ್ಗೆ ಎದ್ದ ಕೂಡಲೇ ಫೇಸ್‌ಬುಕ್ ಬಳಸುವ ನೂರು ಕೋಟಿಗೂ ಮಿಕ್ಕ ಜನ ನನ್ನ ಕಣ್ಮುಂದೆ ಬರುತ್ತಾರೆ. ಇಂದು ನಾನು ಯಾವ ಶರ್ಟ್ ಧರಿಸಬೇಕು, ಅದು ಯಾವ ಬಣ್ಣದ್ದಿರಬೇಕು, ಯಾವ ಸ್ಟೈಲಿನದಿರಬೇಕು…ಇವೇ ಮುಂತಾದ ಸಂಗತಿಗಳು ನನ್ನ ಮನಸ್ಸಿನಲ್ಲಿ ಮಹತ್ವ ಪಡೆದು, ಸಮಯ ವ್ಯಯವಾಗಬಾರದೆಂದು ಒಂದೇ ಬಣ್ಣದ, ಒಂದೇ ರೀತಿಯ ಟೀಶರ್ಟ್‌ನ್ನು ಧರಿಸುತ್ತೇನೆ. ಇದರಿಂದ ನನಗೆ ಆಗಿದ್ದರೆ ಲಾಭವೇ ಹೊರತು ನಷ್ಟವಂತೂ ಆಗಿಲ್ಲ.’

*****

ರವಾಂಡದಲ್ಲಿ ಹಣ ಹೂಡಬೇಕು, ಏಕೆ?

ಮೊನ್ನೆ ರವಾಂಡ ರಾಷ್ಟ್ರಾಧ್ಯಕ್ಷರಾದ ಪಾಲ್ ಕಗಾಮೆ ಅವರು ದಿಲ್ಲಿಗೆ ಬಂದಿದ್ದರು. ವಿಶ್ವ ಆರ್ಥಿಕ ಸಮಾವೇಶದಲ್ಲಿ ಪಾಲ್ಗೊಳ್ಳಲು ಬಂದ ಅವಕಾಶವನ್ನು ಕಗಾಮೆಯವರು ಬಂಡವಾಳ ಆಕರ್ಷಿ–ಸುವು–ದಕ್ಕಾಗಿ ಬಳಸಿಕೊಂಡರು. ಭಾರತದ ಉದ್ದಿಮೆಯಲ್ಲಿ ಮುಂಚೂ–ಣಿ–ಯಲ್ಲಿರುವ ಇಪ್ಪತ್ತು ಪ್ರಮುಖ ಕೈಗಾರಿಕೋದ್ಯಮಿಗಳ ಸಮ್ಮುಖದಲ್ಲಿ ತಮ್ಮ ದೇಶವನ್ನು ಪರಿಣಾಮಕಾರಿಯಾಗಿ ಷೋಕೇಸ್ ಮಾಡುವ ಉದ್ದೇಶ ಅವರದಾಗಿತ್ತು. ಒಬ್ಬ ರಾಷ್ಟ್ರಾಧ್ಯಕ್ಷ ತನ್ನ ದೇಶವನ್ನು ಹೇಗೆ ಮಾರ್ಕೆಟ್ ಮಾಡಬಹುದು ಎಂಬ ಕುತೂಹಲ ಎಲ್ಲರಲ್ಲಿಯೂ ಇತ್ತು. ಆದರೆ ಅವರು ರವಾಂಡದ ಬಗ್ಗೆ ಹೇಳಿದ ಸಂಗತಿ–ಗಳನ್ನು ಕೇಳಿ ಭಾರತದ ಉದ್ದಿಮೆದಾರರು ಒಂದು ಕ್ಷಣ ಮೂಗಿನ ಮೇಲೆ ಬೆರಳಿಟ್ಟರು. ಕಗಾಮೆ ಹೇಳಿದ ಕೆಲವು ಅಂಶಗಳು.

– ರವಾಂಡದಲ್ಲಿ ಲಂಚ ಎಂಬ ಹೆಸರೇ ಇಲ್ಲ. ನೂರಕ್ಕೆ ನೂರು ಪಾರದರ್ಶಕ ಆಡಳಿತ. ಕೆಂಪುಪಟ್ಟಿ ಕಾಟ ಇಲ್ಲವೇ ಇಲ್ಲ.

– ಸಿಂಗಾಪುರ ದೇಶ ನನ್ನ ಆದರ್ಶ. ರವಾಂಡವನ್ನೂ ಆಫ್ರಿಕಾದ ಸಿಂಗಾಪುರ ಮಾಡುತ್ತೇನೆ.

– ಇಡೀ ದೇಶದಲ್ಲಿ ಪ್ಲಾಸ್ಟಿಕ್ ನಿಷೇಧಿಸಿದ್ದೇವೆ. ‘ಸ್ವಚ್ಛ ರವಾಂಡ’ ಎಲ್ಲೆಡೆಯೂ ಕಂಗೊಳಿಸುತ್ತಿದೆ. ಮಾಲಿನ್ಯಕ್ಕೆ ಆಸ್ಪದವೇ ಇಲ್ಲ.

