ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

‘ಸಖಿ’ ಪತ್ರಿಕೆಯಲ್ಲಿ ನನ್ನ ಹೊಸ ಅಂಕಣ ‘ಆಪ್ತಕಾಲ’ ಆರಂಭ!

ನಿಮಗೆ ಗೊತ್ತಿರಬಹುದು, ‘ಸಖಿ’ ನಮ್ಮ ‘ಕನ್ನಡಪ್ರಭ’ ಪತ್ರಿಕಾ ಬಳಗದ ಪಾಕ್ಷಿಕ. ಈಗ ನಾನು ‘ಸಖಿ’ಗೆ ಹೊಸ ಅಂಕಣ ಬರೆಯಲಾರಂಭಿಸಿದ್ದೇನೆ. ಅದರ ಹೆಸರು – ಆಪ್ತಕಾಲ. ಓದುಗರು ಕೇಳುವ ವೈಯಕ್ತಿಕ ಸಮಸ್ಯೆ ರೂಪದ ಪ್ರಶ್ನೆಗಳಿಗೆ ಹಿತ ನೀಡುವ, ಸಾಂತ್ವನ ಕೊಡುವ ಉತ್ತರಗಳಿರುತ್ತವೆ.

** ** ** ** **

ಸಂಶಯ ನಿನ್ನೊಂದಿಗೆ flirt  ಮಾಡುತ್ತಿದೆ…
 
ಕಣ್ರೆಪ್ಪೆಯೂ ಒಂಟಿಯಲ್ಲ. ಅಳು ಬಂದರೆ ಪಕ್ಕದ ರೆಪ್ಪೆ ತೋಯುತ್ತದೆ. ಸೌಂದರ್ಯ ಎದುರಾದರೆ ಒಟ್ಟೊಟ್ಟಿಗೆ ಕಣ್ಣು ಮಿಟುಕಿಸುತ್ತದೆ. ನಾವೂ ಕಣ್ರೆಪ್ಪೆಗಳೇ. ನಗುವಿಗೆ ನಮ್ಮಲ್ಲಿ ನಾನಾ ಜಾಗ. ಅಳುವಿಗಿಲ್ಲವೆ ಸಾಂತ್ವನದ ಯೋಗ ಎಂಬ ದಿಗಿಲೇಕೆ? ನಿಮ್ಮ ನೋವಿನ ಹನಿಯಷ್ಟು ಕಣ್ಣೀರಿಗೆ, ನಮ್ಮಲ್ಲಿದೆ ಬೊಗಸೆಯಷ್ಟು ಪರಿಹಾರ. ಅದು ಸಂಕಷ್ಟವಿರಬಹುದು, ಸಂದಿಗ್ಧವಾಗಿರಬಹುದು, ಸಂಕೀರ್ಣ ಸಂಗತಿಗಳ ಮುಖಾಮುಖಿಯಾಗಿರಬಹುದು, ಸಮಸ್ಯೆ- ಸವಾಲು… ಹೀಗೆ ಬದುಕಿನ ಹಲವು ಮಜಲುಗಳನ್ನು ಹಂಚಿಕೊಳ್ಳಲು ನಿಮಗೊಂದು ಆಪ್ತ ಹೃದಯ ಅಗತ್ಯ. ಅದು ನಮಗೆ ಗೊತ್ತು. ಇದೇ “ಸಖಿ’ಯ “ಆಪ್ತಕಾಲ’ ಮತ್ತು ಆಪ್ತ ಕಾಲಂ… ತುಸು ಸಾಂತ್ವನದ ತುಂತುರುವಿನೊಂದಿಗೆ…

*** 
ಪ್ರಿಯ ಸಂಪಾದಕರೇ,
ನನಗೆ ಇಪ್ಪತ್ತೇಳು ವರ್ಷ ವಯಸ್ಸು. ನನ್ನೆಲ್ಲ ಸ್ನೇಹಿತೆಯರಿಗೆ ಮದುವೆಯಾಗಿದೆ. ಆದರೆ ನಾನೊಬ್ಬಳೇ ಸಿಂಗಲ್. ನನ್ನ ಅಪ್ಪ-ಅಮ್ಮ ಸಹ ನನಗೆ ಹುಡುಗನನ್ನು ನೋಡುತ್ತಿದ್ದಾರೆ. ಸಣ್ಣ ಪುಟ್ಟ ಕಾರಣಗಳಿಂದ ಮದುವೆ ನೆರವೇರುತ್ತಿಲ್ಲ. ನಾನು ಓದಿನಲ್ಲಿ, ರೂಪದಲ್ಲಿ ಚೆನ್ನಾಗಿದ್ದೇನೆ. ನನಗೆ ಆಗಾಗ ಒಬ್ಬಂಟಿತನ ಕಾಡುತ್ತದೆ. ಪ್ಲೀಸ್ ಹೆಲ್ಪ್ ಮಿ.
-ರೂಪಿಣಿ, ಕೋರಮಂಗಲ, ಬೆಂಗಳೂರು.
 
ನೀನು ಜೀವನದಲ್ಲಿ ಏನೇನನ್ನೂ ಕಳೆದುಕೊಂಡಿಲ್ಲ ಎಂಬುದನ್ನು ಮೊದಲು ಅರ್ಥ ಮಾಡಿಕೋ. “ಮದುವೆಯಾದ ನಿನ್ನ ಸ್ನೇಹಿತೆಯರೆಲ್ಲ ಖುಷಿಯಿಂದ ಇದ್ದಾರೆ, ನೀನು ಮಾತ್ರ ಸಂತೋಷದಿಂದ ಇಲ್ಲ’ ಎಂದು ಭಾವಿಸಬೇಡ. ಮದುವೆಯಾಗಿರುವ ನಿನ್ನ ಸ್ನೇಹಿತೆಯರು ನಿನ್ನ ನೋಡಿ, “ರೂಪಿಣಿಯೇ ವಾಸಿ. ಮದುವೆಯಾಗದೇ ಸಂತಸದಿಂದ ಇದ್ದಾಳೆ. ನಾವು ಮದ್ವೆಯಾಗಿ ತಪ್ಪು ಮಾಡಿಬಿಟ್ಟೆವು’ ಎಂದು ಅಂದುಕೊಳ್ಳುತ್ತಿರಬಹುದೆಂಬುದನ್ನು ಮರೆಯಬೇಡ. ಮದುವೆಯ ನಂತರದ ಜೀವನವನ್ನು ಯೋಚಿಸಿ, ಅನೇಕ ಹೆಂಗಸರು ಸಿಂಗಲ್ ಆಗಿರುವುದನ್ನು ಇಷ್ಟಪಡುತ್ತಾರೆ. ಜೀವನವನ್ನು ಅರ್ಥಪೂರ್ಣವಾಗಿ ಕಳೆಯಲು ಹಲವಾರು ಮಾರ್ಗಗಳಿವೆ. ಮನೆಯಲ್ಲಿ ಒಂಟಿಯಾಗಿ ಸೋಷಿಯಲ್ ನೆಟ್ ವರ್ಕ್ ಮೂಲಕ ನೂರಾರು ಸಮಾನ ಮನಸ್ಕರ ಜತೆ ಗೆಳೆತನ ಸಾಧಿಸಬಹುದು. ಒಂದು ಕ್ಷಣವನ್ನೂ ವ್ಯರ್ಥವಾಗಿ ಕಳೆಯದೇ, ಪೂರ್ತಿ ಕಾರ್ಯನಿರತವಾಗಿರಲು ಎಷ್ಟೆಲ್ಲ ಉಪಾಯಗಳಿವೆ! ಬೋರು, ಒಂಟಿತನ… ಇವೆಲ್ಲ ಮನಸ್ಸಿನ ಕ್ಷಣಿಕ ಸ್ಥಿತಿಯೇ ಹೊರತು ಸಮಸ್ಯೆಗಳಲ್ಲ. ಒಂಟಿತನಕ್ಕೆ ಮದುವೆ ಆಗುವುದು ಪರಿಹಾರ ಅಲ್ಲ ಎಂಬುದು ಗೊತ್ತಿರಲಿ. ಬಹಳ ಹುಡುಗಿಯರು ನಿನ್ನ ಹಾಗಿರಲು ಇಷ್ಟಪಡುತ್ತಾರೆ ಗೊತ್ತಾ?
 
