ಇದು ಅನುಕ್ಷಣದ ಮಾತು. ಇದು ನನ್ನ ಮಾತು, ನಿಮ್ಮ ಮಾತು. ಹಾಗೆಂದು ಬರೀ ಮಾತಾಗದೇ ಅಕ್ಷರಗಳಲ್ಲಿ ಅರಳಿದ ಮಾಲೆ. ಇದು ಪ್ರತಿ ಗುರುವಾರದ ಅಂಕಣ.

ಮುಂದೆ ಓದಿ...

ಇದು ಸುದ್ದಿ ಮಾಡುವ ಪತ್ರಕರ್ತರು, ಪತ್ರಿಕೆ, ಪತ್ರಿಕಾಲಯ ಹಾಗೂ ಇಡೀ ಮಾಧ್ಯಮರಂಗದ ಸೂಕ್ಷ್ಮ ಮತ್ತು ಕುತೂಹಲ ಸಂಗತಿಗಳೆಲ್ಲ ಕತೆಯಾಗಿ ಅರಳುವ ಬಗೆ... ಈ ಕತೆ ಪ್ರತಿ ಶನಿವಾರ.

ಮುಂದೆ ಓದಿ...

ಜೀವ, ಜೀವನ ಎಲ್ಲಿ ಇರುವುದೋ ಅಲ್ಲೆಲ್ಲ ಸಂತಸ, ವಿಷಾದ, ನೋವು, ನಲಿವು ಸಹಜ. ಯಾವ ಸಂಗತಿ, ಯಾರ ಜೀವನವೂ ನೀರಸ ಅಲ್ಲ. ಅಂಥ ಜನಜೀವನ, ಜನಗಳ ಮನ ಹೇಗಿದ್ದೀತು? ಇದು ಪ್ರತಿ ಭಾನುವಾರದ ಸರತಿ.

ಮುಂದೆ ಓದಿ...

ಎಲ್ಲವುಗಳಿಗೂ ಒಂದು ನಿಯಮವಿದೆ ತಾನೆ? ನಮ್ಮ ಜೀವನಕ್ಕೂ ಅಂಥ ನಿಯಮವಿದ್ದರೆ ಹೇಗೆ? ಬದುಕಿಗೆ ಸುಂದರ ನಿಯಮಗಳ ತೋರಣ ಕಟ್ಟಿ ಇನ್ನಷ್ಟು ಚೆಂದಗೊಳಿಸುವುದಾದರೆ ಎಷ್ಟು ಸೊಗಸು ಅಲ್ಲವಾ? ಇದು ಪ್ರತಿ ದಿನದ ಅಂಕಣ.

ಮುಂದೆ ಓದಿ...

ಕೆಲವರು ಹಲ್ಲುಜ್ಜಿದರೆ ಕ್ಲೀನಾಗೋದು ಬ್ರಶ್! ನಾವು ನೋಡುವ ಪ್ರತಿ ಪ್ರಸಂಗದಲ್ಲೂ ಹಾಸ್ಯ, ವಾರೆನೋಟ ಬೀರಿದರೆ ಹುಟ್ಟುವ ಮಿಂಚೇ ವಕ್ರತುಂಡೋಕ್ತಿ.

ಮುಂದೆ ಓದಿ...

ಕೆಲವರಿಗೆ ಗುಲಾಬಿ ಅಂದ್ರೆ ಮುಳ್ಳು, ಇನ್ನು ಕೆಲವರಿಗೆ ಹೂವು. ಪ್ರತಿಯೊಂದರಲ್ಲೂ ಸಕಾರಾತ್ಮಕ ಭಾವ ಕಾಣುವುದೇ ಉದ್ದೇಶವಾದರೆ ಬದುಕಿನ ಗತಿಯೇ ಬದಲಾವಣೆಯಾದೀತು. ಒಂದು ಪುಟ್ಟ ವಾಕ್ಯ ನಮ್ಮಲ್ಲಿ ಉಂಟುಮಾಡುವ ಸೆಳೆತವೇ ಇದು! ಇದಕ್ಕೆ ಅಂತಾರೆ ಸ್ಪೂರ್ತಿ ಸೆಲೆ.

ಮುಂದೆ ಓದಿ...

ಓದುವಾಗ, ಸುಮ್ಮನಿದ್ದಾಗ ನಮ್ಮ ಮನದಲ್ಲಿ ಹಲವು ಕುತೂಹಲ ಹುಟ್ಟಿಸುವ ಯೋಚನೆಗಳು ಹಾದು ಹೋಗುವುದುಂಟು. ಅವುಗಳಿಗೆಲ್ಲ ತಡೆಗೋಡೆ ನಿರ್ಮಿಸಿದರೆ ಹೇಗೆ? ಅಂಥ ಯೋಚನೆಗಳು ಸುಳಿದಾಗಲೆಲ್ಲ ಇಲ್ಲಿ ಹಾಜರ್!

