ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.
ಮುಂದೆ ಓದಿ...ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.
ಮುಂದೆ ಓದಿ...ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.
ಮುಂದೆ ಓದಿ...ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ
ಮುಂದೆ ಓದಿ...ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.
ಮುಂದೆ ಓದಿ...ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.
ಮುಂದೆ ಓದಿ...ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!
ಮುಂದೆ ಓದಿ...ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.
ಮುಂದೆ ಓದಿ...
ನಾನೊಂದು ಪುಸ್ತಕ ಬರೆಯುತ್ತಿದ್ದೇನೆ. ಅವುಗಳಲ್ಲಿ ಇಂಥ ನೂರೈವತ್ತು ಕತೆಗಳಿವೆ. ಆ ಪೈಕಿ ಕೇವಲ ಮೂರನ್ನಷ್ಟೇ ಆಯ್ದುಕೊಟ್ಟಿದ್ದೇನೆ. ಈ ಕತೆಗಳು ಮ್ಯಾನೇಜ್್ಮೆಂಟ್ ಕ್ಲಾಸುಗಳಲ್ಲಿ ಬಹಳ ಪ್ರಚಲಿತ. ಇಲ್ಲಿ ಕತೆ ಎಷ್ಟು ರೋಚಕವೋ, ಅದರ ನೀತಿ ಇನ್ನೂ ರೋಚಕ. ಒಂದು ಘಟನೆ ಒಬ್ಬೊಬ್ಬರಿಗೆ ಯಾವ ಯಾವ ಸಂದೇಶ ಕಳಿಸುತ್ತದೆ ಎಂಬುದು ಮುಖ್ಯ.
‘ನಾನೊಂದು ಕತೆ ಹೇಳ್ತೇನೆ, ಕೇಳಿ’ ಅಂತ ಯಾರಾದರೂ ಹೇಳಿದರೆ, ಆ ಮಾತಿನ ನೀತಿ ಏನಪ್ಪಾ ಅಂದ್ರೆ ‘ನಾನು ಏನೇ ಹೇಳಿದರೂ ಕೇಳಬೇಕು’ ಎಂದರ್ಥ. ಅದೇ ಕೇಳುಗನ ದೃಷ್ಟಿಯಿಂದ ಏನರ್ಥವೆಂದರೆ, ‘ನೀನು ಏನು ಬೇಕಾದರೂ ಹೇಳು, ನಾನು ಕೇಳಿದಂತೆ ನಟಿಸುತ್ತೇನೆ’ ಎಂದು. ಹೀಗಾಗಿ ಈ ಕತೆಗಳು ಬರೀ ಕತೆಗಳಷ್ಟೇ ಅಲ್ಲ, ನೀತಿಕತೆಗಳೂ ಹೌದು.
ಇತ್ತೀಚೆಗೆ ಒಂದು ಸಾಲಿನ ಕತೆ ಓದಿದೆ. ಅದೇನೆಂದರೆ- ‘ಕೊನೆಗೂ ಆತ ಮದುವೆ ಆಗಲಿಲ್ಲ.
‘ ಇದರ ನೀತಿ: ‘ಹೆಂಗಸರನ್ನು ಅರ್ಥ ಮಾಡಿಕೊಂಡೂ, ಮುಯ್ಯಿ ತೀರಿಸಿಕೊಳ್ಳದ ಅಮಾಯಕ!’
ಅದೊಂದು ಮಧುರ ಮುಂಜಾನೆ. ಆ ಹೊತ್ತಿನಲ್ಲೇ ಮಧ್ಯಮ ವರ್ಗದ ಆ ಗೃಹಿಣಿ ಗಾಲ್ಫ್ ಆಡಲೆಂದು ಅಂಗಳಕ್ಕೆ ಬಂದಳು. ಒಂದೆರಡು ಬಾರಿ ಗುರಿ ತಪ್ಪದಂತೆ ಆಟವಾಡಿದಳು. ಅದೇ ಖುಷಿಯಲ್ಲಿ ಮೂರನೇ ಬಾರಿ ಸ್ವಲ್ಪ ಬಿರುಸಾಗಿ ಚೆಂಡು ಬಾರಿಸಿದಳು. ಹೊಡೆತ ಜೋರಾಗಿದ್ದುದರಿಂದ ಅದು ಗುರಿ ತಪ್ಪಿ ಮೈದಾನದ ಅಂಚಿಗಿದ್ದ ಒಂದು ಗುಂಡಿಯಲ್ಲಿ ಬಿತ್ತು. ಆಟದ ಚೆಂಡು ಹುಡುಕುತ್ತಾ ಈ ಬೆಡಗಿ ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತಾ ಆ ಗುಂಡಿಯ ಬಳಿ ಬಂದಳು. ಅಲ್ಲಿ ಗಾಲ್ಫ್ ಆಟದ ಚೆಂಡು ಕಾಣಿಸಲಿಲ್ಲ. ಬದಲಿಗೆ, ಅಪೂರ್ವ ಕಾಂತಿಯಿಂದ ಹೊಳೆಯುತ್ತಿದ್ದ ಒಂದು ಕಪ್ಪೆ ಕಾಣಿಸಿತು. ಈ ಬೆಡಗಿಯನ್ನು ಕಂಡದ್ದೇ ಆ ಕಪ್ಪೆ ಥೇಟ್ ಮನುಷ್ಯರ ಧ್ವನಿಯಲ್ಲಿ ಹೀಗೆಂದಿತು: ‘ಸುಂದರೀ, ನಾನೊಬ್ಬ ಶಾಪಗ್ರಸ್ತ ಗಂಧರ್ವ. ಋಷಿಯೊಬ್ಬರ ಶಾಪದಿಂದ ಕಪ್ಪೆಯಾಗಿ ಈ ಕೊರಕಲಿನಲ್ಲಿ ಬಿದ್ದಿದ್ದೇನೆ. ದಯವಿಟ್ಟು ನನ್ನನ್ನು ಇಲ್ಲಿಂದ ಮೇಲೆತ್ತು. ಆಗ ನನ್ನ ಶಾಪ ವಿಮೋಚನೆಯಾಗುತ್ತದೆ. ನಿನ್ನ ಉಪಕಾರಕ್ಕೆ ಪ್ರತಿಯಾಗಿ ನಾನು ಮೂರು ವರಗಳನ್ನು ದಯಪಾಲಿಸುತ್ತೇನೆ…’
ಈ ಸಾಧಾರಣ ಸುಂದರಿಗೆ ಸಖತ್ ಖುಷಿಯಾಯಿತು. ಒಂದು ಕಪ್ಪೆಯನ್ನು ಗುಂಡಿಯಿಂದ ಮೇಲೆತ್ತಿದರೆ ಮೂರು ವರ ಸಿಗುತ್ತದೆ ಅಂದಮೇಲೆ ಖುಷಿಯಾಗದೇ ಇರುತ್ತಾ? ಈಕೆ ಲಗುಬಗೆಯಿಂದ ಆ ಕೆಲಸ ಮಾಡಿದಳು. ಮೇಲೆ ಬಂದ ಕಪ್ಪೆ ಹೇಳಿತು: ‘ಸಾರಿ, ನಾನು ಗಡಿಬಿಡಿಯಲ್ಲಿ ಒಂದು ಸಂಗತಿ ಹೇಳಲು ಮರೆತೆ. ಏನೆಂದರೆ, ನೀನು ಯಾವ ವರ ಕೇಳಿದ್ರೂ ನಾನು ತಥಾಸ್ತು ಅಂತೇನೆ. ಆದರೆ ನಿನಗೆ ಸಿಗುತ್ತಲ್ಲ, ಅದರ ಹತ್ತುಪಟ್ಟು ನಿನ್ನ ಗಂಡನಿಗೂ ಸಿಗುತ್ತೆ. ಹಾಗಾಗಿ ತುಂಬ ಯೋಚನೆ ಮಾಡಿ ವರ ಕೇಳಿಕೋ…’
ಈ ಬೆಡಗಿಗೆ ಸ್ವಲ್ಪ ಹಲ್ಲುಬ್ಬು, ಸ್ವಲ್ಪ ಕಪ್ಪಗಿನ ಬಣ್ಣವಿತ್ತು. ತಲೆಯಲ್ಲಿ ಐವತ್ತರವತ್ತು ಬಿಳಿಕೂದಲು ಕಾಣಿಸಿಕೊಂಡಿದ್ದವು. ಒಂದಿಷ್ಟು ಬೊಜ್ಜೂ ಜೊತೆಯಾಗಿತ್ತು. ಅವನ್ನೆಲ್ಲ ನೆನಪಿಸಿಕೊಂಡ ಆಕೆ- ‘ನನ್ನನ್ನು ಅತ್ಯಂತ ರೂಪಸಿಯನ್ನಾಗಿ ಮಾಡು. ಇದೇ ನಾನು ಕೇಳಿಕೊಳ್ಳುವ ಮೊದಲ ವರ’ ಎಂದಳು.
ಕಪ್ಪೆ ತಕ್ಷಣವೇ ಹೇಳಿತು. ಈ ಮೊದಲೇ ಹೇಳಿರುವಂತೆ, ನಿನಗೆ ಸಿಗುತ್ತದಲ್ಲ, ಅದಕ್ಕಿಂತ ಹತ್ತು ಪಟ್ಟು ಜಾಸ್ತಿ ನಿನ್ನ ಗಂಡನಿಗೆ ಸಿಗುತ್ತದೆ. ಅಂದರೆ, ನಿನಗಿಂತ ಹತ್ತುಪಟ್ಟು ಹೆಚ್ಚಿನ ಸೌಂದರ್ಯ ಅವನದಾಗುತ್ತದೆ. ಈ ದಿಢೀರ್ ಬದಲಾವಣೆಯಿಂದ ಆತ ನಿನ್ನ ಕುರಿತು ಅನಾದರ ಬೆಳೆಸಿಕೊಳ್ಳಬಹುದು. ವರ ಪಡೆಯುವ ಮುನ್ನ ಯೋಚಿಸಿ ನಿರ್ಧಾರಕ್ಕೆ ಬಾ ಎಂದಿತು.