***
ಮೂರು ವರ್ಷಗಳಿಂದ ನಾನು ಒಬ್ಬಳನ್ನು ಪ್ರೀತಿಸುತ್ತಿದ್ದೇನೆ. ನಮ್ಮಿಬ್ಬರ ಮಧ್ಯೆ ದೈಹಿಕ ಸಂಬಂಧವೂ ಇದೆ. ನಾಲ್ಕೈದು ತಿಂಗಳುಗಳಿಂದ ನನ್ನಲ್ಲಿ ಅವಳೆಡೆಗಿನ ಆಕರ್ಷಣೆ ಕಡಿಮೆಯಾಗುತ್ತಿದೆ. ನಾನು ಅವಳೊಂದಿಗಿನ ಸ್ನೇಹವನ್ನು ಕಡಿದುಕೊಳ್ಳಲು ಬಯಸುತ್ತಿದ್ದೇನೆ. ನನ್ನ ಮನಸ್ಸಿನ ನಿರ್ಧಾರವನ್ನು ಅವಳಿಗೆ ತಿಳಿಸುವುದು ಹೇಗೆಂದು ತಿಳಿಯದೇ ಒದ್ದಾಡುತ್ತಿದ್ದೇನೆ. ಉಪಾಯವೇನು ?
-ಮೋಹನ್, ಸಿಲ್ವರ್ ಟೌನ್, ಹುಬ್ಬಳ್ಳಿ.
 
ನಾನು ಮಾಡುತ್ತಿರುವುದು ಸರಿಯಲ್ಲ ಎಂಬ ಅಪರಾಧಭಾವ (guilt feeling)ನಿನ್ನನ್ನು ಕಾಡುತ್ತಿರುವುದರಿಂದ ಒದ್ದಾಡುತ್ತಿದ್ದೀಯಾ. ನಿನ್ನ ಮನಸ್ಸು ನೀನು ತಪ್ಪು ಮಾಡುತ್ತಿರುವೆ ಎಂದು ಹೇಳುತ್ತಿದೆ. ಇದಕ್ಕೆ ಬೇರೆಯವರು ಕೇಳಬೇಕಾಗಿಲ್ಲ. ನಿನ್ನ ಮನಸ್ಸು ಹೇಳುವುದನ್ನೇ ಕೇಳು. ಒಂದು ವೇಳೆ ನಿನ್ನನ್ನು ತೊರೆಯಲು ನಿನ್ನ ಗರ್ಲ್ ಫ್ರೆಂಡ್ ಯೋಚಿಸಿದ್ದರೆ, ಆಗ ನಿನಗೇನು ಆಗುತ್ತಿತ್ತು ಹೇಳು? “ಅವಳು ನನಗೆ ಮೋಸ ಮಾಡಿದಳು’ ಎಂದು ನೀನು ದೇವದಾಸನಂತೆ ಹುಚ್ಚನಾಗುತ್ತಿದ್ದೆ ತಾನೆ? ನಿನ್ನ ನಿರ್ಧಾರದಿಂದ ಆಕೆಗೆ ಏನು ಅನಿಸಬಹುದೆಂದು ಯೋಚಿಸಿದ್ದೀಯಾ? ಆಕೆಗೂ ನಿನ್ನೆಡೆ ಆಕರ್ಷಣೆ ಕಡಿಮೆಯಾಗುತ್ತಿದ್ದರೆ, ನೀನು ಸುಲಭವಾಗಿ ಬಚಾವ್ ಆಗಬಹುದು. ಇಬ್ಬರು ನಗುಮೊಗದಿಂದಲೇ ದೂರವಾಗಬಹುದು. ಯಾವುದಕ್ಕೂ ಅವಳೊಂದಿಗೆ ಮಾತಾಡುವ ಮುನ್ನ, ಆಕರ್ಷಣೆಗೆ ಸಂಬಂಧಿಸಿದಂತೆ ಅವಳ ಮನಸ್ಸನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸು. ಅವಳೂ ನಿನ್ನ ಹಾಗೆ ಯೋಚಿಸುತ್ತಿರಬಹುದು. ಆದರೆ ಅವಳು ನಿನ್ನನ್ನು ಅಗಾಧವಾಗಿ ಪ್ರೀತಿಸುತ್ತಿದ್ದರೆ, ನಿನ್ನ ನಿರ್ಧಾರದಿಂದ ಅವಳು ಕಂಗಾಲಾಗಬಹುದು. ಯಾವುದೇ ಸಂಬಂಧ ದೈಹಿಕ ಆಕರ್ಷಣೆಗೆ ಮಾತ್ರ ಸೀಮಿತವಾಗಿರುವುದಿಲ್ಲ. ಅಷ್ಟು ಸುಲಭವಾಗಿ ಕಿತ್ತು ಹಾಕುವಷ್ಟು ದುರ್ಬಲವೂ ಆಗಿರುವುದಿಲ್ಲ. ಯಾವುದಕ್ಕೂ ಅವಳೊಂದಿಗೆ ಮಾತಾಡು.
 
***
ನನಗೆ ನಲವತ್ತೆರಡು ವರ್ಷ. ಮದುವೆಯಾಗಿ ಒಬ್ಬಳು ಮಗಳಿದ್ದಾಳೆ. ಜೀವನವಿಡೀ ಕುಳಿತು ಉಂಡರೂ ಕರಗದಷ್ಟು ಆಸ್ತಿಯಿದೆ. ಹೀಗಾಗಿ ಯಾಕೆ ದುಡಿಯಬೇಕು ಎಂದೆನಿಸಿ ಕೆಲಸ ಬಿಟ್ಟಿದ್ದೇನೆ. ಬದುಕು ಖಾಲಿ ಖಾಲಿ ಎನಿಸುತ್ತಿದೆ. ಏನು ಮಾಡಲಿ ?
-ಸುನಿಲ್, ಬೆಂಗಳೂರು.

