ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

ಮೂರು ಬಜೆಟ್, ಮುನ್ನೂರು ಶೀರ್ಷಿಕೆಗಳು !

ಇದು ಯಾರಿಗೂ ತಿಳಿಸದೇ ಮಾಡಿದ ಪ್ರಯೋಗ !

ಆದರೆ ಮೂಡಿ ಬಂದ ಪ್ರತಿಕ್ರಿಯೆ ಮಾತ್ರ ನಿಜಕ್ಕೂ ಅಚ್ಚರಿದಾಯಕ. ಅದೂ ಕೆಲವೇ ಕೆಲವು ಗಂಟೆಗಳಲ್ಲಿ ಓದುಗರು ವ್ಯಕ್ತಪಡಿಸಿದ ರೀತಿ ನನ್ನಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.

ರಾಜ್ಯ, ರೈಲ್ವೆ ಮತ್ತು ಕೇಂದ್ರ ಬಜೆಟ್ ಗೆ ಸುಮಾರು ಮುನ್ನೂರಕ್ಕೂ ಹೆಚ್ಚು ಮಂದಿ ಶೀರ್ಷಿಕೆಗಳನ್ನು ಸೂಚಿಸಿದ್ದಾರೆ. ಕೆಲವರು ಒಂದಕ್ಕಿಂತ ಹೆಚ್ಚು ಮತ್ತು ಇನ್ನು ಕೆಲವರು ಐದಕ್ಕೂ ಹೆಚ್ಚು ಶೀರ್ಷಿಕೆಗಳನ್ನು ಕಳಿಸಿದ್ದಾರೆ. ಈ ಮೂರು ಸಂದರ್ಭಗಳಿಂದ ಮುನ್ನೂರಕ್ಕೂ ಹೆಚ್ಚು ಹೆಡ್ ಲೈನ್ ಗಳು ಹರಿದು ಬಂದಿರುವುದು ಗಮನಾರ್ಹ.

ಇಲ್ಲಿ ಹೆಡ್ ಲೈನ್ ಕಳಿಸಿಕೊಟ್ಟವರ್ಯಾರೂ ಪೂರ್ಣಾವಧಿ ಪತ್ರಕರ್ತರಲ್ಲ. ಹವ್ಯಾಸಿ ಪತ್ರಕರ್ತರಿದ್ದಿರಬಹುದು. ಆದರೆ ಬಹುತೇಕರು ಓದುಗರು, ಪತ್ರಿಕೆಗಳಲ್ಲಿ ಆಸಕ್ತಿಯಿರುವವರು. ಅಂದರೆ ಉತ್ತಮ ಓದುಗರು. ಕೆಲವರು ನೀಡಿದ ಹೆಡ್ ಲೈನ್ ವೃತ್ತಿಪರ ಪತ್ರಕರ್ತರು ನೀಡುವ ಶೀರ್ಷಿಕೆಗಳ ಹಾಗೆ ಆಕರ್ಷಕವಾಗಿದ್ದವು. ಆ ಪೈಕಿ ಎರಡನ್ನು ‘ಕನ್ನಡಪ್ರಭ’ದಲ್ಲಿ ಲೀಡ್ ಹೆಡ್ ಲೈನ್ ಆಗಿ ಬಳಸಿದ್ದನ್ನು ನೀವು ಗಮನಿಸಿದ್ದೀರಿ.

ಇದು ಹೊಸ ಪ್ರಯೋಗ. ಓದುಗರನ್ನು ಶೀರ್ಷಿಕೆ ಬರೆಯಲು ಹಚ್ಚಿ ಅದನ್ನು ಪತ್ರಿಕೆಯಲ್ಲಿ ಬಳಸಿಕೊಂಡಿದ್ದು ಕನ್ನಡದ ಮಟ್ಟಿಗಂತೂ ಹೊಸತು.

ಈ ಪ್ರಯೋಗ ಜಾರಿಯಲ್ಲಿ ಇರುತ್ತದೆ. ನೀವು ಜತೆಯಲ್ಲಿರುತ್ತೀರಿ.

ಥ್ಯಾಂಕ್ಯು.

13 Comments

 1. ಹೊಸತನದ ಹರಿಕಾರರು VB and Team 🙂

 2. good idea

 3. Thumbaa santhosha, majaavaagirutthe.! Gokaka’da ‘karadantu’ kendra sarakaarada ‘budjet’ vivarisutthe andre uhisi undu shabdha’da hosa saadhyathegalanna..!

 4. We are really in more expectation from you sir. Please keep going..

 5. Sadaa prakashisali nimma prathibhe..

 6. This is VB style…!!!!!:):)

 7. very good idea, because of this only your team always special to us……………….

 8. Patrikeya puta vinyasadalli badalavane kanalu katuranagiddene…

 9. ಪ್ರಿಯರೇ,

  ನನ್ನ ಶೀರ್ಷಿಕೆ – “ಎಲ್ಲರಿಗೂ ಉಂಟು ‘ಕರ’ದಂಟು” ನಿನ್ನೆಯ ಕನ್ನಡ ಪ್ರಭದ ಮುಖ್ಯ ಶೀರ್ಷಿಕೆಯಾಗಿ ಬಳಸಿಕೊಂಡಿದ್ದಕ್ಕೆ ಧನ್ಯವಾದಗಳು.
  ಕನ್ನಡ ಪ್ರಭಕ್ಕೆ ಜೈ ಹೋ….!!!

  ಇಂತಿ,
  ರವಿ ಸಜಂಗದ್ದೆ
  ranaasa@gmail.com

 10. Sir ..VB andre Very Brilliant (Bhatt Sir) antha ..

 11. ‎”ವಿಶ್ವ” ವಿನೂತನ…”ಪ್ರತಾಪ” ಚೇತನ ಕನ್ನಡ ಪ್ರಭ ಪತ್ರಿಕೆಯನ್ನುಸರ್ವ ಹೃದಯ ಸಂಸ್ಕಾರಿಯನ್ನಾಗಿಸುವುದರಲ್ಲಿ ಸಂಶಯವಿಲ್ಲ!

  The Next No.1 Kannada Daily is KP!

 12. ವಿನೂತನ ಹಾಗೂ ವಿಶಿಷ್ಟ ಪ್ರಯೋಗಗಳನ್ನು ಕನ್ನಡದ ಓದುಗರು ಸದಾ ಬೆಂಬಲಿಸುತ್ತಾರೆ. ಓರ್ವ ಓದುಗನಾಗಿ ನಿಮ್ಮ ಪ್ರಯೋಗ ನನಗೆ ತುಂಬಾ ಹಿಡಿಸಿತು. ನನ್ನ ಮೂರು ಶೀರ್ಷಿಕೆಗಳು ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾಗಿದ್ದು ತುಂಬಾ ಖುಷಿಯಾಯಿತು.

  ವಿಜಯ್ ಹೆರಗು

 13. ವಿಶ್ವೇಶ್ವರ ಭಟ್ಟರಿಗೆ ಮತ್ತು ಕನ್ನಡ ಪ್ರಭ ತ೦ಡಕ್ಕೆ ಧನ್ಯವಾದಗಳು. ನಾನು ಕೊಟ್ಟ ಶಿರ್ಷಿಕೆಯೂ ಎರಡು ಬಾರಿ ಕನ್ನಡ ಪ್ರಭದಲ್ಲಿ ಮುದ್ರಣಗೊ೦ಡು ಹೆಮ್ಮೆ ಮೂಡಿಸಿತು.

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.