ಮುಂದೆ ಓದಿ...

ನೀವು ಏನ್ ಬೇಕಾದ್ರೂ ಕೇಳಬಹುದು. ಆದರೆ ನಾವು ಏನ್ ಬೇಕಾದ್ರು ಹೇಳೊಲ್ಲ, ಬದಲು ಹೇಳಬೇಕಾದುದನ್ನೇ ಹೇಳುತ್ತೇವೆ. ಕೇಳುವವರು ಸರಿಯಾಗಿ ಕೇಳಬೇಕಷ್ಟೇ.

ಮುಂದೆ ಓದಿ...

Date archive for March, 2014

 • ಓದುಗರ ಮುಂದೆ ಮುಕ್ತನಾಗುತ್ತಾ ಮಾನವಂತನಾದ ಖುಷವಂತ!

  ನೂರೆಂಟು ನೋಟ 2005ರ ಅಕ್ಟೋಬರ್ ತಿಂಗಳ ಒಂದು ಸಾಯಂಕಾಲ. ನಾನು ಹಾಗೂ ‘ವಿಜಯ ಕರ್ನಾಟಕ’ ಪತ್ರಿಕೆಯ ಅಂದಿನ ಮಾಲೀಕರಾಗಿದ್ದ ವಿಜಯ ಸಂಕೇಶ್ವರ ಅವರು ದಿಲ್ಲಿಯ ಸುಜನ ಸಿಂಗ್ ಪಾರ್ಕಿನಲ್ಲಿರುವ ಖುಷವಂತ ಸಿಂಗ್ ಅವರ ಮನೆಯ ಮುಂದೆ ನಿಂತಿದ್ದೆವು. ಸಂಕೇಶ್ವರರಿಗೆ ಖುಷವಂತ ಬಗ್ಗೆ ಬೆರಗು, ಅಚ್ಚರಿಯಿತ್ತು. ಅವರ ಬಗ್ಗೆ ಸಾಕಷ್ಟು ಕೇಳಿದ್ದರು. ಅವರ ಬರಹಗಳನ್ನಾಗಲಿ, ಅಂಕಣಗಳನ್ನಾಗಲಿ ಓದಿಕೊಂಡವರಲ್ಲ. ಮೊದಲ ಬಾರಿಗೆ ಅವರಿಬ್ಬರ ಪರಸ್ಪರ ಮುಲಾಖಾತ್ ಆಯಿತು. ಖುಷವಂತ ಸಿಂಗ್ ಅವರು ಸ್ಕಾಚ್ ಬಾಟಲಿ ತೆಗೆದರು. ಪತ್ರಿಕೋದ್ಯಮ, ಟ್ರಾನ್ಸ್‌ಪೋರ್ಟ್ ವ್ಯವಹಾರ, […]

 • ಮೈಸೂರಿಗೆ ಹೊರಟ ಪ್ರತಾಪ್‌ಗೆ ಶುಭವಾಗಲಿ

  ನನಗೆ ಪ್ರತಾಪ್ ಅವರಲ್ಲಿ ಇಷ್ಟವಾಗುತ್ತಿದ್ದ ಸಂಗತಿಗಳೆಂದರೆ ನಿರಂತರ ಅಧ್ಯಯನಶೀಲತೆ, ಹುಡುಕಾಟ, ಸಂಶೋಧನೆ ಹಾಗೂ ಕ್ಷಣಕ್ಷಣಕ್ಕೆ update ಆಗುವ ರೀತಿ. ಪ್ರತಾಪ್ ಮುಂಗೋಪಿ, ಒರಟ ಎಂದು ಹೇಳುವವರುಂಟು. ಅದು ತಕ್ಕಮಟ್ಟಿಗೆ ನಿಜ ಕೂಡ. ಒಂದು ರೀತಿಯಲ್ಲಿ ಅವರು ಹೆಸರಿಗೆ ತಕ್ಕ ಹಾಗೆ ಸಿಂಹವೇ. ಮೊನ್ನೆ ಪ್ರತಾಪ್ ಸಿಂಹ ಬಂದು ರಾಜೀನಾಮೆ ಕೊಟ್ಟರು! ಇಂಥದೊಂದು ಸಂದರ್ಭ ಬರಬಹುದೆಂದು ನಾನು ಕನಸುಮನಸಿನಲ್ಲಿಯೂ ಎಣಿಸಿರಲಿಲ್ಲ. ನಾವು ‘ವಿಜಯ ಕರ್ನಾಟಕ’ದಲ್ಲಿದ್ದಾಗ ಪ್ರತಾಪ್ ಬರೆದ ಲೇಖನದಿಂದ ಪ್ರತಿಭಟನೆಗಳಾದಾಗ ಐದಾರು ಪ್ರಸಂಗಗಳಲ್ಲಿ ಮ್ಯಾನೇಜ್‌ಮೆಂಟ್ ಅವರ (ಪ್ರತಾಪ್) ರಾಜೀನಾಮೆ […]