ಜೀವನದಲ್ಲಿ ಎಲ್ಲಾ ಇದ್ದು ಕೊರಗುವುದು ಅಂದ್ರೆ ನೀನೇನೇ ಮಾರಾಯ. ನೀನು ನಿನ್ನ ಖಡ್ಠಿಜಟ್ಜಿಝಿ ಅನ್ನು ಢಿಜಛ್ಞಟಿಜಡಡ ಅಂತ ಭಾವಿಸಿದ್ದೀಯಲ್ಲ! ನಿನ್ನಂಥ ಪುಣ್ಯಾತ್ಮರು ಲಕ್ಷದಲ್ಲಿ ಒಬ್ಬರೋ, ಇಬ್ಬರೋ ಇರಬಹುದು. ನಿನಗೆ ಎಲ್ಲವೂ ಇದೆ. ಆದರೂ ಏನೂ ಇಲ್ಲದವರಂತೆ ಕೊರಗುತ್ತಿದ್ದೀಯ. ನಿನ್ನ ಮುಖ್ಯ ಸಮಸ್ಯೆಯಿರುವುದು ವಿಪರೀತ ಹಣವಿದೆಯೆಂದು ಕೆಲಸ ಬಿಟ್ಟಿರುವುದು. ಅದಕ್ಕೆ ಕೆಲಸವಿಲ್ಲದೆ ಖಾಲಿಯಾಗಿದ್ದೀಯಾ. ಅದೇ ನಿನಗೆ ಬದುಕು ಖಾಲಿ ಖಾಲಿ ಎಂದೆನಿಸುತ್ತಿದೆ. ನಿನ್ನ ಹಾಗೆ ಅಂಬಾನಿ, ಮಲ್ಯ ಯೋಚಿಸಿದರೂ, ಅವರಿಗೂ ಹಾಗೇ ಅನಿಸಬಹುದು. ಅವರ ಬಳಿ ನಿನಗಿಂತ ಹೆಚ್ಚು ಹಣವಿದೆ. ನೂರು ಜನ್ಮಕ್ಕಾಗುವಷ್ಟು ಅವರು ಸಂಪಾದಿಸಿದ್ದಾರೆ. ಆದರೂ ಬೆಳಿಗ್ಗೆ ಎದ್ದ ಕೂಡಲೇ ಅವರಿಗೆ ಮಾಡಲು ನೂರಾರು ಕೆಲಸಗಳಿವೆ. ನಾವು ಮಾಡುವ ಕೆಲಸ, ನೆರವೇರಿಸುವ ಕರ್ತವ್ಯ ನಮಗೆ ಕೇವಲ ಹಣವೊಂದನ್ನಷ್ಟೇ ಅಲ್ಲ, ಬದುಕಿಗೆ ಉದ್ದೇಶ, ಅರ್ಥ, ಸಾರ್ಥಕ್ಯವನ್ನು ಕೊಡುತ್ತದೆ. ಇವು ಹಣಕ್ಕಿಂತ ಮಿಗಿಲಾದುದು. ಹಾಗೇ ನೋಡಿದರೆ ಇವುಗಳ ಮುಂದೆ ಹಣವೂ ಗೌಣ. ಬದುಕನ್ನು ಸಾರ್ಥಕಗೊಳಿಸುವ ಹಲವಾರು ಮಾರ್ಗಗಳಿವೆ. ನಿನಗೆ ಸರಿ ಹೊಂದುವ ಮಾರ್ಗವನ್ನು ಕಂಡುಕೋ. ಅದಕ್ಕಿಂತ ಮೊದಲು, ಕೈಗೆ ಕೆಲಸ ಕೊಡು, ಆಗ ಮನಸ್ಸು ಸುಮ್ಮನಿರುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಬದುಕು ಖಾಲಿಖಾಲಿ ಎನಿಸುವುದಿಲ್ಲ.
 
***
ನಾನು ಅವಳನ್ನು ಎಂಟು ತಿಂಗಳಿಂದ ಪ್ರೀತಿಸುತ್ತಿದ್ದೇನೆ. ನನ್ನ ನಿರೀಕ್ಷೆಗಿಂತ ತುಸು ಬೋಲ್ಡ್ ಆದ ಹುಡುಗಿ. ಅವಳ ಬೋಲ್ಡ್ ನೆಸ್ ಇತ್ತಿತ್ತಲಾಗಿ ನನಗೆ ಕಿರಿಕಿರಿಯುಂಟು ಮಾಡುತ್ತಿದೆ. ನನ್ನ ಸ್ನೇಹಿತರನ್ನೆಲ್ಲ ಮೈ ಮುಟ್ಟಿ, ತಬ್ಬಿಕೊಂಡು ಮಾತಾಡಿಸುತ್ತಾಳೆ. ಅವಳು ನನ್ನ ಜತೆ flirt  ಮಾಡುತ್ತಿರಬಹುದಾ? ಬೇರೆಯವರನ್ನೂ ಪ್ರೀತಿಸುತ್ತಿರಬಹುದಾ?
-ಆನಂದ ಕಿಶೋರ, ಮೈಸೂರು.
 