ಈ ಬೆಡಗಿ ಸಾಮಾನ್ಯದ ಹೆಂಗಸಾಗಿರಲಿಲ್ಲ. ಆಕೆ, ಗಂಡನನ್ನು ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದ ಗಟ್ಟಿಗಿತ್ತಿ. ಆಕೆ ತಕ್ಷಣವೇ ಹೇಳಿದಳು: ‘ನನ್ನ ಮಾತಿಗೆ ಎದುರಾಡಲು ನನ್ನ ಗಂಡನಿಗೆ ಈ ಜನ್ಮದಲ್ಲಿ ಧೈರ್ಯ ಬರೋದಿಲ್ಲ. ಹಾಗಾಗಿ ಏನೂ ಚಿಂತೆ ಬೇಡ. ನನ್ನನ್ನು ಜಗತ್ತಿನ ನಂಬರ್ ಒನ್ ಸುಂದರಿಯನ್ನಾಗಿ ಮಾಡು…’
ಕಪ್ಪೆ ತಕ್ಷಣವೇ ತಥಾಸ್ತು ಎಂದಿತು. ಏನಾಶ್ಚರ್ಯ, ಆ ಸಾಧಾರಣ ಸುಂದರಿ ಕೆಲವೇ ಸೆಕೆಂಡುಗಳಲ್ಲಿ ಲಕಲಕ ಹೊಳೆಯುವ ಅಪ್ಸರೆಯಾಗಿ ಬದಲಾದಳು. ಹೀಗೇ ಒಂದೆರಡು ನಿಮಿಷ ಕಳೆಯಿತು. ಆಗಲೇ ಕಪ್ಪೆ ಎಚ್ಚರಿಸಿತು. ಈಗ ಎರಡನೇ ವರ ಏನು ಬೇಕೋ ಕೇಳು.
ಅದೇ ಮಾತಿಗೆ ಕಾಯುತ್ತಿದ್ದಂತೆ ಈ ವಿಶ್ವಸುಂದರಿ ತಕ್ಷಣವೇ ಹೇಳಿದಳು: ‘ನಾನು ಈ ಜಗತ್ತಿನ ಅತಿ ಶ್ರೀಮಂತ ಮಹಿಳೆಯಾಗುವಂತಾಗಲಿ..’ ಕಪ್ಪೆ ತಕ್ಷಣವೇ ಹೇಳಿತು: ‘ನೀನು ಜಗತ್ತಿನ ಅತಿ ಶ್ರೀಮಂತೆಯಾದರೆ, ಅದೇ ಕ್ಷಣಕ್ಕೆ ನಿನ್ನ ಗಂಡನಿಗೆ ನಿನಗಿಂತ ಹತ್ತು ಪಟ್ಟು ಹೆಚ್ಚಿನ ಸಂಪತ್ತು ಸಿಗುತ್ತದೆ. ಅದೇ ಕಾರಣಕ್ಕೆ ಅವನು ನಿನ್ನನ್ನೇ ಮರೆತುಬಿಡಬಹುದು. ಸ್ವಲ್ಪ ಯೋಚನೆ ಮಾಡು..’
ಆಗ ಹೆಂಗಸು ಹೇಳಿದಳು: ‘ಅಯ್ಯಾ ಗಂಧರ್ವ ರಾಜ, ನನ್ನ ಗಂಡನಿಗೆ ಅಂಥ ಧೈರ್ಯವಿಲ್ಲ. ತನ್ನಿಷ್ಟದಂತೆ ನಡೆಯಲು ಅವನಿಗೆ ಸ್ವಾತಂತ್ರ್ಯವೂ ಇಲ್ಲ. ಹಾಗಾಗಿ ನನಗೇನೂ ತೊಂದರೆ ಆಗಲ್ಲ. ನೀನು ವರಕೊಡು…’ ಕಪ್ಪೆ ತಕ್ಷಣವೇ ತಥಾಸ್ತು ಎಂದಿತು. ಮರುಕ್ಷಣವೇ ಆಕೆ ಜಗತ್ತಿನ ನಂಬರ್ ಒನ್ ಶ್ರೀಮಂತೆಯಾಗಿ ಬದಲಾದಳು. ಎರಡು ನಿಮಿಷ ಬ್ರೇಕ್ ನೀಡಿದ ಕಪ್ಪೆ ಮತ್ತೆ ಕೇಳಿತು: ‘ಹುಂ, ಮೂರನೇ ವರ ಏನು ಬೇಕೋ ಕೇಳು…’
ಸುಂದರಿಗೆ ಒಂದರೆಕ್ಷಣ ತನ್ನ ಗಂಡನನ್ನು ಗೋಳುಹೊಯ್ದುಕೊಳ್ಳಬೇಕು ಅನ್ನಿಸಿತು. ದಿಢೀರ್ ಸೌಂದರ್ಯ ಮತ್ತು ಶ್ರೀಮಂತಿಕೆ ಬಂದಿದ್ದರಿಂದ ಅವನೇನಾದರೂ ತನ್ನಿಂದ ದೂರವಾಗಲು ನಿರ್ಧರಿಸಿದ್ದರೆ ಅದಕ್ಕೆ ಒಂದು ಪಾಠ ಕಲಿಸಬೇಕೆಂಬ ಆಸೆಯೂ ಆಯಿತು. ಆಕೆ ತಕ್ಷಣವೇ ಕೇಳಿಕೊಂಡಳು: ‘ನನಗೆ ಸಣ್ಣದೊಂದು ಹೃದಯಾಘಾತವಾಗಲಿ!’
