ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

Date archive for November, 2014

  • ನಿಮಗೆ ನಿಮಗಿಂತ ಉತ್ತಮ ಮಾರ್ಗದರ್ಶಕ ಮತ್ತೊಬ್ಬರಿಲ್ಲ!

    ಅನೇಕರಲ್ಲಿ ಒಂದು ಗುಣವಿದೆ. ಅದೇನೆಂದರೆ ತಮ್ಮ ಎಲ್ಲ ಗೋಳು, ಸಂಕಟಗಳನ್ನು ಸ್ನೇಹಿತರು, ಬಂಧು-ಬಾಂಧವರು ಹಾಗೂ ಸಹೋದ್ಯೋಗಿಗಳ ಮುಂದೆ ಹರಡಿಕೊಳ್ಳುತ್ತಾರೆ, ಹೇಳಿಕೊಳ್ಳುತ್ತಾರೆ. ಹಾಗೆ ಹೇಳಿಕೊಳ್ಳುವ ಮೂಲಕ ತಾವು ಹಗುರಾಗಿದ್ದೇವೆಂದು ಭಾವಿಸುತ್ತಾರೆ. ನಮ್ಮ ಕಷ್ಟಗಳನ್ನು ಬೇರೆಯವರ ಮುಂದೆ ಹೇಳಿಕೊಂಡರೆ, ಹಂಚಿಕೊಂಡರೆ ಅದರ ಭಾರ ಹೇಗೆ ಕಡಿಮೆಯಾಗುತ್ತದೆ? ನಮ್ಮ ತೊಂದರೆಗಳನ್ನು ನಮಗೆ ಬೇಕಾದವರ ಮುಂದೆ ಹೇಳಿಕೊಳ್ಳುವುದರಿಂದ ಸಲಹೆ, ಮಾರ್ಗದರ್ಶನದ ರೂಪದಲ್ಲಿ ಒಂದಷ್ಟು ಸಹಾಯ ಸಿಗಬಹುದು. ಮನಸ್ಸಿನಲ್ಲಿ ಮಡುಗಟ್ಟಿದ ಭಾವನೆಗಳನ್ನು ಹರಿಯಬಿಟ್ಟಾಗ, ಒಂದಷ್ಟು ರಿಲೀಫ್ ಸಿಗಬಹುದು. ನಮ್ಮ ಕಷ್ಟಗಳಿಗೆ ಸ್ನೇಹಿತರು ಪರಿಹಾರೋಪಾಯ ಸೂಚಿಸಬಹುದು. […]

  • ಒಂದು ಸೋಲು, ಸೋಲಲ್ಲ

    ಜೀವನದಲ್ಲಿ ಪದೇ ಪದೆ ಫೇಲ್ ಆದವರು ಸೋಲಿನ ರುಚಿ, ಕಹಿ, ಸಿಹಿ ಎಲ್ಲವನ್ನೂ ಅರಿತಿರುತ್ತಾರೆ. ಸೋಲನ್ನು ದಕ್ಕಿಸಿಕೊಂಡು, ಅದರ ಅವಮಾನವನ್ನು ಸಹಿಸಿಕೊಂಡು ಪುನಃ ಮೊದಲಿನಂತಾಗಲು ಪ್ರಯತ್ನಿಸುತ್ತಾರೆ. ಆದರೆ ಜೀವನದಲ್ಲಿ ಯಶಸ್ಸನ್ನು ಕಂಡವರು, ಸೋಲನ್ನೇ ಕಾಣದವರು ಏಕಾಏಕಿ ಫೇಲ್ ಆದಾಗ ಚಡಪಡಿಸುತ್ತಾರಲ್ಲ, ಒಳಗೊಳಗೇ ಬೇಯುತ್ತಾರಲ್ಲ, ಅದನ್ನು ನೋಡಲಾಗುವುದಿಲ್ಲ. ಯಶಸ್ಸು ಅವರಲ್ಲೊಂದು ದಾರ್ಷ್ಟ್ಯವನ್ನು ರೂಪಿಸಿರುತ್ತದೆ. ಯಶಸ್ಸಿನ ಗುಂಗಿನಲ್ಲಿ ಅವರು ಮೈಮರೆತಿರುತ್ತಾರೆ. ಜೀವನ ಸದಾ ಹೀಗೇ ಇರುತ್ತದೆಂದು ಭಾವಿಸಿರುತ್ತಾರೆ. ಆದರೆ ಹಠಾತ್ತನೆ ಸೋಲು ಎದುರಾದರೆ ಅವರಿಗೆ ಅದನ್ನು ಹೇಗೆ ಸ್ವೀಕರಿಸಬೇಕೆಂಬುದೇ ಗೊತ್ತಾಗದೇ […]

  • ದೇವರ ಕೆಲಸದಲ್ಲಿ ದೈವತ್ವ ಕಂಡ ತ್ರಿಮೂರ್ತಿಗಳು!

    ಕಳೆದ ವಾರ ನಿಧನರಾದ ಮೂವರು ಪರಿಚಿತರು ಹಾಗೂ ಆತ್ಮೀಯರನ್ನು ಸ್ಮರಿಸಿಕೊಳ್ಳಲೇಬೇಕು. ಮೂವರೂ ಹೆಚ್ಚು -ಕಮ್ಮಿ ಒಂದೇ ಉದ್ದೇಶಕ್ಕಾಗಿ ಜೀವ ಸವೆಸಿದವರು. ಅವರ ಕಾಯಕ ಚಿಂತನೆ ಒಂದೇ ಆಗಿತ್ತು. ವೈಯಕ್ತಿಕವನ್ನು ಮೀರಿ ಸಾರ್ವಜನಿಕವನ್ನು ಜೀವನದಲ್ಲಿ ಅಳವಡಿಸಿಕೊಂಡವರು. ಹಾಗಂತ ಎಂದೂ ಪ್ರಚಾರ ಬಯಸಿದವರಲ್ಲ. ಎಂದೂ ಪ್ರಶಸ್ತಿ, ಶಿಫಾರಸುಗಳಿಂದ ದೂರ ಉಳಿದವರು. ತಮ್ಮ ನೆಲೆಯಲ್ಲಿಯೇ ಬದುಕನ್ನು ಕಟ್ಟಿಕೊಂಡು ಅದನ್ನು ಸಮಾಜಮುಖಿಯಾಗಿ ಮಾಡುವತ್ತ ಹಂಬಲಿಸಿದವರು. ಅವರ ಸಾಧನೆ ಗುರುತಿಸಿ ಯಾರೂ ಅವರನ್ನು ಸನ್ಮಾನಿಸದೇ ಇದ್ದುದು ದುರ್ದೈವ. ಈ ಮೂವರ ಜತೆ ಮಾತಾಡುವಾಗ, ನನ್ನಲ್ಲೊಂದು […]