 • ದೇವರಿಲ್ಲದಿರಬಹುದು, ಆದರೆ ರಾಜಕಾರಣಿಗಳಂತೂ ಇದ್ದಾರೆ!

  ಸುಮಾರು ಎಂಬತ್ತೈದು ವರ್ಷಗಳ ಹಿಂದೆಯೇ ಅಮೆರಿಕದ ಖ್ಯಾತ ನಟ ಹಾಗೂ ಕಾಮಿಡಿಯನ್, ರಾಜಕಾರಣಿಗಳ ಬಗ್ಗೆ ಹೇಳಿದ ಮಾತು ಇಂದಿಗೂ ಪ್ರಸ್ತುತ. Eve‌r​yt‌h‌in‌g ‌is ‌c‌han‌g‌in‌g.​ Pe‌o​p​le a‌re ta‌k‌in‌g t‌he‌i‌r ‌c‌omed‌i​ans se‌r‌i‌o‌u​s​ly and t‌he P‌ol‌i​t‌i‌c‌i​ans as a j‌o‌ke. (ಪ್ರತಿಯೊಂದು ಬದಲಾಗುತ್ತಿದೆ. ಜನರು ತಮ್ಮ ಕಾಮಿಡಿಯನ್‌ಗಳನ್ನು ಗಂಭೀರವಾಗಿಯೂ, ರಾಜಕಾರಣಿಗಳನ್ನು ಜೋಕ್ ಆಗಿಯೂ ಪರಿಗಣಿಸುತ್ತಿದ್ದಾರೆ.) ಇತ್ತೀಚಿನ ವಿದ್ಯಮಾನ ಕಂಡು ರಾಜಕಾರಣ ಹಾಳಾಗಿಹೋಯಿತು, ರಾಜಕಾರಣಿಗಳು ಕೆಟ್ಟು ಹೋದರು ಎಂದು ನಾವು ಅಂದುಕೊಂಡಿದ್ದರೆ ಅದು ಶುದ್ಧ ತಪ್ಪು. ಇಂದಿನ […]

 • ಅಮೆರಿಕಕ್ಕೆ ಹೊರಟು ನಿಂತವಳ ಬಳಿ ಅರವತ್ತು ರುಪಾಯಿ ಕೂಡ ಇರಲಿಲ್ಲ

  ಮೇರಿ ಕೋಮ್! ಭಾರತದ ಪ್ರಪ್ರಥಮ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಮೇರಿಕೋಮ್ ಅವಳ ಆತ್ಮಕತೆ (unbreakable)ಯನ್ನು ಅನುವಾದಿಸಿ ಒಂದು ಅಧ್ಯಾಯವನ್ನು ಎರಡು ವಾರಗಳ ಹಿಂದೆ ನೀಡಿದ್ದೆ. ಅವಳ ಜೀವನಗಾಥೆಯ ರುಚಿ ಅನುಭವಿಸಿದ ಅಸಂಖ್ಯ ಓದುಗರು ಅ ವಳ ಪುಸ್ತಕವನ್ನು ಬಹಳ ಬೇಗ ಹೊರತನ್ನಿ ಎಂದು ಆಗ್ರಹಿಸಿದ್ದಾರೆ. ಮೇರಿ ಕೋಮ್‌ಳದ್ದು ನಿಜಕ್ಕೂ ಅಮೋಘ ಸಾಧನೆ. ಅವಳ ಕತೆಯನ್ನು ಓದುತ್ತಿದ್ದರೆ ಎಂಥವನಲ್ಲಾದರೂ ಸ್ಫೂರ್ತಿ ಉಕ್ಕುತ್ತದೆ. ಸಾಮಾನ್ಯ ಮಹಿಳೆಯಾಗಿ ಹಂತ ಹಂತವಾಗಿ ಅವಳು ಏರಿದ ಎತ್ತರ ಅದ್ಭುತವಾದುದು. ನಾನು ಈ ಕೃತಿಯನ್ನು ಅನುವಾದಿಸಿದಾಗ […]