ಗಂಧರ್ವನಾಗಲಿದ್ದ ಕಪ್ಪೆ ತಕ್ಷಣವೇ ತಥಾಸ್ತು ಅಂದೇಬಿಟ್ಟಿತು!
ಈವರೆಗೂ ಈ ಬರಹ ಓದುತ್ತಿದ್ದವರು ಹೆಂಗಸರಾಗಿದ್ದರೆ, ಮೇಲಿನ ಸಾಲು ಓದಿದಾಕ್ಷಣ ಆಹ, ಸರಿಯಾದ ಹೊಡೆತ ಹಾಕಿದ್ಲು ಎಂದು ಉದ್ಗರಿಸಿರುತ್ತಾರೆ. ಹೆಂಗಸ್ರು ಬಹಳಾ ಸ್ಟ್ರಾಂಗು ಕಣ್ರೀ ಎಂದೂ ಕಮೆಂಟ್ ಮಾಡಿ ಜಂಬದಿಂದ ನಕ್ಕಿರುತ್ತಾರೆ. ಆದರೆ, ಡಿಯರ್ ಫ್ರೆಂಡ್ಸ್, ಹುಶಾರಾಗಿ ಯೋಚಿಸಿ ನೋಡಿ, ಕಪ್ಪೆ ನೀಡಿದ್ದ ಎಚ್ಚರಿಕೆಯ ಪ್ರಕಾರ ಒಂದು ವರದಿಂದ ಈಕೆಗೆ ಎಷ್ಟು ಸಿಗುತ್ತೋ ಅದರ ಹತ್ತು ಪಟ್ಟು ಗಂಡನಿಗೆ ಸಿಗುತ್ತದೆ. ಮೂರನೇ ವರದ ರೂಪದಲ್ಲಿ ಈ ಹೆಂಗಸು ಬೇಡಿಕೊಂಡಿದ್ದು ಒಂದು ಸಣ್ಣ ಹೃದಯಾಘಾತವನ್ನು! ಅಂದರೆ, ಇವಳಿಗೆ ಆಯ್ತಲ್ಲ; ಅದಕ್ಕಿಂತ ಹತ್ತುಪಟ್ಟು ಸಣ್ಣದಾದ ಹೃದಯಾಘಾತ ಆಕೆಯ ಗಂಡನಿಗೆ ಆಗಿರುತ್ತೆ.
ಈ ಕತೆಯ ನೀತಿ: ಹೆಂಗಸರು ಅಂಥ ಬುದ್ಧಿವಂತೆಯರಲ್ಲ ಎಂದು ಮತ್ತೂ ವಿವರಿಸಿ ಹೇಳಬೇಕಿಲ್ಲ ತಾನೆ?
>>>>>
ಅದೊಂದು ಭಾನುವಾರದ ಮುಂಜಾನೆ. ಸಿಂಹ, ತನ್ನ ಗುಹೆಯ ಮುಂದೆ ಆರಾಮವಾಗಿ ಮಲಗಿಕೊಂಡಿತ್ತು. ಅದು ಮಲಗಿದ್ದ ಭಂಗಿಯನ್ನು ನೋಡಿದರೆ ಸಾಕು; ಈ ಸಿಂಹವೊಂದು ಜವಾಬ್ದಾರಿ ಮರೆತ, ಸೋಮಾರಿತನವನ್ನೇ ಮೈ ತುಂಬ ತುಂಬಿಕೊಂಡ ಪ್ರಾಣಿಯಂತೆ ಕಾಣುತ್ತಿತ್ತು. ಅದೇ ದಾರಿಯಲ್ಲಿ ಬಂದ ನರಿಯೊಂದು ಒಮ್ಮೆ ಲಘುವಾಗಿ ಕೆಮ್ಮಿ ಹೇಳಿತು: ‘ಸಿಂಹರಾಜ, ಈಗ ಸಮಯ ಎಷ್ಟಾಗಿದೆ ಎಂದು ಹೇಳುವೆಯಾ? ನನ್ನ ವಾಚ್ ಕೆಟ್ಟು ಹೋಗಿದೆ…’
ಮೈಮುರಿದುಕೊಂಡು ಎದ್ದು ಕುಳಿತ ಸಿಂಹ ಹೇಳಿತು: ‘ವಾಚ್ ಕೆಟ್ಟು ಹೋಗಿದೆಯಾ? ಅದನ್ನು ಇಲ್ಲಿ ಕೊಡು. ಐದೇ ನಿಮಿಷದೊಳಗೆ ರಿಪೇರಿ ಮಾಡಿಕೊಡ್ತೇನೆ’ ಎಂದಿತು.