ನೋಡು, ನೋಡು ನೀನು ತಪ್ಪು ಮಾಡ್ತಾ ಇದೀಯಾ. ಅವಳು ನಿನ್ನ ಜತೆ flirt  ಮಾಡುತ್ತಿಲ್ಲ. ನಿನ್ನ ಸಂಶಯ ನಿನ್ನೊಂದಿಗೆ flirt  ಮಾಡುತ್ತಿದೆ. ನಿನ್ನೊಳಗಿನ ಸಂಶಯ ಪಿಶಾಚಿ ನಿನ್ನನ್ನು ಇಂಥ ಯೋಚನೆಗೆ ಹಚ್ಚಿದೆ. ಅವಳ ವರ್ತನೆ ನಿನಗೆ ಬೋಲ್ಡ್ ಎಂದೆನಿಸಬಹುದು. ಅವಳು ಅದನ್ನು ಸಹಜ ಎಂದುಕೊಂಡಿರಬಹುದು. ಇದಕ್ಕೆ ಆಕೆ ಬೆಳೆದು ಬಂದ ಪರಿಸರ, ಮನೆ ವಾತಾವರಣ, ಶಿಕ್ಷಣ, ಪ್ರಭಾವ ಕಾರಣವಾಗಿರುತ್ತದೆ. ಇದನ್ನು ಅವಳ ಸ್ವಭಾವದೊಂದಿಗೆ ಜೋಡಿಸಬಾರದು. ನಿನ್ನ ಸ್ನೇಹಿತರು ಎಂಬ ಕಾರಣಕ್ಕೆ ತುಸು ಸಲುಗೆಯಿಂದ ಹಾಗೆ ವರ್ತಿಸುತ್ತಿರಬಹುದು. ಅಪರಿಚಿತರೊಂದಿಗೆ ಹಾಗೆ ನಡೆದುಕೊಳ್ಳುತ್ತಿಲ್ಲವಲ್ಲ. ನಿನ್ನ ಹಿಂದೆ, ನಿನಗೆ ಗೊತ್ತಿಲ್ಲದಂತೆ, ಅವಳು ನಿನ್ನ ಸ್ನೇಹಿತರೊಂದಿಗೆ ಹಾಗೆ ವರ್ತಿಸುತ್ತಿಲ್ಲ ಎಂಬುದನ್ನು ಗಮನಿಸು. ನಿನ್ನ ಸಮ್ಮುಖದಲ್ಲಿಯೇ ಅವಳು ಆ ರೀತಿ ವರ್ತಿಸುತ್ತಿದ್ದಾಳೆ. ಹೀಗಿರುವಾಗ ಯಾಕೆ ಇಲ್ಲ ಸಲ್ಲದ ಹೊಲಸು ವಿಚಾರಗಳಿಂದ ಕಲ್ಲವಿಲನಾಗಬೇಡ. ಸುಖಾಸುಮ್ಮನೆ ಅವಳನ್ನು ತಪ್ಪು ತಿಳಿದುಕೊಂಡು ಮಧುರ ಸಂಬಂಧದಲ್ಲಿ ನೀನಾಗಿಯೇ ವಿಷ ಬೀಜ ಬಿತ್ತಬೇಡ. ಅವಳಿಗೆ ಗೊತ್ತಾದರೆ ನೀನೆಂಥ ಕ್ಷುಲ್ಲಕ ಮನಸ್ಸಿನವ ಎಂದು ಅಸಹ್ಯಪಟ್ಟುಕೊಳ್ಳಬಹುದು. ಹಾಗೆಂದು “ಭೋಳೆಶಂಕರ’ನಾಗಿಯೂ ಇರಬೇಡ. ನಿನ್ನ ಕಡೆ ಹೆಚ್ಚಾಗಿ ಒಲಿಸಿಕೊಳ್ಳಲು ಪ್ರಯತ್ನಿಸು. ಅವಳ ಬೋಲ್ಡ್ ನೆಸ್ ಗೆ ನಿಮ್ಮ ಸಂಬಂಧ ಕ್ಲೀನ್ ಬೋಲ್ಡ್ ಆಗದಿರಲಿ!
 
***
ನನ್ನ ಮಗಳು ಬಿಎ ಮೊದಲ ವರ್ಷದಲ್ಲಿ ಓದುತ್ತಿದ್ದಾಳೆ. ಯಾಕಾದ್ರೂ ಅವಳಿಗೆ ಮೊಬೈಲ್ ಫೋನ್ ಕೊಡಿಸಿದೆನೋ ಅನಿಸಿಬಿಟ್ಟಿದೆ. ಪ್ರತಿದಿನ ಕನಿಷ್ಠ ನಾಲ್ಕು ತಾಸು ಮಾತಾಡುತ್ತಾಳೆ. ರಾತ್ರಿ ಹನ್ನೆರಡು ಗಂಟೆಗೆಲ್ಲ ಅವಳಿಗೆ ಫೋನ್ ಬರುತ್ತಿರುತ್ತದೆ. ನನಗೆ- ನನ್ನ ಹೆಂಡತಿಗೆ ಚಿಂತೆಯಾಗಿ ನಿದ್ದೆಯಿಲ್ಲದಂತಾಗಿದೆ. ಮನೆಯ ನೆಮ್ಮದಿ ಹಾಳಾಗಿದೆ. ಏನು ಮಾಡಲಿ?
-ಮಹಾಬಲೇಶ್ವರರಾವ್, ಜಯನಗರ, ಬೆಂಗಳೂರು.

ನಿಮ್ಮ ಚಿಂತೆಯನ್ನು ಅರ್ಥೈಸಿಕೊಳ್ಳಬಹುದು. ಇದು ನಿಮ್ಮದೊಂದೇ ಸಮಸ್ಯೆ ಅಲ್ಲ. ನಿಮ್ಮ ಮಗಳಂತೆ ವಯಸ್ಸಿಗೆ ಬಂದ ಹೆಣ್ಣು ಮಕ್ಕಳು ಇರುವ ಎಲ್ಲರ ಮನೆಯ ಸಮಸ್ಯೆಯೂ ಹೌದು. ಹಾಗೆಂದು ಮಗಳ ಫೋನ್ ಕಸಿದುಕೊಳ್ಳುವುದಾಗಲಿ, ಮಾತಾಡುವುದಕ್ಕೆ ಪದೇ ಪದೇ ಆಕ್ಷೇಪ ವ್ಯಕ್ತಪಡಿಸುವುದನ್ನಾಗಲಿ ಮಾಡಬೇಡಿ. ಸ್ನೇಹಿತರೊಂದಿಗೆ ಹೊರಗೆ ಸುತ್ತುವುದಕ್ಕಿಂತ, ಪೋಲಿ ಅಲೆಯುವುದಕ್ಕಿಂತ ಫೋನಿನಲ್ಲಿ ಮಾತಾಡುವುದು ಸುರಕ್ಷಿತ ಎಂಬ ಸಂಗತಿಯೂ ಗೊತ್ತಿರಲಿ. ಅಷ್ಟಕ್ಕೂ ನಿಮ್ಮ ಮಗಳು ಫೋನಿನಲ್ಲಿ ಮಾತಾಡಿದ ಮಾತ್ರಕ್ಕೆ ಭಾಯ್ ಫ್ರೆಂಡ್ ಜತೆಗೇ ಮಾತಾಡುತ್ತಿದ್ದಾಳೆ, ಪೋಲಿ ಹರಟೆ ಹೊಡೆಯುತ್ತಿದ್ದಾಳೆ ಎಂದು ಯೋಚಿಸುವುದೇ ತಪ್ಪು. ಅವಳ ವಯಸ್ಸು, ಅದಕ್ಕೆ ಸಹಜವಾದ ಕಾಮನೆ, ಹುಡುಗಾಟಿಕೆಯನ್ನು ಹಿರಿಯರಾದವರು ಅರ್ಥಮಾಡಿಕೊಳ್ಳಬೇಕು. ಅವಳ ಫೋನ್ ಸಂಭಾಷಣೆ ಮನೆಯಲ್ಲಿ ರಣರಂಗವಾಗುವುದು ಬೇಡ. ಅವಳ ಹೊಣೆಗಾರಿಕೆಯನ್ನು ನೆನಪು ಮಾಡಿಕೊಡಲು ಪ್ರಯತ್ನಿಸಿ. ಅವಳು ಎಷ್ಟೆಂದರೂ ನಮ್ಮ ಮಗಳು, ನಮ್ಮಂಥೇ ಜವಾಬ್ದಾರಿ ಉಳ್ಳವಳು, ಎಂದುಕೊಂಡರೆ ಅರ್ಧ ಸಮಸ್ಯೆ ಕರಗುತ್ತದೆ. ಅಷ್ಟಕ್ಕೂ ಇದು ನಿಮ್ಮ ಸಮಸ್ಯೆಯೇ ಹೊರತು ಅವಳದ್ದಲ್ಲ ಎಂಬುದೂ ಗೊತ್ತಿರಲಿ.
 