– ಆಫ್ರಿಕಾ ಖಂಡದಲ್ಲಿಯೇ ನಮ್ಮದು ಅತ್ಯಂತ ಸುರಕ್ಷಿತ ದೇಶ. ಮಹಿಳೆಯರಿಗಂತೂ ಜಗತ್ತಿನಲ್ಲಿಯೇ ಎರಡನೆಯ ಅತ್ಯಂತ ಸುರಕ್ಷಿತ ದೇಶ. ಗ್ಯಾಲಪ್ ವರದಿ ಪ್ರಕಾರ, ಮಹಿಳೆಯರು ಏಕಾಂಗಿಯಾಗಿ ಓಡಾಡಬಹುದು.

– ಹಣ ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ತಂದರೆ, ಆರು ತಾಸಿನೊಳಗೆ ರವಾಂಡದಲ್ಲಿ ಬಿಜಿನೆಸ್‌ನ್ನು ಆರಂಭಿಸಬಹುದು. ನಮ್ಮ ಅಧಿಕಾರಿಗಳೇ ನಿಮ್ಮ ಬಿಜಿನೆಸ್‌ಗೆ ನೆರವಾಗುತ್ತಾರೆ.

– ೨೦೧೪ರ ವಿಶ್ವ ಬ್ಯಾಂಕ್ ವರದಿ ಪ್ರಕಾರ, ೧೮೯ ದೇಶಗಳ ಪೈಕಿ ಬಿಜಿನೆಸ್‌ಗೆ ಅನುಕೂಲಕರ ವಾತಾವರಣವುಳ್ಳ ದೇಶಗಳ ಸಾಲಿನಲ್ಲಿ ರವಾಂಡ ಸ್ಥಾನ ೩೨. (ಭಾರತದ ಸ್ಥಾನ ೧೨೮).

– ಜಗತ್ತಿನಲ್ಲಿ ಸುಲಭವಾಗಿ ಆಸ್ತಿ ಖರೀದಿಸಬಹುದಾದ ದೇಶಗಳಲ್ಲಿ ರವಾಂಡಕ್ಕೆ ಎಂಟನೆ ಸ್ಥಾನ.

– ರಾಜಕೀಯ ಸ್ಥಿರತೆ ಪ್ಲಸ್ ಪಾಯಿಂಟ್. ಸ್ಪರ್ಧಾತ್ಮಕ ದರದಲ್ಲಿ ಸಿಗುವ ಸಿಬ್ಬಂದಿ, ಉತ್ತಮ ವಾತಾವರಣ.

– ಶುದ್ಧ ವಾಸಸ್ಥಳ ಎಂಬ ವರ್ಗದಲ್ಲಿ ರವಾಂಡಕ್ಕೆ ವಿಶ್ವದಲ್ಲಿ ಎಂಟನೆ ಸ್ಥಾನ.

ಇದನ್ನು ಕೇಳಿದ ಭಾರತದ ಉದ್ದಿಮೆದಾರರೊಬ್ಬರು ಸಣ್ಣ ದನಿಯಲ್ಲಿ ಪ್ರತಿಕ್ರಿಯಿಸಿದ್ದು- ‘ಹೀಗೆಲ್ಲ ಹೇಳಿದರೆ ಬಿಜಿನೆಸ್ ಮಾಡು–ವುದಾದರೂ ಹೇಗೆ? ನಾವು ಕಲಿತಿದ್ದೆಲ್ಲ ಅಲ್ಲಿ ಪ್ರಯೋಜನಕ್ಕೆ ಬರುವುದಿಲ್ಲ ಎಂದಂತಾಯಿತು. ಅಲ್ಲಿ ಹೋಗಿ ಹೊಸತಾಗಿ ಕಲಿ–ಯ–ಬೇಕು. ಗೊತ್ತಿರಲಿ, ಭಾರತದಲ್ಲಿ ಬಿಜಿನೆಸ್ ಮಾಡಿದವರು ಈ ಜಗತ್ತಿನಲ್ಲಿ ಮಾತ್ರ ಅಲ್ಲ, ಮಂಗಳ ಲೋಕದಲ್ಲೂ ಮಾಡಬಲ್ಲರು.’

ರವಾಂಡದಲ್ಲಿ ಬಿಜಿನೆಸ್ ಆರಂಭಿಸಿದ ಉದ್ದಿಮೆದಾರರೊಬ್ಬರು ಹೇಳಿದರು- ‘ನಾನು ಅಲ್ಲಿಗೆ ಹೋಗುವಾಗ ಒಂದು ಸೂಟ್‌ಕೇಸನ್ನಷ್ಟೇ ತೆಗೆದುಕೊಂಡು ಹೋಗಿದ್ದೆ. ನಾಲ್ಕು ತಾಸಿನೊಳಗೆ ಆಫೀಸು ತೆರೆದೆ. ಕಳೆದ ಎರಡು ವರ್ಷಗಳಲ್ಲಿ ಮುನ್ನೂರು ಕೋಟಿ ರು. ವಹಿವಾಟು ಮಾಡಿದ್ದೇನೆ. ೧೮೦ ಮಂದಿ ನನ್ನ ಜತೆ ಕೆಲಸ ಮಾಡುತ್ತಿದ್ದಾರೆ.’

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.