‘ಸ್ವಾಮಿ ನನ್ನದು ಜಪಾನ್ ಮೇಡ್ ವಾಚು. ತುಂಬಾ ಸೂಕ್ಷ್ಮ ಅದು. ಆಟೊಮ್ಯಾಟಿಕ್ ಬೇರೆ. ಅಂಥ ವಾಚನ್ನು ರಿಪೇರಿಗೆಂದು ನಿಮಗೆ ಕೊಟ್ರೆ ಮುಗೀತು ಕಥೆ. ವಾಚು ಹಾಳಾಗಿಬಿಡುತ್ತೆ. ನಿಮ್ಮ ದಪ್ಪ ದಪ್ಪ ಉಗುರಿಂದ ಯಾವ ವಸ್ತು ತಾನೆ ಹಾಳಾಗಲ್ಲ ಹೇಳಿ…’ ಎಂದು ಬೇಸರದ ಮಾತಾಡಿತು ನರಿ.
ಆ ಮಾತನ್ನು ಸಿಂಹ ಅರ್ಧದಲ್ಲೇ ತಡೆದು ಹೇಳಿತು:’ ಖಂಡಿತಾ ಹಾಗೇನೂ ಆಗೋದಿಲ್ಲ. ಒಂದು ವೇಳೆ ಏನಾದ್ರೂ ತಪ್ಪಾದ್ರೆ ವಾಚ್್ನ ಬೆಲೆ ಎಷ್ಟಿದೆಯೋ ಅಷ್ಟನ್ನೂ ಕೊಡ್ತೇನೆ, ಪ್ರಾಮಿಸ್…’ ಹೀಗೆ ಹೇಳಿದ ಸಿಂಹ, ಮರು ನಿಮಿಷದಲ್ಲೇ ನರಿಯ ವಾಚು ತಗೊಂಡು ಗುಹೆಯೊಳಗೆ ಹೋಯಿತು. ಐದೇ ನಿಮಿಷದಲ್ಲಿ ರಿಪೇರಿ ಮಾಡಿಕೊಂಡು ಬಂದು ಬಿಟ್ಟಿತು. ಕಣ್ಣೆದುರೇ ನಡೆದ ಈ ಪವಾಡವನ್ನು ಕಂಡು ನರಿಗೆ ಮಾತೇ ಹೊರಡಲಿಲ್ಲ. ಅದು ಮೊದಲು ಸಿಂಹದ ಕ್ಷಮೆ ಕೇಳಿತು. ನಂತರ ಥ್ಯಾಂಕ್ಸ್ ಹೇಳಿ ಹೊರಟು ಹೋಯಿತು.
ಅರ್ಧ ಗಂಟೆ ಕಳೆದ ನಂತರ ಅದೇ ಸಿಂಹದ ಎದುರು ನಿಂತ ತೋಳವೊಂದು ಹೇಳಿತು: ‘ಮಹಾರಾಜಾ, ನಮ್ಮ ಮನೇಲಿರೋ ಟಿ.ವಿ. ಕೆಟ್ಟು ಹೋಗಿದೆ. ಇವತ್ತು ರಾತ್ರಿ ನಾನು ನಿಮ್ಮ ಮನೆಗೆ ಬಂದು ಟಿ.ವಿ. ನೋಡಬಹುದಾ?’
ಸಿಂಹ ತಕ್ಷಣವೇ ಹೇಳಿತು: ‘ಕೆಟ್ಟು ಹೋಗಿರೋ ಟಿ.ವಿ.ಯನ್ನು ತಂದುಕೊಡು. ಐದು ನಿಮಿಷದಲ್ಲಿ ರಿಪೇರಿ ಮಾಡಿಕೊಡ್ತೇನೆ’
ತೋಳ ತಕ್ಷಣವೇ ಹೇಳಿತು: ‘ಎಲ್ಲಾದ್ರೂ ಉಂಟೇ? ನಿಮ್ಮ ಈಟಿಯಂಥ ಉಗುರಿನ ಮೊನೆ ತಾಕಿದ್ರೂ ಸಾಕು: ಟಿ.ವಿ.ಯ ಗಾಜು ಪುಡಿಯಾಗುತ್ತೆ. ಒಳಗಿರುವ ವೈರುಗಳು ತುಂಡಾಗಿ ಹೋಗ್ತವೆ. ನಿಮಗೆ ಹೇಗಪ್ಪಾ ರಿಪೇರಿಗೆ ಒಪ್ಪಿಸಬಹುದು? ಬೇಡ ಬೇಡ…’ ಸಿಂಹ ಆಗಲೂ ಸಮಾಧಾನದಿಂದಲೇ ಹೇಳಿತು: ‘ಹಾಗೇನಾದ್ರೂ ಆದ್ರೆ ಹೊಸ ಟೀವಿಗೆ ತಗುಲುವ ದುಡ್ಡು ಕೊಡ್ತೇನೆ. ಪ್ರಾಮಿಸ್.’ ಸರಿ, ತೋಳ, ಅನುಮಾನದಿಂದಲೇ ಟಿ.ವಿ. ತಂದು ಅದನ್ನು ಸಿಂಹದ ಮುಂದೆ ಇಟ್ಟಿತು. ಸಿಂಹ, ಗಡಿಬಿಡಿಯಿಂದಲೇ ಅದನ್ನು ಗುಹೆಯೊಳಕ್ಕೆ ಹೊತ್ತೊಯ್ದು ಐದು ನಿಮಿಷಗಳ ನಂತರ ಹೊರಗೆ ತಂದಿತು. ಏನಾಶ್ಚರ್ಯ, ಟಿ.ವಿ. ರಿಪೇರಿಯಾಗಿ ಹೋಗಿತ್ತು. ಸಿಂಹರಾಯನ ಈ ಕೈಚಳಕಕ್ಕೆ ಬೆರಗಾದ ತೋಳ, ಅದಕ್ಕೆ ಜಯಕಾರ ಹಾಕುತ್ತಾ ಟಿ.ವಿ.ಯೊಂದಿಗೆ ಮನೆ ತಲುಪಿಕೊಂಡಿತು.