13 Comments

  1. ಈ ದಿನ ಅಂದರೆ ಶನಿವಾರ 30/04/2011 ಪುಟ : ೪
    “ಜನಲೋಕಪಾಲ ಕರಡು ಸಮಿತಿ ಪುನಾರಚಿಸಿ” ಎಂಬ ಅಂಕಣದಲ್ಲಿ
    “ಸಂಘ ಪರಿವಾರದ ವಾಸನೆ, ರವಿಶಂಕರ್ ಗುರೂಜಿಯಂತಹ ಜನವಿರೋಧಿಗಳ ಬೆಂಬಲ ಹಜಾರೆಗೆ ಬೇಡ”
    ಎಂದು ಪ್ರಕಟಿಸಲಾಗಿದೆ.

    ಆದರೆ ಸಂಘ ಪರಿವಾರ ಮತ್ತು ರವಿಶಂಕರ್ ಗುರೂಜಿ ಹೇಗೆ ಜನವಿರೋಧಿಗಳು??

  2. Hey what about sakhas’!

  3. namaskara sir…

    tumba chennagi answer madtira….

    dhanyavadagalu……

  4. ಏಪ್ರಿಲ್ ೩೦ರ ಕನ್ನಡ ಪ್ರಭದಲ್ಲಿ ಜನಲೋಕಪಾಲ್ ಮಸೂದೆ ಬಗ್ಗೆ ನಮ್ಮ ಬುದ್ದಿ ಜೀವಿಗಳು ಚರ್ಚಿಸಿದ ವಿಷಯದ ವಿಚಾರ ಓದಿದೆ. ಇದರ ಬಗ್ಗೆ ನನ್ನ ಅಭಿಪ್ರಾಯ ಈ ರೀತಿ.
    ಹೇಗೆ ಒಬ್ಬ ರೈತ ಒಂದು ಬೆಳೆ ಬೆಳೆದರೆ ಅದರ ಪೂರ್ಣ ಅದಿಕಾರ ಅವನಿಗಿದೆಯೋ ಹಾಗೆ ಅಣ್ಣಾ ಹಜಾರೆ ಮತ್ತು ಅವರ ಸಹಚರರು ಉಪವಾಸ ಮಾಡಿ, ಅಂತರ್ಜಾಲ ಮುಖೇನ, ಹಾಗೂ ಮಾದ್ಯಮಗಳ ಸಹಾಯದಿಂದ ಈ ಲೋಕಪಾಲ್ ಮಸೂದೆಗೆ ಪರಿಶ್ರಮಿಸಿದ್ದಾರೆ. ಅವರಿಗೆ ಇದರ ಬಗ್ಗೆ ಸರಿಯಾದ ಯೋಚನೆಗಳಿರುತ್ತವೆ. ನಮ್ಮ ಬುದ್ದಿಜೀವಿಗಳು ಈ ರೈತ ಬೆಳೆದ ಬೆಳೆ ಫಸಲು ಬರುವಲ್ಲಿವರೆಗೆ ಕಾದು ಕುಳಿತುಕೊಳ್ಳುವುದು ಅವರ ವರ್ಚಸ್ಸಿಗೆ ಒಳ್ಳೆಯದು. ಅದು ಬಿಟ್ಟು ಇವರು ಈಗಲೇ ಅದನ್ನು ಕುಲಾನ್ತರಿ ಮಾದುವ ಬಗ್ಗೆ ಯೋಚನೆ ಮಾಡುತ್ತಿರುವುದು ನಿಜವಾಗಿಯೂ ನಮ್ಮ ದುರಾದ್ರುಷ್ಟ್ಟ.
    ಈ ಬುದ್ದಿಜೀವಿಗಳು ನಮ್ಮ ದೇಶದಲ್ಲಿ ಬೇಕಾದಷ್ತ್ಟು ಬೇರೆ ಬೇರೆ ಸಮಸ್ಯೆಗಳಿವೆ ಅದರ ಬಗ್ಗೆ ಅವರಿಗೆ ಸಾಧ್ಯವಾದರೆ ಈ ಅಣ್ಣಾ ಹಜಾರೆ ಮಾಡಿದಂತೆ ಹೋರಾಟ ಮಾಡಲಿ ಆಗ ಅವರಿಗೆ ಬೇಕಾದ ರೀತಿ ಅದನ್ನು ಮಾಡಲಿ ಅದು ಬಿಟ್ಟು ಇನ್ನೂ ಈಗ ತಾನೇ ಬಿತ್ತಿರುವ ಹೊಸ ತಳಿಗೆ ಕುಲಾನ್ತರಿ ಮಾಡ ಹೊರಟಿರುವುದು ನಿಜಕ್ಕುಬೇಸರ ಆಗಿದೆ. ಎಲ್ಲರೂ ಈ ರೀತಿ ಮಾಡಿದರೆ , ಮೊದಲೇ ಯಾರೋ ಬರೆದಂತೆ ಅಣ್ಣಾ ಹಜಾರೆಯವರ ಈ ಆಂದೋಲನವನ್ನು ಯಾರೋ ತನ್ಮ್ಮದಾಗಿಸಿ ತಮಗೆ ಬೇಕಾದಂತೆ ಮಾಡಿ ಸಾಮಾನ್ಯ ಜನರಿಗೆ ನಿಜವಾದ ಫಲ ದೊರೆಯದಂತೆ ಮಾಡುದರಲ್ಲಿ ಸಂಶಯವಿಲ್ಲ.

    -ಆನಂದ ಸುಬ್ರಮಣ್ಯ ನಾರಾವಿ.

  5. ಒಸಾಮ ಬಿನ್‌ ಲಾಡೆನ್‌ ಏನಾದರೂ ಇ0ಡಿಯಾ ದೇಶದಲ್ಲಿ ಸತ್ತಿದ್ದರೆ, ಕೇ0ದ್ರ ಸರಕಾರ 2 ದಿನ ರಜೆ ಘೋಷಿಸುತ್ತಿತ್ತು. For people to pay public homage, ಆ ಶವವನ್ನು ಸಕಲ ಮರ್ಯಾದೆಗಳೊ0ದಿಗೆ ದೇಶ ಪೂರ್ತಿ ಕಳುಹಿಸಲಾಗುತ್ತಿತ್ತು. ಕೊನೆಯಲ್ಲಿ, Taj Mahal ಪಕ್ಕದಲ್ಲಿ ಅವನ ಶವವನ್ನು ಹೂಡಲಾಗುತ್ತಿತ್ತು. ದೊಡ್ಡ Memorial ನಿರ್ಮಿಸಲಾಗುತ್ತಿತ್ತು. UPA Government would send Ministers’ delegations to all muslim countries as goodwill gesture to explain the American atrocity. Devegowda will visit every mosque to explain the RSS & BJP hand. Siddaramiah would demand Yediyurappa to apologise to every muslim.