ನಿಜವಾಗಿ ಏನು ನಡೆದಿತ್ತು ಎಂದರೆ- ಸಿಂಹ, ಗಡಿಯಾರವನ್ನಾಗಲಿ, ಟಿ.ವಿ.ಯನ್ನಾಗಲಿ ಕಿರುಬೆರಳಿನಿಂದಲೂ ಮುಟ್ಟಿರಲಿಲ್ಲ. ಅದೇ ಗವಿಯೊಳಗಿದ್ದ, ತಂತ್ರಜ್ಞಾನದಲ್ಲಿ ಪಳಗಿದ್ದ ಇಲಿಗಳು ಮತ್ತು ಮೊಲಗಳು ಒಟ್ಟಾಗಿ ಈ ಕೆಲಸ ನಿರ್ವಹಿಸಿದ್ದವು. ಇದು ಮ್ಯಾನೇಜ್್ಮೆಂಟ್ ಹಾಗೂ ಮಾರ್ಕೆಟಿಂಗ್ ವಿಭಾಗದ ತರಗತಿಗಳಲ್ಲಿ ತುಂಬಾ ಜನಪ್ರಿಯವಾಗಿರುವ ಕತೆ. ಇದರ ನೀತಿ ಏನು ಗೊತ್ತೆ? ಯಾವುದೇ ಒಂದು ಕಂಪನಿಯ ಮುಖ್ಯಸ್ಥ ಅಥವಾ ಮ್ಯಾನೇಜರ್ ತುಂಬ ಜನಪ್ರಿಯನಾಗಿದ್ದಾನೆ ಅಂದರೆ, ಮೆಚ್ಚುಗೆಯ ನೋಟ ಬೀರಬೇಕು ಅವನ ಕಡೆಗಲ್ಲ, ಅವನ ಕೈಕೆಳಗಿನ ನೌಕರರಿದ್ದಾರಲ್ಲಾ, ಅವರ ಕಡೆಗೆ!
>>>>>
ಅದೊಂದು ಪುಟ್ಟ ಗುಹೆ. ಅದರೊಳಗೆ ಒಂದು ಮೊಲ ವಾಸವಾಗಿತ್ತು. ಒಂದು ಭಾನುವಾರ, ಅದು ಗುಹೆಯ ಎದುರಿಗೆ ಒಂದು ಟೇಬಲ್ ಇಟ್ಟುಕೊಂಡು ಟೈಪ್್ರೈಟರಿನಲ್ಲಿ ಏನನ್ನೋ ಟೈಪ್ ಮಾಡುತ್ತಿತ್ತು. ಅಲ್ಲಿಗೆ ಬಂದ ತೋಳವೊಂದು ಕೇಳಿತು: ‘ಏನೋ ಟೈಪ್ ಮಾಡ್ತಾ ಇದೀಯ. ಏನದು?’
‘ಇದೂ… ಇದೂ ನನ್ನ ಪಿ.ಎಚ್.ಡಿ ಪ್ರಬಂಧ’ ಎಂದಿತು ಮೊಲ.
‘ಹೌದಾ? ಗುಡ್. ಯಾವ ವಿಷಯವಾಗಿ ಥೀಸಿಸ್ ರೆಡಿ ಮಾಡ್ತಾ ಇದೀಯ?’ ಕುತೂಹಲದಿಂದ ಕೇಳಿತು ತೋಳ. ‘ಮೊಲಗಳು ಹೇಗೆ ತೋಳಗಳನ್ನು ತಿನ್ನುತ್ತವೆ ಎಂಬ ವಿಷಯವಾಗಿ ಬರೀತಿದೀನಿ’ ಎಂದಿತು ಮೊಲ.
‘ಫೂಲ್, ಇದು ಯಾರಾದ್ರೂ ನಂಬುವ ಮಾತಾ? ಮೊಲಗಳು ಏನಿದ್ರೂ ಗೆಡ್ಡೆ ಗೆಣಸು ತಿಂದುಕೊಂಡು ಬದುಕುತ್ತವೆ ಎಂದು ಎಲ್ಲರಿಗೂ ಗೊತ್ತು. ಹೀಗಿರುವಾಗ, ಮೊಲಗಳು ತೋಳವನ್ನು ತಿನ್ನುತ್ತವೆ ಅಂತ ನೀನು ಬರೆದ್ರೆ ನಂಬುವುದಾದರೂ ಹೇಗೆ?’ ಎಂದು ರೇಗಿ ಕೇಳಿತು ತೋಳ. ಆಗ ಮೊಲ ವಾದಕ್ಕೆ ನಿಲ್ಲಲಿಲ್ಲ. ಬದಲಿಗೆ, ನನ್ನ ಗುಹೆಯೊಳಕ್ಕೆ ಬಾ. ಮೊಲ ಹೇಗೆ ತೋಳವನ್ನು ತಿನ್ನುತ್ತೆ, ಎಂಬುದಕ್ಕೆ ಸಾಕ್ಷಿ ಕೊಡ್ತೇನೆ’ ಎಂದಿತು. ಆಗಿದ್ದಾಗಲಿ ನೋಡಿಯೇ ಬಿಡೋಣ ಎಂದು ಮೊಲದ ಗುಹೆ ಹೊಕ್ಕ ತೋಳ ಮುಂದಿನ ಐದೇ ನಿಮಿಷದಲ್ಲಿ ಕೊಲೆಯಾಗಿ ಹೋಯಿತು. ಇಷ್ಟಾದ ಮೇಲೆ ಏನೂ ಗೊತ್ತಿಲ್ಲದಂತೆ ಈ ಮೊಲ ಮತ್ತೆ ಟೇಬಲ್್ನ ಮುಂದೆ ಕುಳಿತು ಟೈಪು ಮಾಡಲಾರಂಭಿಸಿತು. ಐದು ನಿಮಿಷದ ನಂತರ ಅದೇ ದಾರಿಯಲ್ಲಿ ಬಂದ ನರಿ: ‘ಏನಾಡ್ತಾ ಇದೀಯ?’ ಎಂದು ಕೇಳಿದ್ದಕ್ಕೆ -’ಮೊಲಗಳು ಹೇಗೆ ನರಿಗಳನ್ನು ಸಿಗಿದು ಹಾಕುತ್ತವೆ’ ಎಂಬ ವಿಷಯವಾಗಿ ಪಿ.ಎಚ್.ಡಿಗೆ ಥೀಸಿಸ್ ಬರೀತಾ ಇದೀನಿ ಎಂದಿತು ಮೊಲ.
‘ನಿಂಗೆ ತಲೆ ನೆಟ್ಟಗಿದೆ ತಾನೆ? ಎಂದಾದರೂ ಮೊಲಗಳಿಂದ ನರಿಗಳ ಬೇಟೆ ಸಾಧ್ಯವಾ?’ ಎಂದು ಪ್ರಶ್ನೆ ಎಸೆಯಿತು ನರಿ. ‘ವಾದ ಬೇಡ. ಪ್ರತ್ಯಕ್ಷ ನೋಡುವಾಸೆ ಇದ್ದರೆ ತೆಪ್ಪಗೆ ಗುಹೆಯೊಳಕ್ಕೆ ಬಾ’ ಎಂದಿತು ಮೊಲ. ಛಾಲೆಂಜಿಗೆ ಒಪ್ಪಿದ ನರಿ, ಗುಹೆಯ ಒಳಕ್ಕೆ ಹೋದ ಐದೇ ನಿಮಿಷದಲ್ಲಿ ಫಿನಿಷ್!
ಒಂದೆರಡು ನಿಮಿಷದಲ್ಲಿಯೇ ಫ್ರೆಶ್ ಆದ ಮೊಲ ಮತ್ತೆ ಟೈಪ್್ರೈಟರಿನ ಮುಂದೆ ಕುಳಿತಿತು. ಒಂದು ಪ್ಯಾರಾ ಟೈಪಿಂಗ್ ಮುಗಿವ ಮೊದಲೇ ಅದರ ಮುಂದೆ ನಿಂತ ಕರಡಿಯೂ ಉಳಿದೆಲ್ಲರಂತೆಯೇ ಕೇಳಿತು: ‘ಏನೋ ಟೈಪ್ ಮಾಡ್ತಾ ಇದೀಯಲ್ಲ: ಏನದು? ‘ಇದಾ? ಮೊಲಗಳು ಹೇಗೆ ಕರಡಿಗಳನ್ನು ತಿಂದು ಹಾಕುತ್ತವೆ ಎಂಬ ವಿಷಯವಾಗಿ ಥೀಸಿಸ್ ಬರೀತಾ ಇದೀನಿ…’ ಈ ಮಾತು ಕೇಳಿ, ಒಮ್ಮೆ ಪರಿಹಾಸ್ಯದ ನಗೆ ನಕ್ಕು ಕರಡಿ ಹೇಳಿತು: ‘ತಮ್ಮಾ ಕಲ್ಪನೆಗಳಿಗೆ ಒಂದು ಮಿತಿ ಬೇಡವೆ? ನೀನು ಹೇಳುವುದು ಕನಸಿನಲ್ಲಾದರೂ ನಡೆಯಲು ಸಾಧ್ಯವೆ?’ ಮೊಲ ತಕ್ಷಣ ಹೇಳಿತು: ನೀನು ಈ ಗುಹೆಯೊಳಗೆ ಬಂದರೆ, ಮೊಲಗಳು ಕರಡಿಯನ್ನು ಹೇಗೆ ತಿನ್ನುತ್ತವೆ ಎಂಬುದನ್ನು ಪ್ರತ್ಯಕ್ಷ ತೋರಿಸುತ್ತೇನೆ!’.