    Kaiser soze
    heysoze@gmail.com

  6. ಸಖೀ ಪತ್ರಿಕೆಗೆ ತಾವು ಬರೆಯಲು ಪ್ರಾರಂಭ ಮಾಡಿದಂತಹ ಹೊಸ ಅಂಕಣ “ಆಪ್ತ ಕಾಲ ” ಓದಿದೆ. ತುಂಬಾ ಚೆನ್ನಾಗಿತ್ತು. ಅದೆಷ್ಟೋ ಜನ ತಮ್ಮ ವೈಯ್ಯಕ್ತಿಕ ಸಮಸ್ಯೆಗಳನ್ನು ತಮ್ಮ ಪರಿವಾರದವರ ಮುಂದಿಡಲು ಮುಜುಗರಪಡುತ್ತಾರೆ. ಅದಕ್ಕೆ ತಾವು ಒಂದು ಉತ್ತಮ ವೇದಿಕೆಯನ್ನು ಕಲ್ಪಿಸಿ ಕೊಟ್ಟಿದೀರಿ, ತಮ್ಮ ಬಹುಕಾಲದ ಅನುಭವಗಳ ಮೂಲಕ ಉತ್ತರವನ್ನು ತಾವು ನೀಡುತ್ತಿದ್ದೀರಿ. ಇದರಿಂದ ಸಾಕಷ್ಟು ಜನರಿಗೆ ಪ್ರಯೋಜನವಾಗಬಹುದು.
    ಅಭಿನಂದನೆಗಳು.
    ಮೌಲಾನಾ ಅಬ್ದುಲ್ ಹಫೀಝ್ . ಕುವೈತ್.

  7. EE ANKANA TUMBANE AGTYA ITTU……….

    I like this thinking ………

  8. Ravi Belagere:
    Hi all
    I joined JANASHREE news channel today and will be hosting a daily show late evening. Need your support and best wishes. I will also host a morning breakfast programme show which will be unique.
    ಇದು ರವಿ ಬೆಳಗೆರೆ ದಿನಾಂಕ 03 February, 2011 ರಂದು ಸಮಯ  23:54ಕ್ಕೆ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ಹಾಕಿಕೊಂಡ ಸ್ಟೇಟಸ್. ಇದರಲ್ಲಿ ರವಿ ಬೆಳಗೆರೆ ಮೂರು ಅಂಶ ಪ್ರಸ್ತಾಪಿಸಿದ್ದಾರೆ.
    1. ಜನಶ್ರೀ ಚಾನೆಲ್ ಸೇರಿದ್ದೇನೆ
    2. ನಿತ್ಯ ಸಂಜೆ ಒಂದು ವಿಶೇಷ ಕಾರ್ಯಕ್ರಮ ನಡೆಸಿಕೊಡುತ್ತೇನೆ
    3. ನಿತ್ಯ ಬೆಳಿಗ್ಗೆ ತುಂಬಾ ಭಿನ್ನವಾಗಿರುವ ಮತ್ತೊಂದು ಬ್ರೇಕ್ ಫಾಸ್ಟ್ ಶೋ ನಡೆಸಿಕೊಡುತ್ತೇನೆ.
    ಆದರೆ ಈಗ ಮೂರು ತಿಂಗಳ ನಂತರ ಆಗಿರುವುದೇನು?
    ಅತ್ತ ಬೆಳಗಿನ ಬ್ರೇಕ್ ಫಾಸ್ಟ್ ಶೋ ನೂ ಇಲ್ಲ… ಲೇಟ್ ಈವನಿಂಗ್ ನಡೆಸಿಕೊಡ್ತೀನಿ ಅಂತ ಹೇಳಿದ್ದ  ಪ್ರೋಗ್ರಾಂ ಕೂಡಾ ಇಲ್ಲ. (ಯಾವ ಪ್ರೋಗ್ರಾಂ ಅಂತ ನೀವೇ ‘ಕೇಳಿ’).
    ಇಲ್ಲಿ ಮೂರು ಸಾಧ್ಯತೆಗಳಿವೆ.
    1. ರವಿ ಬೆಳಗೆರೆಯನ್ನು ಜನಶ್ರೀಯಿಂದ ಕಿತ್ತು ಹಾಕಿದ್ದಾರೆ.
    2. ರವಿ ಬೆಳಗೆರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
    3. ರೆಡ್ಡಿ ಬ್ರದರ್ಸ್ ಜೊತೆ ಅವರ ಸಂಬಂಧ ಹಳಸಿದೆ.
    ಇದೆಲ್ಲಾ ರವಿ ಬೆಳಗೆರೆ ವರ್ತನೆಯಿಂದಲೇ ಬರುತ್ತಿರುವ ಅನುಮಾನಗಳು. ಏಕೆಂದರೆ ಅವರು ಫೇಸ್ ಬುಕ್   ನಲ್ಲಿ ಬರೆದುಕೊಂಡಿದ್ದಂತೆ ಜನಶ್ರೀ ಸೇರಿದ್ದೇ ಆಗಿದ್ದಲ್ಲಿ, ಅವರ ಕಾರ್ಯಕ್ರಮಗಳು ಆರಂಭವಾಗಬೇಕಿದ್ದವು. ಜನಶ್ರೀ ಕಚೇರಿಗೆ ಹೋಗಿ ಉಸ್ತುವಾರಿ ನೋಡಿಕೊಳ್ಳಬೇಕಿತ್ತು. ಆದರೆ ಅದಾವುದೂ ಆಗಿಲ್ಲ. ರವಿ ಒಂದು ದಿನವೂ ಜನಶ್ರೀ ಮುಖ್ಯಸ್ಥನಂತೆ ವರ್ತಿಸಲೇ ಇಲ್ಲ.
    ಇದಕ್ಕೆ ಮತ್ತೊಂದು ಸಾಕ್ಷಿ ಎಂದರೆ ಒಸಾಮಾ ಬಿನ್ ಲಾಡೆನ್ ಹತ್ಯೆಯಾದಾಗ ರವಿ ಬೆಳೆಗೆರೆ ನಡೆದುಕೊಂಡ ರೀತಿ! ನಿಜಕ್ಕೂ ರವಿ ಬೆಳಗೆರೆ ಜನಶ್ರೀ ಜೊತೆ ಸಂಬಂಧ ಇದ್ದರೆ, ಜನಶ್ರೀ ಉಸ್ತುವಾರಿ ವಹಿಸಿಕೊಂಡಿದ್ದರೆ ಅವತ್ತು ಜನಶ್ರೀಯಲ್ಲಿ ಕಾರ್ಯಕ್ರಮ ನಡೆಸಿಕೊಡಬೇಕಿತ್ತು. ಆದರೆ ರವಿ ಕಾಣಿಸಿಕೊಂಡದ್ದು ಸುವರ್ಣ ಟೀವಿಯಲ್ಲಿ. ತಾವೇ ಮುಖ್ಯಸ್ಥರಾಗಿರುವ ಚಾನೆಲ್ ಬಿಟ್ಟು ರವಿ ಏಕೆ ಬೇರೆ ಚಾನೆಲ್ ನಲ್ಲಿ ಕಾಣಿಸಿಕೊಂಡರೋ? ಇಲ್ಲೂ ಎರಡು ಮೂರು ಸಾಧ್ಯತೆಗಳಿವೆ.
    1. ಟಿವಿ9 ರವಿಯನ್ನು ಹತ್ತಿರಕ್ಕೂ ಸೇರಿಸುವುದಿಲ್ಲ. ರವಿಯ ಮನೋಭಾವ, ಗುಣ ಎಲ್ಲವೂ ಟಿವಿ9 ನಲ್ಲಿ ಇರುವವರಿಗೆ ಚಿರಪರಿಚಿತ. ರವಿ ಏನೇ ಭಾಷಣ ಹೊಡೆದರೂ ಅದೆಲ್ಲಾ ಸುಳ್ಳೇ ಸುಳ್ಳು ಎಂದು ಎಲ್ಲರಿಗೂ ಗೊತ್ತು.
    2. ಜನಶ್ರೀಗೆ ಹೋದರೆ ಅದನ್ನು ನೋಡುವವರೇ ಇಲ್ಲ. ರವಿ ಬೆಳಗೆರೆ ಅಲ್ಲಿ ಇದ್ದಾರೋ ಇಲ್ಲವೋ ಯಾರಿಗೂ ಗೊತ್ತಿಲ್ಲ. ರವಿ ಬೆಳಗೆರೆಯನ್ನು ಕಿತ್ತು ಹಾಕಿದ್ದಾರೋ, ಅಥವಾ ರವೀನೇ ರಾಜೀನಾಮೆ ನೀಡಿದ್ದಾರೋ ಎಂಬುದೂ ತಿಳಿದಿಲ್ಲ.
    3. ಇನ್ನು ಹಾಳು ಊರಿಗೆ ಉಳಿದವನೇ ಗೌಡ ಎಂಬಂತೆ ಇರುವುದು ಸುವರ್ಣ! ಅದೇನೋ ಅನ್ನ ಹಳಸಿತ್ತು, ನಾಯಿ ಹಸಿದಿತ್ತು ಗಾದೆ ಇದೆಯಲ್ಲ, ಆ ಪರಿಸ್ಥಿತಿ. ದಿನೇದಿನೇ ಸುವರ್ಣದ ಟಿಆರ್ಪಿ ಕುಸಿಯುತ್ತಿದೆ. ನಾನೇ ಚೀಫ್ ಎಂಬ ಭ್ರಮೆಯಲ್ಲಿರುವ ಹಮೀದ್ ಹೈರಾಣಾಗಿ ತಮ್ಮ ಕುರ್ಚಿಗೇ ಸಂಚಕಾರ ತಂದುಕೊಳ್ಳುತ್ತಿದ್ದಾರೆ. ಹೀಗಾಗಿ ಅವರಿಗೂ ಏನೋ ಮಾಡಿದ್ದೇನೆ ಎಂದು ತೋರಿಸಿಕೊಳ್ಳುವ ಉಮೇದಿ ಇತ್ತು. ರವಿ ಬೆಳಗೆರೆಗೂ ಆ ಕ್ಷಣಕ್ಕೆ ಒಂದು ಚಾನೆಲ್ ನಲ್ಲಿ ಮುಖ ತೋರಿಸಬೇಕಿತ್ತು. ಎರಡೂ ಈಡೇರಿದವು.
    ಆದರೆ ಅಸಲಿ ಸಂಗತಿ ಎಂದರೆ ರವಿ ಬೆಳಗೆರೆ ಜನಶ್ರೀ ಚಾನೆಲ್ ಸೇರಿಯೇ ಇಲ್ಲ! ಬಂದು ಸೇರಿಕೊಳ್ಳಿ ಎಂದು ಯಾರೂ ಅವರನ್ನು ಕರೆದೂ ಇಲ್ಲ. ಜನಶ್ರೀ ಸೇರಿದ್ದೇನೆ ಎಂದು ಫೇಸ್ ಬುಕ್ ನಲ್ಲಿ ಹಾಕಿಕೊಳ್ಳುವ ಹೊತ್ತಿಗೆ ರವಿ ಬೆಳಗೆರೆ – ವಿಶ್ವೇಶ್ವರ ಭಟ್ಟರು ಹಾಗೂ ಅವರ ಪ್ಯಾರಾಸೈಟ್ ಗಳ ವಿರುದ್ಧ ಬೀದಿ ಜಗಳಕ್ಕೆ ಬಿದ್ದಿದ್ದರು. ರವಿ ಬೆಳಗೆರೆಯ ಎರಡನೇ ಅನಧಿಕೃತ ಪತ್ನಿ ಯಶೋಮತಿ, ಪುತ್ರ ರತ್ನ ಹಿಮವಂತ್, ರವಿ ಬೆಳಗೆರೆ ಮಹಿಳೆಯರಿಗೆ ಬರೆದ ಪ್ರೇಮ ಪತ್ರಗಳನ್ನು ಪ್ರತಾಪ್ ಸಿಂಹ ಎಕ್ಸ್ಪೋಸ್ ಮಾಡುತ್ತಿದ್ದರು. ಇದೆಲ್ಲದರಿಂದ ನಾನು ಡಿಸ್ಟರ್ಬ ಆಗಿಲ್ಲ. ನಾನು ಯಶಸ್ಸಿನ ಶಿಖರ ಏರುತ್ತಿದ್ದೇನೆ ಎಂದು ತೋರಿಸಿಕೊಳ್ಳಬೇಕಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲರ ಗಮನ ಬೇರೆ ಕಡೆ ಸೆಳೆದು, ಸುದ್ದಿ ಮಾಡಬೇಕಿತ್ತು. ಬೋ ಪರಾಕ್ ಎನಿಸಿಕೊಳ್ಳಬೇಕಿತ್ತು. ಹೀಗಾಗಿ ನಾನು ಜನಶ್ರೀ ಸೇರಿದ್ದೇನೆ ಎಂದು ಬರೆದುಕೊಂಡಿದ್ದು. 
    ನಿಜ ಹೇಳಬೇಕೆಂದರೆ, ಕುಡಿತ ಸಿಗರೇಟ್ ಗಳಿಂದ ಆರೋಗ್ಯ ಹಾಳು ಮಾಡಿಕೊಂಡು ಹೈರಾಣಾಗಿರುವ ಬೆಳಗೆರೆಗೆ ನಿಜಕ್ಕೂ ಒಂದು ಚಾನೆಲ್ಲಿಗೋಸ್ಕರ ನಿಂತು ಬಡಿದಾಡುವ ಶಕ್ತಿ ಇಲ್ಲ. ಅವರೇ ಕಟ್ಟಿಕೊಂಡ ಹಾಯ್ ಬೆಂಗಳೂರು ಎಂಬ ಕೋಟೆ ಕುಸಿದು ಹೋಗುತ್ತಿದೆ. ಸಕ್ಯರ್ೂಲೇಷನ್ ಪಾತಾಳಕ್ಕೆ ಕುಸಿದಿದೆ. ಏನೇ ಕಸರತ್ತು, ಗಿಮಿಕ್ ಮಾಡಿದರೂ ಸಕ್ಯರ್ೂಲೇಷನ್ ಏರುತ್ತಿಲ್ಲ. ರವಿ ಬೆಳಗೆರೆ ಮ್ಯಾಜಿಕ್ ಕಡಿಮೆಯಾಗುತ್ತಿದೆ. ಮೇಲಾಗಿ ರವಿ ಬೆಳಗೆರೆ ಬಗ್ಗೆ ಇದ್ದ ಭಾವನೆಯೂ ಈಗ ಜನರಲ್ಲಿ ಬದಲಾಗಿದೆ. ಮೊದಲಿನಷ್ಟು ಆಪ್ತ ಭಾವದಿಂದ ಹಾಯ್ ಬೆಂಗಳೂರು ಓದುವ ಓದುಗ ದೊರೆಗಳು ಈಗಿಲ್ಲ. ಹೀಗಾಗಿ ರವಿ ಬೆಳಗೆರೆಗೆ ತಾವು ಏರಿ ಕೂತ ಹುಲಿಯನ್ನೇ ಸಂಭಾಳಿಸಿಕೊಂಡರೆ ಸಾಕು ಎನ್ನುವಂತಾಗಿದೆ. ಇನ್ನು ಜನಶ್ರೀ ಉಸ್ತುವಾರಿ ಹೇಗೆ ಹೊತ್ತುಕೊಂಡಾರು?
    ಇದು ಸುಳ್ಳು ಎಂದಾದರೆ ದಯವಿಟ್ಟು ರವಿ ಬೆಳಗೆರೆ ಜನಶ್ರೀ ಸೇರಲು ತಮಗೆ ಬಂದ ಆಫರ್ ಲೆಟರ್ ಪ್ರಕಟಿಸಲಿ. ಜನಶ್ರೀಯಲ್ಲಿ ರಿಪೋರ್ಟರ್, ಆಂಕರ್, ಡೆಸ್ಕ್ ಚೀಫ್ ಹೀಗೆ ಏನು ಆಗಿ ಡ್ಯೂಟಿ ರಿಪೋರ್ಟ್ ಮಾಡಿಕೊಂಡಿದ್ದಾರೆ ಎಂದಾದರೂ ತಿಳಿಸಲಿ. ಆಗ ನಾವು ಬರೆದದ್ದು ಸುಳ್ಳು ಎಂದು ಈ ಪೋಸ್ಟ್ ತೆಗೆದುಬಿಡುತ್ತೇವೆ.