ಕುತೂಹಲದಿಂದಲೇ ಗುಹೆಯೊಳಕ್ಕೆ ಹೋದ ಕರಡಿಗೆ ಮೊಲ ತೋರಿಸಿದ್ದು ಏನನ್ನು ಗೊತ್ತೆ? ಹಸಿದು ಕುಳಿತಿದ್ದ ಸಿಂಹರಾಜನನ್ನು!
ಈ ಕತೆಯ ನೀತಿ: ನೀವು ಹೇಳುತ್ತಿರುವ ವಿಷಯ ಅಸಾಧ್ಯವೇ ಆಗಿರಬಹುದು. ಆದರೆ, ಅದರಿಂದ ನಮ್ಮ ಬಾಸ್್ಗೆ ಸಂತೋಷವಾಗುವಂತಿದ್ದರೆ ಸಾಕು..
-ವಿಶ್ವೇಶ್ವರ ಭಟ್
the above stories ok sir but not ……………..
I always expect good articles and stories from ur side becs the way ur writing is superb….
Sir one more thing i heard, u have translated a book from english to kannada which written by software engineer please tell me the name of the book
thanks……..,
ಚೊಕ್ಕವಾಗಿ-ಚಿಕ್ಕವಾದರೂ ಬಹಳ ಪರಿಣಾಮ ಬೀರುವ ಕಥೆಗಳು.ಸಾಮಾನ್ಯವಾಗಿ ಪ್ರಾರಂಭವಾಗಿ, ತಮಾಷೆಯಾಗಿ ಮುಕ್ತಾಯ ಕಂಡರೂ ಇತರೆ ನೀತಿಕಥೆಗಳಂತೆ ಕೊನೆಯಲ್ಲಿ ಇಷ್ಟೇನಾ ಎನ್ನುವಂತಿರದೆ ಸ್ವಲ್ಪ ಯೋಚಿಸುವಂತೆ ಮಾಡುತ್ತವೆ. ದೊಡ್ಡ ದೊಡ್ಡ ಯೋಚನೆ-ವಿಚಾರಕ್ಕಿಂತ ಸಣ್ಣ ಸಣ್ಣ ವಿಷಯಗಳು, ಸ್ವಲ್ಪ ಕಾಮನ್ ಸೆನ್ಸ್ , ಯೋಚನಾ ವಿಧಾನ ಇವುಗಳು ಮ್ಯಾನೇಜ್ ಮೆಂಟ್ ಕ್ಲಾಸ್ ಗಳಿಗಷ್ಟೇ ಅಲ್ಲ ಜೀವನಕ್ಕೂ ಅಗತ್ಯವಾದುದಾಗಿವೆ. ಇದನ್ನು ನಿಮ್ಮ ಕಥೆಗಳು ಬಹಳ ಪರಿಣಾಮಕಾರಿಯಾಗಿ ಹೇಳುತ್ತಿವೆ. Waiting for your Book
Mooru kathegalu thumba chennagive. prathiyobbaru odhale bekadhavu. Modhale neerekshe madalu saadhyavilla.
very nice article sir
Bahala swaarsyavada doddavara sanna kategalu. Bahala chennaagide. Oduva khushi kottiddakke danyavadagalu.
Suggestion for Title:
“ಎತ್ತಿದ ಕಥೆಗಳು “
Very apt:)
thumba interesting aghide nimma stories .
pranigala kathe thumba chennagidhe.
yavagalu hengasarighe buddhi illa antha baritheralla yake?
nimma kannada prabha dalli yeshto sari odhideenee …
heeghe baritha eree
ಭಟ್ರಿಗೆ ನಮಸ್ಕಾರಗಳು..
ಒಂದು ಪ್ರಶ್ನೆ.. ನಿಮ್ಮ ಈ ಪುಸ್ತಕ (ರುಚಿಗಿಂತ ಚಪ್ಪರಿಕೆ, ಕತೆಗಿಂತ ನೀತಿಯೇ ಚೆಂದ!)
ಯಾವಾಗ ಬಿಡುಗಡೆ ಆಗ್ತದೆ ? ದಯವಿಟ್ಟು ತಿಳಿಸ್ತೀರಾ ??
ಧನ್ಯವಾದಗಳು..
ವಿಜಯ ಕುಲಕರ್ಣಿ
Link: ಮುಖಪುಟ > ಬ್ರೇಕಿಂಗ್ ನ್ಯೂಸ್ > ರುಚಿಗಿಂತ ಚಪ್ಪರಿಕೆ, ಕತೆಗಿಂತ ನೀತಿಯೇ ಚೆಂದ!