     

  9. ನಿಮ್ಮ ಹೊಸ ಅಂಕಣ’ಆಪ್ತಕಾಲ’ ಸಮಯೋಚಿತವಾಗಿದೆ. ನಿಮಗೆ ಶುಭವಾಗಲಿ.

    ಸೌಮ್ಯ ನಾಗೇಂದ್ರ

  10. ಯಾಕೆ ಸಾರ್ ನೀವೂ ಆಪ್ತಕಾಲ ಅಂತ ಪುಕ್ಕಟೆ ಸಲಹೆ ಕೊಡೋ ಕೆಲಸ ಶುರು ಮಾಡಿದ್ದೀರಿ ಎಲ್ಲ ತರಹದ ನಿಯತಕಾಲಿಕಗಳಲ್ಲಿ ಇಂತಹವು ಕಂಡು ಬರುತ್ತಿದೆ. ಇಂತಹವುಗಳಲ್ಲಿ ಲೇಖಕರು ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಾರೋ ಅಥವಾ ತಮ್ಮಲ್ಲಿರುವ ಉತ್ತರಗಳಿಗೆ ತಕ್ಕುದಾದ ಪ್ರಶ್ನೆಗಳನ್ನು ತಾವೇ ಹಾಕಿಕೊಳ್ಳುತ್ತಾರೋ ತಿಳಿಯುವುದಿಲ್ಲ. ಅಷ್ಟರಮಟ್ಟಿಗೆ ನಿಮ್ಮ ಮೇಲೆ ಸಂಶಯವಿಲ್ಲವಾದರೂ ನಿಮ್ಮ ಆಪ್ತಸಲಹೆಗಾರನ ಅವತಾರ ನೋಡಿದರೆ ಯಾಕೋ ಅಸಮಾಧಾನ. ನಾನು ನೋಡಿದಂತೆ ಹೆಚ್ಚಿನ ಸಂದರ್ಭದಲ್ಲಿ ಇವುಗಳಲ್ಲಿ ಸಾಂತ್ವನಕ್ಕಿಂತ ಮನೋರಂಜನೇಯ ಆಶಯವೇ ಹೆಚ್ಚಾಗಿರುವಂತೆ ಕಂಡು ಬರುತ್ತದೆ. ಇಲ್ಲೂ ನಿಮ್ಮ ಉದ್ದೇಶದ ಮೇಲೆ ನನಗೆ ಸಂಶಯವಿಲ್ಲವಾದರೂ ಒಂದು ಮಾತು. ಆಪ್ತಾಕಾಲಕ್ಕಿಂತ ನೀವು ಎಲ್ಲಿಂದಲೋ ಹೆಕ್ಕಿ ತರುವ ಚೇತೋಹಾರಿ ಚಿಕ್ಕ ಚಿಕ್ಕ ಕಥೆಗಳು , ಬ್ರೋಸ್‌ನನ್ನ್ ಮುಂತಾದವರ ಕುರಿತಾಗಿ ಬರೆಯುವ ಲೇಖನಗಳು ಹೆಚ್ಚು ಆಸಕ್ತಿದಾಯಕ ಮಾತ್ರವಲ್ಲ ಸ್ಪೂರ್ತಿದಾಯಕ ಕೂಡಾ ಎಂದು ನನ್ನ ಅನಿಸಿಕೆ. ಅಲ್ಲದೇ ನಿಮ್ಮ ಉಳಿದ ಪ್ರಯೋಗಗಳಿಗೆ ಬಂದಿರುವ ಕಾಮೆಂಟ್ಸ್ ಗೂ ಇದಕ್ಕೆ ಬಂದಿರುವ ತಣ್ಣನೆಯ ಪ್ರತಿಕ್ರಿಯೆಗೂ ಹೋಲಿಸಿದರೆ ನನ್ನಂತೆ ನಿಮ್ಮ ಬರಹ ವನ್ನು ಇಷ್ಟಪಡುವ ಇತರ ಅಭಿಮಾನಿಗಳಲ್ಲೂ ಈ ಪ್ರಯೋಗ Excitement ತಂದಿಲ್ಲ ಎಂದು ನಿಮಗೇ ಅನಿಸುತ್ತಿಲ್ಲವೇ?

    • Dear Vishweshara Bhat,

      Namaskaragalu. Sakhi patrike yalli nimma ankana oodide. Nimge nimmade aada identity ide adakkagi dayvittu yarannu anukarane madbedi.adu nimma vyaktitakke dakke taruttade. Nimma Norentu matu, chikka chikka kathegalu, nimmade shaileya baravanigegalu tumba ishta aaguttave.

  11. sakhi pakshika online doreyuttadeye ?
    link iddare dayamaadi tilisi

    Dhanyavadagalondige
    Prashasti

ಅಭಿಪ್ರಾಯ ಬರೆಯಿರಿ

ನಿಮ್ಮ ಸಂದೇಶ:

Please note: comment moderation is enabled and may delay your comment. There is no need to resubmit your comment.